ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp23 ನಂ. 1 ಪು. 10-11
  • 3 | ಬೈಬಲ್‌ನಲ್ಲಿರೋ ಉದಾಹರಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 3 | ಬೈಬಲ್‌ನಲ್ಲಿರೋ ಉದಾಹರಣೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇದರ ಅರ್ಥ ಏನು
  • ಇದು ಹೇಗೆ ಸಹಾಯ ಮಾಡುತ್ತೆ
  • 2 | ‘ಬೈಬಲ್‌ನಲ್ಲಿರೋ ಸಾಂತ್ವನದ ಮಾತುಗಳು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
  • 4 | ಬೈಬಲ್‌ನಲ್ಲಿರೋ ಸಲಹೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
  • ನಾನು ಯಾಕೆ ಆಗಾಗ ಡಲ್‌ ಆಗ್ತೀನಿ?
    ಯುವಜನರ ಪ್ರಶ್ನೆಗಳು
  • 1| ಪ್ರಾರ್ಥನೆ—“ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
wp23 ನಂ. 1 ಪು. 10-11
ಪ್ರವಾದಿ ಮೋಶೆ ಆಕಾಶವನ್ನ ನೋಡ್ತಾ ತನ್ನ ದುಃಖವನ್ನ ದೇವರಿಗೆ ಹೇಳ್ತಿದ್ದಾನೆ.

3 | ಬೈಬಲ್‌ನಲ್ಲಿರೋ ಉದಾಹರಣೆಗಳು

ಬೈಬಲ್‌ ಹೀಗೆ ಹೇಳುತ್ತೆ . . .“ನಮ್ಮ ತರದ ಭಾವನೆಗಳಿದ್ದ” ನಂಬಿಗಸ್ತ ಪುರುಷ ಮತ್ತು ಸ್ತ್ರೀಯರು. —ಯಾಕೋಬ 5:17.

ಇದರ ಅರ್ಥ ಏನು

ಬೈಬಲ್‌ನಲ್ಲಿ ನಮ್ಮ ತರದ ಭಾವನೆಗಳಿದ್ದ ಪುರುಷ ಮತ್ತು ಸ್ತ್ರೀಯರ ನಿಜವಾದ ಜೀವನ ಕಥೆಗಳಿವೆ. ಅವ್ರ ಬಗ್ಗೆ ನಾವು ಓದಿ ತಿಳ್ಕೊಂಡ್ರೆ ನಮಗೆ ಸಹಾಯ ಆಗುತ್ತೆ.

ಇದು ಹೇಗೆ ಸಹಾಯ ಮಾಡುತ್ತೆ

ಬೇರೆಯವರು ನಮ್ಮನ್ನ ಚೆನ್ನಾಗಿ ಅರ್ಥಮಾಡ್ಕೊಬೇಕು ಅಂತ ನಾವೆಲ್ರೂ ಇಷ್ಟಪಡ್ತೀವಿ. ಅದ್ರಲ್ಲೂ ಮಾನಸಿಕ ಆರೋಗ್ಯದ ಸಮಸ್ಯೆ ಇರೋರ ವಿಷ್ಯದಲ್ಲಂತೂ ಈ ಮಾತು ನೂರಕ್ಕೆ ನೂರು ಸತ್ಯ. ನಿಜವಾಗ್ಲೂ ನಡೆದಿರೋ ಜೀವನ ಕಥೆಗಳನ್ನ ನಾವು ಬೈಬಲ್‌ನಲ್ಲಿ ಓದಿದಾಗ, ನಮ್ಮ ತರದ ಭಾವನೆಗಳಿದ್ದ ಬೇರೆ ಜನ್ರ ಬಗ್ಗೆ ನಮಗೆ ಗೊತ್ತಾಗುತ್ತೆ. ಆಗ ನಮ್ಮಲ್ಲಾಗೋ ಕಳವಳ, ಆತಂಕ, ಕಹಿನೆನಪುಗಳು ನಮಗೆ ಮಾತ್ರ ಅಲ್ಲ, ಈ ಮುಂಚೆ ಬೇರೆಯವ್ರಿಗೂ ಬಂದಿತ್ತು ಅಂತ ನಾವು ತಿಳಿದುಕೊಳ್ತೀವಿ.

  • ನಿಸ್ಸಹಾಯಕ ಸ್ಥಿತಿಯಲ್ಲಿದ್ದ ಕೆಲವರ ಮಾತುಗಳನ್ನ ನಾವು ಬೈಬಲಲ್ಲಿ ಓದಬಹುದು. ನಿಮಗೆ ಯಾವತ್ತಾದ್ರೂ, ‘ಇನ್ನು ನನ್ನಿಂದ ಆಗಲ್ಲ, ನನಗೆ ಸಾಕಾಯ್ತು’ ಅಂತ ಅನಿಸಿದೆಯಾ? ಮೋಶೆ, ಎಲೀಯ ಮತ್ತು ದಾವೀದನಿಗೆ ಹೀಗೆ ಅನಿಸ್ತು.—ಅರಣ್ಯಕಾಂಡ 11:14; 1 ಅರಸು 19:4; ಕೀರ್ತನೆ 55:4.

  • ಬೈಬಲಲ್ಲಿ ಹನ್ನ ಅನ್ನೋ ಒಬ್ಬ ಸ್ತ್ರೀ ಬಗ್ಗೆ ಇದೆ. ಅವಳಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವಳ ಸವತಿ ಯಾವಾಗ್ಲೂ ಕೆಣಕಿ ಮಾತಾಡ್ತಾ ಇದ್ದಳು. ಇದ್ರಿಂದ ಹನ್ನ “ಬಿಕ್ಕಿಬಿಕ್ಕಿ ಅಳ್ತಾ ದುಃಖದಿಂದ” ಇರ್ತಾ ಇದ್ದಳು.—1 ಸಮುವೇಲ 1:6, 10.

  • ಬೈಬಲಲ್ಲಿ ಯೋಬ ಅನ್ನೋ ವ್ಯಕ್ತಿ ಬಗ್ಗೆ ಕೂಡ ಇದೆ. ಅವನಿಗೆ ದೇವರ ಮೇಲೆ ತುಂಬ ನಂಬಿಕೆ ಇದ್ರೂ ಒಂದು ಸಲ ಕುಗ್ಗಿ ಹೋದ. ಎಷ್ಟರ ಮಟ್ಟಿಗೆ ಅಂದ್ರೆ, “ನನಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿದೆ, ಬದುಕೋ ಆಸೆ ನನಗಿಲ್ಲ” ಅಂತ ಅವನು ಹೇಳಿದ.—ಯೋಬ 7:16.

ಈ ವ್ಯಕ್ತಿಗಳೆಲ್ಲ ಇಂಥ ಯೋಚನೆಗಳಿಂದ ಹೇಗೆ ಹೊರಗೆ ಬಂದ್ರು ಅಂತ ನಾವು ಕಲಿತಾಗ ನಮ್ಮ ಮನಸ್ಸಲ್ಲಾಗೋ ತಳಮಳವನ್ನ ನಿಭಾಯಿಸೋಕೆ ಬಲ ಸಿಗುತ್ತೆ.

ಬೈಬಲ್‌ನಿಂದ ಸಹಾಯ ಪಡೆದ ಕೆವಿನ್‌

ನನಗೆ ಬೈಪೋಲಾರ್‌ ಡಿಸಾರ್ಡರ್‌ ಇದೆ ಅಂತ ಗೊತ್ತಾದಾಗ . . .

ಇಬ್ರು ಸ್ನೇಹಿತರ ಜೊತೆ ಕೆವಿನ್‌ ಕಾಫಿ ಕುಡಿತ್ತಿದ್ದಾನೆ.

“ಹತ್ರತ್ರ 50 ವರ್ಷ ಆದಾಗ, ನನಗೆ ಮಾನಸಿಕ ಕಾಯಿಲೆ (ಬೈಪೋಲಾರ್‌ ಡಿಸಾರ್ಡರ್‌) ಇದೆ ಅಂತ ಡಾಕ್ಟರ್‌ ಹೇಳಿದ್ರು. ಇದ್ರಿಂದ ನನ್ನ ಮನಸ್ಥಿತಿಯಲ್ಲಿ ತುಂಬ ಏರುಪೇರು ಆಗುತ್ತೆ. ನನಗೆ ಹೇಗೆ ಅನಿಸುತ್ತೆ ಅಂದ್ರೆ, ಕೆಲವೊಮ್ಮೆ ಏನೇ ಸಮಸ್ಯೆ ಬಂದ್ರೂ ಪರವಾಗಿಲ್ಲ, ನನ್ನಿಂದ ಅದನ್ನೆಲ್ಲಾ ತಾಳಿಕೊಳ್ಳೋಕೆ ಆಗುತ್ತೆ ಅನ್ನೋ ಧೈರ್ಯ ಇರುತ್ತೆ. ಬೆಟ್ಟವನ್ನೇ ಅಗೆದು ಹಾಕುವಷ್ಟು ಬಲ ಇದೆ ಅಂತ ಅನಿಸುತ್ತೆ. ಇನ್ನು ಕೆಲವು ಸಲ ನನಗೆ ಬದುಕೋ ಆಸೆನೇ ಇರಲ್ಲ.”

ಬೈಬಲ್‌ ನನಗೆ ಹೇಗೆ ಸಹಾಯ ಮಾಡ್ತಿದೆ

“ಬೈಬಲ್‌ನಲ್ಲಿರೋ ಉದಾಹರಣೆಗಳಲ್ಲಿ ನನಗೆ ಸಹಾಯ ಮಾಡಿದ್ದು ಯಾವುದಂದ್ರೆ, ಅಪೊಸ್ತಲ ಪೇತ್ರನದ್ದು. ಅವನು ತಪ್ಪುಗಳನ್ನ ಮಾಡಿದಾಗ ತಾನು ಯೋಗ್ಯತೆ ಇಲ್ಲದವನು ಅನ್ನೋ ಭಾವನೆ ಪೇತ್ರನಿಗೆ ಬಂತು. ಈ ಯೋಚನೆಯಲ್ಲೇ ಮುಳುಗಿ ಹೋಗೋ ಬದಲು ಅವನು ತನ್ನ ಸ್ನೇಹಿತರ ಜೊತೆ ಸಮಯ ಕಳೆದನು. ನನಗಿರೋ ಬೈಪೋಲಾರ್‌ ಡಿಸಾರ್ಡರ್‌ನಿಂದ ಮತ್ತು ಬೇರೆ ಕುಂದುಕೊರತೆಗಳಿಂದ ನಾನು ಯೋಗ್ಯತೆ ಇಲ್ಲವದವನು ಅನ್ನೋ ಭಾವನೆ ಕಾಡುತ್ತೆ. ಹೀಗೆಲ್ಲ ಅನಿಸಿದಾಗ ನನ್ನ ಸ್ನೇಹಿತರ ಜೊತೆ ಸಮಯ ಕಳಿತೀನಿ. ನಾನು ಜೀವನದಲ್ಲಿ ಸೋತು ಹೋಗದೆ, ಬಿಟ್ಟುಕೊಡದೆ ಇರೋಕೆ ನನ್ನ ಸ್ನೇಹಿತರು ಸಹಾಯ ಮಾಡ್ತಾರೆ.

ನನಗೆ ಸಹಾಯ ಮಾಡಿದ ಇನ್ನೊಂದು ಬೈಬಲ್‌ ಉದಾಹರಣೆ ಯಾವುದಂದ್ರೆ, ರಾಜ ದಾವೀದನದ್ದು. ಅವನಿಗಿದ್ದ ಪರಿಸ್ಥಿತಿಗಳಿಂದ, ಅವನು ಮಾಡಿದ ತಪ್ಪುಗಳಿಂದ ದಾವೀದನಿಗೂ ಮನಸ್ಸಲ್ಲಿ ತುಂಬ ನೋವಿತ್ತು. ನನಗೂ ಎಷ್ಟೋ ಸಲ ಇದೇ ತರ ಅನಿಸುತ್ತೆ. ಕೆಲವು ಸಲ ನಾನು ಏನಾದ್ರು ಹೇಳಿಬಿಡ್ತೀನಿ ಅಥವಾ ಮಾಡಿಬಿಡ್ತೀನಿ. ಆದ್ರೆ ಆಮೇಲೆ ಅದ್ರ ಬಗ್ಗೆ ಯೋಚಿಸ್ದಾಗ, ‘ಛೇ! ನಾನು ಹಾಗೆ ಮಾಡಬಾರದಿತ್ತು’ ಅಂತ ಅನಿಸುತ್ತೆ. ಆಗ 51ನೇ ಕೀರ್ತನೆಯಲ್ಲಿರೋ ದಾವೀದನ ಮಾತುಗಳು ತುಂಬ ಸಾಂತ್ವನ ಕೊಡುತ್ತೆ. ವಚನ 3ರಲ್ಲಿ “ನನ್ನ ಅಪರಾಧಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಾಗಿದೆ, ನನ್ನ ಪಾಪ ಯಾವಾಗ್ಲೂ ನನ್ನ ಮುಂದೆನೇ ಇದೆ” ಅಂತ ಅವನು ಹೇಳ್ತಾನೆ. ನಾನು ತುಂಬ ಕುಗ್ಗಿ ಹೋಗಿರುವಾಗ ನನ್ನ ಬಗ್ಗೆ ಒಳ್ಳೇ ರೀತಿಯಲ್ಲಿ ಯೋಚಿಸೋಕೆ ನನ್ನಿಂದ ಆಗಲ್ಲ. ಆಗೆಲ್ಲಾ ನಾನು ವಚನ 10ರಲ್ಲಿ ಇರೋ ಹಾಗೆ “ದೇವರೇ, ನನ್ನೊಳಗೆ ಶುದ್ಧ ಹೃದಯವನ್ನ ಹುಟ್ಟಿಸು, ಸ್ಥಿರವಾಗಿರೋ ಒಂದು ಹೊಸ ಮನಸ್ಸನ್ನ ನನ್ನೊಳಗೆ ಇಡು” ಅಂತ ಯೆಹೋವ ದೇವರ ಹತ್ರ ಬೇಡ್ಕೊಳ್ತೀನಿ. ‘ನನ್ನ ಬಗ್ಗೆ ಸರಿಯಾಗಿ ಯೋಚಿಸೋಕೆ ಸಹಾಯ ಮಾಡಪ್ಪಾ’ ಅಂತ ಕೇಳಿಕೊಳ್ತೀನಿ. ಕೊನೇದಾಗಿ 17ನೇ ವಚನದಲ್ಲಿ ‘ಜಜ್ಜಿ ಹೋಗಿರೋ ಮತ್ತು ಮುರಿದು ಹೋಗಿರೋ ಹೃದಯನ ದೇವರು ತಳ್ಳಿಹಾಕಲ್ಲ’ ಅನ್ನೋ ಮಾತುಗಳನ್ನ ಓದಿದಾಗ ದೇವರು ನಿಜವಾಗ್ಲೂ ನನ್ನನ್ನ ಪ್ರೀತಿಸ್ತಾನೆ ಅನ್ನೋ ನಂಬಿಕೆ ಜಾಸ್ತಿ ಆಗುತ್ತೆ.

ಹೀಗೆ ಬೈಬಲಲ್ಲಿರೋ ಮಾತುಗಳಿಗೆ ಮತ್ತು ದೇವರು ನನಗೋಸ್ಕರ ಇಲ್ಲಿ ತನಕ ಏನೆಲ್ಲಾ ಮಾಡಿದ್ದಾನೋ ಅದಕ್ಕೆ ಗಮನ ಕೊಡೋದ್ರಿಂದ ಮುಂದೆ ಎಲ್ಲ ಸರಿ ಹೋಗುತ್ತೆ ಅನ್ನೋ ನಿರೀಕ್ಷೆ ಜಾಸ್ತಿ ಆಗಿದೆ. ಬೈಬಲಲ್ಲಿ ದೇವರು ಕೊಟ್ಟಿರೋ ಮಾತುಗಳು ನಿಜವಾಗ್ಲೂ ನಡಿಯುತ್ತೆ ಅನ್ನೋದನ್ನ ನೆನಸಿಕೊಂಡಾಗ ಜೀವನದಲ್ಲಿ ಮುಂದೆ ಸಾಗೋಕೆ ಸಹಾಯ ಆಗ್ತಿದೆ.”

ಹೆಚ್ಚಿನ ಸಹಾಯಕ್ಕಾಗಿ:

ಕಾವಲಿನಬುರುಜು (ಸಾರ್ವಜನಿಕ)19.02 ಪುಟ 12-13 ಪತ್ರಿಕೆಯ “ಜೀವನದಲ್ಲಿ ಜಿಗುಪ್ಸೆ ಬಂದಾಗ” ಅನ್ನೋ ಲೇಖನವನ್ನ jw.orgನಲ್ಲಿ ಓದಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ