ಜಗತ್ತನ್ನು ಗಮನಿಸುವುದು
ಔನ್ನತ್ಯದ ದಾಖಲೆ
ಅಕ್ಟೋಬರ 24, 1990ರಲ್ಲಿ 52 ವಯಸ್ಸಿನ ಹೆಲೆನ್ ಸಮ್ಟಟಾಕಿ ಹಿಮಾಲಯ ಪರ್ವತಗಳಲ್ಲಿ 7 ಕಿಲೊ ಮೀಟರ್ ಎತ್ತರದ ಟುಕುಟ್ಚೆ ಶಿಖರದ ಮೇಲೆ ಕಾಲಿಟಳ್ಟು. ಗ್ರೀಕರ ಪರ್ವತಾರೋಹಣದಲ್ಲಿ ಇದೊಂದು ದಾಖಲೆ ಎಂದಿತು, ಆ್ಯಥೆನ್ಸ್‌ನ “ಟಾ ನೀ” ಪತ್ರಿಕೆ. “ಆಲ್ಪ್ಸ್ ಪರ್ವತಾರೋಹಿಗಳು ಆಮ್ಲಜನಕದ ಸಹಾಯವಿಲ್ಲದಿದ್ದರೆ ಶ್ವಾಸಕೋಶದ ಐಡೀಮ ಪೀಡಿತರಾಗಿ ಕೆಲವೇ ತಾಸುಗಳಲ್ಲಿ ಸಾಯುವ ಕಾರಣ ಯಾವುದು ಹೆಚ್ಚಿನ ಆಲ್ಪ್ಸ್ ಪರ್ವತಾರೋಹಿಗಳಿಂದ ವಿಪರೀತ ಸಾಹಸವೆಂದೆಣಿಸಲ್ಪಡುತ್ತದೋ ಅಂಥ ಆಮ್ಲಜನಕದ ಸಹಾಯವಿಲ್ಲದೆ” ಹತ್ತಿದ ಮಹಿಳೆಯರಲ್ಲಿ ಇವಳು ಮೊದಲಿಗಳೆಂದು ಹೇಳಲಾಗಿದೆ.
ವರ್ಜಿಸಲ್ಪಟ್ಟ ಕಾರುಗಳು
“ಹಿಂದೆ ವರ್ಜಿಸಲ್ಪಟ್ಟ ಸೈಕಲುಗಳು ನಮಗೆ ತೊಂದರೆ ಕೊಡುತ್ತಿದ್ದವು, ಆದರೆ ಈಗ ವರ್ಜಿಸಲ್ಪಟ್ಟ ಕಾರುಗಳು ಕಠಿಣ ಉಪದ್ರವ ಕೊಡುತ್ತವೆ,” ಎಂದು ಜಪಾನಿನ ನ್ಯಾಷನಲ್ ಪೊಲೀಸ್ ಏಜನ್ಸಿಯ ಒಬ್ಬ ಅಧಿಕಾರಿ ಆಪಾದಿಸಿದನು. ಸರಕಾರದ ಎಣಿಕೆಗನುಸಾರ ಪ್ರತಿ ವರ್ಷ ಜಪಾನಿನಲ್ಲಿ ಸುಮಾರು ನಾಲ್ವತ್ತು ಲಕ್ಷ ಕಾರುಗಳು ವರ್ಜಿಸಲ್ಪಡುತ್ತವೆ. ಈ ಹಿಂದೆ, ಕಾರುಗಳಿದ್ದವರು ಅವನ್ನು ತುಣುಕು ಕಬ್ಬಿಣ ವ್ಯಾಪಾರಿಗಳಿಗೆ ಮಾರುತ್ತಿದ್ದರು, ಆದರೆ ಈಗ ಅವನ್ನು ಕೊಂಡೊಯ್ಯಲು ಈ ವ್ಯಾಪಾರಿಗಳಿಗೆ ಹಣ ತೆರಬೇಕು. ಕಾರುಗಳನ್ನು ಏಕೆ ವರ್ಜಿಸಲಾಗುತ್ತದೆಂಬುದನ್ನು ವಿವರಿಸುತ್ತಾ ದ ಡೆಯ್ಲಿ ಯೊಮಿಯುರಿ ಹೇಳಿದ್ದೇನಂದರೆ ಇತ್ತೀಚೆಗೆ ತುಣುಕು ಕಬ್ಬಿಣದ ಬೆಲೆಯಲ್ಲಿ ತೀರಾ ಇಳಿತದ ಕಾರಣದಿಂದ ಕಾರನ್ನು ಚೂರು ಮಾಡುವ ವ್ಯಾಪಾರ ಲಾಭದಾಯಕವಲ್ಲವೆಂದು ಇಂಥ ಕಂಪೆನಿಗಳು ಕಂಡುಕೊಂಡಿವೆ. ಆದರೆ ಪೊಲೀಸರು ಕ್ರಮ ಕೈಕೊಳ್ಳುತ್ತಿದ್ದಾರೆ. ಕಾರುಗಳನ್ನು ವರ್ಜಿಸುವುದಕ್ಕಾಗಿ ಅವರು ಜನರನ್ನು ಕೋರ್ಟಿಗೆ ಒಯ್ಯಲು ಪ್ರಾರಂಭಿಸಿದ್ದಾರೆ.
ಭಾರತದಲ್ಲಿ ರಕ್ತನಿಧಿಯ ಬಿಕ್ಕಟ್ಟು
“ರಕ್ತ: ಅದು ಜೀವ ನೀಡುತ್ತದೆಯೆ, ಕೊಂಡೊಯ್ಯುತ್ತದೆಯೆ?” ಎಂದು ರಾಷ್ಟ್ರದ ಖಾಸಗಿ ರಕ್ತ ನಿಧಿಗಳ ಶೋಕಾರ್ಹ ಸ್ಥಿತಿಯನ್ನು ವರದಿ ಮಾಡುತ್ತಾ ಇಂಡಿಯ ಟುಡೇ ಪತ್ರಿಕೆಯ ಇತ್ತೀಚೆಗಿನ ಒಂದು ಸಂಚಿಕೆ ಕೇಳಿತು. ಭಾರತದ ಆರೋಗ್ಯ ಸಚಿವಾಲಯ ಮಾಡಿಸಿದ ಒಂದು ಅಧ್ಯಯನವು ದೇಶದ ಕಸಬುದಾರ ರಕ್ತದಾನಿಗಳ ರಕ್ತದಲ್ಲಿ 70ಕ್ಕೂ ಹೆಚ್ಚು ಸೇಕಡ ರಕ್ತವು ಏಯ್ಡ್ಸ್ ರೋಗ ತರುವ ಮಾರಕ ಎಚ್‌ಐವಿ ರೋಗಾಣುವಿಗಾಗಿ ಸರಿಯಾಗಿ ಪರೀಕೆಗ್ಷೊಳಗಾಗುವುದಿಲ್ಲ. ರೋಗಿಗಳೂ ಬಡವರೂ ಆದವರಿಂದ ರಕ್ತ ಕೊಳ್ಳುವ ಅನೇಕ ಖಾಸಗಿ ರಕ್ತ ನಿಧಿಗಳಲ್ಲಿರುವ ಅನಾರೋಗ್ಯಕರವಾದ ಪರಿಸ್ಥಿತಿಗಳನ್ನೂ ಈ ವರದಿ ತಿಳಿಸಿತು. ಇವರಲ್ಲಿ ಅನೇಕ ದಾನಿಗಳು “ಮದ್ಯಪಾನ ರೋಗಿಗಳು ಯಾ ಮಾದಕ ಪದಾರ್ಥ ದುರುಪಯೋಗಿಗಳು,” ಅಥವಾ “ಅವ್ಯವಸ್ಥಿತ ಲೈಂಗಿಕಾಭ್ಯಾಸವುಳ್ಳವರು.” ಆದುದರಿಂದ, “ಹೆಪಟೈಟಿಸ್, ಮಲೇರಿಯ, ಸಿಫಿಲಿಸ್ ಮತ್ತು ಈಗ ಏಯ್ಡ್ಸ್” ನ್ನು ದಾನ ಮಾಡುವ ರಕ್ತವು ರವಾನಿಸಬಹುದಾದುದರಿಂದ, “ಹೊರಗಿನಿಂದ ರಕ್ತವನ್ನು ಖರೀದಿಸುವುದು ರಷ್ಯನ್ ರೂಲೆಟ್ ಆಟ ಆಡಿದಂತೆ” ಎಂದು ಇಂಡಿಯ ಟುಡೇ ಪ್ರಲಾಪಿಸಿತು.
ಬಳಕೆದಾರರಿಗೆ ಎಚ್ಚರಿಕೆ
“ಕಳೆದ ದಶಕದಲ್ಲಿ, 150 ಬಿಲ್ಯ ಡಾಲರು ಬೆಲೆ ಬಾಳುವ ಔಷಧ ವ್ಯಾಪಾರದಲ್ಲಿ ಆಗುವ ಲಾಭವು ಹೊಸ ಖೋಟಾ ವ್ಯಾಪಾರವನ್ನು, ತೋರಿಬರುವಂತೆ ಇಲ್ಲದಿರುವ ಔಷಧಗಳ ವ್ಯಾಪಾರವನ್ನು ಪ್ರೇರಿಸಿದೆ” ಎನ್ನುತ್ತದೆ ನ್ಯೂಸ್‌ವೀಕ್. “ಹೆಸರುಗಳು ಪರಿಚಿತ” ಮತ್ತು ಅವುಗಳಲ್ಲಿ ಲೋಕದ ಅತಿ ಹೆಚ್ಚು ವ್ಯಾಪಾರವಾಗುವ ಮದ್ದುಗಳು ಸೇರಿವೆ. “ಖೋಟಾ ಮದ್ದುಗಳು ಅವುಗಳ ಲೇಬಲ್, ತಯಾರಕರ ಲಘುಕೈಪಿಡಿ ಮತ್ತು ತಾಜಾ ಮುದ್ರೆಗಳನ್ನು ನೋಡುವಾಗ ನಿಜ ಮದ್ದುಗಳಂತೆ ಕಾಣುತ್ತವೆ.” ಆದರೆ ಒಳಗೆ ಉದ್ಯಮಗಳ ಲೀನಕಾರಿ, ಮರದ ಪುಡಿ, ಕೊಳೆ, ಟ್ಯಾಲ್ಕಮ್ ಪೌಡರ್, ಮತ್ತು ಮಲಿನ ನೀರಿನಂಥ ಹಾನಿಕಾರಿಯಾದ ಪದಾರ್ಥಗಳಿರಬಹುದು. ಅನೇಕ ವೇಳೆ, ಅದರಲ್ಲಿರುವ ಔಷಧ ಬಲಹೀನವೂ ನಿಸ್ಸಾರವೂ ಯಾವ ಪ್ರಯೋಜನವೂ ಇಲ್ಲದ್ದೂ ಆಗಿದೆ. ಪರಿಣಾಮವೊ? “ಸಾವಿರಾರು ಜನರಲ್ಲದಿದ್ದರೆ ನೂರಾರು ಜನರಾದರೂ ಸತ್ತಿದ್ದಾರೆ” ಎನ್ನುತ್ತಾರೆ, ಲಂಡನ್ ಸ್ಕೂಲ್ ಆಫ್ ಹೈಜೀನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್‌ನ ಹೆಲ್ತ್ ಇಕನಾಮಿಸ್ಟ್ ಸೂಸನ್ ಫಾಸ್ಟರ್. ಉದ್ದೇಶಪೂರ್ವಕವಲ್ಲದೆ ವೈದ್ಯರೂ ಆಸ್ಪತ್ರೆಗಳೂ ಇವನ್ನು ವಿತರಣೆ ಮಾಡಬಹುದು. ನ್ಯಾಯವಾದ ತಯಾರಕರು ಇದಕ್ಕೆ ಪರಿಹಾರ ತರುವ ವಿಷಯದಲ್ಲಿ ಪೇಚಾಟಕ್ಕೊಳಗಾಗಿದ್ದಾರೆ. ಅಂತಾರಾಷ್ಟ್ರೀಯ ಔಷಧ ಸ್ವಾಮ್ಯದ ಹಕ್ಕನ್ನು ಒಪ್ಪದಿರುವ ದೇಶಗಳಿಂದ ಅನೇಕ ವೇಳೆ ಔಷಧಗಳು ಬರುತ್ತವೆ. ಸಾಮಾನ್ಯವಾಗಿ, ನ್ಯಾಯವಾದ ಕಂಪೆನಿಗಳು, ವಿಷಯವು ಬಹಿರಂಗವಾಗಿ ಜನರು ತಮ್ಮ ತಯಾರಿಕೆಗಳನ್ನು ಖರೀದಿಸದೆ ಹೋದಾರೆಂದು ಹೇಳಿ ಈ ಸಮಸ್ಯೆಯ ವಿಷಯದಲ್ಲಿ ಸುಮ್ಮಗಿರುತ್ತವೆ.
ತಕ್ಕಷ್ಟು ಆಧಾರವಿರುವ ಭಯ?
ವಿಮಾನ ಪ್ರಯಾಣವು ಇನ್ನೂ ಅತಿ ಸುಭದ್ರ ಸಾರಿಗೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಆದರೂ, ವಿಮಾನ ಯಾತ್ರೆಯ ಭಯವುಳ್ಳವರಿಗೆ, ನ್ಯೂಸ್‌ವೀಕ್ ಪ್ರಕಟಿಸಿದ, ಕುಡಿದು ವಿಮಾನ ಹಾರಾಡಿಸುವ ಸಂಬಂಧದ ಸಂಖ್ಯಾಸಂಗ್ರಹಣವನ್ನು ಓದುವಾಗ ಆಶ್ಚರ್ಯವಾಗಬಾರದು: “ಅಮೆರಿಕದಲ್ಲಿ ಲೈಸನ್ಸ್ ಇರುವ 6,75,00 ಪೈಲಟ್‌ಗಳಲ್ಲಿ 10,000 ಮಂದಿಗೆ ಕುಡಿದು ಹಾರಾಡಿಸುವ ದಾಖಲೆಯಿದೆ. 1,200 ಕ್ಕೂ ಹೆಚ್ಚು ಪೈಲಟ್‌ಗಳು ಮದ್ಯಪಾನ ರೋಗಕ್ಕೆ ಚಿಕಿತ್ಸೆ ಪಡೆದು ಕಳೆದ 15 ವರ್ಷಗಳಲ್ಲಿ ಪುನಃ ಕೆಲಸಕ್ಕೆ ಸೇರಿದವರು. ವಿಮಾನ ಅಪಘಾತಗಳಲ್ಲಿ ಪ್ರತಿ ವರ್ಷ ಸತ್ತ ಸಾಮಾನ್ಯ ವಿಮಾನ ಪೈಲಟ್‌ಗಳಲ್ಲಿ 5ರಿಂದ 10 ಸೇಕಡ ಮಂದಿಗಳ ರಕ್ತದಲ್ಲಿ ಮದ್ಯಸಾರವಿತ್ತು. 1980ರಿಂದ 1988ರ ವರೆಗೆ ನಡೆದ ಆರು ಕಮ್ಯೂಟರ್ ಮತ್ತು ಏಯರ್ ಟ್ಯಾಕ್ಸಿ ಅಪಘಾತಗಳನ್ನು ಪೂರ್ತಿಯಾಗಿ ಯಾ ಅಂಶಿಕವಾಗಿ ಪೈಲಟ್‌ಗಳ ಕುಡಿಯುವಿಕೆಗೆ ಜೋಡಿಸಲಾಗಿದೆ.” (g91 4/8)