ಜಗತ್ತನ್ನು ಗಮನಿಸುವುದು
ಸಾಂಕ್ರಾಮಿಕ ರೋಗ ಮತ್ತೆ ಕಾಣಿಸಿಕೊಳ್ಳುತ್ತದೆ
“ಸಾಂಕ್ರಾಮಿಕ ರೋಗ ಒಡ್ಡಿರುವ ಅಪಾಯ ಹೋಗಿ ಬಿಟ್ಟಿರುವುದಿಲ್ಲ. ಅದು ಮತ್ತಷ್ಟು ಕೆಡುತ್ತಿದೆ,” ಎನ್ನುತ್ತಾರೆ ಯೇಲ್ ಯೂನಿವರ್ಸಿಟಿಯ ರಾಬರ್ಟ್ ಷೋಪ್, ಅಮೆರಿಕದ ನ್ಯಾಷನಲ್ ಅಕ್ಯಾಡೆಮಿ ಆಫ್ ಸೈಅನ್ಸ್ ಹೊರಡಿಸಿದ ಒಂದು ವರದಿಯ ಕುರಿತು ಮಾತಾಡುತ್ತಾ. “ನಾವು ಸಂಗತಿಗಳನ್ನು ನಿಯಂತ್ರಣಕ್ಕೆ ತರಲು ಶ್ರದ್ಧಾಪೂರ್ವಕವಾದ ಸಿದ್ಧತೆಯನ್ನು ಮಾಡದಿರುವಲ್ಲಿ, ಎಚ್‌ಐವಿ ವ್ಯಾಧಿಗೆ ಯಾ 1914-1918ರ ಇನ್‌ಫ್ಲುಯೆನ್ಸ ವ್ಯಾಧಿಗೆ ಹೋಲಿಕೆಯಾದ ಹೊಸ ಬಿಕ್ಕಟ್ಟುಗಳ ಎದುರಿಗೆ ನಿಲ್ಲಸಾಧ್ಯವಿದೆ.” ನಾಲ್ಕು ರೋಗಗಳು “ಎಷ್ಟೋ ಕ್ಲೇಶ ಮತ್ತು ಮರಣವನ್ನು ಉಂಟುಮಾಡುತ್ತಾ ಅನಿರೀಕ್ಷಿತವಾಗಿ ತೋರಿಬಂದಿವೆ,” ಎಂದು ವರದಿಯನ್ನು ತಯಾರುಗೊಳಿಸಿದ ಸಮಿತಿಯಲ್ಲಿ ಷೋಪ್‌ರೊಂದಿಗೆ ಜೊತೆಅಧ್ಯಕ್ಷರಾಗಿದ್ದ ಜಾಶುವ ಲೆಡರ್‌ಬರ್ಗ್ ಕೂಡಿಸುತ್ತಾರೆ. ಪ್ರತಿಜೀವಕ ಔಷಧ ನಿರೋಧಕ ಕ್ಷಯ ರೋಗ (ಟಿಬಿ), ಏಯ್ಡ್ಸ್, ಲೈಮ್ ರೋಗ, ಮತ್ತು ಒಂದು ಮಾರಕವಾದ ಹೊಸ ರೀತಿಯ ಕಾಕೈ ಬ್ಯಾಕ್ಟೀರಿಯ ರೋಗಗಳೇ ಇವು. ಕಳೆದ ಮೂರು ದಶಕಗಳಲ್ಲಿ ಅನೇಕ ಔಷಧಗಳು ಮತ್ತು ಪ್ರತಿಜೀವಕಗಳನ್ನು ವಿಕಸಿಸಲಾಗಿದೆಯಾದರೂ, ಸೂಕ್ಷ್ಮಜೀವಾಣುಗಳು ಅನೇಕ ವಿಧಗಳಲ್ಲಿ ಅವುಗಳಿಗೆ ನಿರೋಧವನ್ನು ಬೆಳೆಸಿವೆ. ಉದಾಹರಣೆಗೆ, ಬ್ಯಾಕ್ಟೀರಿಯವು ವಂಶವಾಹಿಯು ಸೇರಿರುವ ತಳಿಶಾಸ್ತ್ರೀಯ ವಸ್ತುವನ್ನು ಪ್ರತಿಜೀವಕ ನಿರೋಧಕ್ಕಾಗಿ ವಿನಿಮಯ ಮಾಡಬಲ್ಲದು. ಈ ಪರಿಣಾಮವಾಗಿ, ವಸತಿರಹಿತರಿಗಾಗಿರುವ ಆಸ್ಪತ್ರೆಗಳು, ಡೇಕ್ಯಾರ್ ಕೇಂದ್ರಗಳು ಮತ್ತು ಆಶ್ರಯಗೃಹಗಳು ಔಷಧನಿರೋಧಕ ಸಾಂಕ್ರಾಮಿಕ ರೋಗಗಳಿಗೆ ಉತ್ಪಾದನಾ ಕೇಂದ್ರಗಳಾಗಿ ಪರಿಣಮಿಸಿವೆ. ಮತ್ತು ಅಂತಾರಾಷ್ಟ್ರೀಯ ಪ್ರಯಾಣ ಈ “ಸೂಕ್ಷ್ಮಾಣುಶ್ರೇಷ್ಠರನ್ನು” ಭೌಗೋಲಿಕವಾಗಿ ಹರಡಿಸಿದೆ. ನ್ಯೂ ಯಾರ್ಕಿನ ಆಲ್ಬರ್ಟ್ ಐನ್‌ಸ್ಟೈನ್ ಕಾಲೇಜಿನ ಬ್ಯಾರಿ ಬ್ಲೂಮ್ ಹೇಳುವುದು: “ಸಾಂಕ್ರಾಮಿಕ ರೋಗಗಳ ಸಂಬಂಧದಲ್ಲಿ, ನಾವು ಅತಿ ದೂರದಲ್ಲಿರುವ ಸ್ಥಳವಾಗಲಿ, ಅಸಂಬಂಧಿತರಾಗಿರುವ ವ್ಯಕ್ತಿಗಳಾಗಲಿ ಆಗಿರುವುದಿಲ್ಲ.” (g93 3/22)
ಕೆಳ ಮೆಟ್ಟಲಲ್ಲಿ ಜೀವನ
ಭಾರತದ ಮೂಷರರು ಸಮಾಜದ “ಏಣಿಯ ಕೆಳಮೆಟ್ಟಲಲ್ಲೇ ಸದಾ ನಿಂತಿದ್ದರು,” ಎಂದಿತು ಇಂಡಿಯ ಟುಡೇ ಇತ್ತೀಚೆಗೆ. ಅಸ್ಪಶ್ರ್ಯರೆಂದು ಕರೆಯಲಾಗುವ ಈ ಸಮುದಾಯದವರ ಸಂಖ್ಯೆ ಸುಮಾರು 30 ಲಕ್ಷವಾಗಿದ್ದು, ಇವರು ಹೆಚ್ಚಾಗಿ ಬಿಹಾರ ರಾಜ್ಯದಲ್ಲಿ ಜೀವಿಸುತ್ತಾರೆ. ಅಧಿಕಾಂಶ ಜನರಿಗೆ “ಹೊಟ್ಟೆ ತುಂಬ ಊಟವೆಂದರೆ ಏನೆಂದು ಗೊತ್ತಿಲ್ಲ,” ಒಬ್ಬ 60 ವಯಸ್ಸಿನ ಮೂಷರನಿಗನುಸಾರ. ಮೂಷರ ಮಕ್ಕಳ ಒಂದು ಗುಂಪು ಗ್ರಾಮಾಂತರ ಪ್ರದೇಶದಲ್ಲಿ ಆಹಾರಕ್ಕಾಗಿ ಹುಡುಕುತ್ತಾ, ಇಲಿಗಳ ಒಂದು ದಂಡನ್ನೇ ಅವುಗಳ ಬಿಲದಿಂದ ಹೊಗೆ ಹಿಡಿಸಿ ಹೊರಬರಿಸಿ, ಅವುಗಳನ್ನು ಹೊಡೆದು, ಸುಟ್ಟು ತಿನ್ನುವುದನ್ನು ಇಂಡಿಯ ಟುಡೇ ವಿಶದವಾಗಿ ವರ್ಣಿಸುತ್ತದೆ. ಸ್ಥಳಿಕ ಭಾಷೆಯಲ್ಲಿ “ಮೂಷರ್” ಅಂದರೆ ಇಲಿ ಹಿಡಿಯುವವ ಎಂದು ಪತ್ರಿಕೆ ವಿವರಿಸುತ್ತದೆ.
ಹದಿಹರೆಯದ ಸೈತಾನತ್ವ
ದಕ್ಷಿಣ ಆಫ್ರಿಕದ ಜೊಹಾನೆಸ್‌ಬರ್ಗಿನ ಶಾಲೆಗಳಲ್ಲಿ ಸೈತಾನತ್ವ ಬೇರೂರುತ್ತಿದೆ. ದ ಸ್ಟಾರ್ ವಾರ್ತಾಪತ್ರಕ್ಕನುಸಾರ, ತಾನು ಸೈತಾನತ್ವದಿಂದ ಬಾಧಿತರಾದ ಅನೇಕ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನಡೆಸಿದ್ದಾಗಿ ಒಬ್ಬ ಮನಶ್ಶಾಸ್ತ್ರಜ್ಞೆ ಹೇಳುತ್ತಾರೆ. ಉಪನಗರದ ಮಾಟಗಾರ್ತಿಯರು ಮಾದಕೌಷಧ ತೆಗೆದುಕೊಂಡು ರತಿ ಮತ್ತು ಕ್ರೌರ್ಯರತಿಯನ್ನು ಅಭ್ಯಸಿಸಿದ್ದನ್ನು ಅವರ ರೋಗಿಗಳು ಹೇಳಿದರು. “ಈ ಮಕ್ಕಳು” ರೂಢಿಬದ್ಧರಾಗಿರುವುದಕ್ಕೆ ವ್ಯತಿರಿಕ್ತವಾಗಿ “ತೀರಾ ಗೌರವಾರ್ಹರಾಗಿ ಕಂಡುಬಂದರು.” ಸೈತಾನತ್ವದ ಗುಂಪುಗಳು ದೇಶವ್ಯಾಪಕವಾಗಿವೆಯೆಂದು ಪೊಲೀಸರಿಗೆ ತಿಳಿದಿದೆಯೆಂದು ಒಬ್ಬ ಪೊಲೀಸ್ ಅಧಿಕಾರಿ ದ ಸ್ಟಾರ್‌ಗೆ ತಿಳಿಸಿದನು. ಸೈತಾನತ್ವ ಶಾಸನಬಾಹಿರವಲ್ಲದ್ದಿದರೂ ಸೈತಾನಿಕ ಮತಾಚರಣೆಗೆ ಸಂಬಂಧಪಟ್ಟ ಪಾತಕಗಳನ್ನು ಪೊಲೀಸರು ತನಿಖೆ ಮಾಡುತ್ತಾರೆ. ಇತ್ತೀಚೆಗೆ ಅವರು 38 ವಯಸ್ಸಿನ ಒಬ್ಬ ಸ್ತ್ರೀಯ ಕೊಲೆಗಾಗಿ ಒಬ್ಬ ಹದಿಪ್ರಾಯದ ಹುಡುಗಿಯನ್ನೂ ಅವಳ ಹುಡುಗಮಿತ್ರನನ್ನೂ ದಸ್ತಗಿರಿ ಮಾಡಿದರು. ಇವರಿಬ್ಬರೂ ಸೈತಾನತ್ವದಲ್ಲಿ ಒಳಗೊಂಡಿದ್ದರು, ಮತ್ತು ದೆವ್ವ ಪ್ರಭಾವದಿಂದ ತಾವು ಕೊಲೆ ಮಾಡಿದೆವೆಂದು ಅವರು ಪೊಲೀಸರಿಗೆ ಹೇಳಿದರು.
ಹಸಿರು ಮನೆಯ ಚಂಡಮಾರುತಗಳು
ಇತ್ತೀಚಿನ ಕಠಿಣ ಚಂಡಮಾರುತಗಳ ಪ್ರವಾಹವು ಹಸಿರು ಮನೆ ಪರಿಣಾಮ ಅಂದರೆ ಮಾನವ ಮಾಲಿನ್ಯದ ಪರಿಣಾಮವಾಗಿ ವಾತಾವರಣದ ಬೆಚ್ಚಗಾಗುವಿಕೆಗೆ ಸಂಬಂಧಿಸಿರಬಹುದೆಂದು ಅನೇಕ ವಿಜ್ಞಾನಿಗಳು ಚಿಂತಿಸುತ್ತಾರೆ. ನ್ಯೂಸ್‌ವೀಕ್ ಪತ್ರಿಕೆಗನುಸಾರ, ಕೆಲವೇ ಡಿಗ್ರಿ ಹೆಚ್ಚಾಗುವ ಸರಾಸರಿ ಶಾಖವು ಇಂಥ ಬಿರುಗಾಳಿಗಳನ್ನು ತೀಕ್ಷೈಗೊಳಿಸಿ ಅವುಗಳನ್ನು ಹುಟ್ಟಿಸುವ ಸಾಗರದ ಕ್ಷೇತ್ರವನ್ನು ವಿಸ್ತರಿಸುತ್ತದೆ. ಚಂಡಮಾರುತದ ತೀಕ್ಷೈತೆಯ 5 ಪಾಯಿಂಟುಗಳ ಅಳತೆಯಲ್ಲಿ ಐದನ್ನೂ ಆವರಿಸಿದ ಚಂಡಮಾರುತ ಆ್ಯಂಡ್ರುವನ್ನು ಒಂದು ಕಾಲದಲ್ಲಿ ಒಂದು ನೂರು ವರ್ಷಗಳ ಬಿರುಗಾಳಿಯೆಂದು ಕರೆಯಲಾಗುತ್ತಿತ್ತು, ಏಕೆಂದರೆ ಇಂಥ ದುರ್ಘಟನೆಗಳು ಸಾಮಾನ್ಯವಾಗಿ ಅಷ್ಟು ವಿರಳ. ಆದರೆ 1989ರಲ್ಲಿ ಬಂದ ಚಂಡಮಾರುತ ಹ್ಯೂಗೊ 4ನೆಯ ದರ್ಜೆಯದ್ದೂ ಗಿಲ್ಬರ್ಟ್ ಕೂಡ 5ನೆಯ ದರ್ಜೆಯದ್ದೂ ಆಗಿತ್ತು. ಹೀಗೆ ನ್ಯೂಸ್‌ವೀಕ್ ವಿಜ್ಞಾನಿಗಳ ಚಿಂತೆಯನ್ನು ಸಂಕ್ಷಿಪ್ತವಾಗಿ ಹೇಳುತ್ತಾ ಹೀಗಂದಿತು: “ಆ್ಯಂಡ್ರುವನ್ನು ನೋಡಿ; ಹಸಿರು ಮನೆಯ ಜಗತ್ತು ಅದಕ್ಕೆ ಹೋಲಿಕೆಯಾಗಿದ್ದೀತು.” (g93 3/22)
ಧರ್ಮಕಾರ್ಯ ಯಾರಿಗೆ?
ಧರ್ಮಕಾರ್ಯಗಳಿಗಾಗಿ ಪ್ರತಿವರ್ಷ ಸಂಗ್ರಹಿಸಿದ ಎಲ್ಲ ಹಣಕ್ಕೆ ಏನು ಸಂಭವಿಸುತ್ತದೆ? ಅದರಲ್ಲಿ ಹೆಚ್ಚಿನಾಂಶ ಹಣವು ಅದನ್ನು ನಿರ್ವಹಿಸುತ್ತಿರುವವರಿಗೆ ಹೋಗುತ್ತದೆ. ಒಂದು ಸಮೀಕ್ಷೆಗನುಸಾರ, ಅಮೆರಿಕದ 100 ಅತಿ ದೊಡ್ಡ ಧರ್ಮಕಾರ್ಯ ಸಂಸ್ಥೆಗಳಲ್ಲಿ ಮೂರರ ಒಂದಂಶದಲ್ಲಿ, ಮುಖ್ಯ ನಿರ್ವಾಹಕರು 2 ಲಕ್ಷಕ್ಕೂ ಹೆಚ್ಚು ಡಾಲರುಗಳನ್ನು ಸಂಬಳ ಮತ್ತು ಇತರ ಪ್ರಯೋಜನಗಳಿಗಾಗಿ ಪಡೆದರು. ಇದರಲ್ಲಿ ಮೂರು ಕಾರ್ಯನಿರ್ವಾಹಕರು 5 ಲಕ್ಷಕ್ಕೂ ಹೆಚ್ಚು ಡಾಲರುಗಳನ್ನು ಪಡೆದರು. ಆರ್ಥಿಕ ದುರ್ನಿರ್ವಹಣೆ ಮತ್ತು ಅಪರಿಮಿತ ಖರ್ಚಿನ ಆರೋಪದ ಮೇಲೆ ಒಬ್ಬ ಅಧ್ಯಕ್ಷನನ್ನು ಪದಚ್ಯುತಿ ಮಾಡಿದ್ದು ಈ ಸಮೀಕ್ಷೆಯನ್ನು ಆರಂಭಿಸಿತು. ಅವನು ವರ್ಷಕ್ಕೆ 3,90,000 ಡಾಲರು ಸಂಪಾದಿಸುತ್ತಿದ್ದನು. ಅವನ ಉತ್ತರಾಧಿಕಾರಿ “ಕೇವಲ” 1,95,000 ಡಾಲರು ಸಂಪಾದಿಸುತ್ತಾನೆ.
ವಿವಾಹ ವಿಚ್ಛೇದ ನಮ್ಮನ್ನು ಅಗಲಿಸುವ ತನಕ
ಜರ್ಮನಿಯಲ್ಲಿ 1991ರಲ್ಲಿ 1,30,000ಕ್ಕೂ ಹೆಚ್ಚು ವಿವಾಹಗಳು ವಿಚ್ಛೇದದಲ್ಲಿ ಅಂತ್ಯಗೊಂಡವು ಎಂದು ಆಲೆಮ್ಜೀನ್ ಜೈಟಂಗ್ ವಾರ್ತಾಪತ್ರ ವರದಿಮಾಡುತ್ತದೆ. ವಿವಾಹದ ಒಡೆತಗಳು ಎಷ್ಟು ಸಾಮಾನ್ಯವಾಗಿವೆಯೆಂದರೆ ಅನುಕಂಪ ತೋರಿಸುವ ಕಾರ್ಡುಗಳು ವೃದ್ಧಿಯಾಗುತ್ತಾ, “ನಿನ್ನ ವಿವಾಹ ವಿಚ್ಛೇದಕ್ಕೆ ಅಭಿನಂದನೆಗಳು,” ಅಥವಾ “ನಿನ್ನ ಜೀವಿತದ ಅತ್ಯುತ್ತಮ ದಿನಗಳಲ್ಲಿ ಮೊದಲನೆಯದಕ್ಕೆ ಸುಸ್ವಾಗತ,” ಎಂಬ ಧ್ಯೇಯನುಡಿಗಳುಳ್ಳದ್ದಾಗಿವೆ. ಜರ್ಮನಿಯಲ್ಲಿ ವಿವಾಹವಾಗುವವರಲ್ಲಿ ಸುಮಾರು 10 ಪ್ರತಿಶತ ದಂಪತಿಗಳು ವಿವಾಹಕ್ಕೆ ಅತಿ ಮುಂಚಿತವಾಗಿಯೇ ವಿವಾಹ ವಿಚ್ಛೇದಕ್ಕೆ ತಯಾರಿಕೆಗಳನ್ನು ಮಾಡುತ್ತಾರೆ. ವಿಚ್ಛೇದವಾಗುವಲ್ಲಿ ಯಾವ ಜೊತೆ ಏನನ್ನು—ಮನೆ, ಪೀಠೋಪಕರಣ—ಪಡೆಯುವಂತೆ ಕರಾರನ್ನು ಬರೆದಿಡುತ್ತಾರೆ. ಇಷ್ಟು ವಿವಾಹ ವಿಚ್ಛೇದಗಳೇಕೆ? ಆಲೆಮ್ಜೀನ್ ಜೈಟಂಗ್ ಹೇಳುವುದು: “ಉಂಗುರಗಳನ್ನು ಬದಲಾಯಿಸಿದ ಕೆಲವೇ ವರ್ಷಗಳಲ್ಲಿ ತಮ್ಮ ಗಂಡಂದಿರು ತಮ್ಮಲ್ಲಿ ಬಹಳ ಕಡಿಮೆ ಆಸಕ್ತಿಯನ್ನು ತೋರಿಸುತ್ತಾರೆಂದು 80 ಪ್ರತಿಶತ ಸ್ತ್ರೀಯರು ಗೊಣಗುತ್ತಾರೆ. . . . ಐದು ಸಾವಿರ ದಂಪತಿಗಳನ್ನು ಆವರಿಸಿದ ಒಂದು ಅಧ್ಯಯನ ದೃಢಪಡಿಸಿದ್ದೇನೆಂದರೆ, ಮದುವೆಯಾಗಿ ಆರು ವರ್ಷಗಳಾನಂತರ ಅವರು ಸಾಮಾನ್ಯವಾಗಿ ದಿನಕ್ಕೆ ಕೇವಲ ಒಂಬತ್ತು ನಿಮಿಷಗಳು ಮಾತ್ರ ಒಬ್ಬರೊಡನೊಬ್ಬರು ಮಾತಾಡುತ್ತಾರೆ.”
ಶಿಸ್ತಿನ ಕೊರತೆಗಾಗಿ ಹೆತ್ತವರು ತೆರುತ್ತಾರೆ
ಜಪಾನಿನ ಟೋಕ್ಯೋದಲ್ಲಿ ಒಂದು ನ್ಯಾಯಾಲಯವು ಇತ್ತೀಚೆಗೆ, ಒಂದು ಮೋಟರ್‌ಸೈಕಲ್ ತಂಡದ ಮೂರು ಹದಿಹರೆಯದ ಸದಸ್ಯರ ಪಾತಕಗಳಿಗಾಗಿ ಅವರ ಹೆತ್ತವರು ತೆರಲು ಸಹಾಯ ಮಾಡಬೇಕೆಂದು ವಿಧಿಸಿತು. ಈ ಹುಡುಗರು ಒಬ್ಬ ಪುರುಷನು ಅವರ ಮೋಟರ್‌ಸೈಕಲ್‌ಗಳ ಶಬ್ದದ ಕುರಿತು ದೂರುಕೊಟ್ಟಾಗ ಅವನಿಗೆ ಹೊಡೆದು ಅವನ ಹೊಟ್ಟೆಯ ಮೇಲೆ ಪದೇ ಪದೇ ಒದೆ ಕೊಟ್ಟರು. ಆ ಮನುಷ್ಯ ಒಂದು ತಿಂಗಳ ಮೇಲೆ ಸತ್ತನು. “ಈ ಪಾತಕ ಆ ನಾಲ್ಕು ಯುವಕರು ನಡೆಸುತ್ತಿದ್ದ—ಶಾಲೆಗೆ ಹಾಜರಾಗದಿರುವುದು, ಕುಡಿಯುವುದು, ಸೇದುವುದು, ಮತ್ತು ಮೋಟರ್‌ಬೈಕ್‌ಗಳನ್ನು ನಡೆಸುವುದು—ಜೀವನ ರೀತಿಯ ವಿಸ್ತರಣೆಯಾಗಿದೆ,” ಎಂದು ನ್ಯಾಯಾಧೀಶರು ಹೇಳಿದರೆಂದು ಮೈನೀಚಿ ಡೆಯ್ಲಿ ನ್ಯೂಸ್ ವರದಿ ಮಾಡಿತು. “ತಮ್ಮ ಮಕ್ಕಳು ನಡೆಸುತ್ತಿದ್ದ ಜೀವನರೀತಿಯ ಬಗ್ಗೆ ಪೂರ್ಣ ತಿಳಿವಳಿಕೆಯಿದ್ದರೂ, ಈ ತಂಡದ ಸದಸ್ಯರ ಹೆತ್ತವರು ಅವರನ್ನು ಶಿಸ್ತಿಗೊಳಪಡಿಸಲಿಲ್ಲ” ಎಂದು ಅವರು ಹೇಳಿ ಸತ್ತಿದ್ದವನ ಕುಟುಂಬಕ್ಕೆ 3 ಲಕ್ಷ ಯೆನ್‌ಗಳನ್ನು ಪರಿಹಾರ ಧನವಾಗಿ ಕೊಡಬೇಕೆಂದು ವಿಧಿಸಿದರು. (g93 4/8)
ಪಾದ್ರಿಗಳ ವಿವಾಹ ವಿಚ್ಛೇದದ ಪ್ರಮಾಣ ಹೆಚ್ಚುತ್ತದೆ
“ಜರ್ಮನಿಯ ಪ್ರತಿ ಮೂರು ವಿವಾಹಗಳಲ್ಲಿ ಒಂದು ವಿವಾಹ ವಿಚ್ಛೇದದಲ್ಲಿ ಅಂತ್ಯಗೊಳ್ಳುತ್ತದೆ,” ಎಂದು ದ ಜರ್ಮನ್ ಟ್ರಿಬ್ಯೂನ್ ಗಮನಿಸುತ್ತದೆ. ಮತ್ತು ಅನುರೂಪವಾಗಿ, “ಹೆಚ್ಚೆಚ್ಚು ಪ್ರಾಟೆಸ್ಟಂಟ್ ಧರ್ಮೋಪದೇಶಕರ ಮದುವೆಗಳು ಮುರಿದು ಬೀಳುತ್ತವೆ.” ಹೆಸ್ ಮತ್ತು ನಾಸಾದ ಪ್ರಾಟೆಸ್ಟಂಟ್ ಚರ್ಚಿನ ಅಧ್ಯಕ್ಷರ ಪ್ರತಿನಿಧಿ ಹಾನ್ಸ್-ಮಾರ್ಟಿನ್ ಹೈಜಲ್, “ಪುರುಷ ಮತ್ತು ಸ್ತ್ರೀ ಧರ್ಮೋಪದೇಶಕರ ಮಧ್ಯೆ ವಿವಾಹ ವಿಚ್ಛೇದದ ಪ್ರಮಾಣವು ಈಗ ಸಾಮಾನ್ಯ ಜನಸಂಖ್ಯೆಯಷ್ಟೇ ಏರಿದೆ,” ಎಂದು ಒಪ್ಪುತ್ತಾರೆ. ಮದುವೆಯ ಬಂಧವು ಬಿಡಿಸಲಾಗದ್ದಾಗಿರಬೇಕೆಂದು ಚರ್ಚ್ ಕಲಿಸುತ್ತದಾದರೂ, “ವಾಸ್ತವ್ಯವು, ಚರ್ಚ್ ನಾಯಕರ ಮಧ್ಯದಲ್ಲಿ ಸಹ, ತೀರಾ ವಿಭಿನ್ನ. ವೈಯಕ್ತಿಕವಾದ, ಕ್ರಿಸ್ತೀಯ ಸೂಚನೆ ಮತ್ತು ಚರ್ಚಿನ ಬೋಧನೆ, ಪಾಲಕರನ್ನೊಳಗೊಂಡಿರುವ ವಿವಾಹ ವಿಚ್ಛೇದದ ಸಂಬಂಧದಲ್ಲಿ ಒಂದನ್ನೊಂದು ವ್ಯಾಪಕವಾಗಿ ಅಗಲಿದೆ,” ಎನ್ನುತ್ತದೆ ಟ್ರಿಬ್ಯೂನ್. ಕೆಲವೇ ಅಪವಾದಗಳನ್ನು ಬಿಟ್ಟರೆ, “ವಿವಾಹ ವಿಚ್ಛೇದವಾದ ಒಬ್ಬ ಪಾಲಕನು ತನ್ನ ಹಳೆಯ ಸ್ಥಾನದಲ್ಲಿಯಾಗಲಿ, ಬೇರೆ ಕಡೆಯಲ್ಲಿಯಾಗಲಿ ಪಾಲಕನಾಗಿಯೇ ಉಳಿಯಬಲ್ಲನು.”
ಪಶು ವಾದ್ಯಮೇಳ
ಜಪಾನಿನ ಹೈನಿಗ ರೈತರು ದೃಶ್ಯತೆ ಸೀಮಿತವಾಗಿರುವ ಗುಡ್ಡಗಳ ಮೇಲೆ ಚದರಿರುವ ತಮ್ಮ ದನಗಳನ್ನು ಒಟ್ಟುಗೂಡಿಸಲು ಹೆಚ್ಚು ಕಾರ್ಯಸಾಧಕವಾದ ಮತ್ತು ಕಡಮೆ ಸಮಯ ವ್ಯಯವಾಗುವ ಮಾರ್ಗವನ್ನು ಕಂಡುಹಿಡಿಯಲು ನೋಡುತ್ತಿದ್ದರು. ಆದುದರಿಂದ ಸಂಗೀತದ ಮೂಲಕ ದನಗಳನ್ನು ಒಟ್ಟುಗೂಡಿಸಬಹುದೋ ಎಂದು ನೋಡಲು ಅವರು ಒಂದು ಪ್ರಯೋಗವನ್ನು ನಡೆಸಿದರು. ಹದಿಮೂರು ದಿನಗಳ ತನಕ ಅವರು ಹಾರು ನೋ ಒಗಾವ (ವಸಂತ ಕಾಲದಲ್ಲಿನ ತೊರೆ) ಎಂಬ ಜ್ಯಾಪನೀಸ್ ಶ್ರುತಿಯನ್ನು 16 ದನಗಳ ಮುಂದೆ ಒಮ್ಮೆಗೆ ಮೂರು ನಿಮಿಷ, ದಿನಕ್ಕೆ ಎರಡರಿಂದ ನಾಲ್ಕು ಬಾರಿ ಬಾಜಿಸಿದರು. ಇದಾದೊಡನೆ ದನಗಳಿಗೆ ಅವುಗಳಿಗೆ ಇಷ್ಟವಾಗಿರುವ ಆಹಾರವನ್ನು ಕೊಟ್ಟರು. ದನಗಳು ಕರು ಹಾಕಿ ಚಳಿಗಾಲದಲ್ಲಿ ವಿರಾಮ ಮಾಡಿದ ಬಳಿಕ, “ತರಬೇತು ಹೊಂದಿದ್ದ” ಹತ್ತು ದನಗಳನ್ನು ಅವುಗಳ ಒಂಬತ್ತು ಕರುಗಳೊಂದಿಗೆ ಹುಲ್ಲುಗಾವಲಿನಲ್ಲಿ ಬಿಡಲಾಯಿತು. ಪುನಃ ಅದೇ ಶ್ರುತಿಯನ್ನು ಹಾಡಲಾಯಿತು. “ಎರಡು ನಿಮಿಷಗಳಲ್ಲಿ ಇಡೀ ಹಿಂಡು, ತಾವು ಸುಮಾರು ನಾಲ್ಕು ತಿಂಗಳುಗಳಲ್ಲಿ ಕೇಳಿರದ ಸಂಗೀತದಿಂದಾಗಿ ಒಟ್ಟುಗೂಡಿಸಲ್ಪಟ್ಟವು,” ಎಂದು ಆಸಾಹಿ ಈವ್ನಿಂಗ್ ನ್ಯೂಸ್ ವರದಿ ಮಾಡಿತು.
ಸುರಕ್ಷಿತ ವೈದ್ಯಕೀಯ ರಹಸ್ಯ
ಡೇನಿಷ್ ವೈದ್ಯಕೀಯ ಸಂಸ್ಥೆಯ ಅತಿ ಸುರಕ್ಷಿತವಾದ ರಹಸ್ಯಗಳಲ್ಲಿ ಒಂದು, ಸಮಾಲೋಚಕಿಯಾದ ಪ್ರೊಫೆಸರ್ ಮಾರ್ಗರೀಟ ಮಿಕಲ್ಸನ್‌ರಿಂದ ತಿಳಿಸಲ್ಪಟ್ಟಿತು. ವಂಶಪರಂಪರೆಯಾಗಿ ಬರುವ ರೋಗಗಳಿಗಾಗಿ ರೋಗಿಗಳನ್ನು ಪರೀಕ್ಷಿಸುವ ವೈದ್ಯಕೀಯ ಸಿಬ್ಬಂದಿಗಳು ಕ್ರಮವಾಗಿ ಕಂಡುಹಿಡಿಯುವುದೇನಂದರೆ ಮಗುವಿನ ತಂದೆಯೆಂದು ಯಾರನ್ನು ಪರಿಗಣಿಸಲಾಗುತ್ತದೋ ಆ ಪುರುಷನು ವರ್ಣತಂತುವಿನ ಅಸಮಂಜತೆಯ ಕಾರಣ ಆ ಮಗುವಿನ ಜೀವವೈಜ್ಞಾನಿಕ ತಂದೆಯಾಗಿರಸಾಧ್ಯವಿಲ್ಲ. ಸ್ಯೂಟ್‌ಡೈಚ ಟ್ಸಾಯಿಟಂಗ್ ವೃತ್ತಪತ್ರಕೆಗನುಸಾರ, ಡೆನ್ಮಾರ್ಕಿನ ತಂದೆಗಳಲ್ಲಿ 5ರಿಂದ 8 ಪ್ರತಿಶತ ತಂದೆಗಳು ತಮ್ಮ ಮಕ್ಕಳ ಜೀವವೈಜ್ಞಾನಿಕ ತಂದೆಗಳಲ್ಲ. ಅಂದರೆ ಒಂದು ವರ್ಷದಲ್ಲಾಗುವ 60,000 ಜನನಗಳಲ್ಲಿ ಕಡಮೆ ಪಕ್ಷ 3,000 ಜನನಗಳು ದಾಂಪತ್ಯ ದ್ರೋಹದಿಂದಾಗುತ್ತವೆಂದು ಅರ್ಥ. ಆದರೆ ಕುಟುಂಬವು ಒಡೆಯದಂತೆ ಮಾಡುವ ಕಾರಣದಿಂದ ಇದನ್ನು ಪುರುಷರಿಗೆ ಹೇಳಲಾಗುವುದಿಲ್ಲ.
ದೇಹದ ಶಾಖಮಾನದ ಪರಿಷ್ಕರಣ
ಒಂದು ಶತಮಾನಕ್ಕೂ ಹೆಚ್ಚು ಸಮಯದಿಂದ ಮಾನವ ದೇಹದ ಸಾಮಾನ್ಯ ಶಾಖವು 37 ಡಿಗ್ರಿ ಸೆಂಟಿಗ್ರೇಡ್ ಎಂದು ಅಂಗೀಕರಿಸಲಾಗಿತ್ತು. ಇದು 25,000 ವಯಸ್ಕರಲ್ಲಿ ಮಾಡಿದ 10 ಲಕ್ಷಕ್ಕೂ ಹೆಚ್ಚು ದೇಹ ಶಾಖ ಮಾಪನದ ಮೇಲೆ ಆಧಾರಿತವಾದ, ಕಾರ್ಲ್ ವಂಡರ್ಲಿಕ್ ಎಂಬವರು 1868ರಲ್ಲಿ ಪ್ರಕಟಿಸಿದ ಒಂದು ಪ್ರಬಂಧದ ಫಲಿತಾಂಶವಾಗಿತ್ತು. ಇದೊಂದು ದೊಡ್ಡ ಸಾಧನೆಯಾಗಿತ್ತೇನೋ ನಿಜ, ಏಕೆಂದರೆ ಆಗಿನ ಶಾಖಮಾಪಕಗಳಿಗೆ ಶಾಖವನ್ನು ದಾಖಲೆ ಮಾಡಲು 15ರಿಂದ 20 ನಿಮಿಷಗಳು ಬೇಕಾಗುತ್ತಿದ್ದವು ಮತ್ತು ಅವು ಕಂಕುಳಲ್ಲಿರುವಾಗಲೇ ಅವನ್ನು ಓದಬೇಕಾಗುತ್ತಿತ್ತು. ಆದರೂ, ಯೂನಿವರ್ಸಿಟಿ ಆಫ್ ಮೇರಿಲೆಂಡ್ ಸ್ಕೂಲ್ ಆಫ್ ಮೆಡಿಸಿನ್‌ನ ಫಿಲಿಪ್ ಎ. ಮಾಕೊವೀಯೆಕ್ ಹೇಳುವುದೇನಂದರೆ, ತನ್ನ ಅಧ್ಯಯನಗಳು, ಆ 37 ಡಿಗ್ರಿ ಸೆಂಟಿಗ್ರೇಡ್, “ಸರಾಸರಿ ಶಾಖವಾಗಿರಲಿಲ್ಲ, ಅಧ್ಯಯನ ಮಾಡಿದ ಯಾವ ಸಮಯದ ಸರಾಸರಿ ಶಾಖವೂ ಆಗಿರಲಿಲ್ಲ, ಮಧ್ಯಸ್ಥ ಶಾಖವೂ ಆಗಿರಲಿಲ್ಲ, ಯಾ ದಾಖಲೆ ಮಾಡಿದ ಅತಿ ಸಾಧಾರಣವಾದ ಏಕ ಶಾಖವೂ ಆಗಿರಲಿಲ್ಲ”ವಾದ ಕಾರಣ ಆ ಅಂಕಿಯನ್ನು ಬದಲಾಯಿಸಬೇಕು. ವಾಸ್ತವವೇನಂದರೆ, 700 ವಾಚನಗಳಲ್ಲಿ ಅದು 8 ಪ್ರತಿಶತ ಸಂದರ್ಭದಲ್ಲಿ ಮಾತ್ರ ಸರಿಯಾಗಿತ್ತು. ಸರಾಸರಿ ದೇಹದ ಶಾಖಮಾನವು 36.8 ಡಿಗ್ರಿ ಸೆಂಟಿಗ್ರೇಡ್ ಆಗಿರಬೇಕೆಂದು ಅವರನ್ನುತ್ತಾರೆ. (g93 3/22)