ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 20 ಪು. 147-ಪು. 149 ಪ್ಯಾ. 3
  • ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಬೈಬಲನ್ನು ಉಪಯೋಗಿಸಲು ಪ್ರೋತ್ಸಾಹಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಆಸಕ್ತಿಯನ್ನು ಕೆರಳಿಸುವಂಥ ಪೀಠಿಕೆ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ವಚನಗಳ ಪರಿಚಯ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಸಭಿಕರಿಗೆ ಬೋಧಪ್ರದವಾದ ವಿಷಯ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 20 ಪು. 147-ಪು. 149 ಪ್ಯಾ. 3

ಅಧ್ಯಾಯ 20

ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು

ನೀವೇನು ಮಾಡುವ ಅಗತ್ಯವಿದೆ?

ಒಂದು ಶಾಸ್ತ್ರವಚನವನ್ನು ಓದುವ ಮೊದಲು ಕೇಳುಗರ ಮನಸ್ಸನ್ನು ಸಿದ್ಧಪಡಿಸಿರಿ.

ಇದು ಪ್ರಾಮುಖ್ಯವೇಕೆ?

ಒಂದು ಶಾಸ್ತ್ರವಚನವನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು, ಆ ವಚನವು ಏನು ಹೇಳುತ್ತದೊ ಅದರ ನಿಜ ವಿಶೇಷತೆಯನ್ನು ಸಭಿಕರು ತಿಳಿದುಕೊಳ್ಳುವಂತೆ ಸಹಾಯಮಾಡಬಲ್ಲದು.

ನಮ್ಮ ಸಭಾ ಕೂಟಗಳಲ್ಲಿ ಕೊಡಲ್ಪಡುವ ಶಿಕ್ಷಣಕ್ಕೆ ಶಾಸ್ತ್ರವಚನಗಳು ಅಸ್ತಿವಾರವನ್ನು ಒದಗಿಸುತ್ತವೆ. ಮತ್ತು ನಾವು ಕ್ಷೇತ್ರ ಶುಶ್ರೂಷೆಯಲ್ಲಿ ಏನು ಹೇಳುತ್ತೇವೊ ಅದರಲ್ಲೂ ಬೈಬಲ್‌ ವಚನಗಳು ಅತಿ ಮುಖ್ಯ ಅಂಶಗಳಾಗಿವೆ. ಆದರೆ ಅವು ನಮ್ಮ ಚರ್ಚೆಗೆ ಎಷ್ಟು ಸಹಾಯಕರವಾಗಿರುತ್ತವೆಂಬುದು, ಅವುಗಳನ್ನು ಎಷ್ಟು ಪರಿಣಾಮಕಾರಿಯಾಗಿ ಪರಿಚಯಿಸಲಾಗುತ್ತದೋ ಅದರ ಮೇಲೆ ಹೊಂದಿಕೊಂಡಿದೆ.

ಒಂದು ಶಾಸ್ತ್ರವಚನವನ್ನು ಸೂಚಿಸಿ, ಅದನ್ನು ನಿಮ್ಮೊಂದಿಗೆ ಓದುವಂತೆ ಒಬ್ಬರನ್ನು ಆಮಂತ್ರಿಸುವುದಕ್ಕಿಂತ ಹೆಚ್ಚಿನದ್ದು ಅಗತ್ಯವಾಗಿದೆ. ಒಂದು ಶಾಸ್ತ್ರವಚನವನ್ನು ಪರಿಚಯಿಸುವಾಗ ಎರಡು ಗುರಿಗಳನ್ನು ಸಾಧಿಸಲು ಪ್ರಯತ್ನಿಸಿರಿ: (1) ನಿರೀಕ್ಷೆಯನ್ನು ಕೆರಳಿಸಿರಿ, ಮತ್ತು (2) ಆ ವಚನವನ್ನು ಉಪಯೋಗಿಸುವುದರ ಕಾರಣದ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಈ ಗುರಿಗಳನ್ನು ಅನೇಕ ವಿಧಗಳಲ್ಲಿ ಸಾಧಿಸಸಾಧ್ಯವಿದೆ.

ಒಂದು ಪ್ರಶ್ನೆಯನ್ನು ಕೇಳಿರಿ. ನಿಮ್ಮ ಸಭಿಕರಿಗೆ ಉತ್ತರವು ಈಗಾಗಲೇ ವ್ಯಕ್ತವಾಗಿಲ್ಲದಿರುವಲ್ಲಿ, ಇದು ಅತಿ ಪರಿಣಾಮಕಾರಿಯಾದ ವಿಧವಾಗಿದೆ. ಜನರು ಯೋಚಿಸುವಂತೆ ಮಾಡುವ ರೀತಿಯಲ್ಲಿ ಪ್ರಶ್ನೆಯನ್ನು ಕೇಳಲು ಪ್ರಯತ್ನಿಸಿರಿ. ಯೇಸು ಹಾಗೆ ಮಾಡಿದನು. ಫರಿಸಾಯರು ಅವನನ್ನು ದೇವಾಲಯದಲ್ಲಿ ಸಮೀಪಿಸಿ, ಶಾಸ್ತ್ರಸಂಬಂಧವಾದ ಅವನ ತಿಳಿವಳಿಕೆಯನ್ನು ಬಹಿರಂಗವಾಗಿ ಪರೀಕ್ಷಿಸಿದಾಗ, ಯೇಸು ಅವರನ್ನು ಪ್ರಶ್ನಿಸಿದ್ದು: “ಬರಬೇಕಾದ ಕ್ರಿಸ್ತನ ವಿಷಯವಾಗಿ ನಿಮಗೆ ಹೇಗೆ ತೋರುತ್ತದೆ? ಆತನು ಯಾರ ಮಗನು?” ಅವರು ಅದಕ್ಕೆ “ದಾವೀದನ ಮಗನು” ಎಂದು ಉತ್ತರಕೊಟ್ಟರು. ಆ ಬಳಿಕ ಯೇಸು ಕೀರ್ತನೆ 110:1 ನ್ನು ಉಲ್ಲೇಖಿಸಿ, “ದಾವೀದನು ಪವಿತ್ರಾತ್ಮಪ್ರೇರಿತನಾಗಿ ಆತನನ್ನು ಒಡೆಯನು ಅನ್ನುವದು ಹೇಗೆ?” ಎಂದು ಕೇಳಿದನು. ಆಗ ಫರಿಸಾಯರ ಬಾಯಿ ಮುಚ್ಚಲ್ಪಟ್ಟಿತು. ಜನಸಮೂಹದವರಾದರೊ ಯೇಸುವಿಗೆ ಸಂತೋಷದಿಂದ ಕಿವಿಗೊಡುತ್ತಿದ್ದರು.—ಮತ್ತಾ. 22:41-46.

ಕ್ಷೇತ್ರ ಶುಶ್ರೂಷೆಯಲ್ಲಿ ನೀವು ಈ ಕೆಳಗಿನ ಪೀಠಿಕಾರೂಪದ ಪ್ರಶ್ನೆಗಳನ್ನು ಉಪಯೋಗಿಸಬಹುದು: “ನನಗೂ ನಿಮಗೂ ಸ್ವಂತ ಹೆಸರುಗಳಿವೆ. ದೇವರಿಗೊಂದು ಸ್ವಂತ ಹೆಸರಿದೆಯೆ? ಇದಕ್ಕೆ ಉತ್ತರವನ್ನು ನಾವು ಕೀರ್ತನೆ 83:18 ರಲ್ಲಿ ಕಂಡುಕೊಳ್ಳಬಲ್ಲೆವು.” “ಸಕಲ ಮಾನವಕುಲಕ್ಕಾಗಿ ಒಂದೇ ಸರಕಾರವು ಎಂದಾದರೂ ಇದ್ದೀತೆ? ಇದಕ್ಕೆ ದಾನಿಯೇಲ 2:44 ಹೇಗೆ ಉತ್ತರ ಕೊಡುತ್ತದೆಂಬುದನ್ನು ಗಮನಿಸಿ.” “ನಮ್ಮ ದಿನಗಳಲ್ಲಿರುವ ಪರಿಸ್ಥಿತಿಗಳ ಬಗ್ಗೆ ಬೈಬಲು ನಿಜವಾಗಿಯೂ ತಿಳಿಸುತ್ತದೆಯೆ? 2 ತಿಮೊಥೆಯ 3:1-5 ರಲ್ಲಿ ಏನು ತಿಳಿಸಲ್ಪಟ್ಟಿದೆಯೊ ಅದನ್ನು ನಿಮಗೆ ಪರಿಚಿತವಾಗಿರುವ ಪರಿಸ್ಥಿತಿಗಳೊಂದಿಗೆ ಹೋಲಿಸಿ ನೋಡಿರಿ.” “ಕಷ್ಟಾನುಭವ ಮತ್ತು ಮರಣಕ್ಕೆ ಎಂದಾದರೂ ಅಂತ್ಯವೊಂದು ಇದ್ದೀತೆ? ಪ್ರಕಟನೆ 21:4, 5 ರಲ್ಲಿ ಬೈಬಲಿನ ಉತ್ತರವನ್ನು ಕಂಡುಕೊಳ್ಳಸಾಧ್ಯವಿದೆ.”

ಒಂದು ಭಾಷಣದಲ್ಲಿ, ಶಾಸ್ತ್ರವಚನಗಳನ್ನು ಪರಿಚಯಿಸಲಿಕ್ಕಾಗಿ ಜಾಗರೂಕತೆಯಿಂದ ಪ್ರಶ್ನೆಗಳನ್ನು ಉಪಯೋಗಿಸುವುದು, ಸಭಿಕರು ಆ ವಚನಗಳ ಕಡೆಗೆ—ಅವರಿಗೆ ಅವು ಸುಪರಿಚಿತ ವಚನಗಳಾದರೂ—ಒಂದು ಹೊಸ ನೋಟವನ್ನು ಪಡೆದುಕೊಳ್ಳುವಂತೆ ಪ್ರಚೋದಿಸಬಲ್ಲದು. ಆದರೆ ಅವರು ಹೊಸ ನೋಟವನ್ನು ಪಡೆದುಕೊಳ್ಳುವರೊ? ಅದು, ನೀವು ಹಾಕುವ ಪ್ರಶ್ನೆಗಳು ಅವರು ನಿಜವಾಗಿಯೂ ಚಿಂತೆ ವಹಿಸಬೇಕಾಗಿರುವ ಪ್ರಶ್ನೆಗಳೊ ಅಲ್ಲವೊ ಎಂಬುದರ ಮೇಲೆ ಹೊಂದಿಕೊಳ್ಳಬಹುದು. ಭಾಷಣದ ವಿಷಯವಸ್ತು ನಿಮ್ಮ ಸಭಿಕರಿಗೆ ಆಸಕ್ತಿಯದ್ದಾಗಿ ಇರುವಾಗಲೂ, ಅನೇಕಬಾರಿ ಅವರು ಕೇಳಿರುವ ವಚನಗಳನ್ನು ನೀವು ಓದುವಾಗ ಅವರ ಮನಸ್ಸು ಅತ್ತಿತ್ತ ಅಲೆದಾಡಬಹುದು. ಇದು ಆಗದಂತೆ ನೋಡಿಕೊಳ್ಳಲಿಕ್ಕಾಗಿ, ನಿಮ್ಮ ಭಾಷಣವನ್ನು ಮನಸ್ಸಿಗೆ ಹಿಡಿಸುವಂತೆ ಮಾಡಲು ನೀವು ಈ ವಿಷಯದ ಕುರಿತು ಸಾಕಷ್ಟು ಮುಂದಾಲೋಚಿಸುವ ಅಗತ್ಯವಿದೆ.

ಒಂದು ಸಮಸ್ಯೆಯನ್ನು ಮುಂದಿಡಿರಿ. ನೀವು ಒಂದು ಸಮಸ್ಯೆಯನ್ನು ಮುಂದಿಟ್ಟು, ಬಳಿಕ ಅದರ ಪರಿಹಾರದೊಂದಿಗೆ ಸಂಬಂಧಿಸುವ ಒಂದು ವಚನಕ್ಕೆ ನೇರವಾಗಿ ಗಮನವನ್ನು ಸೆಳೆಯಿರಿ. ಸಭಿಕರು ಪಡೆಯಲಿರುವುದಕ್ಕಿಂತಲೂ ಹೆಚ್ಚಿನ ಪರಿಹಾರವನ್ನು ನಿರೀಕ್ಷಿಸುವಂತೆ ಮಾಡಬೇಡಿರಿ. ಅನೇಕಬಾರಿ, ಒಂದು ಶಾಸ್ತ್ರವಚನವು ಪರಿಹಾರದ ಒಂದು ಅಂಶವನ್ನು ಮಾತ್ರ ಒದಗಿಸುತ್ತದೆ. ಆದರೂ ನೀವು ಆ ವಚನವನ್ನು ಓದುವಾಗ, ಆ ಸಮಸ್ಯೆಯನ್ನು ನಿಭಾಯಿಸಲು ಅದು ಯಾವ ಮಾರ್ಗದರ್ಶನವನ್ನು ನೀಡುತ್ತದೆಂಬುದನ್ನು ಪರಿಗಣಿಸುವಂತೆ ಸಭಿಕರನ್ನು ಕೇಳಿಕೊಳ್ಳಬಹುದು.

ತದ್ರೀತಿಯಲ್ಲಿಯೇ, ದೈವಿಕ ನಡತೆಯ ಕುರಿತಾದ ಒಂದು ಮೂಲತತ್ತ್ವವನ್ನು ತಿಳಿಸಿದ ಬಳಿಕ, ಅದನ್ನು ಅನುಸರಿಸುವುದರ ಬುದ್ಧಿವಂತಿಕೆಯನ್ನು ದೃಷ್ಟಾಂತಿಸಲು ಒಂದು ಬೈಬಲ್‌ ವೃತ್ತಾಂತವನ್ನು ಉಪಯೋಗಿಸಿರಿ. ಚರ್ಚಿಸಲಾಗುವ ವಿಷಯದ ಸಂಬಂಧದಲ್ಲಿ ಒಂದು ಶಾಸ್ತ್ರವಚನವು ಎರಡು (ಅಥವಾ ಪ್ರಾಯಶಃ ಹೆಚ್ಚು) ನಿರ್ದಿಷ್ಟ ಅಂಶಗಳನ್ನು ಒಳಗೊಂಡಿರುವಲ್ಲಿ, ಸಭಿಕರು ಅವುಗಳನ್ನು ಕಂಡುಹಿಡಿಯುವಂತೆ ಕೆಲವು ಭಾಷಣಕಾರರು ಕೇಳಿಕೊಳ್ಳುತ್ತಾರೆ. ನಿರ್ದಿಷ್ಟ ಸಭಿಕರ ಒಂದು ಗುಂಪಿಗೆ ಆ ಸಮಸ್ಯೆಯು ತೀರ ಕಷ್ಟಕರವೆಂದು ತೋರಿಬರುವಲ್ಲಿ, ಅನೇಕ ಸಾಧ್ಯತೆಗಳನ್ನು ಕೊಡುವ ಮೂಲಕ ಸಭಿಕರ ಆಲೋಚನೆಯನ್ನು ಪ್ರಚೋದಿಸಿದ ಬಳಿಕ, ಆ ವಚನವೂ ಅದರ ಅನ್ವಯವೂ ಅದಕ್ಕೆ ಉತ್ತರ ನೀಡುವಂತೆ ಬಿಡಿರಿ.

ಬೈಬಲನ್ನು ಅಧಿಕೃತ ಗ್ರಂಥವಾಗಿ ಉದ್ಧರಿಸಿರಿ. ನಿಮ್ಮ ಭಾಷಣದ ವಿಷಯವಸ್ತುವಿನಲ್ಲಿ ನೀವು ಈಗಾಗಲೇ ಆಸಕ್ತಿಯನ್ನು ಕೆರಳಿಸಿದ್ದು, ಅದರ ಕೆಲವು ಅಂಶಗಳ ಕುರಿತು ಒಂದು ಅಥವಾ ಹೆಚ್ಚು ದೃಷ್ಟಿಕೋನಗಳನ್ನು ತಿಳಿಸಿರುವಲ್ಲಿ, “ಈ ವಿಷಯದಲ್ಲಿ ದೇವರ ವಾಕ್ಯವು ಏನು ಹೇಳುತ್ತದೆಂಬುದನ್ನು ಗಮನಿಸಿ” ಎಂದು ಮಾತ್ರ ಹೇಳುವ ಮೂಲಕ ನೀವು ವಚನವನ್ನು ಪರಿಚಯಿಸಬಹುದು. ನೀವು ಓದಲಿರುವ ವಚನವು ಏಕೆ ಅಧಿಕೃತವಾಗಿದೆ ಎಂಬುದನ್ನು ಇದು ತೋರಿಸುತ್ತದೆ.

ಯೆಹೋವನು ಬೈಬಲಿನ ಭಾಗಗಳನ್ನು ಬರೆಯಿಸಲಿಕ್ಕಾಗಿ ಯೋಹಾನ, ಲೂಕ, ಪೌಲ ಮತ್ತು ಪೇತ್ರರಂತಹ ಪುರುಷರನ್ನು ಉಪಯೋಗಿಸಿದನು. ಆದರೆ ಅವರು ಕೇವಲ ಲೇಖಕರಾಗಿದ್ದರು; ಯೆಹೋವನೇ ಗ್ರಂಥಕರ್ತನಾಗಿದ್ದನು. ವಿಶೇಷವಾಗಿ, ಯಾರು ಪವಿತ್ರ ಶಾಸ್ತ್ರಗಳ ವಿದ್ಯಾರ್ಥಿಗಳಾಗಿರುವುದಿಲ್ಲವೊ ಅಂಥವರೊಂದಿಗೆ ಮಾತಾಡುವಾಗ, ಒಂದು ವಚನವನ್ನು ಎತ್ತಿಹೇಳುತ್ತಾ “ಪೇತ್ರನು ಬರೆದನು” ಅಥವಾ “ಪೌಲನು ಹೇಳಿದನು” ಎಂದು ಹೇಳುವುದು, ವಚನವನ್ನು ದೇವರ ವಾಕ್ಯವೆಂದು ಗುರುತಿಸುವ ಪೀಠಿಕೆಯಷ್ಟು ಪ್ರಬಲವಾಗಿರಲಿಕ್ಕಿಲ್ಲ. ಕೆಲವು ಸಂದರ್ಭಗಳಲ್ಲಿ, ಯೆಹೋವನು ಯೆರೆಮೀಯನಿಗೆ, ಘೋಷಣೆಗಳನ್ನು “ಯೆಹೋವನ ನುಡಿಯನ್ನು ಕೇಳಿರಿ” ಮತ್ತು “ಯೆಹೋವನ ಮಾತನ್ನು ಕೇಳಿರಿ” ಎಂದು ಆರಂಭಿಸುವಂತೆ ಉಪದೇಶಿಸಿದ್ದು ಗಮನಾರ್ಹವಾಗಿದೆ. (ಯೆರೆ. 7:2; 17:20; 19:3; 22:2) ನಾವು ಶಾಸ್ತ್ರವಚನಗಳನ್ನು ಪರಿಚಯಿಸುವಾಗ ಯೆಹೋವನ ಹೆಸರನ್ನು ಉಪಯೋಗಿಸಲಿ ಇಲ್ಲದಿರಲಿ, ನಮ್ಮ ಚರ್ಚೆಯನ್ನು ಮುಗಿಸುವ ಮೊದಲು, ಬೈಬಲಿನಲ್ಲಿರುವಂಥದ್ದು ಆತನ ವಾಕ್ಯವಾಗಿದೆ ಎಂದು ತೋರಿಸಲು ಪ್ರಯತ್ನಿಸಬೇಕು.

ಪೂರ್ವಾಪರವನ್ನು ಗಣನೆಗೆ ತೆಗೆದುಕೊಳ್ಳಿರಿ. ಒಂದು ಶಾಸ್ತ್ರವಚನವನ್ನು ಹೇಗೆ ಪರಿಚಯಿಸುವುದೆಂಬುದನ್ನು ನಿರ್ಣಯಿಸುವಾಗ, ಅದರ ಪೂರ್ವಾಪರವು ನಿಮಗೆ ತಿಳಿದಿರಬೇಕು. ಕೆಲವು ಸಂದರ್ಭಗಳಲ್ಲಿ ನೀವು ನೇರವಾಗಿ ಪೂರ್ವಾಪರದ ವಿಷಯ ತಿಳಿಸುವಿರಿ; ಆದರೆ ಪೂರ್ವಾಪರವು ಬೇರೆ ವಿಧಗಳಲ್ಲಿ ನೀವು ಹೇಳುವುದನ್ನು ಪ್ರಭಾವಿಸಬಹುದು. ಉದಾಹರಣೆಗೆ, ದೇವಭಯವುಳ್ಳವನಾಗಿದ್ದ ಯೋಬನ ಮಾತುಗಳನ್ನು ನೀವು, ಅವನ ಸುಳ್ಳು ಸಾಂತ್ವನಗಾರರಲ್ಲಿ ಒಬ್ಬನು ಹೇಳಿದ ಹೇಳಿಕೆಯಂತೆಯೇ ಪರಿಚಯಿಸುವಿರೊ? ಅಪೊಸ್ತಲರ ಕೃತ್ಯಗಳ ಪುಸ್ತಕವನ್ನು ಲೂಕನು ಬರೆದರೂ, ಅವನು ಯಾಕೋಬ, ಪೇತ್ರ, ಪೌಲ, ಫಿಲಿಪ್ಪ, ಸ್ತೆಫನ ಮತ್ತು ದೇವದೂತರು ಮುಂತಾದವರನ್ನು ಉಲ್ಲೇಖಿಸುವುದು ಮಾತ್ರವಲ್ಲ, ಕ್ರೈಸ್ತರಲ್ಲದಿದ್ದ ಗಮಾಲಿಯೇಲ ಮತ್ತು ಯೆಹೂದ್ಯರನ್ನೂ ಉಲ್ಲೇಖಿಸುತ್ತಾನೆ. ನೀವು ಉದ್ಧರಿಸುವಂತಹ ವಚನದ ಕರ್ತೃ ಯಾರೆಂದು ನೀವು ಹೇಳುವಿರಿ? ಉದಾಹರಣೆಗೆ, ಎಲ್ಲ ಕೀರ್ತನೆಗಳನ್ನು ದಾವೀದನು ರಚಿಸಲಿಲ್ಲವೆಂಬುದನ್ನೂ ಎಲ್ಲ ಜ್ಞಾನೋಕ್ತಿಗಳನ್ನು ಸೊಲೊಮೋನನು ಬರೆಯಲಿಲ್ಲವೆಂಬುದನ್ನೂ ನೆನಪಿನಲ್ಲಿಡಿರಿ. ಬೈಬಲ್‌ ಲೇಖಕನು ಯಾರನ್ನು ಸಂಬೋಧಿಸುತ್ತಿದ್ದನು ಮತ್ತು ಸಾಮಾನ್ಯವಾದ ಯಾವ ವಿಷಯವು ಚರ್ಚಿಸಲ್ಪಡುತ್ತಿತ್ತೆಂದು ತಿಳಿಯುವುದು ಸಹ ಪ್ರಯೋಜನಕರವಾಗಿದೆ.

ಹಿನ್ನೆಲೆ ಮಾಹಿತಿಯನ್ನು ಉಪಯೋಗಿಸಿ. ಇದು ವಿಶೇಷವಾಗಿ, ಬೈಬಲ್‌ ವೃತ್ತಾಂತದ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಪರಿಸ್ಥಿತಿಗಳು ನೀವೀಗ ಚರ್ಚಿಸುತ್ತಿರುವ ಪರಿಸ್ಥಿತಿಗಳಿಗೆ ಹೋಲುತ್ತಿದ್ದವು ಎಂಬುದನ್ನು ನೀವು ತೋರಿಸಶಕ್ತರಾದರೆ ಪರಿಣಾಮಕಾರಿಯಾಗಿರುವುದು. ಬೇರೆ ಸಂದರ್ಭಗಳಲ್ಲಿ, ಒಂದು ನಿರ್ದಿಷ್ಟ ವಚನವನ್ನು ಅರ್ಥಮಾಡಿಕೊಳ್ಳಲು ಹಿನ್ನೆಲೆ ಮಾಹಿತಿ ಅಗತ್ಯವಾಗಿರುತ್ತದೆ. ಉದಾಹರಣೆಗೆ, ಪ್ರಾಯಶ್ಚಿತ್ತ ಯಜ್ಞದ ಕುರಿತಾದ ಭಾಷಣದಲ್ಲಿ ನೀವು ಇಬ್ರಿಯ 9:12, 24 ನ್ನು ಉಪಯೋಗಿಸಬೇಕಾಗಿರುವಲ್ಲಿ, ವಚನವನ್ನು ಓದುವುದಕ್ಕೆ ಮೊದಲು ನೀವು ದೇವದರ್ಶನ ಗುಡಾರದ ಅತ್ಯಂತ ಒಳಗಿನ ಕೋಣೆಯ ಕುರಿತು ಸಂಕ್ಷಿಪ್ತ ವಿವರವನ್ನು ಕೊಡಬೇಕಾಗಬಹುದು. ಇದು ಯೇಸು ಸ್ವರ್ಗಾರೋಹಣ ಮಾಡಿದಾಗ ಅವನು ಪ್ರವೇಶಿಸಿದ ಸ್ಥಳವನ್ನು ಚಿತ್ರಿಸುತ್ತದೆಂದು ವಚನವು ಸೂಚಿಸುತ್ತದೆ. ಆದರೆ ನೀವು ಪರಿಚಯಿಸುವ ವಚನವನ್ನು ಸಂಪೂರ್ಣವಾಗಿ ಮರೆಮಾಡುವಷ್ಟರ ಮಟ್ಟಿಗೆ ಹಿನ್ನೆಲೆ ಮಾಹಿತಿಯನ್ನು ಸೇರಿಸಬೇಡಿರಿ.

ನೀವು ಶಾಸ್ತ್ರವಚನಗಳನ್ನು ಪರಿಚಯಿಸುವ ವಿಧವನ್ನು ಉತ್ತಮಗೊಳಿಸಲಿಕ್ಕಾಗಿ, ಅನುಭವಸ್ಥ ಭಾಷಣಕಾರರು ಏನು ಮಾಡುತ್ತಾರೋ ಅದನ್ನು ವಿಶ್ಲೇಷಿಸಿರಿ. ಅವರು ಉಪಯೋಗಿಸುವ ವಿಭಿನ್ನ ವಿಧಗಳನ್ನು ಗಮನಿಸಿ. ಈ ವಿಧಾನಗಳ ಪರಿಣಾಮಕಾರಿತ್ವವನ್ನು ವಿಶ್ಲೇಷಿಸಿ. ನಿಮ್ಮ ಸ್ವಂತ ಭಾಷಣಗಳನ್ನು ತಯಾರಿಸುವಾಗ, ಮುಖ್ಯ ವಚನಗಳನ್ನು ಗುರುತಿಸಿ, ಅವುಗಳಲ್ಲಿ ಪ್ರತಿಯೊಂದು ವಚನವು ಏನನ್ನು ಸಾಧಿಸಬೇಕೆಂಬುದರ ಕುರಿತು ವಿಶೇಷವಾಗಿ ಆಲೋಚಿಸಿರಿ. ಆ ಶಾಸ್ತ್ರವಚನಗಳನ್ನು ಅತಿ ಫಲಪ್ರದವಾದ ಪರಿಣಾಮವನ್ನು ಬೀರುವಂಥ ವಿಧದಲ್ಲಿ ಉಪಯೋಗಿಸಲಿಕ್ಕಾಗಿ, ಅವುಗಳಲ್ಲಿ ಪ್ರತಿಯೊಂದನ್ನು ಹೇಗೆ ಪರಿಚಯಿಸಬೇಕೆಂಬುದನ್ನು ಜಾಗರೂಕತೆಯಿಂದ ಯೋಜಿಸಿರಿ. ನಂತರ, ನೀವು ಪರಿಚಯಿಸುವ ಎಲ್ಲ ಶಾಸ್ತ್ರವಚನಗಳಿಗೂ ಇದೇ ವಿಧಾನವನ್ನು ಉಪಯೋಗಿಸಿರಿ. ನಿಮ್ಮ ಭಾಷಣದ ಈ ವೈಶಿಷ್ಟ್ಯವು ಅಭಿವೃದ್ಧಿ ಹೊಂದುತ್ತಾ ಇರುವಾಗ, ನೀವು ದೇವರ ವಾಕ್ಯದ ಮೇಲೆ ಹೆಚ್ಚೆಚ್ಚು ಗಮನವನ್ನು ಕೇಂದ್ರೀಕರಿಸುತ್ತಿರುವಿರಿ.

ಅದನ್ನು ಮಾಡುವ ವಿಧ

  • ಆಸಕ್ತಿಯನ್ನು ಕೆರಳಿಸುವಂತಹ ವಿಧಾನವನ್ನು ಆರಿಸಿಕೊಳ್ಳುವಾಗ, ನಿಮ್ಮ ಸಭಿಕರು ಈಗಾಗಲೇ ಏನು ತಿಳಿದಿರುತ್ತಾರೊ ಅದನ್ನು ಮತ್ತು ಆ ವಿಷಯವಸ್ತುವಿನ ಕುರಿತು ಅವರ ಅನಿಸಿಕೆಯೇನು ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳಿ.

  • ಪ್ರತಿಯೊಂದು ವಚನದಿಂದ ಏನನ್ನು ಸಾಧಿಸಬೇಕೆಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಪೀಠಿಕಾ ಹೇಳಿಕೆಗಳು ಅದನ್ನು ಪ್ರತಿಬಿಂಬಿಸಲಿ.

ಅಭ್ಯಾಸಪಾಠ: ನಿಮ್ಮ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಬಹುದೆಂದು ನೀವು ನಂಬುವಂಥ ಒಂದು ಶಾಸ್ತ್ರವಚನವನ್ನು ಆರಿಸಿಕೊಳ್ಳಿರಿ. ಮತ್ತು ಇದನ್ನು ಯೋಜಿಸಿರಿ: (1) ಮನೆಯವನಲ್ಲಿ ನಿರೀಕ್ಷೆಯನ್ನು ಕೆರಳಿಸಲಿಕ್ಕಾಗಿ ನೀವು ಯಾವ ಪ್ರಶ್ನೆಯನ್ನು ಅಥವಾ ಸಮಸ್ಯೆಯನ್ನು ಮುಂದಿಡುವಿರಿ ಮತ್ತು (2) ಆ ವಚನವನ್ನು ಓದುವ ಕಾರಣದ ಮೇಲೆ ನೀವು ಹೇಗೆ ಗಮನವನ್ನು ಕೇಂದ್ರೀಕರಿಸುವಿರಿ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ