61 ವಿಶ್ವದ ರಾಜನಾದ ಯೆಹೋವ ನನಗೆ ತನ್ನ ಪವಿತ್ರ ಶಕ್ತಿಯನ್ನ ಕೊಟ್ಟಿದ್ದಾನೆ,+
ಸೌಮ್ಯ ಸ್ವಭಾವದವರಿಗೆ ಸಿಹಿ ಸುದ್ದಿಯನ್ನ ಪ್ರಕಟಿಸೋಕೆ ಯೆಹೋವ ನನ್ನನ್ನ ಅಭಿಷೇಕಿಸಿದ್ದಾನೆ.+
ಮುರಿದ ಹೃದಯಗಳನ್ನ ಕಟ್ಟೋಕೆ,
ಬಂದಿವಾಸದಲ್ಲಿ ಇರುವವರಿಗೆ ಬಿಡುಗಡೆಯನ್ನ ಘೋಷಿಸೋಕೆ,
ಕೈದಿಗಳ ಕಣ್ಣುಗಳನ್ನ ತೆರೆಯಲಾಗುತ್ತೆ ಅಂತ ಹೇಳೋಕೆ ಆತನು ನನ್ನನ್ನ ಕಳಿಸಿದ್ದಾನೆ.+