ಯಾವ ಸಂದೇಶವನ್ನು ಅವರು ಆಲಿಸುತ್ತಿದ್ದಾರೆ?
ಯಾವ ವಿದದ ಲೋಕದಲ್ಲಿ ಜೀವಿಸಲು ನೀವು ಇಷ್ಟ ಪಡುವಿರಿ? ನಿಮ್ಮ ಮಕ್ಕಳಿಗೆ ಯಾವ ವಿಧದ ಭವಿಷ್ಯತ್ತನ್ನು ನೀವು ಬಯಸುವಿರಿ? ಒಂದು ವೇಳೆ ಪರಿಪೂರ್ಣ ಆರೋಗ್ಯ ಮತ್ತು ಸಾಯದೇ ಇರುವ ಶಕ್ಯತೆ ಇದ್ದರೆ, ನೀವು ಅದನ್ನು ಆರಿಸುವಿರೋ?
ಅಂಥ ಪ್ರಶ್ನೆಗಳನ್ನು ನೀವು ಹೇಗೆ ಉತ್ತರಿಸುವಿರಿ? ಅಧಿಕಾಂಶ ಜನರು, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯನ್ನು ಲಕ್ಷ್ಯಿಸದೆ, ಸಮಾಧಾನ ಮತ್ತು ಸಮೃದ್ಧಿಯ ಒಂದು ಲೋಕದಲ್ಲಿ ಜೀವಿಸಲು ಬಯಸುವರು. ಎಲ್ಲಿ ಭ್ರಷ್ಟತೆ ಇಲ್ಲವೋ, ಎಲ್ಲಿ ವಿಶೇಷ ಸುಯೋಗವುಳ್ಳವರಿಗೆ ಒಂದು ನಿಯಮ ಮತ್ತು ಬಡವರಿಗೆ ಇನ್ನೊಂದು ನಿಯಮವು ಇಲ್ಲವೋ, ಅಂಥಾ ಪರಿಪೂರ್ಣ ನ್ಯಾಯದ ಮತ್ತು ಹೊಂದಾಣಿಕೆಯ ಲೋಕವೊಂದನ್ನು ಅವರು ಸ್ವಾಗತಿಸುವರು.
ಮತ್ತು ನಿಮ್ಮ ಮಕ್ಕಳಿಗೋಸ್ಕರ, ಸಂಶಯವಿಲ್ಲದೆ ಹೇರಳವಾದ ಆಹಾರ, ಆಹ್ಲಾದಕರವಾದ ಒಂದು ಮನೆ ಮತ್ತು ಒಂದು ಉತ್ತಮ ವಿದ್ಯಾಭ್ಯಾಸವನ್ನು ಹೊಂದಲು ನೀವು ಬಯಸುವಿರಿ. ಬೇರೆ ಮಾತುಗಳಲ್ಲಿ, ನಿಮಗೋಸ್ಕರ ಮತ್ತು ನಿಮ್ಮ ಸಂತತಿಯವರಿಗೋಸ್ಕರ ಸ್ಥಿರವಾದ ಭವಿಷ್ಯತ್ತಿನ ಖಾತರಿಯನ್ನು ನೀವು ಬಯಸುವಿರಿ. ಮತ್ತು ಒಂದು ವೇಳೆ, ಸಂದರ್ಭವು ಕೊಡಲ್ಪಟ್ಟಲ್ಲಿ, ಪರಿಪೂರ್ಣ ಆರೋಗ್ಯವನ್ನು ಪಡೆಯಲು ಮತ್ತು ಹಿತಕರ ಆಶೆಗಳನ್ನು ಮತ್ತು ಹೆಬ್ಬಯಕೆಗಳನ್ನು ಪೂರೈಸಲು ಬೇಕಾಗುವಷ್ಟು ಸಮಯ ಜೀವಿಸಲು, ಮತ್ತು ಒಂದು ಸಮಾಧಾನದ ಪ್ರಮೋದವನ ಭೂಮಿಯಲ್ಲಿ ನಿತ್ಯ ಜೀವದಲ್ಲಿ ಆನಂದಿಸಲು ಆರಿಸಿಕೊಳ್ಳುವಿರಿ.
ಇವೆಲ್ಲವುಗಳು ಅಸಾಧ್ಯವಾಗಿರುವಂಥ ಒಂದು ಸ್ವಪ್ನವಲ್ಲ. ಪ್ರಾಚ್ಯ ಯೂರೋಪಿನ ದೇಶಗಳನ್ನು ಸೇರಿಸಿ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ಸಾರುತ್ತಿರುವಂಥ ಬೈಬಲಿನ ಒಂದು ಸಂದೇಶವು ಇದಾಗಿದೆ.
ಭವಿಷ್ಯಕ್ಕಾಗಿ ಬೈಬಲಿನ ವ್ಯಾವಹಾರ್ಯ ನಿರೀಕ್ಷೆ
ನಮ್ಮ 20ನೆಯ ಶತಮಾನದ ಘಟನೆಗಳಾದ ನಮ್ಮೀ ‘ಯುದ್ಧಗಳನ್ನು ಮತ್ತು ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನು’; ನಮ್ಮೀ ‘ಜನಾಂಗಗಳಿಗೆ ದಿಕ್ಕು ಕಾಣದೆ ಆಗುವ ಸಂಕಟ, ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವದನ್ನು’; ನಮ್ಮೀ ‘ಭೂಮಿಯನ್ನು ಮಲಿನ ಮತ್ತು ನಾಶ ಮಾಡುವದನ್ನು’, ಅನೇಕ ಶತಮಾನಗಳ ಹಿಂದೆಯೇ ಬೈಬಲಿನ ದಾಖಲಿತ, ವಿಶ್ವಾಸಾರ್ಹ ಪ್ರವಾದನೆಗಳು ಮುಂತಿಳಿಸಿದವು.—ಲೂಕ 21:10-33; ಪ್ರಕಟನೆ 11:18.
ಆದರೂ, ಈ ಎಲ್ಲಾ ಘಟನೆಗಳು ಮತ್ತು ಇನ್ನು ಹೆಚ್ಚಿನವುಗಳು ದೇವರ ವಾಗ್ದಾನಿಸಲ್ಪಟ್ಟ ನೂತನ ಲೋಕವು ಕೂಡಾ, ಹತ್ತಿರವೇ ಇದೆ ಎಂಬುದಕ್ಕೆ ಒಂದು ಖಂಡಿತ ಸೂಚನೆಯಾಗಿದೆ. “ನೂತನ ಆಕಾಶ ಮಂಡಲ ಮತ್ತು ನೂತನ ಭೂಮಂಡಲ”ವಾಗಿರುವ, ಒಂದು ಹೊಸ ಲೋಕಾಡಳಿತೆ, ಒಂದು ಸ್ವರ್ಗೀಯ ಸರಕಾರ, ಮತ್ತು ‘ನೀತಿಯು ವಾಸವಾಗಿರುವ’ ಒಂದು ಮಾರ್ಪಾಟು ಹೊಂದಿದ ಭೂಸಮಾಜವು ಕೂಡಾ ಇದರಲ್ಲಿ ಒಳಗೂಡಿದೆ. ‘ಕಷ್ಟ ದುಃಖ ಮತ್ತು ಮರಣವು ಇನ್ನಿರದ’ ಒಂದು ಹೊಸ ಲೋಕವೆಂದೇ ಇದರ ಅರ್ಥವಾಗಿದೆ.—ಯೆಶಾಯ 65:17-25; 2 ಪೇತ್ರ 3:13; ಪ್ರಕಟನೆ 21:1-4.
ಯಾವುದೇ ವ್ಯವಸ್ಥೆಯ, ಅದು ಎಷ್ಟೇ ಯಥಾರ್ಥವಾಗಿರಲಿ ಮತ್ತು ಶುದ್ಧಾಂತಃಕರಣವುಳ್ಳದ್ದಾಗಿರಲಿ, ಅಂಥ ಒಂದು ಕಾರ್ಯಕ್ರಮವನ್ನು ಪೂರೈಸುವ ಸಾಮರ್ಥ್ಯವುಳ್ಳದ್ದಾಗಿರುವದಿಲ್ಲ ಎಂಬುದು ಸುಸ್ಪಷ್ಟ. ಇದನ್ನು ನೆರವೇರಿಸಲು ಕೇವಲ ವಿಶ್ವದ ಸಾರ್ವಭೌಮ ಪ್ರಭುವಾದ ಯೆಹೋವ ದೇವರಿಗೆ ಮಾತ್ರ ಇಚ್ಛೆಯೂ ಇದೆ, ಶಕ್ತಿಯೂ ಇದೆ. ಆ ಕಾರಣಕ್ಕಾಗಿ ಅವನ ಮಗನಾದ ಕ್ರಿಸ್ತ ಯೇಸುವು ತನ್ನ ಹಿಂಬಾಲಕರಿಗೆ ಪ್ರಾರ್ಥಿಸಲು ಕಲಿಸಿದನು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದೆಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:9, 10.
ಶಾಂತಿ-ಪ್ರಿಯ ಮಾನವ ಕುಟುಂಬದಿಂದ ನಿವಾಸಿಸಲ್ಪಟ್ಟು, ವಿಶ್ವದಲ್ಲಿ ಈ ಭೂಮಿಯು ಒಂದು ಬೆಳಗುವ ರತ್ನದೋಪಾದಿ ಇರಬೇಕೆಂದು ದೇವರ ಚಿತ್ತವಾಗಿದೆ. ಶೀಘ್ರದಲ್ಲಿಯೇ ಅದನ್ನು ಮಾಡಲು ದೇವರು ಕಾರ್ಯವನ್ನು ಕೈಗೊಳ್ಳುವನು. ಎಲ್ಲಾ ತರಹದ ಅಶುದ್ಧತೆಯನ್ನು ಮತ್ತು ಅಶುದ್ಧ ಮಾಡುವವರನ್ನು ಭೂಮಿಯಿಂದ ಅಳಿಸುವ ಒಂದು ಶುಭ್ರಗೊಳಿಸುವ ಕಾರ್ಯಾಚರಣೆಯಾಗಿರುತ್ತದೆ. ಎಲ್ಲಾ ತರಹದ ಮಾಲಿನ್ಯತೆಯನ್ನು, ಅದು ದೈಹಿಕವಾಗಿರಲಿ, ಯಾ ನೈತಿಕವಾಗಿರಲಿ, ಭೂಮಿಯಿಂದ ಇಲ್ಲದಂತೆ ಮಾಡಲಾಗುವದು. ಯಾರು ಉಳಿಯುವರು? ಯೇಸುವು ಹೇಳಿದ್ದು: “ಶಾಂತಾತ್ಮರು ಧನ್ಯರು, ಅವರು ಭೂಮಿಗೆ ಬಾಧ್ಯರಾಗುವರು.”—ಮತ್ತಾಯ 5:5; ಪ್ರಕಟನೆ 16:14-16.
ದೇವರ ಆಶೀರ್ವಾದವನ್ನು ಪಡೆಯುವಂಥ ಶಾಂತಾತ್ಮರಲ್ಲಿ ನೀವು ಇರಲು ಬಯಸುವಿರೋ? ಹಾಗಿರುವದಾದರೆ ನಿಮ್ಮ ನೆರೆಹೊರೆಯಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ ಮತ್ತು ಯಾವುದೇ ಹಂಗಿಲ್ಲದೇ, ಒಂದು ಉಚಿತ ಮನೆ ಬೈಬಲ್ ಅಭ್ಯಾಸಕ್ಕಾಗಿ ಕೇಳಿರಿ. “ಉತ್ತಮವಾದದ್ದೂ ಮತ್ತು ಮೆಚ್ಚಿಕೆಯಾದದ್ದೂ ಮತ್ತು ದೇವರ ಪರಿಪೂರ್ಣ ಚಿತ್ತ” ಏನೆಂದು ನೀವು ಸ್ವತಃ ರುಜುಮಾಡಿಕೊಳ್ಳಿರಿ. ಆನಂತರ ಅದನ್ನು ಮಾಡಿರಿ.—ರೊಮಾಪುರ 12:2, NW. (g91 1/8)