ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 12/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1992
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1993
  • ನಮ್ಮ ವಾಚಕರಿಂದ
    ಎಚ್ಚರ!—1992
  • ನಮ್ಮ ವಾಚಕರಿಂದ
    ಎಚ್ಚರ!—1992
  • ನಮ್ಮ ವಾಚಕರಿಂದ
    ಎಚ್ಚರ!—1993
ಇನ್ನಷ್ಟು
ಎಚ್ಚರ!—1992
g92 12/8 ಪು. 30

ನಮ್ಮ ವಾಚಕರಿಂದ

ಟೀವೀ “ಟೆಲಿವಿಷನ್‌—ಜಗತ್ತನ್ನು ಬದಲಾಯಿಸಿದ ಪೆಟ್ಟಿಗೆ” (ಜೂನ್‌ 8, 1992) ಎಂಬ ಲೇಖನಮಾಲೆಗೆ ಉಪಕಾರ. ನನಗೆ ಯಾವಾಗಲೂ ಟೀವೀಯ ಸಮಸ್ಯೆ ಇತ್ತು. ಅದನ್ನು ಆರಿಸುವ ಸಂಕಲ್ಪ ಶಕ್ತಿ ನನಗಿಲ್ಲ. ನಿಮ್ಮ ಸೂಚನೆಗಳು ಸಹಾಯಕರವಾದುವು. ನಾನು ಟೆಲಿವಿಷನನ್ನು ಎಷ್ಟು ಪ್ರೇಕ್ಷಿಸುತ್ತೇನೆಂದು ಪತ್ತೆಹಚ್ಚಲಿದ್ದೇನೆ. ನಾನು ನನ್ನ ಟೀವೀಯನ್ನು ಕಪಾಟಿನಲ್ಲಿಯೂ ಹಾಕಿಟ್ಟಿದ್ದೇನೆ. ಏಕೆಂದರೆ ನನಗೆ ಪ್ರೇಕ್ಷಿಸಲು ಮನಸ್ಸಾಗುವಾಗ ಅದರ ಉಪಯುಕ್ತತೆ ಮತ್ತು ನಿರುಪಯುಕ್ತತೆಯನ್ನು ನಾನು ಮೊದಲು ತೂಗಿನೋಡುವ ಕಾರಣವೇ. ನಿಮಗೆ ಪುನಃ ಉಪಕಾರ.

ಡಬ್ಲ್ಯು. ಎಚ್‌., ಯುನೊಯಿಟೆಡ್‌ ಸ್ಟೇಟ್ಸ್‌

ಲಾಟರಿ ಹುಚ್ಚು ‘ಲಾಟರಿ ಹುಚ್ಚು’ (ಮೇ 8, 1992) ಇದರ ಕುರಿತ ನಿಮ್ಮ ಲೇಖನಗಳು, ನಾನು ಕ್ರೈಸ್ತನಾಗುವ ಮೊದಲು ನನಗಿದ್ದ ಜೂಜಾಡುವ ಮಿತ್ರರ ನೆನಪನ್ನು ತಂದಿತು. ಒಬ್ಬನನ್ನು ಜೂಜಿನ ಕಾರಣ ಹಾಕಿದ ಕಳ್ಳ ರುಜುವಿಗಾಗಿ ಸೆರೆಮನೆಗೆ ಕಳುಹಿಸಲಾಯಿತು. ಇನೊಬ್ಬನನ್ನು ಮಿತಿಮೀರಿ ಬಡ್ಡಿಗೆ ಸಾಲಕೊಟ್ಟವರು, ಅವನು ಸಾಲ ಹಿಂದೆ ಕೊಡದ ಕಾರಣ ಹೊಡೆದು ನಿಸ್ಸತ್ವನಾಗಿ ಮಾಡಿದರು. ಜೂಜು ಜನರ ಜೀವನಗಳನ್ನು ಹಾಳುಗೆಡವುವುದು ನಿಶ್ಚಯ.

ಆರ್‌. ಬಿ., ಯುನೊಯಿಟೆಡ್‌ ಸ್ಟೇಟ್ಸ್‌

ನೀವು ಏನಾಗಿದ್ದೀರೋ ಅದನ್ನು ಬದಲಾಯಿಸುವುದು “ನೀವು ಏನಾಗಿದ್ದೀರೋ ಅದನ್ನು ಬದಲಾಯಿಸಬೇಕೋ?” (ಜೂಲೈ 8, 1992) ಎಂಬ ಲೇಖನಮಾಲೆಯಲ್ಲಿ ನೀವು ಕೊಟ್ಟ ಉತ್ಕಷ್ಟ ಸಲಹೆಗಳಿಗಾಗಿ ನಿಮಗೆ ಹೃತ್ಪೂರ್ವಕವಾದ ಉಪಕಾರವನ್ನು ಹೇಳಬಯಸುತ್ತೇನೆ. ನನ್ನ ವ್ಯಕ್ತಿತ್ವದಲ್ಲಿ ತುಸು ಬದಲಾವಣೆಗಳು ಅಗತ್ಯವೆಂದು ನಾನು ಗ್ರಹಿಸಿದರೂ, ಇದಕ್ಕೆ ಪ್ರಚೋದನೆ ಇರಲಿಲ್ಲ. ನಾನು ಈಗ ನೀವು ಕೊಟ್ಟ ಸಲಹೆಯನ್ನು ಪ್ರಯೋಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ, ಮತ್ತು ಅದು ತುಂಬ ಉಪಯುಕ್ತವೆಂದು ಆಗಲೆ ಕಂಡುಕೊಳ್ಳುತ್ತಿದ್ದೇನೆ.

ಎಸ್‌. ಸಿ., ಇಟೆಲಿ

ಆಸ್ಪತ್ರೆಯ ಮನೋರೋಗ ವಾರ್ಡಿನಿಂದ ಹೊರಬಂದ ಮೇಲೆ ನಾನು ‘ಬದಲಾಗುವ’ ಸಂಬಂಧದ ಲೇಖನಗಳನ್ನು ಓದಿದೆ. ಅದು ಹೇಗೆ ಹೊಡೆಯಿತೆನ್ನುತ್ತೀರಿ! ನನ್ನಲ್ಲಿ ಗುರುತರವಾದ ಒಂದು ವರ್ತನಾ ಅವ್ಯವಸ್ಥೆಯಿದೆಯೆಂದು ನೋಡಲು ನನಗೆ ಸುಮಾರು 30 ವರ್ಷಕಾಲ ಹಿಡಿಯಿತು. ಈಗ ನಾನು ನನ್ನನ್ನು ನಾನಿರುವಂತೆಯೇ ನೋಡುತ್ತೇನೆ. ಮತ್ತು ಈಗ ನನಗೆ ನನ್ನ ಸಮಸ್ಯೆಯ ಪ್ರಜ್ಞೆಯಿರುವುದರಿಂದ ನನ್ನನ್ನು ನಿಯಂತ್ರಿಸಿಕೊಳ್ಳಲು ಸಕಾರಾತ್ಮಕ ಹೆಜ್ಜೆಗಳನ್ನು ತಕ್ಕೊಳ್ಳಬಲ್ಲೆ.

ಜೆ.ಡಿ. ಯುನೊಯಿಟೆಡ್‌ ಸ್ಟೇಟ್ಸ್‌

ಶ್ವಾಸಕೋಶಗಳು ನನಗೆ 13 ವರ್ಷ ವಯಸ್ಸು. ಐದನೆಯ ಕ್ಲಾಸಿನಲ್ಲಿ ಶ್ವಾಸಕೋಶಗಳ ಕುರಿತು ಕಲಿತದ್ದು ನನಗೆ ನೆನಪಿದೆ, ಆದರೆ ಆ ಮಾಹಿತಿಯಲ್ಲಿ ಹೆಚ್ಚಿನದನ್ನು ನಾನು ಮರೆತಿದ್ದೆ. “ಶ್ವಾಸಕೋಶಗಳು—ರಚನೆಯಲ್ಲಿ ಅದ್ಭುತಕರ” (ಜೂನ್‌ 8, 1992) ಎಂಬ ನಿಮ್ಮ ಲೇಖನ ನನ್ನ ಜ್ಞಾಪಕಶಕ್ತಿಯನ್ನು ಚುರುಕುಗೊಳಿಸಿತು. ಅದು ಅತಿ ಉತ್ತಮವಾಗಿ ಬರೆಯಲ್ಪಟ್ಟಿದ್ದು ರೇಖಾಚಿತ್ರ ನಿಷ್ಕ್ರಷ್ಟವಾಗಿತ್ತು. ಯೆಹೋವನ ಆಶ್ಚರ್ಯಕರವಾದ ಸೃಷ್ಟಿಯ ಕಡೆಗೆ ನಮ್ಮ ಗಣ್ಯತೆಯನ್ನು ಆಳವಾಗಿಸಲು ಸಹಾಯ ಮಾಡುವ ಇಂಥ ಲೇಖನಗಳಿಗಾಗಿ ನಿಮಗೆ ತುಂಬ ಉಪಕಾರ.

ಎ. ಎಮ್‌., ಯುನೊಯಿಟೆಡ್‌ ಸ್ಟೇಟ್ಸ್‌

ಶ್ವಾಸಕೋಶಗಳು “ಶ್ವಾಸಕೋಶಗಳು—ರಚನೆಯಲ್ಲಿ ಅದ್ಭುತಕರ” (ಜೂನ್‌ 8, 1992) ಎಂಬ ಲೇಖನಕ್ಕಾಗಿ ನಾನು ನಿಮಗೆ ಉಪಕಾರ ಹೇಳಲೇ ಬೇಕು. ಯೆಹೋವ ದೇವರ ಆಶ್ಚರ್ಯಕರವಾದ ಕೆಲಸಗಳ ಕಡೆಗೆ ವಿಸ್ಮಯದ ಭಾವನೆಯನ್ನು ಅದು ನನ್ನಲ್ಲಿ ಮೂಡಿಸಿತು. ಲೇಖನವನ್ನು ಕೌಶಲದಿಂದ ಬರೆಯಲಾಗಿತ್ತು ಮತ್ತು ತೀರಾ ಜಟಿಲವಾಗಿರುವ ವಿಷಯಗಳನ್ನು ನಂಬಲಾಗದಷ್ಟು ಸುಲಭ ರೀತಿಯಲ್ಲಿ ಗ್ರಹಿಸಲು ಅದು ಸಹಾಯ ಮಾಡಿತು.

ಬಿ. ಟಿ. ಎ., ಬ್ರೆಸೀಲ್‌

ಹರಟೆ ಹರಟೆಯ ಕುರಿತ ಸಮಯೋಚಿತ ಲೇಖನಕ್ಕೆ ಉಪಕಾರ. (ಏಪ್ರಿಲ್‌ 8, 1992) ನಾನು ಇತ್ತೀಚೆಗೆ ದುರುದ್ದೇಶದ ಹರಟೆಗೆ ಬಲಿಯಾಗಿದ್ದೆ, ಮತ್ತು ಮತ್ತಾಯ 18:15-17ರ ಶಾಸ್ತ್ರಾಧಾರಿತ ಸೂತ್ರಗಳನ್ನು ಪ್ರಯೋಗಿಸಿದುದರ ಮೂಲಕ ನನ್ನನ್ನು ನೋಯಿಸಿದ ವ್ಯಕ್ತಿಯೊಂದಿಗೆ ಸಮಸ್ಯೆಯನ್ನು ಬಗೆಹರಿಸಶಕ್ತಳಾದೆ.

ಬಿ. ಸಿ., ಆಸ್ಟ್ರೇಲಿಯ

ಲೇಖನಗಳು ಬೋಧಪ್ರದವೂ ಸುಲಿಖಿತವೂ ಆಗಿದ್ದವು ಎಂದು ನಾನೆಣಿಸಿದೆ. ಆದರೆ ನೀವು ಉಪಯೋಗಿಸಿದ ಚಿತ್ರಗಳನ್ನು ನೋಡಿ ನನಗೆ ಅಚ್ಚರಿಯಾಯಿತು. ಅವುಗಳಲ್ಲಿ ನಾಲ್ಕು, ಸ್ತ್ರೀಯರು ಹರಟೆ ಹೊಡೆಯುವುದನ್ನು ಚಿತ್ರಿಸುತ್ತವೆ. ಹರಟೆ ಸ್ತ್ರೀಯರ ಲಕ್ಷಣವೆಂಬುದೇ ಮೌನ ಸಂದೇಶ.

ಎಚ್‌. ಡಬ್ಲ್ಯು., ಯುನೊಯಿಟೆಡ್‌ ಸ್ಟೇಟ್ಸ್‌

ಸ್ತ್ರೀಯರನ್ನು ಯಾ ಪುರುಷರನ್ನು ನಕಾರಾತ್ಮಕವಾಗಿ ಚಿತ್ರಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಫೋಟೊಗಳಲ್ಲಿ ಎರಡು, ಪುರುಷರು ಹರಟೆಯಾಡುವುದನ್ನು ತೋರಿಸಿದವು. ಇನ್ನೊಂದು ಫೋಟೊ ಆತ್ಮಿಕೋನ್ನತಿಯ ಸಂಭಾಷಣೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರನ್ನು ಚಿತ್ರಿಸಿತು. ಒಬ್ಬ ಮಹಿಳೆ ಹರಟೆಗೆ ಕಿವಿಗೊಡಲು ಸಹ ನಿರಾಕರಿಸುವುದನ್ನೂ ಅಲ್ಲಿ ತೋರಿಸಲಾಗಿರುತ್ತದೆ.—ಸಂಪಾ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ