18 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನೀವು ಈಜಿಪ್ಟಿಗೆ ಹೋದ್ರೆ ನಾನು ಯೆರೂಸಲೇಮಿನ ಜನ್ರ ಮೇಲೆ ನನ್ನ ಕೋಪಾನ ಸುರಿದ ಹಾಗೆ+ ನಿಮ್ಮ ಮೇಲೂ ಸುರಿತೀನಿ. ನಿಮ್ಮ ಪಾಡನ್ನ ನೋಡಿದವರ ಎದೆ ಡವಡವ ಅನ್ನುತ್ತೆ. ಜನ ನಿಮಗೆ ಶಾಪ ಹಾಕ್ತಾರೆ, ಗೇಲಿ ಮಾಡ್ತಾರೆ, ಅವಮಾನ ಮಾಡ್ತಾರೆ.+ ನೀವು ಯಾವತ್ತೂ ಈ ದೇಶ ನೋಡಲ್ಲ.’