ಪುಟ ಎರಡು
ಸಕಲರನ್ನು ತೃಪ್ತಿಪಡಿಸುವ ಒಂದು ಹೊಸ ಜಗತ್ತು 3-11
ಒಂದು ಹೊಸ ಜಗತ್ತಿಗಾಗಿರುವ ಮಾನವಕುಲದ ಹಾತೊರೆಯುವಿಕೆಗೆ ಓಗೊಡುತ್ತಾ, ರಾಜಕಾರಣಿಗಳು ಅದನ್ನು ಸೃಷ್ಟಿಸುವ ಕುರಿತು ಮಾತಾಡುತ್ತಾರೆ. ಇದು ಅವರಿಂದ ಸಾಧ್ಯವೆ? ಸಾಧ್ಯವಿಲ್ಲದಿರುವಲ್ಲಿ, ಇಂಥ ಜಗತ್ತಿಗಿರುವ ಹಾತೊರೆಯುವಿಕೆ ಎಂದಿಗೂ ತೃಪ್ತಿಗೊಳಿಸಲ್ಪಡದೆಂದು ಅರ್ಥವೆ? ಒಂದು ಹೊಸ ಜಗತ್ತು ನಿಕಟವಿದೆ ಎಂಬುದಕ್ಕಿರುವ ಸಾಕ್ಷ್ಯಗಳು ಹೃದಯಾನುರಾಗದಾಯಕವೂ ಪ್ರೋತ್ಸಾಹಕರವೂ ಆಗಿವೆಯೆಂದು ನೀವು ಕಂಡುಕೊಳ್ಳುವಿರಿ.
ಕರಾವಳಿಯ ಬೃಹತ್ ವೃಕ್ಷಗಳ ತಳಿ ಬೆಳೆಸುವುದು 15
ಮರಗಳು ಎಷ್ಟು ಪ್ರಾಮುಖ್ಯವೆಂದರೆ ವಿಜ್ಞಾನಿಗಳು ಕಾಡುಗಳ ಬೆಳೆಯನ್ನು ಉತ್ತಮಗೊಳಿಸುವ ವಿಧಗಳನ್ನು ಹುಡುಕುತ್ತಿದ್ದಾರೆ. ಒಂದು ಮರದಿಂದ ತೆಗೆದ ರೆಂಬೆಗಳು ಅದೇ ಮರವನ್ನು ನಕಲು ಮಾಡಲು ಹೇಗೆ ಉಪಯೋಗಿಸಲ್ಪಡುತ್ತವೆಂಬುದನ್ನು ಕಲಿಯಿರಿ.
ಜೆಸ್ಯುಯಿಟರು—“ಸಕಲ ಮನುಷ್ಯರಿಗೆ ಸಕಲ ವಿಷಯಗಳು”? 18
ಜೆಸ್ಯುಯಿಟರು ಕ್ಯಾಥೊಲಿಕ್ ಚರ್ಚ್‌ನಲ್ಲಿ ಶತಮಾನಗಳಿಂದಲೂ ಒಂದು ಬಲಾಢ್ಯ ಶಕ್ತಿಯಾಗಿರುತ್ತಾರೆ. ಅವರ ಆರಂಭ ಹೇಗಾಯಿತು? ಅವರ ಗುರಿಗಳೇನು? ಚರ್ಚ್‌ನಲ್ಲಿ ಅವರ ಪ್ರಸಕ್ತ ಪಾತ್ರವೇನು?