ಯುವ ಜನರು ಪ್ರಶ್ನಿಸುವುದು. . .
ನನ್ನ ತಂದೆ ಮತ್ತು ತಾಯಿ ಯಾವಾಗಲೂ ಯಾಕೆ ಜಗಳವಾಡುತ್ತಾರೆ?
ನನ್ನ ಕುಟುಂಬದಲ್ಲಿ ನನಗೆ ತುಂಬಾ ಸಮಸ್ಯೆಗಳಿವೆ, ಮತ್ತು ಏನು ಮಾಡಬೇಕೆಂದು ನನಗೆ ತಿಳಿಯುವದಿಲ್ಲ. ಅವನು ಬೊಬ್ಬೆಯಿಡಬಹುದಾದ, ಪ್ರತಿಯೊಂದು ಚಿಕ್ಕ ವಿಷಯಕ್ಕಾಗಿ ಬೊಬ್ಬೆಯಿಡಲು ನನ್ನ ತಂದೆ ಇಷ್ಟ ಪಡುತ್ತಾನೆ. ಮತ್ತು ನನ್ನ ತಾಯಿ ಇತರ ಪ್ರತಿಯೊಂದು ಚಿಕ್ಕ ವಿಷಯಕ್ಕಾಗಿ ಅರಚುತ್ತಾಳೆ. ನನ್ನ ತಂದೆಗೆ ಕೆಲಸದಿಂದ ಮನೆಗೆ ಬಂದಾಗ, ತಿನ್ನಲು ಏನೂ ಸಿಗದಿದ್ದರೆ, ಅವನು ಆಗಲೇ ಅಮ್ಮನಿಗೆ ಬೊಬ್ಬೆ ಇಡಲು ಆರಂಭಿಸುತ್ತಾನೆ.—12-ವರ್ಷದ ಒಬ್ಬ ಹುಡುಗಿ.
ನನ್ನ ಹೆತ್ತವರು ಒಂದು ವಿಚ್ಛೇದನೆಯನ್ನು ಪಡೆಯುವದರ ಕುರಿತಾಗಿ ನಾನು ತುಂಬಾ ಆತಂಕ ಪಡುತ್ತೇನೆ. ನಿಜವಾಗಿಯೂ, ಅವರಿಬ್ಬರನ್ನೂ ನಾನು ಪ್ರೀತಿಸುತ್ತೇನೆ ಮತ್ತು ಅವರಿಬ್ಬರೊಂದಿಗೆ ಎಲ್ಲಾ ಸಮಯಗಳಲ್ಲಿ ಇರಲು ಬಯಸುತ್ತೇನೆ. ಆದರೆ, ಅವರು ಹಣಕಾಸಿನ ವಿಷಯದಲ್ಲಿ ಮತ್ತು ಹೆಚ್ಚಿನ ಇತರ ಸಂಗತಿಗಳ ಮೇಲೆ ಜಗಳವಾಡುತ್ತಾರೆ.—10 ವರ್ಷದ ಒಬ್ಬ ಹುಡುಗ.
ನೀವು ನೋಡುತ್ತಿರುವಂತೆ, ಹೆತ್ತವರು ಒಬ್ಬರನ್ನೊಬ್ಬರು ಪ್ರೀತಿಸಬೇಕು ಮತ್ತು ಪರಾಂಬರಿಸಬೇಕೆಂದು ನಿಮ್ಮ ಭಾವನೆ. ಅವರು ಸರ್ವ-ವಿವೇಕವುಳ್ಳವರು, ಸರ್ವ-ತಿಳಿದವರು, ದಯಾಳು, ವಿಚಾರಪರರಾಗಿರಬೇಕೆಂದು ನೀವು ಭಾವಿಸುತ್ತೀರಿ. ಅವರು ಎಲ್ಲಾ ವಿಷಯಗಳಲ್ಲಿ ಏಕಾಭಿಪ್ರಾಯ ಉಳ್ಳವರಾಗಿರಬೇಕೆಂದು ನೀವು ಎಣಿಸುತ್ತೀರಿ. ಮತ್ತು ಅವರು ಮಧ್ಯೆ ಅಭಿಪ್ರಾಯದ ವ್ಯತ್ಯಾಸ ಇದ್ದರೆ ಅವರದನ್ನು ಶಾಂತತೆ, ನೆಮ್ಮದಿ, ಮತ್ತು ನೀವು ಕೇಳಿಸದಷ್ಟು ದೂರದಲ್ಲಿ ವಿಷಯಗಳನ್ನು ಚರ್ಚಿಸಬೇಕೆಂದು ನೀವು ಎಣಿಸುತ್ತೀರಿ. ಅವರು ಸುಮ್ಮನೇ ವಿವಾದಿಸಲೇಬಾರದೆಂದು ನೀವು ಭಾವಿಸುತ್ತೀರಿ.
ಆದರೆ ಪ್ರಾಯಶಃ ನಿಮ್ಮನ್ನು ನಿರಾಶೆಗೊಳಿಸುವ ವಿಷಯವೊಂದನ್ನು ಕಂಡುಕೊಂಡಿದ್ದೀರಿ ಏನಂದರೆ ಹೆತ್ತವರು ಕೆಲವೊಮ್ಮೆ ಭಿನ್ನ ಅಭಿಪ್ರಾಯ ಉಳ್ಳವರಾಗಿರುತ್ತಾರೆ—ಮತ್ತು ಯಾವಾಗಲೂ ಶಾಂತತೆ ಮತ್ತು ನೆಮ್ಮದಿಯಿಂದಲ್ಲ. ಇವರು ನಿಮ್ಮ ಹೆತ್ತವರು, ಮತ್ತು ಅವರು ಪರಸ್ಪರ ವಿರೋಧದಲ್ಲಿರುವದನ್ನು ನೋಡುವದು, ಶಬ್ದಗಳಲ್ಲಿ ಹೇಳುವದಕ್ಕಿಂತ ಹೆಚ್ಚಾಗಿ ನಿಮ್ಮನ್ನು ನೋಯಿಸುತ್ತದೆ. ಒಬ್ಬ ಯುವಕನು ಒಪ್ಪಿಕೊಂಡಿದ್ದೇನಂದರೆ ಅವನ ಹೆತ್ತವರು ಜಗಳವಾಡುವಾಗ, “ಕೆಲವೊಮ್ಮೆ ನಾನು ಒಳಗೊಳಗೆ ಛಿದ್ರಿತನಾಗುತ್ತಿದ್ದಂತೆ ನನಗೆ ಭಾಸವಾಗುತ್ತಿತ್ತು.”
ಹೆತ್ತವರು ಜಗಳವಾಡುವ ಕಾರಣ
ತಾಯಂದಿರು ಯಾವಾಗಲೂ ‘ಅವರ ನಾಲಿಗೆಯಲ್ಲಿ ಪ್ರೀತಿ-ದಯೆಯ ನಿಯಮ’ವನ್ನು ಇಟ್ಟುಕೊಂಡರೆ, ಮತ್ತು ಎಂದೂ ಒಂದು ಒರಟಾದ ಮಾತನ್ನು ಆಡದಿದ್ದರೆ, ಅದು ಖಂಡಿತವಾಗಿಯೂ ಅದ್ಭುತವೇ ಸೈ. (ಜ್ಞಾನೋಕ್ತಿ 31:26) ತಂದೆಯಂದಿರು ಎಂದೂ ತಮ್ಮ ಹೆಂಡತಿಯರೊಂದಿಗೆ ‘ಕಠಿಣ ನಿಷ್ಠುರರಾಗಿರದಿದ್ದರೆ’ ಅದು ಇನ್ನೂ ಚೆನ್ನಾಗಿರುತ್ತಿತ್ತು. (ಕೊಲೊಸ್ಸೆ 3:19) ಆದರೆ ಬೈಬಲು ಅನ್ನುವದು: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ, ಅವನು ಶಿಕ್ಷಿತನಾಗಿದ್ದಾನೆ.”—ಯಾಕೋಬ 3:2.
ಹೌದು, ನಿಮ್ಮ ಹೆತ್ತವರು ಅಪರಿಪೂರ್ಣರಾಗಿದ್ದಾರೆ. ಒಂದು ನಿಯಮದೋಪಾದಿ ಅವರು ‘ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳು’ತಿರ್ತಬಹುದು. (ಎಫೆಸ 4:2) ಆದರೆ, ಆಗಿಂದಾಗ್ಯೆ, ರೇಗಿಸಲ್ಪಟ್ಟಾಗ ಮತ್ತು ಇವು ಒಂದು ಕಚ್ಚಾಟದ ರೂಪದಲ್ಲಿ ವ್ಯಕ್ತ ಪಡಿಸಲ್ಪಟ್ಟಾಗ, ನೀವು ಇದಕ್ಕಾಗಿ ಆಶ್ಚರ್ಯಗೊಳ್ಳಬಾರದು.
ಇದನ್ನೂ ನೆನಪಿಡಿರಿ, ಏನಂದರೆ, ಇವು ‘ವ್ಯವಹರಿಸಲು ಕಠಿಣ ಕಾಲ’ಗಳಾಗಿವೆ. (2 ತಿಮೊಥಿ 3:1) ಒಂದು ಜೀವಿತವನ್ನು ನಡಿಸುವದರ ಒತ್ತಡಗಳು, ಸರಕಿನ ಬೆಲೆಪಟ್ಟಿಗಳನ್ನು ತೀರಿಸುವದು, ಕೆಲಸದ ಸ್ಥಳದಲ್ಲಿನ ವಾತಾವರಣದೊಂದಿಗೆ ಹೆಣಗಾಡುವದು—ಇವೆಲ್ಲಾ ವಿಷಯಗಳು ಒಂದು ವಿವಾಹದ ಮೇಲೂ ಭಾರವಾದ ಒತ್ತಡಗಳನ್ನು ತರುತ್ತವೆ. ಮತ್ತು ಇಬ್ಬರೂ ಹೆತ್ತವರಿಗೆ ಲೌಕಿಕ ಉದ್ಯೋಗಗಳಿರುವಾಗ, ವಿಶೇಷತಮ ಒತ್ತಡಗಳಿರುತ್ತವೆ. ಯಾರು ಅಡಿಗೆ ಮಾಡಬೇಕು ಮತ್ತು ಶುಚಿಗೊಳಿಸಬೇಕು ಎಂದು ನಿರ್ಣಯಿಸುವದೇ ಒಂದು ವಾಗ್ವಾದದ ಮೂಲವಾಗಬಹುದು.
ಅವರ ಜಗಳ ನಿಮಗೆ ಅನಿಸಬಹುದಾದ ವಿಧ
ನಿಮ್ಮ ಹೆತ್ತವರ ಭಿನ್ನಾಭಿಪ್ರಾಯಗಳನ್ನು, ಏನೇ ಕೆರಳಿಸಿರಲಿ, ಅವರು ತರ್ಕಿಸುವದನ್ನು ಆಲಿಸುವದು ನಿಮ್ಮನ್ನು ಹಾಳುಮಾಡಬಹುದು. ಲೇಖಕಿ ಲಿಂಡಾ ಬರ್ಡ್ ಫ್ರಾಂಕೀ ವಿವರಿಸುವದೇನಂದರೆ, ಮಕ್ಕಳ ಪ್ರವೃತ್ತಿ ಏನಂದರೆ “ತಮ್ಮ ಹೆತ್ತವರನ್ನು ಉನ್ನತ ಮಟ್ಟಗಳಿಗೆ ಏರಿಸುವದಾಗಿದೆ. ಒಂದು ಎಳೆಯ ಮಗು, ಅವನ ಅಥವಾ ಅವಳದ್ದೇ ಸ್ವಂತವಾದ ವಿಶೇಷ ವರ್ತನೆ ಅಥವಾ ಬಲಹೀನತೆಗಳುಳ್ಳ ವ್ಯಕ್ತಿಯಾಗಿ ತನ್ನ ತಾಯಿ ಅಥವಾ ತಂದೆಯ ಕುರಿತಾಗಿ ಯೋಚಿಸದೆ, ಕೇವಲ ತಮ್ಮನ್ನು ಪರಿಪಾಲಿಸಲು ಮತ್ತು ಸಂರಕ್ಷಿಸಲು ಭೂಮಿಗೆ ಬಿದ್ದ ಬಂಡೆಯಂತೆ ಗಟ್ಟಿ ಇರುವ ಒಂದು ಸಂಘಟನೆ ಎಂದು ತಿಳಿದು ಕೊಳ್ಳುತ್ತಾರೆ.” ನಿಮ್ಮ ಹೆತ್ತವರು ಜಗಳಾಡುತ್ತಿರುವದನ್ನು ನೋಡುವದು ನಿಮ್ಮ ಮನಸ್ಸಿಗೆ ಒಂದು ನೋವಿನ ವಾಸ್ತವಿಕತೆಯನ್ನು ತರುತ್ತದೆ: ಅದೇನಂದರೆ ನಿಮ್ಮ ಹೆತ್ತವರು ನೀವು ಯೋಚಿಸಿದಂತೆ ಬಹುಮಟ್ಟಿಗೆ “ಬಂಡೆಯಂತೆ ಗಟ್ಟಿ”ಯಾಗಿಲ್ಲವೆಂಬುದೇ. ಇದು ನಿಮ್ಮ ಭಾವನಾತ್ಮಕ ಭದ್ರತೆಯ ಅಸ್ತಿವಾರಗಳನ್ನೇ ಅಲ್ಲಾಡಿಸಬಹುದು ಮತ್ತು ಎಲ್ಲಾ ರೀತಿಯ ಭಯವನ್ನು ಕೆರಳಿಸಬಹುದು.
ಜರ್ನಲ್ ಆಫ್ ಮ್ಯಾರೇಜ್ ಆ್ಯಂಡ್ ಫ್ಯಾಮಿಲಿ ವರದಿಸುವದು: “ಇತ್ತೀಚೆಗಿನ ಮಕ್ಕಳ ರಾಷ್ಟ್ರೀಯ ಸಮೀಕ್ಷೆಯು, ಸಂದರ್ಶಿಸಿದ ಪ್ರಾಥಮಿಕ ಶಾಲಾ ವಯಸ್ಸಿನ ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚಿನವರು, ತಮ್ಮ ಹೆತ್ತವರು ವಾದಿಸುವಾಗ, ಅವರಿಗೆ ಹೆದರಿಕೆಯಾಗುತ್ತದೆಂದು ಹೇಳಿದರು.” ಒಂದು ಎಳೆಯ ಹುಡುಗಿ, ಸಿಂಡಿ, ಅದನ್ನು ಈ ರೀತಿಯಲ್ಲಿ ಹೇಳಿದಳು: “ಪದೇ ಪದೇ ನನ್ನ ತಾಯಿ ಮತ್ತು ತಂದೆ ತುಂಬಾ ತರ್ಕ ಮಾಡುತ್ತಾರೆ. ನನಗೆ ತುಂಬಾ ಹೆದರಿಕೆಯಾಗುತ್ತದೆ ಮತ್ತು ನಾನು ಮಲಗಲಿಕ್ಕೆ ಹೋಗುತ್ತೇನೆ. ಅದು ಯಾವಾಗ ಅಂತ್ಯಗೊಳ್ಳುತ್ತದೆ ಎಂದು ನಾನು ಯೋಚಿಸುತ್ತಿರುತ್ತೇನೆ.”
ಹಣದ ಕುರಿತಾಗಿ ಜಗಳಗಳು—ವಿವಾಹ ಸಂಗಾತಿಗಳ ಮಧ್ಯೆ ವಾಗ್ವಾದದ ಒಂದು ಸಾಮಾನ್ಯ ವಿಷಯ—ನಿಮ್ಮ ಕುಟುಂಬವು ಹಣಕಾಸಿನಲ್ಲಿ ನಷ್ಟವನ್ನು ಎದುರಿಸುತ್ತಿದೆ ಎಂಬ ಭಯವನ್ನು ನಿಮ್ಮಲ್ಲಿ ಪ್ರಚೋದಿಸಬಹುದು ಮತ್ತು ನೀವು ಜಗಳದ ಬಿಂದುವಾಗಿರುವಾಗ (‘ನೀವೊಂದು ಧೃಡವಾದ ಕೈಯನ್ನು ಎತ್ತದಿದ್ದರೆ ಅವನು⁄ಅವಳು ಒಂದು ಕೆಟ್ಟ ಮಗುವಾಗಲಿಕ್ಕಿದೆ!’) ಹೇಗಿದ್ದರೂ ನೀವೇ ಜಗಳಕ್ಕೆ ಕಾರಣರು ಎಂಬ ಭಯ ನಿಮಗಿರಬಹುದು.
ಅಲ್ಪವೆಂದು ತೋರುವ ವಿಷಯಗಳ ಮೇಲೆ ನಿರಂತರ ಹೋರಾಟವು ಮನಸ್ಸನ್ನು ಕಲಕುತ್ತದೆ. (‘ಮನೆಗೆ ಬರುವಾಗ, ಯಾವಾಗಲೂ ಊಟ ತಯಾರಿರುವದಿಲ್ಲ, ಇದರಿಂದ ನಾನು ಜಿಗುಪ್ಸೆ ಮತ್ತು ದಣಿದಿದ್ದೇನೆ!’) ಅಂಥಹ ನಿರಂತರ ಕಾದಾಡುವಿಕೆಯು ನಿಮ್ಮ ಹೆತ್ತವರ ನಡುವಿನ ಆಳವಾದ ಅಸಮಾಧಾನದಿಂದ ಆಗಾಗ್ಯೆ ತಲೆದೋರುತ್ತವೆ. ಅವರು ವಿಚ್ಛೇದನಾ ನ್ಯಾಯಾಲಯಕ್ಕೆ ಮುಂದುವರಿಯುತ್ತಿದ್ದಾರೆ ಎಂದು ನೀವು ಆತಂಕ ಪಡಲು ಪ್ರಾರಂಭಿಸುವದನ್ನು ಅರ್ಥೈಸಬಹುದು. ತಲೆದೋರಲಿರುವ ಆವೇಶದ ಒಂದು ಅಸ್ಪಷ್ಟವಾದ ಬೆದರಿಕೆಯು “ನೀವು ಮನೆಯಲ್ಲಿರುವದನ್ನು ಅಸಮಾಧಾನಕಾರಿಯನ್ನಾಗಿ ಮಾಡುತ್ತದೆ ಮತ್ತು ನಿಮ್ಮ ಗೆಳೆಯರು ಸುತ್ತಲಿರುವ ಪ್ರಸಂಗವನ್ನು ಎದುರಿಸಲು ನೀವು ಇಷ್ಟ ಪಡುವದಿಲ್ಲ.”—ಟ್ರಬಲ್ ಎಟ್ ಹೋಮ್ ಸಾರಾ ಗಿಲ್ಬರ್ಟ್ರಿಂದ.
ನಿಮ್ಮ ಹೆತ್ತವರ ಘರ್ಷಣೆಗಳು ಅತಿ ದುಃಖಕರ ನಿಷ್ಠೆಯ ತಿಕ್ಕಾಟಗಳನ್ನು ಸೃಷ್ಟಿಸಬಹುದು. ಜರ್ನಲ್ ಆಫ್ ಮ್ಯಾರೇಜ್ ಆ್ಯಂಡ್ ಫ್ಯಾಮಿಲಿ ಹೇಳುವಂತೆ, “ಒಬ್ಬ ಹೆತ್ತವನೊಂದಿಗೆ ಆಪ್ತತೆಯ ಮತ್ತೊಬ್ಬ ಹೆತ್ತವನಿಂದ ತಿರಸ್ಕಾರದ ಪ್ರಸಂಗವನ್ನು ಇದು ಒಳತರುತ್ತದೆ.” ಪಕ್ಷವನ್ನು ತೆಗೆದುಕೊಂಡಂತೆ ಸೂಚಿಸುವ ಯಾವ ಮಾತನ್ನೂ ಅಥವಾ ಕೆಲಸವನ್ನು ಮಾಡಲು ಹೆದರುತ್ತಾ, ನಿಮ್ಮನ್ನು ಘರ್ಷಣೆಯಲ್ಲಿ ಒಯ್ಯಲಾಗುವದು ಎಂಬ ಭಯದಿಂದ ನೀವು ಎಂದಾದರೂ ನಿಮ್ಮ ಹೆತ್ತವರೊಂದಿಗೆ ಇರುವಾಗ ಒಂದು ವಿಷಮ ಸ್ಥಿತಿಯಲ್ಲಿದ್ದಂತೆ ನಿಮಗೆ ಭಾಸವಾಗಬಹುದು.
‘ಅವರು ವಿಚ್ಛೇದನೆ ತೆಗೆದುಕೊಳ್ಳಲಿದ್ದಾರೋ?’
ಬಹುಮಟ್ಟಿಗೆ ಇರಲಿಕ್ಕಿಲ್ಲ. ಬೈಬಲು ಸೂಚಿಸುವದೇನಂದರೆ ಒಂದು ನಿಯತ ಮಟ್ಟದ ಬಿಗಿತವು ಎಲ್ಲಾ ವಿವಾಹಗಳಲ್ಲಿ ಸೇರಿರುತ್ತದೆ. 1 ಕೊರಿಂಥ 7:28ರಲ್ಲಿ, ಪೌಲನು ಎಚ್ಚರಿಸಿದ್ದೇನಂದರೆ ಮದುವೆಯಾಗುವವರಿಗೆ “ಶರೀರ ಸಂಬಂಧವಾದ ಕಷ್ಟವು” ಯಾ “ಈ ದೈಹಿಕ ಜೀವನದಲ್ಲಿ ವೇದನೆ ಮತ್ತು ದುಃಖವು” ಇರುತ್ತದೆ. (ದಿ ನ್ಯೂ ಇಂಗ್ಲಿಷ್ ಬೈಬಲ್). ಆದುದರಿಂದ ಹೆತ್ತವರು ಸ್ವಲ್ಪ ಜೋರಾಗಿ ಕಚ್ಚಾಡುವ ಅಲ್ಪ ಸಂಗತಿಯೂ, ಅವರು ಇನ್ನು ಮುಂದೆ ಒಬ್ಬರನ್ನೊಬ್ಬರು ಪ್ರೀತಿಸುವದಿಲ್ಲ ಅಥವಾ ಒಂದು ವಿಚ್ಛೇದನೆಯು ಸಂಭವಿಸಲಿದೆ ಎಂಬ ಅರ್ಥವಲ್ಲ. ಬೈಬಲು ತೋರಿಸುವದೇನಂದರೆ ಒಬ್ಬರನ್ನೊಬ್ಬರು ಆಳವಾಗಿ ಪರಾಂಬರಿಸುವ ಜನರಲ್ಲಿಯೂ ಸಹ ಆಗಾಗ್ಯೆ ಘರ್ಷಣೆಗಳು ಇರಬಹುದು.
ಹೆಂಡತಿಯ ಅಧೀನತೆಯ ಒಂದು ಉದಾಹರಣೆಯಾಗಿ ಕ್ರೈಸ್ತ ಸ್ತ್ರೀಯರ ಮುಂದೆ ಅಬ್ರಹಾಮನ ಹೆಂಡತಿ, ಸಾರಳನ್ನು ಇಡಲಾಗಿದೆ. (1 ಪೇತ್ರ 3:6) ಆದರೂ, ದಾಸಿಯಾದ ಹಾಗರಳ ಮೂಲಕ, ಅಬ್ರಹಾಮನ ಮಗನಾಗಿರುವ ಇಷ್ಮಾಯೇಲನು, ಅಬ್ರಹಾಮನ ಇನ್ನೊಬ್ಬ ಮಗನಾದ ಇಸಾಕನ ಕ್ಷೇಮಕ್ಕೆ ಒಂದು ಬೆದರಿಕೆಯಾಗಿ ಇದ್ದಾನೆ ಎಂದು ಅವಳು ಗ್ರಹಿಸಿದಾಗ, ತನ್ನ ಭಾವನೆಗಳನ್ನು ಅವಳು ಆವೇಶಪೂರಿತಳಾಗಿ ತಿಳಿಯಪಡಿಸಿದಳು. “ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು” ಎಂದು ಸಾರಳು ಉದ್ಗರಿಸಿದಳು. “ಈ ದಾಸಿಯ ಮಗನು ನನ್ನ ಮಗನಾದ ಇಸಾಕನೊಂದಿಗೆ ಬಾಧ್ಯನಾಗಬಾರದು!” (ಆದಿಕಾಂಡ 21:9, 10) ನಿಸ್ಸಂದೇಹವಾಗಿ ಮದುವೆಯ ಬಿಗುಪುಗಳು ಉರಿದವು! ಆದರೆ ಉದ್ದ ಕಾಲಾವಧಿಯ ಹಾನಿ ಪರಿಣಮಿಸಲಿಲ್ಲ. ನಿಜವಾಗಿ, ದೇವರ ಪ್ರಚೋದನೆಯ ಮೇರೆಗೆ ಅಬ್ರಹಾಮನು ಅವಳ ಬೇಡಿಕೆಯ ಪ್ರಕಾರ ಮುಂದುವರಿದನು!
ಆದ್ದರಿಂದ, ಬಹುಮಟ್ಟಿಗೆ, ನಿಮ್ಮ ಹೆತ್ತವರ ಭಿನ್ನಾಭಿಪ್ರಾಯಗಳು, ಅವರಿಗಿಂತ ನಿಮಗೆ ಹೆಚ್ಚು ಗಮನಾರ್ಹವಾಗಿರುವಂತೆ ತೋರುತ್ತದೆ. ಹೆತ್ತವರ ಒಂದು ಕಚ್ಚಾಟದಲ್ಲಿ ಎಳೆಯ ಮಾರ್ಗರೆಟ್ ಬೊಬ್ಬೆಯಿಟ್ಟು “ಜಗಳವಾಡುವದನ್ನು ನಿಲ್ಲಿಸಿರಿ!” ಎಂದು ಕೂಗುತ್ತಾ, ನಡುವೆ ಪ್ರವೇಶಿಸಲು ಪ್ರಯತ್ನಿಸಿದಾಗ, “ನಮ್ಮ ನಡುವೆ ಕೇವಲ ಒಂದು ವಾಗ್ವಾದ ನಡೆಯುತ್ತದೆ,” ಎಂದು ಹೇಳಲ್ಪಟ್ಟಾಗ, ಅದನ್ನು ಕಂಡುಕೊಂಡಳು.
ಹೀಗೆ ಹೆಚ್ಚಿನ ಗೃಹ ಕೋಪೋದ್ರೇಕಗಳು—ವಿಶೇಷವಾಗಿ ನಿಮ್ಮ ಹೆತ್ತವರು ದೇವಭಯವುಳ್ಳವರೂ ಮತ್ತು “ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದಂತೆ, ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ, ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ” ಎಂಬ ಸಲಹೆಯನ್ನು ಪಾಲಿಸುವವರೂ ಅಗಿರುವಾಗ, ಅಲ್ಪ ಕಾಲದ್ದಾಗಿರುತ್ತವೆ ಮತ್ತು ಬೇಗನೆ ಮರೆಯಲ್ಪಡುತ್ತವೆ. (ಎಫೆಸ 4:32) ಹೌದು, ಬಹುಮಟ್ಟಿಗೆ ನಿಮ್ಮ ಹೆತ್ತವರು ನಿಮ್ಮಿಂದ ಯಾವ ಸಹಾಯವಿಲ್ಲದೆ ಅವರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವರು.
“ಮೊದಲು ಅವರ ತರ್ಕ, ನಂತರ ಹೊಡೆದಾಟ”
ಹಾಗಿದ್ದರೂ, ಮದುವೆಯ ಎಲ್ಲಾ ಸಂಕಟಗಳು, ಇಷ್ಟು ಸುಲಭವಾಗಿ ಪರಿಹಾರವಾಗುವದಿಲ್ಲ. ಅಮೆರಿಕದ ಸುಮಾರು ಎರಡು ಸಾವಿರ ಕುಟುಂಬಗಳ 7-ವರ್ಷಗಳ ಒಂದು ಅಧ್ಯಯನವು ತೋರಿಸಿದ್ದೇನಂದರೆ, “ಅಮೆರಿಕದಲ್ಲಿ ಪ್ರತಿ ವರ್ಷ ಪ್ರತಿ ಆರು ದಂಪತಿಗಳಲ್ಲಿ ಕಡಿಮೆ ಪಕ್ಷ ಒಂದು, ಅವನ ಅಥವಾ ಅವಳ ಸಂಗಾತಿಯ ವಿರುದ್ಧ ಒಂದು ಹಿಂಸಾಕೃತ್ಯ ನಡಿಸುತ್ತಾರೆ. . . . ಅದು ಹೆಚ್ಚಿನ ಅಂಶ ಒಂದು ಯಥಾರ್ಥವಾದ ಕಡಿಮೆ ಅಂದಾಜಾಗಿರುತ್ತದೆ.” ಒಂದು ಹದಿವಯಸ್ಕ ಹುಡುಗನು ತನ್ನ ಹೆತ್ತವರ ಘರ್ಷಣೆಗಳನ್ನು ಈ ರೀತಿ ಸಾರಾಂಶಿಸಿದ್ದು: “ಮೊದಲು ಅವರ ತರ್ಕ, ನಂತರ ಹೊಡೆದಾಟ.”
ನಿಮ್ಮ ಮನೆಯಲ್ಲಿ ಈ ರೀತಿ ನಡೆಯುತ್ತಿದ್ದರೆ, ನಿಮ್ಮ ಹೆತ್ತವರ ವಿವಾಹದಲ್ಲಿ ಖಂಡಿತವಾಗಿ ಗಂಭೀರ ಸಮಸ್ಯೆಗಳಿವೆ. ನಿಮ್ಮ—ಅಥವಾ ನಿಮ್ಮ ಹೆತ್ತವರ ದೈಹಿಕ ಸುರಕ್ಷತೆಗೆ ಒಂದು ನಿಜವಾದ ಬೆದರಿಕೆಯು ಇರಬಹುದು. ಮದ್ಯಪಾನ ಮಾಡುವ ತಂದೆಯೊಂದಿಗೆ ಕ್ರಮವಾಗಿ ಕಾದಾಡುತ್ತಿದ್ದ ತಾಯಿಯುಳ್ಳ ಒಬ್ಬ ಯುವ ಸ್ತ್ರೀ ಮಾರೀ ನೆನಪಿಸಿಕೊಳ್ಳುವದು: “ನಾನು ಹೆದರಿಹೋಗುತ್ತಿದ್ದೆ. ಅವನು ನನ್ನ ತಾಯಿಯನ್ನು ಗಾಯಗೊಳಿಸಲಿದ್ದಾನೆ ಅಥವಾ ಅವಳು ಅವನನ್ನು ಗಾಯಗೊಳಿಸಳಿದ್ದಾಳೆ ಎಂಬುದನ್ನು ನಾನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುತ್ತಿದ್ದೆನು.”
ದೈಹಿಕ ಆಕ್ರಮಣದ ತೋರಿಕೆಗಳಿಂದ ದೂರವಿರುವ ಆದರೆ ಒಬ್ಬರನ್ನೊಬ್ಬರು “ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ”ಗಳೊಂದಿಗೆ ಮಾತುಗಳಿಂದ ಆಕ್ರಮಣ ಮಾಡುವ ಹೆತ್ತವರು ಸಹ, ಗಂಭೀರ ಚಿಂತೆಗೆ ಕಾರಣರಾಗಿರುತ್ತಾರೆ. (ಎಫೆಸ 4:31) ಅಂತೆಯೇ, ಲೈಂಗಿಕ ಅತೃಪ್ತಿ ಅಥವಾ ದಾಂಪತ್ಯ ದ್ರೋಹದ ಕುರಿತಾಗಿ ಸುಳಿವು ನೀಡುವ ಚೂಪಾದ ಮಾತುಗಳನ್ನು ಎಸೆಯುವ ಹೆತ್ತವರು, ಗಂಭೀರ ವೈವಾಹಿಕ ಸಮಸ್ಯೆಗಳು ಅಸ್ತಿತ್ವದಲ್ಲಿರಬಹುದು ಎಂಬ ಸ್ಪಷ್ಟ ಸೂಚನೆಗಳನ್ನು ಕೊಡುತ್ತಾರೆ.
ಕೆಲವು ಕುಟುಂಬಗಳಿಗೆ, ಮದ್ಯಪಾನ ವ್ಯಸನ ಮತ್ತು ಅಮಲೌಷಧಗಳು ಅಂಥ ಘರ್ಷಣೆಗಳ ವಿಶೇಷ ಮೂಲಗಳಾಗಿರುತ್ತವೆ. ಅಥವಾ ಒಬ್ಬ ಹೆತ್ತವನು⁄ಳು ಕ್ರೈಸ್ತನಾ⁄ಳಾಗಿರಬಹುದು, ಮತ್ತೊಬ್ಬನು⁄ಳು ಅವಿಶ್ವಾಸಿಯಾಗಿರಬಹುದು. ಅಥವಾ ಒಂದು ಸನ್ನಿವೇಶವು ಕುಟುಂಬವೊಂದರಲ್ಲಿ “ಭೇದವನ್ನು ಹುಟ್ಟಿಸುವದು” ಎಂದು ಯೇಸು ಕ್ರಿಸ್ತನು ಮುಂತಿಳಿಸಿದ್ದನು. ಗಂಭೀರ ವೈವಾಹಿಕ ಒತ್ತಡವು ಪರಿಣಾಮವಾಗಿರಬಹುದು.—ಮತ್ತಾಯ 10:35.
ನಿಮ್ಮ ಹೆತ್ತವರ ಮದುವೆಯು ನಿಜವಾಗಿ ಗಂಡಾಂತರದಲ್ಲಿದೆ ಎಂದು ತೋರುವಾಗ, ನೀವೇನನ್ನು ಮಾಡಬೇಕು? ನಿಸ್ಸಹಾಯಕರಾಗಿ ನೋಡುತ್ತಿರುವದನ್ನು ಬಿಟ್ಟು, ನೀವೇನನ್ನಾದರೂ ಮಾಡಲಿರುವ ಸಂಗತಿಗಳಿವೆಯೇ? ಇದು ಮುಂದಿನ ಒಂದು ಲೇಖನದ ವಿಷಯವಾಗಿರುವದು. (g89 11/22)
[ಪುಟ 24 ರಲ್ಲಿರುವಚಿತ್ರ]
ಹದಿವಯಸ್ಕರಿಗೆ ವೈವಾಹಿಕ ಸ್ಫೋಟನಗಳು ಸಂಕಟಮಯವಾಗಿ ರುಜುವಾಗಬಹುದು
[ಪುಟ 25 ರಲ್ಲಿರುವಚಿತ್ರ]
ಬೈಬಲ್ ಸೂತ್ರಗಳನ್ನು ಅನ್ವಯಿಸುವದು ಸಮಾಧಾನವನ್ನು ಪುನಃ ಸ್ಥಾಪಿಸುತ್ತದೆ