ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 10/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1994
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1995
ಇನ್ನಷ್ಟು
ಎಚ್ಚರ!—1994
g94 10/8 ಪು. 30

ನಮ್ಮ ವಾಚಕರಿಂದ

ಸ್ತನದ ಕ್ಯಾನ್ಸರ್‌ “ಸ್ತನದ ಕ್ಯಾನ್ಸರ್‌—ಪ್ರತಿಯೊಬ್ಬ ಮಹಿಳೆಯ ಭಯ” (ಎಪ್ರಿಲ್‌ 8, 1994) ಎಂಬ ಸರಣಿಗಳನ್ನು ಪ್ರಕಾಶಿಸಿದ್ದಕ್ಕಾಗಿ ನಿಮಗೆ ತುಂಬಾ ಉಪಕಾರಗಳು. ನಾನು ಆಗಾಗ್ಗೆ ನನ್ನನ್ನು ಪರೀಕ್ಷಿಸಿಕೊಂಡಿದ್ದೆ ಮತ್ತು ನನ್ನ ಗ್ರಂಥಿಗಳು ಗಟ್ಟಿಯಾಗಿದ್ದವೆಂದು ನಾನು ಅಭಿಪ್ರಯಿಸಿದ್ದೆ. ತೀರ ಅನಿಶ್ಚಿತ ಭಾವನೆಯಿಂದಾಗಿ ಅದರ ಕುರಿತು ನಾನು ಏನನ್ನೂ ಮಾಡಲಿಲ್ಲ. ಆದಾಗ್ಯೂ, ಲೇಖನವನ್ನು ಓದಿದ ಬಳಿಕ, ನಾನು ಆಸ್ಪತ್ರೆಗೆ ಹೋದೆ ಮತ್ತು ನನಗೆ ಕ್ಯಾನ್ಸರ್‌ ಇತ್ತೆಂದು ತಿಳಿದುಬಂತು. ನನಗೆ ಶಸ್ತ್ರಚಿಕಿತ್ಸೆ ಮಾಡಲಿಕ್ಕಾಗಿ ಏರ್ಪಾಡುಗಳು ಮಾಡಲ್ಪಟ್ಟವು. ನನ್ನ ಹೃದಯದಾಳದಿಂದ ನಾನು ನಿಮಗೆ ಉಪಕಾರ ಹೇಳುತ್ತೇನೆ.

ಟಿ. ವೈ., ಜಪಾನ್‌

ನನ್ನ ಶಸ್ತ್ರಚಿಕಿತ್ಸೆಯಾದಂದಿನಿಂದ, ನಾನು ಕ್ಯಾನ್ಸರ್‌ನ ಕುರಿತು ಏನನ್ನೂ ಓದಲು ಶಕ್ತಳಾಗಿರಲಿಲ್ಲ. ಆದುದರಿಂದ ಪತ್ರಿಕೆ ಬಂದಾಗ, ಅದರ ಕುರಿತು ನಾನು ಸಂತೋಷಗೊಳ್ಳಲಿಲ್ಲ. ಆದರೆ ಸಾಮಾನ್ಯವಾಗಿ ನಾನು ಎಚ್ಚರ! ಪತ್ರಿಕೆಯ ಎಲ್ಲಾ ಸಂಚಿಕೆಗಳನ್ನು ಮೊದಲಿನಿಂದ ಕೊನೆಯವರೆಗೆ ಓದುತ್ತೇನೆ, ಮತ್ತು ಆ ರಾತ್ರಿ, ಸ್ವಲ್ಪವಾಗಿ ಓದಲು ಮತ್ತು ನನಗೆ ದಿಗಿಲಾಗುವುದಾದರೆ ನಿಲ್ಲಿಸಲು ನಾನು ನಿರ್ಧರಿಸಿದೆ. ಅದನ್ನು ಓದುವುದನ್ನು ನನ್ನಿಂದ ನಿಲ್ಲಿಸಲಾಗಲಿಲ್ಲ. ಅದು ಚೆನ್ನಾಗಿ ನಿರ್ವಹಿಸಲ್ಪಟ್ಟದ್ದೂ, ಬೋಧಪ್ರದವೂ, ಮತ್ತು ಕಾಳಜಿವಹಿಸುವಂತಹದ್ದೂ ಆಗಿತ್ತು.

ಜಿ. ಕೆ., ಅಮೆರಿಕ

ಜೀವಕ್ಕೆ ಬೆದರಿಕೆಯನ್ನೊಡ್ಡುವ ಒಂದು ಅಸ್ವಸ್ಥತೆಯನ್ನು ಎದುರಿಸುವುದರ ಕುರಿತಾದ ನಮ್ಮ ಭಯಗಳನ್ನು ಯೆಹೋವನು ಹೇಗೆ ಅರ್ಥಮಾಡಿಕೊಳ್ಳುತ್ತಾನೆಂಬುದನ್ನು ನೋಡಲು ಈ ಲೇಖನವು ನನಗೆ ಸಹಾಯ ಮಾಡಿತು. ಜನರು ಈ ರೀತಿ ಭಾವಿಸುವುದಾದರೆ, ಅವರು ಬಲಹೀನರೂ ಅಥವಾ ನಂಬಿಕೆಯ ಕೊರತೆಯುಳ್ಳವರು ಎಂದು ನಾನು ಸದಾ ಆಲೋಚಿಸಿದ್ದೆ. ಯೆಹೋವನಿಗಿರುವ ಆಳವಾದ ಸಹಾನುಭೂತಿಯನ್ನು ನೋಡುವಂತೆ ಇದು ನಿಜವಾಗಿಯೂ ನನಗೆ ಸಹಾಯ ಮಾಡಿತು.

ಕೆ. ಜಿ., ಅಮೆರಿಕ

ಯಾವಾಗಲಾದರೂ ಒಂದು ಪತ್ರಿಕೆಯು ಯಾರೊಂದಿಗಾದರೂ ಮಾತಾಡಿರುವಲ್ಲಿ, ಆ ಸಂಚಿಕೆಯು ಖಂಡಿತವಾಗಿ ನನ್ನೊಂದಿಗೆ ಮಾತಾಡಿತು. ನನ್ನ ಗಂಡ ಮತ್ತು ನಾನು, ನನ್ನ ಸ್ತನದ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯ ವೈದ್ಯಕೀಯ ಬಿಲ್‌ಗಳನ್ನು ನಮ್ಮ ಸುತ್ತಲೆಲ್ಲಾ ಹರಡಿಕೊಂಡು ಸೋಫಾದ ಮೇಲೆ ಕುಳಿತಿದ್ದೆವು. ನಾವು ಬ್ಯಾಂಕ್‌ನ ಚೆಕ್‌ಗಳನ್ನು ಒಂದರ ಅನಂತರ ಒಂದು ಭರ್ತಿಮಾಡುತ್ತಿದ್ದಂತೆ, ಎಚ್ಚರ!ದ ಈ ಸಂಚಿಕೆಯನ್ನು ಅಂಚೆಯವನು ತಲಪಿಸಿದನು. ಸಾಮಾನ್ಯವಾದ ಅಭಿರುಚಿಗಿಂತ ಹೆಚ್ಚಾಗಿ, ಅದೇ ದಿನ ನಾನು ಆ ಲೇಖನವನ್ನು ಓದಿದೆ. ಲೇಖನಗಳಿಂದ ಧೈರ್ಯವನ್ನು ಪಡೆದುಕೊಳ್ಳುವ ಎಲ್ಲಾ ಸ್ತ್ರೀಯರ ಪರವಾಗಿ ನಿಮಗೆ ಉಪಕಾರಗಳು.

ಇ. ಜೆ., ಅಮೆರಿಕ

ನಗರಗಳು ನಾನು 16 ವರ್ಷ ಪ್ರಾಯದವಳು ಮತ್ತು ನಗರಗಳ ಕುರಿತಾದ ಸರಣಿಗಳನ್ನು ಓದಲು ರೋಮಾಂಚಗೊಂಡಿದ್ದೆ. ನಮ್ಮ ಆಯ್ಕೆಯ ವಿಷಯದ ಮೇಲೆ ಒಂದು ಲಘು ಭಾಷಣವನ್ನು ಕೊಡುವಂತೆ ಭೂಗೋಳಶಾಸ್ತ್ರದ ತರಗತಿಯಲ್ಲಿ ನಾವು ಕೇಳಲ್ಪಟ್ಟಿದೆವ್ದು. “ಜನರಿಂದ ಸಮೃದ್ಧವಾಗಿದ್ದ ನಗರ” (ಜನವರಿ 22, 1994, ಇಂಗ್ಲಿಷ್‌) ಎಂಬ ಲೇಖನದ ಮೇಲೆ ನಾನು ನನ್ನ ಭಾಷಣವನ್ನು ಆಧಾರಿಸಿದೆ. ನಾನು ನನ್ನ ಭಾಷಣವನ್ನು ತರಗತಿಯಲ್ಲಿ ಗಟ್ಟಿಯಾಗಿ ಓದಿದ ಬಳಿಕ, ಪ್ರತಿಯೊಬ್ಬರೂ ಶ್ಲಾಘಿಸಿದರು. ಭೂಗೋಳಶಾಸ್ತ್ರದ ಕುರಿತಾದ ನನ್ನ ತಿಳಿವಳಿಕೆಯನ್ನು ಉತ್ತಮಗೊಳಿಸಲು ನನಗೆ ಸಹಾಯ ಮಾಡಿದ್ದಕ್ಕಾಗಿ ಉಪಕಾರಗಳು.

ಟಿ. ಆರ್‌., ಜರ್ಮನಿ

“ಸ್ವತಃ ನಾವೊಂದು ನಗರವನ್ನು ಕಟ್ಟೋಣ” ಎಂಬ ಲೇಖನದಲ್ಲಿ, “1900ರಲ್ಲಿ, ಇಡೀ ಲೋಕದಲ್ಲಿ ಹತ್ತು ಲಕ್ಷ ಜನಸಂಖ್ಯೆಯಿದ್ದ ಒಂದೇ ನಗರವು ಲಂಡನ್‌ ಆಗಿತ್ತು” ಎಂದು ನೀವು ಹೇಳಿದಿರಿ. (ಜನವರಿ 8, 1994, ಇಂಗ್ಲಿಷ್‌) ಆದರೆ ಹಿಂಬಾಲಿಸಿದ ಸಂಚಿಕೆಯಲ್ಲಿ, ನೀವು ಹೇಳಿದ್ದು: “1800ಗಳ ಮಧ್ಯದಷ್ಟಕ್ಕೆ ಅದು [ಎಡೊ, ಈಗ ಟೊಕಿಯೊ ಎಂದು ಕರೆಯಲ್ಪಡುತ್ತದೆ] ಹತ್ತು ಲಕ್ಷಕ್ಕಿಂತಲೂ ಅಧಿಕ ಜನಸಂಖ್ಯೆಯನ್ನು ಹೊಂದಿತ್ತು.” ಯಾವುದು ಸರಿಯಾಗಿದೆ?

ಎಸ್‌. ಟಿ., ಜಪಾನ್‌

ಲಂಡನ್‌ಗೆ ಸಂಬಂಧಿಸಿದ ಹೇಳಿಕೆಯು ತಪ್ಪಾಗಿತ್ತೆಂಬುದು ಸ್ಪಷ್ಟ. “ಇಲಸ್ಟ್ರೇಟೆಡ್‌ ಆ್ಯಟ್ಲಸ್‌ ಆಫ್‌ ದ ವರ್ಲ್ಡ್‌” (ರ್ಯಾಂಡ್‌ ಮೆಕ್ನಾಲಿ ಆ್ಯಂಡ್‌ ಕಂಪನಿ)ಯ 1985ರ ಮುದ್ರಣದ ಮೇಲೆ ಅದು ಆಧಾರಿಸಿತ್ತು. ಆದಾಗ್ಯೂ, 1900ರಂದಿನಿಂದ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದ ಅನೇಕ ನಗರಗಳಿದ್ದವು ಎಂದು ಹೇಳುವುದರಲ್ಲಿ, “ದ ವರ್ಲ್ಡ್‌ ಆ್ಯಲ್ಮನ್ಯಾಕ್‌ ಆ್ಯಂಡ್‌ ಬುಕ್‌ ಆಫ್‌ ಫ್ಯಾಕ್ಟ್ಸ್‌ 1993” ಸರಿಯಾದದ್ದಾಗಿ ಕಂಡುಬರುತ್ತದೆ. ಗಲಿಬಿಲಿಗಾಗಿ ಕ್ಷಮಿಸಿ.—ಸಂಪಾ.

ಅನಕ್ಷರತೆ ಯಾವುದಾದರೂ ಆಸಕ್ತಿಭರಿತವಾದ ಲೇಖನವನ್ನು ಓದಿದ ಬಳಿಕ, ನಾನು ಅನೇಕವೇಳೆ ನಿಮಗೆ ಬರೆಯಲು ಮತ್ತು ಉಪಕಾರ ಹೇಳಲು ಬಯಸಿದ್ದೆ. ಆದರೆ “ಅನಕ್ಷರತೆಯ ಬಂಧಗಳ ಮುರಿಯುವಿಕೆ” (ಫೆಬ್ರವರಿ 22, 1994, ಇಂಗ್ಲಿಷ್‌) ಎಂಬ ಸರಣಿಯು, ಹಾಗೆ ಮಾಡುವಂತೆ ಕೊನೆಯದಾಗಿ ನನಗೆ ಮನವೊಪ್ಪಿಸಿದೆ. ಓದಲು ಮತ್ತು ಬರೆಯಲು ಗೊತ್ತಿರದ ಒಬ್ಬ ಸ್ತ್ರೀಯೊಂದಿಗೆ ನಾನು ಮುಂದಿನ ವಾರ ಒಂದು ಅಭ್ಯಾಸವನ್ನು ಆರಂಭಿಸುವೆನು. ನಾನು ಅದನ್ನು ಹೇಗೆ ಮಾಡಬೇಕೆಂಬುದು ನನಗೆ ತಿಳಿದಿರಲಿಲ್ಲ, ಆದರೆ ಈಗ ನನಗೆ ತಿಳಿದಿದೆ, ಈ ಲೇಖನಗಳಿಗೆ ಉಪಕಾರಗಳು. ಅವು ಸಕಾಲದಲ್ಲಿ ಬಂದು ತಲಪಿದವು!

ಎಮ್‌. ಎ. ಚ., ಇಟೆಲಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ