ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 5/8 ಪು. 31
  • ತಂಬಾಕು ನೈತಿಕತೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತಂಬಾಕು ನೈತಿಕತೆ?
  • ಎಚ್ಚರ!—1992
  • ಅನುರೂಪ ಮಾಹಿತಿ
  • ಕೋಟ್ಯಂತರ ಜೀವಗಳು ಹೊಗೆಯಾಗಿ ಹೋಗಿ ನಷ್ಟವಾಗುತ್ತಿವೆ
    ಎಚ್ಚರ!—1995
  • ನಿಮ್ಮ ದೇಶವು ಮುಖ್ಯ ಗುರಿಯೋ?
    ಎಚ್ಚರ!—1990
  • ತಂಬಾಕು ಮತ್ತು ದೋಷ ವಿಮರ್ಶನಾಧಿಕಾರ
    ಎಚ್ಚರ!—1990
  • ಹೊಗೆಸೊಪ್ಪಿನ ಸಂರಕ್ಷಕರು ತಮ್ಮ ಜಂಬದ ಬಲೂನುಗಳನ್ನು ಉಡಾಯಿಸುತ್ತಾರೆ
    ಎಚ್ಚರ!—1995
ಇನ್ನಷ್ಟು
ಎಚ್ಚರ!—1992
g92 5/8 ಪು. 31

ತಂಬಾಕು ನೈತಿಕತೆ?

“ಬಿ.ಎ.ಟಿ. [ಬ್ರಿಟಿಷ್‌ ಅಮೆರಿಕನ್‌ ಟೊಬ್ಯಾಕೊ] ಯುಗಾಂಡ 1984 ಲಿಮಿಟೆಡ್‌ ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕರವೆಂದು ನಂಬುವುದಿಲ್ಲ” ಯುಗಾಂಡದ ಎಂಟೆಬಿಯ ಆರೋಗ್ಯ ಮಂತ್ರಾಲಯಕ್ಕೆ ಪತ್ರದ ಮೂಲಕ ಕೊಟ್ಟ ಈ ಹೇಳಿಕೆಯು ಬ್ರಿಟನಿನಲ್ಲಿ ಸಂಶಯಾಸ್ಪದವಾದ ವ್ಯಾಪಾರ ನೀತಿ ಮತ್ತು ದ್ವಂದ್ವ ಮಟ್ಟಗಳ ಆರೋಪಗಳ ಮಧ್ಯೆ ಗದ್ದಲವನ್ನೆಬ್ಬಿಸಿತು. ಏಕೆ?

ಸೇದುವ ಅಭ್ಯಾಸ ವರ್ಷಕ್ಕೆ 1 ಸೇಕಡಾ ಕಡಮೆಯಾಗುತ್ತಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಸರಕಾರೀ ಆರೋಗ್ಯ ಎಚ್ಚರಿಕೆಗಳು ಸಿಗರೇಟು ಪ್ಯಾಕೆಟಿನ ಮೇಲೆ ಕಂಡುಬರಬೇಕು. ಆದರೆ ವಿಕಾಸ ಹೊಂದುತ್ತಿರುವ ದೇಶಗಳಲ್ಲಿ ಸಾಮಾನ್ಯವಾಗಿ ಇಂಥ ಶಾಸನಬದ್ಧ ಆವಶ್ಯಕತೆಗಳು ಇರುವುದಿಲ್ಲ; ಮತ್ತು ಇರುವಲಿಯ್ಲೂ ಪ್ಯಾಕೆಟಿನ ಬದಲು ಜನರು ಸಿಗರೇಟನ್ನು ಒಂದೊಂದಾಗಿ ಕೊಳ್ಳುವುದರಿಂದ ಅದು ಗಮನಕ್ಕೆ ಬಾರದೆ ಹೋದೀತು. ಅಂಥ ದೇಶಗಳಲ್ಲಿ ಸಿಗರೇಟು ಮಾರಾಟದಲ್ಲಿ ವಾರ್ಷಿಕವಾಗಿ 2 ಸೇಕಡಾ ಉನ್ನತಿಯಿದೆ. ಆದರೆ ಇದು ಸಮಸ್ಯೆಯಲ್ಲಿ ಕೇವಲ ಒಂದಂಶವಾಗಿದೆ. “ಅವರಿಗೆ [ಯೂರೋಪಿಯನ್‌ ದೇಶಗಳವರಿಗೆ] ಸೇದಲು ಅತಿ ಅಪಾಯಕಾರಿಯಾಗಿರುವ” ಹೈ-ಟಾರ್‌ ತಂಬಾಕನ್ನು ಯೂರೋಪಿನಿಂದ ಆಫ್ರಿಕ ಮತ್ತು ಇತರ ವಿಕಾಸಗೊಳ್ಳುತ್ತಿರುವ ದೇಶಗಳಿಗೆ ರವಾನಿಸಲಾಗುತ್ತದೆ ಎನ್ನುತ್ತಾರೆ, ಲೋಕಾರೋಗ್ಯ ಸಂಘ (WHO)ದ ತಂಬಾಕು ಅಥವಾ ಆರೋಗ್ಯ ಕಾರ್ಯಕ್ರಮದ ಮುಖ್ಯಾಧಿಕಾರಿ ಡಾ. ರೊಬೆರ್ಟೊ ಮ್ಯಾಸಿರೋನಿ.

ಜೋರಾದ ಮಾರುವ ವಿಧಾನವು ಹೊಸತಾದ, ಹೆಚ್ಚು ಶಕ್ತಿಯ, ಮತ್ತು ಕಡಮೆ ಬೆಲೆಯ ಸಿಗರೇಟುಗಳನ್ನು ಉತ್ತೇಜಿಸುತ್ತಿದೆ. ಜನಸಂಖ್ಯೆಯಲ್ಲಿ ಅರ್ಧಾಂಶ 16ಕ್ಕಿಂತ ಕಡಮೆ ವಯಸ್ಸಿನವರಾಗಿರುವ ಮತ್ತು ತಂಬಾಕು ಖರೀದಿಗೆ ವಯಸ್ಸಿನ ಮಿತಿ ಇಲ್ಲದಿರುವ ಸಿಂಬಾಬ್ವೆ ದೇಶದಲ್ಲಿ ಚಿಕ್ಕ ಮಕ್ಕಳು ಸೇದುವಿಕೆಯ ವ್ಯಸನಿಗಳಾಗುವ ಭಯವಿದೆ. ಸಿಂಬಾಬೆಯ್ವ ಆರೋಗ್ಯ ಮಂತ್ರಿ, ಡಾ. ತಿಮೊಥಿ ಸ್ಟ್ಯಾಂಪ್ಸ್‌, “ಪಾಶ್ಚಿಮಾತ್ಯ ಜಗತ್ತಿನಲ್ಲಿ ಅತಿ ವೇಗವಾಗಿ ವರ್ತಿಸುವ ಮಾದಕ ಪದಾರ್ಥ” ವೆಂದು ಕರೆಯಲ್ಪಟ್ಟಿರುವ ನಿಕೊಟೀನಿನ ದಾಸರಾಗುವಂತೆ “ಯುವತಿಯರಿಗೆ ತಗಲುವ ಚಮತ್ಕಾರದ ಸಂದೇಶಗಳ” ಕುರಿತು ಚಿಂತೆ ವ್ಯಕ್ತಪಡಿಸಿದರು. ಒಂದು WHO ಸಮ್ಮೇಳನವನ್ನು ಉದ್ದೇಶಿಸುತ್ತಾ ಬ್ರಿಟನಿನ ವೈದ್ಯಕೀಯ ಮುಖ್ಯಾಧಿಕಾರಿ ಹೇಳಿದ್ದು: “ಈ ಮಾರಕ ಅಭ್ಯಾಸವನ್ನು ಉತ್ತೇಜಿಸುವ ಸ್ಥಿತಿಗೆ ಒಬ್ಬನು ತನ್ನನ್ನು ಹೇಗೆ ತರಬಹುದೆಂದು ನನಗೆ ತಿಳಿಯದು.”

ಇಂಥ ಒತ್ತಡಗಳೆದುರಲ್ಲಿಯೂ ಮಾರಾಟವನ್ನು ಉತ್ತೇಜಿಸುವ ಕಾರ್ಯ ಏಕೆ ತತ್ತರಿಸುವುದಿಲ್ಲ? ಎರಡು ಮೂಲ ಕಾರಣಗಳು ಇದಕ್ಕಿವೆ. ಪ್ರಥಮವಾಗಿ, ಇದು ತತ್ತರಿಸುವಲ್ಲಿ, ಯೂರೋಪಿನ ತಂಬಾಕು ಉದ್ಯಮದಲ್ಲಿ ಸಾವಿರಾರು ಕೆಲಸಗಳು ನಷ್ಟವಾಗುವವು. ಎರಡನೆಯದಾಗಿ, ತಂಬಾಕು ಮಾರಲ್ಪಡುವ ದೇಶಗಳ ಆರ್ಥಿಕತೆಗಳಿವೆ. ಉದಾಹರಣೆಗೆ, ಕೆನ್ಯದ ಸರಕಾರದ ಒಟ್ಟು ಆದಾಯದಲ್ಲಿ ಅದು 5 ಸೇಕಡವನ್ನು ಒಳಸುಂಕ ಮತ್ತು ತಂಬಾಕು ವ್ಯಾಪಾರದ ಲಾಭ ತೆರಿಗೆಯಿಂದ ಪಡೆಯುತ್ತದೆ. ತಂಬಾಕು ಮಾರಾಟದಲ್ಲಿ ಬೆಳೆವಣಿಗೆಗೆ ಸಹಾಯ ಮಾಡುವ ಇನ್ನೊಂದು ಸಂಗತಿಯು ತಂಬಾಕು ಕಂಪೆನಿಗಳು ಕ್ರೀಡೆಗಳಿಗೆ ಕೊಡುವ ಆರ್ಥಿಕ ಸಹಾಯವೇ.

ಈ ಮಧ್ಯೆ, ಪಾಶ್ಚಿಮಾತ್ಯ ದೇಶಗಳ ಆರೋಗ್ಯ ಸಮಸ್ಯೆಗಳು ಈಗ ಆಫ್ರಿಕದ ದೇಶಗಳನ್ನು ಹೊಂಚು ಹಾಕುತ್ತಿವೆ. ಆ ದೇಶಗಳು ಮಲೇರಿಯ ಮತ್ತು ಅನೇಕ ಇತರ ವ್ಯಾಧಿಗಳ ವಿರುದ್ಧ ಹೋರಾಡುವಾಗ, ತಮ್ಮಲ್ಲಿರುವ ಹಣವನ್ನು ಸೇದುವುದಕ್ಕೆ ಸಂಬಂಧಿಸಿದ ರೋಗಗಳಿಗೂ ಖರ್ಚುಮಾಡಬೇಕೆಂದು ಅವುಗಳಿಗೆ ತಿಳಿದುಬರುತ್ತದೆ.

ತಂಬಾಕು ಕಂಪೆನಿಗಳು ತಮ್ಮ ದೃಷ್ಟಿ ಹರಿಸುವ ಇನ್ನೊಂದು ಮಾರುಕಟ್ಟೆ ಏಸ್ಯಾ. ಅಲ್ಲಿ. ಮುಂದಿನ ಹತ್ತು ವರ್ಷಗಳಲ್ಲಿ ಸಿಗರೇಟಿನ ಮಾರಾಟ ಕಡಮೆ ಪಕ್ಷ 18 ಸೇಕಡದಷ್ಟಾದರೂ ಹೆಚ್ಚುವಂತೆ ಏರ್ಪಡಿಸಲಾಗಿದೆ. ಕ್ರಮೇಣ, ಚೈನಾ ದೇಶವೂ ಪಾಶ್ಚಿಮಾತ್ಯ ತಂಬಾಕಿಗೆ ಅವಕಾಶ ನೀಡುವುದೆಂದು ನಿರೀಕ್ಷಿಸಲಾಗುತ್ತದೆ. ಈಗಾಗಲೆ, ಜಗತ್ತಿನ ಸಿಗರೇಟುಗಳಲ್ಲಿ 30 ಸೇಕಡವನ್ನು ಚೈನೀಸ್‌ ಜನರು ಸೇದುತ್ತಾರೆಂದು ತಿಳಿದುಬಂದಿದೆ. ಬ್ರಿಟಿಷ್‌ ಕ್ಯಾನ್ಸರ್‌ ಪರಿಣತ ಪ್ರೊಫೆಸರ್‌ ರಿಚರ್ಡ್‌ ಪೀಟೊ ಮುಂತಿಳಿಸುವುದೇನಂದರೆ ಇಂದು ಜೀವಿಸುತ್ತಿರುವ ಚೈನೀಸ್‌ ಮಕ್ಕಳಲ್ಲಿ 5 ಕೋಟಿ ಮಕ್ಕಳು ಕೊನೆಗೆ ತಂಬಾಕು ಸಂಬಂಧಿತ ರೋಗಗಳಿಂದ ಸಾಯುವರು, ಎಂದು ಲಂಡನಿನ ದ ಸಂಡೇ ಟೈಮ್ಸ್‌ ವರದಿ ಮಾಡಿತು.

ಲೋಕದಲ್ಲಿ 40 ಲಕ್ಷಗಳಿಗೂ ಹೆಚ್ಚು ಇರುವ ಯೆಹೋವನ ಸಾಕ್ಷಿಗಳನ್ನು ಗುರುತಿಸುವ ಲಕ್ಷಣಗಳಲ್ಲಿ ಒಂದು ಯಾವುದೆಂದರೆ ಅವರು ತಂಬಾಕನ್ನೇ ಉಪಯೋಗಿಸುವುದಿಲ್ಲ. ಆದರೂ ಅವರಲ್ಲಿ ಅನೇಕರು ಹಿಂದೆ ಸೇದುವವರಾಗಿದ್ದರು. ಸೇದುವುದು ತಮ್ಮ ಕ್ರೈಸ್ತ ನಂಬಿಕೆಗೆ ಅಸಂಗತವೆಂದು ತಿಳಿದೊಡನೆ ಅವರು ಸೇದುವುದನ್ನು ನಿಲ್ಲಿಸಿದರು. (ಮತ್ತಾಯ 22:39; 2 ಕೊರಿಂಥ 7:1) ತಂಬಾಕಿನ ವ್ಯಸನದಿಂದ ವಿಮುಕ್ತರಾಗಲು ನಿಮಗೆ ನಿಜವಾಗಿಯೂ ಮನಸ್ಸಿರುವಲ್ಲಿ, ಅವರಲ್ಲಿ ಯಾರೊಂದಿಗಾದರೂ ಸಹಾಯ ಯಾ ಸಲಹೆಯನ್ನು ಕೇಳಿರಿ. ಅವನು ಯಾ ಅವಳು ಇದನ್ನು ಸಂತೋಷದಿಂದ ಕೊಡುವರು. (g91 1/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ