ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2012 ಅಕ್ಟೋಬರ್ 29ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರತಿಯೊಂದು ಪ್ರಶ್ನೆಯೊಂದಿಗೆ ಅದನ್ನು ಚರ್ಚಿಸಲಾಗುವ ವಾರವನ್ನು ಕೊಡಲಾಗಿದೆ. ಹೀಗೆ ಆಯಾ ವಾರದಂದು ಶಾಲೆಗಾಗಿ ತಯಾರಿ ಮಾಡುವಾಗ ಸಂಶೋಧನೆ ಮಾಡಲು ಸಾಧ್ಯವಾಗುವುದು.
1. ಯೆಹೆಜ್ಕೇಲನು ದರ್ಶನದಲ್ಲಿ ಕಂಡ ಯಜ್ಞವೇದಿ ಏನನ್ನು ಪ್ರತಿನಿಧಿಸುತ್ತದೆ? (ಯೆಹೆ. 43:13-20) [ಸೆಪ್ಟೆಂ. 10, ಕಾವಲಿನಬುರುಜು 07 8/1 ಪು. 10 ಪ್ಯಾ. 4]
2. ಯೆಹೆಜ್ಕೇಲನು ದರ್ಶನದಲ್ಲಿ ಕಂಡ ನದಿಯ ನೀರು ಏನನ್ನು ಚಿತ್ರಿಸುತ್ತದೆ? (ಯೆಹೆ. 47:1-5) [ಸೆಪ್ಟೆಂ. 17, ಕಾವಲಿನಬುರುಜು 07 8/1 ಪು. 11 ಪ್ಯಾ. 1]
3. “ತನ್ನ ಹೃದಯದಲ್ಲಿ ನಿಶ್ಚಯಿಸಿ” (ನೂತನ ಲೋಕ ಭಾಷಾಂತರ) ಎಂಬ ಪದಗಳು ದಾನಿಯೇಲನಿಗೆ ಎಳೇ ಪ್ರಾಯದಲ್ಲಿ ಸಿಕ್ಕಿದ ಆಧ್ಯಾತ್ಮಿಕ ತರಬೇತಿಯ ಬಗ್ಗೆ ಏನು ತಿಳಿಸುತ್ತದೆ? (ದಾನಿ. 1:8) [ಸೆಪ್ಟೆಂ. 24, ಕಾವಲಿನಬುರುಜು 07 9/1 ಪು. 20 ಪ್ಯಾ. 1]
4. ನೆಬೂಕದ್ನೆಚ್ಚರನು ಕನಸಿನಲ್ಲಿ ಕಂಡ ಭಾರೀ ವೃಕ್ಷ ಯಾವುದನ್ನು ಸೂಚಿಸುತ್ತದೆ? (ದಾನಿ. 4:10, 11, 20-22) [ಅಕ್ಟೋ. 1, ಕಾವಲಿನಬುರುಜು 07 9/1 ಪು. 19 ಪ್ಯಾ. 4]
5. ಪ್ರಾರ್ಥನೆಯ ವಿಷಯದಲ್ಲಿ ದಾನಿಯೇಲ 9:17-19ರಲ್ಲಿ ನಮಗ್ಯಾವ ಪಾಠವಿದೆ? [ಅಕ್ಟೋ. 8, ಕಾವಲಿನಬುರುಜು 07 9/1 ಪು. 21 ಪ್ಯಾ. 5-6]
6. ಎಪ್ಪತ್ತು ವಾರವರ್ಷಗಳ ಕೊನೆಯವರೆಗೆ ಅಂದರೆ ಕ್ರಿ.ಶ. 36ರ ವರೆಗೆ ಯಾವ ಒಡಂಬಡಿಕೆಯನ್ನು ‘ಜಾರಿಯಲ್ಲಿಡಲಾಯಿತು’ (ನೂತನ ಲೋಕ ಭಾಷಾಂತರ)? (ದಾನಿ. 9:27) [ಅಕ್ಟೋ. 8, ಕಾವಲಿನಬುರುಜು 07 9/1 ಪು. 21 ಪ್ಯಾ. 4]
7. “ಪಾರಸಿಯ ರಾಜ್ಯದ ದಿವ್ಯಪಾಲಕ” ತನ್ನನ್ನು ತಡೆದನು ಎಂದು ದೇವದೂತ ದಾನಿಯೇಲನಿಗೆ ಹೇಳಿದ ಮಾತುಗಳಿಂದ ಏನು ತಿಳಿದುಬರುತ್ತದೆ? (ದಾನಿ. 10:13) [ಅಕ್ಟೋ. 15, ಕಾವಲಿನಬುರುಜು 12 1/1 ಪು. 28 ಪ್ಯಾ. 1-2]
8. ದಾನಿಯೇಲ 11:20ರ ನೆರವೇರಿಕೆಗೂ ಮೆಸ್ಸೀಯನ ಕುರಿತ ಪ್ರವಾದನೆಯ ನೆರವೇರಿಕೆಗೂ ಯಾವ ಸಂಬಂಧವಿದೆ? [ಅಕ್ಟೋ. 15, ದಾನಿಯೇಲನ ಪ್ರವಾದನೆ ಪು. 232-233 ಪ್ಯಾ. 5-6]
9. ಹೋಶೇಯ 4:11ಕ್ಕನುಸಾರ ವಿಪರೀತ ಕುಡಿತದಿಂದಾಗುವ ಒಂದು ದುಷ್ಪರಿಣಾಮವೇನು? [ಅಕ್ಟೋ. 22, ಕಾವಲಿನಬುರುಜು 04 12/1 ಪು. 20 ಪ್ಯಾ. 10]
10. ಹೋಶೇಯ 6:6ರಲ್ಲಿ ನಮಗಿರುವ ಪಾಠವೇನು? [ಅಕ್ಟೋ. 22, ಕಾವಲಿನಬುರುಜು 07 10/1 ಪು. 4 ಪ್ಯಾ. 13; ಕಾವಲಿನಬುರುಜು 05 11/15 ಪು. 24 ಪ್ಯಾ. 11-12]