ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜೂನ್‌ ಪು. 5
  • ವರ್ಷಗಳಿಂದ ಯೆಹೋವನ ಸೇವೆ ಮಾಡ್ತಿರೋರಿಂದ ಕಲಿಯಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವರ್ಷಗಳಿಂದ ಯೆಹೋವನ ಸೇವೆ ಮಾಡ್ತಿರೋರಿಂದ ಕಲಿಯಿರಿ!
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಮಕ್ಕಳಿಗೆ ಪರಿಚಯಿಸಿರಿ ಯೆಹೋವನ ಸಂಘಟನೆಯನ್ನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ನಿಮಗೆ ಹರ್ಷಿಸಲು ಸಕಾರಣವಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ದೇವರ ಸಂಸ್ಥೆಯ ಭಾಗವಾಗಿ ಸುರಕ್ಷಿತರಾಗಿರಿ
    ಕಾವಲಿನಬುರುಜು—1998
  • ಅನುಭವಸ್ಥ ಪ್ರಚಾರಕರಿಂದ ಕಲಿಯಿರಿ
    2015 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜೂನ್‌ ಪು. 5
ಒಬ್ಬ ಯುವ ಸಹೋದರಿ ವಯಸ್ಸಾದ ಸಹೋದರಿಯ ಕೈಹಿಡಕೊಂಡಿದ್ದಾರೆ.

ನಮ್ಮ ಕ್ರೈಸ್ತ ಜೀವನ

ವರ್ಷಗಳಿಂದ ಯೆಹೋವನ ಸೇವೆ ಮಾಡ್ತಿರೋರಿಂದ ಕಲಿಯಿರಿ!

ನಿಮ್ಮ ಸಭೆಗಳಲ್ಲಿ ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರೋ ಸಹೋದರ ಸಹೋದರಿಯರು ಇದ್ದಾರ? ಅವರಿಂದ ನಮಗೆ ತುಂಬಾ ಪ್ರಯೋಜನ ಇದೆ. ಹೇಗೆ? ಯೆಹೋವನ ಮೇಲೆ ಆತುಕೊಳ್ಳೋದು ಹೇಗೆ ಅಂತ ಅವರಿಂದ ಕಲೀಬಹುದು. ಯೆಹೋವನ ಸಂಘಟನೆಯ ಇತಿಹಾಸದ ಬಗ್ಗೆ ತಿಳುಕೊಳ್ಳಬಹುದು. ಜೊತೆಗೆ ಅವರು ಜೀವನದಲ್ಲಿ ಬಂದ ಸಮಸ್ಯೆಗಳನ್ನ ಯೆಹೋವನ ಸಹಾಯದಿಂದ ಹೇಗೆ ತಾಳಿಕೊಂಡರು ಅಂತ ತಿಳುಕೊಂಡ್ರೆ ನಮಗೂ ಸಹಾಯ ಆಗುತ್ತೆ. ಅಷ್ಟೇ ಅಲ್ಲ ಅವರನ್ನ ನಮ್ಮ ಕುಟುಂಬ ಆರಾಧನೆಗೆ ಕರೆದು ಅನುಭವ ಕೇಳಿ ಪ್ರೋತ್ಸಾಹ ಪಡೀಬಹುದು.

ಒಂದುವೇಳೆ ನೀವು ತುಂಬಾ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಾ ಇರೋದಾದ್ರೆ ನಿಮ್ಮ ಅನುಭವಗಳನ್ನ ಯೌವನಸ್ಥರೊಂದಿಗೆ ಹಂಚಿಕೊಳ್ಳಿ. ಇದನ್ನ ಯಾಕೋಬ ಮತ್ತು ಯೋಸೇಫ ಸಹ ಮಾಡಿದರು. (ಆದಿ 48:21, 22; 50:24, 25) ಯೆಹೋವನು ಕೂಡ ತನ್ನ ಮಹಾ ಕಾರ್ಯಗಳ ಬಗ್ಗೆ ತಂದೆಯಂದಿರು ಮಕ್ಕಳಿಗೆ ಕಲಿಸಬೇಕು ಅಂತ ಬಯಸಿದನು. (ಧರ್ಮೋ 4:9, 10; ಕೀರ್ತ 78:4-7) ಇಂದು ಸಹ ಯೆಹೋವನು ತನ್ನ ಸಂಘಟನೆಯ ಮೂಲಕ ಮಾಡಿರುವ ಎಲ್ಲಾ ಒಳ್ಳೇ ವಿಷಯಗಳ ಬಗ್ಗೆ ಹೆತ್ತವರು ಮತ್ತು ಸಭೆಯಲ್ಲಿರುವ ಬೇರೆಯವರು ಚಿಕ್ಕವರಿಗೆ ತಿಳಿಸಬಹುದು.

ನಿಷೇಧದ ಮಧ್ಯೆ ಐಕ್ಯತೆ ಅನ್ನೋ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ನಿಷೇಧ ಇದ್ದ ದೇಶಗಳಲ್ಲಿರೋ ಸಹೋದರರಿಗೆ ಆಸ್ಟ್ರಿಯದ ಬ್ರಾಂಚ್‌ ಹೇಗೆ ಸಹಾಯ ಮಾಡಿತು?

  • ಆ ದೇಶಗಳಲ್ಲಿ ಇದ್ದ ಸಹೋದರರು ನಿಷೇಧದ ಮಧ್ಯದಲ್ಲೂ ಯೆಹೋವನ ಜೊತೆ ಇದ್ದ ತಮ್ಮ ಸಂಬಂಧನಾ ಹೇಗೆ ಕಾಪಾಡಿಕೊಂಡರು?

  • ರೊಮೇನಿಯದ ಅನೇಕ ಪ್ರಚಾರಕರು ಯೆಹೋವನ ಸಂಘಟನೆನಾ ಯಾಕೆ ಬಿಟ್ಟು ಹೋದರು? ಮತ್ತು ಅವರು ಹೇಗೆ ವಾಪಸ್‌ ಬಂದರು?

  • ಇಂಥ ಅನುಭವಗಳು ನಮ್ಮ ನಂಬಿಕೆನಾ ಹೇಗೆ ಬಲಪಡಿಸುತ್ತವೆ?

ಕೊಲಾಜ್‌: ‘ನಿಷೇಧದ ಮಧ್ಯೆ ಐಕ್ಯತೆ’ ಅನ್ನೋ ವಿಡಿಯೋದಿಂದ ಕೆಲವು ದೃಶ್ಯಗಳು. 1. ಪೂರ್ವ ಯೂರೋಪ್‌ನಲ್ಲಿ ನಿಷೇಧ ಇದ್ದ ಕೆಲವು ದೇಶಗಳನ್ನು ತೋರಿಸುವ ಮ್ಯಾಪ್‌. 2. ಮೈಮೋಗ್ರಾಫ್‌ ಯಂತ್ರ. 3. ರೊಮೇನಿಯದ ಸಹೋದರರು ಒಬ್ಬರನೊಬ್ಬರು ಅಪ್ಪಿಕೊಳ್ಳುತ್ತಿದ್ದಾರೆ.

ಅನುಭವ ಇರೋ ಸಹೋದರ ಸಹೋದರಿಯರಿಂದ ಕಲಿತು ಪ್ರಯೋಜನ ಪಡೆಯಿರಿ!

ನಿಮ್ಮ ಸಭೆಯಲ್ಲಿ ಇತ್ತೀಚಿಗೆ ದೀಕ್ಷಾಸ್ನಾನ ಪಡೆದಿರೋ ಪ್ರಚಾರಕರೇ ಜಾಸ್ತಿ ಇರೋದಾದ್ರೆ ನೀವೇನು ಮಾಡಬಹುದು? ತುಂಬಾ ವರ್ಷಗಳಿಂದ ಯೆಹೋವನ ಸೇವೆ ಮಾಡಿದವರ ಅನುಭವಗಳನ್ನು ತಿಳಿಯಲು jw.orgಯ ಲೈಬ್ರರಿಯಲ್ಲಿ “ವಿಡಿಯೊಗಳು” ವಿಭಾಗ ನೋಡಿ ಅಥವಾ ಆನ್‌ಲೈನ್‌ ಲೈಬ್ರರಿಯಲ್ಲಿ “ಜೀವನ ಕಥೆ” ಅನ್ನೋ ವಿಷಯದ ಬಗ್ಗೆ ಹುಡುಕಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ