ಅಪ್ಪ ಮತ್ತು ಅಮ್ಮನಿಗೆ ಒಂದು ಪತ್ರ
ಉತ್ತಮರಾದ ತಂದೆತಾಯಿಗಳು ಎಷ್ಟು ಪ್ರಾಮುಖ್ಯ? ಬೆಳೆದ ಮಗನೊಬ್ಬನು ತನ್ನ ತಂದೆತಾಯಿಗಳಿಗೆ ಬರೆದ ಪತ್ರ ಅವರ ಬೆಲೆಯನ್ನು ಪ್ರದರ್ಶಿಸುತ್ತದೆ:
“ಪ್ರಿಯರಾದ ಅಮ್ಮ ಮತ್ತು ಅಪ್ಪ:
“ನಾನು ಮನೆಬಿಟ್ಟುಹೋಗಿ 16ಕ್ಕೂ ಹೆಚ್ಚು ವರ್ಷಗಳಾಗಿರುವುದರಿಂದ, ಈ ವಿಧದ ಪತ್ರವನ್ನು ನನ್ನಿಂದ ಈಗ ಪಡೆಯುವುದು ನಿಮಗೆ ತುಸು ವಿಚಿತ್ರವಾಗಿ ಕಂಡೀತು. ಆದರೆ ಧಾರಾಳವಾಗಿ ವಿಚಾರ ಮಾಡಿದ ಬಳಿಕ ನನಗೆ ಇದನ್ನು ಬರೆಯುವುದು ಅವಶ್ಯವೆಂದು ತೋರಿತು. ವರ್ಷಗಳಿಗೆ ಹಿಂದೆ, ನಾನು ನಿಮ್ಮ ಮನೆಯನ್ನು ಬಿಟ್ಟಾಗ, ನಾನು ನಿಮ್ಮ ಅನುಮತಿಯನ್ನು ಕೇಳದೆ ಅನೇಕ ವಿಷಯಗಳನ್ನು ನಿಮ್ಮಿಂದ ಕೊಂಡು ಹೋಗಿದ್ದೆ. ಅವು ಹೋಗಿವೆಯೆಂಬುದನ್ನು ನೀವು ಗಮನಿಸಿಯೂ ಇರಲಿಕ್ಕಿಲ್ಲ. ವಾಸ್ತವವಾಗಿ, ಅವುಗಳನ್ನು ನಾನು ಎಷ್ಟು ಗುಟ್ಟಿನಲ್ಲಿ ಕೊಂಡೊಯ್ದೆನೆಂದರೆ, ಅವು ನನ್ನೊಂದಿಗಿವೆಯೆಂದು ಕೆಲವು ವರ್ಷಗಳು ಕಳೆಯುವ ತನಕ ನನಗೂ ತಿಳಿದಿರಲಿಲ್ಲ. ನಾನು ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದ್ದೇನೆ:
“ಯಾವುದು ಸಮರ್ಪಕವೊ ಅದಕ್ಕಾಗಿ ಪ್ರೀತಿ: ಇದು ಹೇಗೆ ನನ್ನನ್ನು ರಕ್ಷಿಸಿದೆ!
“ಜನರ ಕಡೆಗೆ ಪ್ರೀತಿ: ಗಾತ್ರ, ಆಕಾರ, ಮತ್ತು ವರ್ಣಗಳು ಪ್ರಾಮುಖ್ಯವಲ್ಲ. ಒಳಗೆ ಏನಿದೆಯೊ ಅದೇ ಪ್ರಾಮುಖ್ಯ.
“ಪ್ರಾಮಾಣಿಕ: ನನ್ನಲ್ಲಿರುವುದು ನನ್ನದಾದರೂ, ಅದು ಇಷ್ಟಕರವಾಗಿ ಇತರರೊಂದಿಗೆ ಪಾಲಿಗರಾಗುವ ಉಪಯೋಗಕ್ಕಾಗಿದೆ. ಇನ್ನೊಬ್ಬನಲ್ಲಿರುವುದನ್ನು ಅದರಷ್ಟಕ್ಕೆ ಬಿಟ್ಟುಬಿಡು.
“ದೃಢ: ನನಗೆ ಅತಿ ಕಷ್ಟವಾಗಿದ್ದ ಸಮಯದಲ್ಲಿ ಇದು ನನ್ನನ್ನು ಪಾರುಮಾಡಿಸಿದೆ.
“ಸೈರ: ನೀವು ನನಗೆ ಎಷ್ಟೋ ದಯೆ, ಪ್ರೀತಿ ಮತ್ತು ಸೈರಣೆ ತೋರಿಸಿದಿರಿ. ನನ್ನ ಸುಧಾರಣೆ ಅಸಾಧ್ಯವೊ ಎಂಬಂತೆ ನೀವು ಪ್ರಯತ್ನವನ್ನು ತ್ಯಜಿಸಲಿಲ್ಲ.
“ಶಿಸ್ತು: ನೀವು ತೀರಾ ನಿರ್ದಯತೆಯನ್ನೂ ತೋರಿಸಲಿಲ್ಲ, ತೀರಾ ದಯಾಪರರೂ ಆಗಿರಲಿಲ್ಲ. ಆದರೆ ಅದು ಆಗ ನನಗೆ ಗೊತ್ತಿರಲಿಲ್ಲ. ನನ್ನನ್ನು ಕ್ಷಮಿಸುವಿರಾ?
“ಸ್ವಾತಂತ್ರ್ಯ: ಶಾರೀರಿಕ, ಮಾನಸಿಕ, ಮತ್ತು ಭಾವಾವೇಶಾತ್ಮಕವಾಗಿ ಅಪಪ್ರಯೋಗ ಮಾಡುವ ಹೆತ್ತವರು ಅನೇಕ ಇತರ ಮಕ್ಕಳು ಬೆಳೆಯುವಾಗ ಅವರಿಗೆ ಕೊಟ್ಟಿದ್ದ ಬೇನೆಯಿಂದ ಸ್ವಾತಂತ್ರ್ಯ. ನಿಮಗೆ ನನ್ನ ಅತ್ಯಂತ ಹಿತಾಸಕ್ತಿಯಲ್ಲದೆ ಇನ್ನಾವುದೂ ಇರಲಿಲ್ಲ, ಮತ್ತು ನೀವು ನನ್ನನ್ನು ಹಾನಿಯಿಂದ ಸಂರಕ್ಷಿಸಿದಿರಿ. ನೀವು ನನಗೆ ಮಾಡಿರುವುದನ್ನು ನಾನೆಂದಿಗೂ ಮರೆಯಲಾರೆ.
“ಸಾಮಾನ್ಯ ವಿಷಯಗಳಿಗೆ ಪ್ರೀತಿ: ಬೆಟ್ಟಗಳು, ನದಿಗಳು, ನೀಲಾಕಾಶ, ದೂರ ನಡಗೆ, ಶಿಬಿರ ವಾಸ. ನೀವು ಜೀವನವನ್ನು ಎಷ್ಟೋ ವಿನೋದದಾಯಕವಾಗಿ ಮಾಡಿದಿರಿ. ಇನ್ನಾವ ಹೆತ್ತವರಿಗೂ ಇದಕ್ಕಿಂತ ಹೆಚ್ಚು ಮಾಡಸಾಧ್ಯವಾಗುತ್ತಿರಲಿಲ್ಲ. ಮತ್ತು ಇದು ನಿಮಗೆ ಉಪದ್ರವಕರವಾಗಿ ಕಂಡುಬರಲೇ ಇಲ್ಲ.
“ಜಾಗ್ರತೆ: ನೀವು ಕೇಳಿದ್ದನ್ನೆಲ್ಲ ಒಡನೆ ನಂಬಬೇಡಿರಿ. ಆದರೆ ನಂಬುವಲ್ಲಿ, ಏನೇ ಬಂದರೂ ಅದಕ್ಕೆ ಅಂಟಿಕೊಳ್ಳಿರಿ.
“ದೇವರ ವಾಕ್ಯದಿಂದ ಸತ್ಯ: ಇದು ಸಕಲಕ್ಕಿಂತ ಪ್ರಾಮುಖ್ಯ. ಇದು ನನ್ನ ಪಿತ್ರಾರ್ಜಿತ. ಯಾವುದೇ ಹಣ, ವಿಹಾರದೋಣಿ, ಮನೆ ಯಾ ಸಂಪತ್ತು ಇದಕ್ಕೆ ಸಮಾನವಲ್ಲ. ಇದು ನನಗೆ ಅತಿ ಪ್ರಾಮುಖ್ಯ ಯಾವುದೋ ಅದನ್ನು—ನಿತ್ಯಜೀವವನ್ನು—ಕೊಡುವುದು.
“ಈ ಮೇಲಿನ ವಿಷಯಗಳಿಗೆ ಬೆಲೆಕಟ್ಟುವುದು ಕಷ್ಟ. ಅವು ಬೆಲೆಕಟ್ಟಲಾಗದವುಗಳು. ನಾನು ಅವುಗಳನ್ನು ಎಷ್ಟೋ ಉಪಯೋಗಿಸಿದ್ದೇನೆ. ಮತ್ತು ನನಗೆ ಅವನ್ನು ಹಿಂದೆಕೊಡಲಿಕ್ಕೆ ಇಲ್ಲದಿರುವಲ್ಲಿ ಅವನ್ನು ನಾನು ಬಳಸುತ್ತಾ ಮುಂದುವರಿಯುತ್ತೇನೆ. ನೀವು ಆಕ್ಷೇಪಿಸದಿರುವಲ್ಲಿ, ನಾನು ಅವನ್ನು ನನ್ನ ಎಳೆಯ ಪುತ್ರರಿಗೆ ಕೊಡಬೇಕೆಂದು ನಿರೀಕ್ಷಿಸುತ್ತಿದ್ದೆ. ಏಕೆಂದರೆ, ಅವು ನನ್ನ ಸೇವೆ ಮಾಡಿದಂತೆಯೆ ನನ್ನ ಗಂಡುಮಕ್ಕಳ ಸೇವೆಯನ್ನೂ ಮಾಡುವುವೆಂದು ನನಗೆ ಗೊತ್ತು. ಮತ್ತು ನಾನು ಅವುಗಳನ್ನು ಎಲ್ಲಿಂದ—ಅಜ್ಜ ಮತ್ತು ಅಜ್ಜಿಯರಿಂದ—ಪಡೆದೆನೆಂದು ಸದಾ ತಿಳಿಸುವೆ.
“ನಿಮ್ಮ ಮಗ,”
(ವಿನಂತಿಸಿರುವಂತೆ ಹೆಸರನ್ನು ತಡೆಹಿಡಿಯಲಾಗಿದೆ.) (g92 10/8)