ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lmd ಪಾಠ 2
  • ಸ್ವಾಭಾವಿಕತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸ್ವಾಭಾವಿಕತೆ
  • ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಫಿಲಿಪ್ಪ ಏನು ಮಾಡಿದನು?
  • ನಮಗೇನು ಪಾಠ?
  • ಫಿಲಿಪ್ಪನ ತರ ನೀವೂ ಮಾಡಿ
  • ಫಿಲಿಪ್ಪ—ಹುರುಪುಳ್ಳ ಸೌವಾರ್ತಿಕ
    ಕಾವಲಿನಬುರುಜು—1999
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅನೌಪಚಾರಿಕವಾಗಿ ಸಾಕ್ಷಿ ನೀಡಲು ಮೊದಲ ಹೆಜ್ಜೆ ತೆಗೆದುಕೊಳ್ಳಿ
    2014 ನಮ್ಮ ರಾಜ್ಯದ ಸೇವೆ
  • ಆಸಕ್ತಿ
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • “ಯೇಸು ಬಗ್ಗೆ ಸಿಹಿಸುದ್ದಿ” ಸಾರೋಣ
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
ಇನ್ನಷ್ಟು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
lmd ಪಾಠ 2

ಸಂಭಾಷಣೆ ಶುರುಮಾಡಿ

ರಥದಲ್ಲಿ ಕೂತು ಸುರುಳಿ ಓದ್ತಿರೋ ಇಥಿಯೋಪ್ಯದ ಅಧಿಕಾರಿ ಹತ್ರ ಹೋಗಿ ಫಿಲಿಪ್ಪ ಮಾತಾಡ್ತಿದ್ದಾನೆ.

ಅಪೊಸ್ತಲರ ಕಾರ್ಯ 8:30, 31

ಪಾಠ 2

ಸ್ವಾಭಾವಿಕತೆ

ತತ್ವ: “ಸರಿಯಾದ ಸಮಯದಲ್ಲಿ ಹೇಳಿದ ಮಾತು ಎಷ್ಟೋ ಉತ್ತಮ.”—ಜ್ಞಾನೋ. 15:23.

ಫಿಲಿಪ್ಪ ಏನು ಮಾಡಿದನು?

ರಥದಲ್ಲಿ ಕೂತು ಸುರುಳಿ ಓದ್ತಿರೋ ಇಥಿಯೋಪ್ಯದ ಅಧಿಕಾರಿ ಹತ್ರ ಹೋಗಿ ಫಿಲಿಪ್ಪ ಮಾತಾಡ್ತಿದ್ದಾನೆ.

ವಿಡಿಯೋ: ಫಿಲಿಪ್ಪ ಇಥಿಯೋಪ್ಯದ ಅಧಿಕಾರಿಗೆ ಸಾರಿದ

1. ವಿಡಿಯೋ ನೋಡಿ ಅಥವಾ ಅಪೊಸ್ತಲರ ಕಾರ್ಯ 8:30, 31 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1. ಎ. ಫಿಲಿಪ್ಪ ತನ್ನ ಮಾತನ್ನ ಹೇಗೆ ಶುರುಮಾಡಿದ?

  2. ಬಿ. ಫಿಲಿಪ್ಪ ಮಾತನ್ನ ಶುರುಮಾಡಿದ ರೀತಿ ಮತ್ತು ಒಂದು ಹೊಸ ವಿಷ್ಯನ ಕಲಿಸಿದ ರೀತಿ ಸ್ವಾಭಾವಿಕವಾಗಿತ್ತು ಅಂತ ಹೇಗೆ ಹೇಳಬಹುದು?

ನಮಗೇನು ಪಾಠ?

2. ಮಾತುಕತೆ ಸ್ವಾಭಾವಿಕವಾಗಿದ್ರೆ ಜನರು ನಮ್ಮ ಜೊತೆ ಆರಾಮಾಗಿ ಮಾತಾಡ್ತಾರೆ, ನಾವು ಸಾರೋ ಸಂದೇಶವನ್ನೂ ಕೇಳಿಸ್ಕೊಳ್ತಾರೆ.

ಫಿಲಿಪ್ಪನ ತರ ನೀವೂ ಮಾಡಿ

3. ಗಮನಿಸಿ. ಒಬ್ಬ ವ್ಯಕ್ತಿಯ ಮುಖ, ಹಾವಭಾವ ನೋಡಿದಾಗ ಅವರ ಬಗ್ಗೆ ತುಂಬ ವಿಷ್ಯ ಗೊತ್ತಾಗುತ್ತೆ. ಅವ್ರಿಗೆ ನಮ್ಮ ಜೊತೆ ಮಾತಾಡೋಕೆ ಇಷ್ಟ ಇದ್ಯಾ ಅಂತಾನೂ ತಿಳ್ಕೊಬಹುದು. “ನಿಮಗೆ ಇದು ಗೊತ್ತಾ?” ಅಂತ ಹೇಳಿ ಬೈಬಲಲ್ಲಿರೋ ಯಾವುದಾದ್ರೂ ಒಂದು ವಿಷ್ಯ ಅವ್ರಿಗೆ ಹೇಳಬಹುದು. ಒಂದುವೇಳೆ ಅವ್ರಿಗೆ ನಮ್ಮ ಹತ್ರ ಮಾತಾಡೋಕೆ ಇಷ್ಟ ಇಲ್ಲಾಂದ್ರೆ ಮಾತಾಡಕ್ಕೆ ಹೋಗಬೇಡಿ.

4. ತಾಳ್ಮೆ ತೋರಿಸಿ. ಆರಂಭದಲ್ಲೇ ಹೇಗಾದ್ರೂ ಮಾಡಿ ಬೈಬಲ್‌ ಬಗ್ಗೆ ಮಾತಾಡಬೇಕು ಅಂತ ಅವಸರ ಪಡಬೇಡಿ. ಆ ವಿಷ್ಯ ಸ್ವಾಭಾವಿಕವಾಗಿ ಬರೋ ತರ ಅವಕಾಶಕ್ಕೋಸ್ಕರ ಕಾಯಿರಿ. ಕೆಲವೊಂದು ಸಾರಿ ಮುಂದಿನ ಭೇಟಿಯಲ್ಲಿ ಅದ್ರ ಬಗ್ಗೆ ಮಾತಾಡೋಕೆ ನಮಗೆ ಅವಕಾಶ ಸಿಗಬಹುದು.

5. ಹೊಂದಿಸ್ಕೊಳ್ಳಿ. ಮಾತಾಡ್ತಾ ಮಾತಾಡ್ತಾ ಆ ವ್ಯಕ್ತಿ ಬೇರೆ ವಿಷ್ಯದ ಬಗ್ಗೆ ಮಾತಾಡಕ್ಕೆ ಶುರುಮಾಡಬಹುದು. ಆಗ ನಾವು ಆ ವ್ಯಕ್ತಿಗೆ ಏನು ಇಷ್ಟಾನೋ ಅದರ ಬಗ್ಗೆ ಮಾತಾಡಬೇಕಾಗುತ್ತೆ. ಆಗ ನಾವು ಮನಸ್ಸಲ್ಲಿ ಅಂದ್ಕೊಂಡಿರೋ ಬೈಬಲ್‌ ವಿಷ್ಯನ್ನಲ್ಲ, ಬೇರೆ ಬೈಬಲ್‌ ವಿಷ್ಯನ ಹೇಳಬೇಕಾಗುತ್ತೆ.

ಇದನ್ನೂ ನೋಡಿ

ಪ್ರಸಂ. 3:1, 7; 1 ಕೊರಿಂ. 9:22; 2 ಕೊರಿಂ. 2:17; ಕೊಲೊ. 4:6

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ