ಜಗತ್ತನ್ನು ಗಮನಿಸುವುದು
ಶಸ್ತ್ರಗಳ ಮಾರಾಟ
ಅಮೆರಿಕ ಮತ್ತು ಸೋವಿಯೆಟ್ ರಶ್ಯಾವು ಪೈಪೋಟಿ ನಡಿಸುತ್ತವೆ: ಪ್ರಗತಿಶೀಲ ದೇಶಗಳಿಗೆ ಅಧಿಕ ಆಯುಧಗಳನ್ನು ಮಾರಾಟ ಮಾಡಲು ಯಾರಿಗೆ ಸಾಧ್ಯ? ಅಮೆರಿಕದ ಮಾರಾಟವು ಶೇಕಡಾ 66ರಷ್ಟು ಏರಿ, 1988ರಲ್ಲಿ 9.2 ಸಾವಿರ ಮಿಲಿಯ ಡಾಲರುಗಳಷ್ಟಾದರೆ, ಅದು ರಶ್ಯಾದ 9.9 ಸಾವಿರ ಮಿಲಿಯ ಡಾಲರುಗಳಿಗೆ ಹತ್ತಿರವಾಗಿದೆ—ರಶ್ಯಾದಲ್ಲಿ ಆ ಸಮಯ ಶೇಕಡಾ 47ರಷ್ಟು ಇಳಿಮುಖವಾಗಿದೆ. ಪ್ರಗತಿಶೀಲ ದೇಶಗಳಿಗೆ ಮಾಡುವ ಒಟ್ಟು ಮಾರಾಟದ ಮೂರನೆಯ ಎರಡು ಪಾಲುಗಳನ್ನು ಇವೆರಡೂ ಒಟ್ಟಿಗೆ ಮಾಡುತ್ತಿವೆ. ಫ್ರಾನ್ಸ್ ಮತ್ತು ಚೈನಾ ನಂತರ ಬರುತ್ತವೆ, ಅವೆರಡೂ ಒಟ್ಟಿಗೆ ಸುಮಾರು 3.1 ಸಾವಿರ ಮಿಲಿಯ ಡಾಲರುಗಳಷ್ಟರ ಆಯುಧಗಳನ್ನು ಕಳೆದ ವರ್ಷ ಪ್ರಗತಿಶೀಲ ದೇಶಗಳಿಗೆ ನೀಡಿವೆ. ಮಧ್ಯ ಪೂರ್ವವು ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮಾರಿದ ಒಟ್ಟು ಆಯುಧಗಳ ಮೂರನೆಯ ಎರಡು ಪಾಲು ಅಲ್ಲಿಗೆ ತಲಪಿದೆ. (g89 11/22)
ಬೈಬಲುಗಳಿಗೆ ಬೇಡಿಕೆ
ರಶ್ಯಾದಲ್ಲಿ ಬೈಬಲುಗಳಿಗೆ ಬೇಡಿಕೆಯು ಏರುತ್ತಾ ಇದೆ ಮತ್ತು ಕಳೆದ 18 ತಿಂಗಳ ಸಮಯಾವಧಿಯಲ್ಲಿ ಇಪ್ಪತ್ತು ಲಕ್ಷ ಪ್ರತಿಗಳನ್ನು ರವಾನಿಸಿರುವುದಾದರೂ, ಬೇಡಿಕೆಯು ತಗ್ಗುವುದಿಲ್ಲ. ಲಂಡನಿನ ಚರ್ಚ್ ಟೈಮ್ಸ್ನಲ್ಲಿ ವರದಿಸಿದಂತೆ, “1917ರ ಕ್ರಾಂತಿಯ ಸಮಯದಿಂದ ಹಿಡಿದು ಇಂದಿನ ತನಕ ಆಮದುಮಾಡಲ್ಪಟ್ಟದ್ದಕ್ಕಿಂತಲೂ, ರಶ್ಯಾವು ಹೆಚ್ಚು ಬೈಬಲುಗಳನ್ನು 1988ರಲ್ಲಿ ಆಮದು ಮಾಡಿಕೊಂಡಿದೆ.” ಹಿಂದಿನ ವರ್ಷಗಳಿಗೆ ವ್ಯತಿರಿಕ್ತವಾಗಿ, ಯುನೈಟೆಡ್ ಬೈಬಲ್ ಸೊಸೈಟಿಗಳಿಂದ ಅಧಿಕ ರವಾನಿಸುವಿಕೆಗೆ ಈಗಾಗಲೇ ಪ್ರವೇಶ ಅನುಮತಿಗಳನ್ನು ಕೊಡಲಾಗಿದೆ. (g89 12/8)
ಸಾಕ್ಷಿಗಳ ಬೆಳವಣಿಗೆ ಇಟೆಲಿಯ ಕಥೋಲಿಕರನ್ನು ಚಿಂತಿತರನ್ನಾಗಿ ಮಾಡುತ್ತದೆ
“ಕೆಲವು ಚರ್ಚುಗಳಲ್ಲಿ ಯೆಹೋವನ ಸಾಕ್ಷಿಗಳ ಕುರಿತು ಎಚ್ಚರಿಸುವುದು ವೇದಿಕೆಯಿಂದ ಆಗಾಗ್ಯೆ ಹೇಳುವ ಒಂದು ಪರಿಪಾಠವಾಗಿದೆ,” ಎನ್ನುತ್ತದೆ ದ ಕಥೋಲಿಕ್ ಸ್ಟಾಂಡರ್ಡ್ ಆ್ಯಂಡ್ ಟೈಮ್ಸ್. “ಚರ್ಚಿಗೆ ಚಿಂತೆಯನ್ನುಂಟು ಮಾಡುವುದು ಯಾವುದೆಂದರೆ ಸಾಕ್ಷಿಗಳ ಬೆಳವಣಿಗೆಯ ಪ್ರಮಾಣ ಮತ್ತು ಹೊಸ ಅವಲಂಬಿಗಳನ್ನು ಅವರು ಪಡೆಯುವ ಅವರ ಬಲಯುಕ್ತವಾದ ಹಾಗೂ ಯಶಸ್ವೀಯಾಗಿ ತೋರುವ ಕ್ರಮವಿಧಾನಗಳು.” ಈ ವರ್ಷದ ಆರಂಭದಲ್ಲಿ ಸೆಮಿನೆರಿ ಪ್ರಾಧ್ಯಾಪಕ ಮಾನ್ಸೀನ್ಯಾರ್ ಲೊರೆನ್ಜೊ ಮಿನೂಟಿ, ಪೋಪ್ ಪೌಲ್ IIರಿಗೆ ತಿಳಿಸಿದ್ದು, “ಯೆಹೋವನ ಸಾಕ್ಷಿಗಳು ಚರ್ಚಿನ ಅಡಿಪಾಯವನ್ನು ಶಿಥಿಲಗೊಳಿಸುವ ‘ಮಚ್ಛೆಗಳೆಂದು’ ಕರೆದನು ಮತ್ತು ಅವರನ್ನು ‘ಸಾಂಕ್ರಾಮಿಕ ವ್ಯಾಧಿ’ಗೆ ತುಲನೆ ಮಾಡಿದ್ದಾನೆ.” ಒಂದು ಅಂಟುರೋಗವನ್ನು ನಿಲ್ಲಿಸುವ ರೀತಿಯಲ್ಲಿ ಅವರ ವಿರುದ್ಧ ಪ್ರತಿಬಂಧಕ ಕ್ರಮಗಳನ್ನು ಚರ್ಚು ತೆಗೆದು ಕೊಳ್ಳುವಂತೆ ಅವನು ಕರೆಗೊಟ್ಟನು. ಮಿನೂಟಿಗನುಸಾರ, 1982ರಲ್ಲಿ ರಾಜ್ಯ ಸಭಾಗೃಹಗಳ ಸಂಖ್ಯೆಯು 10 ಇತ್ತು, 1989ರಲ್ಲಿ 66ಕ್ಕೆ ಏರಿದೆ, ಆದರೆ ಬೇರೆಲ್ಲಾ ಕಥೋಲಿಕರಲ್ಲದವರ ದೇವಾಲಯಗಳು ಮತ್ತು ಚರ್ಚುಗಳು ನಗರದಲ್ಲಿ ಇರುವುದು ಕೇವಲ ಒಟ್ಟಿಗೆ 44 ಮಾತ್ರ. “ಪೋಪರುಗಳ ಮತ್ತು ಚರ್ಚುಗಳ ಊರಿನಲ್ಲಿ ಯೆಹೋವನ ಸಾಕ್ಷಿಗಳ ಯಶಸ್ವೀಗೆ ಕಾರಣ ಅವರ ಸುವಾರ್ತೆ ಸಾರುವ ಹುರುಪೇ,” ಎಂದು ವಾರ್ತಾಪತ್ರ ಹೇಳುತ್ತಾ, “ಇಟೆಲಿಯಲ್ಲಿ ಒಂದು ಹೊಸ ಕಥೋಲಿಕ್ ಸುವಾರ್ತೆಯ ಸಾರೋಣಕ್ಕೆ” ಕರೆಯನ್ನಿತಿತ್ತು. (g89 12/8)
ಕೊಂಬಿಲ್ಲದ ಖಡ್ಗಮೃಗ
ಕಳ್ಳಬೇಟೆಗಾರರನ್ನು ತಡೆಯುವ ಕಟ್ಟಕಡೆಯ ಪ್ರಯತ್ನದಲ್ಲಿ, ಕಳ್ಳಬೇಟೆಗಾರರಿಗೆ ಬೆಲೆಯಿಲ್ಲದವುಗಳನ್ನಾಗಿ ಮಾಡಲು, ನಮೀಬಿಯದ ಅರಣ್ಯಜೀವ ಸಂರಕ್ಷಕ ಅಧಿಕಾರಿಗಳು ಖಡ್ಗಮೃಗಗಳ ಕೊಂಬುಗಳನ್ನು ಕತ್ತರಿಸಲು ಆರಂಭಿಸಿದ್ದಾರೆ. ಕೊಂಬುಗಳು ಕೇವಲ ಅದುಮಿ ಹಿಡಿದ ಕೂದಲುಗಳ ಹೆಚ್ಚಿನ ಬೆಳವಣಿಗೆ ಮತ್ತು ಅವುಗಳಲ್ಲಿ ನರಗಳು ಇಲ್ಲದಿರುವುದರಿಂದ ಒಬ್ಬನ ಉಗುರುಗಳನ್ನು ಕತ್ತರಿಸುವಷ್ಟೇ ಅದು ನೋವುರಹಿತವಾಗಿರುತ್ತದೆ ಎಂದು ಸಂರಕ್ಷಕರು ಹೇಳುತ್ತಾರೆ. ಕೊಂಬಿಲ್ಲದ ಖಡ್ಗಮೃಗವು ಇತರ ಕೊಳ್ಳೆಯ ಮೃಗಗಳ ಇಲ್ಲವೇ ಇನ್ನೊಂದು ಖಡ್ಗಮೃಗದ ವಿರುದ್ಧ ರಕ್ಷಿಸಿಕೊಳ್ಳಲಸಾಧ್ಯವಾದರೂ, ಅಪಾಯಕ್ಕೊಡ್ಡಲ್ಪಟ್ಟ ಈ ಆಫ್ರಿಕಾದ ಕಪ್ಪು ಜಾತಿಯ ಖಡ್ಗಮೃಗದ ಹತ್ಯೆಯನ್ನು ತಡೆಗಟ್ಟಲು ಇಂತಹ ಕ್ರಮಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ ಎಂದು ತೋರುತ್ತದೆ. ಒಂದು ದಶಕಕ್ಕಿಂತಲೂ ಕಡಿಮೆ ಸಮಯದಲ್ಲಿ, ಆಫ್ರಿಕಾದ ಕಪ್ಪು ಖಡ್ಗಮೃಗಗಳ ಸಂಖ್ಯೆಯು 15,000ದಿಂದ 3,500ಕ್ಕೆ ಇಳಿದದೆ ಎಂದು ಆಫ್ರಿಕಾನ್ ವೈಲ್ಡ್ ಲೈಫ್ ಪತ್ರಿಕೆಯು ವರದಿ ಮಾಡಿದೆ. ಮತ್ತು ನಮೀಬಿಯದಲ್ಲಿ, ಕೇವಲ 100 ಖಡ್ಗಮೃಗಗಳು ಇವೆಯೆಂದು ಅಂದಾಜಿಸಲಾಗಿದೆ, ಅಲ್ಲಿ ಈ ವರ್ಷದ ಮೊದಲ 5 ತಿಂಗಳುಗಳಲ್ಲಿ ಕಡಿಮೆ ಪಕ್ಷ 16 ಖಡ್ಗಮೃಗಗಳು ಕಳ್ಳಬೇಟೆಗಾರರಿಂದ ಹತಿಸಲ್ಪಟ್ಟಿವೆ ಎಂದು ನಂಬಲಾಗುತ್ತದೆ. ಔಷಧದ ಗುಣಗಳಿವೆ ಎಂದು ಎಣಿಸಲಾಗುವ ಕಪ್ಪು ಖಡ್ಗಮೃಗದ ಒಂದು ಜೋಡಿ ಕೊಂಬುಗಳಿಗೆ ಅಂತರ್-ರಾಷ್ಟ್ರೀಯ ಕಾನೂನುರೀತ್ಯ ಮಾರುಕಟ್ಟೆಯಲ್ಲಿ ಸುಮಾರು 50,000 ಡಾಲರುಗಳಷ್ಟು (ಸುಮಾರು ಎಂಟು ಲಕ್ಷ ರೂಪಾಯಿಗಳು) ದೊರಕುತ್ತವೆ. (g89 11/22)
ಪ್ರಾರ್ಥನೆಗಳಿಗೆ ಹಣ ತೆರುವುದು
ಅನೇಕ ಪ್ರಾಯ ಸಂದ ಜಪಾನೀಯರಿಗೆ ಒಂದು ದೊಡ್ಡ ಚಿಂತೆಯೆಂದರೆ ಅವರು ಸತ್ತನಂತರ ಅವರಿಗಾಗಿ ಪ್ರಾರ್ಥಿಸಲು ಇಲ್ಲವೇ ಅವರ ಸಮಾಧಿಗಳ ಜೋಪಾಸನೆ ನೋಡಿಕೊಳ್ಳಲು ಅವರಿಗೆ ಕೆಲವೇ ಸಂಬಂಧಿಕರು ಇರುವುದು ಯಾ ಇಲ್ಲವೇ ಎಂದೂ ಹೇಳಬಹುದು. ಆದಾಗ್ಯೂ ಬೌದ್ಧ ದೇವಾಲಯಗಳು ಒಂದು ಸಂಭಾವಣೆಗಾಗಿ ಅದನ್ನು ಮಾಡಲು ಆರಂಭಿಸಿದ್ದಾರೆ. ಟೊಕೀಯೊದ ಒಂದು ದೇವಾಲಯವು, ಅದು ಇರುವ ತನಕ, ಸತ್ತವರ ಅವಶೇಷಗಳನ್ನು ಎಲ್ಲಾ ಪ್ರಮುಖ ಹಬ್ಬಗಳ ಸಮಯ ಹೊರ ತಂದು, ಸತ್ತ ವ್ಯಕ್ತಿಗಾಗಿ ಪ್ರಾರ್ಥನೆ ಸಲ್ಲಿಸಲು ತಯಾರಿದೆ. ಸಂಭಾವನೆಯು ಜಪಾನಿನ 5,00,000 ಯೆನ್ (ಇಂಡಿಯಾದ ಸುಮಾರು 60,000 ರೂಪಾಯಿಗಳು). ಸೈತಾಮಾ ಅಧಿಕಾರ ನಿವಾಸದ ಹತ್ತಿರದ ಒಂದು ಶ್ಮಶಾನವು 50 ವರ್ಷಗಳ ತನಕ ಪ್ರಾರ್ಥನೆಗಳನ್ನು ಸಲ್ಲಿಸುವ ಮತ್ತು ಸಮಾಧಿಯ ಜೋಪಾಸನೆ ನೋಡಿ ಕೊಳ್ಳುವ ಖಾತರಿಯನ್ನು ಜಪಾನಿನ 7,00,000 ಯೆನ್ಗಳಿಗೆ (ಇಂಡಿಯಾದ ಸುಮಾರು 75,000 ರೂಪಾಯಿಗಳು) ಕೊಡುತ್ತದೆ. ‘ಪ್ರಾರ್ಥನೆಗಳಿಗೆ ಹಣ ತೆರುವ’ ಈ ಸೇವೆಯನ್ನು ಬಯಸುವ ವ್ಯಕ್ತಿಗಳ ಅರ್ಜಿಗಳು ಈಗಾಗಲೇ ಬರಲು ಆರಂಭಿಸಿವೆ. (g89 11/22)
ಕುಡಿಯಬೇಕೋ, ಬೇಡವೂ
“ಸಾಮಾನ್ಯವಾಗಿ” ಮದ್ಯಪಾನ ಪ್ರತಿದಿನ ಮಾಡಿದರೆ ಆರೋಗ್ಯಕ್ಕೆ ಬಾಧಕವಿದೆಯೇ? ಹೌದು, ಎನ್ನುತ್ತಾರೆ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಅಲ್ಮ್ ವಿಶ್ವ ವಿದ್ಯಾಲಯದಲ್ಲಿ ನರರೋಗಶಾಸ್ತ್ರದ ಆಸ್ಪತ್ರೆಯ ಹೆಚ್. ಹೆಚ್. ಕೊರ್ನ್ಹ್ಯೂಬರ್. ಮದ್ಯಸಾರದ ಪ್ರತಿದಿನದ ಸೇವನೆಯು ಪಿತ್ತಜನಕಾಂಗದಿಂದ ಕೊಬ್ಬನ್ನು ಜೀರ್ಣಿಸುವ ಸಾಮರ್ಥ್ಯವನ್ನು ಹೆಚ್ಚುಕಡಿಮೆಗೊಳಿಸಿ ಬೊಜ್ಜು ಬೆಳೆಯುವಿಕೆಗೆ ನಡಿಸುತ್ತದೆ. ಬೇರೆ ಪರಿಣಾಮಗಳು ಏನಂದರೆ ನಾಡಿಮಿಡಿತ ಮತ್ತು ರಕ್ತದೊತ್ತಡವನ್ನು ಏರಿಸುತ್ತದೆ ಮತ್ತು ಕೊಲಸ್ಟರಲ್ ಮಟ್ಟವು ಏರುತ್ತದೆ. ಪರಿಶೋಧನೆಗಳು ತೋರಿಸುವುದು, “ಆರೋಗ್ಯಕ್ಕೆ ಬಾಧಕವಾಗುವ ಗಡಿರೇಖೆಯು ಸ್ಪಷ್ಟವಾಗಿ ತೋರಿಬರುವುದು, ಕೊಂಚವೇ ಇಲ್ಲವೇ ಅತಿ ಹೆಚ್ಚು ಮದ್ಯಪಾನ ಮಾಡುವವರ ನಡುವೆ ಅಲ್ಲ ಬದಲು ಹಾಳತ ರೀತಿಯಲ್ಲಿ ಮದ್ಯಪಾನ ಮಾಡುವವರ ಮತ್ತು ಅದನ್ನು ಎಷ್ಟಕ್ಕೂ ಸೇವಿಸದೇ ಇರುವ ವ್ಯಕ್ತಿಗಳ ನಡುವೆ ಅದಿರುತ್ತದೆ,” ಎಂದು ಜರ್ಮನಿನ ವಾರ್ತಾಪತ್ರ ಫ್ರಾಂಕ್ಫರ್ಟರ್ ಅಲಿಜಿಮೈನ್ ಜೈಟುಂಗ್ ಗಮನಿಸಿದೆ. (g89 11/22)