ನಮ್ಮ ವಾಚಕರಿಂದ
ಮಗು ಪಾಲನೆ “ನಿಮ್ಮ ಮಕ್ಕಳು—ಅವರಿಗಾಗಿ ಯಾವುದು ಅತ್ಯುತ್ತಮವೊ ಅದನ್ನು ಮಾಡುವುದು” (ಜನವರಿ 8, 1993) ಎಂಬ ಲೇಖನಮಾಲೆಯು, ಹೆತ್ತವಳೋಪಾದಿ ನನ್ನಲ್ಲಿದ್ದ ಕೊರತೆಗಳನ್ನು ಬಯಲು ಪಡಿಸಿತು. ನನ್ನ ಮೂರು ವರ್ಷ ಪ್ರಾಯದ ಮಗನ ಅಲಕ್ಷ್ಯಕ್ಕೆ ನಡೆಸುವಂತೆ—ನನ್ನ ಗಮನವು ವೈಯಕ್ತಿಕ ವಿಷಯಗಳ ಹಾಗೂ ಸಭೆಯ ಚಟುವಟಿಕೆಗಳ ಮೇಲೆ ಕೇಂದ್ರೀಕೃತವಾಗಿತ್ತು. ಅವನು ಅತಿಯಾಗಿ ಚಡಪಡಿಸುವ ಮಗುವಾದನು. ನಾನು ಮುಂಗೋಪಿಯು, ಸಿಡುಕಿನ ಸ್ವಭಾವದವಳು ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುವುದರ ಬಗ್ಗೆ ಸಂಕೋಚ ಪಡುವ ಪ್ರವೃತ್ತಿಯುಳ್ಳವಳೂ ಆಗಿದ್ದೇನೆ. ನನ್ನ ಮಗುವನ್ನು ಅಪ್ಪಿಕೊಳ್ಳುವ ಬದಲು, ಕಟ್ಟುನಿಟ್ಟಾಗಿರುವ ಪ್ರಯತ್ನದಲ್ಲಿ ನಾನು ಮಿತಿ ತಪ್ಪಿದ್ದೇನೆ. ಯೆಹೋವನು ಧಾರಾಳವಾಗಿ ನಮ್ಮೆಲ್ಲರ ಮೇಲೆ ಪ್ರೀತಿಯನ್ನು ಸುರಿಸುವದರಿಂದ, ನಾನೀಗ ಯೆಹೋವನಿಂದ ಪಡೆದ ಸ್ವಾಸ್ತ್ಯದ ಮೇಲೆ ಪ್ರೀತಿಯನ್ನು ಸುರಿಸಲು ಪ್ರಯತ್ನಿಸುವೆನು.
ಟಿ. ಟಿ., ಜಪಾನ್
ನಾನೊಬ್ಬಾಕೆ ಹೆತ್ತವಳಾಗಿರದಿದ್ದರೂ, ಮಕ್ಕಳನ್ನು ಪ್ರೀತಿಸುವವಳಾಗಿದ್ದೇನೆ, ಮತ್ತು ಈ ಸಂಚಿಕೆ ನನ್ನ ಹೃದಯವನ್ನು ಸ್ಪರ್ಶಿಸಿತು. ಇಂದು ಮಕ್ಕಳು ಎದುರಿಸುವ ದುಃಖಕರ ಸಮಸ್ಯೆಗಳ ಬಗ್ಗೆ ತಿಳಿಯಲು ನಾನು ದುಃಖಿಸಿದೆ. ನಿಮ್ಮ ಲೇಖನವು, ಜೀವನದ ಅನಂತರದ ವರ್ಷಗಳಲ್ಲಿ ಭಯ ಹುಟ್ಟಿಸುವ ಸಮಸ್ಯೆಗಳನ್ನು ತಪ್ಪಿಸಲಿಕ್ಕಾಗಿ, ಅದರ ಅತಿ ಮೊದಲ ಹಂತಗಳಲ್ಲಿ ಈ ಸಮಸ್ಯೆಗಳೊಂದಿಗೆ ಹೇಗೆ ವ್ಯವಹರಿಸಬೇಕೆಂದು ತೋರಿಸುವುದರಲ್ಲಿ ಬಹಳ ಬೋಧಪ್ರದವಾಗಿತ್ತು.
ಎಲ್. ಬಿ., ಯುನೊಯಿಟೆಡ್ ಸ್ಟೇಟ್ಸ್
ಆ ಲೇಖನಗಳು ನಾನು ಒಬ್ಬ ತಂದೆಯೋಪಾದಿ ನನ್ನನ್ನೇ ಪರೀಕ್ಷಿಸುವಂತೆ ಮಾಡಿದವು. ನಾನು ಮದುವೆಯಾದಾಗ, ತುಂಬಾ ಎಳೆಯವನಾಗಿದ್ದೆ ಮತ್ತು ನನ್ನ ಕುಟುಂಬದವರೊಡನೆ ಇರುವದಕ್ಕಿಂತ ನನ್ನ ಸ್ನೇಹಿತರೊಡನೆ ಇರಲು ಹೆಚ್ಚು ಆಸಕ್ತಿಯುಳ್ಳವನಾಗಿದ್ದೆ. ನಾನು ನನ್ನ ಮಗಳಿಗೆ ಬೇಕಾದಷ್ಟು ಸಮಯವನ್ನು ಕೊಡಲಿಲ್ಲವೆಂದು ಲೇಖನಗಳ ಓದುವಿಕೆ ನಾನು ಗ್ರಹಿಸುವಂತೆ ಮಾಡಿತು. ಈ ಲೇಖನಗಳು, ಹೆತ್ತವರು ತಮ್ಮ ಮಕ್ಕಳಿಗೆ ಅತ್ಯುತ್ತಮವಾದದ್ದನ್ನು ಮಾಡುವಂತೆ ನಡೆಸಲಿ.
ಎ. ವಿ., ಇಟಲಿ
ಪ್ರಾಣಿಯ ಕಥೆಗಳು “ಕ್ಯಾಪಿಬಾರ—ಸೃಷ್ಟಿಕ್ರಿಯೆಯ ದೋಷವೊ, ಬೆರಗೊ?” (ಜನವರಿ 8, 1993) ಲೇಖನಕ್ಕಾಗಿ ನಿಮಗೆ ಉಪಕಾರ. ನಾನು ಅನೇಕ ಬಾರಿ ನನ್ನ ಮಗುವಿಗೆ ಪ್ರಾಣಿಗಳ ಬಗ್ಗೆ ಲೇಖನಗಳನ್ನು ಓದುತ್ತೇನೆ. ಆದರೆ ಶ್ರೀ. ಕ್ಯಾಪಿಬಾರ ತಾನೇ ಮಾತನಾಡುವದರಿಂದ, ಲೇಖನವು ನನ್ನ ಮಗುವನ್ನು ಹರ್ಷಗೊಳಿಸಿತು!
ಸಿ. ಟಿ., ಜಪಾನ್
ಅನೇಕ ಪತ್ರಿಕೆಗಳಿಂದ ಬಡಿಸಲಾಗುವ ಗುಂಜು ಆಹಾರಕ್ಕೆ ಒಂದು ಉಲ್ಲಾಸಕರ ಅನ್ಯಮಾರ್ಗ! ನನ್ನ ಮಕ್ಕಳು ಮತ್ತು ನಾನು ಅದನ್ನು ಸೇರಿ ಓದುತ್ತೇವೆ. ಹೊಸ ಮತ್ತು ಬಗೆಬಗೆಯ ಪ್ರಾಣಿಗಳ ಬಗ್ಗೆ ಕಲಿಯುವುದು ವಿನೋದವಾಗಿದೆ.
ಸಿ. ಎಚ್., ಯುನೊಯಿಟೆಡ್ ಸ್ಟೇಟ್ಸ್
ಕಣ್ಣೀರು ಅನೇಕ ವರ್ಷಗಳ ಕಾಲ ನಮ್ಮ ಸಭೆಯಲ್ಲಿ ಹಿರಿಯನಾಗಿ ಸೇವೆ ಸಲ್ಲಿಸಿದ ಒಬ್ಬ ನಂಬಿಗಸ್ತ ಕ್ರೈಸ್ತನ ಶವಸಂಸ್ಕಾರಕ್ಕೆ ನಾನು ಇತ್ತೀಚೆಗೆ ಹಾಜರಾದೆ. ಶವಸಂಪುಟವನ್ನು ಸಭಾಂಗಣದ ಹೊರಗೆ ದೂಡುತ್ತಾ ಸಾಗಿಸಿದಾಗ, ನಾನು ಬಹಳವಾಗಿ ಅತ್ತೆ. ಉಪಸ್ಥಿತರಾದವರಲ್ಲಿ ಹೆಚ್ಚಿನವರಾದರೋ ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟರು. ಕೇವಲ ಒಂದು ದಿನದ ಅನಂತರ, “ಇಷ್ಟೆಲ್ಲ ಕಣ್ಣೀರು ಏಕೆ?” ಎಂಬ ಲೇಖನದೊಂದಿಗೆ ಜನವರಿ 8, 1993ರ ಎಚ್ಚರ!ದ ಸಂಚಿಕೆಯನ್ನು ನಾನು ಪಡೆದೆ. ಕಣ್ಣೀರು ಬಲಹೀನತೆಯ ಸೂಚನೆಯಲ್ಲ, ಆದರೆ ತೀಕ್ಷೈವಾದ ಭಾವನೆಗಳ ಅಭಿವ್ಯಕ್ತಿಯಾಗಿದೆ ಎಂದು ನಾನು ತಿಳಿದುಕೊಳ್ಳಲು ಅದು ನನಗೆ ಸಹಾಯ ನೀಡಿತು. ಬೋಧಪ್ರದ ಲೇಖನಕ್ಕಾಗಿ ಅನೇಕ ಉಪಕಾರಗಳು.
ಎಸ್. ಜೆಡ್., ಜರ್ಮನಿ
ಪ್ರಾರ್ಥನೆ “ಯುವ ಜನರು ಪ್ರಶ್ನಿಸುವುದು . . . ದೇವರು ನನ್ನ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೊ?” (ಜನವರಿ 8, 1993) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ, ಲೇಖನವು ಬಹಳ ಸಹಾಯಕವಾಗಿತ್ತು ಎಂದು ನಾನು ಕಂಡೆ. ನನ್ನ ಪ್ರಾರ್ಥನೆಗಳು ಪ್ರಾಪಂಚಿಕ ಅಪೇಕ್ಷೆಗಳಿಗಾಗಿ ತಿರುಳಿಲ್ಲದ ವಿನಂತಿಗಳಿಂದ ಕೂಡಿರಬಾರದೆಂದು ಅದು ನನಗೆ ಕಲಿಸಿತು. ಯೆಹೋವನು ಯಾವಾಗಲೂ ಉತ್ತರಿಸುವದಿಲ್ಲವಾದುದರಿಂದ ಪ್ರಾರ್ಥನೆಯಲ್ಲಿ ಬಿಡದೆ ಮುಂದರಿಯುವ ಅಗತ್ಯವನ್ನು ಕೂಡ ನಾನು ಕಲಿತೆ. ಮತ್ತು ನಾವು ಇಷ್ಟಪಡುವ ಉತ್ತರವನ್ನು ಆತನು ನಮಗೆ ಕೊಡದೆ ಇರಬಹುದು.
ಬಿ. ಜಿ., ಅಮೆರಿಕ