ಪಾಠ 6
ವಚನಗಳ ಅನ್ವಯ
ಯೋಹಾನ 10:33-36
ಏನು ಮಾಡಬೇಕು: ಬರೀ ವಚನವನ್ನು ಓದಿ ಮುಂದಕ್ಕೆ ಹೋಗಬೇಡಿ. ನೀವು ಓದಿದ ವಚನಕ್ಕೂ ನೀವು ಹೇಳುತ್ತಿರುವ ವಿಷಯಕ್ಕೂ ಏನು ಸಂಬಂಧ ಎಂದು ಸ್ಪಷ್ಟಪಡಿಸಿ.
ಹೇಗೆ ಮಾಡಬೇಕು:
ಮುಖ್ಯ ಪದಗಳಿಗೆ ಒತ್ತು ಕೊಡಿ. ಒಂದು ವಚನವನ್ನು ಓದಿದ ಮೇಲೆ ನೀವು ಮಾತಾಡುತ್ತಿರುವ ವಿಷಯಕ್ಕೆ ಸಂಬಂಧಪಟ್ಟ ಪದಗಳಿಗೆ ಗಮನ ಕೊಡಲು ಸಹಾಯ ಮಾಡಿ. ಇದನ್ನು ಮಾಡಲು ನೀವು ಆ ಪದಗಳನ್ನು ಪುನಃ ಹೇಳಬಹುದು ಅಥವಾ ಆ ಪದಗಳನ್ನು ಕಂಡುಹಿಡಿಯಲು ಸಹಾಯ ಮಾಡುವ ಪ್ರಶ್ನೆ ಕೇಳಬಹುದು.
ಮುಖ್ಯಾಂಶಕ್ಕೆ ಒತ್ತು ನೀಡಿ. ನೀವು ಒಂದು ವಚನವನ್ನು ಓದುತ್ತಿರುವುದಕ್ಕೆ ಒಂದು ಕಾರಣವನ್ನು ಕೊಟ್ಟಿರುವುದಾದರೆ, ವಚನದಲ್ಲಿರುವ ಮುಖ್ಯ ಪದಗಳಿಗೂ ಆ ಕಾರಣಕ್ಕೂ ಏನು ಸಂಬಂಧ ಎಂದು ವಿವರಿಸಿ.
ಅನ್ವಯ ಸರಳವಾಗಿರಲಿ. ಮುಖ್ಯ ವಿಷಯಕ್ಕೆ ಸಂಬಂಧಪಡದ ಅಂಶಗಳ ಬಗ್ಗೆ ಮಾತಾಡಬೇಡಿ. ನೀವು ಹೇಳುತ್ತಿರುವ ವಿಷಯದ ಬಗ್ಗೆ ಜನರಿಗೆ ಎಷ್ಟು ಗೊತ್ತಿದೆ ಎಂದು ನೋಡಿ. ಅದರ ಮೇಲೆ ಹೊಂದಿಕೊಂಡು ಎಷ್ಟು ಮಾಹಿತಿ ಕೊಟ್ಟರೆ ಅನ್ವಯ ಸ್ಪಷ್ಟವಾಗುತ್ತದೆ ಎಂದು ಯೋಚಿಸಿ.