ಪಾಠ 10
ಧ್ವನಿಯ ಏರಿಳಿತ
ಯೆಹೆಜ್ಕೇಲ 9:1
ಏನು ಮಾಡಬೇಕು: ನಿಮ್ಮ ಧ್ವನಿಯ ಮಟ್ಟ, ಸ್ವರಭಾರ ಮತ್ತು ವೇಗವನ್ನು ಬದಲಾಯಿಸುವ ಮೂಲಕ ವಿಚಾರಗಳನ್ನು ಸ್ಪಷ್ಟವಾಗಿ ಹೇಳಿ ಮತ್ತು ಭಾವನೆಯನ್ನು ಕೆರಳಿಸಿ.
ಹೇಗೆ ಮಾಡಬೇಕು:
ಧ್ವನಿಯ ಮಟ್ಟವನ್ನು ಬದಲಾಯಿಸಿ. ಮುಖ್ಯಾಂಶಗಳಿಗೆ ಒತ್ತು ನೀಡಲು ಮತ್ತು ಸಭಿಕರ ಭಾವನೆಯನ್ನು ಬಡಿದೆಬ್ಬಿಸಲು ಗಟ್ಟಿಯಾಗಿ ಮಾತಾಡಿ. ಬೈಬಲಿನಲ್ಲಿರುವ ಒಂದು ನ್ಯಾಯತೀರ್ಪಿನ ಸಂದೇಶವನ್ನು ಓದುವಾಗಲೂ ಇದನ್ನೇ ಮಾಡಿ. ಕುತೂಹಲವನ್ನು ಕೆರಳಿಸಲು ಅಥವಾ ಭಯ ಆತಂಕವನ್ನು ತೋರಿಸಲು ತಗ್ಗುಧ್ವನಿಯಲ್ಲಿ ಮಾತಾಡಿ.
ಸ್ವರಭಾರವನ್ನು ಬದಲಾಯಿಸಿ. ನೀವು ಉತ್ಸಾಹ, ಚಿಂತೆ, ದುಃಖ ಇಂಥ ಭಾವನೆಗಳನ್ನು ವ್ಯಕ್ತಪಡಿಸುವಾಗ ಅದಕ್ಕೆ ತಕ್ಕ ಹಾಗೆ ಸ್ವರಭಾರವನ್ನು ಬದಲಾಯಿಸಿ.
ವೇಗವನ್ನು ಬದಲಾಯಿಸಿ. ಸಂತೋಷವನ್ನು ವ್ಯಕ್ತಪಡಿಸಲು ವೇಗವಾಗಿ ಮಾತಾಡಿ. ಪ್ರಾಮುಖ್ಯ ಅಂಶಗಳನ್ನು ಹೇಳುವಾಗ ಸ್ವಲ್ಪ ನಿಧಾನವಾಗಿ ಮಾತಾಡಿ.