ಯೆಹೋವನ ಸಾಕ್ಷಿಗಳು ಪ್ರಾಚ್ಯ ಯೂರೋಪಿನಲ್ಲಿ
ಬರ್ಲಿನ್ನ ಗೋಡೆಯು ನವಂಬರ 1989ರಲ್ಲಿ ಬಿದ್ದಾಗ, ಏಷ್ಯಾವೀಕ್ ವರದಿಮಾಡಿದ್ದು, “ಪೂರ್ವ ಬರ್ಲಿನ್ ತನ್ನ ಸರಹದ್ದನ್ನು ತೆರೆದ ಮೇಲೆ 20 ಲಕ್ಷದಷ್ಟು ಪೂರ್ವ ಜರ್ಮನರು ಎರಡು ದಿನಗಳಲ್ಲಿ ಅವರ ವಿಭಜಿತ ದೇಶದ ಪಾಶ್ಚಿಮಾತ್ಯ ಅರ್ಧಕ್ಕೆ ಪ್ರವಾಹದೋಪಾದಿ ಹರಿದು ಬಂದರು. ಅವರ ಕಾರ್ಯೋದ್ದೇಶವೇನಾಗಿತ್ತು?
ಬಹಳ ಸಮೃದ್ಧಿಯುಳ್ಳವರಿಗೆ ಅದೊಂದು ಖರೀದಿಗಳನ್ನು ಮಾಡುವ ನಲಿದಾಟವಾಗಿತ್ತು. ಬೇರೆಯವರಿಗೆ ಅದು ಮುಖ್ಯವಾಗಿ ಪ್ರದರ್ಶಿತ ವಸ್ತುಗಳನ್ನು ವೀಕ್ಷಿಸುವದು ಮತ್ತು ಅವರಿಗೆ ಹೊಸದಾಗಿ ದೊರೆತ ಸ್ವಾತಂತ್ರ್ಯವನ್ನು ಸವಿಯುವದಾಗಿತ್ತು. ಅನೇಕರು, ಬರ್ಲಿನ್ ಮತ್ತು ಬೇರೆ ಪಟ್ಟಣಗಳ ಬೀದಿಗಳಲ್ಲಿ ಯೆಹೋವನ ಸಾಕ್ಷಿಗಳನ್ನು ಕಂಡುಕೊಂಡರು ಮತ್ತು ಅವರಿಂದ ಸಾಹಿತ್ಯಗಳನ್ನು ಪಡೆದುಕೊಂಡರು. ಅಂದಿನಿಂದ, ಕೆಲವರು ಫ್ರಾಂಕ್ಫರ್ಟ್ ಎಮ್ ಮೇಯ್ನ್ ಹತ್ತಿರದ, ಸೆಲ್ಟರ್ಸ್ನಲ್ಲಿರುವ ವಾಚ್ ಟವರ್ ಸೊಸೈಟಿಯ ಶಾಖಾ ಆಫೀಸಿಗೆ, ಕೆಲವು ವೈಶಿಷ್ಟ್ಯಕರ ಪ್ರತಿಕ್ರಿಯೆಗಳನ್ನು ವ್ಯಕ್ತ ಪಡಿಸಿ ಬರೆದಿರುತ್ತಾರೆ.
ಒಂದು ಪತ್ರವು ಹೇಳಿದ್ದು: “ನನ್ನ ಜೀವಿತದಲ್ಲಿ ಪ್ರಥಮ ಬಾರಿ ನಾನು ಪಶ್ಚಿಮ ಬರ್ಲಿನ್ಗೆ ಭೇಟಿ ನೀಡಿದಾಗ, ಬೀದಿಯಲ್ಲಿ ಯೆಹೋವನ ಸಾಕ್ಷಿಗಳ ಮೂಲಕ ದ ವಾಚ್ಟವರ್ ಪತ್ರಿಕೆಯ ಪ್ರತಿಯೊಂದು ಬಹುಮಾನವಾಗಿ ನನಗೆ ದೊರಕಿತು. ಅಂದಿನಿಂದ, ನಾನು ಪುನಃ ಬೈಬಲಿನಲ್ಲಿ ನೋಡಲು ಆರಂಭಿಸಿದೆನು ಮತ್ತು ನನಗೆ ತುಂಬಾ ಸಮಸ್ಯೆಗಳು ಇರುವದಾದರೂ ಕೂಡಾ, ಪುನಃ ಒಮ್ಮೆ ಜೀವಿಸುವದರಲ್ಲಿ ನನಗೆ ನಿರೀಕ್ಷೆ ಮತ್ತು ಸಂತೋಷವನ್ನು ಕೊಡುವವರು ಇದ್ದಾರೆ. ಯುವರ್ ಯುಥ್—ಗೆಟ್ಟಿಂಗ್ ದ ಬೆಸ್ಟ್ ಅವುಟ್ ಆಫ್ ಇಟ್ ಪುಸ್ತಕವನ್ನು ಓದಲು ಸಾಧ್ಯವಾದರೆ ಬಹಳ ಸಂತೋಷವಾಗುತ್ತಿತ್ತು. ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕ ಹೊಂದಲೂ ನಾನು ಬಯಸುತ್ತೇನೆ.”
ಇನ್ನೊಬ್ಬ ಸಂದರ್ಶಕನು ಬರೆದದ್ದು: “ನಾನು ನ್ಯೂರೆಂಬರ್ಗ್ನಲ್ಲಿನ ಮುಖ್ಯ ನಿಲ್ದಾಣದ ಕಡೆಗೆ ಸುರಂಗದ ಮೂಲಕ ಹಾದುಹೋಗುತ್ತಿರುವಾಗ, ಒಬ್ಬಾಕೆ ಸ್ತ್ರೀಯು ನನಗೆ ಎಚ್ಚರ! ಮತ್ತು ಕಾವಲಿನಬುರುಜು (ಎವೇಕ್! ಮತ್ತು ವಾಚ್ಟವರ್) ಪ್ರತಿಗಳನ್ನು ನೀಡಿದಳು. ಕೆಲವು ದಿವಸಗಳಿಂದ ದಿನಂಪ್ರತಿ ಬೈಬಲನ್ನು ಪುನಃ ಉಪಯೋಗಿಸುತ್ತಿದ್ದೇನೆ.”
1990ರ ಬೇಸಗೆ ಕಾಲದಲ್ಲಿ ಪ್ರಾಚ್ಯ ಯೂರೋಪಿನಾದ್ಯಂತ ಮುಖ್ಯ ಪಟ್ಟಣಗಳಲ್ಲಿ ಯೆಹೋವನ ಸಾಕ್ಷಿಗಳ ಅಧಿವೇಶನಗಳು ನಡಿಸಲ್ಪಟ್ಟವು. ಪ್ರಾಚ್ಯ ಜರ್ಮನಿಯನ್ನು ಸೇರಿಸಿ, ಅನೇಕ ರಾಷ್ಟ್ರಗಳಿಂದ ಬಂದ ಸಾಕ್ಷಿಗಳು ಹಾಜರಾದ ಒಂದು ಅಧಿವೇಶನದ ಕ್ಷೇತ್ರವು, ಹಿಂದೆ ಪಶ್ಚಿಮ ಜರ್ಮನಿಯ ಓಲಿಂಪಿಯಾ ಸ್ಟೇಡಿಯಂ ಆಗಿತ್ತು. ಅಲ್ಲಿ ಹಾಜರಾದ 44,532ರೊಳಗೆ 30,000 ಸಾವಿರದಷ್ಟು ಪ್ರಾಚ್ಯ ಜರ್ಮನಿಯವರು ಎಂದು ಅಂದಾಜಿಸಲಾಗಿದೆ. ಬರ್ಲಿನರ್ ಮೊರ್ಜನ್ಪೊಸ್ಟ್ ವಾರ್ತಾಪತ್ರಿಕೆ “ಭಾಗವಹಿಸಿದವರು ಆದಿಕ್ರೈಸ್ತರ ಮಾದರಿಗೆ ನಿಕಟವಾಗಿ ಅಂಟಿಕೊಂಡು” ನೀರಿನಲ್ಲಿ ಪೂರ್ಣ ಮುಳುಗಿಸುವಿಕೆಯ ವಿಧಾನದ ಮೂಲಕ ಓಲಿಂಪಿಕ್ ಈಜುಕೊಳದಲ್ಲಿ 1,017 ಹೊಸ ಸಾಕ್ಷಿಗಳು ದೀಕ್ಷಾಸ್ನಾನ ಪಡೆದು ಕೊಂಡರು ಎಂದು ವರದಿ ಮಾಡಿತು.
ಪ್ರಾಚ್ಯ ಜರ್ಮನಿಯಲ್ಲಿ ವಿಷಯಗಳು ಹೇಗೆ ಬದಲಾವಣೆಗೊಂಡವು? ಮಾರ್ಚ್, 1990ರಲ್ಲಿ ಪೂರ್ವ ಜರ್ಮನಿಯ ವಾರ್ತಾ ಪತ್ರಿಕೆಗಳು ಯೆಹೋವನ ಸಾಕ್ಷಿಗಳ ಶಾಸನಬದ್ಧತೆಯನ್ನು ಪ್ರಕಟಿಸಿದವು. “ಯೆಹೋವನ ಸಾಕ್ಷಿಗಳು ಪುನಃ ಕಾನೂನು ಮನ್ನಣೆ ಪಡೆದರು” ಎಂಬ ಶಿರೋನಾಮದ ಕೆಳಗೆ ಪೂರ್ವ ಜರ್ಮನಿಯ ಮಿಟೆಲ್ಡಿಯುಶೇ ಝೆಟುಂಗ್ ವಾರ್ತಾ ಪತ್ರಿಕೆಯು ತಿಳಿಸಿದ್ದು: “ಮಾರ್ಚ್ 14 ಅಂದರೆ ನಾಲ್ಕು ದಶಕಗಳ ತನಕ ತಾಳಿಕೊಂಡ ನಿಷೇಧದ ಅಂತ್ಯವೇ. ಈ ದಿನ ಜರ್ಮನಿಯ ಯೆಹೋವನ ಸಾಕ್ಷಿಗಳ ಪ್ರತಿನಿಧಿಗಳು ತಮ್ಮ ಜೇಬಿನಲ್ಲಿ, ಜಿ. ಡಿ. ಆರ್ [ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್] ಸ್ಟೇಟ್ ಸೆಕ್ರಟರಿಯೆಟ್ ಫಾರ್ ಚರ್ಚ್ ಆಫೇರ್ಸ್ನ (ಚರ್ಚ್ ವ್ಯವಹಾರಗಳಿಗಾಗಿ ಜರ್ಮನ್ ಗಣರಾಜ್ಯದ ಕಾರ್ಯದರ್ಶಿ ಕಚೇರಿ) ಕಟ್ಟಡದಿಂದ ಅವರ ನಂಬಿಕೆಯ ಸಮಾಜವು ಜಿ. ಡಿ. ಆರ್.ನ ಆಳಿಕ್ವೆಯೊಳಗೆ ಧರ್ಮವನ್ನು ಸ್ವತಂತ್ರವಾಗಿ ಆಚರಿಸುವಂತೆ ಬಿಡುವ ಒಂದು ಅಧಿಕೃತ ದಾಖಲೆಯೊಂದಿಗೆ ಹೊರಬಿದ್ದರು.”
ಲೀಪ್ಜಿಗ್ನಲ್ಲಿರುವ ಒಬ್ಬ ಸಾಕ್ಷಿಯಿಂದ ಕಳೆದ ವಸಂತಕಾಲದಲ್ಲಿ ತಲುಪಿದ ಒಂದು ಪತ್ರವು ಈ ಕಥನವನ್ನು ತಿಳಿಸಿದೆ: “ಒಂದು ವಾರದ ಹಿಂದಿನ ತನಕ ಸಹಾ ನಾವು ಆತ್ಮಿಕ ಆಹಾರವನ್ನು, ಸಣ್ಣ ಪ್ರಮಾಣಗಳಲ್ಲಿ ರಹಸ್ಯವಾಗಿ ಆಮದು ಮಾಡಿಕೊಳ್ಳುತ್ತಿದ್ದೆವು. ಈಗ [ಮಾರ್ಚ್ 14, 1990] ನಾವು ಅಧಿಕೃತವಾಗಿ ಅಂಗೀಕರಿಸಲ್ಪಟ್ಟಿದ್ದೇವೆ! ಬೇಗನೇ ನಾವು ನಾಲ್ಕು ಟನ್ನಷ್ಟು ಸಾಹಿತ್ಯಗಳನ್ನು ಹೊಂದಿರುವ ಟ್ರಕ್ನ ಸಾಮಾನು ಇಳಿಸಲಿದ್ದೇವೆ!” ವಾಸ್ತವದಲ್ಲಿ, ಪೂರ್ವ ಜರ್ಮನಿಯೊಳಗಿನ ಮೊದಲ ಟ್ರಕ್ನಲ್ಲಿ 25 ಟನ್ಗಳಷ್ಟು ಬೈಬಲ್ ಸಾಹಿತ್ಯಗಳು ತುಂಬಿದ್ದವು, ಮತ್ತು ನಂತರದ ಎರಡು ತಿಂಗಳುಗಳೊಳಗೆ, 250 ಟನ್ಗಳಷ್ಟು ಹೆಚ್ಚನ್ನು ಕಳುಹಿಸಲಾಯಿತು. 40ಕ್ಕಿಂತಲೂ ಹೆಚ್ಚು ವರ್ಷಗಳಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಆ ಸಾಕ್ಷಿಗಳ ಆತ್ಮಿಕ ಹಸಿವು ಅಂಥದ್ದಾಗಿತ್ತು!
ನಾಜೀಸಂ (1933-45) ಮತ್ತು ಕಮ್ಯೂನಿಸಂಗಳೆರಡೂ ಜರ್ಮನಿಯಲ್ಲಿ ಸಾಕ್ಷಿಗಳ ಕೆಲಸವನ್ನು ಅಳಿಸಲು ಪ್ರಯತ್ನಿಸಿದ್ದನ್ನು ನಾವು ನೆನಪಿಗೆ ತರುವಾಗ, ಅವರ ಹಿಂದಣ ಮತ್ತು ಸದ್ಯದ ಹುರುಪಿನ ಚಟುವಟಿಕೆಗಳು ಅವರ ಸಮಗ್ರತೆಯ ಮತ್ತು ಅವರ ಮೇಲಿನ ದೇವರ ಆಶೀರ್ವಾದದ ಉತ್ತಮ ಸಾಕ್ಷ್ಯವಾಗಿದೆ.
ಸೋವಿಯೆಟ್ ರಶ್ಯಾದಲ್ಲಿ ಯೆಹೋವನ ಸಾಕ್ಷಿಗಳು
ದಶಂಬರ, 1989ರಲ್ಲಿ, ಮಿಕಾಯೋಲ್ ಗೊರ್ಬಚೇವ್ರು ವ್ಯಾಟಿಕನ್ನಲ್ಲಿ ಪೋಪ್ ಜೋನ್ ಪೌಲ್ IIರನ್ನು ಭೇಟಿಯಾದರು. ಸೋವಿಯೆಟ್ ವಾರ್ತಾ ಪತ್ರಿಕೆಯಾದ ಪ್ರಾವ್ಡಾ ಗೊರ್ಬಚೇವ್ರು ಹೇಳಿದ್ದ ಈ ಮಾತುಗಳನ್ನು ವರದಿ ಮಾಡಿದ್ದು: “ನಾವು ಆಳವಾದ, ಅರ್ಥಭರಿತ ಸಂಭಾಷಣೆಗಳನ್ನು ನಡಿಸಿದೆವು. . . . ನಾವು ಮತ್ತು ಧರ್ಮ ಮತ್ತು ಯೂರೋಪ್, ಲೋಕ ಮತ್ತು ಸೋವಿಯೆಟ್ ರಶ್ಯಾದಲ್ಲಿ ಜರುಗುತ್ತಿರುವ ಕಾರ್ಯವಿಧಾನಗಳ ಬಗ್ಯೆ ಮಾತನಾಡಿದೆವು.” ಎಲ್ ಓಸ್ಸೆರ್ವಟೊರ್ ರೊಮಾನೊ, ವ್ಯಾಟಿಕನ್ನ ಅಧಿಕೃತ ವಾರ್ತಾ ಪತ್ರಿಕೆ, ಶ್ರೀಮಾನ್ ಗೊರ್ಬಚೇವ್ರು ಪೋಪ್ರಿಗೆ ಮಾಡಿದ ಭಾಷಣದಲ್ಲಿ ಹೇಳಿದ್ದನ್ನು ವರದಿಮಾಡಿತು: “ಕ್ರೈಸ್ತರು, ಮುಸಲ್ಮಾನರು, ಯೆಹೂದ್ಯರು, ಬೌದ್ಧರು, ಮತ್ತು ಬೇರೆಯವರು ಕೂಡಾ ಸೇರಿರುವ ಅನೇಕ ಮತಗಳ ಜನರು ಸೋವಿಯೆಟ್ ರಶ್ಯಾದಲ್ಲಿ ಜೀವಿಸುತ್ತಿದ್ದಾರೆ. ಅವರೆಲ್ಲರಿಗೂ ತಮ್ಮ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿ ಪಡಿಸುವ ಹಕ್ಕು ಇದೆ. ಬೇಗನೇ, ಮನಸ್ಸಾಕ್ಷಿಯ ಸ್ವಾತಂತ್ರ್ಯತೆಯ ನಿಯಮವನ್ನು ನಮ್ಮ ದೇಶದಲ್ಲಿ ಅಂಗೀಕರಿಸಲಾಗುವದು.”
ಆ ಮಾತಿಗೆ ಸತ್ಯವಾಗಿ, ಸಪ್ಟಂಬರ, 1990ರಲ್ಲಿ ಸೋವಿಯೆಟ್ ಶಾಸನ ಸಭೆಯು ಮನಸ್ಸಾಕ್ಷಿಯ ಸ್ವಾತಂತ್ರ್ಯವನ್ನು ಅನುಮತಿಸುವ ನಿಯಮವೊಂದನ್ನು ಮಂಜೂರು ಮಾಡಿತು. ನಿಯಮದ 3ನೇ ಪ್ರಕರಣದ ಕರಡು ಪ್ರತಿ ತಿಳಿಸುವದು: “ಮನಸ್ಸಾಕ್ಷಿಯ ಸ್ವಾತಂತ್ರ್ಯತೆಯ ಹಕ್ಕಿನ ಹೊಂದಿಕೆಯಲ್ಲಿ, ಪ್ರತಿಯೊಬ್ಬ ನಾಗರಿಕನು ಧರ್ಮದೊಂದಿಗಿನ ತನ್ನ ಸಂಬಂಧವನ್ನು ಸ್ವತಃ ತನಗಾಗಿ ನಿರ್ಧರಿಸುವನು. ಯಾವುದೇ ಧರ್ಮವನ್ನು ವೈಯಕ್ತಿಕವಾಗಿ, ಅಥವಾ ಬೇರೆಯವರೊಂದಿಗೆ ಸಾಮೂಹಿಕವಾಗಿ ಆಚರಿಸಲು, ಅಥವಾ ಯಾವುದನ್ನೇ ಆಚರಿಸದಿರಲು ಮತ್ತು ಧರ್ಮದೊಂದಿಗೆ ಅವನ ಸಂಬಂಧಕ್ಕೆ ಅನುಗುಣವಾದ ಮನವರಿಕೆಗಳನ್ನು ವ್ಯಕ್ತಪಡಿಸಲು ಮತ್ತು ಪ್ರಸರಿಸಲು ಹಕ್ಕು ಉಂಟು.”
ಧಾರ್ಮಿಕ ಸ್ವಾತಂತ್ರ್ಯತೆಯನ್ನು ಆಚರಿಸಲು ಮುನ್ನೋಡುವಂಥ ಸಾವಿರಾರು ಯೆಹೋವನ ಸಾಕ್ಷಿಗಳು ಸೋವಿಯೆಟ್ ರಶ್ಯಾದಲ್ಲಿ ಇದ್ದಾರೆ. (ಜನವರಿ 8, 1991ರ ಇಂಗ್ಲಿಷ್ ಎವೇಕ್!ನ ಪುಟ 22 ನೋಡಿರಿ.) 1990ರ “ಶುದ್ಧ ಭಾಷೆ” ಅಧಿವೇಶನಗಳಿಗೆ, ಸೋವಿಯೆಟ್ ರಶ್ಯಾದಲ್ಲೆಲ್ಲಾ ಹರಡಿರುವಂಥ ಎಲ್ಲಾ ಸಾಕ್ಷಿಗಳಿಗೆ ಪ್ರತಿನಿಧಿಕರಿಸುವ 17,000ಕ್ಕಿಂತಲೂ ಹೆಚ್ಚಿನ ನಿಯೋಗಿಗಳು ಸೋವಿಯೆಟ್ ರಶ್ಯಾದಿಂದ ವಾರ್ಸೊದಲ್ಲಿ ರಶ್ಯನ್ ವಿಭಾಗದ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಸೋವಿಯೆಟ್ ರಶ್ಯಾದಲ್ಲಿಯೇ ಅಧಿವೇಶನಗಳನ್ನು ನಡಿಸುವದಕ್ಕೆ ಸಾಧ್ಯವಾಗುವ ದಿನಕ್ಕಾಗಿ ಅವರು ಮುನ್ನೋಡುತ್ತಿದ್ದಾರೆ.
ಪೊಲೇಂಡಿನಲ್ಲಿ ಅಭಿವೃದ್ಧಿ
ಯೆಹೋವನ ಸಾಕ್ಷಿಗಳು ಪೊಲೇಂಡಿನಲ್ಲಿ ಮೇ, 1989ರಲ್ಲಿ ಶಾಸನಬದ್ಧತೆಯನ್ನು ಹೊಂದಿದರು. ಅಂದಿನಿಂದಿಚೇಗೆ ಒಂದು ಶಾಖಾ ಕಾರ್ಯಾಲಯವನ್ನು ಸ್ಥಾಪಿಸಲಾಯಿತು ಮತ್ತು ವಿಸ್ತರಿತ ಸವಲತ್ತುಗಳು ವಾರ್ಸೊದ ಹತ್ತಿರ ಕಟ್ಟಲ್ಪಡುತ್ತಾ ಇವೆ. ಈ ಹಿಂದೆ, ಕ್ರೈಸ್ತ ತಾಟಸ್ಥತೆಯ ವಿವಾದಕ್ಕೋಸ್ಕರ ನೂರಾರು ಯುವ ಸಾಕ್ಷಿಗಳು ಬಂಧಿಸಲ್ಪಟ್ಟಿದ್ದರು. ಈಗ ಅವರು ತಕ್ಕದಾದ್ದ ದೃಢೀಕರಣ ಪತ್ರವನ್ನು ಸಾದರ ಪಡಿಸುವಲ್ಲಿ ಅವರು ಮಿಲಟರಿ ಸೇವೆ ಮತ್ತು ಶಿಕ್ಷೆಯಿಂದ ವಿನಾಯಿತಿ ಪಡೆಯುವರು.
1989 ಮತ್ತು 1990ರಲ್ಲಿ ಪೋಲೆಂಡಿನಲ್ಲಿ ನಡೆದ ಅಧಿವೇಶನಗಳು ಅಲ್ಲಿರುವ ಸಾಕ್ಷಿಗಳಿಗೆ ಇನ್ನೊಂದು ಮಹಾ ಪ್ರಚೋದನೆಯಾಗಿತ್ತು. ಒಂದು ವರದಿಯು ಹೇಳುತ್ತದೇನಂದರೆ ಪೊಲೇಂಡಿನಲ್ಲಿ ಸಕ್ರಿಯಾ ಸಾಕ್ಷಿಗಳ ಸಂಖ್ಯೆಯು ಗತ ವರ್ಷದ ಪ್ರತಿಯೊಂದು ತಿಂಗಳುಗಳಲ್ಲಿ ಅಭಿವೃದ್ಧಿಗೊಂಡು, ಹೊಸ ಉನ್ನತ ಸಂಖ್ಯೆ 97,000ಕ್ಕಿಂತ ಹೆಚ್ಚಾಗಿದೆ. ಸಂಶಯವಿಲ್ಲದೆ ಬೇಗನೆ ಪೊಲೇಂಡ್ 1,00,000ಕ್ಕಿಂತಲೂ ಹೆಚ್ಚು ಸಾಕ್ಷಿಗಳನ್ನು ಹೊಂದಿರುವ ಹನ್ನೆರಡನೆಯ ದೇಶವಾಗಲಿರುವದು.a ಏಪ್ರಿಲ್ನಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಯ ಹಾಜರಿಯು 1,88,861 ಜನರದ್ದಾಗಿತ್ತು.
ರೊಮಾನಿಯಾದಲ್ಲಿ ಧಾರ್ಮಿಕ ಸ್ವಾತಂತ್ರ್ಯ
ರೊಮಾನಿಯಾದಲ್ಲಿನ ಸಾಕ್ಷಿಗಳು, ಏಪ್ರಿಲ್, 1990ರಲ್ಲಿ ತಮ್ಮ ಸಂಘಕ್ಕೆ ಕಾನೂನುಬದ್ಧ ಅಂಗೀಕಾರ ಸಿಕ್ಕಿದೆ ಎಂದು ಕೇಳಲು ರೋಮಾಂಚನಗೊಂಡರು. (ಪುಟ 13ರ ಬಾಕ್ಸ್ನ್ನು ನೋಡಿರಿ.) ಬೇಗನೇ ರಾಷ್ಟ್ರದಲ್ಲೆಲ್ಲಾ ಸರ್ಕೀಟ್ ಸಮ್ಮೇಳನಗಳನ್ನು ಸಂಸ್ಥಾಪಿಸಲಾಯಿತು, ಮತ್ತು ಆ ಸಮಯದಲ್ಲಿ ದೇಶದಲ್ಲಿ ಕೇವಲ 19,000ದಷ್ಟು ಸಾಕ್ಷಿಗಳಿದ್ದರೂ ಕೂಡಾ, ಒಂದೇ ಸರಣಿಯಲ್ಲಿ 44,000ಕ್ಕಿಂತಲೂ ಹೆಚ್ಚು ಉಪಸ್ಥಿತರಿದ್ದರು. ನಿಶ್ಚಯವಾಗಿಯೂ ಅನೇಕ ರೊಮಾನಿಯರು ರಾಜ್ಯದ ಸಂದೇಶದ ಕಡೆಗೆ ಪ್ರತಿಕ್ರಿಯೆಯನ್ನು ತೋರಿಸುತ್ತಿದ್ದಾರೆ.
1990ಕ್ಕಾಗಿ “ಶುದ್ಧ ಭಾಷೆ” ಎಂಬ ಲೋಕವ್ಯಾಪಕ ಮುಖ್ಯ ವಿಷಯದ ಮೇಲೆ ನಡೆದ ಜಿಲ್ಲಾ ಅಧಿವೇಶನಗಳು ಬ್ರೆಸೊವ್ ಮತ್ತು ಕ್ಲುಜ್-ನಪೊಕಾ ಪಟ್ಟಣಗಳಲ್ಲಿ ನಡೆದವು. ಕಾರ್ಯಕ್ರಮವನ್ನು ರೊಮಾನಿಯಾ ಮತ್ತು ಹಂಗೆರಿಯನ್ ಭಾಷೆಗಳಲ್ಲಿ ಸಾದರ ಪಡಿಸಲಾಯಿತು. 36,000ಕ್ಕಿಂತಲೂ ಹೆಚ್ಚು ಹಾಜರಿದ್ದರು ಮತ್ತು 1,445 ಮಂದಿ ದೀಕ್ಷಾಸ್ನಾನ ಹೊಂದಿದರು.
ಜನವರಿ 1, 1991ರ ಸಂಚಿಕೆಯೊಂದಿಗೆ ದಿ ವಾಚ್ಟವರ್ ರೊಮಾನಿಯನ್ ಭಾಷೆಯಲ್ಲಿ ಇಂಗ್ಲಿಷ್ ಭಾಷೆಯೊಂದಿಗೆ ಏಕಕಾಲದಲ್ಲಿ ಮತ್ತು ಪೂರ್ಣ ವರ್ಣಗಳಲ್ಲಿ ಪ್ರಕಾಶಿಸಲ್ಪಡಲಾರಂಭಿಸಿತು.
ಹತ್ತಿರದ ಬುಲ್ಗೇರಿಯಾದಲ್ಲಿ, ಎಲ್ಲಿ ಇಸರ್ನ್ಟ್ ಆರ್ಥಡಕ್ಸ್ ಧರ್ಮವು ಸಂಪೂರ್ಣ ಅಧಿಕಾರದಿಂದ ಇದೆಯೋ, ಅಲ್ಲಿ ಸಾಕ್ಷಿಗಳಿಗೆ ಶಾಸನಬದ್ಧ ಮಾನ್ಯತೆ ಇಷ್ಟರ ವರೆಗೆ ದೊರಕದಿದ್ದರೂ, ಅವರು ತಮ್ಮ ಸಭಾಕೂಟಗಳಿಗೋಸ್ಕರ, ಬಾಡಿಗೆಯ ಕೊಠಡಿಗಳನ್ನು ಪಡೆದು ಕೊಳ್ಳುತ್ತಾರೆ. ಬುಲ್ಗೇರಿಯನ್ ಮತ್ತು ಗ್ರೀಕ್ ಭಾಷೆಯಲ್ಲಿ ನಡೆದ “ಶುದ್ಧ ಭಾಷೆ” ಅಧಿವೇಶನಕ್ಕೋಸ್ಕರ 200ಕ್ಕೂ ಹೆಚ್ಚಿನವರು ಗ್ರೀಸ್ನ ಸಾಲೊನಿಕಾದ ವರೆಗೂ ಪ್ರಯಾಣಿಸಿದರು.
ಹಂಗೆರಿಯಿಂದ ಶುಭವಾರ್ತೆಯು
ಜೂನ್ 27, 1989, ಹಂಗೆರಿಯಲ್ಲಿರುವ ಸಾಕ್ಷಿಗಳಿಗೆ ಒಂದು ಐತಿಹಾಸಿಕ ದಿನವಾಗಿತ್ತು. ವಾರ್ತಾ ಪತ್ರಿಕೆ ಮಾಗ್ಯಾರ್ ನೆಮ್ಜಟ್ ಪ್ರಕಟಿಸಿದ್ದು: “ಧಾರ್ಮಿಕ ಸ್ವಾತಂತ್ರ್ಯವನ್ನು ಬೆಂಬಲಿಸುವ ನಿಯಮಕ್ಕನುಸಾರವಾಗಿ, ಹಂಗೆರಿಯಲ್ಲಿರುವ ಯೆಹೋವನ ಸಾಕ್ಷಿಗಳ ಧಾರ್ಮಿಕ ಸಂಘವನ್ನು ಒಂದು ಶಾಸನಬದ್ಧವಾಗಿ ಅಂಗೀಕೃತವಾದ ಧಾರ್ಮಿಕ ಮತ ಎಂದು ದ ಸ್ಟೇಟ್ ಆಫೀಸ್ ಫಾರ್ ಚರ್ಚ್ ಅಫೇರ್ಸ್ (ಚರ್ಚ್ ವ್ಯವಹಾರಗಳಿಗೆ ರಾಜ್ಯದ ಕಾರ್ಯಾಲಯ) ಘೋಷಿಸಿದೆ.” ಈ ವಾರ್ತೆಯನ್ನು ರೇಡಿಯೋ ಮತ್ತು ಟೀವೀಗಳ ಮೂಲಕ ಪ್ರಕಟಿಸಿದರು. ಜೆಹೊವಾ ಟಾನೊಯ್ (ಯೆಹೋವನ ಸಾಕ್ಷಿ)ಗಳಿಗೆ ಅವರ ಕೆಲಸಕ್ಕೋಸ್ಕರ ಕಟ್ಟಕಡೆಗೆ ಕಾನೂನುಬದ್ಧ ಮನ್ನಣೆ ದೊರೆಯಿತು ಎಂದು ಹಂಗೆರಿಯನರಿಗೆ ತಿಳಿದುಬಂತು.
ದೇಶದ ದೊಡ್ಡ ಪ್ರದೇಶಗಳನ್ನು ಆವರಿಸಲು, “ಶುದ್ಧ ಭಾಷೆ” ಅಧಿವೇಶನಗಳನ್ನು ಪೆಕ್ಸ್, ಮಿಸ್ಕೊಲ್, ಡೆಬ್ರಾಸನ್ ಮತ್ತು ಬುಡಾಪೆಸ್ನ್ಟಲ್ಲಿ ಜರುಗಿಸಲಾಯಿತು. 2,000ದಷ್ಟು ಹಂಗೆರಿಯನ್ ಭಾಷೆ ಮಾತನಾಡುವವರು ಜೆಕಸ್ಲೊವಾಕಿಯಾ ಮತ್ತು ಸೋವಿಯೆಟ್ ರಶ್ಯಾದಿಂದ ಬಂದರು. ಯೆಹೋವನ ಸಾಕ್ಷಿಗಳ ಅಂತರ್-ರಾಷ್ಟ್ರೀಯ ಐಕ್ಯತೆಗೆ ಒತ್ತುಹಾಕುವಂತೆ, ಫಿನ್ಲೇಂಡಿನಿಂದ 700 ಸಂದರ್ಶಕರ ತಂಡ ಹಾಜರಾಯಿತು. 2,000ಕ್ಕಿಂತಲೂ ಹೆಚ್ಚು ರೊಮಾನಿಯನ್ ಪ್ರತಿನಿಧಿಗಳನ್ನು ಸೇರಿಸಿ, ಹಂಗೆರಿಯಲ್ಲಿನ ಜುಮ್ಲಾ ಹಾಜರಿಯು 21,568 ಆಗಿತ್ತು.
ಜನವರಿ, 1990ರಿಂದ, ಹಂಗೆರಿಯಲ್ಲಿರುವ ಸಾಕ್ಷಿಗಳಿಗೆ, ಇಂಗ್ಲಿಷ್ ಭಾಷೆಯ ಮೂಲಪ್ರತಿಗಳಿಂದ ಏಕಕಾಲದಲ್ಲಿ ಭಾಷಾಂತರಿಸಲ್ಪಟ್ಟ, ಅವರ ಪೂರ್ಣ-ವರ್ಣದ ಪತ್ರಿಕೆಗಳು ಕ್ರಮವಾಗಿ ದೊರಕಲಾರಂಭಿಸಿದವು.
ಜೆಕಸ್ಲೊವಾಕಿಯಾದಲ್ಲಿ ಮುನ್ನಡೆಯುವಿಕೆ
ಏರುಪೇರಾದ ಪರ್ವತಗಳ ಮತ್ತು ಫಲವತ್ತಾದ ಬಯಲುಗಳ ಈ ಸುಂದರ ದೇಶದಲ್ಲಿ ಯೆಹೋವನ ಸಾಕ್ಷಿಗಳು ಇನ್ನೂ ಕೂಡಾ ಶಾಸನಬದ್ಧ ಮನ್ನಣೆಯನ್ನು ಪಡೆದಿರುವದಿಲ್ಲ, ಆದರೂ ಒಂದು ವರದಿಯನ್ನುವದು: “ಕೆಲಸವು ಬಹಿರಂಗವಾಗಿ ನಡಿಸಲ್ಪಡುತ್ತಾ ಇದೆ ಮತ್ತು ದೊಡ್ಡ ಕೂಟಗಳು ನಡಿಸಲ್ಪಡುತ್ತಾ ಇವೆ.” ಬಲುಬೇಗನೇ ಶಾಸನಬದ್ಧತೆಯನ್ನು ನಿರೀಕ್ಷಿಸಲಾಗಿದೆ.
ಪ್ರಾಚ್ಯ ಯೂರೋಪಿನಲ್ಲಿ 1989ರ ಕೊನೆಯ ಭಾಗದಿಂದಾರಭಿಸಿ ನಾಟಕೀಯವಾದ ಬದಲಾವಣೆಗಳು ನಡೆದ ನಂತರ, ಜೆಕಸ್ಲೊವಾಕಿಯಾದ ಸಾಕ್ಷಿಗಳು ತೀವ್ರಗತಿಯಲ್ಲಿ ಪ್ರತಿಕ್ರಿಯೆ ತೋರಿಸಿದರು ಮತ್ತು 1990ರ ಏಪ್ರಿಲ್ ತಿಂಗಳಿನಿಂದಾರಂಭಿಸಿ ಜೂನ್ ತನಕ ದೇಶದಲ್ಲೆಲ್ಲಾ ಸರ್ಕೀಟ್ ಸಮ್ಮೇಳನಗಳ ಸರಣಿಯೊಂದನ್ನು ಸಂಸ್ಥಾಪಿಸಿದರು. ಅದರ ಫಲಿತಾಂಶವಾಗಿ, ಪ್ರಥಮ ಬಾರಿಗೆ, ಸಾಕ್ಷಿಗಳ ಕುರಿತಾಗಿ ಒಂದು ನಿರ್ಧಾರಾತ್ಮಕ ಪತ್ರಿಕಾ ವರದಿಗಳು ಬರಲಾರಂಭಿಸಿದವು. ಸದ್ಯಕ್ಕೆ, ಜೆಕಸ್ಲೊವಾಕಿಯಾದಲ್ಲಿ 21,000ಕ್ಕಿಂತಲೂ ಹೆಚ್ಚು ಸಾಕ್ಷಿಗಳು ಇದ್ದಾರೆ ಮತ್ತು 1990ರ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ 40,295 ಮಂದಿ ಹಾಜರಿದ್ದರು. ಅರ್ಧಕ್ಕಿಂತಲೂ ಹೆಚ್ಚು ಸಭೆಗಳಿಗೆ ಅವರ ಕೂಟಗಳನ್ನು ನಡಿಸಲು ಈಗಾಗಲೇ ಬಾಡಿಗೆಗೆ ಪಡೆದ ಸ್ಥಳಗಳು ಇವೆ, ಮತ್ತು 12 ಸಭೆಗಳು ಅವರ ಸ್ವಂತ ರಾಜ್ಯ ಸಭಾಗೃಹಗಳನ್ನು ಹೊಂದಿರುತ್ತಾರೆ.
ಅಗಸ್ಟ್, 1990ರಲ್ಲಿ ಪ್ರಾಗ್ನಲ್ಲಿ ಒಂದು ಅಧಿವೇಶನ ನಡೆಯಿತು, ಅಲ್ಲಿ 23,876 ಮಂದಿ ಹಾಜರಿದ್ದರು ಮತ್ತು 1824 ಜನರು ದೀಕ್ಷಾಸ್ನಾನ ಪಡೆದರು. ಅಧಿವೇಶನಕ್ಕೋಸ್ಕರ ಸ್ಟೇಡಿಯಂ ಸುಂದರವಾಗಿ ಕಾಣುವಂತೆ ಮಾಡಲು, 9,500ಕ್ಕಿಂತಲೂ ಅಧಿಕ ಸಾಕ್ಷಿಗಳು 58,000ಕ್ಕಿಂತಲೂ ಹೆಚ್ಚು ತಾಸುಗಳನ್ನು ಸ್ವಯಂ-ಸೇವಕರುಗಳಾಗಿ ಶುಚಿ ಮಾಡುವದರಲ್ಲಿ ಮತ್ತು ಬಣ್ಣ ಹಚ್ಚುವದರಲ್ಲಿ ಕಳೆದರು. ಜೆಕಸ್ಲೊವಕಿಯಾದ ಒಬ್ಬ ಟೀವೀ ಪ್ರತಿನಿಧಿ ಹೇಳಿಕೆ ನೀಡಿದ್ದು: “ನಾವು ಅನೇಕ ಸಾಮಾಜಿಕ ಘಟನೆಗಳಿಗೆ ಭೇಟಿ ನೀಡಿದ್ದೇವೆ. ಆದರೆ ನಿಮ್ಮ ಈ ಸ್ಟೇಡಿಯಂನಲ್ಲಿನ ಸಂಘಟನೆಯನ್ನು ಶಾಘ್ಲಿಸುತ್ತೇವೆ. ಇಂಥ ಒಂದು ಒಕ್ಕೂಟವನ್ನು ನೀವು ಮೊದಲನೆಯ ಸಲ ಸಂಘಟಿಸುತ್ತಿದ್ದೀರಿ ಎಂಬುದನ್ನು ನಮಗೆ ನಂಬಲಿಕ್ಕೆ ಕಷ್ಟ.” ಒಬ್ಬ ಸಂದರ್ಶಕನು ಹೇಳಿದ್ದು: “ನಿಮ್ಮ ಸಹೋದರರೊಳಗೆ ಇರುವಂಥ ಆತ್ಮಿಕ ಪರಿಸರ, ಹೃತ್ಪೂರ್ವಕ ಸಂಬಂಧಗಳು ಮತ್ತು ಪ್ರೀತಿಯನ್ನು ನಾನು ಮೆಚ್ಚುತ್ತೇನೆ. ನಾನೊಬ್ಬ ಸ್ನೇಹಿತನಾಗಿ ಬಂದೆನು; ಆದರೆ ಇನ್ನೂ ಗಾಢ ಸ್ನೇಹಿತನಾಗಿ ನಿಮ್ಮನ್ನು ಅಗಲುತ್ತೇನೆ.”
ಕಾವಲಿನಬುರುಜು ಮತ್ತು ಎಚ್ಚರ! (ದ ವಾಚ್ಟವರ್ ಮತ್ತು ಎವೇಕ್!) ಪತ್ರಿಕೆಗಳು ಪೂರ್ಣ-ವರ್ಣದಲ್ಲಿ ಜೆಕ್ ಮತ್ತು ಸ್ಲೊವಕ್ ಭಾಷೆಗಳಲ್ಲಿ ಮುದ್ರಿಸಲ್ಪಡುತ್ತಲಿವೆ ಮತ್ತು ಕಾವಲಿನಬುರುಜು ಇಂಗ್ಲಿಷ್ನೊಂದಿಗೆ ಏಕಕಾಲದಲ್ಲಿ ಬಿಡುಗಡೆಯಾಗುತ್ತಲಿವೆ. ಕೇವಲ ಒಂದು ವರ್ಷದ ಹಿಂದಿನ ದಬ್ಬಾಳಿಕೆಯ ಪರಿಸ್ಥಿತಿಯನ್ನು ಮನಸ್ಸಿಗೆ ತರುವಾಗ, ಇವೆಲ್ಲವುಗಳು ಗಮನಾರ್ಹವಾದ ಬದಲಾವಣೆಗಳಾಗಿವೆ.
ಭವಿಷ್ಯದ ಪ್ರತೀಕ್ಷೆಗಳು
ಹೊಸ ಸಂತತಿಗಳನ್ನು ನಾಸ್ತಿಕತೆಯಿಂದ ಬೆಳಸಿದಂಥಾ ದೇಶಗಳಲ್ಲಿ ಸಾಕ್ಷಿಗಳ ಸಾರುವಿಕೆಗೆ ಯಾವ ಪ್ರತೀಕ್ಷೆಗಳು ಇವೆ? ಒಂದು ವರದಿ ತಿಳಿಸುವದು: “ಬೈಬಲ್ ಮತ್ತು ದೇವರ ವಿಷಯದಲ್ಲಿ ಮಹಾ ಅಂಧಕಾರವು ಇದೆ. ಆದಾಗ್ಯೂ, ಸಕಾರಾತ್ಮಕ ವಿಷಯವೇನಂದರೆ ಜನರು ತೊಲಗಿಸಬೇಕಾದ ಸುಳ್ಳು ಧಾರ್ಮಿಕ ಬೋಧನೆಗಳಿಂದ ಗಲಿಬಿಲಿಗೊಂಡಿರುವದಿಲ್ಲ. ಕೊಯ್ಲು ಮಹತ್ತರದ್ದಾಗಿರುವಂತೆ ತೋರುತ್ತದೆ.”
ಹೀಗಿರುವಲ್ಲಿ ಪ್ರಾಚ್ಯ ಯೂರೋಪಿನ ಜನರಿಗೆ ನೀಡಲು ಬೈಬಲಿನಿಂದ ಯಾವ ಸಂದೇಶವನ್ನು ಯೆಹೋವನ ಸಾಕ್ಷಿಗಳು ಪಡೆದಿರುತ್ತಾರೆ? ಮುಂದಿನ ಲೇಖನವು ಉತ್ತರವನ್ನೀಯುತ್ತದೆ. (g91 1/8)
[ಅಧ್ಯಯನ ಪ್ರಶ್ನೆಗಳು]
a ಇತರ 11 ಬ್ರೇಝಿಲ್, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟೆಲಿ, ಜಪಾನ್, ಮೆಕ್ಷಿಕೊ, ನೈಜರೀಯಾ, ಫಿಲಿಪೈನ್ಸ್ ಮತ್ತು ಅಮೆರಿಕ ದೇಶಗಳಾಗಿವೆ.
[ಪುಟ 8ರಲ್ಲಿರುವಚೌಕ]
ಧಾರ್ಮಿಕ ಸ್ವಾತಂತ್ರ್ಯ ಕಟ್ಟಕಡೆಗೆ!
ಈ ಮುಂದಿನವುಗಳು ಜುಲೈ, 1990ರಲ್ಲಿ ಬರ್ಲಿನ್ನಲ್ಲಿ “ಶುದ್ಧ ಭಾಷೆ” ಅಧಿವೇಶನಕ್ಕೆ ಹಾಜರಾದ ಹಿಂದಣ ಪೂರ್ವ ಜರ್ಮನಿಯಿಂದ ಮಾಡಲ್ಪಟ್ಟ ಹೇಳಿಕೆಗಳು.
“ನನ್ನ ಹೆಸರು ಲಿಡಿಯಾ. ನಾನು ಎಂಟು ವರ್ಷ ವಯಸ್ಸಿನವಳು, ಮತ್ತು ನಾನು ಜಿ. ಡಿ. ಆರ್. [ಜರ್ಮನ್ ಗಣರಾಜ್ಯ]ನಿಂದ ಬಂದವಳು. ಒಂದು ವರ್ಷದ ಹಿಂದೆ ಗಡಿಗಳು ತೆರೆಯಲ್ಪಡದೆ ಇರುವ ಕಾರಣ, ಈ ಜಿಲ್ಲಾ ಅಧಿವೇಶನವನ್ನು ಹಾಜರಾಗುವಲ್ಲಿ ನಾನು ಬಹಳ ಸಂತೋಷಿಸುತ್ತೇನೆ. ನಾವು ಜ್ಞಾಪಕಾಚರಣೆಯನ್ನು ಗುಟ್ಟಾಗಿ ಆಚರಿಸಬೇಕಾಗಿತ್ತು. ಈ ಸಲ ಸ್ವತಂತ್ರತೆ! ಪ್ರತಿಯೊಬ್ಬರೂ ಹಾಡಲಾರಂಭಿಸುವಾಗ, ಕಣ್ಣೀರು ಬರುತ್ತದೆ. ನಾನು ಎಷ್ಟೊಂದು ಉದ್ರೇಕಿಸಲ್ಪಟ್ಟಿದ್ದೇನಂದರೆ ಇದನ್ನೆಲ್ಲಾ ಶಾಲೆಯಲ್ಲಿ ಹೇಳಲೇಬೇಕು!”
“ಅಂತರ್-ರಾಷ್ಟ್ರೀಯ ಸಹೋದರತ್ವದ ನಡುವೆ ಇಲ್ಲಿ ಬರ್ಲಿನ್ನಲ್ಲಿ ಯೆಹೋವನ ಅತಿಥಿಗಳಾಗಿರುವದರಿಂದ ನಾವು ಕೃತಜ್ಞತೆಯಿಂದ ಮತ್ತು ಮೆಚ್ಚಿಕೆಯಿಂದ ತುಂಬಿದವರಾಗಿದ್ದೇವೆ.”—ಬರ್ನ್ಡ್.
“G.D.Rನ ಸಹೋದರರು ಕಾರ್ಯಕ್ರಮದಲ್ಲಿರುವದು ಒಂದು ವಿಶೇಷ ಭಾಗವನ್ನು ತೋರಿಸುತ್ತದೆ. ನಿಷೇಧದ ಕೆಳಗೆ ಇರುವಾಗಲೂ ಕೂಡಾ ಯೆಹೋವನು ತನ್ನ ಜನರನ್ನು ತರಬೇತಿಗೊಳಿಸುತ್ತಾನೆ ಮತ್ತು ಯೋಗ್ಯತೆ ಪಡೆಯುವಂತೆ ಮಾಡುತ್ತಾನೆ.”—ಗೊಟ್ಫ್ರಿಡ್.
“ಕರತಾಡನ ಮಾಡುವದು ಮತ್ತು ಹಾಡುವದು, ಪ್ರತಿಯೊಬ್ಬರೂ ಸಂತೋಷದಿಂದಿರುವದನ್ನು ತೋರಿಸಿತು. ಆ ಮೊಳಗುವಿಕೆಯ ಶಬ್ದವು ವ್ಯಕ್ತಿಯನ್ನು ಆಂತರಿಕವಾಗಿ ತನ್ನ ಪಾದಗಳಿಂದ ಮೇಲಕ್ಕೆ ಎತ್ತರಿಸುವಂಥದ್ದು. ಯೆಹೋವನು ಎಷ್ಟೊಂದು ಆನಂದಪಟ್ಟಿರಬೇಕು.”—ಇಗೊನ್.
“ನನ್ನ ದೀಕ್ಷಾಸ್ನಾನದ ನಂತರ, ನೀರು ತುಂಬಾ ತಣ್ಣಗಾಗಿತ್ತೋ ಎಂದು ಕೆಲವು ಸಹೋದರರು ವಿಚಾರಿಸಿದರು. ನನಗೆ ಗೊತ್ತಿಲ್ಲ ಎಂದಷ್ಟೇ ನಾನು ಉತ್ತರಿಸಬಹುದಾಗಿತ್ತು. ಯೆಹೋವನ ಆಶೀರ್ವಾದವು ಎಷ್ಟೊಂದು ಬೆಚ್ಚಗಾಗಿತ್ತೆಂದರೆ, ನೀರಿನ ಶಾಖಮಾನವನ್ನು ನಾನು ಗಮನಿಸಿದ್ದೇ ಇಲ್ಲ.”—ಹೆಯಿಡ್ರುನ್.
“ಸಾಮಾನ್ಯ ವಸತಿ ಕೋಣೆಗಳಲ್ಲಿನ ಪರಿಸರವು ವಿವರಿಸಲಸಾಧ್ಯವಾಗಿತ್ತು! ಡೆನ್ಮಾರ್ಕ್, ಮೊಜಾಂಬಿಕ್, ಇಂಗ್ಲೆಂಡ್, ಕ್ಯಾಲಿಫೊರ್ನಿಯಾ, ದಕ್ಷಿಣ ಜರ್ಮನಿ, ಸ್ಪೇಯ್ನ್, ಜಿ.ಡಿ.ಆರ್—ನಾವೆಲ್ಲರೂ ಒಟ್ಟಿಗೆ ಹಾಡಿದೆವು, ನಾವೆಲ್ಲರೂ ‘ಶುದ್ಧ ಭಾಷೆ’ಯನ್ನು ಮಾತಾಡುತ್ತಿದ್ದೆವು.”—ಜುಟ್ಟಾ.
“ನಾವು ನಮ್ಮ ಮಕ್ಕಳಿಗೆ ಕೊನೆಯ ಬಾರಿ ನಾವು ಹಾಜರಾಗಲು ಸಾಧ್ಯವಾದ 1958 ಮತ್ತು 1960ರ ಬರ್ಲಿನ್ ಅಧಿವೇಶನಗಳ ನೆನಪುಗಳನ್ನು ಯಾವಾಗಲೂ ವರ್ಣಿಸುತ್ತಿದ್ದೆವು. ಆದರೆ ನಾವೀಗ ಅನುಭವಿಸಿದವುಗಳು, ನಮ್ಮೆಲ್ಲಾ ನೆನಪುಗಳನ್ನು ಮತ್ತು ನಿರೀಕ್ಷೆಗಳನ್ನು ಮೀರಿದವುಗಳಾಗಿವೆ.”—ವಲ್ಫ್ಗಾಂಗ್.
“ನಮ್ಮಲ್ಲಿ ಹೆಚ್ಚಿನವರಿಗೆ ಅತಿ ಹೆಚ್ಚಾಗಿ ಪ್ರಭಾವ ಪಡಿಸಿದ್ದು ಏನಂದರೆ ಹಾಡಲು ಮತ್ತು ಯೆಹೋವನನ್ನು ಸ್ತುತಿಸಲು ಸಾವಿರಾರು ಮಂದಿ ಎದ್ದು ನಿಂತಾಗ, ವಿಶೇಷವಾಗಿ ಕೊನೆಯ ಸಂಗೀತದ ಮತ್ತು ಪ್ರಾರ್ಥನೆಯ ಸಮಯದಲ್ಲಿಯೇ. ನಾವು ನಮ್ಮ ಕಣ್ಣೀರನ್ನು ತಡೆದು ಹಿಡಿಯಲು ಶಕ್ತರಾಗಿರಲಿಲ್ಲ.”—ಮೊನಿಕಾ ಮತ್ತು ರೆಯಿನ್ಹಾರ್ಡ್.
[ಪುಟ 13ರಲ್ಲಿರುವಚೌಕ]
“ಅನ್ಯಾಯವೊಂದನ್ನು ಸರಿಪಡಿಸಲಾಯಿತು”
ಈ ಶೀರ್ಷಿಕೆಯ ಕೆಳಗೆ ಒಂದು ವಾರ್ತೆಯನ್ನು ಅಗಸ್ಟ್ 11, 1990ರ ರೊಮಾನಿಯನ್ ಪತ್ರಿಕೆ ಟಿನೆರೆಟುಲ್ ಲಿಬರ್ (ಸ್ವತಂತ್ರ ಯುವಕ)ನಲ್ಲಿ ವರದಿ ಮಾಡಲಾಗಿತ್ತು. ಅದು ತಿಳಿಸಿದ್ದು: “ಹೌದು, ಅನ್ಯಾಯವೊಂದನ್ನು ಸರಿಪಡಿಸಲಾಯಿತು. ಅಧಿಕವಾಗಿ ದ್ವೇಷಿಸಲ್ಪಟ್ಟ ಧಾರ್ಮಿಕ ಸಂಘಟನೆ, ‘ಯೆಹೋವನ ಸಾಕ್ಷಿಗಳು’, ಕ್ರಿಸ್ತನ ಹಿಂಬಾಲಕರಾಗಿ ನಾಲ್ವತ್ತಕ್ಕಿಂತಲೂ ಹೆಚ್ಚು ವರ್ಷಗಳಿಂದ ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡಿದ್ದವರು, ಕಾನೂನಬದ್ಧ ಅಸ್ತಿತ್ವದ ಹಕ್ಕನ್ನು ಪಡೆಯುವದರ ಮೂಲಕ ಈಗ ಶಾಸನಾತ್ಮಕ ಸನ್ನದು ಪಡೆದರು. ಲೋಕವ್ಯಾಪಕ ಸಂಸ್ಥಾಪನೆಯೋಪಾದಿ, 210 ದೇಶ ಮತ್ತು ದ್ವೀಪಗಳ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆಯು, ಅದರ ಆಡಳಿತ ಮಂಡಲಿಯ ಮೇಲ್ವಿಚಾರಣೆ ಮತ್ತು ಅಧಿಕಾರದ ಕೆಳಗೆ ತನ್ನ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತದೆ.” ಅಗಸ್ಟ್ನಲ್ಲಿ ಬ್ರೆಸೊವ್ ಮತ್ತು ಕ್ಲುಜ್-ನಪೊಕಾದಲ್ಲಿನ ಅಧಿವೇಶನಗಳನ್ನು ಪ್ರಕಟಿಸುತ್ತಾ ಈ ವಾರ್ತೆಯು ಕೊನೆಗೊಂಡಿತು.
[ಪುಟ 9ರಲ್ಲಿರುವಚೌಕ]
ಅಧಿವೇಶನದ ಚಟುವಟಿಕೆಗಳು: (ಕೆಳಗಡೆ ಎಡದಿಂದ ಗಡಿಯಾರಕ್ಕನುಸಾರ) ವಾರ್ಸೊದಲ್ಲಿ ಹೊಸ ಬ್ರೊಷೂರ್ನ್ನು ತೋರಿಸುವದು; ಹಂಗೆರಿಯನ್ ಮತ್ತು ರೊಮಾನಿಯನ್ ವೇದಿಕೆಗಳು, ಬುಡಾಪೆಸ್ಟ್; ಟಿಪ್ಪಣಿ ಬರೆದು ಕೊಳ್ಳುವದು, ಬರ್ಲಿನ್; ಅಧಿವೇಶನದ ಮುಂಚೆ ಸ್ಟೇಡಿಯಂನ ಶುಭ್ರಗೊಳಿಸುವಿಕೆ, ಫ್ರಾಗ್
[ಪುಟ 10ರಲ್ಲಿರುವಚೌಕ]
ಅಧಿವೇಶನದ ಚಟುವಟಿಕೆಗಳು: (ಎಡದಿಂದ ಗಡಿಯಾರಕ್ಕನುಸಾರ) ದೀಕ್ಷಾಸ್ನಾನ, ರೊಮಾನಿಯಾ; ಸ್ಟೇಡಿಯಂ, ಫ್ರಾಗ್; ಬರ್ಲಿನ್ನಲ್ಲಿ “ಮಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್” ಪುಸ್ತಕದೊಂದಿಗೆ ಒಂದು ಪರಿವಾರ; ಬುಡಾಪೆಸ್ನ್ಟಲ್ಲಿ ಭಾಷಣಕರ್ತನು; ಪೊಲೇಂಡಿನಲ್ಲಿ ಬೈಬಲ್ನ್ನು ಪರೀಕ್ಷಿಸುವದು