ಗೀತೆ 43
ಎಚ್ಚರವಾಗಿರಿ, ದೃಢರಾಗಿ ನಿಲ್ಲಿರಿ, ಬಲಿಷ್ಠರಾಗಿ ಬೆಳೆಯಿರಿ
1. ಎಚ್ಚರ, ದೃಢರಾಗಿದ್ದು,
ನಿರ್ಧರಿಸಿ ಸಹಿಸ.
ಆಗಿ ಧೈರ್ಯಶಾಲಿ ಜನ,
ವಿಜಯವು ನಿಕಟ.
ಕ್ರಿಸ್ತನಾಜ್ಞೆಗೆ ವಿಧೇಯರು,
ನಮ್ಮ ನಿಲುವು ಅತಿ ಸ್ಥಿರ.
(ಪಲ್ಲವಿ)
ಎಚ್ಚರ, ದೃಢತೆ ತೋರಿಸಿ!
ಕೊನೇ ತನಕ ಸಾಗಿ!
2. ಎಚ್ಚರ, ಸ್ವಸ್ಥಚಿತ್ತತೆ,
ತೋರಿಸಿ ವಿಧೇಯತೆ.
ಕ್ರಿಸ್ತನ ನಿರ್ದೇಶನವು
ಆಳು ದ್ವಾರಾ ಬರುತೆ.
ಹಿರಿಯರ ಮಾತು ಪಾಲಿಸಿ,
ಕುರಿಪಾಲನೆ ಬೆಂಬಲಿಸಿ.
(ಪಲ್ಲವಿ)
ಎಚ್ಚರ, ದೃಢತೆ ತೋರಿಸಿ!
ಕೊನೇ ತನಕ ಸಾಗಿ!
3. ಎಚ್ಚರ, ಐಕ್ಯರಾಗಿದ್ದು,
ರಾಜ್ಯವ ಸಮರ್ಥಿಸಿ.
ವೈರಿ ವಿರೋಧಿಸಿದರೂ
ಅಂತ್ಯ ತನಕ ಸಾರಿ.
ಸ್ತುತಿ ಘೋಷ ತುಂಬಲಿ ದೇಶ,
ಯೆಹೋವನ ದಿನ ಸನಿಹ.
(ಪಲ್ಲವಿ)
ಎಚ್ಚರ, ದೃಢತೆ ತೋರಿಸಿ!
ಕೊನೇ ತನಕ ಸಾಗಿ!
(ಮತ್ತಾ. 24:13; ಇಬ್ರಿ. 13:7, 17; 1 ಪೇತ್ರ 5:8 ಸಹ ನೋಡಿ.)