ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g19 ನಂ. 3 ಪು. 8-9
  • ಕುಟುಂಬ ಮತ್ತು ಬಂಧುಮಿತ್ರರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುಟುಂಬ ಮತ್ತು ಬಂಧುಮಿತ್ರರು
  • ಎಚ್ಚರ!—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಸ್ವಾರ್ಥಿಗಳಾಗಿರಿ
  • ನೀವೇನು ಮಾಡಬಹುದು:
  • ಒಳ್ಳೆಯ ಸ್ನೇಹಿತರನ್ನು ಆರಿಸಿಕೊಳ್ಳಿ
  • ಬೈಬಲಿನ ಇನ್ನಿತರ ಸಲಹೆಗಳು
  • ಪರಾನುಭೂತಿ ದಯೆ ಹಾಗೂ ಕರುಣೆಗೆ ಕೀಲಿ ಕೈ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಅನುಕಂಪ ತೋರಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುಕಂಪ ತೋರಿಸಿ
    ಎಚ್ಚರ!—2020
  • ದೇವರಿಗೆ ಪರಾನುಭೂತಿ ಇದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
ಇನ್ನಷ್ಟು
ಎಚ್ಚರ!—2019
g19 ನಂ. 3 ಪು. 8-9
ಕುಟುಂಬದವರು ಮತ್ತು ಸ್ನೇಹಿತರು, ಒಂದು ಪಿಕ್‌ನಿಕ್‌ನಲ್ಲಿ ಖುಷಿ-ಖುಷಿಯಾಗಿದ್ದಾರೆ

ಕುಟುಂಬ ಮತ್ತು ಬಂಧುಮಿತ್ರರು

ಅನೇಕ ಜನರಿಗೆ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಒಳ್ಳೆಯ ಬಾಂಧವ್ಯ ಕಾಪಾಡಿಕೊಳ್ಳುವುದು ತುಂಬ ಕಷ್ಟ. ಹಾಗಾಗಿ ಈ ಲೇಖನದಲ್ಲಿ, ಜನರೊಂದಿಗೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳಲು ಸಹಾಯ ಮಾಡುವ ಕೆಲವು ಬೈಬಲ್‌ ಸಲಹೆಗಳನ್ನು ಪರಿಗಣಿಸಿ.

ನಿಸ್ವಾರ್ಥಿಗಳಾಗಿರಿ

ಬೈಬಲ್‌ ಸಲಹೆ: “ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.”—ಫಿಲಿಪ್ಪಿ 2:4.

ಇದರ ಅರ್ಥ: ನೀವು ಬೇರೆಯವರೊಂದಿಗೆ ಒಳ್ಳೆಯ ಬಂಧ ಬೆಳೆಸಿಕೊಳ್ಳಲು, ಬೇರೆಯವರು ನಿಮಗಾಗಿ ಏನೆಲ್ಲಾ ಮಾಡುತ್ತಾರೆ ಅನ್ನೋದರ ಬದಲು ನೀವು ಅವರಿಗಾಗಿ ಏನೆಲ್ಲಾ ಮಾಡುತ್ತೀರಿ ಅನ್ನೋದಕ್ಕೆ ಗಮನ ಕೊಡಿ. ಸ್ವಾರ್ಥ ಇದ್ದರೆ ನೀವು ಯಾವಾಗಲೂ ನಿಮ್ಮ ಬಗ್ಗೆನೇ ಕೊಚ್ಚಿಕೊಳ್ಳುತ್ತಾ ಇರುತ್ತೀರಿ. ಆಗ ಬೇರೆಯವರೊಂದಿಗೆ ನಿಮ್ಮ ಸ್ನೇಹ ಹಾಳಾಗಬಹುದು. ಉದಾಹರಣೆಗೆ, ಕೆಲವು ವಿವಾಹ ಸಂಗಾತಿಗಳು ಎಲ್ಲಾ ಸಮಯದಲ್ಲಿ ತಮ್ಮ ಸ್ವಂತ ಲೈಂಗಿಕ ಆಸೆಗಳ ಬಗ್ಗೆನೇ ಯೋಚಿಸಬಹುದು. ಅವರ ಸಂಗಾತಿ, ಆ ಆಸೆಗಳನ್ನು ಪೂರೈಸಲು ತಪ್ಪಿಹೋದರೆ ಅವರು ತಮ್ಮ ಸಂಗಾತಿಗೆ ದ್ರೋಹ ಮಾಡಲೂ ತಯಾರಿರುತ್ತಾರೆ. “ಬೇರೆಯವರ ಬಗ್ಗೆ ಯೋಚಿಸದೆ ಯಾವಾಗಲೂ ತಮ್ಮ ಬಗ್ಗೆನೇ ಯೋಚಿಸುವಂಥ ಜನರಿಗೆ ಅನೇಕ ಸಮಸ್ಯೆಗಳು ಬರುತ್ತೆ” ಅಂತ ಒಂದು ಪುಸ್ತಕ ಸಹ ಹೇಳುತ್ತೆ.

ನೀವೇನು ಮಾಡಬಹುದು:

  • ಬೇರೆಯವರಿಗೆ ಸಹಾಯ ಮಾಡಿ. ಒಳ್ಳೆಯ ಸ್ನೇಹಿತರು ಒಬ್ಬರನ್ನೊಬ್ಬರು ನಂಬುತ್ತಾರೆ ಮತ್ತು ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ. ಕೆಲವು ವರದಿಗಳ ಪ್ರಕಾರ, ಬೇರೆಯವರಿಗೆ ಸಹಾಯ ಮಾಡುವಾಗ ನಾವು ಖಿನ್ನತೆಗೆ ಒಳಗಾಗುವ ಸಾಧ್ಯತೆ ಕಡಿಮೆ ಮತ್ತು ನಮ್ಮ ಮೇಲೆ ನಮಗಿರೋ ಗೌರವ ಸಹ ಹೆಚ್ಚುತ್ತೆ.

  • ಬೇರೆಯವರಿಗೆ ಅನುಕಂಪ ತೋರಿಸಿ. ಅನುಕಂಪ ಅಂದರೆ ಬೇರೆಯವರಿಗೆ ನೋವಾದರೆ, ನಿಮಗೇ ನೋವಾದಂತೆ ಅನಿಸುವುದು. ಈ ಗುಣ ನಿಮ್ಮಲ್ಲಿದ್ದರೆ, ಬೇರೆಯವರೊಂದಿಗೆ ಮಾತಾಡುವಾಗ, ತಮಾಷೆಗಂತನೂ ಅವರಿಗೆ ನೋವಾಗುವ, ಟೀಕಿಸುವ ತರ ಮಾತಾಡಲ್ಲ.

    ನಿಮ್ಮಲ್ಲಿ ಅನುಕಂಪ ಇದ್ದರೆ, ಜನರು ಸಾಮಾನ್ಯವಾಗಿ ಇಷ್ಟಪಡದ ಜನರೊಂದಿಗೆ ಸಹ ಬೆರೆಯಲು ಪ್ರಯತ್ನಿಸುತ್ತೀರಿ. ಇದರಿಂದ ಬೇರೆ-ಬೇರೆ ಸಂಸ್ಕೃತಿ ಮತ್ತು ಹಿನ್ನಲೆ ಇರುವ ಜನರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಸಹಾಯ ಆಗುತ್ತೆ.

  • ಬೇರೆಯವರೊಂದಿಗೆ ಸಮಯ ಕಳೆಯಿರಿ. ನೀವು ಬೇರೆಯವರೊಂದಿಗೆ ಎಷ್ಟು ಸಮಯ ಕಳೆಯುತ್ತೀರೋ ಅಷ್ಟು ಚೆನ್ನಾಗಿ ಅವರ ಬಗ್ಗೆ ತಿಳಿದುಕೊಳ್ಳುತ್ತೀರಿ. ಒಳ್ಳೆಯ ಸ್ನೇಹಿತರು ಬೇಕೆಂದರೆ ಅವರಿಗೆ ಆಸಕ್ತಿ ಇರುವ, ಇಷ್ಟವಾಗುವ ವಿಷಯಗಳ ಬಗ್ಗೆ ಮಾತಾಡಿ. ಅವರು ಮಾತಾಡುವಾಗ ಚೆನ್ನಾಗಿ ಕಿವಿಗೊಡಿ. ಅವರ ಸಮಸ್ಯೆಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ. ಇತ್ತೀಚಿನ ಒಂದು ವರದಿಯ ಪ್ರಕಾರ, ಈ ರೀತಿಯ ಮಾತುಕತೆಗಳು ಜನರಿಗೆ ಸಂತೋಷ ಕೊಡುತ್ತಂತೆ.

ಒಳ್ಳೆಯ ಸ್ನೇಹಿತರನ್ನು ಆರಿಸಿಕೊಳ್ಳಿ

ಬೈಬಲ್‌ ಸಲಹೆ: “ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ.”—1 ಕೊರಿಂಥ 15:33.

ಇದರ ಅರ್ಥ: ನೀವು ಯಾರೊಂದಿಗೆ ಸಮಯ ಕಳೆಯುತ್ತೀರೋ ಅವರು ನಿಮ್ಮ ಮೇಲೆ ಒಳ್ಳೆಯ ಅಥವಾ ಕೆಟ್ಟ ಪ್ರಭಾವ ಬೀರಬಹುದು. ಇದನ್ನು ಅನೇಕ ತಜ್ಞರೂ ಒಪ್ಪಿಕೊಳ್ಳುತ್ತಾರೆ. ಉದಾಹರಣೆಗೆ, ನಿಮ್ಮ ಸ್ನೇಹಿತರಿಗೆ ಸಿಗರೇಟ್‌ ಸೇದುವ ಚಟ ಇದ್ದರೆ ಅಥವಾ ಅವರು ತಮ್ಮ ಸಂಗಾತಿಗೆ ವಿಚ್ಛೇದನ ನೀಡಿದ್ದರೆ, ಮುಂದೆ ನೀವೂ ಅದನ್ನು ಮಾಡುವ ಸಾಧ್ಯತೆ ಇದೆ ಅಂತ ಅವರು ಹೇಳುತ್ತಾರೆ.

ನೀವೇನು ಮಾಡಬಹುದು: ಒಳ್ಳೇ ಗುಣಗಳು ಇರುವವರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಉದಾಹರಣೆಗೆ, ಜಾಣ್ಮೆ, ಗೌರವ, ಉದಾರತೆ, ಪ್ರೀತಿ ತೋರಿಸುವ ಜನರೊಂದಿಗೆ ನಿಮ್ಮ ಸ್ನೇಹ ಬೆಳೆಸಿಕೊಳ್ಳಿ.

ಬೈಬಲಿನ ಇನ್ನಿತರ ಸಲಹೆಗಳು

ಒಬ್ಬ ಮಹಿಳೆ ಚಿಕ್ಕ ಹುಡುಗಿಗೆ ಬೈಬಲಾಧಾರಿತ ವಿಡಿಯೋ ತೋರಿಸುತ್ತಿದ್ದಾಳೆ

ಕುಟುಂಬ ಜೀವನವನ್ನು ಉತ್ತಮಗೊಳಿಸಲು, ದಂಪತಿಗಳಿಗೆ, ಹದಿವಯಸ್ಕರಿಗೆ, ಮತ್ತು ಮಕ್ಕಳಿಗೆ ಸಹಾಯ ಮಾಡುವ ಬೈಬಲ್‌ ಆಧಾರಿತ ವಿಡಿಯೋಗಳನ್ನು jw.orgನಲ್ಲಿ ನೋಡಿ

ಮನನೋಯಿಸುವ ಮಾತುಗಳನ್ನು ಆಡಬೇಡಿ.

“ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು.”​—ಜ್ಞಾನೋಕ್ತಿ 12:18.

ಉದಾರತೆ ತೋರಿಸಿ.

“ಉದಾರಿಯು ಪುಷ್ಟನಾಗುವನು.”​—ಜ್ಞಾನೋಕ್ತಿ 11:25.

ಜನರು ನಿಮ್ಮ ಜೊತೆ ಹೇಗಿರಬೇಕೆಂದು ಬಯಸುತ್ತೀರೋ ನೀವೂ ಅವರ ಜೊತೆ ಹಾಗೇ ಇರಿ.

“ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು.”​—ಮತ್ತಾಯ 7:12.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ