ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bsi08-1 ಪು. 25-27
  • ಬೈಬಲ್‌ ಪುಸ್ತಕ ನಂಬರ್‌ 48—ಗಲಾತ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಪುಸ್ತಕ ನಂಬರ್‌ 48—ಗಲಾತ್ಯ
  • “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ (ಮತ್ತಾಯ—ಕೊಲೊಸ್ಸೆ)
  • ಉಪಶೀರ್ಷಿಕೆಗಳು
  • ಪ್ರಯೋಜನಕರವೇಕೆ?
“ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ (ಮತ್ತಾಯ—ಕೊಲೊಸ್ಸೆ)
bsi08-1 ಪು. 25-27

ಬೈಬಲ್‌ ಪುಸ್ತಕ ನಂಬರ್‌ 48—ಗಲಾತ್ಯ

ಲೇಖಕ: ಪೌಲ

ಬರೆಯಲ್ಪಟ್ಟ ಸ್ಥಳ: ಕೊರಿಂಥ ಅಥವಾ ಸಿರಿಯದ ಅಂತಿಯೋಕ್ಯ

ಬರೆದು ಮುಗಿಸಿದ್ದು: ಸುಮಾರು ಸಾ.ಶ. 50-52

ಪೌಲನು ಗಲಾತ್ಯದಲ್ಲಿರುವ ಸಭೆಗಳಿಗೆ ಎಂದು ಗಲಾತ್ಯ 1:2ರಲ್ಲಿ ಬರೆದಾಗ ಅದರಲ್ಲಿ ಪಿಸಿದ್ಯದ ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಮತ್ತು ದೆರ್ಬೆಯ ಸಭೆಗಳು ಸೇರಿದ್ದವು ಎಂಬುದು ವ್ಯಕ್ತ. ಇವು ಬೇರೆ ಬೇರೆ ಜಿಲ್ಲೆಗಳಲ್ಲಿದ್ದರೂ ರೋಮಿನ ಗಲಾತ್ಯ ಎಂಬ ಒಂದೇ ಪ್ರಾಂತ್ಯದಲ್ಲಿದ್ದವು. ಅ. ಕೃತ್ಯಗಳು 13 ಮತ್ತು 14ನೆಯ ಅಧ್ಯಾಯಗಳು ಪೌಲನು ಬಾರ್ನಬನ ಜೊತೆಯಲ್ಲಿ ಈ ಪ್ರಾಂತ್ಯದಲ್ಲಿ ನಡೆಸಿದ ಪ್ರಥಮ ಮಿಷನೆರಿ ಪ್ರಯಾಣದ ಕುರಿತು ತಿಳಿಸುತ್ತವೆ. ಇದು ಗಲಾತ್ಯ ಸಭೆಗಳ ಸಂಘಟನೆಗೆ ನಡೆಸಿತ್ತು. ಇವುಗಳಲ್ಲಿ ಯೆಹೂದ್ಯರು ಮತ್ತು ಯೆಹೂದ್ಯೇತರರು ಮತ್ತು ನಿಸ್ಸಂದೇಹವಾಗಿ, ಕೆಲ್ಟ್‌ ಅಥವಾ ಗಾಲ್‌ ಕುಲದವರೂ ಇದ್ದರು. ಪೌಲನು ಸುಮಾರು ಸಾ.ಶ. 46ರಲ್ಲಿ ಯೆರೂಸಲೇಮಿಗೆ ಭೇಟಿಕೊಟ್ಟ ಸ್ವಲ್ಪದರಲ್ಲಿ ಇದು ಸಂಭವಿಸಿತ್ತು.—ಅ.ಕೃ. 12:25.

2 ಸಾ.ಶ. 49ರಲ್ಲಿ ಪೌಲ ಮತ್ತು ಸೀಲ, ಗಲಾತ್ಯ ಪ್ರದೇಶಕ್ಕೆ ಪೌಲನ ಎರಡನೆಯ ಮಿಷನೆರಿ ಸಂಚಾರವನ್ನು ಆರಂಭಿಸಿದರು. ಇದರ ಪರಿಣಾಮವಾಗಿ, “ಸಭೆಗಳು ಕ್ರಿಸ್ತ ನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು.” (ಅ.ಕೃ. 16:5; 15:40, 41; 16:1, 2) ಆದರೂ, ಅವರ ಬೆನ್ನಿಗೆ ಸುಳ್ಳು ಬೋಧಕರೂ ಯೆಹೂದಿ ಸಂಪ್ರದಾಯವಾದಿಗಳೂ ಬಂದು ಗಲಾತ್ಯ ಸಭೆಯ ಕೆಲವರನ್ನು, ಸುನ್ನತಿ ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವುದು ನಿಜ ಕ್ರೈಸ್ತತ್ವದ ಆವಶ್ಯಕ ಭಾಗವಾಗಿದೆ ಎಂದು ನಂಬುವಂತೆ ಮನವೊಪ್ಪಿಸಿದರು. ಈ ಮಧ್ಯೆ ಪೌಲನು ಮೂಸ್ಯವನ್ನು ದಾಟಿ ಮಕೆದೋನ್ಯ ಮತ್ತು ಗ್ರೀಸ್‌ಗೆ ಹೋಗಿ, ಕೊನೆಗೆ ಕೊರಿಂಥಕ್ಕೆ ಬಂದು ಅಲ್ಲಿ ಸಹೋದರರೊಂದಿಗೆ 18 ತಿಂಗಳುಗಳಿಗೂ ಹೆಚ್ಚು ಸಮಯ ಕಳೆದನು. ಬಳಿಕ ಸಾ.ಶ. 52ರಲ್ಲಿ ಅವನು ಎಫೆಸದ ಮಾರ್ಗವಾಗಿ, ತನ್ನ ಸ್ವಂತ ಕಾರ್ಯಕೇಂದ್ರವಾದ ಸಿರಿಯದ ಅಂತಿಯೋಕ್ಯಕ್ಕೆ ಅದೇ ವರುಷ ಬಂದು ಮುಟ್ಟಿದನು.—ಅ. ಕೃ. 16:8, 11, 12; 17:15; 18:1, 11, 18-22.

3 ಪೌಲನು ಗಲಾತ್ಯದವರಿಗೆ ಪತ್ರವನ್ನು ಎಲ್ಲಿ ಮತ್ತು ಯಾವಾಗ ಬರೆದನು? ಯೆಹೂದಿ ಸಂಪ್ರದಾಯವಾದಿಗಳ ಕೆಲಸಗಳ ಕುರಿತು ಅವನಿಗೆ ಸುದ್ದಿ ಮುಟ್ಟಿದೊಡನೆ ಅವನು ಬರೆದನೆಂಬುದರಲ್ಲಿ ಸಂದೇಹವಿಲ್ಲ. ಅವನು ಕೊರಿಂಥ, ಎಫೆಸ ಅಥವಾ ಸಿರಿಯದ ಅಂತಿಯೋಕ್ಯದಿಂದ ಬರೆದಿದ್ದಿರಬಹುದು. ಅವನು ಸಾ.ಶ. 50-52ರಲ್ಲಿ 18 ತಿಂಗಳು ಕೊರಿಂಥದಲ್ಲಿ ತಂಗಿದ್ದಾಗ ಇದನ್ನು ಬರೆದಿರುವುದು ಸಾಧ್ಯ. ಏಕೆಂದರೆ ಗಲಾತ್ಯದಿಂದ ಈ ಮಾಹಿತಿ ಅವನಿಗೆ ಬಂದು ಮುಟ್ಟಲು ಸಮಯ ತಗಲಿರಬೇಕು. ಅವನು ಎಫೆಸದಿಂದ ಇದನ್ನು ಬರೆದಿರುವುದು ಅಸಂಭಾವ್ಯ, ಏಕೆಂದರೆ ಅವನು ಹಿಂದೆ ಪ್ರಯಾಣಿಸುತ್ತಿದ್ದಾಗ ಅಲ್ಲಿ ಸ್ವಲ್ಪ ಕಾಲ ಮಾತ್ರ ತಂಗಿದ್ದನು. ಆದರೆ ಬಳಿಕ ಅವನು ತನ್ನ ಸ್ವಂತ ಕಾರ್ಯಕೇಂದ್ರವಾಗಿದ್ದ ಸಿರಿಯದ ಅಂತಿಯೋಕ್ಯದಲ್ಲಿ ಬಹುಶಃ ಸಾ.ಶ. 52ರ ಬೇಸಗೆಯಲ್ಲಿ ‘ಕೆಲವು ಕಾಲ ಇದ್ದನು.’ ಈ ನಗರ ಮತ್ತು ಏಷ್ಯಾ ಮೈನರ್‌ನ ಮಧ್ಯೆ ಸುದ್ದಿ ಸಂಪರ್ಕ ಸುಲಭಲಭ್ಯವಾಗಿದ್ದುದರಿಂದ ಈ ಯೆಹೂದಿ ಸಂಪ್ರದಾಯವಾದಿಗಳ ಕುರಿತ ವರದಿ ಅವನಿಗೆ ಸಿಕ್ಕಿದಾಗ, ಅವನು ಸಿರಿಯದ ಅಂತಿಯೋಕ್ಯದಿಂದ ಇದೇ ಸಮಯದಲ್ಲಿ ಗಲಾತ್ಯದವರಿಗೆ ಪತ್ರವನ್ನು ಬರೆದಿರುವ ಸಾಧ್ಯತೆಯಿದೆ.—ಅ.ಕೃ. 18:23.

4 ಈ ಪತ್ರವು ಪೌಲನನ್ನು, “ಮನುಷ್ಯರ ಕಡೆಯಿಂದಾಗಲಿ ಮನುಷ್ಯನ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ ಯೇಸುಕ್ರಿಸ್ತನ ಮುಖಾಂತರವೂ . . . ತಂದೆಯಾದ ದೇವರಿಂದಲೂ ಅಪೊಸ್ತಲೋದ್ಯೋಗವನ್ನು” ಹೊಂದಿದವನೆಂದು ವರ್ಣಿಸುತ್ತದೆ. ಪೌಲನ ಜೀವನ ಮತ್ತು ಅಪೊಸ್ತಲತ್ವದ ಅನೇಕ ನಿಜತ್ವಗಳನ್ನು ಅದು ತಿಳಿಯಪಡಿಸುತ್ತದೆ. ಅಪೊಸ್ತಲನಾಗಿದ್ದ ಅವನು ಯೆರೂಸಲೇಮಿನಲ್ಲಿದ್ದ ಅಪೊಸ್ತಲರಿಗೆ ಹೊಂದಿಕೆಯಲ್ಲಿ ಕಾರ್ಯನಡಿಸಿದನು ಮಾತ್ರವಲ್ಲ, ಇನ್ನೊಬ್ಬ ಅಪೊಸ್ತಲನಾಗಿದ್ದ ಪೇತ್ರನನ್ನು ತಿದ್ದಲು ಕೂಡ ತನ್ನ ಅಧಿಕಾರವನ್ನು ನಿರ್ವಹಿಸಿದನೆಂದೂ ಅದು ಹೇಳುತ್ತದೆ.—ಗಲಾ. 1:1, 13-24; 2:1-14.

5 ಗಲಾತ್ಯ ಪುಸ್ತಕದ ವಿಶ್ವಾಸಾರ್ಹತೆ ಮತ್ತು ಅಧಿಕೃತತೆಯನ್ನು ಯಾವ ನಿಜತ್ವಗಳು ಬೆಂಬಲಿಸುತ್ತವೆ? ಇದನ್ನು ಐರನೀಯಸ್‌, ಅಲೆಗ್ಸಾಂಡ್ರಿಯದ ಕ್ಲೆಮೆಂಟ್‌, ಟೆರ್ಟಲಿಯನ್‌ ಮತ್ತು ಆರಜನ್‌—ಇವರ ಬರಹಗಳು ಹೆಸರಿಸುತ್ತ ಸೂಚಿಸುತ್ತವೆ. ಅಲ್ಲದೆ, ಇದನ್ನು ಈ ಕೆಳಗಿನ ಉನ್ನತ ದರ್ಜೆಯ ಪ್ರಮುಖ ಬೈಬಲ್‌ ಹಸ್ತಪ್ರತಿಗಳಲ್ಲೂ ಸೇರಿಸಲಾಗಿದೆ: ಸೈನಾಯ್ಟಿಕ್‌, ಅಲೆಗ್ಸಾಂಡ್ರೀನ್‌, ವ್ಯಾಟಿಕನ್‌ ನಂ. 1209; ಕೋಡೆಕ್ಸ್‌ ಈಫ್ರೇಮೀ ಸಿರೀರೀಸ್ಕ್ರಿಪ್ಟಸ್‌, ಕೋಡೆಕ್ಸ್‌ ಬಿಸೇ ಮತ್ತು ಚೆಸ್ಟರ್‌ ಬೀಟೀ ಪಪೈರಸ್‌ ನಂ. 2 (P46). ಇದಲ್ಲದೆ, ಬೇರೆ ಗ್ರೀಕ್‌ ಶಾಸ್ತ್ರ ಬರಹಗಳೊಂದಿಗೆ ಮತ್ತು ಯಾವುದನ್ನು ಅದು ಪದೇ ಪದೇ ಸೂಚಿಸಿ ಹೇಳುತ್ತದೊ ಆ ಹೀಬ್ರು ಶಾಸ್ತ್ರಗಳಿಗೆ ಇದು ಪೂರ್ಣ ಸಹಮತದಲ್ಲಿದೆ.

6 “ಗಲಾತ್ಯದಲ್ಲಿರುವ ಸಭೆಗಳಿಗೆ” ಪೌಲನು ಬರೆದ ಈ ಪ್ರಬಲ ಹಾಗೂ ಬಿರುಸಾದ ಪತ್ರದಲ್ಲಿ, ಅವನು (1) (ಯೆಹೂದಿ ಸಂಪ್ರದಾಯವಾದಿಗಳು ಅವನ ಅಪೊಸ್ತಲತ್ವದ ಬಗ್ಗೆ ಸವಾಲೆತ್ತಿದ ನಿಜತ್ವದ ಕಾರಣ) ತಾನು ನಿಜ ಅಪೊಸ್ತಲನೆಂದು ಮತ್ತು (2) ಧರ್ಮಶಾಸ್ತ್ರದ ಕ್ರಿಯೆಗಳಿಂದಲ್ಲ, ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯ ಮೂಲಕವೇ ನೀತಿವಂತರೆಂಬ ನಿರ್ಣಯ ಸಿಗುತ್ತದೆ ಹಾಗೂ ಕ್ರೈಸ್ತರಿಗೆ ಸುನ್ನತಿ ಅನಾವಶ್ಯಕವೆಂದು ಅವನು ರುಜುಪಡಿಸುತ್ತಾನೆ. ಒಬ್ಬ ಕಾರ್ಯದರ್ಶಿಯಿಂದ ತನ್ನ ಪತ್ರಗಳನ್ನು ಬರೆಯಿಸುವುದು ಪೌಲನ ಪದ್ಧತಿಯಾಗಿದ್ದರೂ, ಗಲಾತ್ಯ ಪುಸ್ತಕವನ್ನು ಅವನು ತಾನೇ, ‘ಸ್ವಂತ ಕೈಯಿಂದ ದೊಡ್ಡ ಅಕ್ಷರಗಳಲ್ಲಿ’ ಬರೆದನು. (6:11) ಈ ಪುಸ್ತಕದಲ್ಲಿ ಅಡಕವಾಗಿದ್ದ ವಿಷಯಗಳು ಪೌಲನಿಗೂ ಗಲಾತ್ಯದವರಿಗೂ ಅತಿ ಪ್ರಾಮುಖ್ಯವಾಗಿದ್ದವು. ಸತ್ಯ ಕ್ರೈಸ್ತರಿಗೆ ಯೇಸು ಕ್ರಿಸ್ತನ ಮೂಲಕ ಬರುವ ಸ್ವಾತಂತ್ರ್ಯಕ್ಕೆ ಕೃತಜ್ಞತೆಯನ್ನು ಈ ಪುಸ್ತಕವು ಒತ್ತಿಹೇಳುತ್ತದೆ.

ಪ್ರಯೋಜನಕರವೇಕೆ?

14 ಗಲಾತ್ಯದವರಿಗೆ ಬರೆದ ಪತ್ರವು, ಒಂದುಕಾಲದಲ್ಲಿ ಧ್ವಂಸಕಾರಕ ಹಿಂಸಕನಾಗಿದ್ದ ಪೌಲನು ಈಗ ಅನ್ಯಜನರಿಗೆ ಎಚ್ಚರಿಕೆಯ ಅಪೊಸ್ತಲನಾಗಿದ್ದು, ತನ್ನ ಸಹೋದರರ ಪರವಾಗಿ ಹೋರಾಡಲು ಸದಾ ಸಿದ್ಧನಾಗಿದ್ದ ವ್ಯಕ್ತಿಯಾಗಿ ವರ್ಣಿಸುತ್ತದೆ. (1:13-16, 23; 5:7-12) ಒಬ್ಬ ಮೇಲ್ವಿಚಾರಕನು ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ಕ್ಷಿಪ್ರ ಕಾರ್ಯತತ್ಪರತೆಯನ್ನು ತೋರಿಸಿ ಸುಳ್ಳು ವಾದಗಳನ್ನು ತರ್ಕಬದ್ಧತೆಯಿಂದ ಮತ್ತು ಶಾಸ್ತ್ರಾಧಾರದಿಂದ ಕೆಡವಿಬಿಡಬೇಕೆಂತಲೂ ಅವನು ತನ್ನ ಮಾದರಿಯಿಂದ ತೋರಿಸಿದನು.—1:6-9; 3:1-6.

15 ಈ ಪತ್ರವು ಗಲಾತ್ಯದಲ್ಲಿದ್ದ ಸಭೆಗಳಿಗೆ, ಕ್ರಿಸ್ತನಲ್ಲಿದ್ದ ಅವರ ಸ್ವಾತಂತ್ರ್ಯವನ್ನು ಸ್ಪಷ್ಟವಾಗಿ ಸ್ಥಾಪಿಸುವುದಕ್ಕೆ ಮತ್ತು ಸುವಾರ್ತೆಯನ್ನು ತಿರುಚಿಹೇಳುವವರಲ್ಲಿ ನಂಬಿಕೆಯಿಡದಂತೆ ಮಾಡಲು ಪ್ರಯೋಜನಕರವಾಗಿತ್ತು. ನೀತಿನಿರ್ಣಯ ಮಾಡಲ್ಪಡುವುದು ನಂಬಿಕೆಯ ಮುಖಾಂತರವೇ ಎಂಬುದನ್ನೂ ಒಬ್ಬನು ರಕ್ಷಣೆ ಹೊಂದಲು ಸುನ್ನತಿಯು ಇನ್ನು ಮುಂದೆ ಅನಾವಶ್ಯಕವೆಂಬುದನ್ನೂ ಇದು ಸ್ಪಷ್ಟಪಡಿಸಿತು. (2:16; 3:8; 5:6) ಇಂಥ ಶಾರೀರಿಕ ಭೇದಗಳನ್ನು ಬದಿಗಿರಿಸಿದ್ದರಿಂದ ದೇವರ ಸಭೆಯ ಯೆಹೂದ್ಯರೂ ಅನ್ಯರೂ ಒಂದಾಗುವಂತಾಯಿತು. ಧರ್ಮಶಾಸ್ತ್ರದಿಂದ ಸ್ವತಂತ್ರರಾಗುವುದು ಶರೀರದಾಶೆಗಳನ್ನು ಪ್ರಚೋದಿಸುವುದಕ್ಕಾಗಿರುವುದಿಲ್ಲ, ಏಕೆಂದರೆ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು” ಎಂಬ ಮೂಲತತ್ವವು ಇನ್ನೂ ಜಾರಿಯಲ್ಲಿತ್ತು. ಅದು ಕ್ರೈಸ್ತರಿಗೆ ಇಂದು ಸಹ ಮಾರ್ಗದರ್ಶಕ-ಫಲಕವಾಗಿ ಮುಂದುವರಿಯುತ್ತದೆ.—5:14.

16 ಪೌಲನ ಈ ಪತ್ರವು ಬೋಧನೆಯ ಅನೇಕ ವಿಷಯಗಳಲ್ಲಿ ಹೀಬ್ರು ಶಾಸ್ತ್ರಗಳ ಮೇಲಾಧರಿಸಿರುವ ಪ್ರಬಲ ದೃಷ್ಟಾಂತಗಳನ್ನು ಬಳಸುತ್ತಾ ಗಲಾತ್ಯದವರಿಗೆ ನೆರವಾಯಿತು. ಇದು, ಯೆಶಾಯ 54:1-6ರ ಪ್ರೇರಿತ ಅರ್ಥವಿವರಣೆಯನ್ನು ಕೊಟ್ಟು, ಯೆಹೋವನ ಸ್ತ್ರೀ ಆಗಿರುವವಳು “ಮೇಲಣ ಯೆರೂಸಲೇಮ್‌” ಎಂಬವಳೇ ಎಂದು ಗುರುತಿಸಿತು. ಹಾಗರಳು ಮತ್ತು ಸಾರಳು ಸೇರಿದ್ದ ಆ “ಸಾಂಕೇತಿಕ ನಾಟಕ”ವನ್ನು ಅದು ವಿವರಿಸಿ, ದೇವರ ವಾಗ್ದಾನಗಳ ಬಾಧ್ಯಸ್ಥರು ಕ್ರಿಸ್ತನಿಂದ ವಿಮೋಚಿಸಲ್ಪಟ್ಟವರೇ ಹೊರತು ಧರ್ಮಶಾಸ್ತ್ರಕ್ಕೆ ದಾಸರಾಗಿರುವವರಲ್ಲ ಎಂದು ತೋರಿಸಿತು. (ಗಲಾ. 4:21-26; ಆದಿ. 16:1-4, 15; 21:1-3, 8-13) ಧರ್ಮಶಾಸ್ತ್ರದ ಒಡಂಬಡಿಕೆಯು ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಯನ್ನು ರದ್ದುಗೊಳಿಸುವ ಬದಲು ಅದಕ್ಕೆ ಕೂಡಿಸಿತು ಎಂಬುದನ್ನು ಅದು ಸ್ಪಷ್ಟವಾಗಿ ವಿವರಿಸಿತು. ಈ ಎರಡು ಒಡಂಬಡಿಕೆಗಳ ನಡುವಣ ಕಾಲವು 430 ವರುಷಗಳು ಎಂಬುದನ್ನೂ ಇದು ತೋರಿಸಿಕೊಟ್ಟಿತು. ಬೈಬಲ್‌ ಕಾಲಗಣನೆಯಲ್ಲಿ ಇದು ಪ್ರಾಮುಖ್ಯವಾಗಿದೆ. (ಗಲಾ. 3:17, 18, 23, 24) ಇಂದು ಕ್ರೈಸ್ತ ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ಈ ವಿಷಯಗಳ ದಾಖಲೆಯನ್ನು ಸಂರಕ್ಷಿಸಿಡಲಾಗಿದೆ.

17 ಅತಿ ಪ್ರಾಮುಖ್ಯವಾದ ವಿಷಯವೇನಂದರೆ, ಯಾವುದನ್ನು ಸಕಲ ಪ್ರವಾದಿಗಳೂ ಮುನ್ನೋಡುತ್ತಿದ್ದರೊ, ಆ ರಾಜ್ಯ ಸಂತಾನವಾದವನನ್ನು ಗಲಾತ್ಯ ಪುಸ್ತಕವು ನಿಚ್ಚಳವಾಗಿ ಗುರುತಿಸುತ್ತದೆ. “ದೇವರು ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳನ್ನು ಮಾಡಿದನು. . . . ಆ ಒಬ್ಬನು ಕ್ರಿಸ್ತನೇ.” ಕ್ರಿಸ್ತನಲ್ಲಿ ನಂಬಿಕೆಯಿಂದಾಗಿ ದೇವರ ಪುತ್ರರಾಗಿರುವವರು ಈ ಸಂತಾನದೊಳಕ್ಕೆ ದತ್ತು ತೆಗೆದುಕೊಳ್ಳಲ್ಪಟ್ಟಿದ್ದಾರೆಂದು ಅದು ತೋರಿಸಿತು. “ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರೂ ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.” (3:16, 29) ಗಲಾತ್ಯ ಪುಸ್ತಕದಲ್ಲಿ ಕೊಡಲಾಗಿರುವ ಈ ಉತ್ತಮ ಪ್ರಬೋಧನೆಗೆ ರಾಜ್ಯ ಬಾಧ್ಯಸ್ಥರು ಹಾಗೂ ಅವರೊಂದಿಗೆ ಕೆಲಸ ಮಾಡುವವರು ಕಿವಿಗೊಡಬೇಕು: “ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿರಿಸಬೇಕೆಂದು ನಮಗೆ ಬಿಡುಗಡೆಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ.” “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು. . . . ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.”—5:1; 6:9, 10.

18 ಅಂತಿಮವಾಗಿ, ಶರೀರಭಾವದ ಕರ್ಮಗಳನ್ನು ನಡೆಸುವವರು “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ” ಎಂಬ ಪ್ರಬಲವಾದ ಎಚ್ಚರಿಕೆಯು ಕೊಡಲ್ಪಟ್ಟಿದೆ. ಆದುದರಿಂದ, ಎಲ್ಲರೂ ಲೌಕಿಕ ಹೊಲಸಿಗೆ ಮತ್ತು ಜಗಳಗಳಿಗೆ ಪೂರ್ಣವಾಗಿ ಬೆನ್ನುಹಾಕಿ ದೇವರಾತ್ಮದ ಫಲಗಳನ್ನು, ಅಂದರೆ, ‘ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ ಮತ್ತು ಶಮೆದಮೆ’ ಇವುಗಳನ್ನು ಫಲಿಸುವುದರ ಮೇಲೆಯೇ ತಮ್ಮ ಹೃದಯಗಳನ್ನು ಪೂರ್ಣವಾಗಿ ಕೇಂದ್ರೀಕರಿಸಲಿ.—5:19-23.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ