ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2014 ಆಗಸ್ಟ್ 25ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು.
1. ತಪ್ಪು-ಒಪ್ಪುಗಳ ಕುರಿತಾದ ತಿರುಚಲ್ಪಟ್ಟ ಪ್ರಜ್ಞೆಯನ್ನು ನಾವು ಬೆಳೆಸಿಕೊಳ್ಳದಿರಲು ಯಾಜಕಕಾಂಡ 18:3 ಹೇಗೆ ಸಹಾಯ ಮಾಡುತ್ತದೆ? (ಎಫೆ. 4:17-19) [ಜುಲೈ 7, ಕಾವಲಿನಬುರುಜು 02 2/1 ಪು. 29 ಪ್ಯಾ. 4]
2. ಯಾಜಕಕಾಂಡ 19:2ರಲ್ಲಿರುವ ಆಜ್ಞೆ ನಮಗೆ ಏನನ್ನು ಕಲಿಸುತ್ತದೆ? ನಾವು ಏಕೆ ಅದನ್ನು ಪಾಲಿಸಲು ಪ್ರಯಾಸಪಡಬೇಕು? [ಜುಲೈ 7, ಕಾವಲಿನಬುರುಜು 10 1/1 ಪು. 30 ಪ್ಯಾ. 5]
3. ಹಕ್ಕಲಾಯುವ ನಿಯಮದ ಹಿಂದಿರುವ ಮೂಲತತ್ವದಿಂದ ಇಂದು ನಾವೇನು ಕಲಿಯುತ್ತೇವೆ? (ಯಾಜ. 19:9, 10) [ಜುಲೈ 7, ಕಾವಲಿನಬುರುಜು 06 7/1 ಪು. 15 ಪ್ಯಾ. 13]
4. “ಕಣ್ಣಿಗೆ ಪ್ರತಿಯಾಗಿ ಕಣ್ಣು” ಎಂಬ ನಿಯಮ ಸೇಡು ತೀರಿಸುವುದನ್ನು ಪ್ರೋತ್ಸಾಹಿಸಲಿಲ್ಲ ಎಂದು ಏಕೆ ಹೇಳಬಹುದು? (ಯಾಜ. 24:19, 20) [ಜುಲೈ 14, ಕಾವಲಿನಬುರುಜು 10 1/1 ಪು. 12 ಪ್ಯಾ. 2, 3]
5. ಯಾವ ಸನ್ನಿವೇಶಗಳಲ್ಲಿ ಸಾಲಕ್ಕೆ ಬಡ್ಡಿ ಕೇಳುವುದು ತಪ್ಪಾಗಿತ್ತು, ಆದರೆ ಯಾವಾಗ ಕೇಳಬಹುದಿತ್ತು? (ಯಾಜ. 25:35-37) [ಜುಲೈ 21, ಕಾವಲಿನಬುರುಜು 04 5/15 ಪು. 24 ಪ್ಯಾ. 3]
6. ಅರಣ್ಯದಲ್ಲಿ ಮೂರು ಕುಲದ ವಿಭಾಗಗಳು ಯಾವುದರ ಹತ್ತಿರ ಇಳಿದುಕೊಳ್ಳಬೇಕಾಗಿತ್ತೋ ಆ ‘ಗೋತ್ರಧ್ವಜಗಳು’ ಏನಾಗಿದ್ದವು? (ಅರ. 2:1, 2) [ಜುಲೈ 28, ಕಾವಲಿನಬುರುಜು 04 8/1 ಪು. 24 ಪ್ಯಾ. 5]
7. ಅರಣ್ಯಕಾಂಡ 8:25, 26ರಲ್ಲಿ ತಿಳಿಸಲಾದ ಲೇವಿಯರ ಕಡ್ಡಾಯ ಸೇವೆಯಿಂದ ಹಿರಿಯರಿಗೆ ಪರಿಗಣನೆ ತೋರಿಸುವ ಬಗ್ಗೆ ನಾವೇನು ಕಲಿಯಬಲ್ಲೆವು? [ಆಗ. 11, ಕಾವಲಿನಬುರುಜು 04 8/1 ಪು. 25 ಪ್ಯಾ. 1]
8. ಐಗುಪ್ತದಿಂದ ಅದ್ಭುತಕರವಾಗಿ ಬಿಡುಗಡೆಯಾದ ನಂತರ ಇಸ್ರಾಯೇಲ್ಯರು ದೂರುವ ಸ್ವಭಾವವನ್ನು ತೋರಿಸಲು ಕಾರಣವೇನು ಮತ್ತು ಈ ವೃತ್ತಾಂತದಿಂದ ನಾವು ಯಾವ ಪ್ರಾಮುಖ್ಯ ಪಾಠವನ್ನು ಕಲಿಯಬಲ್ಲೆವು? (ಅರ. 11:4-6) [ಆಗ. 18, ಕಾವಲಿನಬುರುಜು 95 3/1 ಪು. 16 ಪ್ಯಾ. 10]
9. ಎಲ್ದಾದ್ ಮೇದಾದರು ಪ್ರವಾದಿಗಳೋಪಾದಿ ಕಾರ್ಯನಡಿಸಲು ಆರಂಭಿಸಿದಾಗ ಮೋಶೆ ಪ್ರತಿಕ್ರಿಯಿಸಿದ ರೀತಿಯಿಂದ ನಾವೇನನ್ನು ಕಲಿಯಬಲ್ಲೆವು? (ಅರ. 11:27-29) [ಆಗ. 18, ಕಾವಲಿನಬುರುಜು 04 8/1 ಪು. 26 ಪ್ಯಾ. 4]
10. “ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು” ಎಂದು ಇಸ್ರಾಯೇಲ್ಯರಿಗೆ ನೀಡಲಾದ ಆಜ್ಞೆಯಿಂದ ಯಾವ ಮೂಲತತ್ವವನ್ನು ಕಲಿಯಬಲ್ಲೆವು? (ಅರ. 15:37-39) [ಆಗ. 25, ಕಾವಲಿನಬುರುಜು 04 8/1 ಪು. 26 ಪ್ಯಾ. 7]