ಎಷ್ಟೊಂದು ಆರೋಗ್ಯವಂತರು ನಾವು?
ಒಂದು ಸಾವಿರ ಮಿಲಿಯ ಡಾಲರುಗಳು ಪ್ರತಿ ದಿನ! ಅಷ್ಟೊಂದು ಹಣವನ್ನು ಅಮೆರಿಕದ ಜನರು ಆರೋಗ್ಯದ ಜಾಗ್ರತೆ ತೆಗೆದುಕೊಳ್ಳಲು ಖರ್ಚುಮಾಡುತ್ತಾರೆ. ಜರ್ಮನ್ ಫೆಡರಲ್ ರಿಪಬ್ಲಿಕ್‌ನ ನಿವಾಸಿಗಳು ಪ್ರತಿವರ್ಷ ತಮ್ಮ ರಾಷ್ಟ್ರೀಯ ಆದಾಯದ ಐದನೆಯ ಒಂದು ಭಾಗವನ್ನು ಇಲ್ಲವೇ 340 ಸಾವಿರ ಮಿಲಿಯ ಜರ್ಮನ್ ಮಾರ್ಕ್ಸ್‌ಗಳನ್ನು ಅವರ ಆರೋಗ್ಯದ ಅವಶ್ಯಕತೆಗಳಿಗಾಗಿ ವ್ಯಯಿಸುತ್ತದೆ. ಇನ್ನಿತರ ಕೈಗಾರಿಕಾ ಯಾ ಪ್ರಗತಿ ಹೊಂದಿದ ಜನಾಂಗಗಳಲ್ಲಿ ಪರಿಸ್ಥಿತಿಯು ಅಂತೆಯೇ ಇದೆ.
ಈ ದೇಶಗಳ ಸಾಮಾನ್ಯ ನಾಗರಿಕನೂ ಆರೋಗ್ಯದ ಪ್ರಜ್ಞೆಯುಳ್ಳವನಾಗುತ್ತಾ ಬರುತ್ತಿದ್ದಾನೆ ಎಂಬುದರಲ್ಲಿ ಸಂದೇಹವಿಲ್ಲ. ಅತಿ ಹೆಚ್ಚು ಮಾರಾಟವಾಗುವ ಪಟ್ಟಿಯಲ್ಲಿ ಪಥ್ಯ ಮತ್ತು ವ್ಯಾಯಾಮದ ಕುರಿತಾದ ಪುಸ್ತಕಗಳು ಮತ್ತು ವಿಡಿಯೋಗಳು ಕ್ರಮಾನುಗತವಾಗಿ ಮೊದಲ ಬಿಂದುಗಳಲ್ಲಿರುತ್ತವೆ. ಆರೋಗ್ಯಕರ ಆಹಾರಗಳು, ವಿಟಾಮಿನುಗಳು, ಅಂಗಸಾಧನೆಯ ಉಡುಪುಗಳು ಮತ್ತು ವ್ಯಾಯಾಮದ ಯಂತ್ರಸಲಕರಣೆಗಳು ಈಗ ಕೋಟಿಗಟ್ಟಲೆ ರೂಪಾಯಿಯ ವ್ಯಾಪಾರವಾಗಿದೆ. ಮತ್ತು ಈಗ ಯಶಸ್ವೀ ವ್ಯಾಪಾರಸ್ಥನ ತೋರಿಕೆಯು ಸಿಗಾರ್ ಎಳೆಯುವ ಒಬ್ಬ ಗಣ್ಯವ್ಯಕ್ತಿಯಲ್ಲ ಬದಲು ಒಳ್ಳೆಯ ಓರಣದ, ಶುಭ್ರ-ತೊಳೆದಿರುವ, ಆಕೃತಿ-ಔಚಿತ್ಯತೆಯೆಡೆಗೆ ಗಮನ ಕೊಡುವ ಒಬ್ಬ ವ್ಯಕ್ತಿಯಾಗಿರುತ್ತಾನೆ.
ಆರೋಗ್ಯ ಮತ್ತು ಯೋಗ್ಯ ದೇಹದಾರ್ಢ್ಯತೆಗೆ ಅಷ್ಟೊಂದು ಗಮನ ಮತ್ತು ಆಸಕ್ತಿ ಕೊಟ್ಟರೂ, ಗತಕಾಲದ ಸಂತತಿಗಳ ಜನರಿಗಿಂತ ನಾವು ನಿಜವಾಗಿಯೂ ಹೆಚ್ಚು ಆರೋಗ್ಯವಂತರೋ? ಅತಿ ಹೆಚ್ಚು ಮೊತ್ತವನ್ನು ವೈದ್ಯಕೀಯ ಬಿಲ್ಲುಗಳನ್ನು ತೆರಲು ಮತ್ತು ಆರೋಗ್ಯದ ಜಾಗ್ರತೆ ವಹಿಸಲು ಖರ್ಚುಮಾಡಿರುವುದಾದರೂ, ನಮ್ಮೆಲ್ಲರಿಗೂ ಒಳ್ಳೆಯ ಆರೋಗ್ಯವಂತರನ್ನಾಗಿ ಮಾಡಿದೆಯೋ? ನಿಜವಾಗಿಯೂ ನಾವೆಷ್ಟು ಆರೋಗ್ಯವಂತರಾಗಿದ್ದೇವೆ?
ಇಂದಿನ ಚಿತ್ರಣ
ಲೋಕದ ಶ್ರೀಮಂತ ಹಾಗೂ ಬಡ ದೇಶಗಳ ವರದಿಗಳು ತೋರಿಸುವುದೇನೆಂದರೆ ಇಂದಿನ ಜನರ ಆರೋಗ್ಯದ ಚಿತ್ರಣವು ನಾವು ನಿರೀಕ್ಷಿಸಿದ್ದಕ್ಕಿಂತ ಬಹಳಷ್ಟು ವ್ಯತಿರಿಕ್ತವಾಗಿದೆ. ಲೋಕದಾದ್ಯಂತದ ಭಿನ್ನವಾದ ಆರೋಗ್ಯದ ಸ್ಥಿತಿಗತಿಯ ಕುರಿತು ಮಾತಾಡುತ್ತಾ ವರ್ಲ್ಡ್‌ವಾಚ್ ಇನ್ ಸ್ಟಿಟ್ಯೂಟ್‌ನಿಂದ ತಯಾರಿಸಲ್ಪಟ್ಟ ಒಂದು ವರದಿಯು ಹೇಳುವುದು: “ಅವರ ಆರೋಗ್ಯದ ಜಾಗ್ರತೆಯ ಅವಶ್ಯಕತೆಗಳಲ್ಲಿ ಬಹಳಷ್ಟು ಭಿನ್ನತೆ ಇರುವುದಾದರೂ, ಶ್ರೀಮಂತರು ಮತ್ತು ಬಡವರು ಒಂದು ಸಂಗತಿಯಲ್ಲಿ ಸರ್ವಸಾಮಾನ್ಯರಾಗಿದ್ದಾರೆ: ಇಬ್ಬರೂ ಅನಾವಶ್ಯಕವಾಗಿ ಸಾಯುತ್ತಾರೆ. ಶ್ರೀಮಂತರು ಹೃದ್ರೋಗದಿಂದ ಮತ್ತು ಕ್ಯಾನ್ಸರಿನಿಂದ, ಬಡವರು ಅತಿಭೇದಿ, ನ್ಯೂಮೋನಿಯಾ ಮತ್ತು ದಡಾರ ರೋಗಗಳಿಂದ ಸಾಯುತ್ತಾರೆ.”
ವೈದ್ಯಕೀಯ ಸಂಶೋಧನೆಯಲ್ಲಿ ಪ್ರಗತಿಯಾಗಿರುವುದಾದರೂ, ಸಮೃದ್ಧ ದೇಶಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಈಗಲೂ ಒಂದು ವ್ಯಾಧಿಯಾಗಿ ಮುಂದುವರಿಯುತ್ತದೆ. ವಾಸ್ತವದಲ್ಲಿ ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನ ಒಂದು ವರದಿ ಹೇಳುವುದು: “ಇತ್ತೀಚೆಗಿನ ವರ್ಷಗಳ ಒಟ್ಟಾದ ಪ್ರಗತಿಯ ಕುರಿತು ಆಶಾವಾದಿಯಾಗಿರಲು ಯಾವುದೇ ಕಾರಣವನ್ನು ನಾವು ಕಾಣುವುದಿಲ್ಲ. ಸಮಗ್ರವಾಗಿ ಕಾನ್ಸರ್ ಇನ್ನಷ್ಟು ಕಡಿಮೆಯಾಗಲಿದೆ ಎಂದು ಎಣಿಸಲು ಯಾವುದೇ ಕಾರಣವಿಲ್ಲ.” ದೇಹದಾರ್ಢ್ಯತೆಯ ಥಟ್ಟನೆ ಏರುವಿಕೆಯ ಕುರಿತಾಗಿ ಅಮೆರಿಕ ಸ್ವಾಸ್ಥ್ಯ ಮತ್ತು ಮಾನವ ಸೇವೆಗಳ ಖಾತೆಯ ಡಾ. ಮೈಕಲ್ ಮ್ಯಾಕ್‌ಗಿನಿಸ್, ಸನ್ನಿವೇಶವನ್ನು ಚಲೋ ರೀತಿಯಲ್ಲಿ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ: “ದೇಹದಾರ್ಢ್ಯತೆಯ ಕುರಿತಾಗಿ ಅಧಿಕಾಂಶ ಜನರಿಗೆ ತಿಳಿದದೆ. ಆದರೆ ಅವರಾಗಿ ಯಾವುದೇ ಕ್ರಿಯೆ ಕೈಗೊಂಡಿಲ್ಲ. ಅಮೆರಿಕನರು ಅವರು ಎಣಿಸುವಷ್ಟು ಚೆನ್ನಾಗಿಲ್ಲ.”
ತಕ್ಕಡಿಯ ಇನ್ನೊಂದು ಪಕ್ಕದಲ್ಲಿ “ಲೋಕದ ಜನರ ಕಾಲುಭಾಗದವರಿಗೆ ಸ್ವಚ್ಛವಾದ ಕುಡಿಯುವ ನೀರು ಮತ್ತು ಮಾನವ ಮೈಲಿಗೆಯನ್ನು ತೊಲಗಿಸುವ ಕೊರತೆ ಇದೆ,” ಎಂದು ವರ್ಲ್ಡ್‌ವಾಚ್ ವರದಿ ಹೇಳುತ್ತದೆ. “ಇದರ ಫಲಿತಾಂಶವಾಗಿ, ತೃತೀಯ ಜಗತ್ತಿನಲ್ಲಿ ಅತಿಭೇದಿಯ ರೋಗಗಳು ಜಾಡ್ಯವಾಗಿವೆ ಮತ್ತು ಲೋಕದ ಶಿಶುಮರಣಗಳಿಗೆ ಪ್ರಮುಖ ಕಾರಣವಾಗಿದೆ.” ಅತಿಭೇದಿ, ನ್ಯೂಮೋನಿಯ, ದಡಾರ, ಗಳಚರ್ಮರೋಗ, ಕ್ಷಯರೋಗ ಮತ್ತು ಇತರ ರೋಗಗಳು ಪ್ರತಿ ವರ್ಷ ಐದು ವರ್ಷದ ಕೆಳಗಿನ ಒಂದು ಕೋಟಿ ಐವತ್ತು ಲಕ್ಷ ಮಕ್ಕಳ ಜೀವಗಳ ಬಲಿ ತಕ್ಕೊಳ್ಳುತ್ತದೆ ಮತ್ತು ಇತರ ಮಿಲ್ಯಾಂತರ ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅದರೂ, ಇದನ್ನು ಸುಲಭವಾಗಿ ತಡೆಗಟ್ಟಬಹುದು ಎಂದು ತಜ್ಞರು ಹೇಳುವುದು ಒಂದು ವಿಧಿಅಣಕವಾಗಿದೆ.
ಪ್ರಗತಿಶೀಲ ಜನಾಂಗಗಳ ಮಕ್ಕಳು ಇಂತಹ ವಿಪತ್ತುಗಳಿಂದ ಪಾರುಗೊಳಿಸಲ್ಪಟ್ಟರೂ, ಇಂದಿನ ಯುವಕರ ಸಾಮಾನ್ಯ ಆರೋಗ್ಯವು ಪ್ರಗತಿಯಾಗುವುದರ ಬದಲು ಅವನತಿ ಹೊಂದುತ್ತಾ ಇದೆ ಎಂಬ ಅಪಾಯದ ಸೂಚನೆಗಳಿವೆ. ಉದಾಹರಣೆಗೆ, ಲಂಡನಿನ ದ ಗಾರ್ಡಿಯನ್ “35 ವರ್ಷಗಳ ಹಿಂದೆ ಹೆಚ್ಚು ಆರೋಗ್ಯವಂತರು” ಎಂಬ ತನ್ನ ಮುಖ ಶೀರ್ಷಿಕೆಯಲ್ಲಿ ವರದಿಸುವುದು, ಮೆಡಿಕಲ್ ರಿಸರ್ಚ್ ಕೌನ್ಸಿಲಿನ ಸಮೀಕ್ಷೆಯು “ಹೊಸ ಸಂತತಿಯಲ್ಲಿ ನಾಲ್ಕು ವರ್ಷದ ವರೆಗಿನ ಮಕ್ಕಳು ಆಸ್ಪತ್ರೆಗೆ ದಾಖಲಾಗುವುದು ಗಣನೀಯ ಪ್ರಮಾಣದಲ್ಲಿ ಏರಿದೆ, ಅಸ್ತಮಾದಿಂದ ಮೂರು ಪಟ್ಟು ಮತ್ತು ಚರ್ಮ ರೋಗಗಳಿಂದ ಆರು ಪಟ್ಟು ಏರಿದೆ.” ಅದಲ್ಲದೇ ಎಳೆಯರಲ್ಲಿ ಮಧುಮೂತ್ರವ್ಯಾಧಿ, ಬೊಜ್ಜು ಬೆಳೆಯುವಿಕೆ, ಒತ್ತರ ಮತ್ತು ಭಾವನಾತ್ಮಕ ರೋಗಗಳು ತೀವ್ರವಾಗಿ ಏರಿದ್ದು ಕಂಡು ಬಂದಿದೆ.
ಇಂದಿನ ಶಾಲಾ ಮಕ್ಕಳ ದೈಹಿಕ ಸ್ಥಿತಿ ಹೇಗಿರ ಬೇಕಿತ್ತೋ ಹಾಗೆ ಇಲ್ಲ ಎಂದು ಅಮೆರಿಕದಲ್ಲಿನ ರಾಷ್ಟ್ರ ವ್ಯಾಪೀ ಅಧ್ಯಯನಗಳಲ್ಲಿ ತಿಳಿದು ಬಂದಿದೆ. “ಇಂದು ಅಮೆರಿಕದಲ್ಲಿ ಬಹಳ ಉತ್ತಮ ರೀತಿಯಲ್ಲಿ ರಹಸ್ಯವಾಗಿಟ್ಟ ಒಂದು ಸಂಗತಿಯಾಗಿದೆ—ಯುವಕರ ದೇಹ ದಾರ್ಢ್ಯತೆಯಲ್ಲಿ ನ್ಯೂನತೆ,” ಎಂದನ್ನುತ್ತಾರೆ ಫಿಸಿಕಲ್ ಫಿಟ್ನೆಸ್ ಆ್ಯಂಡ್ ಸ್ಪೋರ್ಟ್ಸ್‌ನ ಪ್ರೆಸಿಡೆಂಟ್ ಕೌನ್ಸಿಲಿನ ಅಧ್ಯಕ್ಷ ಜೋರ್ಜ್ ಎಲೆನ್. 6ರಿಂದ 17 ವರ್ಷ ವಯಸ್ಸಿನ ಹುಡುಗರಲ್ಲಿ ಶೇಕಡಾ 40 ಮತ್ತು ಹುಡುಗಿಯರಲ್ಲಿ ಶೇಕಡಾ 70 ಒಂದಕ್ಕಿಂತ ಹೆಚ್ಚು ಗದ್ದವನ್ನು ಮೇಲೆ ಮಾಡುವ ಒಂದು ವ್ಯಾಯಾಮವನ್ನು (ಚಿನ್-ಅಪ್) ಮಾಡಶಕ್ತರಲ್ಲ ಎಂದು ಕೌನ್ಸಿಲಿನ ಇತ್ತೀಚೆಗಿನ ಅಂಕೆ ಸಂಖ್ಯೆಗಳು ತೋರಿಸುತ್ತವೆ. ಇತರ ಅಧ್ಯಯನಗಳಲ್ಲಿ ಹದಿ ವಯಸ್ಕರಲ್ಲಿ ಅತಿ ರಕ್ತದೊತ್ತಡ, ರಕ್ತದಲ್ಲನ ಕೊಲೊಸ್ಟರೊಲ್‌ನ ಮತ್ತು ದೇಹದ ಕೊಬ್ಬಿನಲ್ಲಿ ಅನಾರೋಗ್ಯಕರ ಮಟ್ಟ, ಅದಲ್ಲದೇ ಗಂಭೀರವಾದ ಭಾವನಾತ್ಮಕ ಸಮಸ್ಯೆಗಳು ಮತ್ತು ಮಾದಕೌಷಧ ಹಾಗೂ ಮದ್ಯಪಾನದ ದುರುಪಯೋಗದ ಸಮಸ್ಯೆಗಳು ಕಂಡುಬಂದಿವೆ.
ಮುಂದಕ್ಕೆ ನೋಡುವುದು
ನಮ್ಮ ಬಾಲ್ಯತನದಲ್ಲಿ ಇದ್ದ ಆರೋಗ್ಯದ ಸ್ಥಿತಿಯ ಅಧಾರದಲ್ಲಿ ಜೀವನವಿಡೀ ನಮ್ಮ ಆರೋಗ್ಯದ ಮಟ್ಟ ನಿರ್ಧರಿಸಲ್ಪಡುತ್ತದೆಂದು ನಮ್ಮಲ್ಲಿ ಹೆಚ್ಚಿನವರು ತಿಳಿದಿದ್ದೇವೆ. ಆದುದರಿಂದ ಜೋರ್ಜ್ ಎಲೆನ್ ಅವಲೋಕಿಸಿದ್ದರಲ್ಲೇನೂ ಆಶ್ಚರ್ಯವಿಲ್ಲ: “ಇಂದು ಯುವಕರು ದೇಹದಾರ್ಢ್ಯತೆಯ ಕುರಿತು ಕಲಿಯಲಿಕ್ಕಿಲ್ಲವಾದರೆ, ಪ್ರಾಯಸ್ಥರಾದ ನಂತರ ಅವರೆಂದೂ ಕಲಿಯುವುದಿಲ್ಲ ಎಂಬ ವಿಷಯದಲ್ಲಿ ನಾನು ಚಿಂತಿತನಾಗಿದ್ದೇನೆ.” ಇದೇ ಪ್ರಗತಿ ಹೊಂದುತ್ತಿರುವ ಜನಾಂಗಗಳ ಕುರಿತೂ ಸತ್ಯವಾಗಿದೆ, ಅನೇಕ ಮಕ್ಕಳಿಗೆ ಆರೋಗ್ಯವಂತ ಪ್ರಾಯಸ್ಥರಾಗುವಂತಹ ಸಂದರ್ಭವು ಕೊಡಲ್ಪಡದಿರುವಾಗ ಹಾಗಾಗುವ ಸಾಧ್ಯತೆ ಅಲ್ಲಿದೆ.
ವೇದನಾಮಯವಾಗಿರುವುದಾದರೂ, ಸಮಸ್ಯೆಗಳು ಬಗೆಹರಿಸಲು ಅಸಾಧ್ಯವಾದವುಗಳಲ್ಲ. ನೀವು ಎಲ್ಲಿಯೇ ಜೀವಿಸಿ ಕೊಂಡಿರಲಿ, ವೈಯಕ್ತಿಕವಾಗಿ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಕುರಿತು ಮಾಡಬಹುದಾದ ಕೆಲವೊಂದು ಸಂಗತಿಗಳು ಅಲ್ಲಿ ಇರುತ್ತವೆ. ಆದರೆ ಅದರಲ್ಲಿ ಹೆಚ್ಚಿನದ್ದು ನಿಮ್ಮ ಆರೋಗ್ಯ ಮತ್ತು ಸ್ವತಃ ನಿಮ್ಮ ಕುರಿತಾಗಿ ನಿಮಗಿರುವ ನೋಟದ ಮೇಲೆ ಅದು ಆತುಕೊಂಡಿದೆ. ಖಂಡಿತವಾಗಿಯೂ ಈ ಪ್ರಶ್ನೆಗಳನ್ನು ಕೇಳಿ ಕೊಳ್ಳ ಬಹುದು: ಆರೋಗ್ಯ ಅಂದರೇನು? ಉತ್ತಮ ಆರೋಗ್ಯವನ್ನು ಕಾಪಾಡಿ ಕೊಳ್ಳಲು ನೀವು ಏನು ಮಾಡ ಸಾಧ್ಯವಿದೆ? ಈ ಪ್ರಶ್ನೆಗಳನ್ನು ಮುಂದಿನ ಲೇಖನಗಳಲ್ಲಿ ಗಮನಿಸಲಾಗುವುದು. (g89 12/8)