ಹೋಶೇಯ
12 “ಎಫ್ರಾಯೀಮ್ ಪ್ರಯೋಜನಕ್ಕೆ ಬಾರದ ವಿಷ್ಯಗಳಲ್ಲಿ* ಭರವಸೆ ಇಟ್ಟಿದ್ದಾನೆ.
ಅವನು ಇಡೀ ದಿನ ಪೂರ್ವದ ಗಾಳಿ ಹಿಂದೆ ಓಡ್ತಿದ್ದಾನೆ.
ಅವನು ಹೆಚ್ಚೆಚ್ಚು ಸುಳ್ಳು ಹೇಳ್ತಿದ್ದಾನೆ ಮತ್ತು ಹಿಂಸಾಚಾರ ನಡೆಸ್ತಿದ್ದಾನೆ.
ಅವನು ಅಶ್ಶೂರದ ಜೊತೆ ಒಪ್ಪಂದ ಮಾಡ್ಕೊಳ್ತಾನೆ,+ ಈಜಿಪ್ಟಿಗೆ ಎಣ್ಣೆ ತಗೊಂಡು ಹೋಗ್ತಾನೆ.+
2 ಯೆಹೋವ ಯೆಹೂದದ ವಿರುದ್ಧ ಮೊಕದ್ದಮೆ ಹೂಡಿದ್ದಾನೆ,+
ಆತನು ಯಾಕೋಬನ ಕೆಲಸಗಳಿಗೆ ತಕ್ಕಂತೆ ಅವನಿಗೆ ಶಿಕ್ಷೆ ಕೊಡ್ತಾನೆ,
ಅವನ ನಡತೆಯ ಪ್ರತಿಫಲವನ್ನ ಅವನೇ ಉಣ್ಣೋ ತರ ಮಾಡ್ತಾನೆ.+
4 ಅವನು ದೇವದೂತನ ಜೊತೆ ಹೋರಾಡ್ತಾ ಗೆದ್ದ.
ಆಶೀರ್ವಾದ ಪಡಿಯೋಕೆ ಅಳ್ತಾ ಬೇಡಿದ.”+
ದೇವರು ಅವನನ್ನ ಬೆತೆಲಲ್ಲಿ ಕಂಡುಕೊಂಡನು, ಅಲ್ಲಿ ಆತನು ನಮ್ಮ ಜೊತೆ ಮಾತಾಡಿದನು,+
5 ಯೆಹೋವ ಸೈನ್ಯಗಳ ದೇವರು,+
ಆತನ ಹೆಸ್ರು ಯೆಹೋವ ಅಂತ ಜನರೆಲ್ಲ ನೆನಪಲ್ಲಿಡಬೇಕು.+
6 “ಹಾಗಾಗಿ ನಿಮ್ಮ ದೇವರ ಹತ್ರ ವಾಪಸ್ ಬನ್ನಿ,+
ಯಾವಾಗ್ಲೂ ಶಾಶ್ವತ ಪ್ರೀತಿ ತೋರಿಸಿ, ನ್ಯಾಯವಾದದ್ದನ್ನೇ ಮಾಡಿ,+
ಸದಾ ನಿಮ್ಮ ದೇವರ ಮೇಲೆ ಭರವಸೆ ಇಡಿ.
7 ಆದ್ರೆ ವ್ಯಾಪಾರಿಯ ಕೈಯಲ್ಲಿ ಮೋಸದ ತಕ್ಕಡಿ ಇದೆ,
ಮೋಸ ಮಾಡೋದಂದ್ರೆ ಅವನಿಗೆ ಇಷ್ಟ.+
8 ‘ನಾನು ಶ್ರೀಮಂತನಾಗಿದ್ದೀನಿ,+ ನನ್ನ ಹತ್ರ ಸಿರಿಸಂಪತ್ತಿದೆ.+
ನಾನು ಇದನ್ನೆಲ್ಲ ಕಷ್ಟಪಟ್ಟು ಸಂಪಾದಿಸಿದ್ದೀನಿ, ಯಾರೂ ನನ್ನಲ್ಲಿ ತಪ್ಪನ್ನಾಗಲಿ ಪಾಪವನ್ನಾಗಲಿ ಕಂಡುಹಿಡಿಯೋಕೆ ಸಾಧ್ಯ ಇಲ್ಲ’
ಅಂತ ಎಫ್ರಾಯೀಮ್ ಹೇಳ್ತಾ ಇರ್ತಾನೆ.
9 ಆದ್ರೆ ನೀವು ಈಜಿಪ್ಟ್ ದೇಶದಲ್ಲಿದ್ದ ಕಾಲದಿಂದ ಯೆಹೋವನಾದ ನಾನೇ ನಿಮ್ಮ ದೇವರಾಗಿದ್ದೀನಿ.+
ಹಬ್ಬದ ದಿನಗಳ ತರಾನೇ* ನೀನು ಮತ್ತೆ ಡೇರೆಗಳಲ್ಲಿ ವಾಸಿಸೋ ತರ ನಾನು ಮಾಡ್ತೀನಿ.
10 ನಾನು ಪ್ರವಾದಿಗಳ ಜೊತೆ ಮಾತಾಡಿದೆ,+
ಅನೇಕಾನೇಕ ದರ್ಶನಗಳನ್ನ ಅವ್ರಿಗೆ ತೋರಿಸಿದೆ,
ಪ್ರವಾದಿಗಳ ಮೂಲಕ ನೀತಿ ಕಥೆಗಳನ್ನ ಹೇಳಿದೆ.