ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 10/8 ಪು. 12-14
  • ಕನ್ನಡಕಗಳ ಕಡೆಗೆ ಒಂದು ನೋಟ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕನ್ನಡಕಗಳ ಕಡೆಗೆ ಒಂದು ನೋಟ
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಆರಂಭಿಕ ದೃಷ್ಟಿ ಸಾಧನಗಳು
  • ಕನ್ನಡಕಗಳು ಇಂದು
  • ‘ನಾನು ಕನ್ನಡಕಗಳನ್ನು ಧರಿಸಬೇಕೊ?’
  • ನಿಮ್ಮ ಕನ್ನಡಕಗಳ ಕಾಳಜಿವಹಿಸುವುದು
  • ಸಕಲ ದೌರ್ಬಲ್ಯಗಳು ಕಣ್ಮರೆಯಾಗುವಾಗ
    ಎಚ್ಚರ!—1999
  • ಜಗತ್ತನ್ನು ಗಮನಿಸುವುದು
    ಎಚ್ಚರ!—1994
ಎಚ್ಚರ!—1993
g93 10/8 ಪು. 12-14

ಕನ್ನಡಕಗಳ ಕಡೆಗೆ ಒಂದು ನೋಟ

ಬ್ರಿಟನ್‌ನ ಎಚ್ಚರ! ಸುದ್ದಿಗಾರರಿಂದ

ಇದನ್ನು ನೀವು ಕನ್ನಡಕಗಳ ಸಹಾಯದಿಂದ ಓದುತ್ತಿದ್ದೀರೊ? ಹಾಗಾದರೆ, ನೀವು ಒಬ್ಬಂಟಿಗರಾಗಿಲ್ಲ. ಬ್ರಿಟಿಷ್‌ ಜನಸಂಖ್ಯೆಯ ಸುಮಾರು 60 ಪ್ರತಿಶತವು, ಈಗ ಕನ್ನಡಕಗಳನ್ನು ಧರಿಸುತ್ತದೆ.

ಕನ್ನಡಕಗಳನ್ನು ಧರಿಸುವುದು ಎಷ್ಟು ಸರ್ವೇಸಾಮಾನ್ಯವಾಗಿದೆ ಎಂದರೆ, ನಿಮ್ಮ ಗೆಳೆಯರು ಅದರ ಮೇಲೊಂದು ಹೇಳಿಕೆ ಮಾಡಿದರೆ, ಅದು ಬಹುಶಃ, ನೀವು ನಿಮ್ಮ ಆಧಾರಕಟ್ಟುಗಳ (ಫ್ರೇಮ್‌ಗಳ) ಶೈಲಿಯನ್ನು ಬದಲಾಯಿಸಿದ್ದೀರಿ ಅಥವಾ ಅವುಗಳನ್ನು ಧರಿಸದೆ ಇರಲು ನಿಶ್ಚಯಿಸಿದ್ದೀರಿ ಎಂಬ ಕಾರಣದಿಂದಲೇ ಇರಬಹುದು. ನಮ್ಮಲ್ಲಿ ಅನೇಕರು ನಮ್ಮ ಕನ್ನಡಕಗಳಿಗೆ ಎಷ್ಟು ಪಳಗಿದ್ದೇವೆಂದರೆ—ಅವು ನಮ್ಮ ಮೂಗುಗಳ ಕೆಳಗೆ ಜಾರಲು ಯಾ ನೀರಿನ ಆವಿಯಿಂದ ಆವರಿಸಲ್ಪಡಲು ಪ್ರಾರಂಭಿಸುವ ವರೆಗೂ, ಅದರ ಕುರಿತು ಯೋಚಿಸದೆ ನಾವು ಅವುಗಳನ್ನು ಧರಿಸುತ್ತೇವೆ ಮತ್ತು ತೆಗೆದಿಡುತ್ತೇವೆ.

ಕನ್ನಡಕವನ್ನು ಧರಿಸುವವರಲ್ಲಿ ಅನೇಕರಾದರೊ, ಬೆಡಗಿನ ಫ್ರೇಮ್‌ಗಳಿಗಿಂತ ಸಾಮಾನ್ಯ ದೃಷ್ಟಿಗಾಗಿರುವ ಮಟ್ಟವನ್ನು ಮುಟ್ಟಲು ಪ್ರಾಯಶಃ ಇಷ್ಟಪಡಬಹುದು. ಕನ್ನಡಕಗಳು ಒಂದು ಕಿರುಕುಳವಾಗಿರಬಲ್ಲವು. ಆದರೂ, ದುರ್ಬಲ ದೃಷ್ಟಿ ಇರುವ ಜನರಿಗೆ ಮೊದಲಿಗಿಂತ ಹೆಚ್ಚು ಸಹಾಯವು ಲಭ್ಯವಿದೆ.

ಆರಂಭಿಕ ದೃಷ್ಟಿ ಸಾಧನಗಳು

ಖಡ್ಗ ಮಲ್ಲದ ಆಟಗಳನ್ನು ಉತ್ತಮವಾಗಿ ನೋಡಲಿಕ್ಕಾಗಿ ರೋಮನ್‌ ಸಾಮ್ರಾಟ ನಿರೊ, ಹೆಚ್ಚು ಬೆಲೆಯುಳ್ಳ ಮತ್ತು ಕ್ಷೀಣಿಸುತ್ತಿರುವ ದೃಷ್ಟಿಯನ್ನು ಅಭಿವೃದ್ಧಿಪಡಿಸುವ ಒಂದು ಅಸಮರ್ಥ ವಿಧವನ್ನು—ಪಚ್ಚೆಯಿಂದ ಒಂದು ಮಸೂರವನ್ನು (ಲೆನ್ಸ್‌) ಮಾಡಿಸಿದನೆಂದು ಹೇಳಲಾಗಿದೆ. ಪ್ರಾಚೀನ ಸಮಯಗಳಲ್ಲಿ, ಮಸೂರಗಳನ್ನು ಅದೇ ರೀತಿಯಲ್ಲಿ ಸ್ಫಟಿಕಗಾಜು, ಬೆಣಚುಕಲ್ಲು, ಪದ್ಮರಾಗ, ರತ್ನ, ಮತ್ತು ಪುಷ್ಯರಾಗಗಳಿಂದ ಮಾಡಲಾಯಿತು. ಹಾಗಿದ್ದರೂ, ಸುಮಾರು 1268ನೆಯ ವರ್ಷದಲ್ಲಿ, ಗಾಜಿನ ಗೋಳದ ಒಂದು ತುಂಡನ್ನು ಓದಲು ಸಹಾಯಕ ಸಾಧನವಾಗಿ ಹೇಗೆ ಉಪಯೋಗಿಸಬಹುದೆಂದು ಇಂಗ್ಲಿಷ್‌ ಪಾದ್ರಿ ರಾಜರ್‌ ಬೇಕನ್‌ ವಿವರಿಸಿದರು. ಸುಮಾರು ಇದೇ ಸಮಯದಲ್ಲಿ—ಫ್ರೇಮ್‌ಗಳಲ್ಲಿ ಹೊಂದಿಕೊಂಡಿರುವ ಪರಿಷ್ಕರಿಸದ ಮಸೂರಗಳಿರುವ—ಪ್ರಥಮ ಕನ್ನಡಕಗಳು ಕಾಣಿಸಿಕೊಳ್ಳಲು ಪ್ರಾರಂಭವಾದವು.

ಅವುಗಳನ್ನು ಪ್ರಥಮವಾಗಿ ಶೋಧಿಸಿದವರು ಯಾರು—ಇಟಾಲಿಯನರೊ ಯಾ ಚೀನೀಯರೊ? ಇದೊಂದು ವಾಗ್ವಾದದ ವಿಷಯವಾಗಿದೆ, ಯಾಕಂದರೆ ಸಾಧನವು ಎರಡೂ ದೇಶಗಳಲ್ಲಿ ಬಹುತರ ಏಕಕಾಲದಲ್ಲಿ ಹೊರಬಂದಂತೆ ಕಾಣಿಸುತ್ತದೆ. ಇನ್ನೊಂದು ಕಡೆಯಲ್ಲಿ, ಇಟಲಿಯ ಫ್ಲೋರೆನ್ಸ್‌ನಲ್ಲಿ, ಒಂದು ಸಮಾಧಿಯು ಈ ಚರಮವಾಕ್ಯವನ್ನು ಹೊಂದಿದೆ: “ಫ್ಲೋರೆನ್ಸ್‌ನ ಆರ್ಮಾಟಿ ಕುಟುಂಬದ ಸಾಲ್‌ವಿನೊ ಡಾರ್ಮಾಟೊ ಇಲ್ಲಿ ಮಲಗಿದ್ದಾನೆ. ಕನ್ನಡಕಗಳ ಸಂಶೋಧಕನು. ದೇವರು, ಅವನ ಪಾಪಗಳಿಗಾಗಿ ಅವನನ್ನು ಕ್ಷಮಿಸಲಿ.” ಅವನು 1285, 1317, ಯಾ 1340ರಲ್ಲಿ—ಯಾವಾಗ ಸತ್ತನೆಂದು ಯಾರಿಗೂ ನಿಶ್ಚಿತವಾಗಿ ಗೊತ್ತಿಲ್ಲ. ಇನ್ನೊಂದು ಕಡೆಯಲ್ಲಿ, ಮಹಾ ಇಟ್ಯಾಲಿಯನ್‌ ದೇಶಾನ್ವೇಷಕ ಮಾರ್ಕೊ ಪೊಲೊ, ಅವನು 13ನೆಯ ಶತಮಾನದ ಕೊನೆಯ ಭಾಗದಲ್ಲಿ ಪ್ರಥಮವಾಗಿ ಚೀನಾವನ್ನು ತಲಪಿದಾಗ, ಅಲ್ಲಿ ಅನೇಕ ಜನರು ಕನ್ನಡಕಗಳನ್ನು ಧರಿಸಿಕೊಂಡಿರುವುದನ್ನು ಕಂಡನೆಂದು ಜ್ಞಾಪಿಸಿಕೊಂಡನು. ನಿಜವಾಗಿ, ಕನ್ನಡಕಗಳನ್ನು ಚೀನಾದಲ್ಲಿ ಸಾ.ಶ. 500ರಷ್ಟು ಆದಿ ಭಾಗದಲ್ಲಿಯೇ ಧರಿಸಲಾಗುತ್ತಿತ್ತು ಎಂಬುದಾಗಿ ದಂತಕಥೆಯು ಹೇಳುತ್ತದೆ.

ಕೊನೆಯ ಪಕ್ಷ 16ನೆಯ ಶತಮಾನದೊಳಗಾಗಿ, ವೆನಿಸ್‌ನಲ್ಲಿ ಅಷ್ಟೇ ಅಲ್ಲದೆ ನ್ಯುರೆಮ್‌ಬರ್ಗ್‌ ಮತ್ತು ಇತರ ಯೂರೋಪಿಯನ್‌ ಕೇಂದ್ರಗಳಲ್ಲಿ, ದೃಷ್ಟಿಯ ಸಂಬಂಧವಾದ ವ್ಯಾಪಾರವು ಏಳಿಗೆ ಹೊಂದುತ್ತಾ ಇತ್ತು. ಅನೇಕ ಪಟ್ಟಣಗಳಲ್ಲಿ ಬೀದಿ ವ್ಯಾಪಾರಿಗಳಿಂದ ಮಾರಲ್ಪಡಲಾಗುತ್ತಿದ್ದ ಕನ್ನಡಕಗಳು, ಬಹಳ ಬೇಡಿಕೆಯ ಭೂಷಣಗಳಾದವು. ಆದರೆ ಅಯ್ಯೋ, ಮಾರುವವರು ತಮ್ಮ ಸರಕುಗಳೊಂದಿಗೆ ದೃಷ್ಟಿಪರೀಕ್ಷೆಗಳನ್ನು ನೀಡುತ್ತಿರಲಿಲ್ಲ. ಆದುದರಿಂದ ಕೊಂಡುಕೊಳ್ಳುವವನು ತನ್ನ ತೋರಿಕೆಯನ್ನು ಅಭಿವೃದ್ಧಿಪಡಿಸಿಕೊಂಡರೂ, ಅವನ ದೃಷ್ಟಿಯನ್ನು ಅವಶ್ಯವಾಗಿ ಅಭಿವೃದ್ಧಿಪಡಿಸಿಕೊಳ್ಳಲಿಲ್ಲ!

ಕನ್ನಡಕಗಳು ಇಂದು

ಕನ್ನಡಕಗಳು ಏಕಪ್ರಕಾರವಾಗಿ ಅಭಿವೃದ್ಧಿಗೊಂಡವು. ಕಿವಿಗಳಿಗೆ ಪಟ್ಟಿಗಳ ಮೂಲಕ, ಅಥವಾ ಮೂಗಿಗೆ ಒಂದು ಸ್ಪ್ರಿಂಗ್‌ ಕ್ಲಿಪ್‌ನ ಮೂಲಕ ಅವುಗಳನ್ನು ಬಂಧಿಸಲಾಗುತ್ತಿತ್ತು. ಹದಿನೆಂಟನೆಯ ಶತಮಾನದ ಆದಿ ಭಾಗದೊಳಗಾಗಿ, ಕನ್ನಡಕಗಳನ್ನು ಬಾಗದ ಚೌಕಟ್ಟುಗಳ ಮೂಲಕ ಎತ್ತಿಹಿಡಿಯುವ ವಿಚಾರವನ್ನು ಯಾರೋ ಒಬ್ಬರು ಪ್ರಾರಂಭಿಸಿದರು. ಇದು ಇನ್ನೂ ಅತ್ಯಂತ ಜನಪ್ರಿಯವಾದ ವಿಧಾನವಾಗಿದೆ.

ಮಸೂರ ಉತ್ಪಾದನೆಯೂ ಕೂಡ ನಾಟಕೀಯವಾಗಿ ಅಭಿವೃದ್ಧಿಹೊಂದಿತು. ಕೊನೆಯದಾಗಿ, ಉನ್ನತ ದರ್ಜೆಯ ದೃಷ್ಟಿಯ ಗಾಜು, ಪಾರದರ್ಶಕವಾದ ಸ್ಫಟಿಕದಂಥ ವಸ್ತುಗಳನ್ನು ಸ್ಥಾನಪಲ್ಲಟಗೊಳಿಸಿತು. ಮುಪ್ಪಟ್ಟೆಯ ಗಾಜುಗಳೊಂದಿಗೆ ಸರ್‌ ಐಜೆಕ್‌ ನ್ಯೂಟನ್‌ರ 17ನೆಯ ಶತಮಾನದ ಪ್ರಯೋಗಗಳು, ಬೆಳಕಿನ ವಕ್ರೀಕರಣದ ಕುರಿತು ತಿಳಿವಳಿಕೆಗೆ ನಡೆಸಿದವು. ಹೀಗೆ ವೈಜ್ಞಾನಿಕ ನಿಷ್ಕೃಷ್ಟತೆಯಿಂದ ಅಸಂದಿಗ್ಧವಾದ ಮಸೂರಗಳನ್ನು ಮಾಡಬಹುದಿತ್ತು.

ಇಸವಿ 1784ರಲ್ಲಿ, ಅವರ ಕನ್ನಡಕಗಳೊಂದಿಗೆ ತನಗಿದ್ದ ಒಂದು ಸಮಸ್ಯೆಗೆ ಅಮೆರಿಕನ್‌ ರಾಜ್ಯ ನೀತಿಜ್ಞ ಬೆನ್‌ಜಮಿನ್‌ ಫ್ರ್ಯಾಂಕ್‌ಲಿನ್‌, ಚತುರವಾದ ಒಂದು ಪರಿಹಾರವನ್ನು ಶೋಧಿಸಿದರು. ಓದಲು ಇದ್ದ ಅವರ ಕನ್ನಡಕಗಳು ಅವರ ದೂರ ದೃಷ್ಟಿಗೆ ಅಡಿಯ್ಡಾಗುತ್ತಿತ್ತು, ಮತ್ತು ದೂರ ದೃಷ್ಟಿಗಾಗಿ ಅವರಲ್ಲಿದ್ದ ಕನ್ನಡಕಗಳು ಓದಲಿಕ್ಕಾಗಿ ಅವರಿಗೆ ತಕ್ಕದಾಗಿರಲಿಲ್ಲ. ಆದುದರಿಂದ ಎರಡು ಭಿನ್ನವಾದ ಕನ್ನಡಕಗಳ ಜೊತೆಗಳನ್ನು ಸತತವಾಗಿ ಬದಲಾಯಿಸುತ್ತಾ ಇರುವ ಬದಲು, ಕನ್ನಡಕಗಳ ಒಂದು ಜೊತೆಯಲ್ಲಿಯೇ ಎರಡು ತೆರದ ಮಸೂರಗಳನ್ನು ಯಾಕೆ ಒಂದುಗೂಡಿಸಬಾರದು ಎಂದು ಅವರು ವಿವೇಚಿಸಿದರು. ಹೀಗೆ ದಿನ್ವಾಭಿಕಗಳು ಶೋಧಿಸಲ್ಪಟ್ಟವು. ಹಾಗಿದ್ದರೂ, ಅವುಗಳನ್ನು ಉತ್ಪಾದಿಸುವ ಒಂದು ಸಮರ್ಥ ವಿಧಾನವನ್ನು ವಿಕಾಸಗೊಳಿಸುವ ಮುಂಚೆ ಇನ್ನೊಂದು ನೂರು ವರ್ಷಗಳು ಕಳೆದವು.

ವಿಶೇಷವಾದ ಅಗತ್ಯಗಳನ್ನು ಪೂರೈಸಲು ದಿನ್ವಾಭಿ ಕನ್ನಡಕದ ವಿಭಿನ್ನ ರೀತಿಗಳು ಕೂಡ ಲಭ್ಯವಾಗಿವೆ. ಕಾರ್ಮಿಕರ ಕಣ್ಣುಗಳು ಸಿಡಿಯುವ ಕಣಗಳಿಂದ ರಕ್ಷಿಸಲ್ಪಡುವಂತೆ, ಸುರಕ್ಷಿತ ಕನ್ನಡಕಗಳಿಗೆ ತೆಳು ಪದರದ ಅಥವಾ ಗಡುಸಾದ ಮಸೂರಗಳನ್ನು ಜೊತೆಗೂಡಿಸ ಸಾಧ್ಯವಿದೆ. ಕೆಲವು ಮಸೂರಗಳು ಛಾಯಾಚಿತ್ರ ಗ್ರಾಹಕಗಳಾಗಿರುತ್ತವೆ; ಪ್ರಜ್ವಲಿಸುವ ಸೂರ್ಯನ ಬೆಳಕಿಗೆ ತೆರೆದಿಟ್ಟಾಗ, ಅವು ಮಂಕಾಗುತ್ತವೆ, ಮತ್ತು ನೆರಳಿನಲ್ಲಿ ಯಾ ಮನೆಯೊಳಗೆ ಇದ್ದಾಗ, ಅವು ಮತ್ತೆ ಸ್ಪಷ್ಟವಾಗಿಗುತ್ತವೆ. ಕನ್ನಡಕಗಳ ತೂಕವನ್ನು ಗಣನೀಯವಾಗಿ ಕಡಿಮೆಗೊಳಿಸುತ್ತಾ, ಮತ್ತು ದಪ್ಪದಾದ ಮಸೂರಗಳಿರುವ ಜನರಿಗೆ ಅವುಗಳನ್ನು ಯಾವುದೇ ಅನಾನುಕೂಲತೆ ಇಲ್ಲದೆ ಧರಿಸುವಂತೆ ಅನುಮತಿಸುವ ಇನ್ನೂ ಬೇರೆ ಮಸೂರಗಳು, ಪ್ಲ್ಯಾಸ್ಟಿಕ್‌ ಮಸೂರಗಳಾಗಿವೆ.

‘ನಾನು ಕನ್ನಡಕಗಳನ್ನು ಧರಿಸಬೇಕೊ?’

ಬಹುಶಃ, ಪರಿಪೂರ್ಣ ದೃಷ್ಟಿಯಿಂದ ಸಂಪನ್ನರಾದ ಕೆಲವು ಧನ್ಯರಲ್ಲಿ ನೀವು ಒಬ್ಬರಾಗಿರಬಹುದು. ಪ್ರಾಯಶಃ ದೀರ್ಘ ಸಮಯದ ತನಕ ಇರಲಿಕ್ಕಿಲ್ಲ.

‘ಯಾವುದಾದರೊಂದು ದಿನ ನಾನು ಕನ್ನಡಕಗಳನ್ನು ಧರಿಸಬೇಕಾಗುವುದೆಂದು ನೀವು ಹೇಳುತ್ತಾ ಇದ್ದೀರೊ?’ ಎಂದು ನೀವು ಕೇಳುತ್ತೀರಿ. ಹೌದು, ಈಗ ಸದ್ಯಕ್ಕೆ ನಿಮಗೆ ಅತ್ಯುತ್ತಮ ದೃಷ್ಟಿ ಇರುವುದಾದರೂ, ನೀವು ಬಹುಶಃ ಅವುಗಳನ್ನು ಧರಿಸುವ ಸಾಧ್ಯತೆ ಇದೆ. ಯಾಕೆ? ಒಳ್ಳೆಯದು, ಒಂದು ಕಾರಣವೇನಂದರೆ, ನೀವು 45 ವರ್ಷ ಪ್ರಾಯದವರು—ಯಾ ಅದಕ್ಕಿಂತ ಹೆಚ್ಚು ವಯಸ್ಸಾಗುವುದರೊಳಗೆ—ಒಂದು ಬಗೆಯ ದೂರದೃಷ್ಟಿಯ (ಪ್ರೆಸ್‌ಬಿಯೋಪಿಯದ) ಪರಿಣಾಮಗಳನ್ನು ನೀವು ಬಹುಶಃ ಗಮನಿಸುವಿರಿ. ಈಗ, ಆ ಪದವನ್ನು ಕೇಳಿ ಹೆದರಬೇಡಿ. ನಿಮ್ಮ ಕಣ್ಣುಗಳಲ್ಲಿರುವ ಮಸೂರಗಳು, ದೃಷ್ಟಿಯನ್ನು ಸಮೀಪದ ನೋಟಗಳಿಂದ ದೂರವಿರುವ ನೋಟಗಳಿಗೆ ನಿಮ್ಮ ಯೌವನದಲ್ಲಿ ಸಮರ್ಥವಾಗಿ ಮಾಡಿದಂತೆ ಬದಲಾಯಿಸುವದಿಲ್ಲ ಎಂಬುದೇ ಇದರ ಅರ್ಥವಾಗಿದೆ. ವಯಸ್ಸಾಗುವ ಪ್ರಕ್ರಿಯೆಯಲ್ಲಿ ನೀಡಲಾಗುವ ತೆರುವ ಬೆಲೆಗಳಲ್ಲಿ ಕ್ರಯಗಳಲ್ಲಿ ಕನ್ನಡಕಗಳು ಕೇವಲ ಒಂದಾಗಿವೆ.

ನಿಮ್ಮ ಹೆತ್ತವರು ಕನ್ನಡಕಗಳನ್ನು ಧರಿಸುತ್ತಾರೊ? ದೃಷ್ಟಿಯ ಸಮಸ್ಯೆಗಳು ಅನುವಂಶೀಯತೆಗೆ ಸಂಬಂಧಿಸಿದೆ ಎಂದು ಅನೇಕರಿಗೆ ಅನಿಸುತ್ತದೆ. ಹಾಗಿರುವಲ್ಲಿ, ನೀವೂ ಒಂದು ದಿನ ಕನ್ನಡಕಗಳನ್ನು ಧರಿಸಬೇಕಾದ ಸಂಗತಿಯು ಪೂರ್ವನಿಶ್ಚಿತವಾಗಿರಬಹುದು.

ಏನೇ ಆದರೂ, ಸಕಾಲದಲ್ಲಿ, ವಯಸ್ಸು, ವಂಶವಾಹಿಗಳು, ಮತ್ತು ರೂಢಿಗಳು ತಮ್ಮ ಬೆಲೆಯನ್ನು ತೆಗೆದುಕೊಳ್ಳಬಹುದು ಮತ್ತು ದೂರದೃಷ್ಟಿ ದೋಷ (ಹೈಪೆರೊಪಿಯ), ಸಮೀಪದೃಷ್ಟಿ ದೋಷ (ಮೈಯೋಪಿಯ), ಅಸಮ ದೃಷ್ಟಿ (ಕಣ್ಣಿನ ಪಾರದರ್ಶಕ ಪಟಲದ ಅಪರಿಪೂರ್ಣ ಬಾಗುವಿಕೆ), ಮತ್ತು ಮೆಳ್ಳೆಗಣ್ಣು (ಸಾಬ್ಟ್ರಿಸ್‌ಮಸ್‌)ಗಳಂಥ ಸಾಮಾನ್ಯವಾದ ಕಣ್ಣಿನ ರೋಗಗಳನ್ನು ಉಂಟುಮಾಡಬಹುದು. ಮೇಲೆ ತಿಳಿಸಲ್ಪಟ್ಟಂಥ ಯಾವುದೇ ರೋಗದಿಂದ ನೀವು ನರಳುತ್ತಿರುವುದಾದರೆ, (ಅಪ್ಟಾಮೆಟ್ರಿಸ್ಟ್‌ನಂತಹ ಒಬ್ಬ) ನೇತ್ರ ತಜ್ಞನಿಗೆ ಭೇಟಿಯೊಂದನ್ನು ಮಾಡುವುದು ಒಳ್ಳೆಯ ವಿಷಯವಾಗಿರುವುದು. ಆಮೇಲೆ, ನಿಮಗೆ ಇಷ್ಟವಾಗುವಂಥ ಫ್ರೇಮ್‌ಗಳ ಒಂದು ಜೊತೆಯನ್ನು ಆರಿಸುವ ಸಂಗತಿಯೇ ಉಳಿದಿರುವುದು.—ಚೌಕಟ್ಟನ್ನು ನೋಡಿರಿ.

ನಿಮ್ಮ ಕನ್ನಡಕಗಳ ಕಾಳಜಿವಹಿಸುವುದು

ಕನ್ನಡಕಗಳು ಬಹಳ ಬೆಲೆಯುಳ್ಳದ್ದಾಗಿರಬಲ್ಲವು, ಮತ್ತು ನಿಮ್ಮ ದಿನಚರಿಯನ್ನು ನಡೆಸಲು ನೀವು ಅವುಗಳ ಮೇಲೆ ಅವಲಂಬಿತರಾಗಿರಬಹುದು. ಆದುದರಿಂದ, ಅವುಗಳನ್ನು ಸರಿಯಾಗಿ ನೋಡಿಕೊಳ್ಳಿರಿ. ನೀವು ಅವುಗಳನ್ನು ತೆಗೆದಾಗ, ಮಸೂರಗಳು ಕೆಳಗೆ ಮುಖಮಾಡುವಂತೆ ಎಂದೂ ಇಡಬೇಡಿ. ಮತ್ತೂ, ಅವುಗಳ ಮೇಲೆ ಕುಳಿತುಕೊಳ್ಳಬಹುದಾದ ಯಾ ಅಡಿಯಿಡಬಹುದಾದ ಸ್ಥಳದಲ್ಲಿ ಅವುಗಳನ್ನು ನೀವು ಇಡದಂತೆ ಖಚಿತಮಾಡಿಕೊಳ್ಳಿ. ಕನ್ನಡಕಗಳು ಬೇಗನೆ ಕೊಳೆಯಾಗುತ್ತವೆ, ಆದುದರಿಂದ ಮಸೂರಗಳನ್ನು ದಿನನಿತ್ಯವೂ ನಯವಾದೊಂದು ಒಣ ಬಟೆಯ್ಟಿಂದ ಉಜ್ಜಬೇಕು, ಮತ್ತು ಫ್ರೇಮ್‌ಗಳನ್ನು ಬೆಚ್ಚಗೆರುವ ಸಾಬೂನು ಹಾಕಿದ ನೀರಿನಿಂದ ಆಗಾಗ ತೊಳೆಯಬೇಕು. ಕನ್ನಡಕಗಳನ್ನು ಧರಿಸುವ ಎಳೆಯ ಮಕ್ಕಳು ನಿಮ್ಮಲ್ಲಿ ಇರುವುದಾದರೆ, ಅವರ ಕನ್ನಡಕಗಳನ್ನು ಪದೇ ಪದೇ ಶುಚಿಮಾಡುವ ಅಗತ್ಯವನ್ನು ನೀವು ಬಹುಶಃ ಕಾಣುವಿರಿ.

ನಿಮ್ಮ ಕನ್ನಡಕಗಳು ಜೋಡಣೆಯಿಂದ ಸರಿದು ಹೋಗಿ ಸರಿಯಾಗಿ ಹೊಂದಿಕೊಳ್ಳದಿದ್ದರೆ ಆಗ ಏನು? ಕೆಲಸವನ್ನು ನೀವೇ ಮಾಡುವ ಗಂಡಾಂತರದಲ್ಲಿ ಸಿಕ್ಕಿಕೊಳ್ಳುವ ಬದಲು ಅವುಗಳನ್ನು ಸರಿಪಡಿಸಲು ನಿಮ್ಮ ದೃಗ್ಯಂತ್ರಕಾರ(ಆಪಿಷ್ಟನ್‌)ನ ಬಳಿ ತೆಗೆದುಕೊಂಡು ಹೋಗಿ.

ಸರಿಯಾದ ಕಾಳಜಿಯಿಂದ, ನಿಮಗೆ ನಿಮ್ಮ ಕನ್ನಡಕಗಳಿಂದ ಉತ್ತಮವಾದ ಸೇವೆ ಸಿಗುವುದು. ಓ, ಆಗಿಂದಾಗ್ಗೆ ಅವು ಅಲ್ಪ ತೊಂದರೆಯನ್ನು ಇನ್ನೂ ಉಂಟುಮಾಡಿದರೂ, ಅವು ನಿಮ್ಮ ದೃಷ್ಟಿಯನ್ನು—ಮತ್ತು ಬಹುಶಃ ನಿಮ್ಮ ತೋರಿಕೆಗಳನ್ನು ಕೂಡ ಅಭಿವೃದ್ಧಿಗೊಳಿಸುತ್ತವೆ. ನಿಸ್ಸಂದೇಹವಾಗಿ ಸ್ವಲ್ಪ ತೊಂದರೆಗೆ ಅದು ಅರ್ಹವಾಗಿದೆ, ಅಲ್ಲವೇ? (g93 7/8)

[ಪುಟ 14 ರಲ್ಲಿರುವ ಚೌಕ]

ಕನ್ನಡಕಗಳು ಮತ್ತು ಫ್ಯಾಶನ್‌

ಅವರು ಕನ್ನಡಕಗಳನ್ನು ಧರಿಸಬೇಕೆಂದು ಹೇಳಲ್ಪಟ್ಟಾಗ, ಅನೇಕರು ‘ಕನ್ನಡಕಗಳು ನನ್ನ ತೋರಿಕೆಗಳನ್ನು ಕೆಡಿಸುವುದು!’ ಎಂದು ಹೇಳುತ್ತಾರೆ. ಹಾಗಿದ್ದರೂ, ಫ್ಯಾಶನ್‌ ವಿನ್ಯಾಸಕರು ತಮ್ಮ ಪ್ರತಿಭೆಯನ್ನು ಕನ್ನಡಕದ ವಿನ್ಯಾಸಕ್ಕೆ ಎಷ್ಟು ಪರಿಣಾಮಕಾರಿಯಾಗಿ ಅನ್ವಯಿಸಿದ್ದಾರೆಂದರೆ, ಕನ್ನಡಕಗಳ ಒಂದು ಜೊತೆಯು ಅಂದವಾಗಿ ಕಾಣುವಂತೆ ಮಾಡುವ ಅಲಂಕಾರದ ಒಂದು ಅಂಶವಾಗಿರಬಲ್ಲದು.

ಒಂದು ವಿಷಯ, ಫ್ರೇಮ್‌ ಉತ್ಪಾದಕರು ಹೊಸ ಕಡಿಮೆತೂಕದ, ಬಾಳಿಕೆ ಬರುವ ಪ್ಲ್ಯಾಸ್ಟಿಕ್‌ನ ಪ್ರಯೋಜನವನ್ನು ತೆಗೆದುಕೊಂಡು, ಬಣ್ಣಗಳ ಮತ್ತು ಗಾತ್ರಗಳ ಆಯ್ಕೆಯನ್ನು ಬಹುಮಟ್ಟಿಗೆ ಅಂತ್ಯವಿಲವ್ಲೆಂಬಂತೆ ಮಾಡಿದ್ದಾರೆ. ಉನ್ನತ ಭಂಗಸೂಚಿಯ ಕನ್ನಡಕವನ್ನು ಉಪಯೋಗಿಸುವ ಮೂಲಕವೂ ಕೂಡ, ದಪ್ಪ ಮಸೂರಗಳನ್ನು ಬಹಳ ತೆಳ್ಳಗಾಗಿ ಮಾಡ ಸಾಧ್ಯವಿದೆ. ಮತ್ತು ಪ್ರತಿಫಲನವಿರದ ಪಟಲದಿಂದ ಲೇಪಿಸಿದಾಗ, ಮಸೂರಗಳು ಬಹುತರ ಅದೃಶ್ಯವಾಗುತ್ತವೆ.

ನೀವು ಫ್ಯಾಶನ್‌ ಪ್ರಜ್ಞೆವುಳ್ಳವರಾಗಿರುವುದಾದರೆ, ಕನ್ನಡಕಗಳ ಫ್ರೇಮ್‌ಗಳನ್ನು ಬಟ್ಟೆಗೆಳ ಉಪಸಾಮಗ್ರಿಗಳಂತೆ ನೀವು ಆರಿಸಬಹುದು. ನಿಮ್ಮ ಮುಖದ ರೂಪಕ್ಕೆ ಸರಿಹೊಂದುವ, ಒಳ್ಳೆಯ ವೈಶಿಷ್ಟ್ಯಗಳನ್ನು ಸ್ಫುಟಗೊಳಿಸುವಾಗ, ಅಷ್ಟು ಒಳ್ಳೆಯದಾಗಿ ಇರದವುಗಳನ್ನು ಕಡಿಮೆಗೊಳಿಸುವ ಫ್ರೇಮ್‌ಗಳನ್ನು ಆರಿಸಿರಿ ಎಂದು ಆಪಿಕ್ಟಲ್‌ ಇನ್‌ಫರ್ಮೆಷನ್‌ ಕೌನ್ಸಿಲ್‌ (ಬ್ರಿಟನ್‌)ನಿಂದ ತಯಾರಿಸಲಾದ ಒಂದು ಬ್ರೋಷರ್‌ ಶಿಫಾರಸ್ಸು ಮಾಡುತ್ತದೆ. ಉದಾಹರಣೆಗೆ, ನಿಮ್ಮ ಮುಖವು ತೆಳ್ಳಗಾಗಿ ಕಾಣುವಂತೆ ಮಾಡಲು ನೀವು ಇಷ್ಟಪಡುವಿರೊ? ಆಗ, ಕನ್ನಡಕದ ಮಧ್ಯಭಾಗದಲ್ಲಿ ಬಣ್ಣದ ಸಾಂದ್ರತೆಯಿರುವ ಮತ್ತು ಪಕ್ಕಗಳಲ್ಲಿ ಬಣ್ಣವು ಇರದಂಥ ಫ್ರೇಮ್‌ಗಳನ್ನು ಆರಿಸಿರಿ ಎಂದು ಬ್ರೋಷರ್‌ ಹೇಳುತ್ತದೆ. ನಿಮಗೆ ನಿಕಟವಾದ ಕಣ್ಣುಗಳಿವೆಯೊ? ಆಗ ಸ್ಪಷ್ಟವಾಗಿದ ಸೇತುವೆ ಇರುವ ಮತ್ತು ಹೊರಗಿನ ತುದಿಗಳಲ್ಲಿ ಬಣ್ಣದ ಸಾಂದ್ರತೆ ಇರುವ ಫ್ರೇಮ್‌ಗಳನ್ನು ಆರಿಸಿರಿ. ವಿಭಿನ್ನ ಶೈಲಿಗಳನ್ನು ಹಾಕಿ ನೋಡಿ, ಮತ್ತು ವಿಭಿನ್ನ ಪರಿಣಾಮಗಳನ್ನು ಅಭ್ಯಾಸಿಸಿರಿ. ಪ್ರಾಮಾಣಿಕವಾದೊಂದು ಅಭಿಪ್ರಾಯವನ್ನು ಕೊಡಲಿಕ್ಕಾಗಿ ಆತುಕೊಳ್ಳಬಹುದಾದ ಒಬ್ಬ ಒಳ್ಳೆಯ ಗೆಳೆಯನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಸಹಾಯಕಾರಿ ಎಂದು ನೀವು ಕಾಣಬಹುದು.

ನೀವು ಕನ್ನಡಕಗಳನ್ನು ಬಹಳ ತೊಂದರೆ ಕೊಡುವುದಾಗಿ ಕಂಡುಕೊಂಡರೆ, ಸಂಪರ್ಕ ಮಸೂರಗಳ ಕುರಿತು ಪರಿಗಣಿಸಿರಿ. ಅವುಗಳನ್ನು ನಿರಾತಂಕವಾಗಿ ದಿನವೆಲ್ಲಾ ಅನೇಕ ಜನರಿಂದ ಧರಿಸಿಕೊಳ್ಳಲಾಗಬಹುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ