ನಿಮ್ಮ ಭವಿಷ್ಯವನ್ನು ಯಾವುದು ನಿರ್ಧರಿಸುತ್ತೆ?
ತುಂಬ ಜನರ ನಂಬಿಕೆ ಏನಂದ್ರೆ, ಕಾಣದ ಶಕ್ತಿಗಳು ತಮ್ಮ ಭವಿಷ್ಯವನ್ನು ನಿಯಂತ್ರಿಸುತ್ತೆ. ಅವರು ಈ ನಂಬಿಕೆಯ ಆಧಾರದ ಮೇಲೆ ತಮ್ಮ ಜೀವನ ಚೆನ್ನಾಗಿರಬೇಕು ಅಂತ ಕೆಲವು ವಿಷ್ಯಗಳನ್ನು ಮಾಡ್ತಾರೆ.
ಕೆಲವು ನಂಬಿಕೆಗಳು
ಜ್ಯೋತಿಷ: ಕೆಲವರು ತಾವು ಹುಟ್ಟಿದ ಸಮಯದಲ್ಲಿ ನಕ್ಷತ್ರಗಳು ಸಾಲಾಗಿ ನಿಂತಿರುವ ಆಧಾರದ ಮೇಲೆ ತಮ್ಮ ಭವಿಷ್ಯವನ್ನು ನಿರ್ಧರಿಸಲಾಗಿದೆ ಅಂತ ನಂಬುತ್ತಾರೆ. ಅದಕ್ಕೆ ಅವರು ಭವಿಷ್ಯ ಅಥವಾ ಜಾತಕ ನೋಡ್ತಾರೆ. ಆಗ ತಮಗೇನಾದ್ರೂ ಹಾನಿ ಇದೆಯಾ ಅಂತ ಗುರುತಿಸಿ ಅದರಿಂದ ತಪ್ಪಿಸಿಕೊಳ್ಳೋಕೆ ಮತ್ತು ಯಶಸ್ಸು ಗಳಿಸೋಕೆ ಮಾರ್ಗ ಕಂಡುಹಿಡಿಯುತ್ತಾರೆ.
ಫೆಂಗ್ ಶುಯೀ: ಇದು ಒಂದು ರೀತಿಯ ವಾಸ್ತು ಶಾಸ್ತ್ರ. ಮನೆಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಕಟ್ಟುವುದಾದರೆ ಕಾಣದ ಶಕ್ತಿಯ ಸಹಾಯದಿಂದ ಯಶಸ್ಸು ಪಡೆಯೋಕೆ ಆಗುತ್ತೆ ಅಂತ ತುಂಬ ಜನ ನಂಬ್ತಾರೆ. ಹಾಂಗ್ ಕಾಂಗ್ನಲ್ಲಿರೋ ಲೋ ವಿಂಗ್a ಅನ್ನುವವರು ಹೇಳಿದ್ದು, “ಫೆಂಗ್ ಶುಯೀಯ ಒಬ್ಬ ಪರಿಣಿತ ‘ನಿನ್ನ ಅಂಗಡಿಯ ಒಂದು ನಿರ್ದಿಷ್ಟ ಸ್ಥಳದಲ್ಲಿ ಸ್ಪಟಿಕ ಕಲ್ಲನ್ನು ಇಡೋದಾದ್ರೆ ಜಾಸ್ತಿ ಹಣ ಸಂಪಾದಿಸಬಹುದು’ ಅಂತ ಹೇಳಿದ್ರು.”
ಪೂರ್ವಜರ ಆರಾಧನೆ: ಸತ್ತವರ ಮತ್ತು ದೇವರುಗಳ ಸಂರಕ್ಷಣೆ ಹಾಗೂ ಆಶೀರ್ವಾದ ಪಡೆಯಲು ಅವರನ್ನ ಆರಾಧಿಸಬೇಕು ಅಂತ ಕೆಲವರು ನಂಬ್ತಾರೆ. ವಿಯೆಟ್ನಾಮಲ್ಲಿರೋ ವ್ಯಾನ್ ಹೇಳಿದ್ದು, “ಪೂರ್ವಜರನ್ನು ಗೌರವಿಸಿದ್ರೆ ಈಗ ನನ್ನ ಜೀವನ ಚೆನ್ನಾಗಿರುತ್ತೆ, ಮುಂದೆ ನಂಗೂ ನನ್ನ ಮಕ್ಕಳಿಗೂ ಸುಭದ್ರ ಭವಿಷ್ಯ ಸಿಗುತ್ತೆ ಅಂತ ನಂಬ್ತಿದ್ದೆ.”
ಪುನರ್ಜನ್ಮ: ತುಂಬ ಜನರ ನಂಬಿಕೆ ಏನಂದ್ರೆ ಒಬ್ಬ ವ್ಯಕ್ತಿ ಸತ್ತ ಮೇಲೆ ಮತ್ತೆ ಮತ್ತೆ ಹುಟ್ಟಿ ಬರ್ತಾನೆ. ಹಿಂದಿನ ಜನ್ಮದಲ್ಲಿ ಮಾಡಿದ ವಿಷಯಗಳಿಂದಾನೇ ಇವತ್ತು ಅವರಿಗೆ ಒಳ್ಳೇದು ಅಥವಾ ಕೆಟ್ಟದ್ದು ನಡೀತಿದೆ ಅಂತ ನಂಬ್ತಾರೆ.
ತುಂಬ ಜನರಿಗೆ ಇದು ಮೂಢನಂಬಿಕೆ ಅಂತ ಗೊತ್ತಿದೆ. ಆದ್ರೂ ಕೈ ನೋಡೋದು, ಜಾತಕ, ಓಯಿಜಾ ಬೋರ್ಡ್, ಟ್ಯಾರೋಟ್ ಕಾರ್ಡ್ ನೋಡೋದನ್ನು ರೂಢಿ ಮಾಡ್ಕೊಂಡಿದ್ದಾರೆ. ಹೀಗೆ ಮಾಡೋದ್ರಿಂದ ತಮ್ಮ ಭವಿಷ್ಯ ತಿಳ್ಕೊಳ್ಳಬಹುದು ಅಂತ ಅವರ ನಂಬಿಕೆ.
ಇವುಗಳಿಂದ ಏನು ಪ್ರಯೋಜನ?
ಇಂಥ ವಿಷಯಗಳನ್ನು ನಂಬುವವರು ಮತ್ತು ಮಾಡುವವರು ಒಳ್ಳೇ ಜೀವನ ಅಥವಾ ಸುಭದ್ರ ಭವಿಷ್ಯ ಕಂಡುಕೊಂಡಿದ್ದಾರಾ?
ವಿಯೆಟ್ನಾಮಲ್ಲಿರೋ ಹಾವೋ ಅನ್ನುವವರ ಅನುಭವ ನೋಡಿ. ಅವರು ಜ್ಯೋತಿಷ, ಫೆಂಗ್ ಶುಯೀ ಮತ್ತು ಪೂರ್ವಜರ ಆರಾಧನೆ ಮಾಡ್ತಾ ಇದ್ರು. ಅದ್ರಿಂದ ಏನಾದ್ರೂ ಪ್ರಯೋಜನ ಆಯ್ತಾ? ಅವರು ಹೇಳಿದ್ದು, “ನನ್ನ ವ್ಯಾಪಾರ ಹಾಳಾಯ್ತು, ಸಾಲದಲ್ಲಿ ಮುಳುಗಿಹೋದೆ, ಕುಟುಂಬದಲ್ಲಿ ಸಮಸ್ಯೆಗಳಾಯ್ತು ಮತ್ತು ನಂಗೆ ಖಿನ್ನತೆನೂ ಬಂತು.”
ತೈವಾನಲ್ಲಿರೋ ಕ್ಯೂಮಿಂಗ್ ಅನ್ನುವವರು ಜ್ಯೋತಿಷ, ಪುನರ್ಜನ್ಮ, ವಿಧಿ, ಫೆಂಗ್ ಶುಯೀ ಮತ್ತು ಪೂರ್ವಜರ ಆರಾಧನೆಯಲ್ಲಿ ನಂಬಿಕೆ ಇಟ್ಟಿದ್ರು. ಈ ನಂಬಿಕೆಗಳ ಬಗ್ಗೆ ಅವರು ಚೆನ್ನಾಗಿ ಯೋಚಿಸಿದ ಮೇಲೆ ಹೇಳಿದ್ದು, “ಇಂಥ ಬೋಧನೆಗಳು ಮತ್ತು ಸಂಪ್ರದಾಯಗಳು ಒಂದಕ್ಕೊಂದು ತದ್ವಿರುದ್ಧವಾಗಿವೆ ಮತ್ತು ನಮ್ಮನ್ನು ಗಲಿಬಿಲಿ ಮಾಡುತ್ತೆ. ಜ್ಯೋತಿಷದಲ್ಲಿರುವ ಕೆಲವು ವಿಷಯಗಳು ತಪ್ಪಾಗಿತ್ತು ಅಂತ ನಂಗೆ ಗೊತ್ತಾಯ್ತು. ಪುನರ್ಜನ್ಮದ ಬಗ್ಗೆ ಹೇಳೋದಾದ್ರೆ, ಹಿಂದಿನ ಜನ್ಮದಲ್ಲಿ ಮಾಡಿದ್ದು ನಂಗೆ ನೆನಪಿಲ್ಲಾಂದ್ರೆ ಈ ಜನ್ಮದಲ್ಲಿ ನಾನು ಬದಲಾಗೋಕೆ ಹೇಗಾಗುತ್ತೆ? ಹೇಗೆ ಒಳ್ಳೇ ಜೀವನ ಮಾಡೋಕಾಗುತ್ತೆ?”
“ಇಂಥ ಬೋಧನೆಗಳು ಮತ್ತು ಸಂಪ್ರದಾಯಗಳು ಒಂದಕ್ಕೊಂದು ತದ್ವಿರುದ್ಧವಾಗಿವೆ ಮತ್ತು ನಮ್ಮನ್ನು ಗಲಿಬಿಲಿ ಮಾಡುತ್ತೆ.”—ಕ್ಯೂಮಿಂಗ್, ತೈವಾನ್
ಹಾವೋ ಮತ್ತು ಕ್ಯೂಮಿಂಗ್ ತರ ಎಷ್ಟೋ ಜನ ಈ ಸತ್ಯವನ್ನು ಅರ್ಥಮಾಡಿಕೊಂಡಿದ್ದಾರೆ. ನಮ್ಮ ಭವಿಷ್ಯವನ್ನು ವಿಧಿ, ನಕ್ಷತ್ರಗಳು, ಪೂರ್ವಜರು ಅಥವಾ ಪುನರ್ಜನ್ಮ ನಿರ್ಧರಿಸಲ್ಲ. ಹಾಗಂತ ನಮ್ಮ ಭವಿಷ್ಯದ ಮೇಲೆ ನಮಗೆ ಯಾವ ಹಿಡಿತನೂ ಇಲ್ವಾ?
ಉನ್ನತ ಶಿಕ್ಷಣ ಮತ್ತು ಐಶ್ವರ್ಯ ಇದ್ರೆ ತಮ್ಮ ಭವಿಷ್ಯ ಚೆನ್ನಾಗಿರುತ್ತೆ ಅಂತ ತುಂಬ ಜನ ನೆನಸ್ತಾರೆ. ಇಂಥ ಆಯ್ಕೆ ಮಾಡಿದ ಕೆಲವರಿಗೆ ಏನಾಯ್ತು?
a ಈ ಲೇಖನ ಮತ್ತು ಮುಂದಿನ ಲೇಖನಗಳಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
b ಈ ಹೇಳಿಕೆ ಬೈಬಲಿನ ಗಲಾತ್ಯ 6:7 ರಲ್ಲಿ ಇದೆ. ಈ ವಿಷಯದ ಬಗ್ಗೆ ಇರೋ ಒಂದು ಹೇಳಿಕೆ ಏನಂದ್ರೆ ಭತ್ತ ಬಿತ್ತಿದರೆ ಭತ್ತ ಕೊಯ್ತೀರ. ಗೋದಿ ಬಿತ್ತಿದರೆ ಗೋದಿ ಕೊಯ್ತೀರ.