ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 34
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ದೀನಳ ಅತ್ಯಾಚಾರ (1-12)

      • ಯಾಕೋಬನ ಗಂಡುಮಕ್ಕಳ ಕುತಂತ್ರ (13-31)

ಆದಿಕಾಂಡ 34:1

ಪಾದಟಿಪ್ಪಣಿ

  • *

    ಅಥವಾ “ಯುವತಿಯರನ್ನ ನೋಡೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 30:19, 21; 46:15
  • +ಆದಿ 26:34, 35; 27:46

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2001, ಪು. 20

    2/1/1997, ಪು. 30

ಆದಿಕಾಂಡ 34:2

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:1; 1ಪೂರ್ವ 1:13-15

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 116-117

ಆದಿಕಾಂಡ 34:4

ಮಾರ್ಜಿನಲ್ ರೆಫರೆನ್ಸ್

  • +ಆದಿ 33:18, 19

ಆದಿಕಾಂಡ 34:7

ಮಾರ್ಜಿನಲ್ ರೆಫರೆನ್ಸ್

  • +2ಸಮು 13:22
  • +ಇಬ್ರಿ 13:4

ಆದಿಕಾಂಡ 34:9

ಮಾರ್ಜಿನಲ್ ರೆಫರೆನ್ಸ್

  • +ಆದಿ 24:2, 3

ಆದಿಕಾಂಡ 34:12

ಮಾರ್ಜಿನಲ್ ರೆಫರೆನ್ಸ್

  • +ಆದಿ 24:53; ಹೋಶೇ 3:2

ಆದಿಕಾಂಡ 34:14

ಮಾರ್ಜಿನಲ್ ರೆಫರೆನ್ಸ್

  • +ಆದಿ 17:9, 12

ಆದಿಕಾಂಡ 34:15

ಮಾರ್ಜಿನಲ್ ರೆಫರೆನ್ಸ್

  • +ಆದಿ 17:10

ಆದಿಕಾಂಡ 34:18

ಮಾರ್ಜಿನಲ್ ರೆಫರೆನ್ಸ್

  • +ಆದಿ 33:18, 19
  • +ಆದಿ 34:2

ಆದಿಕಾಂಡ 34:19

ಮಾರ್ಜಿನಲ್ ರೆಫರೆನ್ಸ್

  • +ಆದಿ 34:15

ಆದಿಕಾಂಡ 34:20

ಮಾರ್ಜಿನಲ್ ರೆಫರೆನ್ಸ್

  • +ಜೆಕ 8:16

ಆದಿಕಾಂಡ 34:21

ಮಾರ್ಜಿನಲ್ ರೆಫರೆನ್ಸ್

  • +ಆದಿ 34:8, 9

ಆದಿಕಾಂಡ 34:22

ಮಾರ್ಜಿನಲ್ ರೆಫರೆನ್ಸ್

  • +ಆದಿ 17:11

ಆದಿಕಾಂಡ 34:25

ಮಾರ್ಜಿನಲ್ ರೆಫರೆನ್ಸ್

  • +ಆದಿ 46:15
  • +ಆದಿ 49:5-7

ಆದಿಕಾಂಡ 34:27

ಮಾರ್ಜಿನಲ್ ರೆಫರೆನ್ಸ್

  • +ಆದಿ 34:2

ಆದಿಕಾಂಡ 34:30

ಮಾರ್ಜಿನಲ್ ರೆಫರೆನ್ಸ್

  • +ಆದಿ 49:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2004, ಪು. 28

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 34:1ಆದಿ 30:19, 21; 46:15
ಆದಿ. 34:1ಆದಿ 26:34, 35; 27:46
ಆದಿ. 34:2ಧರ್ಮೋ 7:1; 1ಪೂರ್ವ 1:13-15
ಆದಿ. 34:4ಆದಿ 33:18, 19
ಆದಿ. 34:72ಸಮು 13:22
ಆದಿ. 34:7ಇಬ್ರಿ 13:4
ಆದಿ. 34:9ಆದಿ 24:2, 3
ಆದಿ. 34:12ಆದಿ 24:53; ಹೋಶೇ 3:2
ಆದಿ. 34:14ಆದಿ 17:9, 12
ಆದಿ. 34:15ಆದಿ 17:10
ಆದಿ. 34:18ಆದಿ 33:18, 19
ಆದಿ. 34:18ಆದಿ 34:2
ಆದಿ. 34:19ಆದಿ 34:15
ಆದಿ. 34:20ಜೆಕ 8:16
ಆದಿ. 34:21ಆದಿ 34:8, 9
ಆದಿ. 34:22ಆದಿ 17:11
ಆದಿ. 34:25ಆದಿ 46:15
ಆದಿ. 34:25ಆದಿ 49:5-7
ಆದಿ. 34:27ಆದಿ 34:2
ಆದಿ. 34:30ಆದಿ 49:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 34:1-31

ಆದಿಕಾಂಡ

34 ಯಾಕೋಬನಿಗೆ ಲೇಯಳಿಂದ ಹುಟ್ಟಿದ ದೀನ+ ಆ ದೇಶದ ಯುವತಿರ ಜೊತೆ ಸಮಯ ಕಳೆಯೋಕೆ* ಹೋಗ್ತಿದ್ದಳು.+ 2 ಆ ದೇಶದ ಪ್ರಧಾನರಲ್ಲಿ ಹಿವ್ವಿಯನಾದ+ ಹಮೋರನೂ ಒಬ್ಬ. ಅವನ ಮಗ ಶೆಕೆಮನ ಕಣ್ಣು ಅವಳ ಮೇಲೆ ಬಿತ್ತು. ಒಂದಿನ ಅವನು ಅವಳನ್ನ ತಗೊಂಡು ಹೋಗಿ ಅತ್ಯಾಚಾರ ಮಾಡಿದ. 3 ಆಮೇಲೆ ದೀನಳನ್ನ ತುಂಬ ಪ್ರೀತಿಸೋಕೆ ಶುರು ಮಾಡಿದ. ಅವನ ಮನಸ್ಸೆಲ್ಲಾ ಅವಳೇ ಇದ್ದಳು. ಯಾಕೋಬನ ಮಗಳಾದ ದೀನಳ ಮನಸ್ಸು ಗೆಲ್ಲೋಕೆ ಅವನು ಪ್ರೀತಿಯ ಮಾತುಗಳನ್ನಾಡಿದ. 4 ಕೊನೆಗೆ ಶೆಕೆಮ ತನ್ನ ಅಪ್ಪ ಹಮೋರನಿಗೆ+ “ನೀನು ಹೇಗಾದ್ರೂ ಈ ಹುಡುಗಿಯನ್ನ ನನಗೆ ಮದುವೆ ಮಾಡಿಸು” ಅಂದ.

5 ಶೆಕೆಮ ದೀನಳನ್ನ ಕೆಡಿಸಿದ್ದಾನೆ ಅಂತ ಅವಳ ಅಪ್ಪ ಯಾಕೋಬನಿಗೆ ಗೊತ್ತಾಯ್ತು. ಆಗ ಅವನ ಗಂಡುಮಕ್ಕಳು ಬಯಲಲ್ಲಿ ಕುರಿ ಮೇಯಿಸ್ತಿದ್ರು. ಹಾಗಾಗಿ ಅವರು ಬರೋ ತನಕ ಯಾಕೋಬ ಸುಮ್ಮನಿದ್ದ. 6 ಆಮೇಲೆ ಶೆಕೆಮನ ಅಪ್ಪ ಹಮೋರ ಯಾಕೋಬನ ಹತ್ರ ಮಾತಾಡೋಕೆ ಬಂದ. 7 ಯಾಕೋಬನ ಗಂಡುಮಕ್ಕಳಿಗೆ ತಮ್ಮ ತಂಗಿಗೆ ಏನಾಯ್ತು ಅಂತ ಗೊತ್ತಾದ ತಕ್ಷಣ ಅವರು ಬಯಲಿಂದ ಹೊರಟು ಬಂದ್ರು. ಶೆಕೆಮ ಯಾಕೋಬನ ಮಗಳನ್ನ ಕೆಡಿಸಿ+ ಕೆಟ್ಟ ಕೆಲಸ ಮಾಡಿದ್ದ,+ ಹೀಗೆ ಇಸ್ರಾಯೇಲ್ಯರನ್ನ ಅವಮಾನ ಮಾಡಿದ್ದ. ಹಾಗಾಗಿ ಯಾಕೋಬನ ಗಂಡುಮಕ್ಕಳು ನೊಂದುಕೊಂಡ್ರು, ಅವರಿಗೆ ತುಂಬ ಕೋಪ ಬಂತು.

8 ಹಮೋರ ಅವರಿಗೆ “ನನ್ನ ಮಗ ಶೆಕೆಮನಿಗೆ ನಿಮ್ಮ ಹುಡುಗಿ ಅಂದ್ರೆ ಪ್ರಾಣ. ದಯವಿಟ್ಟು ಅವಳನ್ನ ಅವನಿಗೆ ಮದುವೆ ಮಾಡ್ಕೊಡಿ. 9 ನಿಮ್ಮ ಹೆಣ್ಣುಮಕ್ಕಳನ್ನ ನಮಗೆ ಕೊಡ್ತಾ, ನಮ್ಮ ಹೆಣ್ಣುಮಕ್ಕಳನ್ನ ನೀವು ತಗೊಳ್ತಾ ಬೀಗರಾಗಿರೋಣ.+ 10 ಈ ದೇಶವೆಲ್ಲ ನಿಮ್ಮ ಮುಂದಿದೆ. ನೀವು ನಮ್ಮ ಜೊತೆಯಲ್ಲೇ ವಾಸಿಸಬಹುದು. ಇಲ್ಲಿ ವ್ಯಾಪಾರ ಮಾಡಿ ಇಲ್ಲೇ ಇರಬಹುದು” ಅಂದ. 11 ಆಮೇಲೆ ಶೆಕೆಮ ದೀನಳ ಅಪ್ಪ ಮತ್ತು ಅಣ್ಣಂದಿರಿಗೆ “ನಿಮ್ಮ ಹುಡುಗಿಯನ್ನ ನನಗೆ ಮದುವೆ ಮಾಡಿ ಕೊಡೋಕೆ ದಯವಿಟ್ಟು ಒಪ್ಕೊಳ್ಳಿ. ನೀವೇನ್‌ ಕೇಳಿದ್ರೂ ನಾನು ಕೊಡ್ತೀನಿ. 12 ಎಷ್ಟು ಬೇಕಾದ್ರೂ ವಧುದಕ್ಷಿಣೆ ಕೇಳಿ, ಏನು ಬೇಕಾದ್ರೂ ಉಡುಗೊರೆ ಕೇಳಿ,+ ಕೊಡ್ತೀನಿ. ನಿಮ್ಮ ಹುಡುಗಿಯನ್ನ ನನಗೆ ಮದುವೆ ಮಾಡಿ ಕೊಟ್ರೆ ಅಷ್ಟೇ ಸಾಕು” ಅಂದ.

13 ಶೆಕೆಮ ದೀನಳನ್ನ ಕೆಡಿಸಿದ್ರಿಂದ ಅವಳ ಅಣ್ಣಂದಿರು ಶೆಕೆಮ, ಅವನ ತಂದೆ ಹಮೋರನ ವಿರುದ್ಧ ಕುತಂತ್ರ ಮಾಡಿದ್ರು. 14 ಹಾಗಾಗಿ ಅವರು “ಸುನ್ನತಿ ಆಗಿಲ್ಲದವನಿಗೆ ನಮ್ಮ ತಂಗಿಯನ್ನ ಕೊಡೋಕೆ ಆಗೋದಿಲ್ಲ.+ ಕೊಟ್ರೆ ಅದು ನಮಗೆ ಅವಮಾನ. 15 ನಿಮ್ಮಲ್ಲಿರೋ ಗಂಡಸರೆಲ್ಲ ನಮ್ಮ ಹಾಗೆ ಸುನ್ನತಿ ಮಾಡಿಸ್ಕೊಳ್ಳಬೇಕು.+ ಇದಕ್ಕೆ ಒಪ್ಪಿದ್ರೆ ಮಾತ್ರ ನಮ್ಮ ತಂಗಿಯನ್ನ ಕೊಡ್ತೀವಿ. 16 ನಮ್ಮ ಹೆಣ್ಣುಮಕ್ಕಳನ್ನ ನಿಮಗೆ ಕೊಡ್ತೀವಿ, ನಿಮ್ಮ ಹೆಣ್ಣುಮಕ್ಕಳನ್ನ ನಾವು ತಗೊಳ್ತೀವಿ. ಅಲ್ಲದೆ ನಿಮ್ಮ ಜೊತೆ ವಾಸಿಸ್ತಾ ಒಂದೇ ಕುಲವಾಗಿ ಇರ್ತಿವಿ. 17 ಆದ್ರೆ ನೀವು ನಮ್ಮ ಮಾತಿಗೆ ಒಪ್ಪದೆ ಸುನ್ನತಿ ಮಾಡ್ಕೊಳ್ಳದಿದ್ರೆ ನಾವು ನಮ್ಮ ಹುಡುಗಿಯನ್ನ ಕರ್ಕೊಂಡು ಹೊರಟು ಹೋಗ್ತೀವಿ” ಅಂದ್ರು.

18 ಅವರು ಹೇಳಿದ್ದು ಹಮೋರನಿಗೂ+ ಅವನ ಮಗ ಶೆಕೆಮನಿಗೂ+ ಸರಿ ಅಂತ ಅನಿಸ್ತು. 19 ಅವರು ಹೇಳಿದ ತರ ಮಾಡೋಕೆ ಆ ಯುವಕ ತಡಮಾಡಲಿಲ್ಲ.+ ಯಾಕಂದ್ರೆ ಅವನು ಯಾಕೋಬನ ಮಗಳನ್ನ ತುಂಬ ಇಷ್ಟಪಟ್ಟಿದ್ದ. ಅಷ್ಟೇ ಅಲ್ಲ ಅವನ ತಂದೆ ಮನೆಯಲ್ಲಿ ಅವನಿಗೆ ಎಲ್ಲರಿಗಿಂತ ಹೆಚ್ಚಾಗಿ ಗೌರವ ಇತ್ತು.

20 ಹಮೋರ ಮತ್ತು ಅವನ ಮಗ ಶೆಕೆಮ ಪಟ್ಟಣದ ಬಾಗಿಲಿಗೆ ಹೋಗಿ ಪಟ್ಟಣದವರಿಗೆ+ 21 “ಈ ಜನ್ರಿಗೆ ನಮ್ಮ ಜೊತೆ ಶಾಂತಿಯಿಂದ ಇರೋಕೆ ಇಷ್ಟ ಇದೆ. ಅವರು ನಮ್ಮ ದೇಶದಲ್ಲೇ ವಾಸಿಸ್ತಾ ವ್ಯಾಪಾರ ಮಾಡಲಿ. ಹೇಗೂ ಈ ದೇಶ ತುಂಬ ದೊಡ್ಡದಾಗಿದೆಯಲ್ಲಾ. ಅವರು ಇಲ್ಲೇ ಇದ್ರೆ ನಾವು ಅವರ ಹೆಣ್ಣುಮಕ್ಕಳನ್ನ ಮದುವೆ ಮಾಡ್ಕೊಳ್ಳಬಹುದು. ನಮ್ಮ ಹೆಣ್ಣುಮಕ್ಕಳನ್ನ ಅವರಿಗೆ ಕೊಡಬಹುದು.+ 22 ಆದ್ರೆ ನಮ್ಮಲ್ಲಿರೋ ಎಲ್ಲ ಗಂಡಸರು ಅವರ ಹಾಗೆ ಸುನ್ನತಿ ಮಾಡ್ಕೊಳ್ಳಬೇಕಂತ ಅವರು ಹೇಳ್ತಿದ್ದಾರೆ.+ ಆಗ ಮಾತ್ರ ಅವರು ನಮ್ಮ ಜೊತೆ ವಾಸಿಸ್ತಾ ಒಂದೇ ಕುಲ ಆಗಿರೋಕೆ ಒಪ್ತಾರೆ. 23 ಆಗ ಅವರ ಎಲ್ಲ ಆಸ್ತಿಪಾಸ್ತಿ ಸಂಪತ್ತು ಪ್ರಾಣಿಗಳು ನಮ್ಮದಾಗುತ್ತೆ. ಹಾಗಾಗಿ ಅವರ ಮಾತಿಗೆ ಒಪ್ಕೊಳ್ಳೋಣ. ಅವರು ನಮ್ಮ ಜೊತೆ ವಾಸ ಮಾಡಲಿ” ಅಂದ್ರು. 24 ಆ ಪಟ್ಟಣದವರೆಲ್ಲ ಅವರ ಮಾತಿಗೆ ಒಪ್ಪಿದ್ರು. ಅಲ್ಲಿನ ಗಂಡಸರೆಲ್ಲ ಸುನ್ನತಿ ಮಾಡ್ಕೊಂಡ್ರು.

25 ಆದ್ರೆ ಮೂರನೇ ದಿನ ಗಂಡಸರೆಲ್ಲ ಇನ್ನೂ ತುಂಬ ನೋವಲ್ಲಿದ್ದಾಗ ಯಾಕೋಬನ ಗಂಡುಮಕ್ಕಳಲ್ಲಿ ಇಬ್ರು ಅಂದ್ರೆ ದೀನಳ ಅಣ್ಣಂದಿರಾದ+ ಸಿಮೆಯೋನ ಮತ್ತು ಲೇವಿ ಕತ್ತಿ ಹಿಡ್ಕೊಂಡು ಪಟ್ಟಣದೊಳಗೆ ಹೋದ್ರು. ಅವರ ಮೇಲೆ ಯಾರಿಗೂ ಅನುಮಾನ ಬರಲಿಲ್ಲ. ಅವರು ಅಲ್ಲಿದ್ದ ಎಲ್ಲ ಗಂಡಸರನ್ನ ಕೊಂದು ಹಾಕಿದ್ರು.+ 26 ಅವರು ಹಮೋರನನ್ನ, ಅವನ ಮಗ ಶೆಕೆಮನನ್ನ ಕತ್ತಿಯಿಂದ ಕೊಂದು ದೀನಳನ್ನ ಶೆಕೆಮನ ಮನೆಯಿಂದ ಕರ್ಕೊಂಡು ಹೋದ್ರು. 27 ಆ ಗಂಡಸರೆಲ್ಲ ಸತ್ತ ಮೇಲೆ ಯಾಕೋಬನ ಬೇರೆ ಗಂಡುಮಕ್ಕಳು ಅಲ್ಲಿಗೆ ಬಂದು ಶೆಕೆಮ ತಮ್ಮ ತಂಗಿಯನ್ನ ಕೆಡಿಸಿದ್ದಕ್ಕಾಗಿ+ ಆ ಪಟ್ಟಣ ಲೂಟಿ ಮಾಡಿದ್ರು. 28 ಅಲ್ಲಿದ್ದ ಆಡು-ಕುರಿಗಳನ್ನ ಪ್ರಾಣಿಗಳನ್ನ ಕತ್ತೆಗಳನ್ನ ತಗೊಂಡು ಹೋದ್ರು. ಪಟ್ಟಣದಲ್ಲೂ ಬಯಲಲ್ಲೂ ಇದ್ದ ಎಲ್ಲವನ್ನ ಸೂರೆ ಮಾಡಿದ್ರು. 29 ಅಲ್ಲದೆ ಅವರ ಎಲ್ಲ ಸೊತ್ತನ್ನ ತಗೊಂಡ್ರು. ಅವರ ಹೆಂಡತಿಯರನ್ನ, ಎಲ್ಲ ಚಿಕ್ಕ ಮಕ್ಕಳನ್ನ ಹಿಡ್ಕೊಂಡು ಹೋದ್ರು. ಅವರ ಮನೆಯಲ್ಲಿದ್ದ ಎಲ್ಲವನ್ನ ದೋಚ್ಕೊಂಡ್ರು.

30 ಆಗ ಯಾಕೋಬ ಸಿಮೆಯೋನ ಮತ್ತು ಲೇವಿಗೆ+ “ನೀವು ನನ್ನನ್ನ ಎಷ್ಟು ದೊಡ್ಡ ಆಪತ್ತಿಗೆ ಸಿಕ್ಕಿಸಿದ್ದೀರ. ನೀವು ಮಾಡಿದ ಕೆಲಸದಿಂದ ಈ ದೇಶದ ನಿವಾಸಿಗಳಾದ ಕಾನಾನ್ಯರು, ಪೆರಿಜೀಯರು ನನ್ನನ್ನ ದ್ವೇಷಿಸ್ತಾರೆ. ಖಂಡಿತ ಅವರೆಲ್ಲ ಒಟ್ಟಾಗಿ ಬಂದು ನನ್ನ ಮೇಲೆ ದಾಳಿ ಮಾಡ್ತಾರೆ. ನಾವಿರೋದೇ ಸ್ವಲ್ಪ ಜನ. ನಮ್ಮಿಂದೇನೂ ಮಾಡೋಕೆ ಆಗಲ್ಲ. ನಾನೂ ನನ್ನ ಮನೆಯವರೆಲ್ಲರೂ ನಾಶ ಆಗ್ತೀವಿ” ಅಂದ. 31 ಆದ್ರೆ ಅವರು “ನಮ್ಮ ತಂಗಿಯನ್ನ ಅವರು ವೇಶ್ಯೆ ತರ ನಡೆಸ್ಕೊಂಡ್ರೆ ನಾವು ಕೈಕಟ್ಕೊಂಡು ಸುಮ್ಮನಿರಬೇಕಾ?” ಅಂದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ