ನಮ್ಮ ಕ್ರೈಸ್ತ ಜೀವನ
ಚೆನ್ನಾಗಿ ಯೋಚನೆ ಮಾಡಿ ಸ್ನೇಹಿತರನ್ನ ಆರಿಸಿಕೊಳ್ಳಿ
ಮೋವಾಬ್ ಬಯಲಿನಲ್ಲಿ ಇಸ್ರಾಯೇಲ್ಯರಿಗೆ ಏನಾಯಿತೋ ಅದು ನಮಗೆ ಒಂದು ಎಚ್ಚರಿಕೆಯ ಪಾಠವಾಗಿದೆ. (1ಕೊರಿಂ 10:6, 8, 11) ವಿಗ್ರಹಾರಾಧನೆ, ಲೈಂಗಿಕ ಅನೈತಿಕತೆ ನಡೆಸುತ್ತಿದ್ದ ಮೋವಾಬಿನ ಸ್ತ್ರೀಯರೊಟ್ಟಿಗೆ ಇಸ್ರಾಯೇಲ್ಯರು ಆಪ್ತ ಒಡನಾಟ ಬೆಳೆಸಿಕೊಂಡರು. ಇದು ಅವರನ್ನ ಗಂಭೀರ ಪಾಪಕ್ಕೆ ನಡೆಸಿತು. ಇದರಿಂದ ಇಸ್ರಾಯೇಲ್ಯರು ವಿನಾಶಕಾರಿ ಪರಿಣಾಮ ಎದುರಿಸಬೇಕಾಯಿತು. (ಅರ 25:9) ಇಂದು ನಾವು ಯೆಹೋವನನ್ನ ಆರಾಧಿಸದ ಜೊತೆಕೆಲಸಗಾರರ, ಸಹಪಾಠಿಗಳ, ನೆರೆಹೊರೆಯವರ, ಸಂಬಂಧಿಕರ ಹಾಗೂ ಪರಿಚಯಸ್ಥರ ಮಧ್ಯೆ ಜೀವಿಸುತ್ತಿದ್ದೇವೆ. ಇಂಥವರ ಜೊತೆ ಆಪ್ತ ಒಡನಾಟ ಬೆಳೆಸಿಕೊಂಡ್ರೆ ಯಾವ ಅಪಾಯಗಳನ್ನ ಎದುರಿಸಬೇಕಾಗುತ್ತೆ ಅಂತ ಈ ಬೈಬಲ್ ವೃತ್ತಾಂತದಿಂದ ನಾವು ಕಲಿಯಬಹುದು.
ನಮ್ಮ ದಿನಗಳಿಗಾಗಿ ಎಚ್ಚರಿಕೆಯ ಪಾಠಗಳು—ತುಣುಕು ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ಜಿಮ್ರಿ ಮತ್ತು ಇತರರು ಯಾಮೀನನಿಗೆ ಯಾವ ತಪ್ಪಾದ ವಿಷಯದ ಬಗ್ಗೆ ಹೇಳಿದ್ರು?
ಫೀನೆಹಾಸ ಯಾಮೀನನಿಗೆ ವಿಷಯಗಳನ್ನ ಸರಿಯಾಗಿ ಅರ್ಥಮಾಡಿಕೊಳ್ಳಲು ಹೇಗೆ ಸಹಾಯ ಮಾಡಿದ?
ಕ್ರೈಸ್ತರಲ್ಲದ ಜನರೊಂದಿಗೆ ಸ್ನೇಹಪರರಾಗಿ ವ್ಯವಹಾರ ಮಾಡೋದಕ್ಕೂ ಮತ್ತು ಅವರ ಸ್ನೇಹಿತರಾಗಿ ಇರೋದಕ್ಕೊ ಏನು ವ್ಯತ್ಯಾಸ?
ಜೊತೆ ಕ್ರೈಸ್ತರಲ್ಲೂ ಆಪ್ತ ಸ್ನೇಹಿತರನ್ನ ಆರಿಸಿಕೊಳ್ಳುವಾಗ ಯಾಕೆ ಜಾಗ್ರತೆವಹಿಸಬೇಕು?
ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಇಲ್ಲದವರಿಗೆ ಯಾಕೆ ಮೆಸೆಜ್ ಮಾಡಬಾರದು?