ಪರಿವಿಡಿ
ಯೆ ಹೋ ವ ನ ಸಾ ಕ್ಷಿ ಗ ಳು
ನಮ್ಮ ಪರಿಚಯ
ಅಧ್ಯಾಯ 1ರಿಂದ 4ರಲ್ಲಿ . . .
ಯೆಹೋವನ ಸಾಕ್ಷಿಗಳಾದ ನಾವು 239 ರಾಷ್ಟ್ರಗಳಲ್ಲಿ ಜಾತಿ ಭಾಷೆ ಎಂಬ ಭೇದಭಾವವಿಲ್ಲದೆ ಒಗ್ಗಟ್ಟಾಗಿದ್ದೇವೆ. ನಮ್ಮ ಈ ಒಗ್ಗಟ್ಟಿಗೆ ಕಾರಣವೇನು? ನಾವು ಯಾವ ರೀತಿಯ ಜನರು? ಈ ಅಧ್ಯಾಯಗಳಲ್ಲಿ ಉತ್ತರವಿದೆ.
ನಮ್ಮ ಕಾರ್ಯಚಟುವಟಿಕೆ
ಅಧ್ಯಾಯ 5ರಿಂದ 14ರಲ್ಲಿ . . .
ಜನರಿಗೆ ದೇವರ ಸರ್ಕಾರದ ಬಗ್ಗೆ ಸುವಾರ್ತೆ ತಿಳಿಸಲು ನಾವು ಹೆಚ್ಚು ಆದ್ಯತೆ ನೀಡುತ್ತೇವೆ. ಆರಾಧನೆಗಾಗಿ ನಾವು ‘ರಾಜ್ಯ ಸಭಾಗೃಹ’ಗಳಲ್ಲಿ ಸಭೆಸೇರುತ್ತೇವೆ. ಅಲ್ಲಿ ಬೈಬಲ್ ವಿಷಯಗಳನ್ನು ಚರ್ಚಿಸಲಾಗುತ್ತದೆ. ನಮ್ಮ ಸಭಾಕೂಟಗಳು ಹೇಗೆ ನಡೆಯುತ್ತವೆ? ಯಾರೆಲ್ಲ ಹಾಜರಾಗಬಹುದು? ಈ ಅಧ್ಯಾಯಗಳು ಉತ್ತರ ನೀಡುತ್ತವೆ.
ನಮ್ಮ ಸಂಘಟನೆ
ಅಧ್ಯಾಯ 15ರಿಂದ 28ರಲ್ಲಿ . . .
ನಮ್ಮದು ಲಾಭೋದ್ದೇಶವಿಲ್ಲದ ಅಂತಾರಾಷ್ಟ್ರೀಯ ಧಾರ್ಮಿಕ ಸಂಘಟನೆ. ಈ ಸಂಘಟನೆಯಲ್ಲಿ ಇರುವವರೆಲ್ಲರೂ ದೇವರ ಸೇವೆ ಮಾಡಲು ಸ್ವಯಂಪ್ರೇರಿತರಾಗಿ ಬಂದವರು. ಈ ನಮ್ಮ ಸಂಘಟನೆ ರೂಪುಗೊಂಡಿರುವುದು ಹೇಗೆ? ಕಾರ್ಯನಿರ್ವಹಣೆ ಹೇಗಿದೆ? ಹಣಕಾಸು ಎಲ್ಲಿಂದ ಬರುತ್ತದೆ? ನಮ್ಮ ಸಂಘಟನೆ ಇಂದು ನಿಜಕ್ಕೂ ಯೆಹೋವ ದೇವರ ಇಷ್ಟವನ್ನು ಮಾಡುತ್ತಿದೆಯಾ? ಉತ್ತರ ಈ ಅಧ್ಯಾಯಗಳಲ್ಲಿದೆ.