ಹಾಳುಗೆಡುತ್ತಿರುವ ಪರಿಸರ
‘ಬಲುಬೇಗನೆ ಏನಾದರೊಂದು ಮಾಡದಿದ್ದರೆ, ಬಹು ವ್ಯಾಪಕ ಆರ್ಥಿಕ ಕುಸಿಯುವಿಕೆಯನ್ನು ಮತ್ತು ಸಾಮಾಜಿಕ ಸಂಕ್ಷೋಭೆಯನ್ನು ನಾವು ನಿರೀಕ್ಷಿಸಬಹುದು’
ಒಂದು ಪರಿಸರ ಸಂಶೋಧನಾ ತಂಡವಾಗಿರುವ, ವರ್ಲ್ಡ್‌ವಾಚ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರಾದ ಲೆಸರ್ಟ್ ಬ್ರೌನ್‌ರವರ ಒಂದು ಸಂದೇಶವಾಗಿತ್ತು. ಇದು “ಲೋಕದ-ಇಂದಿನ-ಸ್ಥಿತಿ” ವಾರ್ಷಿಕ ವರದಿಯಲ್ಲಿ ಬಂದ ಅವನ ಹೇಳಿಕೆಗಳು.
ಭೂಮಿಯ ಪರಿಸರವು ಹಾಳುಗೆಡುವುದು ಮುಂದುವರಿಯುತ್ತಾ ಇದೆ ಎಂದು ಬ್ರೌನ್ ಹೇಳಿದರು. ಓಜೋನ್ ಕುಗ್ಗುವಿಕೆ, ಅನಾವೃಷ್ಟಿ, ಕಾಡುಕಡಿಯುವಿಕೆ, ಮಣ್ಣು ಕೊರೆತ ಮತ್ತು ಜನಸಂಖ್ಯೆಯ ಏರುವಿಕೆಗಳ ಬೆದರಿಕೆಗಳನ್ನು ಹತೋಟಿಯೊಳಗೆ ತರದಿದ್ದರೆ, “ಆರ್ಥಿಕ ಕುಸಿಯುವಿಕೆಯು ಅನಿವಾರ್ಯ.” 1984ರಿಂದ ಲೋಕದ ಆಹಾರದ ಉತ್ಪಾದನೆಯು ಶೇಕಡಾ 14ರಷ್ಟು ಪ್ರತಿ ವ್ಯಕ್ತಿಗನುಸಾರ ಇಳಿಮುಖಗೊಂಡಿದೆ ಮತ್ತು 15 ವರ್ಷಗಳಲ್ಲಿ ಆಹಾರಧಾನ್ಯಗಳ ಸಂಗ್ರಹಣೆಯು ಕನಿಷ್ಟ ಮಟ್ಟಕ್ಕೆ ಇಳಿದಿದೆ.
ಬ್ರೌನ್ ಇದನ್ನೂ ಹೇಳಿದರು: “ಸಮಯವು ನಮ್ಮ ಪರವಾಗಿ ಇಲ್ಲ. . . . 1990ರ ದಶಕದಲ್ಲಿ ನಾವದನ್ನು ಮಾಡಬೇಕು. ಅದರ ನಂತರ ಅದು ತುಂಬಾ ತಡವಾದೀತು. . . . ಇನ್ನೊಂದು ಅನಾವೃಷ್ಟಿಯ ಬೆಳೆ ನಮಗೆ ಉಂಟಾದಾಗ, ನಮ್ಮನ್ನು ಅಲುಗಾಡಿಸಿ ಎಬ್ಬಿಸಿದಂತಾಗಬಹುದು. ಆಗ ರಫ್ತುಮಾಡಲು ಯಾವುದೇ ಧಾನ್ಯ ಇಲ್ಲದಿರುವುದನ್ನು ನಾವು ಕಾಣುವೆವು ಮತ್ತು ಧಾನ್ಯದ ಕ್ರಯವು ಎರಡು ಯಾ ಮೂರು ಪಟ್ಟು ಆಗುವುದು. ಆರ್ಥಿಕ ಕಂಗೆಡಿಸುವ ಅಲೆಯು ಎಣ್ಣೆಯ ಕೊರತೆಯನ್ನು ಒಂದು ಸುಲಭದ್ದಾಗಿ ತೋಚುವಂತೆ ಮಾಡುವುದು.” ಅವನು ಇದನ್ನೂ ಅವಲೋಕಿಸಿದನು: “ಆಫ್ರಿಕಾದ ಕೆಲವೆಡೆ ಅದು ಈಗಾಗಲೇ ತಡವಾಗಿರುತ್ತದೆ. ಅಲ್ಲಿ ಬೇರೆಡೆಗೆ ತಿರುಗಲು ಯಾವುದೇ ದಾರಿಯಿಲ್ಲ. . . . ಲಾಟೀನ್ ಅಮೆರಿಕವು ಪ್ರಾಯಶಃ ಅನಂತರದಲ್ಲಿದೆ.”
ಇವೆಲ್ಲಾ ಪ್ರವೃತ್ತಿಗಳು, ಬರಗಾಲ, ರೋಗ, ಯುದ್ಧ ಮತ್ತು ಮರಣ ಹಾಗೂ ಮನುಷ್ಯನು ನಮ್ಮ ದಿನಗಳಲ್ಲಿ “ಭೂಮಿಯನ್ನು ನಾಶಮಾಡುವ” ಬೈಬಲ್ ಪ್ರವಾದನೆಗಳೊಂದಿಗೆ ಸಹಮತದಲ್ಲಿದೆ. ಇದು “ಲೋಕವು ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗದಿರುವ ಮಹಾ ಸಂಕಟದಲ್ಲಿ” ಪರ್ಯಾಪ್ತಗೊಳ್ಳುವುದೆಂದು ಯೇಸು ಮುನ್ನುಡಿದನು. ಈ ವಿಷಯಗಳ ವ್ಯವಸ್ಥೆಯು ಅಂತ್ಯಗೊಳ್ಳುವುದು ಮತ್ತು ದೇವರು ರಚಿಸುವ ಒಂದು ನೂತನ ಲೋಕಕ್ಕೆ ದಾರಿ ಸುಗಮ ಮಾಡುವುದು ಎಂದೇ ಅದರ ಅರ್ಥ.—ಪ್ರಕಟನೆ 6:1-8; 11:18; ಮತ್ತಾಯ 24:21; 2 ಪೇತ್ರ 3:10-13. (g90 2/8)