ಯುವ ಜನರು ಪ್ರಶ್ಶಿಸುವುದು . . .
ನಾನು ನನ್ನ ಅಂಗವಿಕಲತೆಯೊಂದಿಗೆ ಹೇಗೆ ನಿಭಾಯಿಸಬಲ್ಲೆನು?
“ಅವಳು ಇನ್ನೂ ನಡೆಯಬಲ್ಲಳು,” ಎಂದು ಮ್ಯಾಗಿ ಎಂದು ನಾವು ಕರೆಯಬಹುದಾದ ಒಬ್ಬ ಯುವತಿಯ ತಾಯಿಯು ಹೇಳುತ್ತಾಳೆ. “ಆದರೆ ಅವಳ ದೇಹದ ಕೆಲವೊಂದು ಭಾಗಗಳು ಒಟ್ಟಾಗಿ ಕೆಲಸಮಾಡುವಂತೆ ಮಾಡಲು ಅವಳು ಅಸಮರ್ಥಳಾಗಿದ್ದಾಳೆ, ಮತ್ತು ಅವಳ ಮಾತಿನ ಉಚ್ಚಾರವು ಅಸ್ಪಷ್ಟವಾಗಿಗಿದೆ.” ಮ್ಯಾಗಿಗೆ ಬಹ್ವಂಶ ಜಡ್ಡುರೋಗವಿತ್ತು ಮತ್ತು ಲೋಕದಾದ್ಯಂತ ಒಂದು ಶಾರೀರಿಕ ದುರ್ಬಲತೆಯನ್ನು ಅನುಭವಿಸುತ್ತಿರುವ ಲಕ್ಷಾಂತರ ಯುವಜನರಲ್ಲಿ ಅವಳು ಒಬ್ಬಳಾಗಿದ್ದಾಳೆ.
ಪ್ರಾಯಶಃ ನೀವೂ ಅವರಲ್ಲಿ ಒಬ್ಬರಾಗಿದ್ದೀರಿ. ಮತ್ತು ನೀವೊಂದು ಅಂಗವಿಕಲತೆಯೊಂದಿಗೆ ಜನಿಸಿರಬಹುದು ಅಥವಾ ಅಪಘಾತ ಯಾ ಅನಾರೋಗ್ಯದ ಪರಿಣಾಮವಾಗಿ ಅದನ್ನು ನೀವು ಹೊಂದಿರಬಹುದು,a ಇನ್ನು ಮುಂದೆ ನೀವು ಒಂದು ಸಂತೋಷಕರ, ಚಟುವಟಿಕೆಯುಳ್ಳ ಜೀವಿತವನ್ನು ಆನಂದಿಸಲಾರಿರೆಂದು ತೀರ್ಮಾನಿಸುವ ಅಗತ್ಯವಿಲ್ಲ. ನಿಮ್ಮ ತಾಳ್ಮೆಯ ಪ್ರಯತ್ನದಿಂದ, ನಿಮ್ಮ ಪರಿಸ್ಥಿತಿಯೊಂದಿಗೆ ಪರಿಣಾಮಕಾರಿಯಾಗಿ ನಿಭಾಯಿಸಲು ನೀವು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳಬಲ್ಲಿರಿ.
ಅಪೇಕ್ಷಣೀಯ ಆಲೋಚನೆಯ ಪಾಶ
ನಿಸ್ಸಂದೇಹವಾಗಿ, ಅಹಿತಕರ ನೈಜ್ಯತೆಯನ್ನು ಅಂಗೀಕರಿಸಲು ಬಯಸದೇ, ದುರ್ಬಲತೆಯು ಸರಳವಾಗಿ ಹೊರಟುಹೋಗುತ್ತದೆಂದು ಆಶೆಯಿಂದ ನಿರೀಕ್ಷಿಸುವುದು ಮಾನವನ ಸಹಜ ಗುಣವಾಗಿದೆ. ಆತನ ದೃಷ್ಟಿಶಕ್ತಿಯನ್ನು ಬಾಧಿಸಿದ ಅನಾರೋಗ್ಯವೊಂದರಿಂದ ಅಪೊಸ್ತಲ ಪೌಲನು ಸ್ಪಷ್ಟವಾಗಿಗಿಯೇ ಕಷ್ಟಾನುಭವಿಸಿದನು. (ಹೋಲಿಸಿ ಗಲಾತ್ಯ 6:11.) ಗಲಾತ್ಯದ ಕ್ರೈಸ್ತರಿಗೆ ತನ್ನ ಪ್ರಥಮ ಸಂದರ್ಶನದ ಕುರಿತು ನಿರ್ದೇಶಿಸುತ್ತಾ ಪೌಲನಂದದ್ದು: “ನನ್ನ ಶರೀರಕ್ಕೆ ಅಸೌಖ್ಯವಿದದ್ದರಿಂದ ನಾನು ನಿಮ್ಮಲ್ಲಿದ್ದು ಮೊದಲನೆಯ ಸರ್ತಿ ನಿಮಗೆ ಸುವಾರ್ತೆ ಸಾರಿದ್ದನ್ನು ನೀವು ಬಲ್ಲಿರಿ. ನನ್ನ ಶರೀರದಲ್ಲಿ ನಿಮ್ಮ ಬೇಸರಿಕೆಗೆ ಆಸ್ಪದವಾದದ್ದನ್ನು ನೀವು ಹೀನೈಸಲಿಲ್ಲ, ಓಕರಿಸಲಿಲ್ಲ.” (ಗಲಾತ್ಯ 4:13, 14) ಪೌಲನ ಸಹಿಸಲಾರದ ಕ್ಲೇಶವು, ಆತನ ಕಣ್ಣುಗಳು ಕೀವನ್ನು ಸ್ರವಿಸಲು ಅಥವಾ ಕೆಲವೊಂದು ವಿಧದಲ್ಲಿ ಆತನ ಗೋಚರಿಸುವಿಕೆಯನ್ನು ಅಸಹ್ಯಕರವಾದದ್ದಾಗಿ ಮಾಡಲು ಕಾರಣವಾಗಿರಬಹುದೆಂದು ಕೆಲವು ವಿದ್ವಾಂಸರು ಭಾವಿಸುತ್ತಾರೆ. ಆದುದರಿಂದ, ಪೌಲನು ಅನಾರೋಗ್ಯವು ಬಿಟ್ಟುಹೋಗುವಂತೆ “ಮೂರು ಸಾರಿ ಕರ್ತನನ್ನು ಬೇಡಿಕೊಂಡ”ದರ್ದಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ ಅದು ಹಾಗಾಗಲಿಲ್ಲ. (2 ಕೊರಿಂಥ 12:8, 9) ಆತನ ಅಸಾಮರ್ಥ್ಯತೆಯಿದ್ದಾಗ್ಯೂ, ಒಬ್ಬ ಮಿಷನೆರಿ, ವಿದ್ವಾಂಸ, ಮತ್ತು ಬರಹಗಾರನೋಪಾದಿ ಆತನು ಪ್ರಮುಖ ಜೀವನೋದ್ಯೋಗದಲ್ಲಿ ಆನಂದಿಸಿದನು.
ನಿಮ್ಮ ದುರ್ಬಲತೆಯ ಕುರಿತ ಶಾಶ್ವತತೆಯನ್ನು ನೀವೂ ಕೂಡ ಅಂಗೀಕರಿಸಬೇಕಾಗಿ ಬರಬಹುದು. ಲಿವಿಂಗ್ ವಿತ್ ದ ಡಿಸ್ಏಬ್ಲ್ಡ್ ಪುಸ್ತಕದಲ್ಲಿ ಲೇಖಕ ಜ್ಯಾನ್ ಕೂಮ್ಸ್ ಬರೆದದ್ದು: “ರೋಗಿಯು ತನ್ನ ಅಂಗವಿಕಲತೆಯೊಂದಿಗೆ ಹೊಂದಿಕೊಳ್ಳಲು ಆತನು ಪ್ರಥಮವಾಗಿ ತಾನು ಅಂಗವಿಕಲನೆಂದು ಒಪ್ಪಿಕೊಳ್ಳಬೇಕಾಗಿದೆ. ಆತನ ಪರಿಮಿತಿಯು ಆತನನ್ನು ನಿರ್ಬಂಧ ಮತ್ತು ಅನನುಕೂಲಕ್ಕೊಳಪಡಿಸಬಹುದು ಆದರೆ ಒಬ್ಬ ವ್ಯಕ್ತಿಯೋಪಾದಿ ಆತನನ್ನು ಅಪಮೌಲ್ಯೀಕರಿಸುವುದಿಲ್ಲವೆಂದು ಆತನು ಕಲಿಯಬೇಕು.” ರೋಗ ನಿವಾರಣೆಗೆ ಒಂದು ನ್ಯಾಯಸಮ್ಮತ ನಿರೀಕ್ಷೆ ಇಲ್ಲದಿರುವುದಾದರೆ, ನಿಮ್ಮ ಸ್ಥಿತಿಯ ಕುರಿತ ನೈಜ್ಯತೆಯನ್ನು ಅಲ್ಲಗಳೆಯುವುದು ಸ್ವನಿಂದೆ, ಕ್ಲೇಶ, ಮತ್ತು ಆಶಾಭಂಗದ ಒಂದು ಜಟಿಲ ಪರಿಸ್ಥಿತಿಯಲ್ಲಿ ನಿಮ್ಮನ್ನು ಸಿಕ್ಕಿಸಿ ಮುಂದುವರಿಯಲಾಗದಂತೆ ಮಾಡುತ್ತದೆ. ಇನ್ನೊಂದು ಕಡೆಯಲ್ಲಿ, “ವಿನಯಶೀಲರಲ್ಲಿ ವಿವೇಕವು ಇರುತ್ತದೆ.” ಎಂದು ಬೈಬಲು ಜ್ಞಾನೋಕ್ತಿ 11:2ರಲ್ಲಿ (NW) ಹೇಳುತ್ತದೆ, ಮತ್ತು ಒಬ್ಬ ವಿನಯಶೀಲ ವ್ಯಕ್ತಿಯು ಆತನ ಪರಿಮಿತಿಗಳನ್ನು ತಿಳಿದುಕೊಳ್ಳುತ್ತಾನೆ ಮತ್ತು ಅಂಗೀಕರಿಸುತ್ತಾನೆ. ಒಂದು ನೀರಸ, ಆನಂದರಹಿತ ಅಸ್ತಿತ್ವಕ್ಕಾಗಿ ತೃಪ್ತಿಪಟ್ಟುಕೊಳ್ಳುವುದು ಅಥವಾ ವಿರಕ್ತನಾಗಿ ಪರಿವರ್ತಿತನಾಗಬೇಕೆಂದು ಇದು ಅರ್ಥೈಸುವುದಿಲ್ಲ. ಬದಲಾಗಿ, ವಿನಯಶೀಲತೆಯು ಪ್ರಾಮಾಣಿಕತೆಯಿಂದ ನಿಮ್ಮ ಪರಿಸ್ಥಿತಿಯನ್ನು ನಿರ್ಣಯಿಸುತ್ತದೆ ಮತ್ತು ಕಾರ್ಯಸಾಧಕ ಗುರಿಗಳನ್ನಿಡುವುದನ್ನು ಆವಶ್ಯಪಡಿಸುತ್ತದೆ.
ಜ್ಞಾನದೊಂದಿಗೆ ವ್ಯವಹರಿಸಿರಿ
ನಿಮ್ಮ ಅಂಗವಿಕಲತೆಯ ಸ್ವರೂಪದ ಕುರಿತಾದ ನಿಷ್ಕೃಷ್ಟ ಜ್ಞಾನವೂ ಕೂಡ ನಿಮಗೆ ಅಗತ್ಯವಿದೆ. “ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನುತಿಳುವಳಿಕೆಯಿಂದ ನಡಿಸುವನು,” ಎಂದು ಜ್ಞಾನೋಕ್ತಿ 13:16 ಹೇಳುತ್ತದೆ. (ಹೋಲಿಸಿ ಜ್ಞಾನೋಕ್ತಿ 10:14.) ಕೆಲವು ವೈದ್ಯಕೀಯ ಸಾಹಿತ್ಯಗಳನ್ನು ಓದುವುದು ಅಥವಾ ನಿಮ್ಮ ವೈದ್ಯರೊಂದಿಗೆ ಮತ್ತು ನಿಮಗೆ ಚಿಕಿತ್ಸೆ ನೀಡುವ ಇತರ ಆರೋಗ್ಯ ಪಾಂಡಿತ್ಯವಿದ್ದವರಿಗೆ ನಿರ್ದಿಷ್ಟವಾದ ಪ್ರಶ್ನೆಗಳನ್ನು ಕೇಳುವುದು ಇದರ ಅರ್ಥವಾಗಿರಬಹುದು. ಈ ಸಂಬಂಧದಲ್ಲಿ ನಿಮ್ಮನ್ನು ಸ್ವತಃ ತರಬೇತುಗೊಳಿಸುವುದು ನಿಮ್ಮ ಕಾರ್ಯಸಾಮರ್ಥ್ಯತೆಗೆ ತಲಪದಂತೆ ತಡೆಗಟ್ಟುವ ಯಾವುದೇ ತಪ್ಪುಕಲ್ಪನೆಗಳಿಂದ ನಿಮಗೆ ಪರಿಹಾರ ನೀಡಬಲ್ಲದು.
ನಿಮ್ಮ ಪರಿಸ್ಥಿತಿಯನ್ನು ಉತ್ತಮಗೊಳಿಸ ಸಾಧ್ಯವಿರುವ ವೈದ್ಯಕೀಯ ಪ್ರಗತಿ ಮತ್ತು ಚಿಕಿತ್ಸೆಗಳಿಗೆ ಹಿಂದುಬೀಳದೆ ಸರಿಯಾಗಿ ಮುಂದುವರಿಯುವುದು ಕೂಡ ಸಹಾಯಕಾರಿಯಾಗಬಹುದು. ಉದಾಹರಣೆಗೆ, ಹೊಸ, ಕಡಿಮೆ ತೂಕದ ಸಾಮಾಗ್ರಿಗಳನ್ನು ಉಪಯೋಗಿಸಿ ವಿಕಸಿಸಲ್ಪಟ್ಟಿರುವ ಕೃತಕ ಕೈಕಾಲುಗಳು (ನ್ಯೂನತಾ ಪೂರಣ ಚಿಕಿತ್ಸೆ) ಅಧಿಕ ತೃಪ್ತಿದಾಯಕ ಮತ್ತು ಚಲನೆಗೆ ಹೊಂದಿಕೊಳ್ಳುವಂತೆ ಆಸ್ಪದ ನೀಡಿವೆ. ನಿಶ್ಚಯವಾಗಿ, ಟೈಮ್ ಪತ್ರಿಕೆಯು ಅಂಗವಿಕಲತೆಗಳನ್ನು ಹೊಂದಿರುವವರಿಗೆ ವ್ಯಕ್ತಿಪರವಾಗಿ ಸಹಾಯಕಾರಿಯಾಗಿರುವ ಸಾಧನಗಳ ಕುರಿತು “ಸ್ಫೋಟನ”ವನ್ನು ವರದಿಮಾಡುತ್ತದೆ. ಬಹುಶಃ ಸ್ಥಳಿಕವಾಗಿ ಅಂತಹ ಉತ್ಪನ್ನಗಳು ಲಭ್ಯವಿದ್ದು, ಅವು ನಿಮ್ಮ ಕುಟುಂಬದ ಆಯವ್ಯಯದೊಳಗೆ ದೊರಕಬಹುದು.
ಶ್ರವಣ ಸಾಧನ, ಕೈಕೋಲುಗಳು, ಊರೆಗೋಲುಗಳು, ಮತ್ತು ಭದ್ರಪಡಿಸುವ ಪಟ್ಟಿಗಳಂತಹ ಹೆಚ್ಚಿನ ಕೃತಕ ಸಾಧನಗಳು ಸಹ ಅಂತೆಯೇ ಸಹಾಯಕಾರಿಯಾಗಿರಬಹುದು. ಈಗ, ಕೆಲವು ಯುವಜನರು ಅಂಥ ಸಾಧನಗಳನ್ನು ಉಪಯೋಗಿಸಲು ಹೆಚ್ಚು ಸ್ವಪ್ರತಿಷ್ಠೆ ಮತ್ತು ಮುಜುಗರದ ಭಾವನೆಯುಳ್ಳವರಾಗಿರಬಹುದು. ಆದರೆ ಅರಸನಾದ ಸೊಲೊಮೋನನು ವಿವೇಕದಿಂದ ಗಮನಿಸಿದ್ದು: “ನಿಮ್ಮ ಕೊಡಲಿಯು ಮೊಂಡಾಗಿರುವುದಾದರೆ ಮತ್ತು ನೀವು ಅದನ್ನು ಹರಿತಗೊಳಿಸದಿದ್ದರೆ, ಅದನ್ನು ಉಪಯೋಗಿಸಲು ಹೆಚ್ಚು ಪ್ರಯಾಸ ಪಡಬೇಕಾದೀತು.” (ಪ್ರಸಂಗಿ 10:10; ಟುಡೇಸ್ ಇಂಗ್ಲಿಷ್ ವರ್ಷನ್) ನಿಮಗೆ ಸಹಾಯಮಾಡ ಸಾಧ್ಯವಿರುವ ಉಪಕರಣಗಳ ಸದುಪಯೋಗಮಾಡಲು ನೀವು ತಪ್ಪುವುದಾದರೆ—ಅಥವಾ ಆನಂದಕರವಾದ ಚಟುವಟಿಕೆಗಳಿಂದ ನಿಮ್ಮನ್ನು ಹಿಂದೆಗೆದುಕೊಳ್ಳುವುದಾದರೆ—ನೀವು ಹಾಗೆಯೇ ಸ್ವತಃ ಬಳಲಿಸಿಕೊಳ್ಳುವಿರಿ. ದುರಭಿಮಾನವು ನಿಮ್ಮ ಜೀವಿತವನ್ನು ಅಗತ್ಯವಿರುವುದಕ್ಕಿಂತಲೂ ಹೆಚ್ಚು ಕಷ್ಟಕರವಾದದ್ದನ್ನಾಗಿ ಮಾಡಲು ನೀವು ಯಾಕೆ ಬಿಡುತ್ತೀರಿ? “ಕಾರ್ಯಸಿದ್ಧಿಗೆ ವಿವೇಕದ ಬಳಸುವಿಕೆ ಅನುಕೂಲಕರವಾದದ್ದಾಗಿದೆ, [ಪ್ರಸಂಗಿ 10:10; NW]” ಎಂದು ಹೇಳುತ್ತಾ ಸೊಲೊಮೋನನು ಮುಕ್ತಾಯಗೊಳಿಸಿದನು.
ಹೌದು, ನಡೆಯಲು, ನೋಡಲು, ಅಥವಾ ಉತ್ತಮವಾಗಿ ಆಲಿಸಲು ನಿಮಗೆ ಸಹಾಯಮಾಡುವ ಏನನ್ನಾದರೂ ಉಪಯೋಗಿಸುವುದು ಅದು ನಿಮ್ಮ ಪ್ರಯೋಜನಕ್ಕಾಗಿದೆ. ನಿಜ, ಊರೆಗೋಲುಗಳನ್ನು, ಕೃತಕ ಕೈಕಾಲುಗಳನ್ನು, ಅಥವಾ ಶ್ರವಣ ಸಾಧನವನ್ನು ಉಪಯೋಗಿಸುವಲ್ಲಿ ನಿಪುಣರಾಗಲು ಅದು ಗಮನಾರ್ಹವಾದ ಅಭ್ಯಾಸವನ್ನು ಮತ್ತು ತಾಳ್ಮೆಯನ್ನು ಕೇಳಿಕೊಳ್ಳಬಹುದು. ಮತ್ತು ಈ ಉಪಕರಣಗಳು ನಿಮ್ಮ ತೋರಿಕೆಯನ್ನು ಅಗತ್ಯವಾಗಿ ವರ್ಧಿಸಲು ಹೆಚ್ಚನ್ನು ಮಾಡದಿರಬಹುದು. ಆದರೆ ಅವು ನಿಮಗೆ ನೀಡಸಾಧ್ಯವಿರುವ ಸ್ವಾತಂತ್ರ್ಯ ಮತ್ತು ಅವು ತೆರೆದಿಡಬಹುದಾದ ಸುಯೋಗಗಳ ಕುರಿತು ಆಲೋಚಿಸಿರಿ! ಜೇ ಎಂಬ ಹೆಸರಿನ ಆಫ್ರಿಕದ ಅಂಗವಿಕಲ ಹುಡುಗಿಯೊಬ್ಬಳು ಏಕಾಂತವಾಸಿ ಜೀವಿತವನ್ನು ಜೀವಿಸುತ್ತಿದ್ದಳು, ಅವಳ 18 ವರ್ಷಗಳಲ್ಲಿ ಕೇವಲ ಒಮ್ಮೆ ಅವಳು ವಾಸಿಸುತ್ತಿದ್ದ ಚಿಕ್ಕ ಮನೆಯಾವರಣದಿಂದ ಹೊರಗೆ ಹೋಗುವ ಸಾಹಸವನ್ನು ಮಾಡಿದ್ದಳು. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸ ಮಾಡಿದ ಅನಂತರ, ಅವಳು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಆರಂಭಿಸಿದಳು. ಇದು ಅವಳ ಕೈಗಳಿಂದ ಸ್ವತಃ ಅವಳನ್ನು ಮುಂದಕ್ಕೆ ಜಗ್ಗುತ್ತಾ, ಅವಳ ಹಿಂದಿನಿಂದ ಮುಂಡವನ್ನು ಎಳೆಯುತ್ತಾ ಅನೇಕ ವಠಾರಗಳನ್ನು “ನಡೆದು” ಬರುವುದನ್ನು ಅವಳಿಗೆ ಆವಶ್ಯಪಡಿಸಿತ್ತು. ಜೇಯ ಸ್ಥಿತಿಯ ಕುರಿತು ಯೂರೋಪ್ನ ಸಾಕ್ಷಿಯೊಬ್ಬಳು ತಿಳಿದುಕೊಂಡಾಗ, ಅವಳು ತ್ರಿಚಕ್ರವುಳ್ಳ ಒಂದು ಗಾಲಿಕುರ್ಚಿಯನ್ನು ಅವಳಿಗಾಗಿ ಕಳುಹಿಸಿದಳು. ಇದು ಮುಂಭಾಗದ ಚಕ್ರದ ಮೇಲೆ ಒಂದು ಸೈಕಲ್ ರೀತಿಯ ಸರಪಣಿಯನ್ನು ಹೊಂದಿದ್ದು, ಜೇ ಅವಳ ಕೈಗಳಿಂದ ಕಾರ್ಯನಡೆಸುವಂತೆ ಸಾಧ್ಯಮಾಡುವುದು. ಅವಳೊಂದು ಮೋಹಕ ದೃಶ್ಯವಾಗಿದ್ದಾಳೋ? ಇಲ್ಲವೇ ಅನ್ನಬಹುದು. ಆದರೆ ಇದು ಹೊರ ತೋರಿಕೆಯಲ್ಲಿ ವಕ್ರವಾದ ರೀತಿಯ ವಾಹನ ಸೌಕರ್ಯವಾಗಿದ್ದು ಅವಳು ಕೂಟಗಳಿಗೆ ಹೋಗುವಂತೆ ಮತ್ತು ಮನೆಯಿಂದ ಮನೆಯ ಸಾರುವ ಕೆಲಸದಲ್ಲಿ ಭಾಗವಹಿಸುವಂತೆ ಅವಳಿಗೆ ಸಾಧ್ಯಮಾಡಿದೆ.
ಉತ್ತೇಜನಕ್ಕಾಗಿ ನೀವಾಗಿಯೇ ಪಣಕ್ಕೊಡ್ಡಿಕೊಳ್ಳಿರಿ
ಆದರೂ, ಒಂದು ನಕಾರಾತ್ಮಕ ಮಾನಸಿಕ ಅಭಿಪ್ರಾಯವನ್ನು ಬೆಳೆಸಿಕೊಳ್ಳುವ ಕುರಿತು ಎಚ್ಚರಿಕೆಯಿಂದಿರ್ರಿ. ವಿವೇಕಿ ರಾಜ ಸೊಲೊಮೋನನು ಹೇಳಿದ್ದು: “ಗಾಳಿಯನ್ನು ನೋಡುತ್ತಲೇ ಇರುವವನು ಬೀಜಬಿತ್ತನು; ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರು ಕೊಯ್ಯನು.” (ಪ್ರಸಂಗಿ 11:4) ಭಯ ಮತ್ತು ಅನಿಶ್ಚಿತತೆಯು ನೀವು ಮಾಡಲಪೇಕ್ಷಿಸುವ ಮತ್ತು ಮಾಡಲು ಅಗತ್ಯವಿರುವ ವಿಚಾರಗಳಿಂದ ನಿಮ್ಮನ್ನು ಹಿಂತೆಗೆದುಕೊಳ್ಳುವಂತೆ ನೀವು ಬಿಟ್ಟುಕೊಡುತ್ತೀರೋ? ಮೋಶೆಯನ್ನು ಪರಿಗಣಿಸಿರಿ. ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡಿಸಲಿಕ್ಕಾಗಿ ಆತನನ್ನು ದೇವರು ಆರಿಸಿಕೊಂಡಾಗ, ಮೋಶೆಯು ತಾನು ಮಾತಾಡುವದರಲ್ಲಿ ದುರ್ಬಲನೆಂಬ ಆಧಾರದ ಮೇಲೆ ದೈನ್ಯದಿಂದ ಬೇಡುತ್ತಾ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಬಹುಶಃ ಆತನ ಮಾತಾಡುವ ಶಕ್ತಿಯನ್ನು ಕುಂದಿಸಿದ ಯಾವುದೋ ವಿಕೃತಿಯನ್ನು ಸೂಚಿಸುತ್ತಾ, ಮೋಶೆ ಅಂದದ್ದು: “ನಾನು ಮಾತಾಡುವುದರಲ್ಲಿ ಜಾಣನಲ್ಲ.” (ವಿಮೋಚನಕಾಂಡ 6:12) ಆದರೆ ಮೋಶೆಯು ಸ್ವತಃ ತನ್ನ ಕುರಿತು ಕೀಳಂದಾಜು ಮಾಡಿಕೊಳ್ಳುತ್ತಾನೆ. ಸಕಾಲದಲ್ಲಿ, ಇಡೀ ಇಸ್ರಾಯೇಲ್ ಜನಾಂಗಕ್ಕೆ ಮಾಡಿದ ಉಪನ್ಯಾಸದಿಂದಾಗಿ—ಆತನು ನಿರರ್ಗಳವಾಗಿ ಮಾತಾಡಶಕ್ತನು ಎಂದು ದೃಢಪಡಿಸಿದನು.—ಧರ್ಮೋಪದೇಶಕಾಂಡ 1:1.
ನಿಮ್ಮನ್ನೇ ಕೀಳಂದಾಜು ಮಾಡಿಕೊಳ್ಳುವ ಮೂಲಕ ಇಂತಹದೇ ತಪ್ಪನ್ನು ಮಾಡದಿರ್ರಿ. ಮುನ್ನಗ್ಗಿರಿ ಮತ್ತು ನೀವಾಗಿಯೇ ಪಣಕ್ಕೊಡ್ಡಿಕೊಳ್ಳಿರಿ! ಉದಾಹರಣೆಗೆ, ಯುವ ಬೆಕಿ ಐದು ವರ್ಷ ಪ್ರಾಯದವಳಿರುವಾಗ ಸಂಭವಿಸಿದ ಅಪಘಾತದಲ್ಲಿ ಅವಳಿಗಾದ ಹಾನಿಗಳಿಂದಾಗಿ ಮಾತಾಡಲು ಸ್ಪಲ್ಪ ತೊಡಕನ್ನು ಹೊಂದಿದ್ದಳು. ಆದರೆ ಅವಳ ಹೆತ್ತವರು ಅವಳನ್ನು ಹತಾಶಳಾಗುವಂತೆ ಬಿಡಲಿಲ್ಲ. ಅದಕ್ಕೆ ಪ್ರತಿಯಾಗಿ, ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಅವಳನ್ನು ದಾಖಲಿಸಿದರು. ಏಳರ ಪ್ರಾಯದಲ್ಲಿ, ಬೆಕಿ ಸಭಿಕರ ಮುಂದೆ ಸಂಕ್ಷಿಪ್ತ ಭಾಷಣಗಳನ್ನು ಕೊಡುತ್ತಾ ಇದ್ದಳು. ಬೆಕಿ ಜ್ಞಾಪಕಮಾಡಿಕೊಳ್ಳುವುದು: “ಭಾಷಣಗಳನ್ನು ಕೊಡುವುದು ನನಗೆ ಸಹಾಯಮಾಡಿತು, ಅದು ನಾನು ಮಾತಿನ ಮೇಲೆ ಹೆಚ್ಚು ಕೆಲಸಮಾಡುವಂತೆ ಪ್ರೇರಿಸಿತು.” ಬೆಕಿ ಮನೆಯಿಂದ ಮನೆಯ ಸಾರುವ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವಂತೆ ಸಹ ಉತ್ತೇಜಿಸಲ್ಪಟ್ಟಳು. “ಜನರು ನಿಜವಾಗಿಯೂ ನಾನು ಮಾತಾಡುವುದನ್ನು ಕೇಳಲು ತಿರಸ್ಕರಿಸುತ್ತಾರೆಂದು ಕೆಲವೊಮ್ಮೆ ಯೋಚಿಸುತ್ತೇನೆ; ಅವರು ಏನೆಂದು ಎಣಿಸುತ್ತಾರೋ ಎಂಬುದರ ಕುರಿತು ನಾನು ಕಳವಳಪಡುತ್ತೇನೆ. ಆದರೆ ಅನಂತರ ನಾನು ಸ್ವತಃ ಹೇಳಿಕೊಳ್ಳುವುದು, ‘ನಾನು ಇದನ್ನು ಯೆಹೋವನಿಗಾಗಿ ಮಾಡುತ್ತಿದ್ದೇನೆ,’ ಮತ್ತು ಇದನ್ನು ಪೂರೈಸಲು ಸಹಾಯಮಾಡುವಂತೆ ಆತನಲ್ಲಿ ನಾನು ಬೇಡುತ್ತೇನೆ.” ಇಂದು, ಬೆಕಿ ಪೂರ್ಣಸಮಯದ ಸೌವಾರ್ತಿಕಳಾಗಿ ಸೇವೆ ಮಾಡುತ್ತಿದ್ದಾಳೆ.
ಈಗ ಪ್ರಾಯಸನ್ಥಾಗಿರುವ, ಕ್ರ್ಯಾಗ್, ಮಸ್ತಿಷ್ಕ ಪಾರ್ಶ್ವವಾಯುವಿನಿಂದ ಕಷ್ಟಾನುಭವಿಸುತ್ತಿದ್ದಾನೆ. ಆತನೂ ಸಹ ಆತನ ಅಂಗವಿಕಲತೆಯು ಆತನನ್ನು ಕ್ರೈಸ್ತ ಸಭೆಯ ಒಬ್ಬ ಬೆಲೆಯುಳ್ಳ ಸದಸ್ಯನಾಗಿರುವುದರಿಂದ ಹಿಂದೆಗೆದುಕೊಳ್ಳುವಂತೆ ಬಿಟ್ಟುಕೊಡಲು ನಿರಾಕರಿಸಿದನು. ಆತನು ಹೇಳಿದ್ದು: “ನಾನು ಯೆಹೋವನ ಮೇಲೆ ಆತುಕೊಳ್ಳುತ್ತೇನೆ, ಮತ್ತು ಆತನ ಅನೇಕ ಆಶೀರ್ವಾದಗಳಲ್ಲಿ ನಾನು ಆನಂದಿಸುವಂತೆ ಆತನು ಅವಕಾಶ ನೀಡಿದ್ದಾನೆ. ಐದು ಬಾರಿ ಸಹಾಯಕ ಪಯನೀಯರನಾಗಿ [ಸೌವಾರ್ತಿಕ] ಸೇವೆಮಾಡಲು ನಾನು ಶಕ್ತನಾದೆನು. ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನಾನು ಬೈಬಲ್ ಭಾಷಣಗಳನ್ನು ಕೊಡುತ್ತೇನೆ, ಮತ್ತು ಸಭಾ ಅಕೌಂಟ್ಸ್ಗಳನ್ನು ನಿರ್ವಹಿಸಲು ನಾನು ಶಕ್ತನಾಗಿದ್ದೇನೆ.”
“ನಗುವ ಸಮಯ”ಯೂ ಅಲ್ಲಿದೆ, ಮತ್ತು ಸ್ಪಲ್ಪ ಅಭ್ಯಾಸದಿಂದ, ಇತರ ಯುವಜನರು ಆನಂದಿಸುವ ವಿನೋದ ಚಟುವಟಿಕೆಗಳಲ್ಲಿ ಕೆಲವನ್ನು ನೀವು ಸಹ ಆನಂದಿಸಲು ಶಕ್ತರಾಗಬಹುದು. (ಪ್ರಸಂಗಿ 3:4) ಬೆಕಿ ಒಪ್ಪಿಕೊಳ್ಳುವುದು: “ವಾಲಿ ಬಾಲ್ನಂತಹ ಕ್ರೀಡೆಗಳನ್ನು ನಾನು ಆಡಲು ಸಾಧ್ಯವಿಲ್ಲ ಯಾಕಂದರೆ ನನ್ನ ಪ್ರತಿಕ್ರಿಯೆಗಳು ಅಷ್ಟೊಂದು ನಿಧಾನವಾಗಿವೆ. ಆದರೆ ನಾನು ಓಡಬಲ್ಲಿ. ಮತ್ತು ಅಪಘಾತದ ತರುವಾಯ, ನನ್ನ ತಾಯಿ ನನ್ನನ್ನು ಸೈಕಲ್ ಸವಾರಿಮಾಡಲು ಕಲಿಯುವಂತೆ ಉತ್ತೇಜಿಸಿದಳು. ನಾನು ಹೊಸ ವಿಚಾರಗಳಿಗಾಗಿ ಪ್ರಯತ್ನಿಸುವಂತೆ ಅವಳು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದಳು.”
ಇತರರ ಸಹಾಯವಿಲ್ಲದೇ ನಿಭಾಯಿಸಲು ಪ್ರಯತ್ನಿಸಬೇಡಿರಿ
ಒಂದು ಶಾರೀರಿಕ ಅಂಗವಿಕಲತೆಯೊಂದಿಗೆ ನಿಭಾಯಿಸುವುದು ಸುಲಭವಾಗಿರುವುದಿಲ್ಲ. ಅಪೊಸ್ತಲ ಪೌಲನು ಆತನ ದುರ್ಬಲತೆಯನ್ನು “ಶರೀರದಲ್ಲಿ ನಾಟಿರುವ ಒಂದು ಶೂಲ” ಎಂದು ಕರೆದನು. (2 ಕೊರಿಂಥದವರಿಗೆ 12:7) ಸುಯೋಗದಿಂದ, ನೀವು ನಿಮ್ಮ ಸಮಸ್ಯೆಗಳನ್ನು ಒಂಟಿಯಾಗಿ ಎದುರಿಸಬೇಕಾಗಿಲ್ಲ. ಸರ್ನಿ ಎಂಬ ಯುವತಿಯೊಬ್ಬಳ ಒಂದು ಟೊಂಕವು ಸಂಪೂರ್ಣವಾಗಿ ಬೆಳವಣಿಗೆಯಾಗಿರದ ಕಾರಣ, ಒಂದು ಕಾಲು ಇನ್ನೊಂದಕ್ಕಿಂತಲೂ ಚಿಕ್ಕದಾಗಿರುವಂತೆ ಮಾಡಿತ್ತು. ಅವಳನ್ನುವುದು: “ಯೋಗ್ಯ ರೀತಿಯ ಕ್ರೈಸ್ತ ಸಹವಾಸವನ್ನು ಹೊಂದಿರುವುದು ಮತ್ತು ಕುಟುಂಬದ ಮತ್ತು ಸಭೆಯಲ್ಲಿರುವ ಸ್ನೇಹಿತರ ಪ್ರೀತಿಪೂರ್ಣ ಬೆಂಬಲ ನನಗೆ ಅಮೂಲ್ಯವಾದದ್ದೆಂದು ನಾನು ಕಂಡುಕೊಂಡೆನು.” ಹೌದು, ನೀವಾಗಿಯೇ ಬೇರ್ಪಡಿಸಿಕೊಳ್ಳಬೇಡಿರಿ. (ಜ್ಞಾನೋಕ್ತಿ 18:1) ಸಾಧ್ಯವಾದಷ್ಟು ಮಟ್ಟಿಗೆ, “ಕರ್ತನ ಸೇವೆಯಲ್ಲಿ ಬಹಳಷ್ಟು ಮಾಡಲು”ಇರಲಿ. (1 ಕೊರಿಂಥ 15:58, NW) ಸರ್ನಿ ಪ್ರಯೋಜನವನ್ನು ವಿವರಿಸುತ್ತಾಳೆ: “ರಾಜ್ಯ ಕೆಲಸಗಳಲ್ಲಿ ಕ್ರಿಯಾಶೀಲಳಾಗಿರುವುದು ನನ್ನ ಸಮಸ್ಯೆಗಳ ಕುರಿತು ಯೋಗ್ಯವಾದ ದೃಷ್ಟಿಯನ್ನು ಇಡುವಂತೆ ಸಹಾಯಮಾಡುತ್ತದೆ.” ಬೆಕಿ ಗಮನಿಸಿದ್ದು: “ನಿಜವಾಗಿಯೂ ನಿಮಗಿಂತಲೂ ಕಂಗೆಟ್ಟ ಜನರೊಂದಿಗೆ ಮಾತನಾಡುವ ಸಂದರ್ಭವು ನಿಮಗೆ ದೊರಕುತ್ತದೆ ಯಾಕಂದರೆ ಭವಿಷ್ಯತ್ತಿಗಾಗಿ ಒಂದು ನಿರೀಕ್ಷೆಯನ್ನು ಅವರು ಹೊಂದಿಲ್ಲ. ಅದು ನನ್ನ ಸ್ವಂತ ಸಮಸ್ಯೆಗಳನ್ನು ನಾನು ಮರೆಯುವಂತೆ ಸಹಾಯಮಾಡುತ್ತದೆ.”
ಎಲ್ಲಕ್ಕಿಂತ ಮಿಗಿಲಾಗಿ, ಬೆಂಬಲಕ್ಕಾಗಿ ಯೆಹೋವ ದೇವರೆಡೆಗೆ ನೋಡಿರಿ. ಆತನು ನಿಮ್ಮ ಆವಶ್ಯಕತೆಗಳನ್ನು ಮತ್ತು ಭಾವನೆಗಳನ್ನು ಗ್ರಹಿಸುತ್ತಾನೆ ಮತ್ತು ನೀವು ನಿಭಾಯಿಸುವಂತೆ ಸಹಾಯಮಾಡಲು “ಸಾಮಾನ್ಯವಾದದ್ದಕ್ಕಿಂತಲೂ ಹೆಚ್ಚಾದ ಬಲಾಧಿಕ್ಯವನ್ನು” ಸಹ ಒದಗಿಸಬಲ್ಲನು. (2 ಕೊರಿಂಥ 4:7, NW) ಬಹುಶಃ ಸಕಾಲದಲ್ಲಿ ಟೆರೆನ್ಸ್ ಎಂಬ ಅಂಗವಿಕಲನಾದ ಕ್ರೈಸ್ತ ಯುವಕನೊಬ್ಬನ ಆಶಾವಾದದ ದೃಷ್ಟಿಕೋನವನ್ನು ನೀವು ಹೊಂದಬಹುದು. ಒಂಬತ್ತರ ಪ್ರಾಯದಲ್ಲಿ, ಟೆರೆನ್ಸ್ ತನ್ನ ದೃಷ್ಟಿಯನ್ನು ಕಳೆದುಕೊಂಡನಾದರೂ ಅದು ಆತನನ್ನು ಜಯಿಸದಂತೆ ತಿರಸ್ಕರಿಸುತ್ತಾ, ಅಂದದ್ದು: “ನನ್ನ ಅಂಧತೆಯು ಒಂದು ಅಂಗವಿಕಲತೆಯಲ್ಲ; ಅದು ಕೇವಲ ಅನನುಕೂಲತೆಯಾಗಿದೆ.” (g93 6/8)
[ಅಧ್ಯಯನ ಪ್ರಶ್ನೆಗಳು]
a ನಿಮ್ಮ ಅಂಗವಿಕಲತೆಯು ಇತ್ತೀಚೆಗೆ ಸಂಭವಿಸಿರುವುದಾದಲ್ಲಿ, ನೀವು ಕಹಿಮನೋಭಾವ, ಕೋಪ, ಮತ್ತು ಖಿನ್ನ ಅನಿಸಿಕೆಗಳೊಂದಿಗೆ ತಿಳಿವಳಿಕೆಯುಳ್ಳವರಾಗಿಯೇ ಹೋರಾಟ ನಡೆಸುತ್ತಿರಬಹುದು. ವಾಸ್ತವವಾಗಿ, ಒಂದು ಗಂಭೀರ ನಷ್ಟವನ್ನು ನೀವು ಅನುಭವಿಸಿದಾಗ ದುಃಖಕರವಾದ ಒಂದು ಸಮಯಾವಧಿಯನ್ನು ನಿರ್ವಹಿಸುವುದು ಸಂಪೂರ್ಣವಾಗಿ ಸಾಮಾನ್ಯವಾದದ್ದೂ—ಮತ್ತು ಆರೋಗ್ಯಕರವಾದದ್ದೂ—ಆಗಿದೆ. (ಹೋಲಿಸಿ ನ್ಯಾಯಸ್ಥಾಪಕರು 11:37; ಪ್ರಸಂಗಿ 7:1-3.) ಸಮಯ ಮತ್ತು ಕುಟುಂಬದ ಮತ್ತು ಸ್ನೇಹಿತರ ಪ್ರೀತಿಪೂರ್ಣ ಬೆಂಬಲದಿಂದ, ನೋವಿನ ಅನಿಸಿಕೆಗಳ ಬಿರುಗಾಳಿಯು ಸಂಭವನೀಯವಾಗಿ ಕಡಿಮೆಗೊಳ್ಳುವುದೆಂಬ ಭರವಸೆಯಿಂದಿರ್ರಿ.
[ಪುಟ 17 ರಲ್ಲಿರುವ ಚಿತ್ರ]
ನಿಮ್ಮ ಅಂಗವಿಕಲತೆಯ ಕುರಿತು ನಿಮಗೆ ಸಾಧ್ಯವಿರುವದನ್ನೆಲ್ಲಾ ಕಲಿಯಿರಿ