ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು ಏಕೆ?
“ಎಚ್ಚರ!” ಪತ್ರಿಕೆ “ಮಾನವ ಆಳಿಕೆಯನ್ನು ತಕ್ಕಡಿಯಲ್ಲಿ ತೂಗಿ ನೋಡುವುದು” ಎಂಬ ಲೇಖನಮಾಲೆಯನ್ನು ಪ್ರಕಟಿಸಲು ಸಂತೋಷಿಸುತ್ತದೆ
ಸರಕಾರಗಳು—ನಮ್ಮ ಚರ್ಚೆಯನ್ನು ರಾಜಕೀಯಕ್ಕೆ ಸೀಮಿತವಾಗಿಡುವಲ್ಲಿ—ಲೋಕ ಚರಿತ್ರೆಯ ಮೇಲೆ ಮತ್ತು ವ್ಯಕ್ತಿಪರವಾಗಿ ನಮ್ಮೊಬ್ಬೊಬ್ಬರ ಮೇಲೆ ಬೀರಿರುವ ಪ್ರಭಾವವನ್ನು ಯಾರೂ ಅಲ್ಲಗಳೆಯರು. ನೀವು ಮಾತಾಡುವ ಭಾಷೆ, ನೀವು ಹಿಡಿದಿರುವ ಜೀವನ ಮಟ್ಟ, ಮಾಡುವ ಕೆಲಸ, ನೀವು ಅನುಭವಿಸುತ್ತಿರುವ ಸಾಮಾಜಿಕ ವ್ಯವಸ್ಥೆ, ಮತ್ತು ಒಂದು ವೇಳೆ, ನೀವು ಹಿಂಬಾಲಿಸುತ್ತಿರುವ ಧರ್ಮವು ಸಹ, ಕಡಮೆ ಪಕ್ಷ ಅಂಶಿಕವಾಗಿಯಾದರೂ ರಾಜಕೀಯ ಬದಲಾವಣೆಯ ಕಾರಣ ನಿಮಗೆ ಕೊಡಲ್ಪಟ್ಟಿರಬಹುದು.
ಸರಕಾರವು ಆವಶ್ಯಕವಾಗಿರುವುದರಿಂದ, ನಮ್ಮ ಆವಶ್ಯಕತೆಗಳನ್ನು ಸಾಧ್ಯವಿರುವಷ್ಟು ಮಟ್ಟಿಗೆ ಉತ್ತಮ ರೀತಿಯಲ್ಲಿ ತೃಪ್ತಿಪಡಿಸುವ ಸರಕಾರದಡಿಯಲ್ಲಿ ಜೀವಿಸಲು ಯಾರು ಮನಸ್ಸು ಮಾಡಲಿಕ್ಕಿಲ್ಲ? ಆದರೆ ಯಾವ ವಿಧದ ಸರಕಾರ ಅತ್ಯುತ್ತಮ? ಮತ್ತು ಆಳಿಕೆಯ ವಿಷಯದಲ್ಲಿ ನಮಗೆ ಯಾವ ಆಯ್ಕೆ ಮಾಡುವ ಸಂದರ್ಭವಿದೆಯೇ?
“ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು” ಎಂಬ ಒಂದು ಲೇಖನಮಾಲೆಯನ್ನು ಪ್ರಕಟಿಸಲು “ಎಚ್ಚರ!” ಸಂತೋಷಿಸುತ್ತದೆ. ಇವು ಈ ಪತ್ರಿಕೆಯ ಮುಂದಿನ ಸಂಚಿಕೆಗಳಲ್ಲಿ ಮುಂದುವರಿಯುವುವು. 1992ರ ಉಳಿದ ತಿಂಗಳುಗಳಲ್ಲಿ ಇದು ರಾಜ ಪ್ರಭುತ್ವ, ಶ್ರೀಮಂತರ ಪ್ರಭುತ್ವ, ಸ್ವಲ್ಪಜನಾಧಿಪತ್ಯ, ಮತ್ತು ಧನಿಕರ ಪ್ರಭುತ್ವಗಳ ಐತಿಹಾಸಿಕ ಹಿನ್ನೆಲೆಗಳನ್ನು ಪರೀಕ್ಷಿಸುವುದು. ಪ್ರಜಾಪ್ರಭುತ್ವದ ವಿಸ್ತಾರ ವರ್ಣಪಟಲದ ಹಿಂದೆಯೂ ಅನೇಕ ವಿಭಿನ್ನ ಗಣರಾಜ್ಯಗಳ ಹಿಂದೆಯೂ ಹೋಗಿ ನೋಡುವುದು. ಅದು ಸ್ವಯಂ ಪ್ರಭುತ್ವ, ನಿರಂಕುಶ ಪ್ರಭುತ್ವಗಳ ಮೇಲೆಯೂ, IIನೆಯ ಲೋಕಯುದ್ಧ ಕಾಲದ ಫ್ಯಾಸಿಸ್ಮ್ ಮತ್ತು ನಾಝೀವಾದಗಳ ಮೇಲೆಯೂ ರಂಗಬೆಳಕನ್ನು ಬೀರುವುದು. ಸಮಾಜವಾದ ಮತ್ತು ಸಮತಾವಾದಗಳೂ ಚರ್ಚಿಸಲ್ಪಡುವುವು.
ಮಾನವಾಳಿಕೆಯ ಗಹನತೆಗಳು ಅನೇಕ ಮತ್ತು ಜಟಿಲವಾಗಿರುವುದರಿಂದ ಸರಕಾರದ ಸಂಬಂಧದಲ್ಲಿ ತಿಳಿಯಲಿಕ್ಕಿರುವುದನ್ನೆಲ್ಲಾ ಪ್ರಕಟಿಸಲು ಸಾಧ್ಯವಿಲ್ಲ. ಈ ಲೇಖನಗಳನ್ನು ಅವು ರಾಜಕೀಯದ ಗ್ರಾಹಕ ಕೈಪಿಡಿಯಾಗುವಂತೆ ಪ್ರಕಟಿಸಿರುವುದಿಲ್ಲ. ಅವು ಸಾಮಾನ್ಯವಾದ ಮಾನವ ಸರಕಾರಗಳನ್ನಾಗಲಿ, ಒಂದು ನಿರ್ದಿಷ್ಟ ರೀತಿಯ ಸರಕಾರದ ಅಭಿರುಚಿಗಳನ್ನಾಗಲಿ ಅನುಮೋದಿಸವು ಯಾ ಸಮರ್ಥಿಸವು. ವಿವಿಧ ರೀತಿಯ ಸರಕಾರಗಳ ಮಧ್ಯೆ ಮಾಡುವ ತುಲನೆಯು ಒಂದನ್ನು ಇನ್ನೊಂದಕ್ಕಿಂತ ಹೆಚ್ಚಾಗಿ ಸಮರ್ಥಿಸುವ ಕಾರಣಕ್ಕಾಗಿರುವುದಿಲ್ಲ. ಎಚ್ಚರ! 5 ನೆಯ ಪುಟದಲ್ಲಿರುವ ತನ್ನ ಆದರ್ಶಕ್ಕೆ ಒತ್ತಾಗಿ ಅಂಟಿಕೊಳ್ಳುವುದು. ಅಲ್ಲಿ ನಾವು ಓದುವುದು: “ಅದು ಮೇಲ್ಮೈಯ ಅಡಿಭಾಗವನ್ನು ಪರೀಕ್ಷಿಸಿ ಪ್ರಚಲಿತ ಸಂಭವಗಳ ಹಿಂದಿರುವ ನಿಜ ಅರ್ಥವನ್ನು ತೋರಿಸುತ್ತದಾದರೂ, ಅದು ಸದಾ ರಾಜಕೀಯವಾಗಿ ತಟಸ್ಥವಾಗಿರುತ್ತದೆ.”
“ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು” ಎಂಬ ಲೇಖನಗಳು ಈ “ಮೇಲ್ಮೈಯ ಅಡಿಭಾಗದ” ಪರೀಕ್ಷೆಯ ಭಾಗವಾಗುವಂತೆ ರಚಿಸಲ್ಪಟ್ಟಿವೆ. ಅವು “ಪ್ರಚಲಿತ ಸಂಭವಗಳ ಹಿಂದಿರುವ ನಿಜ ಅರ್ಥವನ್ನು”, ಮಾನವಾಳಿಕೆಯು ಉತ್ಕಟ ಕಾಲಕ್ಕೆ ಮುಖ ಮಾಡಿ ನಿಂತಿವೆ ಎಂದು ಸೂಚಿಸುವ ಸಂಭವಗಳನ್ನು ತೋರಿಸುವುವು.
ದ ಕೊಲಂಬಿಯ ಹಿಸ್ಟರಿ ಆಫ್ ದ ವರ್ಲ್ಡ್ ಪುಸ್ತಕ ಈ ಉತ್ಕಟ ಕಾಲವನ್ನು ಈ ವಿಧದಲ್ಲಿ ವರ್ಣಿಸುತ್ತದೆ: “ಸರಕಾರ, ಧರ್ಮ, ನೈತಿಕತೆ, ಸಮಾಜ ಸಂಬಂಧ, ಭಾಷೆ, ಕಲೆಗಳು, ಮತ್ತು ಸಭ್ಯ ಜೀವಿತದ ಅಂತಿಮ ಆಧಾರವಾದ ಸಾರ್ವಜನಿಕ ನಿರೀಕ್ಷೆಯು, ಪ್ರಸ್ತುತ ಯುಗದ ಸಂಬಂಧದಲ್ಲಿ ಕಡಮೆ ಪಕ್ಷ ಒಂದು ಪರೀಕ್ಷಾರ್ಥಕ ತೀರ್ಮಾನವನ್ನಾದರೂ ರೂಪಿಸುವರೇ ಅನುಮತಿಸುತ್ತದೆ. ಸರಕಾರವು ಈ ಪಟ್ಟಿಯಲ್ಲಿ ಪ್ರಥಮ; ಪ್ರಾಮುಖ್ಯತೆಯಲ್ಲಿಯೂ ಪ್ರಥಮ. . . . ನಿಯಮಕ್ಕೆ, ಅದನ್ನು ಜಾರಿಗೆ ತರುವ ಸರಕಾರಕ್ಕೆ ಮತ್ತು ಇವೆರಡನ್ನು ಇನ್ನೂ ನಂಬುವ ಆಡಳಿತಗಾರರಿಗೆ ಕಡೆಗಣಿಕೆ [ಅಲ್ಲಿ] ಇದೆ. . . . ಈಗಿನ ಹೊರನೋಟ ಒಂದು ಶತಮಾನದ ಹಿಂದಿದ್ದ ಹೊರನೋಟಕ್ಕೆ ತೀರಾ ವ್ಯತಿರಿಕ್ತವಾಗಿದೆ. . . ಲೋಕದ ಅನೇಕ ಭಾಗಗಳಲ್ಲಿ ಒಂದು ಮಾತಿನ ಸಂಕೇತ ಕೊಡುವಲ್ಲಿ ನಗರಾಡಳಿತ ಭವನವನ್ನು ಹೊಕ್ಕಿ ಧ್ವಂಸ ಮಾಡಲು, ಸಾರ್ವಜನಿಕ ಸಭೆಯನ್ನು ಚೆದರಿಸಲು, ವಿಶ್ವವಿದ್ಯಾಲಯವನ್ನು ಪಾಳುಗೆಡವಲು, ಯಾ ರಾಯಭಾರಿ ಕಚೇರಿಯನ್ನು ಸಿಡಿಸಿ ನಾಶ ಮಾಡಲು ಸಿದ್ಧವಾಗಿರುವ ಶಕಿಗ್ತಳಿವೆ. . . . ಪೂರ್ತಿ ಸ್ವಾತಂತ್ರ್ಯಕ್ಕಿರುವ ಉದ್ರೇಕವು ವಿಷಮಯವಾಗಿದೆ. . . . ಸಂಕ್ಷೇಪವಾಗಿ ಹೇಳುವುದಾದರೆ, ಅದು ಯಾವ ಹಳೆಯ ತತ್ವಜ್ಞಾನದ ವೇಷವನ್ನೇ ಹಾಕಿರಲಿ, ಈ ಸಮಯಗಳ ಒಂದು ರಾಜಕೀಯ ಮತ್ತು ಸಾಮಾಜಿಕ ಆದರ್ಶ ಧ್ಯೇಯವು, ಒಂದು ಪ್ರೇರಕ ಶಕ್ತಿಯು ಪ್ರತ್ಯೇಕತಾವಾದವಾಗಿದೆ. ಇದು ಮುರಿದು ಬೀಳುವಿಕೆಯಲ್ಲದಿದ್ದರೇ ಅಲ್ಲಗಳೆಯಲಾಗದ ಶಿಥಿಲತೆಯಾದರೂ ಆಗಿದೆ.”
ಈ “ಶಿಥಿಲತೆ” ಬೇಗನೆ “ಮುರಿದು ಬೀಳುವಿಕೆ” ಗೆ ನಡಿಸೀತೆ, ಮತ್ತು ಇದು ಹೌದಾದರೆ, ನಾವು ಜೀವಿಸುತ್ತಿರುವ ಲೋಕಕ್ಕೆ ಇದರ ಪರಿಣಾಮವೇನಾಗಿದ್ದೀತು? ಸತ್ಯವಾಗಿಯೂ, ಮಾನವಾಳಿಕೆ ನ್ಯಾಯ ವಿಚಾರಣೆಗೊಳಗಾಗಿದೆ, ಆದರೆ ಸಾವಿರಾರು ವರ್ಷಗಳಿಂದ ತಮ್ಮ ಸರಕಾರಗಳ್ನು ತೂಗಿ ನೋಡುತ್ತಾ ಅವುಗಳಲ್ಲಿ ಕೊರತೆಯಿದೆ ಎಂದು ಪದೇ ಪದೇ ಕಂಡು ಹಿಡಿದಿರುವ ಮಾನವರಿಂದ ಮಾತ್ರವಲ್ಲ. ಈ ಬಾರಿ, ವಿಶ್ವದ ಸೃಷ್ಟಿಕರ್ತನು ತಾನೇ ಲೆಕ್ಕ ಕೇಳುತ್ತಿದ್ದಾನೆ. ಶತಮಾನಗಳ ಮಾನವಾಳಿಕೆಯ ದಾಖಲೆಯು ಅದು ಆಳುತ್ತಾ ಮುಂದುವರಿಯಲು ಅರ್ಹತೆಯುಳ್ಳದ್ದೆಂದು ತೋರಿಸುತ್ತದೆಯೇ? ಇಲ್ಲವೆ, ದೈವಿಕ ನ್ಯಾಯತಕ್ಕಡಿಯಲ್ಲಿ ಅದರ ತೂಗಿ ನೋಡುವಿಕೆಯು ಅದು ತೊಲಗಿಸಲ್ಪಡಬೇಕೆಂದು ತೋರಿಸುತ್ತದೋ? ಇದು ಹೌದಾದರೆ, ಅದರ ಸ್ಥಾನವನ್ನು ಇನ್ನಾವುದು ಭರ್ತಿ ಮಾಡಬೇಕು?
“ಮಾನವ ಆಳಿಕೆಯನ್ನು ತಕ್ಕಡಿಯಲ್ಲಿ ತೂಗಿ ನೋಡುವುದು” ಎಂಬ ಲೇಖನಮಾಲೆ ಸರಕಾರದ ಸಂಬಂಧದಲ್ಲಿ ನಿಮ್ಮ ಜ್ಞಾನವನ್ನು ವರ್ಧಿಸುವುದು. ಮತ್ತು ಆಶಾವಾದಿಗಳಾಗಿರಲು ನಿಮಗೆ ಸಕಲ ಕಾರಣಗಳೂ ಇರುವುದರಿಂದ ಅದು ನಿಮ್ಮನ್ನು ನಿರೀಕ್ಷಾಭರಿತರಾಗಿ ಮಾಡುವುದು. ಹೆಚ್ಚು ಉತ್ತಮವಾದ ಸರಕಾರವೊಂದು ಬರುತ್ತಾ ಇದೆ. ಮತ್ತು ಎಲ್ಲಕ್ಕೂ ಮಿಗಿಲಾಗಿ, ಅದನ್ನು ಅನುಭವಿಸುವರೇ ನೀವು ಜೀವಿಸಬಲ್ಲಿರಿ! (g90 8/8)
[ಪುಟ 0 ರಲ್ಲಿರುವ ಚಿತ್ರಗಳು]
ಮಾನವಾಳಿಕೆಯ ದಾಖಲೆಯನ್ನು ದೈವಿಕ ನ್ಯಾಯದ ತಕ್ಕಡಿಯಲ್ಲಿ ತೂಗುವಾಗ, ದೇವರ ತೀರ್ಪು ಸಮ್ಮತಿಸೂಚಕವಾಗಿದ್ದೀತೇ?
[ಕೃಪೆ]
WHO photo/PAHO by J. Vizcarra