ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp22 ನಂ. 1 ಪು. 6-7
  • 1 | ಭೇದಭಾವ ಮಾಡಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1 | ಭೇದಭಾವ ಮಾಡಬೇಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕಲಿಸೋದು:
  • ಇದರ ಅರ್ಥ ಏನು?
  • ನೀವೇನು ಮಾಡಬಹುದು?
  • ತೀತ—‘ನಿಮ್ಮ ಪ್ರಯೋಜನಕ್ಕಾಗಿ ದುಡಿಯುವ ಜೊತೆ ಕೆಲಸಗಾರ’
    ಕಾವಲಿನಬುರುಜು—1998
  • 3 | ದ್ವೇಷದ ಕಳೆಯನ್ನ ಮನಸ್ಸಿಂದ ಕಿತ್ತಾಕಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ‘ಯೆಹೋವ ದೇವರು ಪಕ್ಷಪಾತಿಯಲ್ಲ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
wp22 ನಂ. 1 ಪು. 6-7
ಒಬ್ಬ ಕಪ್ಪು ವ್ಯಕ್ತಿ ನಗುತ್ತಿರುವ ಬಿಳಿ ವ್ಯಕ್ತಿಯ ಫೋಟೋ ಹಿಡ್ಕೊಂಡಿದ್ದಾನೆ. ಒಬ್ಬ ಬಿಳಿ ವ್ಯಕ್ತಿ ನಗುತ್ತಿರುವ ಕಪ್ಪು ವ್ಯಕ್ತಿಯ ಫೋಟೋ ಹಿಡ್ಕೊಂಡಿದ್ದಾನೆ. ಅದರ ಹಿಂದೆ ದ್ವೇಷ ಕಾರುತ್ತಿರೋ ಜನರ ಫೋಟೋಗಳಿವೆ.

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

1 | ಭೇದಭಾವ ಮಾಡಬೇಡಿ

ಬೈಬಲ್‌ ಕಲಿಸೋದು:

“ದೇವರು ಭೇದಭಾವ ಮಾಡಲ್ಲ . . . ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.”—ಅಪೊಸ್ತಲರ ಕಾರ್ಯ 10:34, 35.

ಇದರ ಅರ್ಥ ಏನು?

ಯೆಹೋವa ದೇವರು ಯಾವತ್ತೂ ದೇಶ, ಭಾಷೆ, ಬಣ್ಣ ಮತ್ತು ಸಂಸ್ಕೃತಿ ನೋಡಿ ಭೇದಭಾವ ಮಾಡಲ್ಲ. ಅದಕ್ಕೆ ಬದಲು ನಾವು ಎಂಥ ವ್ಯಕ್ತಿಗಳಾಗಿದ್ದೀವಿ ಅಂತ ನೋಡ್ತಾನೆ. ಬೈಬಲ್‌ ಹೇಳುತ್ತೆ: “ಮನುಷ್ಯರು ಕಣ್ಣಿಗೆ ಕಾಣಿಸೋದನ್ನ ನೋಡ್ತಾರೆ. ಆದ್ರೆ ಯೆಹೋವ ಹೃದಯದಲ್ಲಿ ಇರೋದನ್ನ ನೋಡ್ತಾನೆ.”—1 ಸಮುವೇಲ 16:7.

ನೀವೇನು ಮಾಡಬಹುದು?

ನಮಗೆ ದೇವರ ತರ ಮನುಷ್ಯರ ಮನಸ್ಸನ್ನು ಓದೋಕೆ ಆಗಲ್ಲ. ದೇವರು ಹೇಗೆ ಭೇದಭಾವ ಮಾಡಲ್ವೋ ಹಾಗೆ ನಾವೂ ಇರೋಕೆ ಪ್ರಯತ್ನಿಸಬೇಕು. ಒಬ್ಬ ವ್ಯಕ್ತಿಯನ್ನ ನೋಡುವಾಗ ಅವನು ಯಾವ ಗುಂಪಿನವನು ಅಂಥ ಯೋಚಿಸೋ ಬದ್ಲು, ಅವನು ಎಂಥ ವ್ಯಕ್ತಿ ಆಗಿದ್ದಾನೆ ಅಂತ ಯೋಚಿಸಬೇಕು. ಬೇರೆ ದೇಶ, ಜಾತಿಯ ಜನ್ರ ಬಗ್ಗೆ ತಪ್ಪಾದ ಭಾವನೆ ಇದ್ರೆ, ಅದನ್ನ ಮನಸ್ಸಿಂದ ಕಿತ್ತು ಹಾಕೋಕೆ ದೇವರ ಹತ್ರ ಪ್ರಾರ್ಥಿಸಿ ಸಹಾಯ ಕೇಳಬೇಕು. (ಕೀರ್ತನೆ 139:23, 24) ಭೇದಭಾವ ಮಾಡ್ದೇ ಇರೋಕೆ ನೀವು ಪ್ರಾಮಾಣಿಕವಾಗಿ ಬಯಸೋದಾದ್ರೆ ನೀವು ಮಾಡುವ ಪ್ರಾರ್ಥನೆಗೆ ದೇವರು ಖಂಡಿತ ಉತ್ತರ ಕೊಡ್ತಾನೆ. ಸಹಾಯನೂ ಮಾಡ್ತಾನೆ.—1 ಪೇತ್ರ 3:12.

a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.

“ಈ ಮುಂಚೆ ನಾನು ಯಾವತ್ತೂ ಬಿಳಿ ಜನರ ಜೊತೆ ಸಮಾಧಾನವಾಗಿ ಕೂತಿದ್ದೇ ಇಲ್ಲ . . . ನಾನು ಈಗ ನಿಜ ಪ್ರೀತಿ ತೋರಿಸೋ ಒಂದು ದೊಡ್ಡ ಕುಟುಂಬದ ಭಾಗವಾಗಿದ್ದೀನಿ.”—ಟೈಟಸ್‌

ನಿಜ ಅನುಭವ—ಟೈಟಸ್‌

ದ್ವೇಷದ ಸರಪಳಿ ಕಿತ್ತೆಸೆದರು

ಟೈಟಸ್‌.

ಕ್ರೂರಿಗಳಿದ್ದ ಒಂದು ಗ್ಯಾಂಗಲ್ಲಿ ಟೈಟಸ್‌ ಕೂಡ ಒಬ್ಬರಾಗಿದ್ರು. ಈ ಗ್ಯಾಂಗ್‌ ತಮ್ಮ ಜನಾಂಗದ ಮೇಲೆ ದಬ್ಬಾಳಿಕೆ ಮಾಡ್ತಿದ್ದ ಕಾನೂನಿನ ವಿರುದ್ಧವಾಗಿ ಹೋರಾಟ ಮಾಡುತ್ತಿದ್ರು. ಅವರು ಹೇಳಿದ್ದು: “ಕಪ್ಪು ಜನ್ರನ್ನ ನಿಷೇಧಿಸಿದ ಹೋಟೆಲ್‌ಗಳಿಗೆ ಮತ್ತು ಬಾರ್‌ಗಳಿಗೆ ಹೋಗಿ ನಾವು ಹೊಡೆದಾಟ ಮಾಡ್ತಿದ್ವಿ.” ಟೈಟಸ್‌ ಮನಸ್ಸಲ್ಲಿ ದ್ವೇಷದ ಕಿಡಿ ಇದ್ದಿದ್ರಿಂದಾಗಿ ಅವರು ಜನ್ರನ್ನ ಹಿಂಸಿಸುತ್ತಿದ್ರು. ಅವರು ಹೇಳಿದ್ದು: “ಯಾವುದಾದ್ರೂ ಒಂದು ವಿಷಯಕ್ಕೆ ವಾಗ್ವಾದ ಆದ್ರೆ ಅವರು ಹೆಂಗಸರಾ, ಗಂಡಸರಾ ಅಂತ ನೋಡ್ದೆ ಅವರನ್ನ ಹೊಡಿಯೋಕೆ ಬಡಿಯೋಕೆ ನಾನೇ ಮುಂದೆ ಹೋಗ್ತಿದ್ದೆ.”

ಟೈಟಸ್‌ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೆ ಶುರು ಮಾಡಿದಾಗ ಅವರಲ್ಲಿ ಬದಲಾವಣೆ ಕಾಣಿಸ್ತು. ಅವರು ಬೈಬಲ್‌ ಓದಿದಾಗ ಅವರ ಯೋಚನೆನೇ ಬದಲಾಯಿತು. ಅದ್ರಲ್ಲಿ ಅವರಿಗೆ ತುಂಬ ಇಷ್ಟ ಆದ ವಿಷಯ ಯಾವುದಂದ್ರೆ “ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ.”—ಪ್ರಕಟನೆ 21:3, 4.

ಮೊದಮೊದಲು ಟೈಟಸ್‌ಗೆ ದ್ವೇಷ ನಿಯಂತ್ರಿಸೋಕೆ ಕಷ್ಟವಾಯ್ತು. ಅವರು ಹೇಳಿದ್ದು: “ನನ್ನ ಯೋಚನೆ ಮತ್ತು ನಡತೆ ಬದಲಾಯಿಸೋದು ಸುಲಭ ಆಗಿರಲಿಲ್ಲ. ತುಂಬ ಕಷ್ಟ ಆಗ್ತಿತ್ತು.” ಆದ್ರೆ ಅಪೊಸ್ತಲರ ಕಾರ್ಯ 10:34, 35ರಲ್ಲಿ ದೇವರು ಭೇದಭಾವ ಮಾಡಲ್ಲ ಅನ್ನೋ ಮಾತು ಅವರಿಗೆ ತುಂಬ ಸಹಾಯ ಮಾಡ್ತು.

ಇದ್ರಿಂದ ಏನು ಪ್ರಯೋಜನ ಆಯ್ತು? ಟೈಟಸ್‌ ಹೇಳೋದು: “ಜಾತಿ, ಬಣ್ಣ ಅಂತ ಭೇದಭಾವ ಮಾಡದೆ ನಿಜವಾದ ಪ್ರೀತಿ ತೋರಿಸೋದು ಯೆಹೋವನ ಸಾಕ್ಷಿಗಳೇ ಅಂತ ನನಗೆ ಗೊತ್ತಾಯ್ತು. ನಾನು ದೀಕ್ಷಾಸ್ನಾನ ತಗೊಳ್ಳೋಕೆ ಮುಂಚೆ ನಮ್ಮ ಸಭೆಯಲ್ಲಿದ್ದ ಒಬ್ಬ ಬಿಳಿ ಸಹೋದರ ನನ್ನನ್ನ ಊಟಕ್ಕೆ ಅವರ ಮನೆಗೆ ಕರೆದ್ರು. ಅದು ನನಗೆ ಒಂದು ಕನಸು ಅಂತನೇ ಅನಿಸ್ತು. ಈ ಮುಂಚೆ ನಾನು ಯಾವತ್ತೂ ಬಿಳಿ ಜನರ ಜೊತೆ ಸಮಾಧಾನವಾಗಿ ಕೂತಿದ್ದೇ ಇಲ್ಲ. ಆದ್ರೆ ಈಗ ಒಬ್ಬ ಬಿಳಿ ವ್ಯಕ್ತಿಯ ಮನೆಯಲ್ಲಿ ಕೂತು ಊಟ ಮಾಡೋಕೆ ಆಗ್ತಿದೆ. ನಾನು ಈಗ ನಿಜ ಪ್ರೀತಿ ತೋರಿಸೋ ಒಂದು ದೊಡ್ಡ ಕುಟುಂಬದ ಭಾಗವಾಗಿದ್ದೀನಿ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ