ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lmd ಪಾಠ 9
  • ಅನುಕಂಪ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅನುಕಂಪ
  • ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸು ಏನು ಮಾಡಿದನು?
  • ನಮಗೇನು ಪಾಠ?
  • ಯೇಸು ತರ ನೀವೂ ಮಾಡಿ
  • ಪರಾನುಭೂತಿ ದಯೆ ಹಾಗೂ ಕರುಣೆಗೆ ಕೀಲಿ ಕೈ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಅನುಕಂಪ ತೋರಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುಕಂಪ ತೋರಿಸಿ
    ಎಚ್ಚರ!—2020
  • ‘ಯೇಸು ಕನಿಕರಪಟ್ಟನು’
    “ನನ್ನನ್ನು ಹಿಂಬಾಲಿಸಿರಿ”
ಇನ್ನಷ್ಟು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
lmd ಪಾಠ 9

ಮತ್ತೆ ಭೇಟಿ ಮಾಡಿ

ಯೇಸು ಮತ್ತು ಆತನ ಶಿಷ್ಯರು ದೋಣಿ ಇಳಿದು ದಡದಲ್ಲಿ ಕಾಯ್ತಿದ್ದ ಜನರ ಗುಂಪಿನ ಕಡೆ ಬರ್ತಿದ್ದಾರೆ.

ಮಾರ್ಕ 6:30-34

ಪಾಠ 9

ಅನುಕಂಪ

ತತ್ವ: “ಖುಷಿಯಾಗಿ ಇರುವವ್ರ ಜೊತೆ ಖುಷಿಪಡಿ, ಅಳುವವ್ರ ಜೊತೆ ಅಳಿ.”—ರೋಮ. 12:15.

ಯೇಸು ಏನು ಮಾಡಿದನು?

ಯೇಸು ಮತ್ತು ಆತನ ಶಿಷ್ಯರು ದೋಣಿ ಇಳಿದು ದಡದಲ್ಲಿ ಕಾಯ್ತಿದ್ದ ಜನರ ಗುಂಪಿನ ಕಡೆ ಬರ್ತಿದ್ದಾರೆ.

ವಿಡಿಯೋ: ಯೇಸುಗೆ ಜನರ ಮೇಲೆ ಕನಿಕರ ಹುಟ್ತು

1. ವಿಡಿಯೋ ನೋಡಿ ಅಥವಾ ಮಾರ್ಕ 6:30-34 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1. ಎ. ಯೇಸು ಮತ್ತು ಅಪೊಸ್ತಲರು ಯಾಕೆ “ಯಾರೂ ಇಲ್ಲದೇ ಇರೋ ಜಾಗಕ್ಕೆ” ಹೋಗಬೇಕು ಅಂದ್ಕೊಂಡ್ರು?

  2. ಬಿ. ಜನ್ರಿಗೆ ಕಲಿಸಬೇಕು ಅಂತ ಯೇಸುಗೆ ಯಾಕೆ ಅನಿಸ್ತು?

ನಮಗೇನು ಪಾಠ?

2. ಅನುಕಂಪ ಇದ್ರೆ ನಾವು ಜನರಿಗೆ ಸಾರೋದಷ್ಟೇ ಅಲ್ಲ, ಕಾಳಜಿನೂ ಮಾಡ್ತೀವಿ.

ಯೇಸು ತರ ನೀವೂ ಮಾಡಿ

3. ಗಮನಕೊಟ್ಟು ಕೇಳಿಸ್ಕೊಳ್ಳಿ. ಒಬ್ಬ ವ್ಯಕ್ತಿ ಮನಸ್ಸುಬಿಚ್ಚಿ ಮಾತಾಡೋಕೆ ಅವಕಾಶ ಮಾಡ್ಕೊಡಿ. ಅವರು ತಮ್ಮ ಭಾವನೆಗಳನ್ನ, ಚಿಂತೆಗಳನ್ನ, ಅಭಿಪ್ರಾಯಗಳನ್ನ ಹೇಳುವಾಗ ಮಧ್ಯ ಬಾಯಿ ಹಾಕಬೇಡಿ. ಕೇಳಿದ್ರೂ ಕೇಳದೇ ಇರೋರ ತರ ಇರಬೇಡಿ. ಅವರು ಮಾತಾಡೋದನ್ನ ನೀವು ಕೇಳಿಸ್ಕೊಂಡ್ರೆ ಅವ್ರ ಮೇಲೆ ನಿಮಗೆ ಕಾಳಜಿ ಇದೆ ಅಂತ ಅವ್ರಿಗೆ ಗೊತ್ತಾಗುತ್ತೆ.

4. ಆ ವ್ಯಕ್ತಿ ಬಗ್ಗೆ ಯೋಚಿಸಿ. ಇಲ್ಲಿವರೆಗೂ ನೀವು ಮಾತಾಡಿದ ವಿಷ್ಯಗಳನ್ನ ಮನಸ್ಸಲ್ಲಿಟ್ಟು ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ:

  1. ಎ. ‘ಅವರು ಯಾಕೆ ಸತ್ಯಕ್ಕೆ ಬರಬೇಕು?’

  2. ಬಿ. ‘ಬೈಬಲ್‌ ಕಲಿಯೋದ್ರಿಂದ ಅವರಿಗೆ ಈಗ ಮತ್ತು ಮುಂದೆ ಏನೆಲ್ಲಾ ಪ್ರಯೋಜನ ಆಗುತ್ತೆ?’

5. ಅವ್ರಿಗೆ ಪ್ರಯೋಜನ ಆಗೋ ವಿಷ್ಯಗಳ ಬಗ್ಗೆ ಮಾತಾಡಿ. ಅವಕಾಶ ಸಿಕ್ಕಿದ ಕೂಡಲೇ ಬೈಬಲ್‌ ಅಧ್ಯಯನದ ಬಗ್ಗೆ ಹೇಳಿ. ಅದ್ರಿಂದ ಅವ್ರಿಗೆ ಏನೆಲ್ಲಾ ಪ್ರಯೋಜನ ಆಗುತ್ತೆ, ಅವರಿಗಿರೋ ಪ್ರಶ್ನೆಗಳಿಗೆ ಹೇಗೆ ಉತ್ರ ಸಿಗುತ್ತೆ, ಜೀವನದಲ್ಲಿ ಬರೋ ಸಮಸ್ಯೆಗಳನ್ನ ಹೇಗೆ ನಿಭಾಯಿಸಬಹುದು ಅಂತೆಲ್ಲಾ ಅರ್ಥ ಮಾಡಿಸಿ.

ಇದನ್ನೂ ನೋಡಿ

ರೋಮ. 10:13, 14; ಫಿಲಿ. 2:3, 4; 1 ಪೇತ್ರ 3:8

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ