ಮೋವಾಬ್ಯರ ಕಲ್ಲು—ನಾಶಗೊಳಿಸಲ್ಪಟ್ಟಿತು ಆದರೆ ನಷ್ಟಹೊಂದಲಿಲ್ಲ
ಮೋವಾಬ್ಯರ, ಯಾ ಮೇಷ, ಕಲ್ಲನ್ನು 1868ರಲ್ಲಿ ಅದರ ಅನ್ವೇಷಣೆಯಾದ ವರ್ಷದಲ್ಲಿಯೇ, ಬೇಕುಬೇಕೆಂದೇ ತುಂಡುಮಾಡಲಾಯಿತು. ಇದು ಸುಮಾರು 3,000 ವರ್ಷಗಳಷ್ಟು ಹಳೆಯದ್ದು. ಇದು ನಾಜೂಕಾದ ಕಪ್ಪು ಅಗ್ನಿಶಿಲೆಯ ಒಂದು ತುಂಡು, ಮೇಲ್ಗಡೆ ಅಚ್ಚುಕಟಾಗ್ಟಿ ವರ್ತುಲಾಕಾರದಲ್ಲಿದ್ದು, ಸುಮಾರು ನಾಲ್ಕು ಅಡಿ ಎತ್ತರವಿದೆ, ಎರಡು ಅಡಿಗಳಿಗಿಂತ ಸ್ವಲ್ಪ ಅಗಲವಿದೆ ಮತ್ತು ಹೆಚ್ಚುಕಡಿಮೆ ಎರಡು ಅಡಿ ದಪ್ಪವಿದೆ. ಇದು ತುಂಡುಮಾಡಲ್ಪಟ್ಟ ಸ್ವಲ್ಪ ಸಮಯದ ನಂತರ, 2 ದೊಡ್ಡ ಮತ್ತು 18 ಚಿಕ್ಕ ಚೂರುಗಳು ಪುನಃ ಕಂಡುಹಿಡಿಯಲಾಯಿತು, ಆದರೆ ಕಲ್ಲಿನ ಮೂರನೆಯ ಒಂದು ಭಾಗವು ಸರಿಪಡಿಸಲಾಗದಂಥ ರೀತಿಯಲ್ಲಿ ನಷ್ಟ ಹೊಂದಿತು.
ಅಂಥಾ ಅತಿ ಅಸಾಧಾರಣ ಕೌಶಲ್ಯತೆಯ ವಸ್ತು ಸದಾಕಾಲಕ್ಕೋ ಎಂಬಂತೆ ಹೇಗೆ ನಷ್ಟಗೊಳಿಸಲ್ಪಟ್ಟಿತು? ಮತ್ತು ಬೈಬಲಿನ ವಿದ್ಯಾರ್ಥಿಗಳಿಗೆ ಇದು ಎಷ್ಟೊಂದು ಬೆಲೆಯುಳ್ಳದ್ದಾಗಿದೆ?
ಒಳಸಂಚು ಮತ್ತು ಅಪನಂಬಿಕೆ
ಆ ಕಲ್ಲನ್ನು ಮುರಿಯದೇ ಇದ್ದ ಸ್ಥಿತಿಯಲ್ಲಿ ನೋಡಿದ ಮೊದಲ ಹಾಗೂ ಕೊನೆಯ ಯೂರೋಪ್ಯನು ಎಫ್.ಎ.ಕೆಯ್ಲಿನ್ ಆಗಿದ್ದನು. ಮೃತ ಸಮುದ್ರದ ಈಶಾನ್ಯ ದಿಕ್ಕಿನಲ್ಲಿ ಡಿಬೋನ್ ಅವಶೇಷಗಳ ನಡುವೆ ಅದು ಬಿದ್ದುಕೊಂಡಿತ್ತು. ಅವನು ಅದರ ಉಬ್ಬಿದ ಅಂಚುಗಳ ನಡುವಿನಲ್ಲಿದ್ದ 35 ಸಾಲುಗಳ ಬರವಣಿಗೆಯ ಸಂಕ್ಷಿಪ್ತ ರೂಪರೇಷೆಗಳನ್ನು ಮಾಡಿದನು ಮತ್ತು ಯೆರೂಸಲೇಮಿಗೆ ಹಿಂತೆರಳಿದ ನಂತರ, ಅವನ ಕಂಡುಹಿಡಿತವನ್ನು ಅವನ ಪ್ರಸ್ಸಿಯನ್ ವರಿಷ್ಠನಿಗೆ ವರದಿ ಮಾಡಿದನು. ಈ ಬರವಣಿಗೆಯು ಫೊನಿಶಿಯನ್ ಎಂದು ಕೂಡಲೇ ಗುರುತಿಸಲ್ಪಟ್ಟಿತು ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಲಾಯಿತು. ಆ ಕಲ್ಲನ್ನು ಖರೀದಿಸಲು ರೋಯಲ್ ಮ್ಯೂಸಿಯಮ್ ಆಫ್ ಬರ್ಲಿನ್ ಹಣವನ್ನು ಹಾಕಿತು, ಆದರೆ ಅದಕ್ಕಾಗಿ ಇತರ ಆಸಕ್ತ ಪಂಗಡಗಳು ಪೈಪೋಟಿ ನಡಿಸಿದವು. ಅವರ ಪಾರಿತೋಷಕದ ಬೆಲೆಯಿಂದ ಜಾಗೃತರಾಗಿ, ಸ್ಥಳೀಯ ಷೇಕ್ಗಳು ಅದನ್ನು ಅಡಗಿಸಿಟ್ಟರು ಮತ್ತು ಅದರ ಬೆಲೆಯನ್ನು ಅಸಂಬದ್ಧ ಮಟ್ಟಕ್ಕೆ ಏರಿಸಿದರು.
ಒಬ್ಬ ಫ್ರೆಂಚ್ ಅಗಿತಶಾಸ್ತ್ರಜ್ಞನು ಆ ಬರವಣಿಗೆಯ ಒದ್ದೆ ಕಾಗದದ ಅಚ್ಚೊತ್ತಿಗೆಯನ್ನು ತೆಗೆಯಲು ಶಕ್ತನಾದನು, ಆದರೆ ಈ ಅಚ್ಚೊತ್ತಿಗೆಯನ್ನು ಅದು ಒಣಗುವ ಮೊದಲೇ ಎಳೆದುಕೊಳ್ಳಬೇಕಾಗಿದ್ದುದರಿಂದ, ಅಚಿನ್ಚ ಪಡಿರೂಪವು ಓದಲಿಕ್ಕೆ ಅತಿ ದುರ್ಲಭವಾಗಿತ್ತು. ತನ್ಮಧ್ಯೆ, ಅಲೆದಾಡುವ ಅರಬ್ಬೀಯವನಿಗೆ [ಬೆಡುಯೀನ್] ದಮಾಸ್ಕದಿಂದ, ಆ ಕಲ್ಲನ್ನು ಸರಕಾರೀ ಅಧಿಕಾರಿಗಳಿಗೆ ಒಪ್ಪಿಸಬೇಕೆಂದು ಆಜ್ಞೆಗಳು ಬಂದವು. ಅದಕ್ಕನುಸಾರ ವರ್ತಿಸುವದರ ಬದಲು, ಅದನ್ನು ನಾಶಮಾಡಲು ಬೆಡುಯೀನ್ ನಿರ್ಧರಿಸಿದ್ದನು. ಆದುದರಿಂದ ಅವರು ಈ ಅಮೂಲ್ಯ ಕಲ್ಲು ಅವಶೇಷದ ಸುತ್ತಲೂ ಬೆಂಕಿ ಹಾಕಿದರು ಮತ್ತು ಅದಕ್ಕೆ ಪುನಃ ಪುನಃ ನೀರು ಎರಚುವದನ್ನು ಮುಂದುವರಿಸಿದರು. ಕಲ್ಲು ಚೂರುಚೂರಾಯಿತು, ಆ ಚೂರುಗಳನ್ನು ಸ್ಥಳೀಕ ಕುಟುಂಬಗಳು ಬಲುಬೇಗನೇ ವಿತರಿಸಿದರು, ಅದನ್ನು ಧಾನ್ಯದ ಕಣಜಗಳಲ್ಲಿ ಇಟ್ಟರು, ಪ್ರಾಯಶಃ ಅವರ ಬೆಳೆಗಳಿಗೆ ಅದರಿಂದ ಆಶೀರ್ವಾದ ದೊರಕುತ್ತದೆ ಎಂಬ ಕಾರಣದಿಂದಿರಬಹುದು. ಈ ಮೂಲಕ ವೈಯಕ್ತಿಕವಾಗಿ ಚದರಿಸಲ್ಪಟ್ಟ ಚೂರುಗಳನ್ನು ಮಾರಾಟಮಾಡುವಾಗ ಚೌಕಾಶಿ ಮಾಡಲು ಅತ್ಯುತ್ತಮ ರೀತಿಯಾಗಿತ್ತು.
ಬೈಬಲಿನ ಇತಿಹಾಸವು ಪುನಃ ಜೀವಂತವಾಗುತ್ತದೆ
ಅಂಟುಲೇಪ ಅಳವಡಿಸುವಿಕೆಗಳ ಮತ್ತು ಕಾಗದದ ಅಚ್ಚೊತ್ತುವಿಕೆಗಳ ಸಹಾಯದಿಂದ, ಖರೀದಿಸಲ್ಪಟ್ಟ ತುಂಡುಗಳನ್ನು ಬಳಸಲಾಯಿತು, ಹೀಗೆ ಕಟ್ಟಕಡೆಗೆ ಕಲ್ಲಿನ ಮೇಲಿದ್ದ ಬರವಣಿಗೆಯನ್ನು ಪುನಃ ಪಡೆಯಲಾಯಿತು. ಪೂರ್ಣ ಪರಿಪಾಠವು ಪ್ರಕಟಿಸಲ್ಪಟ್ಟಾಗ, ವಿದ್ವಾಂಸರು ಅಚ್ಚರಿಗೊಂಡರು. ಪ್ರಾಚೀನ ಸ್ಮಾರಕಕಂಭವೆಂದು ಆ ಕಾಲದಲ್ಲಿ ವಿವರಿಸಲ್ಪಟ್ಟದ್ದು, “ಎಂದೆಂದಿಗೂ ಅನ್ವೇಷಿಸಲ್ಪಟ್ಟದರ್ದಲ್ಲಿ ಒಂದೇ ಕಲ್ಲಿನ ಅತಿ ವೈಶಿಷ್ಟತೆಯ ಶಿಲಾಶಾಸನವಾಗಿರುತ್ತದೆ.”
ಮೋವಾಬಿನ ಅರಸ ಮೇಷನು, ಇಸ್ರಾಯೇಲ್ಯರ ಪ್ರಭುತ್ವವನ್ನು ಮೇಷನು ಮುರಿದದ್ದನ್ನು ಸ್ಮಾರಕವಾಗಿ ಆಚರಿಸಲು ಅವನ ದೇವರಾದ ಕೇಮೋಶನಿಗೆ ಈ ಮೋವಾಬ್ಯರ ಕಲ್ಲನ್ನು ನಿಲ್ಲಿಸಲಾಗಿತ್ತು. ಇದರಲ್ಲಿ ಅವನು ಹೇಳುವದು, ಕೇಮೋಶನಿಂದ ಆ ಪ್ರಭುತ್ವವು 40 ವರ್ಷಗಳ ತನಕ ಅನುಮತಿಸಲ್ಪಟ್ಟಿತ್ತು ಯಾಕಂದರೆ “ಅವನು ತನ್ನ ದೇಶದೊಂದಿಗೆ ಕೋಪಗೊಂಡಿದ್ದನು.” 2 ಅರಸುಗಳ ಮೂರನೆಯ ಅಧ್ಯಾಯದಲ್ಲಿ ದಾಖಲಿಸಿದ ಘಟನೆಗಳಿಗೆ ಮೋವಾಬಿನ ಈ ದಂಗೆಯು ಸಂಬಂಧಿಸಿದೆ ಎಂದು ಸಾಮಾನ್ಯವಾಗಿ ಎಣಿಸಲ್ಪಡುತ್ತದೆ. ಸ್ಮಾರಕ ಕಂಭದಲ್ಲಿ, ಮೇಷನು, ತಾನು ಅತಿ ಧಾರ್ಮಿಕತೆಯುಳ್ಳವನೆಂದೂ, ನಗರಗಳನ್ನೂ ಮತ್ತು ರಾಜಮಾರ್ಗಗಳನ್ನೂ ಕಟ್ಟಿಸಿದವನೆಂದೂ, ಮತ್ತು ಇಸ್ರಾಯೇಲ್ಯರ ಮೇಲೆ ಜಯ ಪಡೆದಿದ್ದೇನೆಂದೂ ಜಂಭ ಕೊಚ್ಚಿಕೊಳ್ಳುತ್ತಾನೆ. ಇದರಲ್ಲಿ, ಎಲ್ಲಾ ಗೌರವವನ್ನು ಅವನ ದೇವರಾದ ಕೇಮೋಶನಿಗೆ ಸಲ್ಲಿಸುತ್ತಾನೆ. ಬೈಬಲ್ ದಾಖಲಿಸಿರುವ— ಸ್ವತಃ ಮೇಷನ ಸೋಲು ಮತ್ತು ಅವನ ಸ್ವಂತ ಮಗನ ಯಜ್ಞ—ಇವು ಒಬ್ಬನು ನಿರೀಕ್ಷಿಸುವ ಮೇರೆಗೆ, ಅವನ ಸ್ವತಃ ಮಹಿಮೆಗೇರಿಸುವ ಬರವಣಿಗೆಯಲ್ಲಿ ಬಿಡಲ್ಪಟ್ಟಿವೆ.
ಅವನು ವಶಮಾಡಿಕೊಂಡಿದ್ದನು ಎಂದು ಮೇಷನಿಂದ ಪಟ್ಟಿ ಮಾಡಲ್ಪಟ್ಟ ಅನೇಕ ಸ್ಥಳಗಳು ಬೈಬಲಿನಲ್ಲಿ ನಮೂದಿಸಲ್ಪಟ್ಟಿವೆ, ಅವುಗಳಲ್ಲಿ ಮೆದಿಬಾ, ಅಟಾರೊತ್, ನೆಬೋ, ಮತ್ತು ಯಾಹಜ್. ಈ ರೀತಿಯಲ್ಲಿ, ಬೈಬಲ್ ದಾಖಲೆಗಳ ನಿಖರತೆಯನ್ನು ಈ ಕಲ್ಲು ಬೆಂಬಲಿಸುತ್ತದೆ. ಆದಾಗ್ಯೂ, ಇದರಲ್ಲಿ ಎದ್ದು ಕಾಣುವದೇನಂದರೆ, ಅವನ ದಾಖಲೆಯ 18ನೆಯ ಸಾಲಿನಲ್ಲಿ ಇಸ್ರಾಯೇಲ್ ದೇವರ ಹೆಸರು, ನಾಲ್ಕಕ್ಷರಗಳ YHWH ಪದವನ್ನು ಮೇಷನು ಬಳಸಿರುವದೇ. ಅಲ್ಲಿ ಅವನು ಕೊಚ್ಚಿಕೊಳ್ಳುವದು: “ನಾನು ಅಲ್ಲಿ [ನೆಬೋ] ಯಾಹೇಯ್ವ [ಪಾತ್ರೆಗಳನ್ನು] ಹಿಡಿದೆನು, ಅವುಗಳನ್ನು ಕೇಮೋಶನ ಮುಂದೆ ಎಳೆದು ತಂದೆನು.” ಬೈಬಲಿನ ಹೊರತಾಗಿ, ಹೊರಗಡೆ ದೈವಿಕ ನಾಮವನ್ನು ಬಳಸಿರುವದರ ಅತಿ ಪುರಾತನ ದಾಖಲೆ ಪ್ರಾಯಶಃ ಇದಾಗಿರಬಹುದು.
1873ರಲ್ಲಿ ಮೋವಾಬ್ಯರ ಕಲ್ಲು ಅಂಟುಲೇಪಗಳ ಅಳವಡಿಸುವಿಕೆಗಳ ಮೂಲಕ ತಪ್ಪಿ ಹೋಗಿರುವ ವಾಕ್ಯಗಳನ್ನು ಬರೆದು ಕೂಡಿಸಲ್ಪಟ್ಟು, ಅದನ್ನು ಪುನಃ ಸ್ಥಾಪಿಸಲಾಯಿತು ಮತ್ತು ಲೌವ್ರ್ ಮ್ಯೂಸಿಯಮ್, ಪ್ಯಾರಿಸ್ನಲ್ಲಿ ಪ್ರದರ್ಶನೆಗಾಗಿ ಇಡಲಾಗಿದೆ. ಈಗ ಅದು ಅಲ್ಲಿಯೇ ಇದೆ. ಇದರ ಒಂದು ಪಡಿರೂಪವನ್ನು ಬ್ರಿಟಿಷ್ ಮ್ಯೂಸಿಯಮ್, ಲಂಡನ್ನಲ್ಲಿ ಕಾಣಬಹುದು. (w90 4/15)
[ಪುಟ 27 ರಲ್ಲಿರುವ ಚಿತ್ರಗಳು]
(ಮೇಲಿನದ್ದು) ಮೋವಾಬ್ ದೇಶ
[ಕೃಪೆ]
Pictorial Archive (Near Eastern History) Est.
(ಎಡಗಡೆ) ಪುನಃ ರಚಿಸಲ್ಪಟ್ಟ ಮೋವಾಬ್ಯರ ಕಲ್ಲು
[ಕೃಪೆ]
Musée du Louvre, Paris
(ಬಲಗಡೆ) ಕೌಶಲ್ಯದ ರಚನೆಯ ವಸ್ತುವಿನ ಮೇಲೆ ತೋರುವ ನಾಲ್ಕಕ್ಷರಗಳು
ಬ್ರಿಟಿಷ್ ಮ್ಯೂಸಿಯಮ್ನಲ್ಲಿ ಬೈಬಲ್
[ಕೃಪೆ]
The Bible in the British Museum