ನೀರಾನೆ ರಕ್ಷಣೆಗೆ!
ನಾಲ್ಕು ಟನ್ನುಗಳಷ್ಟು ಭಾರವಿರುವ ನೀರಾನೆ ನೆಲಪ್ರದೇಶದ ಅತಿದೊಡ್ಡ ಸಸ್ತನಿಗಳಲ್ಲಿ ಎರಡನೆಯದು. ಒಂದು ಬಾರಿ ಕಚ್ಚುವಲ್ಲಿ, ಅದರ ಶಕ್ತಿಯುಳ್ಳ ದವಡೆ ಒಂದು ಸಣ್ಣ ದೋಣಿಯನ್ನು ಮುರಿದು ಹಾಕಬಲ್ಲದು. ಹೀಗೆ, ಜಿಂಬಾಬೆಯ್ವ ಹ್ವಾಂಗಿ ನ್ಯಾಷನಲ್ ಪಾರ್ಕ್‌ನಲ್ಲಿ ಪುರುಷರ ಒಂದು ಗುಂಪು, ಒಂದು ನೀರಾನೆ ಅತಿಶಯೋಕ್ತಿಯಲ್ಲದ ಒಂದು ವಿಚಿತ್ರ ಸ್ವಭಾವದಿಂದ ವರ್ತಿಸುವುದನ್ನು ನೋಡಿದಾಗ ಆಶ್ಚರ್ಯಪಟ್ಟರು.
ಒಂದು ಅಣೆಕಟ್ಟಿನ ಬಳಿ ಎರಡು ಇಂಪಾಲ ಜಿಂಕೆಗಳನ್ನು ಒಂಬತ್ತು ಕಾಡುನಾಯಿಗಳು ತೀವ್ರವಾಗಿ ಬೆನ್ನಟ್ಟಿ ಹೋಗುವುದನ್ನು ಆ ಪುರುಷರು ಕಂಡರು. ಪಲಾಯನ ಮಾರ್ಗವಿಲ್ಲದ್ದಿದ ಕಾರಣ ಆ ಇಂಪಾಲಗಳು ನೀರಿಗೆ ಧುಮುಕಿದವು. ಆಗ ನಾಯಿಗಳು ಇಂಪಾಲಗಳು ಎಲ್ಲಿ ದಡಕ್ಕೆ ಬರುವವೆಂದು ನಿರೀಕ್ಷಿಸುತ್ತಾ, ನೀರಿನ ಅಂಚಿನಲ್ಲಿ ಓಡತೊಡಗಿದವು.
ಕ್ರಮೇಣ, ಆಯಾಸಗೊಂಡಿದ್ದ ಒಂದು ಇಂಪಾಲ, ನಾಯಿಗಳು ಅಲ್ಲಿ ತನಗಾಗಿ ಕಾಯುತ್ತಿವೆ ಎಂಬುದನ್ನು ಗ್ರಹಿಸದೆ ದೂರದ ತೀರಕ್ಕೆ ಹೋಗಲು ಈಜತೊಡಗಿತು. ಆದರೆ, ಇಂಪಾಲ ನೆಲವನ್ನು ಸಮೀಪಿಸಿದಾಗ, ಹತ್ತಿರದಲ್ಲಿದ್ದ ಒಂದು ನೀರಾನೆ ಆ ಇಂಪಾಲದ ಬಳಿ ಈಜುತ್ತಾ ಹೋಗುವುದನ್ನು ಈ ಜನರು ಕಂಡರು. ಅದನ್ನು ಮುಟ್ಟಿದಾಗ, ಆಫ್ರಿಕನ್ ವೈಲ್ಡ್‌ಲೈಫ್ ಪತ್ರಿಕೆ ವರದಿಸುವುದು, ಆ ನೀರಾನೆ ಇಂಪಾಲವನ್ನು “ತಿರುಗಿಸಿ ಮೃದುವಾಗಿ ತಿವಿದು ಅದು ವಿರುದ್ಧ ದಿಕ್ಕಿಗೆ ಈಜುವಂತೆ ಒತ್ತಾಯಿಸಿತು.” ಇಂಪಾಲ ಇದಕ್ಕೆ ವಿಧೇಯತೆ ತೋರಿಸಿತು. ನೀರಾನೆ ಅದನ್ನು ಹಿಂಬಾಲಿಸಿ, ಆ ಇಂಪಾಲ ಅಸ್ಥಿರತೆಯ ಸೂಚನೆಯನ್ನು ತೋರಿಸಿದಾಗ ಆಗಾಗ್ಗೆ ತಿವಿಯುತ್ತಿತ್ತು.
ಇಂಪಾಲ ನೀರಿನ ಅಂಚನ್ನು ಮುಟ್ಟಿದಾಗ, ನೀರಾನೆ ಮೃದುವಾಗಿ ಆದರೂ ದೃಢವಾಗಿ ಇಂಪಾಲವನ್ನು ತೀರಕ್ಕೆ ತಿರುಗಿಸುವುದನ್ನು ಆ ಪುರುಷರು ನೋಡಿದರು. ಇಂಪಾಲವು ತಡವರಿಸುವ ಕೆಲವು ಹೆಜ್ಜೆಗಳನ್ನು ತಕ್ಕೊಂಡು, ಆ ಬಳಿಕ ನಿಂತು ನಡುಗತೊಡಗಿತು. ಸ್ವಲ್ಪದರಲ್ಲಿ ಇಂಪಾಲವು ನೀರಿನಿಂದ ದೂರಕ್ಕೆ ನಡೆದು ಹೋಗತೊಡಗಿತು. ಅವುಗಳೆರಡೂ ಕಣ್ಣಿಗೆ ಕಾಣದ ತನಕ ನೀರಾನೆ ಅದನ್ನು ಹಿಂಬಾಲಿಸಿತು.
ಆ ಇನ್ನೊಂದು ಇಂಪಾಲಕ್ಕೆ ಏನಾಯಿತು? ಕಾಡು ನಾಯಿಗಳು, “ಈ ರಕ್ಷಣಾಕಾರ್ಯವನ್ನು ಪ್ರೇಕ್ಷಿಸುವುದರಲ್ಲಿ ಎಷ್ಟು ತಲ್ಲೀನವಾಗಿದ್ದವೆಂದರೆ ಆ ಇನ್ನೊಂದು ಇಂಪಾಲ ಅವುಗಳ ಗಮನಕ್ಕೆ ತಪ್ಪಿ ಪಲಾಯನ ಮಾಡಿತ್ತು,” ಎಂದು ಆ ಪುರುಷರು ವರದಿ ಮಾಡುತ್ತಾರೆ. (g94 10⁄8)