ದೀರ್ಘಕಾಲದ ಅತ್ತೆ-ಸೊಸೆ ತಿಕ್ಕಾಟ
“ನಿನ್ನ ಮುಖ ನೋಡಲು ನನಗೆ ಆಗುವುದಿಲ್ಲ!” ಫುಜಿಕೊಳು ಅವಳ ಅತ್ತೆ ಟೊಮಿಕೊಳನ್ನು ನೋಡಿ ಕಿರುಚಿದಳು. ತನಗೆ ಯಾವಾಗಲೂ ಅಪ್ಪಣೆ ಕೊಡುವುದರಿಂದ ಫುಜಿಕೊಳು ದಣಿದಿದ್ದಳು. ಹೊರ ತೋರಿಕೆಯಲ್ಲಿ ಅವಳು ಶಾಂತತೆಯನ್ನು ಕಾಪಾಡಿಕೊಳ್ಳಲು ಸಮರ್ಥಳಾಗಿದ್ದರೂ, ಅವಳು ಬೇಗುದಿಯಿಂದಲೇ ಜೀವಿಸುತ್ತಿದ್ದಳು. “ನನ್ನೊಳಗೆ ನಾನು ಕಹಿಗೊಂಡಿದ್ದೆ,” ಎಂದಳು ಅವಳು. “ನಾನು ನಾನಾಗಿಯೇ ಇರಲಿಲ್ಲ. ಅದೇ ರೀತಿ ಪ್ರತಿದಿನ ಜೀವಿಸಲು ನಾನು ಅಶಕ್ಯಳಾಗಿದ್ದೆನು.”
ಜಪಾನಿನಲ್ಲಿ ಏಕಾಂಗಿಯಾಗಿ ಜೀವಿಸುತ್ತಿರುವ ಒಬ್ಬಾಕೆ ವಯಸ್ಸಾದವಳು ಹೇಳಿದ್ದು: “ನನ್ನ ಮಗ ಮತ್ತು ಅವನ ಹೆಂಡತಿಯಿಂದ ನಾನು ತ್ಯಜಿಸಲ್ಪಟ್ಟಿದ್ದೇನೆ. ಈಗ ನಾನು ಇತರರ ಬಗ್ಯೆ ಚಿಂತಿಸುವ ಆವಶ್ಯಕತೆಯಿಲ್ಲ, ಮತ್ತು ನಾನು ಮೆಚ್ಚುವ ಸಂತೋಷವಾಗುವ ರೀತಿಯಲ್ಲಿ ನಾನೀಗ ಜೀವಿಸುತ್ತೇನೆ, ಆದರೆ ಸೂರ್ಯನು ಅಸ್ತಮಿಸಿದ ನಂತರ ನಾನು ಒಂಟಿಗಭಾವನೆಯನ್ನು ಪಡೆಯುತ್ತೇನೆ.”
ದೀರ್ಘಕಾಲದ ಅತ್ತೆ ಮತ್ತು ಸೊಸೆಯರ ನಡುವಿನ ತಿಕ್ಕಾಟವು ಸಾರ್ವತ್ರಿಕ ಸಂಗತಿಯಾಗಿರುತ್ತದೆ. “ವಿಷಾದಕರವಾಗಿಯೇ,” ಆಷ್ಟ್ರೇಲಿಯಾದ ಒಂದು ಪತ್ರಿಕೆಯ ಸಂಪಾದಕಳಾದ ದುಲ್ಸಿಯ ಬೊಲಿಂಗ್ ಹೇಳುವುದು, “ಕೆಲವು ಹೆಂಗಸರು ಯಾವಾಗಲೂ ತಮ್ಮ ಸೊಸೆಯರೆಡೆಗೆ ಮತ್ಸರವುಳ್ಳವರಾಗಿರುತ್ತಾರೆ. . . . ಇದರಲ್ಲಿ ಹಲ್ಲು ಕಿರಿದು ನೋವನ್ನು ನೀವು ತಾಳಿಕೊಳ್ಳುವುದೇ ಬೇರೆ ಮಾಡಲಿಕ್ಕೆ ಇರುವುದು ಕೊಂಚವೇ.” ತಮ್ಮ ಸೊಸೆಯರ ಚಿತಾವಣೆಯಿಂದ ಪ್ರಾಯ ಸಂದ ಹೆಂಗಸರನ್ನು ಕಾಡುಬೆಟ್ಟಗಳಲ್ಲಿ ತೊರೆದು ಬಂದ ಕಥೆಗಳೂ ಕೂಡಾ ಪೌರ್ವಾತ್ಯ ದೇಶಗಳಲ್ಲಿ ಇವೆ.
ಇಂದು, ಈ ತಿಕ್ಕಾಟವು ಹಿಂದೆಂದಿಗಿಂತಲೂ ಹೆಚ್ಚು ಸಂಕ್ಲಿಷ್ಟವಾಗಿದೆ. ಸಂಖ್ಯಾಶಾಸ್ತ್ರಕ್ಕನುಸಾರವಾಗಿ, ಜೀವಿಸುವ ಕಾಲಾವಧಿಯು ಏರುತ್ತಲಿದೆ, ಕುಟುಂಬಗಳು ಚಿಕ್ಕದಾಗುತ್ತಾ ಇವೆ ಮತ್ತು ಪುರುಷ ಮತ್ತು ಸ್ತ್ರೀಯರ ನಡುವಣ ಸಾವಿನ ಸಂಖ್ಯೆಯ ವ್ಯತ್ಯಾಸವು ಹೆಚ್ಚಾಗುತ್ತಾ ಇದೆ. ಇದರ ಫಲಿತಾಂಶವೇನು? ಅಧಿಕಾಂಶ ಸ್ತ್ರೀಯರು ಅವರು 70ರ ಮತ್ತು 80ರ ದಶಕಗಳಲ್ಲಿ ಜೀವಿಸುವುದರಿಂದ, ಅತ್ತೆಯಂದಿರ ಮತ್ತು ಅವರ ಸೊಸೆಯಂದಿರ ಘರ್ಷಣೆಯು 100 ಗಜ ದೂರದ ಓಟವಾಗಿರುವುದರ ಬದಲು, ಯಾತನಾಮಯವಾದ ಬಹುದೂರ ಓಟದ ಪಂದ್ಯವಾಗಿ ಪರಿಣಮಿಸಿದೆ.
ವಯಸ್ಸಾದವರು ಏನು ಬಯಸುತ್ತಾರೆ?
ಅಂತಹ ತಿಕ್ಕಾಟಗಳ ಹೊರತಾಗಿಯೂ, ಅವರಿಗೊಂದು ಆಯ್ಕೆ ಇರುವುದಾದರೆ, ತಮ್ಮ ಆರೈಕೆಯನ್ನು ಹೇಗೆ ಮಾಡಬೇಕೆಂದು ವಯಸ್ಸಾದ ಹೆತ್ತವರು ಬಯಸುತ್ತಾರೆ? “ಕಳೆದ ಎರಡು ದಶಕಗಳಲ್ಲಿ,” ಜನರ ಜನನ-ಮರಣ ಸಂಖ್ಯೆಯ ಸಂಶೋಧಕರುಗಳಾದ ಜೇಕಬ್ ಎಸ್. ಸಿಯಗಲ್ ಮತ್ತು ಸಿಂತಿಯಾ ಎಮ್. ಟೌಬರ್ ಹೇಳುವುದು, “ಅವರ ಜೀವನ ಸಂಗಾತಿ ಇಲ್ಲದಿದ್ದರೆ, ಇತರ ಜನರೊಡನೆ ಜೀವಿಸಲು ಅಷ್ಟೊಂದು ಬಯಸುವುದಿಲ್ಲ.” ಮಾನವ ಸೇವೆಗಳ ಖಾತೆಯ ಮಾಜೀ ಕಾರ್ಯನಿರ್ವಾಹಕರಾದ ಎಲೇನ್ ಎಮ್. ಬ್ರೊಡಿ ಕೂಡಿಸುವುದು, ಅಮೆರಿಕದಲ್ಲಿ “ವಯಸ್ಸಾದವರು ತಮ್ಮ ಸಂಬಂಧಿಕರುಗಳಲ್ಲಿ ಜೀವಿಸುವುದಕ್ಕಿಂತ ಪ್ರತ್ಯೇಕವಾಗಿರುವುದಕ್ಕೆ ಹೆಚ್ಚು ಆದ್ಯತೆ ತೋರಿಸುತ್ತಾರೆ.” ಆಗಾಗ್ಯೆ ಅವರ ಮಕ್ಕಳು ಹತ್ತಿರದಲ್ಲಿಯೇ ಜೀವಿಸುತ್ತಿದ್ದು ಅವರ ಭೇಟಿ ಮಾಡಿ ಜಾಗ್ರತೆ ತೆಗೆದುಕೊಳ್ಳುತ್ತಾರೆ.
ಆದರೆ ಪೌರ್ವಾತ್ಯರು ಇನ್ನೊಂದು ರೀತಿಗೆ ಆದ್ಯತೆ ಕೊಡುತ್ತಾರೆ. ಜಪಾನಿನ ಮೆನೆಜ್ಮೆಂಟ್ ಆ್ಯಂಡ್ ಕೊ-ಆರ್ಡಿನೇಶನ್ ಏಜನ್ಸಿಯಿಂದ ನಡಿಸಲ್ಪಟ್ಟ ಒಂದು ಸಮೀಕ್ಷೆಗನುಸಾರ, ಜಪಾನಿನ ಮತ್ತು ಥೈಲಾಂಡಿನ ಅಧಿಕಾಂಶ ಪ್ರಾಯಸ್ಥರು ಅವರ ಸಂಬಂಧಿಕರಲ್ಲಿ ಜೀವಿಸಲು ಬಯಸಿದರು. ಸಮೀಕ್ಷೆ ಕಂಡುಕೊಂಡದ್ದೇನಂದರೆ ಥೈಲಾಂಡಿನ ಶೇಕಡಾ 61 ಮತ್ತು ಜಪಾನಿನ ಶೇಕಡಾ 51 ವಯಸ್ಸಾದವರು ವಾಸ್ತವದಲ್ಲಿ ಹಾಗೆಯೇ. ಈಗ ಜೀವಿಸುತ್ತಿದ್ದಾರೆ.
ಈ ಆಯ್ಕೆಯು ಪಾಶ್ಚಿಮಾತ್ಯ ದೇಶಗಳಲ್ಲಿ ಬಹಳಷ್ಟು ಸರ್ವಸಾಮಾನ್ಯವೆಂಬುದೇನೋ ನಿಜ. ಅತಿ ಮುದುಕರು ಇಲ್ಲವೇ ಹಾಸಿಗೆ ಹಿಡಿದ ಹೆತ್ತವರು ಒಮ್ಮೊಮ್ಮೆ ತಮ್ಮ ಮಕ್ಕಳೊಂದಿಗೆ ಜೀವಿಸುತ್ತಾರೆ. ತಮ್ಮ ವಿವಾಹ ಸಂಗಾತಿಯು ಗತಿಸಿದ ನಂತರ 75 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಅವರ ಮಕ್ಕಳಲ್ಲಿ ಒಬ್ಬರೊಂದಿಗೆ ಜೀವಿಸುವುದು ಫ್ರಾನ್ಸಿನಲ್ಲಿ ಒಂದು ಸಾಮಾನ್ಯ ಸಂಗತಿಯಾಗಿರುತ್ತದೆ.
ಪರ-ವಿರೋಧಗಳನ್ನು ಸ್ವೀಕರಿಸುವುದು
ಒಂದೇ ಸೂರಿನ ಕೆಳಗೆ ಎರಡು ಯಾ ಮೂರು ಸಂತತಿಯವರು ಜೀವಿಸುವುದು ಕೆಲವೊಮ್ಮೆ ನಿಶ್ಚಿತ ಪ್ರಯೋಜನಗಳನ್ನು ತರುತ್ತದೆ. ಪ್ರಾಯ ಸಂದವರು ಹೆಚ್ಚು ಸುಭದ್ರತೆಯ ಮತ್ತು ಕಡಿಮೆ ಒಂಟಿಗತನದ ಭಾವನೆಯುಳ್ಳವರಾಗಿರುತ್ತಾರೆ. ವಯಸ್ಸಾದವರ ಅನುಭವದಿಂದ ಎಳೆಯ ಸಂತತಿಯವರು ಕಲಿಯಬಹುದು ಮತ್ತು ಅಲ್ಲಿ ಆರ್ಥಿಕ ಆದಾಯಗಳೂ ಇರುತ್ತವೆ.
ಇನ್ನೊಂದು ಪಕ್ಕದಲ್ಲಿ, ಈಗಾಗಲೇ ತೊಡಕಿನಲ್ಲಿ ಬಿದ್ದಿರುವ ಅತ್ತೆ—ಸೊಸೆ ಸಂಬಂಧಗಳು ಇನ್ನಷ್ಟು ಹೆಚ್ಚು ಉಬ್ಬೆತ್ತಿಸಬಹುದು. ಉದಾಹರಣೆಗೆ, ಜಪಾನಿನಲ್ಲಿ, ಸಾಂಪ್ರದಾಯಿಕವಾಗಿ ವಯಸ್ಸಾದ ಹೆತ್ತವರು ಪ್ರಥಮ ಪುತ್ರನ ಮತ್ತು ಅವನ ಕುಟುಂಬದೊಂದಿಗೆ ಜೀವಿಸುತ್ತಾರೆ, ಅಲ್ಲಿ ಅತ್ತೆ ಮತ್ತು ಸೊಸೆಯರ ನಡುವಣ ತಿಕ್ಕಾಟವು ಒಂದು ಗಾದೆಯೇ ಆಗಿದೆ.
ಅಂಥಹ ಸನ್ನಿವೇಶದಲ್ಲಿ ನೀವು ಸಿಲುಕಿರುವುದಾದರೆ, ನೀವೇನು ಮಾಡಸಾಧ್ಯವಿದೆ? ಅಮೆರಿಕಾಸ್ ಒಲರ್ಡ್ ಪಾಪ್ಯುಲೇಶನ್ ಎಂಬ ತನ್ನ ಪುಸ್ತಕದಲ್ಲಿ ಪೌಲ್ ಇ. ಝೋಫ್ ಜೂನಿಯರ್, ಗಿಲ್ಫೋರ್ಡ್ ಕಾಲೇಜಿನ ಸಮಾಜಶಾಸ್ತ್ರದ ಪ್ರಾಧ್ಯಾಪಕನು ಹೇಳುವುದು: “ಕುಟುಂಬವು ಕೂಡಾ ಸಂಘರ್ಷಣೆಯನ್ನು ಮತ್ತು ಸಂಘರ್ಷಣೆಯ ನಿಭಾಯಿಸುವಿಕೆಗೆ ಒಂದು ಅವಕಾಶವನ್ನು ಉತ್ಪಾದಿಸುತ್ತದೆ. ವಯಸ್ಸಾದ ಸದಸ್ಯರೊಂದಿಗೆ ತಿಕ್ಕಾಟವನ್ನು ಹತೋಟಿಯಲ್ಲಿಡಲು ಮತ್ತು ಪರಸ್ಪರ ಕ್ರಿಯೆಯಿಂದ ಉತ್ಪಾದಕ ರೀತಿಯಲ್ಲಿ ನಿಭಾಯಿಸುವ ಸಾಮರ್ಥ್ಯವು ಇತರ ಸಂಬಂಧಗಳಲ್ಲೂ ಬಳಸಲ್ಪಡುತ್ತದೆ.”
ಆದುದರಿಂದ ವಿಷಯದ ಸಕಾರಾತ್ಮಕ ನೋಟವುಳ್ಳವರಾಗಿರಿ. ನೀವು ಕುಟುಂಬ ತಿಕ್ಕಾಟಗಳನ್ನು ನಿಭಾಯಿಸಲು ಶಕ್ಯರಾಗಿರುವುದಾದರೆ, ಇತರ ಜಟಿಲ ಸಿಕ್ಕುಬೀಳಿಸುವ ಸನ್ನಿವೇಶಗಳನ್ನು ಕೂಡಾ ನೈಪುಣ್ಯತೆಯಿಂದ ಪ್ರಾಯಶಃ ನಿಭಾಯಿಸಬಲ್ಲಿರಿ. ಇದನ್ನು ಒಂದು ಪಂಥದೋಪಾದಿ ಸ್ವೀಕರಿಸಿರಿ ಮತ್ತು ನೀವು ಇದಕ್ಕೆ ಒಬ್ಬ ಯೋಗ್ಯ ವ್ಯಕ್ತಿಯಾಗಿರಬಲ್ಲಿರಿ. ಅತ್ತೆ—ಸೊಸೆಯರ ನಡುವೆ ಜೀವಿಸುವ ಸಮಸ್ಯೆಗಳನ್ನು ನಾವೀಗ ಪರೀಕ್ಷಿಸೋಣ ಮತ್ತು ಯಶಸ್ವೀಕರವಾಗಿ ಅಂಥಹ ಸಮಸ್ಯೆಗಳನ್ನು ವ್ಯವಹರಿಸಬಹುದೆಂದು ನೋಡೋಣ. ಮತ್ತು ಅಂಥಹ ಏರ್ಪಾಡಿನ ಕೆಳಗೆ ನೀವು ಸದ್ಯ ಇಲ್ಲದೇ ಇರುವುದಾದರೂ ಕೂಡಾ, ಅದರಲ್ಲಿ ಒಳಗೂಡಿರುವ ತತ್ವಗಳನ್ನು ಗಮನಿಸುವುದರ ಮೂಲಕ ನೀವೂ ಪ್ರಯೋಜನ ಪಡೆಯ ಬಹುದು. (g90 2/22)
[ಪುಟ 4ರಲ್ಲಿರುವಚೌಕ]
ಮಕ್ಕಳಿಗಿಂತ ಅಧಿಕ ಹೆತ್ತವರು
ಜನಸಂಖ್ಯಾ ಶಾಸ್ತ್ರಜ್ಞ ಸಮ್ಯುವೆಲ್ ಪ್ರಿಸ್ಟನ್ಗನುಸಾರ ಸರಾಸರಿ ವಿವಾಹಿತ ದಂಪತಿಗಳಿಗೆ ಮಕ್ಕಳಿಗಿಂತ ಹೆಚ್ಚು ಹೆತ್ತವರಿರುತ್ತಾರೆ. ಎರಡು ಜೋಡಿ ಹೆತ್ತವರ ಜಾಗ್ರತೆವಹಿಸುವಲ್ಲಿ ತಮ್ಮ ಜವಾಬ್ದಾರಿಕೆಗಳನ್ನು ಸಮತೂಕದಲ್ಲಿ ಹೇಗೆ ಇಡುವುದು ಎಂಬ ಪ್ರಶ್ನೆಯನ್ನು ಅಧಿಕ ಸಂಖ್ಯಾತ ದಂಪತಿಗಳು ಎದುರಿಸುತ್ತಾರೆ.