ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ಭಾಗ 1 ಸರಕಾರದ ಮೇಲೆ ರಂಗಬೆಳಕನ್ನು ಬೀರುವುದು
ಯೂರೋಪಿನಲ್ಲಿ 1989 ರಲ್ಲಿ ನಡೆದ ನಾಟಕೀಯ ರಾಜಕೀಯ ಬದಲಾವಣೆಗಳು ಸರಕಾರವೆಂಬ ವಿಷಯವಸ್ತುವಿನ ಮೇಲೆ ಜಗತ್ತಿನ ರಂಗಬೆಳಕನ್ನು ಅದ್ವಿತೀಯ ವಿಧದಲ್ಲಿ ಬೀರಿದವು. “1989, ಪೂರ್ವ ಯೂರೋಪು ಬದಲಾವಣೆ ಹೊಂದಿದ ವರ್ಷವೆಂದಲ್ಲ, ಕಳೆದ ನಾಲ್ಕು ದಶಕಗಳಲ್ಲಿ ನಮಗೆ ಪರಿಚಯವಿದ್ದ ಪೂರ್ವ ಯೂರೋಪು ಅಂತ್ಯಗೊಂಡ ವರ್ಷವೆಂದು ಸ್ಮರಿಸಲ್ಪಡುವುದು,” ಎಂದು ಒಂದು ವಾರ್ತಾಪತ್ರಿಕೆ ಗಮನಿಸಿತು.
ಇದಕ್ಕಿಂತಲೂ ಮುಂದುವರಿಯತ್ತ, ಅಮೆರಿಕದ ವಿದೇಶ ಮಂತ್ರಾಲಯದ ಪಾಲಿಸಿ-ಪ್ಲ್ಯಾನಿಂಗ್ ಸ್ಟಾಫಿನ ಫ್ರಾನ್ಸಿಸ್ ಫುಕುಯಾಮ ಬರೆದದ್ದೇನಂದರೆ, “ನಾವು ನೋಡುತ್ತಿರುವುದು ಶೀತಲ ಯುದ್ಧಾಂತ್ಯವನ್ನಷ್ಟೇಯಲ್ಲ, ಯುದ್ಧಾನಂತರದ ಇತಿಹಾಸದ ಒಂದು ನಿರ್ದಿಷ್ಟ ಅವಧಿಯ ಗತಿಸಿಹೋಗುವಿಕೆಯನ್ನೂ ಅಲ್ಲ, ಬದಲಿಗೆ ಇತಿಹಾಸವೆಂದು ಹೇಳುವಂಥದರ ಅಂತ್ಯವನ್ನು, ಅಂದರೆ, ಮಾನವಕುಲದ ಭಾವನಾ ಸಮುಚ್ಚಯದ ವಿಕಾಸದ ಕೊನೆಯ ಬಿಂದುವನ್ನು ನೋಡುತ್ತಿರಬಹುದು.”
ಈ ವೀಕ್ಷಣ, ತೀರಾ ವಿವಾದಾತ್ಮಕವಾದರೂ, ಅದು ನಮ್ಮ ಗಮನವನ್ನು ಹಲವು ಅತಿ ಪ್ರಾಮುಖ್ಯ ಪ್ರಶ್ನೆಗಳ ಮೇಲೆ ಕೇಂದ್ರೀಕರಿಸುತ್ತದೆ. ದೃಷ್ಟಾಂತಕ್ಕೆ, ಮಾನವಾಳಿಕೆಯ ಗತಿಸಿಹೋಗಿರುವ ಶತಮಾನಗಳ ಕುರಿತು ಏನೆನ್ನಬಹುದು? ಮನುಷ್ಯಕುಲವು, “ಇತಿಹಾಸವೆಂದು ಹೇಳುವಂಥದರ ಅಂತ್ಯ” ವೆಂದು ಹೇಳಲಾಗುವ ಸಮಯಾವಧಿಯನ್ನು ಮುಟ್ಟಿದೆಯೇ? ಸರಕಾರಗಳಿಗಿರುವ ಭವಿಷ್ಯತ್ತಾದರೂ ಏನು? ಮತ್ತು ಇಂಥ ಭಾವೀ ಘಟನೆಗಳು ನಮ್ಮ ಮೇಲೆ ವ್ಯಕ್ತಿಪರವಾಗಿ ಯಾವ ಪರಿಣಾಮವನ್ನು ಬೀರುವುವು?
ಸರಕಾರಗಳ ವಿಷಯದಲ್ಲಿ ಜನರ ಅಭಿಪ್ರಾಯ
ಕೋಟ್ಯಂತರ ಜನರು ತಮ್ಮ ರಾಜಕೀಯ ನಾಯಕರುಗಳ ವಿಷಯ ಸ್ಪಷ್ಟ ಭ್ರಮನಿರಸನ ಹೊಂದಿರುತ್ತಾರೆ. ಇದು ಸತ್ಯವಾಗಿರುವುದು ಯೂರೋಪಿನಲ್ಲಿ ಜೀವಿಸುವವರಲ್ಲಿ ಮಾತ್ರವಲ್ಲ, ವಿಭಿನ್ನ ಮಟ್ಟಗಳಲ್ಲಿ, ಎಲ್ಲ ನಾಗರಿಕರಲ್ಲಿಯೂ ಇದು ಸತ್ಯ. ದೃಷ್ಟಾಂತಕ್ಕೆ, ನಾವು ಲ್ಯಾಟಿನ್ ಅಮೆರಿಕದ ದೇಶಗಳನ್ನು ನೋಡೋಣ.
ಒಂದು ಪ್ರಸಿದ್ಧ ಜರ್ಮನ್ ವಾಣಿಜ್ಯ ಪತ್ರಿಕೆ ಅಲ್ಲಿ 1988 ರ ಅಂತ್ಯದಲ್ಲಿದ್ದ ಪರಿಸ್ಥಿತಿಯ ಕುರಿತು, “ಅದು ಹಾಳುಬಿದ್ದ ಗುಪ್ಪೆಗಿಂತ ತುಸು ವಿಪರೀತ” ವೆಂದು ಹೇಳಿತು. ವಿವರಣೆ ಮಾಡುತ್ತಾ ಅದು ಹೇಳಿದ್ದು: “ಆರ್ಜೆಂಟೀನದ. . .ಆರ್ಥಿಕ ಸ್ಥಿತಿ ಕೂಡುಹೊಲಿಗೆಯ ಜೋಡಣೆಯಲ್ಲಿ ಬಿರಿಯುತ್ತ ಇದೆ. ಬ್ರೆಸೀಲ್ ದೇಶ ಆಡಳಿತಕ್ಕೆ ಅಸಾಧ್ಯವುಳ್ಳದ್ದಾಗುತ್ತ ಬರುತ್ತದೆ. ಪೆರು ಎಲ್ಲೆ ಮೀರುವುದರಲ್ಲಿದೆ. ಯುರುಗ್ವೆ ಬರಿಯ ಗಾಬರಿಯಿಂದ ಮುಂದುವರಿಯುತ್ತಿದೆ. ಇಕ್ವಡೊರ್ ದೇಶ ನಿಸ್ಸಂಶಯವಾಗಿ ತುರ್ತು ಪರಿಸ್ಥಿತಿಯಂತಿರುವ ಸ್ಥಿತಿಯನ್ನು ಎದುರಿಸಲು ಪ್ರಯತ್ನಿಸುತ್ತದೆ. ಕೊಲಂಬಿಯ ಮತ್ತು ವೆನೆಸುವೇಲ . . . ಭಿದುರವಾದ ಪ್ರಜಾಪ್ರಭುತ್ವ ಸಂಪ್ರದಾಯವನ್ನು ಕಾಪಾಡುತ್ತ ಇವೆ. ಮೆಕ್ಸಿಕೊ ದೇಶದಲ್ಲಿ, 50 ವರ್ಷಗಳ ತನಕ ಯಾವ ಪಂಥಾಹ್ವಾನವೂ ಇಲ್ಲದೆ ಆಡಳಿತ ನಡೆಸಿರುವ ಆಳುವ ಪಕ್ಷ . . . ಎಲ್ಲರೂ ನೋಡಲಾಗುವಂತೆ ಛಿನ್ನಭಿನ್ನವಾಗುತ್ತಿದೆ. 1980’ಗಳನ್ನು ಆಗಲೇ ‘ನಷ್ಟವಾಗಿರುವ ದಶಕ’ ವೆಂದು ಹೇಳಿ ಬೀಳ್ಕೊಡಲಾಗುತ್ತಿದೆ.”
ಕೆಲವು ಸ್ಥಳಗಳಲ್ಲಿ ರಾಜಕಾರಣಿಗಳ ಜನಪ್ರಿಯತೆ ಸರ್ವ ಸಮಯಗಳ ಅತಿ ಕೆಳಮಟ್ಟಕ್ಕೆ ಬಂದು ಮುಟ್ಟಿಯದೆ. ಆಸ್ಟ್ರಿಯದ ಜನರನ್ನು, ಅವರು 21 ಉದ್ಯೋಗಗಳಿಗೆ ಘನತೆಗನುಸಾರ ಶ್ರೇಣಿ ಕೊಡುವಂತೆ ಕೇಳಿದಾಗ ರಾಜಕಾರಣಿಗಳನ್ನು ಅವರು 19 ನೆಯ ಸ್ಥಾನದಲ್ಲಿಟ್ಟರು. ಜರ್ಮನಿಯ ಫೆಡರಲ್ ರಿಪಬ್ಲಿಕಿನ ಸಾರ್ವಜನಿಕ ಅಭಿಪ್ರಾಯ ಗಣನೆಯು, ಪ್ರಶ್ನಿಸಲ್ಪಟ್ಟವರಲ್ಲಿ 62 ಪ್ರತಿಶತ ನಾಗರಿಕರು ತಮಗೆ ರಾಜಕಾರಣಿಗಳಲ್ಲಿ ಇರುವ ಭರವಸೆ ಕೊಂಚವೇ ಎಂದು ಹೇಳಿದರು.
ಬಾನ್ ವಿಶ್ವವಿದ್ಯಾಲಯದ ಮನಶ್ಶಾಸ್ತ್ರ ಸಂಘದ ಡೈರೆಕ್ಟರ್, ಪ್ರೊಫೆಸರ್ ರೈನಾಲ್ಡ್ ಬೆರ್ಗ್ಲರ್, “ಯುವ ಜನರು ಸರಕಾರ, ರಾಜಕೀಯ ಮತ್ತು ರಾಜಕಾರಣಿಗಳಿಗೆ ಬೆನ್ನು ಹಾಕುವುದರಲ್ಲಿದ್ದಾರೆ” ಎಂದು ಎಚ್ಚರಿಸುತ್ತಾರೆ. ಈ ಯುವ ಜನರಲ್ಲಿ 46 ಪ್ರತಿಶತ, ರಾಜಕಾರಣಿಗಳನ್ನು “ಬಾಯಿಬಡಿಕ” ರೆಂಬಂತೆ ನೋಡುತ್ತಾರೆಂದೂ 44 ಪ್ರತಿಶತ, ಅವರನ್ನು ನೀತಿಭ್ರಷ್ಟರಾಗಬಲ್ಲವರೆಂಬಂತೆ ನೋಡುತ್ತಾರೆಂದೂ ಹೇಳುತ್ತಾರೆ.
ಅಮೆರಿಕದ ಒಬ್ಬ ಮತಸಂಗ್ರಹಗಾರನು, 1970’ಗಳಲ್ಲಿ ಬರೆಯುತ್ತಾ ಹೇಳಿದ್ದು: “(ರಾಜಕೀಯ) ಕಾರ್ಯವಿಧಾನವು ಎಷ್ಟು ಅಸಹಾನುಭೂತಿಯುಳ್ಳದ್ದು ಮತ್ತು ಅಪ್ರಾಮಾಣಿಕವಾದುದೆಂದರೆ ಮತದಾರರ ಉದ್ದೇಶಗಳಿಗಾಗಿ ಅದನ್ನು ಉಪಯೋಗಿಸಸಾಧ್ಯವಿಲ್ಲವೆಂಬ ನಂಬಿಕೆ ಅಸ್ತಿತ್ವದಲ್ಲಿದೆ.” ಹೀಗೆ, ರಾಜಕಾರಣಿಗಳು “ನಿಮಗೆ ಏನೇ ಸಂಭವಿಸಲಿ, ಪರವಾ ಮಾಡದವರು” ಎಂದು ಅಭಿಪ್ರಯಿಸುವ ಅಮೆರಿಕದ ಜನರ ಸಂಖ್ಯೆ, 1966’ರ 29 ಪ್ರತಿಶತದಿಂದ 1980’ಗಳಲ್ಲಿ 58 ಪ್ರತಿಶತಕ್ಕೆ ಏರಿದೆ. ಜರ್ಮನ್ ವೃತ್ತಪತ್ರಕೆ ಸ್ಟುಟ್ಗಾರ್ಟರ್ ನ್ಯಾಕ್ರೈಷ್ಟೆನ್ ಇಂಥ ಮೌಲ್ಯಮಾಪನವನ್ನು ನ್ಯಾಯೀಕರಿಸುತ್ತಾ ಹೇಳುವುದು: “ತಮ್ಮ ಸ್ವಂತ ಅಭಿರುಚಿಗಳನ್ನು ಪ್ರಥಮವಾಗಿ ಮನಸ್ಸಿನಲ್ಲಿಟ್ಟುಕೊಂಡು, ಆ ಬಳಿಕ, ಸಂಭವಿದ್ದರೆ ಮತದಾರರ ಅಭಿರುಚಿಗಳನ್ನು ನೋಡುವ ರಾಜಕಾರಣಿಗಳು ಜಾಸ್ತಿ.”
ರಾಜಕೀಯ ಔದಾಸೀನ್ಯ ಬೆಳೆಯತ್ತಿದೆಯೆಂಬುದು ಗ್ರಹಿಸಸಾಧ್ಯವಿರುವ ಸಂಗತಿ. 1980 ರಲ್ಲಿ ಅಮೆರಿಕದ ಮತ ನೀಡಲು ಅರ್ಹರಾದ ಪೌರರಲ್ಲಿ ಕೇವಲ 53 ಪ್ರತಿಶತ ಜನರು ಮತ ನೀಡಿದರು. ಇದು ಪಂಕ್ತಿಯಾಗಿ ಮತದಾರರಲ್ಲಿ ಐದನೆಯ ಕೆಳಗಿಳಿತವೆಂದು ವರದಿಯಾಗಿದೆ. 1988 ರೊಳಗೆ ಮತದಾರರ ಸಂಖ್ಯೆ ಕೇವಲ 50 ಪ್ರತಿಶತಕ್ಕೆ ಕೆಳಗಿಳಿದಿತ್ತು.
ರಾಜಕಾರಣಿಗಳು ಈ ಸಮಸ್ಯೆಯನ್ನು ಒಪ್ಪುತ್ತಾರೆ. ಒಬ್ಬ ಪ್ರಸಿದ್ಧ ಲೋಕನಾಯಕರು ಒಪ್ಪಿಕೊಂಡದ್ದು: “ತುಂಬ ಕಪಟಾಚರಣೆ . . . ರಾಜಕೀಯ ಜೀವನದಲ್ಲಿದೆ.” ಇದಕ್ಕೆ ಕಾರಣವನ್ನು ವಿವರಿಸುತ್ತಾ ಅವರಂದದ್ದು: “ಸ್ಥಾನಕ್ಕೆ ಭರ್ತಿಯಾಗಲು ಮತ್ತು ಅದನ್ನು ಕಾಪಾಡಲು ಇದು ಅಗತ್ಯ” ಹೇಳಿದವರಾರು? ಅಮೆರಿಕದ ಮಾಜಿ ಅಧ್ಯಕ್ಷ, ರಿಚರ್ಡ್ ನಿಕ್ಸನ್. ಅವರ ಅಧ್ಯಕ್ಷ ಪದವಿಯ ಅವಧಿಯನ್ನು ಕಮ್ಮಿ ಮಾಡಿದ ಅಪನಿಂದೆಗಳ ವೀಕ್ಷಣದಲ್ಲಿ, ತಾನು ಹೇಳಿದ್ದರ ಅರ್ಥ ಅವರಿಗೆ ಚೆನ್ನಾಗಿ ತಿಳಿದದೆ ಎಂಬುದನ್ನು ಯಾರೂ ಸಂಶಯಿಸರು.
ರಾಜಕೀಯ ಕೊರತೆಗಳು, ಒಳ್ಳೆಯ ಸರಕಾರವು ಸಾಧ್ಯವೇ ಎಂದೂ ಪ್ರಾಮಾಣಿಕರು ಚಿಂತಿಸುವಂತೆ ಮಾಡುತ್ತವೆ. ಸರಕಾರವೇ ಇಲ್ಲದಿದ್ದರೆ ನಾವು ಇದಕ್ಕಿಂತ ಉತ್ತಮ ಸ್ಥಿತಿಯಲ್ಲಿರಲಿಕ್ಕಿಲ್ಲವೇ? ‘ಸರಕಾರದ ಇಲ್ಲಮೆ’ ಪ್ರಾಯಶಃ ಇದಕ್ಕಿರುವ ಉತ್ತರವೇ? (g90 8/8)
[ಪುಟ 5 ರಲ್ಲಿರುವ ಚೌಕ]
“ಉಚಿತಾಲೋಚನೆ ಇಲ್ಲದ ಕಡೆ ಪ್ರಜೆಯು ಬಿದ್ದು ಹೋಗುವದು.”—ಜ್ಞಾನೋಕ್ತಿ 11:14