ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ಭಾಗ 1 ಕಪ್ಪುಷರ್ಟುಗಳು ಮತ್ತು ಸ್ವಸ್ತಿಕಗಳು
ಫ್ಯಾಸಿಸ್ಟ್ ತತ್ವ: ಸರಕಾರದಿಂದ ಆರ್ಥಿಕ ಆಡಳಿತ ನಿಯಂತ್ರಣ, ಸಾಮಾಜಿಕ ಪಡೆಗೂಡಿಸುವಿಕೆ,ಮತ್ತು ಕದನನಿರತ ರಾಷ್ಟ್ರೀಯತೆಯ ಭಾವನೆಯಿಂದ ಗುರುತಿಸಲ್ಪಡುವ ಸರ್ವಾಧಿಕಾರದ ಸರಕಾರ. ನಾಜೀ ತತ್ವ: ಹಿಟ್ಲರನ ಕೆಳಗೆ ನ್ಯಾಷನಲ್ ಸೋಶಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ ಆಚರಿಸುತ್ತಿದ್ದ ಫ್ಯಾಸಿಸ್ಟ್ ವಾದ.
“ಫ್ಯಾಸಿಸ್ಮ್” ಎಂಬ ಪದ ಸಾಮಾನ್ಯವಾಗಿ ಕಪ್ಪುಷರ್ಟಿನ ಇಟ್ಯಾಲಿಯನ್ ಮಿಲಿಟರಿ ತಂಡಗಳು ಮತ್ತು ಸ್ವಸ್ತಿಕದ ಗುರುತಿರುವ ಕಂದು ಪೋಷಾಕಿನ ಜರ್ಮನ್ ಧಕ್ಕೆ ದಳದ ಚಿತ್ರವನ್ನು ಎದುರಿಗೆ ತರುತ್ತದೆ. ಆದರೆ ಈ ಫ್ಯಾಸಿಸ್ಮ್ನ ಅನುಭವಗಳು ಇತರ ದೇಶಗಳವರಿಗೂ ಆಗಿದೆ.
ಈ ಫಾಸಿಸ್ಟ್ ವಾದ, 1930ಗಳಲ್ಲಿ ಹಂಗೆರಿ, ರೊಮೇನಿಯ, ಮತ್ತು ಜಪಾನಿನಲ್ಲಿ ಪ್ರಖ್ಯಾತಿಗೆ ಬಂತು. ಸ್ಪ್ಯಾನಿಷ್ ಸಿವಿಲ್ ಯುದ್ಧ ಸಮಯದಲ್ಲಿ ಕೊಡಲ್ಪಟ್ಟ ಫ್ಯಾಸಿಸ್ಟ್ ಬೆಂಬಲ, ಫ್ರಾನ್ಸಿಸ್ಕೊ ಫ್ರ್ಯಾಂಕೊ ಅಧಿಕಾರ ವಹಿಸುವಂತೆ ನೆರವು ನೀಡಿತು. ಆದರೆ ಹೆಚ್ಚಿನ ಇತಿಹಾಸಗಾರರು, ಫ್ರಾಂಕೊ ಸರ್ವಾಧಿಕಾರ (1939-75) ಶುದ್ಧ ಫ್ಯಾಸಿಸ್ಟ್ ಪ್ರಕೃತಿಯದ್ದಾಗಿತ್ತೆಂದು ವೀಕ್ಷಿಸುವುದಿಲ್ಲ. ಆದರೆ ವಾನ್ ಡಿ. ಪೆರೊನ್ (1943-55) ಸ್ಥಾಪಿಸಿದ ಆರ್ಜೆಂಟೀನ ಸರ್ವಾಧಿಕಾರ ಫ್ಯಾಸಿಸ್ಟ್ ತತ್ವದ್ದಾಗಿತ್ತು.
ಸರಕಾರವನ್ನು ಆರಾಧಿಸುವುದು
“ಫ್ಯಾಸಿಸ್ಮ್” ಎಂಬ ಪದ ಫ್ಯಾಸಿಯೊ ಎಂಬ ರೋಮನ್ ಪದದಿಂದ ಬಂದಿದ್ದು ಹಳೆಯ ರೋಮನ್ ಅಧಿಕಾರ ಚಿಹ್ನೆಯನ್ನು ಸೂಚಿಸುತ್ತದೆ. ಲ್ಯಾಟಿನ್ನಲ್ಲಿ ಫ್ಯಾಸೀಸ್ ಎಂದು ಕರೆಯಲಾದ ಇದರಲ್ಲಿ ದಂಡಗಳ ಒಂದು ಕಟ್ಟಿನಲ್ಲಿ ಕೊಡಲಿಯ ಹೊರಚಾಚಿರುವ ಅಲಗು ಇತ್ತು. ಸರಕಾರದ ಪರಮಾಧಿಕಾರದ ಕೆಳಗೆ ಜನರ ಏಕತೆಯ ಯೋಗ್ಯವಾದ ಚಿಹ್ನೆ ಇದಾಗಿತ್ತು.
ಫ್ಯಾಸಿಸ್ಮ್ನ ಮೂಲದಲ್ಲಿ ಕೆಲವು ಬೇರುಗಳು ನಿಕೊಲೊ ಮಾಕೀಅವೆಲೀ ಎಂಬವನ ಕಾಲಕ್ಕೆ ಹಿಂದೆ ಹೋಗುತ್ತದಾದರೂ, 1919ರಲ್ಲಿ ಮಾತ್ರ, ಯಾ ಆ ವ್ಯಕ್ತಿ ಹುಟ್ಟಿ 450 ವರ್ಷಗಳ ತರುವಾಯ ಬೆನಿಟೊ ಮೂಸೊಲೀನಿ ಪ್ರಥಮ ಬಾರಿ ಈ ಪದವನ್ನು ಉಪಯೋಗಿಸಿದನು. ಮಾಕೀಅವೆಲೀ ವಾದಿಸಿದ್ದೇನಂದರೆ, ತನ್ನ ಕಾಲದಲ್ಲಿದ್ದ ರಾಜಕೀಯ ಭ್ರಷ್ಟಾಚಾರವನ್ನು ಮರುಕವಿಲ್ಲದಿದ್ದರೂ ವಿವೇಕಯುತವಾಗಿ ಅಧಿಕಾರವನ್ನು ಉಪಯೋಗಿಸುವ ಸರ್ವಾಧಿಕಾರಿ ಮಾತ್ರ ಜಯಿಸಬಲ್ಲನು.
ಒಂದು ಫ್ಯಾಸಿಸ್ಟ್ ಸರಕಾರ ಕಾರ್ಯಸಾಧಕವಾಗಬೇಕಾದರೆ ಅದಕ್ಕೂ ಇಂಥ ಬಲಾಢ್ಯ, ಸಮಯಾನುವರ್ತಿ, ಮತ್ತು ಮೋಹಕ ನಾಯಕನು ಅಗತ್ಯ. ಯೋಗ್ಯವಾಗಿಯೆ, ಮೂಸೊಲೀನಿ ಮತ್ತು ಹಿಟ್ಲರ್ ಇವರಿಬ್ಬರೂ ಕೇವಲ “ನಾಯಕ”—ಈಲ್ ಡೂಚೆ ಮತ್ತು ಡರ್ ಫ್ಯೂರರ್—ಎಂದು ಕರೆಯಲ್ಪಟ್ಟರು.
ಫ್ಯಾಸಿಸ್ಮ್ ತತ್ವ ಸರಕಾರವನ್ನು ಧಾರ್ಮಿಕ ಮತ್ತು ಪೌರ ಅಧಿಕಾರಕ್ಕಿಂತ ಮೇಲೆ ಇಡುತ್ತದೆ. 16ನೆಯ ಶತಕದ ಫ್ರೆಂಚ್ ನ್ಯಾಯಶಾಸ್ತ್ರಜ್ಞ ಶಾನ್ ಬೋಡಿನ್, 17ನೆಯ ಶತಕದ ಇಂಗ್ಲಿಷ್ ತತ್ವಜ್ಞಾನಿ ಥಾಮಸ್ ಹಾಬ್ಸ್, 18ನೆಯ ಮತ್ತು 19ನೆಯ ಶತಮಾನಗಳ ಜರ್ಮನ್ ತತ್ವಜ್ಞಾನಿಗಳಾದ ಜೋಹಾನ್ ಗಾಟ್ಲಿಬ್ ಫಿಕ್ಟ, ಜಾರ್ಜ್ ವಿಲ್ಹೆಲ್ಮ್ ಫ್ರೀಡ್ರಿಕ್ ಹೇಗಲ್, ಹೈನ್ರಿಕ್ ವಾನ್ ಟ್ರೈಚ್ಕ—ಇವರೆಲ್ಲರೂ ಸರಕಾರವನ್ನು ಕೊಂಡಾಡಿದರು. ಸರಕಾರ ಪರಮಾಧಿಕಾರದ ಸ್ಥಾನದಲ್ಲಿದೆ ಮತ್ತು ಒಬ್ಬ ವ್ಯಕ್ತಿಯ ಪರಮ ಕರ್ತವ್ಯವು ಅದರ ಕರ್ತವ್ಯನಿಷ್ಠ ಬೆಂಬಲಿಗನಾಗುವುದೇ ಎಂದು ಹೇಗಲ್ ಕಲಿಸಿದನು.
ಅವರ ಪ್ರಕೃತಿನುಸಾರವಾಗಿ, ಸಕಲ ಸರಕಾರಗಳು ಅಧಿಕಾರವನ್ನು ನಿರ್ವಹಿಸಲೇಬೇಕು. ಆದರೆ ಫ್ಯಾಸಿಸ್ಟ್ ಸರಕಾರಗಳು ಕುರುಡು ವಿಧೇಯತೆಯನ್ನು ಅವಶ್ಯಪಟ್ಟು, ಅದನ್ನು ವಿಪರೀತವಾಗಿ ನಿರ್ವಹಿಸುವಂತೆ ರಚಿಸಲ್ಪಟ್ಟಿವೆ. ಮನುಷ್ಯರನ್ನು ಹೆಚ್ಚುಕಡಮೆ ಸರಕಾರದ ಗುಲಾಮರಂತೆ ಕಂಡು, ಟ್ರೈಚ್ಕ ಹೇಳಿದ್ದು: “ವಿಧೇಯತೆ ತೋರಿಸಿದರೆ ಸಾಕು, ನಿಮ್ಮ ಯೋಚನೆ ಏನಿದ್ದರೂ ಪರವಾಯಿಲ್ಲ.” ಇದಕ್ಕನುಗುಣವಾಗಿ, ಫ್ಯಾಸಿಸ್ಟ್ ತತ್ವ, ಫ್ರೆಂಚ್ ವಿಪ್ಲವದ ಸಮಯ ಕೇಳಿಬಂದ “ಸ್ವಾತಂತ್ರ್ಯ, ಸಮಾನತೆ, ಸೌದರ್ಯ” ಎಂಬ ಕೂಗನ್ನು ಇಟ್ಯಾಲಿಯನ್ ಧ್ಯೇಯಮಂತ್ರವಾದ “ನಂಬಿಕೆ, ವಿಧೇಯತೆ, ಹೋರಾಟ”ದಿಂದ ಸ್ಥಾನಭರ್ತಿ ಮಾಡಿತು.
ಫ್ಯಾಸಿಸ್ಮ್ ಯುದ್ಧವನ್ನು ಘನತೆಗೇರಿಸುತ್ತದೆ
ಹೋರಾಡುವುದೆ? ಹೌದು, “ಯುದ್ಧ ಮಾತ್ರ ಸಕಲ ಮಾನವ ಶಕ್ತಿಯನ್ನು ಅದರ ಅತ್ಯುನ್ನತ ಬಿಗಿತಕ್ಕೆ ತಂದು ಅದನ್ನು ಸಂಧಿಸುವ ಧೈರ್ಯವುಳ್ಳ ಜನರಿಗೆ ಘನತೆಯ ಅಚ್ಚನ್ನೊತ್ತುತ್ತದೆ” ಎಂದು ಮೂಸೊಲೀನಿ ಒಮ್ಮೆ ಹೇಳಿ ಬಳಿಕ ಮುಂದುವರಿಸಿದ್ದು: “ಸ್ತ್ರೀಗೆ ತಾಯ್ತನ ಹೇಗೋ ಹಾಗೆಯೇ ಮನುಷ್ಯನಿಗೆ ಯುದ್ಧ.” ಅವನು ಶಾಶ್ವತ ಶಾಂತಿಯನ್ನು, “ಎದೆಗುಂದಿಸುವಂಥದು ಮತ್ತು ಮನುಷ್ಯನ ಸಕಲ ಮೂಲಗುಣಗಳ ನಕಾರ”ವೆಂದು ಕರೆದನು. ಈ ಮಾತುಗಳನ್ನು ನುಡಿದಾಗ ಮೂಸೊಲೀನಿ, ಯುದ್ಧ ಒಂದು ಆವಶ್ಯಕ ವಸ್ತು ಮತ್ತು ಅದನ್ನು ಲೋಕದಿಂದ ಹೋಗಲಾಡಿಸುವುದು ಪರಮ ಅನೈತಿಕತೆಯಲ್ಲದೆ “ಮಾನವಾತ್ಮದ ಅನೇಕ ಆವಶ್ಯಕ ಹಾಗೂ ಪರಮೋದಾತ್ತ ಶಕ್ತಿಗಳ ಸವೆತವನ್ನೂ ಒಳಗೊಳ್ಳುವುದು” ಎಂದು ಟ್ರೈಚ್ಕ ಹೇಳಿದ ಮಾತುಗಳನ್ನು ಪ್ರತಿಬಿಂಬಿಸಿದನು.
ಯುದ್ಧ ಮತ್ತು ಸರ್ವಾಧಿಕಾರದ ಈ ಹಿನ್ನೆಲೆಯಲ್ಲಿ, ಅನೇಕ ಇತಿಹಾಸಗಾರರು ಆಧುನಿಕ ಫ್ಯಾಸಿಸ್ಟ್ ತತ್ವದ ಆರಂಭವನ್ನು ಫ್ರಾನ್ಸಿನ ನೆಪೋಲಿಯನನಲ್ಲಿ ಪತ್ತೆಹಚ್ಚುತ್ತಾರೆಂದು ತಿಳಿಯವುದು ನಮಗೆ ಆಶ್ಚರ್ಯವನ್ನುಂಟುಮಾಡಲಿಕ್ಕಿಲ್ಲ. 1800ಗಳ ಆದಿಭಾಗದಲ್ಲಿ ಸರ್ವಾಧಿಕಾರಿಯಾಗಿದ್ದ ಇವನು ತಾನೇ ಫ್ಯಾಸಿಸ್ಟನಾಗಿರಲಿಲ್ಲವೆಂಬುದು ಒಪ್ಪಿಕೊಳ್ಳಬೇಕಾದ ವಿಷಯ. ಆದರೂ ಅವನ ಗುಪ್ತ ಪೊಲೀಸ್ ವ್ಯವಸ್ಥೆ ಮತ್ತು ಪ್ರಚಾರ ಕಾರ್ಯದ ನಿಪುಣ ಉಪಯೋಗ ಮತ್ತು ವಾರ್ತಾಪತ್ರಗಳನ್ನು ನಿಯಂತ್ರಿಸಲು ದೋಷ ವಿಮರ್ಶನಾಧಿಕಾರ—ಇಂಥ ಅನೇಕ ಕಾರ್ಯನೀತಿಗಳನ್ನು ಫ್ಯಾಸಿಸ್ಟರು ಆ ಬಳಿಕ ಆಯ್ದುಕೊಂಡರು. ಮತ್ತು ಫ್ರಾನ್ಸಿನ ಘನತೆಯನ್ನು ಪುನಃಸ್ಥಾಪಿಸಲು ಅವನಿಗಿದ್ದ ದೃಢತೆ, ಫ್ಯಾಸಿಸ್ಟ್ ನಾಯಕರು ಪ್ರಸಿದ್ಧವಾಗಿರುವ ರಾಷ್ಟ್ರೀಯ ದೊಡ್ಡತನದ ಭ್ರಾಂತಿಯ ಪ್ರತೀಕವಾಗಿದೆ.
ಇಟೆಲಿಯ ಫ್ಯಾಸಿಸ್ಟರು 1922ರೊಳಗೆ ಮೂಸೊಲೀನಿಯನ್ನು ಪ್ರಧಾನ ಮಂತ್ರಿಯಾಗಿ ಮಾಡುವಷ್ಟು ಬಲಿಷ್ಠರಾದರು. ಈ ಸ್ಥಾನವನ್ನು ಅವನು ಒಡನೆ ತನ್ನನ್ನು ಸರ್ವಾಧಿಕಾರಿಯಾಗುವಂತೆ ಮಾಡಿಕೊಳ್ಳಲು ಮೆಟ್ಟುಗಲ್ಲಾಗಿ ಉಪಯೋಗಿಸಿದನು. ಸಂಬಳ, ಕೆಲಸದ ತಾಸುಗಳು ಮತ್ತು ಉತ್ಪಾದನೆಯ ಗುರಿಗಳ ಸಂಬಂಧದಲ್ಲಿ ಖಾಸಗಿ ಉದ್ಯಮಗಳು ಸರಕಾರದ ಕಟ್ಟುನಿಟ್ಟಾದ ನಿಯಂತ್ರಣಕ್ಕೆ ಗುರಿಯಾದವು. ವಾಸ್ತವವೇನಂದರೆ, ಖಾಸಗಿ ಉದ್ಯಮಗಳು ಸರಕಾರದ ಹಿತಕ್ಕಾಗಿ ಕೆಲಸಮಾಡುವಷ್ಟರ ಮಟ್ಟಿಗೆ ಮಾತ್ರ ಉತ್ತೇಜಿಸಲ್ಪಟ್ಟವು. ಫ್ಯಾಸಿಸ್ಟ್ ಪಕ್ಷವನ್ನು ಬಿಟ್ಟು ಉಳಿದ ರಾಜಕೀಯ ಪಕ್ಷಗಳು ಬಹಿಷ್ಕೃತವಾದುವು. ಕಾರ್ಮಿಕ ಸಂಘಗಳು ನಿಷೇಧಿಸಲ್ಪಟ್ಟವು. ಸರಕಾರ ವಾರ್ತಾ ಮಾಧ್ಯಮಗಳನ್ನು ನಿಪುಣತೆಯಿಂದ ನಿಯಂತ್ರಿಸಿ, ವಿರೋಧಿಗಳನ್ನು ದೋಷ ವಿಮರ್ಶನಾಧಿಕಾರದ ಮೂಲಕ ಮೌನಗೊಳಿಸಿತು. ಯುವಜನರನ್ನು ತನ್ನ ತತ್ವಕ್ಕೆ ಒಳಪಡಿಸುವ ವಿಚಾರಕ್ಕೆ ವಿಶೇಷ ಗಮನ ನೀಡಲಾಯಿತು, ಮತ್ತು ವ್ಯಕ್ತಿಪರ ಸ್ವಾತಂತ್ರ್ಯ ಗುರುತರವಾಗಿ ಕತ್ತರಿಸಲ್ಪಟ್ಟಿತು.
ಜರ್ಮನ್ ಶೈಲಿಯ ಫ್ಯಾಸಿಸ್ಮ್
ಎ. ಕ್ಯಾಸೆಲ್ಸ್ ಬರೆದ ಫ್ಯಾಸಿಸ್ಮ್ ಪುಸ್ತಕ ಹೇಳುವುದು: “ಅಧಿಕಾರಕ್ಕೆ ಬಂದ ಪಥಗಳಲ್ಲಿ ಕಾಕತಾಳೀಯತೆಯಿದ್ದರೂ ಇಟ್ಯಾಲಿಯನ್ ಫ್ಯಾಸಿಸ್ಮ್ ಮತ್ತು ಜರ್ಮನ್ ನಾಜೀ ತತ್ವಗಳು ಮನೋಪ್ರಕೃತಿ ಮತ್ತು ಭಾವೀ ದೂರದೃಷ್ಟಿಯಲ್ಲಿ ಸ್ಪಷ್ಟವಾಗಿಗಿ ಭಿನ್ನವಾಗಿದ್ದವು.”
ಫ್ಯಾಸಿಸ್ಟ್ ವಿಚಾರಗಳ ಅಗ್ರಗಾಮಿಗಳಾಗಿ ಸೇವೆ ಮಾಡಿದ ಈ ಮೊದಲು ಹೇಳಿರುವ ಜರ್ಮನ್ ತತ್ವಜ್ಞಾನಿಗಳನ್ನು ಬಿಟ್ಟು, 19ನೆಯ ಶತಕದ ಜರ್ಮನ್ ತತ್ವಜ್ಞಾನಿ ಫ್ರೀಡ್ರಿಕ್ ನೀಟ್ಟನಂಥ ಇತರರು ಜರ್ಮನರಿಗೆ ಅದ್ವಿತೀಯವಾದ ಒಂದು ಫ್ಯಾಸಿಸ್ಮನ್ನು ಸೃಷ್ಟಿಸಲು ಸಹಾಯ ಮಾಡಿದರು. ಈ ನೀಟ್ಚ ಫ್ಯಾಸಿಸ್ಟನಾಗಿದ್ದನೆಂದಲ್ಲ, ಆದರೆ ಅವನು ಆಳುವ ಗಣ್ಯವರ್ಗವೊಂದಕ್ಕೆ, ಲೋಕಾತೀತ ಪುರುಷರ ಒಂದು ಕುಲಕ್ಕೆ ಕರೆ ಕೊಟ್ಟನು. ಆದರೆ ಹಾಗೆ ಕರೆ ಕೊಟ್ಟಾಗ ಅವನ ಮನಸ್ಸಿನಲ್ಲಿ ಯಾವ ಕುಲವಾಗಲಿ ರಾಷ್ಟ್ರವಾಗಲಿ ಇರಲಿಲ್ಲ. ಅವನಿಗೆ ವಿಶೇಷ ಇಷ್ಟವಿಲ್ಲದಿದ್ದ ಜರ್ಮನ್ ಕುಲವಂತೂ ಅವನ ಮನಸ್ಸಿನಲ್ಲಿ ಇರಲಿಲ್ಲ. ಆದರೆ ಅವನ ಕೆಲವು ವಿಚಾರಗಳು ನ್ಯಾಷನಲ್ ಸೋಶಲಿಸ್ಟ್ ಸೂತ್ರವಾದಿಗಳು ಜರ್ಮನಾ ಆದರ್ಶವೆಂದು ಎಣಿಸಿದ್ದಕ್ಕೆ ಹತ್ತಿರವಾಗಿತ್ತು. ಹೀಗೆ, ಈ ವಿಚಾರಗಳನ್ನು ಅವರು ಬಳಸಿಕೊಂಡು, ನಾಜೀ ತತ್ವದೊಂದಿಗೆ ಸಮ್ಮತಿಸದ ವಿಚಾರಗಳನ್ನು ಹೊರದೊಬ್ಬಿದರು.
ಹಿಟ್ಲರನು ಜರ್ಮನ್ ಸಂಗೀತ ರಚನಕಾರ ರಿಚರ್ಡ್ ವಾಗ್ನರ್ ಎಂಬವನಿಂದಲೂ ಬಲವಾಗಿ ಪ್ರಭಾವಿತನಾದನು. ವಿಪರೀತ ರಾಷ್ಟ್ರೀಯವಾದಿಯೂ ಸ್ವದೇಶಾಭಿಮಾನಿಯೂ ಆದ ವಾಗ್ನರ್, ಜರ್ಮನಿಯು ಲೋಕದಲ್ಲಿ ಒಂದು ಮಹಾ ಧ್ಯೇಯವನ್ನು ಸಾಧಿಸುವ ವಿಧಿಯುಳ್ಳದ್ದಾಗಿದೆ ಎಂದು ವೀಕ್ಷಿಸಿದನು. ಎನ್ಸೈಕ್ಲೊಪೀಡಿಯ ಆಫ್ ದ ಥರ್ಡ್ ರೈಕ್ ಹೇಳುವುದು: “ಹಿಟ್ಲರ್ ಮತ್ತು ನಾಜೀ ಸೂತ್ರವಾದಿಗಳಿಗೆ ವಾಗ್ನರ್ ಪರಿಪೂರ್ಣ ವೀರನಾಯಕ.” ಅದು ವಿವರಿಸುವುದು: “ಈ ರಚನಕಾರ ಜರ್ಮನಿಯ ದೊಡ್ಡತನವನ್ನು ಸಾರವಾಗಿ ನಿರೂಪಿಸಿದನು. ಹಿಟ್ಲರನ ದೃಷ್ಟಿಯಲ್ಲಿ ವಾಗ್ನರನ ಸಂಗೀತ ಜರ್ಮನ್ ರಾಷ್ಟ್ರೀಯತೆಯನ್ನು ಸಮರ್ಥಿಸಿತು.”
ಗ್ರಂಥಕರ್ತ ವಿಲ್ಯಮ್ ಎಲ್. ಷೈರರ್ ಹೇಳುವುದು: “ಅವನ (ವಾಗ್ನರನ) ರಾಜಕೀಯ ಬರಹಗಳಲ್ಲ, ಬದಲಿಗೆ ವೀರ ಕಲ್ಪನಾಕಥೆ, ಹೋರಾಡುವ ವಿಧರ್ಮಿ ದೇವತೆಗಳು ಮತ್ತು ವೀರರು, ದೆವ್ವ ಮತ್ತು ಡ್ರೇಗನ್ಗಳು, ರಕ್ತ ಕಲಹಗಳು, ಪ್ರಾಚೀನ ಕುಲಸಂಬಂಧದ ನ್ಯಾಯಸೂತ್ರಗಳು, ಅದರ ವಿಧಿ, ಪ್ರೀತಿ ಮತ್ತು ಜೀವದ ತೇಜಸ್ಸು ಮತ್ತು ಮರಣದ ಘನತೆ—ಇವುಗಳನ್ನು ವ್ಯಕ್ತವಾಗಿ ನೆನಪಿಸುವ ಅವನ ಅತ್ಯುಚ್ಛ ಸಂಗೀತ ನಾಟಕಗಳು ಆಧುನಿಕ ಜರ್ಮನಿಯ ಕಾಲ್ಪನಿಕ ಕಥೆಗಳನ್ನು ಪ್ರೇರಿಸಿ ಅದಕ್ಕೆ ಜರ್ಮನಿಯ ಲೋಕನೋಟವನ್ನು ಕೊಟ್ಟಿತು. ಇದನ್ನು ಹಿಟ್ಲರ್ ಮತ್ತು ನಾಜೀಗಳು, ತುಸು ಸಮರ್ಥನೆಯಿಂದ ತಮ್ಮದಾಗಿ ಮಾಡಿಕೊಂಡರು.”
ನೀಟ್ಚ ಮತ್ತು ವಾಗ್ನರ್ ಇವರಿಬ್ಬರ ವಿಚಾರಗಳು ಯಾರು 1853 ಮತ್ತು 1855ರ ಮಧ್ಯೆ ಮಾನವ ಕುಲಗಳ ಅಸಮಾನತೆಯ ಮೇಲೆ ಪ್ರಬಂಧವನ್ನು ಬರೆದನೊ ಆ ಫ್ರೆಂಚ್ ರಾಯಭಾರ ನಿರ್ವಾಹಕ ಮತ್ತು ಮಾನವ ಕುಲ ಶಾಸ್ತ್ರಜ್ಞ ಕೌಂಟ್ ಜೋಸೆಫ್ ಆರ್ಥರ್ ಡಿ ಗೊಬಿನೊ ಎಂಬವನಿಂದ ರೂಪಿಸಲ್ಪಟ್ಟಿತ್ತು. ಕುಲಸಂಬಂಧದ ಸಂಯೋಜನೆ ನಾಗರಿಕತೆಗಳ ಅದೃಷವ್ಟನ್ನು ನಿರ್ಣಯಿಸುತ್ತದೆ ಎಂದು ಅವನು ವಾದಿಸಿದನು. ಆರ್ಯ ಸಮಾಜಗಳ ವಂಶೀಯ ಲಕ್ಷಣಗಳನ್ನು ಸಾರಗುಂದಿಸುವುದು ಅಂತಿಮವಾಗಿ ಅವುಗಳ ಪತನಕ್ಕೆ ನಡಿಸುವುವೆಂದು ಅವನು ಎಚ್ಚರಿಸಿದನು.
ಈ ವಿಚಾರಗಳಿಂದ ಎದ್ದುಬಂದ ವಂಶೀಯತೆ ಮತ್ತು ಸಿಮೆಟಿಕ್ ವಂಶವಿರೋಧ ವಾದಗಳು ಜರ್ಮನ್ ಶೈಲಿಯ ಫ್ಯಾಸಿಸ್ಮ್ನ ಲಕ್ಷಣಗಳಾಗಿದ್ದವು. ಈ ಎರಡು ಕಾರ್ಯನೀತಿಗಳು ಇಟೆಲಿಯಲ್ಲಿ ಕಡಮೆ ವೈಶಿಷ್ಟ್ಯದ್ದಾಗಿದ್ದವು. ವಾಸ್ತವದಲ್ಲಿ, ಇಟೆಲಿಯಲ್ಲಿ ಸಿಮೆಟಿಕ್ ವಂಶವಿರೋಧದ ತೋರಿಬರುವಿಕೆಯು ಫ್ಯಾಸಿಸ್ಮಿನ ಹಿಂದೆ ಮೂಸೊಲೀನಿಯ ಬದಲು ಹಿಟ್ಲರನು ಪ್ರಬಲ ಶಕ್ತಿಯಾಗುತ್ತಿದ್ದಾನೆಂದು ಸೂಚಿಸುತ್ತದೆಂದು ಅನೇಕ ಇಟ್ಯಾಲಿಯನರು ಎಣಿಸಿದರು. ಹೌದು, ಸಮಯ ಕಳೆದಂತೆ, ಇಟ್ಯಾಲಿಯನ್ ಫ್ಯಾಸಿಸ್ಮ್ನ ಕಾರ್ಯನೀತಿಗಳ ಮೇಲೆ ಹಿಟ್ಲರನ ಪ್ರಭಾವ ಬೆಳೆಯಿತು.
ರಾಷ್ಟ್ರೀಯ ದೊಡ್ಡತನವನ್ನು ಪಡೆಯುವುದರಲ್ಲಿ, ಇಟೆಲಿಯ ಮತ್ತು ಜರ್ಮನಿಯ ಫ್ಯಾಸಿಸ್ಮ್ಗಳು ವಿರುದ್ಧಾಭಿಮುಖವಾಗಿ ನೋಡಿದವು. “ಮೂಸೊಲೀನಿ ತನ್ನ ದೇಶದವರಿಗೆ, ಅವರು ಹಳೆಯ ರೋಮನರ ಕಾರ್ಯಗಳನ್ನು ಅನುಕರಿಸಬೇಕೆಂದು ಹೇಳುವ ಸಮಯದಲ್ಲಿ ನಾಜೀ ವಿಪ್ಲವವು, ಜರ್ಮನರು ತಮ್ಮ ದೂರದ ಟ್ಯೂಟನ್ ದೈತ್ಯರು ಮಾಡಿದುದನ್ನು ಮಾಡುವಂತೆ ಮಾತ್ರವಲ್ಲ, ಅವರು ಇಪ್ಪತ್ತನೆಯ ಶತಮಾನದಲ್ಲಿ ಪುನರ್ಜನ್ಮಹೊಂದಿದ ಅದೇ ವಂಶೀಯ ವೀರರು ಆಗಿರಬೇಕೆಂದು ಜರ್ಮನರನ್ನು ಪ್ರೇರಿಸಿತು.” ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಇಟೆಲಿಯ ಫ್ಯಾಸಿಸ್ಮ್, ಕೈಗಾರಿಕಾ ರೀತಿಯಲ್ಲಿ ಕಡಮೆ ವಿಕಾಸ ಹೊಂದಿದ ರಾಷ್ಟ್ರವಾದ ಇಟೆಲಿಯನ್ನು 20ನೆಯ ಶತಕಕ್ಕೆ ಎಳೆಯುವುದರ ಮೂಲಕ ತನ್ನ ಕಳೆದು ಹೋಗಿದ್ದ ವೈಭವವನ್ನು ಪುನಃ ಪಡೆಯಲು ನೋಡಿತು. ಇನ್ನೊಂದು ಕಡೆಯಲ್ಲಿ ಜರ್ಮನಿ, ತನ್ನ ಹಿಂದಿನ ವೈಭವವನ್ನು ಕಾಲ್ಪನಿಕ ಗತಕಾಲಕ್ಕೆ ಹಿಂದೆ ಹೋಗುವುದರ ಮೂಲಕ ಪಡೆಯಲು ನೋಡಿತು.
ಇದನ್ನು ಸಾಧ್ಯ ಮಾಡಿದ ವಿಷಯ
ಹೆಚ್ಚಿನ ದೇಶಗಳಲ್ಲಿ, ಫ್ಯಾಸಿಸ್ಟರು ರಾಷ್ಟ್ರೀಯ ವಿಪತ್ತು, ಆರ್ಥಿಕ ಪತನ, ಅಥವಾ, ಮಿಲಿಟರಿ ಸೋಲು ಸಂಭವಿಸಿದ ಬಳಿಕ ಅಧಿಕಾರಕ್ಕೆ ಬಂದರು. ಇಟೆಲಿ ಮತ್ತು ಜರ್ಮನಿಯಲ್ಲಿಯೂ ಇದು ನಿಜ. 1ನೆಯ ಲೋಕ ಯುದ್ಧದಲ್ಲಿ ವಿರುದ್ಧ ಪಕ್ಷಗಳಲಿದ್ಲರ್ದೂ, ಯುದ್ಧದಿಂದ ಹೊರಬರುವಾಗ ತುಂಬ ಬಲಹೀನವಾಗಿ ಈ ಎರಡು ರಾಷ್ಟ್ರಗಳು ಹೊರಬಂದವು. ರಾಷ್ಟ್ರೀಯ ಅತೃಪ್ತಿ, ಆರ್ಥಿಕ ಸ್ಥಾನಚ್ಯುತಿ, ಮತ್ತು ಸಮಾಜ ಯುದ್ಧ ಎರಡು ದೇಶಗಳಲ್ಲಿಯೂ ಕಿರುಕುಳ ಕೊಟ್ಟಿತು. ಜರ್ಮನಿಯಲ್ಲಿ ಹತೋಟಿ ಮೀರಿದ ಹಣದುಬ್ಬರವಾಗಿ ನಿರುದ್ಯೋಗ ಮೇಲೇರಿತು. ಪ್ರಜಾಪ್ರಭುತ್ವ ಮೂಲಸೂತ್ರವೂ, ಮಿಲಿಟರಿ ಮತ್ತು ಪ್ರಷ್ಯದ ಅಧಿಕಾರ ವಿಧೇಯ ಸಂಪ್ರದಾಯಗಳಿಂದ ತಡೆಯಲ್ಪಟ್ಟು ಬಲಹೀನವಾಗಿತ್ತು ಮತ್ತು ಸೋವಿಯೆಟ್ ಬಾಲ್ಶೆವಿಕ್ ವಾದದ ಭಯದ ಭ್ರಾಂತಿ ಎಲ್ಲೆಲ್ಲೂ ತೋರಿಬಂತು.
ಫ್ಯಾಸಿಸ್ಮ್ನ ಮೇಲೇರುವಿಕೆಯಲ್ಲಿ ಚಾರ್ಲ್ಸ್ ಡಾರ್ವಿನನ ವಿಕಾಸವಾದ ಮತ್ತು ನೈಸರ್ಗಿಕ ವಿಂಗಡಿಕೆ ಇನ್ನೊಂದು ಗಮನಾರ್ಹ ಸಂಗತಿಯಾಯಿತು. ದ ಕೊಲಂಬಿಯ ಹಿಸ್ಟರಿ ಆಫ್ ದ ವರ್ಲ್ಡ್ ಪುಸ್ತಕ, “ಮೂಸೊಲೀನಿ ಮತ್ತು ಹಿಟ್ಲರ್ ಇವರಿಬ್ಬರೂ ವ್ಯಕ್ತಪಡಿಸಿದಂತೆ, ಫಾಸಿಸ್ಟರ ಭಾವನಾಶಾಸ್ತ್ರದಲ್ಲಿ ಸಾಮಾಜಿಕ ಡಾರ್ವಿನ್ ವಾದದ ಪುನರೆಚ್ಚರಿಸುವಿಕೆ”ಯ ಕುರಿತು ಮಾತಾಡುತ್ತದೆ.
ಎನ್ಸೈಕ್ಲೊಪೀಡಿಯ ಆಫ್ ದ ಥರ್ಡ್ ರೈಕ್ ಈ ಬೆಲೆಕಟ್ಟುವಿಕೆಯನ್ನು ಒಪ್ಪಿ, ಸಾಮಾಜಿಕ ಡಾರ್ವಿನ್ ವಾದ “ಹಿಟ್ಲರನ ಸಮೂಲನಾಶ ಕಾರ್ಯನೀತಿಯ ಹಿಂದಿದ್ದ ಭಾವನಾಶಾಸ್ತ್ರ”ವೆಂದು ವಿವರಿಸುತ್ತದೆ. ಡಾರ್ವಿನನ ವಿಕಾಸ ಬೋಧನೆಗೆ ಹೊಂದಿಕೆಯಾಗಿ, “ಜರ್ಮನ್ ಭಾವನಾಶಾಸ್ತ್ರಜ್ಞರು, ಆಧುನಿಕ ಸರಕಾರ ಬಲಹೀನರನ್ನು ರಕ್ಷಿಸುವುದಕ್ಕೆ ತನ್ನ ಶಕ್ತಿಯನ್ನು ಮೀಸಲಾಗಿರಿಸುವ ಬದಲಿಗೆ, ಬಲಾಢ್ಯರಾದ, ಆರೋಗ್ಯವುಳ್ಳ ಜನರನ್ನು ರಕ್ಷಿಸಿ ಕೆಳ ಮಟ್ಟದವರನ್ನು ತಳ್ಳಿಹಾಕಬೇಕೆಂದು ವಾದಿಸಿದರು.” ಅತಿ ಯೋಗ್ಯರು ಬದುಕಿ ಉಳಿಯುವ ಹೋರಾಟದಲ್ಲಿ ಯುದ್ಧವು ಸಾಮಾನ್ಯ, “ಜಯವು ಬಲಿಷ್ಠರಿಗೆ ಮತ್ತು ಬಲಹೀನರನ್ನು ವರ್ಜಿಸತಕ್ಕದ್ದು” ಎಂದು ಅವರು ವಾದಿಸಿದರು.
ಪಾಠ ಕಲಿಯಲಾಗಿದೆಯೆ?
ಕಪ್ಪು ಷರ್ಟಿನ ಇಟೆಲಿಯ ಮಿಲಿಟರಿ ತಂಡಗಳು ಮತ್ತು ಸ್ವಸ್ತಿಕ ಧರಿಸಿರುವ ಕಂದು ಸಮವಸ್ತ್ರಧಾರಿಗಳಾದ ಜರ್ಮನ್ ಧಕ್ಕೆ ದಳದ ಸೈನಿಕರ ದಿನಗಳು ಸಂದುಹೋದುವು. ಆದರೆ, 1992ರಲ್ಲಿಯೂ ಫ್ಯಾಸಿಸ್ಮ್ನ ಜಾಡು ಉಳಿದದೆ. ಎರಡು ವರ್ಷಗಳ ಹಿಂದೆ ನ್ಯೂಸ್ವೀಕ್ ಪತ್ರಿಕೆ ಎಚ್ಚರಿಸಿದ್ದೇನಂದರೆ ಪ್ರತಿಯೊಂದು ಪಶ್ಚಿಮ ಯೂರೋಪ್ ರಾಷ್ಟ್ರದಲ್ಲಿ, “ತೀರಾ ಸಂಪ್ರದಾಯ ಪಕ್ಷಗಳವರು ಹೆಚ್ಚು ಮುಚ್ಚಿಡದ ವಂಶೀಯತೆ ಮತ್ತು ರಾಷ್ಟ್ರೀಯ ಮತ್ತು ಏಕಾಧಿಪತ್ಯದ ಮೌಲ್ಯಗಳಿಗೆ ಕೊಡಲ್ಪಡುವ ಕರೆಗೆ ಇನ್ನೂ ವಿಸ್ಮಯಕಾರಕ ಬೆಂಬಲವಿದೆ.” ಇವುಗಳಲ್ಲಿ ಅತಿ ಶಕ್ತಿಯುತ ಚಳುವಳಿಗಳಲ್ಲಿ ಒಂದು, ಮೂಲ ರೀತಿಯಲ್ಲಿ “ನ್ಯಾಷನಲ್ ಸೋಶಲಿಸ್ಮ್ನದ್ದೇ” ಸಂದೇಶವಿರುವ, ಶಾನ್ಮರಿ ಲ ಪೆನ್ ಅವರ ನ್ಯಾಷನಲ್ ಫ್ರಂಟ್ ಎಂಬುದು ಆಶ್ಚರ್ಯವಲ್ಲ.
ಇಂಥ ನವ ಫ್ಯಾಸಿಸ್ಟ್ ಚಳುವಳಿಗಳಲ್ಲಿ ಭರವಸವಿಡುವುದು ವಿವೇಕವೆ? ಫ್ಯಾಸಿಸ್ಮ್ನ ಬೇರುಗಳು—ಡಾರ್ವಿನರ ವಿಕಾಸ, ವಂಶೀಯತೆ, ಮಿಲಿಟರಿ ವಾದ, ಮತ್ತು ರಾಷ್ಟ್ರೀಯತೆ—ಒಳ್ಳೆಯ ಸರಕಾರವನ್ನು ರಚಿಸಲು ಸ್ವಸ್ಥವಾದ ಅಸ್ತಿವಾರವನ್ನು ಒದಗಿಸುತ್ತದೆಯೆ? ಅಥವಾ, ಇತರ ಸಕಲ ರೀತಿಯ ಮಾನವಾಳಿಕೆಗಳಂತೆಯೇ, ಫ್ಯಾಸಿಸ್ಮ್ ವಾದವನ್ನು ತಕ್ಕಡಿಗಳಲ್ಲಿ ತೂಗಿ ನೋಡಲಾದಾಗ ಅದರಲ್ಲಿ ಕೊರತೆ ಕಂಡುಬಂದಿದೆಯೆಂದು ನೀವು ಒಪ್ಪುವುದಿಲವ್ಲೆ? (g91 10/22)
[ಪುಟ 26 ರಲ್ಲಿರುವ ಚೌಕ]
ಫ್ಯಾಸಿಸ್ಮ್—ಅದರ ಅಸ್ತಿವಾರ ಸ್ವಸ್ಥವೆ?
ಡಾರ್ವಿನಿನ ವಿಕಾಸ: “ಹೆಚ್ಚುತ್ತಿರುವ ಸಂಖ್ಯೆಯಲ್ಲಿ ವಿಜ್ಞಾನಿಗಳು ಮತ್ತು ವಿಶೇಷವಾಗಿ ಹೆಚ್ಚುತ್ತಿರುವ ಸಂಖ್ಯೆಯಲ್ಲಿ ವಿಕಾಸವಾದಿಗಳು . . . ಡಾರ್ವಿನನ ವಿಕಾಸವಾದವು ಶುದ್ಧ ವೈಜ್ಞಾನಿಕ ವಾದವೇ ಅಲ್ಲವೆಂದು ವಾದಿಸುತ್ತಾರೆ.”—ನ್ಯೂ ಸೈಂಟಿಸ್ಟ್, ಜೂನ್ 25, 1981, ಮೈಕಲ್ ರೂಸ್.
ವಂಶೀಯತೆ: “ಮಾನವ ವಂಶಗಳ ಮತ್ತು ಜನರ ಮಧ್ಯೆ ಇರುವ ಕಮರಿಯು, ಅದು ಅಸ್ತಿತ್ವದಲ್ಲಿರುವಲ್ಲಿ, ತಳಿಶಾಸ್ತ್ರೀಯವಲ್ಲ, ಮನೋವೈಜ್ಞಾನಿಕ ಮತ್ತು ಸಮಾಜ ವೈಜ್ಞಾನಿಕವಾಗಿದೆ.”—ಜೀನ್ಸ್ ಆ್ಯಂಡ್ ದ ಮ್ಯಾನ್, ಪ್ರೊಫೆಸರ್ ಬೆಂಟ್ಲಿ ಗ್ಲಾಸ್.
“ಸಕಲ ವಂಶಗಳ ಮಾನವರು . . . ಒಬ್ಬನೇ ಪ್ರಥಮ ಮಾನವನಿಂದ ವಂಶಾನುಗತವಾಗಿ ಬಂದರು.”—ಹಿರೆಡಿಟಿ ಆ್ಯಂಡ್ ಹ್ಯೂಮನ್ಸ್, ವಿಜ್ಞಾನ ಲೇಖಕ ಆ್ಯಮ್ರಮ್ ಶೈನ್ಫೆಲ್ಡ್.
ಯುದ್ಧ ಮನಸ್ಕತೆ: “ಈ ಬುದ್ಧಿ ಭ್ರಮಣೆಗೆ . . . ಹೊಯ್ಯಲಾಗಿರುವ ಉಪಾಯ ಕೌಶಲ್ಯ, ಶ್ರಮ, ಮತ್ತು ನಿಧಿ ಮನಸ್ಸನ್ನು ಸ್ತಬ್ಧ ಮಾಡುತ್ತದೆ. ರಾಷ್ಟ್ರಗಳು ಮುಂದೆ ಯುದ್ಧವನ್ನೇ ಕಲಿಯದಿರುವಲ್ಲಿ, ಮಾನವ ಸಂತತಿಗೆ ಮಾಡಲು ಸಾಧ್ಯವಿಲ್ಲದಿರುವ ಸಂಗತಿಗಳೇ ಇರಲಿಕ್ಕಿಲ್ಲ.”—ಅಮೆರಿಕನ್ ಲೇಖಕ ಮತ್ತು ಪುಲಿಟ್ಸರ್ ಪಾರಿತೋಷಿಕ ವಿಜೇತ ಹರ್ಮನ್ ವೌಕ್.
ರಾಷ್ಟ್ರೀಯತೆ: “ರಾಷ್ಟ್ರೀಯತೆ ಮಾನವಕುಲವನ್ನು ಪರಸ್ಪರ ಸಹಿಷ್ಣುತೆಯಿಲ್ಲದ ಏಕಾಂಶಗಳಾಗಿ ವಿಭಾಗಿಸುತ್ತದೆ. ಇದರ ಪರಿಣಾಮವಾಗಿ, ಜನರು ತಾವು ಮೊದಲಾಗಿ ಅಮೆರಿಕನರು, ರಷ್ಯನರು, ಚೀನೀಯರು, ಈಜಿಪ್ಶಿಯನರು ಯಾ ಪೆರು ದೇಶದವರು ಎಂದೆಣಿಸಿ, ಒಂದು ವೇಳೆ ನೆನಸುವಲ್ಲಿ, ಎರಡನೆಯದಾಗಿ ತಾವು ಮಾನವರು ಎಂದೆಣಿಸುತ್ತಾರೆ.”—ಕಾನ್ಫ್ಲಿಕ್ಟ್ ಆ್ಯಂಡ್ ಕೊಆಪೊರೇಷನ್ ಎಮಂಗ್ ನೇಷನ್ಸ್, ಐವೊ ಡೂಕಚೆಕ್.
“ನಮ್ಮ ಎದುರಿಗಿರುವ ಅನೇಕ ಸಮಸ್ಯೆಗಳು ತಪ್ಪು ಮನೋಭಾವದ ಕಾರಣ ಯಾ ಪರಿಣಾಮವಾಗಿವೆ—ಇವುಗಳಲ್ಲಿ ಕೆಲವನ್ನು ಅಧಿಕಾಂಶ ಅಜಾಗೃತ ಸ್ಥಿತಿಯಲ್ಲಿಯೇ ಅಂಗೀಕರಿಸಲಾಗಿದೆ. ಇವುಗಳಲ್ಲಿ ಒಂದು ಸಂಕುಚಿತ ರಾಷ್ಟ್ರೀಯತೆಯ ಭಾವನೆ—‘ಸರಿಯಾಗಿರಲಿ, ತಪ್ಪಾಗಿರಲಿ, ನನ್ನ ದೇಶ.’”—ಮಾಜಿ ಯು.ಎನ್. ಸೆಕ್ರೆಟರಿ-ಜನರಲ್ ಉ ತಾಂತ್.
[ಪುಟ 25 ರಲ್ಲಿರುವ ಚಿತ್ರಗಳು]
ಸ್ವಸ್ತಿಕದಂಥ ಧರ್ಮಚಿಹ್ನೆಗಳು ಮತ್ತು “ದೇವರು ನಮ್ಮೊಂದಿಗಿದ್ದಾನೆ” ಎಂಬ ಧ್ಯೇಯಮಂತ್ರ ಹಿಟ್ಲರನ ಆಳಿಕೆಯನ್ನು ರಕ್ಷಿಸಲಿಲ್ಲ
ಫ್ಯಾಸಿಸ್ಮ್ಗೆ ಮೂಸೊಲೀನಿಯ ಚಿಹ್ನೆಯಾದ ಫ್ಯಾಸೀಸ್ (ದಂಡಕಟ್ಟು), ಅಮೆರಿಕದ ಕೆಲವು ಡೈಮ್ಗಳಲ್ಲಿ ಕಂಡುಬರುತ್ತದೆ