ನಮ್ಮ ವಾಚಕರಿಂದ
ವಿಭಾಗಿಸುವ ಭಿನ್ನತೆಗಳು “ಭಿನ್ನತೆಗಳು ನಮ್ಮನ್ನು ವಿಭಾಗಿಸಬೇಕೊ?” (ಆಗಸ್ಟ್ 8, 1996) ಎಂಬ ಲೇಖನಮಾಲೆಗಾಗಿ ನಾವು ನಮ್ಮ ಉಪಕಾರವನ್ನು ವ್ಯಕ್ತಪಡಿಸಲು ಬಯಸುತ್ತೇವೆ. ಸುಮಾರು ಒಂದು ವರ್ಷದಿಂದ ನಾವು ಇಲ್ಲಿ ಮೆಕ್ಸಿಕೊದಲ್ಲಿ ಅಂತಾರಾಷ್ಟ್ರೀಯ ಸ್ವಯಂಸೇವಕರ ತಂಡವೊಂದರ ಭಾಗವಾಗಿ ಕೆಲಸಮಾಡುತ್ತಿದ್ದೇವೆ. ಅನೇಕ ತಿಂಗಳುಗಳ ನಂತರವೂ, ನಾವು ಹೊಂದಿಕೊಳ್ಳುವುದರಲ್ಲಿ ತೊಂದರೆಗಳನ್ನು ಅನುಭವಿಸುತ್ತಾ ಇದ್ದೆವಾದರೂ, ಅದಕ್ಕೆ ಕಾರಣವೇನೆಂಬುದು ನಮಗೆ ತಿಳಿಯಲಿಲ್ಲ. ಸಮಸ್ಯೆಯು ಸಂಸ್ಕೃತಿ ಸಂಬಂಧವಾದ ಗೊಂದಲವೇ ಆಗಿತ್ತೆಂಬುದನ್ನು ಗುರುತಿಸುವಂತೆ ಆ ಲೇಖನಗಳು ನಮಗೆ ಸಹಾಯ ಮಾಡಿದವು. “ಬೇರೆ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಜೀವಿತಗಳನ್ನು ಸಂಪದ್ಯುಕ್ತಮಾಡಬಲ್ಲದು” ಎಂಬ ಹೇಳಿಕೆಗೆ ನಾವು ಲಕ್ಷ್ಯನೀಡಿದ್ದೇವೆ ಮತ್ತು ಈಗಾಗಲೇ ನಮ್ಮ ನೇಮಕದಲ್ಲಿ ಹೆಚ್ಚು ಆನಂದವನ್ನು ಕಂಡುಕೊಳ್ಳುತ್ತಿದ್ದೇವೆ.
ಕೆ. ಏಚ್. ಮತ್ತು ಜೆ. ಏಚ್., ಮೆಕ್ಸಿಕೊ
ಗಾಢ ಪರಿಣಾಮವನ್ನುಂಟುಮಾಡುವ ಈ ವಿಷಯವು ಪ್ರಸ್ತುತಪಡಿಸಲ್ಪಟ್ಟ ಹಾಗೂ ವಿಶದಪಡಿಸಲ್ಪಟ್ಟ ರೀತಿಯಿಂದ ನಾನು ಪ್ರಭಾವಿತನಾದೆ. ವಾಸ್ತವವಾಗಿ ಭಿನ್ನತೆಗಳು ಮಾನವ ಇತಿಹಾಸದಲ್ಲಿ ಬಹಳಷ್ಟು ದ್ವೇಷವನ್ನು ಕೆರಳಿಸಿವೆ. ಬೇರೆ ಸಂಸ್ಕೃತಿಗಳನ್ನು ಹೆಚ್ಚಿನ ಅರ್ಥೈಸುವಿಕೆಯಿಂದ ವೀಕ್ಷಿಸುವಂತೆ ಈ ಲೇಖನಮಾಲೆಯು ಈಗ ನನಗೆ ಸಹಾಯ ಮಾಡುವುದು. ಲೋಕದಲ್ಲಿರುವ ಪ್ರತಿಯೊಬ್ಬರೂ ಈ ಲೇಖನಗಳನ್ನು ಓದಿ, ಇತರರ ಕಡೆಗಿರುವ ತಮ್ಮ ನಕಾರಾತ್ಮಕ ನೋಟಗಳನ್ನು ಬದಲಾಯಿಸಸಾಧ್ಯವಿದ್ದಿದ್ದರೆ ಒಳ್ಳೇದಾಗಿರುತ್ತಿತ್ತು!
ಜಿ. ಓ., ನೈಜೀರಿಯ
ಈ ಲೇಖನಗಳು ನನಗೆ ಕಣ್ಣೀರು ಬರಿಸಿದವು. ನಾನು ಬಹುತೇಕ ಸಮಯ ಹೊಂದಿಕೊಂಡುಹೋಗುವಂಥ ಒಬ್ಬ ಗೆಳತಿ ನನಗಿದ್ದಾಳೆ. ಆದರೆ ನಮ್ಮ ಮಧ್ಯೆ ಒಂದು ಅದೃಶ್ಯ ಅಡ್ಡಗಟ್ಟು ಇತ್ತೆಂದು ನನಗೆ ಯಾವಾಗಲೂ ಅನಿಸುತ್ತಿತ್ತು. ನಾವು ತೀರ ಬೇರೆ ಬೇರೆ ಸಂಸ್ಕೃತಿಗಳಿಂದ ಬಂದಿದ್ದೇವೆ ಎಂಬುದನ್ನು ನಾನು ಈಗ ಗ್ರಹಿಸುತ್ತೇನೆ. ಈ ಮಾಹಿತಿಯು, ಭವಿಷ್ಯತ್ತಿನಲ್ಲಿ ನಾನು ಅವಳೊಂದಿಗೆ ವ್ಯವಹರಿಸುವ ವಿಧದಲ್ಲಿ ಒಂದು ದೊಡ್ಡ ವ್ಯತ್ಯಾಸವನ್ನು ಮಾಡುವುದು.
ಎ. ಎಫ್., ಅಮೆರಿಕ
ಮಾನವಶಾಸ್ತ್ರದ ಕುರಿತಾದ ನನ್ನ ಕಾಲೇಜ್ ತೀಸಿಸ್ (ಪ್ರೌಢ ಪ್ರಬಂಧ)ಗಾಗಿ ಸಂಶೋಧನೆಯನ್ನು ಮಾಡುತ್ತಿರುವಾಗ, ನಾನು ಆಫ್ರಿಕದ ದೇಶವೊಂದರಲ್ಲಿ ಅನೇಕ ವಾರಗಳನ್ನು ಕಳೆದೆ. ನಾನು ಸ್ಥಳಿಕ ಯೆಹೋವನ ಸಾಕ್ಷಿಗಳಲ್ಲಿ ಅನೇಕರ ಪರಿಚಯವನ್ನು ಮಾಡಿಕೊಳ್ಳಲು ಹಾಗೂ ಅವರ ಕೂಟಗಳಿಗೆ ಹಾಜರಾಗಲು ಶಕ್ತಳಾದೆ. ಅದು ರೋಮಾಂಚಕ ಅನುಭವವಾಗಿತ್ತು! ಆ ಲೇಖನವು ಹೇಳಿದಂತೆ, ಬೇರೆ ಸಂಸ್ಕೃತಿಗಳ ಜನರೊಂದಿಗೆ ಪರಿಚಿತರಾಗುವುದು ಸಂಪದ್ಯುಕ್ತಗೊಳಿಸುವಂಥದ್ದಾಗಿದೆ. ನಾನು ಹೊಸತಾದ ಹಾಗೂ ಅರ್ಥಭರಿತ ಸ್ನೇಹವನ್ನು ರೂಪಿಸಿಕೊಳ್ಳಲು ಶಕ್ತಳಾದೆ.
ಎಸ್. ಬಿ., ಇಟಲಿ
ಯೂಎಫ್‌ಓಗಳು “ಬೈಬಲಿನ ದೃಷ್ಟಿಕೋನ: ಯೂಎಫ್‌ಓಗಳು—ದೇವರಿಂದ ಬರುವ ಸಂದೇಶವಾಹಕಗಳೊ?” (ಆಗಸ್ಟ್ 8, 1996) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ನಮ್ಮ ಕ್ಷೇತ್ರದಲ್ಲಿ ಕೆಲವು ಜನರು ಭೂಬಾಹ್ಯ ಜೀವಿಗಳ ಕುರಿತಾದ ವರದಿಗಳನ್ನು ನಂಬುತ್ತಾರೆ. ಬೈಬಲು ಈ ವಿಚಾರವನ್ನು ಚರ್ಚಿಸುವುದಿಲ್ಲವೆಂದು ನೆನಸುತ್ತಾ, ಅವರಿಗೆ ಬೈಬಲಿನ ಕುರಿತು ಸಂಶಯಗಳಿವೆ. ಸೈತಾನನೂ ದೆವ್ವಗಳೂ ಜನರನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಭೂಬಾಹ್ಯ ಜೀವಿಗಳ ಕುರಿತಾದ ನಿರಾಧಾರವಾದ ವರದಿಗಳನ್ನು ನಂಬುವುದು ಅವಿವೇಕತನವಾಗಿರುವುದೆಂದು ಅವಲೋಕಿಸಲು ಈ ಲೇಖನವು ನಮಗೆ ಸಹಾಯ ಮಾಡಿದೆ.
ಎ. ಡಬ್ಲ್ಯೂ., ಟೈವಾನ್
ಟ್ಯೂಲಿಪ್‌ಗಳು “ಟ್ಯೂಲಿಪ್—ಉಗ್ರ ಚರಿತ್ರೆಯುಳ್ಳ ಒಂದು ಪುಷ್ಪ” (ಆಗಸ್ಟ್ 8, 1996) ಎಂಬ ಮೇಲ್ಬರಹವಿದ್ದ ಅದ್ಭುತಕರ ಲೇಖನಕ್ಕಾಗಿ ನಿಮಗೆ ಉಪಕಾರ. ಅದರ ಮೂಲ ಹಾಗೂ ಟ್ಯೂಲಿಪ್‌ಗಳನ್ನು ಬೆಳೆಸಲಿಕ್ಕಾಗಿರುವ ಸೂಚನೆಗಳ ಕುರಿತಾಗಿರುವ ಮಾಹಿತಿಯನ್ನು ನಾನು ಅತ್ಯಂತ ಆಸಕ್ತಿಕರವಾದದ್ದಾಗಿ ಕಂಡುಕೊಂಡೆ.
ಡಿ. ಜಿ., ಅಮೆರಿಕ
ವಿನೋದವನ್ನು ಅನುಭವಿಸುವುದು ನಾನು 12 ವರ್ಷ ಪ್ರಾಯದವಳಾಗಿದ್ದೇನೆ, ಮತ್ತು ನಾನು “ಯುವ ಜನರು ಪ್ರಶ್ನಿಸುವುದು . . . ಇತರ ಯೌವನಸ್ಥರು ಏಕೆ ಎಲ್ಲಾ ವಿನೋದವನ್ನು ಅನುಭವಿಸುತ್ತಾರೆ?” (ಆಗಸ್ಟ್ 8, 1996) ಎಂಬ ಲೇಖನದಲ್ಲಿ ನಿಜವಾಗಿಯೂ ಆನಂದಿಸಿದೆ. ನಾನು ಕೂಡ ಅದೇ ಪ್ರಶ್ನೆಯನ್ನು ಕೇಳುತ್ತಿದ್ದೆ. ನನ್ನ ಶಾಲೆಯಲ್ಲಿ ವ್ಯಕ್ತಿಯೊಬ್ಬನು, ಪಾರ್ಟಿಗಳಿಗೆ, ಡಾನ್ಸ್‌ಗಳಿಗೆ, ಹಾಗೂ ಇನ್ನಿತರ ಚಟುವಟಿಕೆಗಳಿಗೆ ಹೆಸರು ಕೊಡಸಾಧ್ಯವಿದೆ. ನಾನು ಅನೇಕವೇಳೆ ಹೋಗಲು ಬಯಸಿದ್ದೇನೆ. ಆದರೆ ಈ ಲೇಖನವು, ನಾನು ಮಾಡುವ ಆಯ್ಕೆಗಳಿಗಾಗಿ ನಾನು ಯೆಹೋವನ ಮುಂದೆ ಹೊಣೆಗಾರಳಾಗಿದ್ದೇನೆ ಎಂಬುದನ್ನು ಗಣ್ಯಮಾಡುವಂತೆ ನನಗೆ ಸಹಾಯ ಮಾಡಿದೆ. ಆದುದರಿಂದ ನಾನು ನನ್ನ ಕ್ರೈಸ್ತ ಸ್ನೇಹಿತೆಯರೊಂದಿಗೆ ಆಪ್ತ ಸಹವಾಸಮಾಡುವೆನು.
ಎ. ಎಸ್., ಅಮೆರಿಕ
ನೀವು ಈ ಲೇಖನದಲ್ಲಿ ಚರ್ಚಿಸಿರುವಂತೆಯೇ, ಆಸಾಫ [ಬೈಬಲ್ ಬರಹಗಾರ]ನಿಗಾದ ಅನಿಸಿಕೆಗಳನ್ನೇ ನಾನೂ ಅನುಭವಿಸಿದ ಸಮಯಗಳಿದ್ದವು. ಶಾಲೆಯಲ್ಲಿನ ಸಮಸ್ಯೆಗಳೊಂದಿಗೆ ವ್ಯವಹರಿಸಲು ನನಗೆ ಬೇಕಾದ ಹೆಚ್ಚಿನ ಬಲವನ್ನು ಈ ಲೇಖನವು ನನಗೆ ಕೊಟ್ಟಿತು.
ಎ. ಎಸ್., ಜಪಾನ್
ಕೆಲವು ಯುವ ಜನರು ಲೌಕಿಕ ಪಾರ್ಟಿಗಳಲ್ಲಿ ಭಾಗವಹಿಸಲು “ಅನುಮತಿಸ”ಲ್ಪಡದಿರುವ ಕಾರಣದಿಂದ, ಅವರಿಗೆ ಪ್ರತ್ಯೇಕವಾದ ಅಥವಾ ವಂಚಿತರಾದ ಅನಿಸಿಕೆಯಾಗುತ್ತದೆ ಎಂಬುದು ನಿಜ. ಆದರೆ ಯೆಹೋವನ ಸಾಕ್ಷಿಗಳ ಮಕ್ಕಳೆಲ್ಲರಿಗೂ ಅದೇ ರೀತಿಯ ಅನಿಸಿಕೆಯಾಗುವುದಿಲ್ಲ! ವೈಯಕ್ತಿಕವಾಗಿ, ಲೌಕಿಕ ಪಾರ್ಟಿಗಳಲ್ಲಿ ಸಂಭವಿಸುವ ಅನೇಕ ವಿಷಯಗಳನ್ನು ನೋಡಿ ನನಗೆ ಹೇವರಿಕೆಯುಂಟಾಗಿದೆ, ಮತ್ತು ನನ್ನ ಕ್ರೈಸ್ತ ಸ್ನೇಹಿತೆಯರಿಗೂ ಹಾಗೇ ಅನಿಸುತ್ತದೆ. ನಾವು ಹಾಗೂ ನಿಸ್ಸಂಶಯವಾಗಿ ಇನ್ನೂ ಅನೇಕರಿಗೆ ಅದರಿಂದ ವಂಚಿತರಾದ ಅನಿಸಿಕೆಯಾಗುವುದಿಲ್ಲ!
ಕೆ. ಏಚ್., ಅಮೆರಿಕ
ಬದಲಾದ ಪ್ರಾಧಾನ್ಯಗಳು “ಅವನು ತನ್ನ ಪ್ರಾಧಾನ್ಯಗಳನ್ನು ಬದಲಾಯಿಸಿದ ಕಾರಣ” (ಆಗಸ್ಟ್ 8, 1996) ಎಂಬ ಲೇಖನದಿಂದ ನಾನೆಷ್ಟು ಉತ್ತೇಜಿತಳಾದೆ ಎಂಬುದನ್ನು ನಾನು ನಿಮಗೆ ಹೇಳಲೇಬೇಕು. ನಾನು 13 ವರ್ಷಗಳಿಂದ ಪೂರ್ಣ ಸಮಯದ ಸೌವಾರ್ತಿಕಳಾಗಿ ಸೇವೆ ಮಾಡಿದ್ದೇನೆ, ಮತ್ತು ನಮ್ಮ ಅತ್ಯಧಿಕ ಒತ್ತಡಭರಿತ ಲೋಕದಲ್ಲಿ ಪ್ರಾಧಾನ್ಯಗಳನ್ನು ಇಡುವುದು ಯಾವಾಗಲೂ ಸುಲಭವಾದದ್ದಾಗಿರುವುದಿಲ್ಲ. ಪ್ರತಿ ವರ್ಷ, ಪೂರ್ಣ ಸಮಯದ ಶುಶ್ರೂಷೆಯಲ್ಲಿ ಉಳಿಯುವುದು ಒಂದು ಹೆಚ್ಚಿನ ಪಂಥಾಹ್ವಾನವಾಗಿ ಪರಿಣಮಿಸುತ್ತದೆ. ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗುವ ಸಲುವಾಗಿ ಜೆರೆಮಿಯು, ನೈಸರ್ಗಿಕ ಮೀಸಲು ಪ್ರದೇಶದ ಪಾಲಕನೋಪಾದಿ ತನ್ನ ಪ್ರತಿಫಲದಾಯಕ ಕೆಲಸವನ್ನು ಬಿಟ್ಟುಬಿಟ್ಟನೆಂಬುದರ ಕುರಿತಾಗಿ ಆಲೋಚಿಸುವುದು, ನನ್ನ ಸ್ವಂತ ಜೀವಿತದಲ್ಲಿ ಶುಶ್ರೂಷೆಯನ್ನು ಒಂದು ಪ್ರಾಧಾನ್ಯವನ್ನಾಗಿ ಇಟ್ಟುಕೊಳ್ಳುವುದು ಪ್ರಯತ್ನಕ್ಕೆ ಅರ್ಹವಾದದ್ದಾಗಿದೆ ಎಂಬ ಪುನರಾಶ್ವಾಸನೆಯನ್ನು ನನಗೆ ಕೊಟ್ಟಿತು.
ಎನ್. ಕೆ., ಅಮೆರಿಕ