ಯೆಹೋವನಿಗೆ ಸುತ್ತಿಗಳನ್ನು ಹಾಡಿರಿ
“ಯೆಹೋವನ ಸ್ತೋತ್ರವನ್ನು ಗಾನಮಾಡೋಣ; ಆತನು ಮಹಾಜಯಶಾಲಿಯಾದನು.”—ವಿಮೋಚನಕಾಂಡ 15:1.
1. ಯೆಹೋವನ ಯಾವ ವೈಶಿಷ್ಟ್ಯಗಳು ಮತ್ತು ಗುಣಗಳು ಆತನನ್ನು ಸ್ತುತಿಸಲು ನಮಗೆ ಕಾರಣವನ್ನೀಯುತ್ತವೆ?
ಹದಿಮೂರು ಬಾರಿ ಕೀರ್ತನೆ 150ನೇ ಅಧ್ಯಾಯವು ಯೆಹೋವ ಅಥವಾ ಯಾಹುವನ್ನು ಸ್ತುತಿಸುವಂತೆ ಆಜ್ಞೆಯನ್ನು ಕೊಡುತ್ತದೆ. ಕೊನೆಯ ವಚನವು ಪ್ರಕಟಿಸುವುದು: “ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ; ಯಾಹುವಿಗೆ ಸ್ತೋತ್ರ!” ಯೆಹೋವನ ಸಾಕ್ಷಿಗಳೋಪಾದಿ, ಯೆಹೋವನು ನಮ್ಮ ಸ್ತುತಿಗೆ ಅರ್ಹನಾಗಿದ್ದಾನೆಂದು ನಾವು ತಿಳಿದಿದ್ದೇವೆ. ಆತನು ವಿಶ್ವ ಸಾರ್ವಭೌಮನೂ, ಸರ್ವೋನ್ನತನೂ, ಸರ್ವಯುಗಗಳ ಅರಸನೂ, ನಮ್ಮ ಸೃಷ್ಟಿಕರ್ತನೂ, ನಮ್ಮ ಪೋಷಕನೂ ಆಗಿದ್ದಾನೆ. ಅನೇಕ ವಿಧಗಳಲ್ಲಿ ಆತನು ಅಸಮಾನನೂ, ಅದ್ವಿತೀಯನೂ, ಅಸದೃಶನೂ, ಅನುಪಮನೂ ಆಗಿದ್ದಾನೆ. ಆತನು ಸರ್ವಜ್ಞನೂ, ಮಹಾಮಹಿಮನೂ, ನ್ಯಾಯದಲ್ಲಿ ಪರಿಪೂರ್ಣನು, ಮತ್ತು ಪ್ರೀತಿಯ ವ್ಯಕ್ತೀಕರಣವೂ ಆಗಿದ್ದಾನೆ. ಇತರರೆಲ್ಲರಿಗಿಂತಲೂ ಆತನು ಒಳ್ಳೆಯವನಾಗಿದ್ದಾನೆ; ಆತನು ನಿಷ್ಠನಾಗಿದ್ದಾನೆ. (ಲೂಕ 18:19; ಪ್ರಕಟನೆ 15:3, 4) ಆತನು ನಮ್ಮ ಸ್ತುತಿಗೆ ಅರ್ಹನಾಗಿದ್ದಾನೊ? ಅತ್ಯಂತ ನಿಶ್ಚಯವಾಗಿ!
2. ಯೆಹೋವನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲಿಕ್ಕಾಗಿ ನಮಗೆ ಯಾವ ಕಾರಣಗಳಿವೆ?
2 ಯೆಹೋವನು ಕೇವಲ ನಮ್ಮ ಆರಾಧನೆ ಮತ್ತು ಸ್ತುತಿಗೆ ಮಾತ್ರವಲ್ಲ, ಆತನು ನಮಗಾಗಿ ಮಾಡಿರುವ ಎಲ್ಲಾ ವಿಷಯಗಳಿಗಾಗಿ ನಮ್ಮ ಕೃತಜ್ಞತೆ ಮತ್ತು ಉಪಕಾರ ಸ್ಮರಣೆಗೂ ಅರ್ಹನಾಗಿದ್ದಾನೆ. ಆತನು “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳ” ದಾತನಾಗಿದ್ದಾನೆ. (ಯಾಕೋಬ 1:17) ಆತನು ಎಲ್ಲಾ ಜೀವಗಳ ಬುಗ್ಗೆ, ಉಗಮ ಆಗಿದ್ದಾನೆ. (ಕೀರ್ತನೆ 36:9) ಆತನು ನಮ್ಮ ಮಹಾ ಸೃಷ್ಟಿಕರ್ತನಾಗಿರುವುದರಿಂದ, ಮಾನವ ಕುಲದ ಸದಸ್ಯರೋಪಾದಿ ನಾವು ಆನಂದಿಸುವ ಎಲ್ಲಾ ವಿಷಯಗಳು ಆತನಿಂದ ಕೊಡಲ್ಪಟ್ಟವುಗಳಾಗಿವೆ. (ಯೆಶಾಯ 42:5) ಆತನ ಆತ್ಮ, ಆತನ ಸಂಸ್ಥೆ, ಮತ್ತು ಆತನ ವಾಕ್ಯದ ಮೂಲಕ ನಮಗೆ ಬರುವಂತಹ ಎಲ್ಲಾ ಆತ್ಮಿಕ ಆಶೀರ್ವಾದಗಳ ದಾತನೂ ಆತನಾಗಿದ್ದಾನೆ. ತನ್ನ ಮಗನನ್ನು ನಮ್ಮ ಪ್ರಾಯಶ್ಚಿತಕ್ತನೋಪಾದಿ ಆತನು ಒದಗಿಸಿದ ಆಧಾರದ ಮೇಲೆ ಪಾಪಗಳಿಗಾಗಿ ನಮಗೆ ಕ್ಷಮೆಯಿದೆ. (ಯೋಹಾನ 3:16) ‘ನೀತಿಯು ವಾಸವಾಗಲಿರುವ ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ದ ಕುರಿತಾದ ರಾಜ್ಯ ನಿರೀಕ್ಷೆಯು ನಮಗಿದೆ. (2 ಪೇತ್ರ 3:13) ಜೊತೆ ಕ್ರೈಸ್ತರೊಂದಿಗೆ ಉತ್ತಮ ಸಹವಾಸವನ್ನು ನಾವು ಹೊಂದಿದ್ದೇವೆ. (ರೋಮಾಪುರ 1:11, 12) ಆತನ ಸಾಕ್ಷಿಗಳಾಗಿರುವುದರಿಂದ ಗೌರವ ಮತ್ತು ಆಶೀರ್ವಾದಗಳು ನಮಗಿವೆ. (ಯೆಶಾಯ 43:10-12) ಮತ್ತು ಪ್ರಾರ್ಥನೆಯ ಅತ್ಯಮೂಲ್ಯ ಸುಯೋಗವು ನಮಗಿದೆ. (ಮತ್ತಾಯ 6:9-13) ಯೆಹೋವನಿಗೆ ಕೃತಜ್ಞತೆಯನ್ನು ಸಲ್ಲಿಸಲು ನಮಗೆ ಅನೇಕ ಕಾರಣಗಳಿವೆಯೆಂಬುದು ಸತ್ಯ!
ನಾವು ಯೆಹೋವನನ್ನು ಸ್ತುತಿಸಸಾಧ್ಯವಿರುವ ವಿಧಗಳು
3. ಯಾವ ವಿವಿಧ ವಿಧಗಳಲ್ಲಿ ನಾವು ಯೆಹೋವನನ್ನು ಸ್ತುತಿಸಲು ಮತ್ತು ಆತನಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಸಾಧ್ಯವಿದೆ?
3 ಯೆಹೋವನ ದೃಢ ನಿಷ್ಠೆಯುಳ್ಳ ಸೇವಕರೋಪಾದಿ ನಾವು ಆತನನ್ನು ಸ್ತುತಿಸಲು ಮತ್ತು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಹೇಗೆ ಸಾಧ್ಯವಿದೆ? ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವುದರ ಮೂಲಕ ನಾವು ಹಾಗೆ ಮಾಡಸಾಧ್ಯವಿದೆ—ಮನೆಯಿಂದ ಮನೆಗೆ ಸಾಕ್ಷಿನೀಡುವುದು, ಪುನರ್ಭೇಟಿಗಳನ್ನು ಮಾಡುವುದು, ಬೈಬಲ್ ಅಭ್ಯಾಸಗಳನ್ನು ನಡಿಸುವುದು, ಮತ್ತು ರಸ್ತೆ ಬದಿಯ ಸಾಕ್ಷಿಕಾರ್ಯದಲ್ಲಿ ತೊಡಗಿಸಿಕೊಳ್ಳುವುದು. ಸಂದರ್ಭವು ಅನುಮತಿಸುವಾಗಲೆಲ್ಲಾ ಅವಿಧಿ ಸಾಕ್ಷಿಯನ್ನು ನೀಡುವುದರ ಮೂಲಕ ಸಹ ನಾವು ಆತನನ್ನು ಸ್ತುತಿಸಬಲ್ಲೆವು. ತದನಂತರ, ನಮ್ಮ ಯಥಾರ್ಥ ನಡತೆಯ ಮೂಲಕ, ನಮ್ಮ ಉಡುಪು ಮತ್ತು ಕೇಶಾಲಂಕಾರದಲ್ಲಿ ನೀಟಾಗಿಯೂ ಮತ್ತು ಮಿತವಾದ ರೀತಿಯಲ್ಲಿರುವುದರ ಮೂಲಕ ಸಹ ನಾವು ಯೆಹೋವನನ್ನು ಸ್ತುತಿಸಬಲ್ಲೆವು. ಈ ವಿಷಯಗಳಲ್ಲಿ ಆದರ್ಶಪ್ರಾಯರಾಗಿರುವುದರಿಂದ ಆಗಿಂದಾಗ್ಗೆ ಯೆಹೋವನ ಸಾಕ್ಷಿಗಳು ಪ್ರಶಂಸಿಸಲ್ಪಟ್ಟಿದ್ದಾರೆ. ಅಲ್ಲದೆ, ಪ್ರಾರ್ಥನೆಯ ಮೂಲಕ ನಾವಾತನನ್ನು ಸ್ತುತಿಸಲು ಮತ್ತು ಉಪಕಾರವನ್ನು ಸಲ್ಲಿಸಲು ಸಾಧ್ಯವಿದೆ.—ನೋಡಿರಿ 1 ಪೂರ್ವಕಾಲವೃತ್ತಾಂತ 29:10-13.
4. ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯನ್ನು ನಾವು ಸ್ತುತಿಸಸಾಧ್ಯವಿರುವ ಅತ್ಯಂತ ಮನೋಹರವಾದ ವಿಧಾನಗಳಲ್ಲಿ ಒಂದು ಯಾವುದಾಗಿದೆ?
4 ಇದಲ್ಲದೆ, ಇಂಪಾದ ರಾಜ್ಯ ಸಂಗೀತಗಳೊಂದಿಗೆ ಆತನನ್ನು ಮತ್ತು ಆತನ ಸದ್ಗುಣಗಳನ್ನು ಕೊಂಡಾಡುವುದು ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯನ್ನು ನಾವು ಸ್ತುತಿಸಸಾಧ್ಯವಿರುವ ಅತ್ಯಂತ ಮನೋಹರವಾದ ವಿಧಾನಗಳಲ್ಲೊಂದಾಗಿದೆ. ಮಾನವ ಧ್ವನಿಯು ಅತ್ಯಂತ ಸೊಗಸಾದ ಸಂಗೀತ ಸಾಧನವಾಗಿದೆಯೆಂದು, ಅನೇಕ ಸಂಗೀತಗಾರರು ಮತ್ತು ರಚನಕಾರರು ಒಪ್ಪಿಕೊಳ್ಳುತ್ತಾರೆ. ಹಾಡುವಿಕೆಯಲ್ಲಿ ಎತ್ತರಿಸಲ್ಪಟ್ಟ ಮಾನವ ಧ್ವನಿಯನ್ನು ಆಲಿಸುವುದರಲ್ಲಿ ಹೆಚ್ಚು ತೃಪ್ತಿಯಿರುವ ಕಾರಣದಿಂದಲೇ ಶಾಸ್ತ್ರೀಯ ಸಂಗೀತದ ಪಾರಂಗತರು ಸಂಗೀತಮಯ ನಾಟಕಗಳನ್ನು ಬರೆಯಲು ಮಹತ್ವಾಕಾಂಕ್ಷೆಪಟ್ಟರು.
5. ಯಾವ ಕಾರಣಗಳಿಗಾಗಿ ನಾವು ರಾಜ್ಯ ಸಂಗೀತದ ನಮ್ಮ ಹಾಡುವಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು?
5 ಮಾನವರು ಹಾಡುವುದನ್ನು, ವಿಶೇಷವಾಗಿ ಸ್ತುತಿ ಮತ್ತು ಕೃತಜ್ಞತಾ ಗೀತೆಗಳನ್ನು ಅವರು ಹಾಡುತ್ತಿರುವಾಗ, ಅದನ್ನು ಕೇಳಿ ಯೆಹೋವನು ಎಷ್ಟೊಂದು ಆನಂದಿಸುತ್ತಾನೆ! ಆದುದರಿಂದ ಖಂಡಿತವಾಗಿಯೂ, ನಮ್ಮ ವಿವಿಧ ಒಟ್ಟುಗೂಡುವಿಕೆಗಳಲ್ಲಿ—ಸಭಾ ಕೂಟಗಳು, ಸರ್ಕಿಟ್ ಸಮ್ಮೇಳನಗಳು, ವಿಶೇಷ ಸಮ್ಮೇಳನ ದಿನಗಳು, ಜಿಲ್ಲಾ ಅಧಿವೇಶನಗಳು, ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳು—ರಾಜ್ಯ ಸಂಗೀತಗಳ ನಮ್ಮ ಹಾಡುವಿಕೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ನಮ್ಮ ಸಂಗೀತ ಪುಸ್ತಕವು ನಿಜವಾಗಿಯೂ ಆಹ್ಲಾದಕರ ಸುಸರ್ವಗಳಿಂದ ವಿಪುಲವಾಗಿದೆ, ಅದರ ಮನೋಹರತೆಯು ಹೊರಗಿನವರಿಂದ ಅಡಿಗಡಿಗೆ ಪ್ರಶಂಸಿಸಲ್ಪಟ್ಟಿದೆ. ರಾಜ್ಯ ಸಂಗೀತಗಳನ್ನು ಹಾಡುವ ಆತ್ಮದಲ್ಲಿ ನಾವು ಹೆಚ್ಚು ತಲ್ಲೀನರಾದಂತೆ, ನಮಗೆ ಮತ್ತು ಇತರರಿಗೆ ನಾವು ಹೆಚ್ಚು ಉಲ್ಲಾಸವನ್ನು ತರುತ್ತೇವೆ.
ಬೈಬಲ್ ಸಮಯಗಳಲ್ಲಿ ಯೆಹೋವನಿಗೆ ಸ್ತುತಿಗಳನ್ನು ಹಾಡುವುದು
6. ಕೆಂಪು ಸಮುದ್ರದಲ್ಲಿ ತಮ್ಮ ಪಾರುಗೊಳಿಸುವಿಕೆಗಾಗಿ ಇಸ್ರಾಯೇಲ್ಯರು ಗಣ್ಯತೆಯನ್ನು ಹೇಗೆ ವ್ಯಕ್ತಪಡಿಸಿದರು?
6 ಕೆಂಪು ಸಮುದ್ರದಲ್ಲಿ ಫರೋಹನ ಸೈನ್ಯದಿಂದ ಪಾರುಗೊಳಿಸಲ್ಪಟ್ಟಾಗ, ಮೋಶೆ ಮತ್ತು ಇತರ ಇಸ್ರಾಯೇಲ್ಯರು ವಿಜಯೋತ್ಸಾಹದಿಂದ ಹಾಡಿದರೆಂದು ದೇವರ ವಾಕ್ಯವು ನಮಗೆ ಹೇಳುತ್ತದೆ. ಅವರ ಹಾಡು ಈ ಮಾತುಗಳಿಂದ ಆರಂಭವಾಯಿತು: “ಯೆಹೋವನ ಸ್ತೋತ್ರವನ್ನು ಗಾನಮಾಡೋಣ; ಆತನು ಮಹಾಜಯಶಾಲಿಯಾದನು; ಕುದುರೆಗಳನ್ನೂ ರಾಹುತರನ್ನೂ ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ. ನನ್ನ ಬಲವೂ ಕೀರ್ತನೆಯೂ ಯಾಹುವೇ, ಆತನಿಂದ ನನಗೆ ರಕ್ಷಣೆಯುಂಟಾಯಿತು. ನಮ್ಮ ದೇವರು ಆತನೇ, ಆತನನ್ನು ವರ್ಣಿಸುವೆವು.” (ವಿಮೋಚನಕಾಂಡ 15:1, 2) ತಮ್ಮ ಅದ್ಭುತವಾದ ಬಿಡುಗಡೆಯ ಬಳಿಕ ಅವರು ಈ ಮಾತುಗಳನ್ನು ಹಾಡಿದರ್ದಿಂದ, ನಾವು ಇಸ್ರಾಯೇಲ್ಯರ ಉತ್ಸಾಹ ಮತ್ತು ಆನಂದವನ್ನು ಚೆನ್ನಾಗಿ ಕಲ್ಪಿಸಿಕೊಳ್ಳಬಲ್ಲೆವು!
7. ಇಸ್ರಾಯೇಲ್ಯರು ಹಾಡುಗಳಿಂದ ಯೆಹೋವನನ್ನು ಸ್ತುತಿಸುವುದರ ಕುರಿತಾದ ಯಾವ ಇನ್ನಿತರ ಗಮನಾರ್ಹ ನಿದರ್ಶನಗಳನ್ನು ಹೀಬ್ರು ಶಾಸ್ತ್ರಗಳು ದಾಖಲಿಸುತ್ತವೆ?
7 ಒಂದನೆಯ ಪೂರ್ವಕಾಲವೃತ್ತಾಂತ 16:1, 4-36 ರಲ್ಲಿ, ದಾವೀದನು ಮಂಜೂಷವನ್ನು ಯೆರೂಸಲೇಮಿಗೆ ತಂದಾಗ, ಸಂಗೀತ ಸಾಧನಗಳನ್ನು ಬಾರಿಸುವ ಮೂಲಕ ಮತ್ತು ಹಾಡುವ ಮೂಲಕ ಯೆಹೋವನು ಸ್ತುತಿಸಲ್ಪಟ್ಟನೆಂದು ನಾವು ಓದುತ್ತೇವೆ. ಅದು ನಿಜವಾಗಿಯೂ ಸಂತೋಷಕರವಾದ ಒಂದು ಸಂದರ್ಭವಾಗಿತ್ತು. ಅರಸನಾದ ಸೊಲೊಮೋನನು ಯೆರೂಸಲೇಮಿನಲ್ಲಿ ದೇವಾಲಯವನ್ನು ಪ್ರತಿಷ್ಠಾಪಿಸಿದ ಸಮಯದಲ್ಲಿ ಸಂಗೀತ ಸಾಧನಗಳನ್ನೊಳಗೊಂಡು ಯೆಹೋವನಿಗೆ ಸ್ತುತಿಗೀತೆಯು ಹಾಡಲ್ಪಟ್ಟಿತ್ತು. 2 ಪೂರ್ವಕಾಲವೃತ್ತಾಂತ 5:13, 14 ರಲ್ಲಿ ನಾವು ಓದುವುದು: “ಯಾಜಕರು ದೇವಾಲಯದಿಂದ ಹೊರಗೆ ಬಂದಕೂಡಲೆ ಒಬ್ಬನೋ ಎಂಬಂತೆ ಸರ್ವವೆತ್ತಿ ಯೆಹೋವನನ್ನು ಕೀರ್ತಿಸುವದಕ್ಕಾಗಿ ತುತೂರಿ ಊದುವವರೂ ಗಾಯನಮಾಡುವವರೂ ಅಲ್ಲಿ ನಿಂತಿದ್ದರು. ತುತೂರಿ ತಾಳ ಮೊದಲಾದ ವಾದ್ಯಗಳ ಧ್ವನಿಯೂ ಯೆಹೋವನು ಒಳ್ಳೆಯವನು, ಆತನ ಕೃಪೆಯು ಶಾಶ್ವತವಾಗಿರುವದು ಎಂದು ಕೃತಜ್ಞತಾಸ್ತುತಿಮಾಡುವವರ ಸರ್ವವೂ ಕೇಳಿಸಿದೊಡನೆ ಮೇಘವು ಯೆಹೋವನ ಆಲಯದಲ್ಲಿ ತುಂಬಿಕೊಂಡಿತು. ಯೆಹೋವನ ತೇಜಸ್ಸಿನಿಂದ ವ್ಯಾಪ್ತವಾಗಿದ್ದ ಮೇಘವು ದೇವಾಲಯದಲ್ಲಿ ತುಂಬಿಕೊಂಡದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದೆ ಹೋದರು.” ಅದು ಏನನ್ನು ತೋರಿಸುತ್ತದೆ? ಇಂಪಾದ ಈ ಸ್ತುತಿಯನ್ನು ಯೆಹೋವನು ಆಲಿಸುತ್ತಿದ್ದನೆಂದೂ ಮತ್ತು ಅಲೌಕಿಕ ಮೇಘದ ಮೂಲಕ ತೋರಿಸಲ್ಪಟ್ಟಂತೆ, ಅದರಿಂದ ಸಂತೋಷಪಟ್ಟನೆಂದೂ ತೋರಿಸುತ್ತದೆ. ತದನಂತರ, ನೆಹೆಮೀಯನ ದಿನಗಳಲ್ಲಿ ಯೆರೂಸಲೇಮಿನ ಪೌಳಿಗೋಡೆಗಳ ಪ್ರತಿಷ್ಠೆಯ ಸಮಯದಲ್ಲಿ ಎರಡು ಭಜನಮಂಡಲಿಗಳಿಂದ ಹಾಡುವಿಕೆಯಿತ್ತು.—ನೆಹೆಮೀಯ 12:27-42.
8. ಹಾಡುವಿಕೆಯು ಇಸ್ರಾಯೇಲ್ಯರಿಂದ ಗಂಭೀರವಾಗಿ ತೆಗೆದುಕೊಳ್ಳಲ್ಪಟ್ಟಿತೆಂದು ಯಾವುದು ತೋರಿಸುತ್ತದೆ?
8 ವಾಸ್ತವದಲ್ಲಿ, ದೇವಾಲಯದ ಆರಾಧನೆಯಲ್ಲಿ ಹಾಡುವುದು ಎಷ್ಟೊಂದು ಪ್ರಮುಖ ಭಾಗವಾಗಿತ್ತೆಂದರೆ, ಗಾಯನ ಸೇವೆಗಾಗಿ ನಾಲ್ಕು ಸಾವಿರ ಲೇವಿಯರು ಪ್ರತ್ಯೇಕಿಸಲ್ಪಟ್ಟಿದ್ದರು. (1 ಪೂರ್ವಕಾಲವೃತ್ತಾಂತ 23:4, 5) ಅವರು ಹಾಡುಗಾರರೊಂದಿಗೆ ಜೊತೆಗೂಡಿದರು. ಸಂಗೀತ, ವಿಶೇಷವಾಗಿ ಹಾಡುಗಾರರು—ನಿಯಮಶಾಸ್ತ್ರದ ಪ್ರಾಮುಖ್ಯ ವಿಷಯಗಳನ್ನು ತುಂಬುವ ಅಗತ್ಯಕ್ಕಾಗಿ ಅಲ್ಲ, ಆದರೆ ಆರಾಧನೆಗಾಗಿ ಯೋಗ್ಯವಾದ ಹುರುಪನ್ನು ಒದಗಿಸಲಿಕ್ಕಾಗಿ—ಆರಾಧನೆಯಲ್ಲಿ ಪ್ರಮುಖ ಸ್ಥಾನವನ್ನು ವಹಿಸಿಕೊಂಡಿದ್ದರು. ಯೆಹೋವನನ್ನು ಹುರುಪಿನಿಂದ ಆರಾಧಿಸಲು ಇದು ಇಸ್ರಾಯೇಲ್ಯರಿಗೆ ಸಹಾಯಮಾಡಿತು. ಈ ವೈಶಿಷ್ಟ್ಯಕ್ಕಾಗಿ ಮೀಸಲಾಗಿಡಲ್ಪಟ್ಟ ವಿವರಣೆಯ ಗಮನ ಮತ್ತು ಸಿದ್ಧತೆಯನ್ನು ಗಮನಿಸಿ: “ಇವರೂ ಯೆಹೋವಕೀರ್ತನೆಗಳನ್ನು ಕಲಿತ ಇವರ ಸಹೋದರರೂ ಒಟ್ಟು ಇನ್ನೂರ ಎಂಭತ್ತೆಂಟು ಮಂದಿ; ಇವರೆಲ್ಲರೂ ಗಾಯನಪ್ರವೀಣರು.” (1 ಪೂರ್ವಕಾಲವೃತ್ತಾಂತ 25:7) ಯೆಹೋವನಿಗೆ ಸ್ತುತಿ ಹಾಡುವುದನ್ನು ಅವರು ಎಷ್ಟೊಂದು ಗಂಭೀರವಾಗಿ ತೆಗೆದುಕೊಂಡರೆಂಬುದನ್ನು ಗಮನಿಸಿ. ಅವರು ಗಾಯನದಲ್ಲಿ ತರಬೇತಿ ಹೊಂದಿದ್ದರು ಮತ್ತು ಪ್ರವೀಣರಾಗಿದ್ದರು!
9. ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಹಾಡುವಿಕೆಗೆ ಯಾವ ಪ್ರಾಧಾನ್ಯವನ್ನು ಕೊಡಲಾಗಿದೆ?
9 ನಮ್ಮ ಸಾಮಾನ್ಯ ಶಕದ ಪ್ರಥಮ ಶತಮಾನಕ್ಕೆ ಬರುವಾಗ, ನಾವೇನನ್ನು ಕಂಡುಕೊಳ್ಳುತ್ತೇವೆ? ಯೇಸು, ತಾನು ಮೋಸದಿಂದ ಒಪ್ಪಿಸಲ್ಪಡುವ ರಾತ್ರಿಯಂದು, ಪ್ರಾಮುಖ್ಯವಾದ ಅನೇಕ ವಿಚಾರಗಳು ತನ್ನ ಮನಸ್ಸಿನಲ್ಲಿದ್ದರೂ, ತನ್ನ ಪಸ್ಕದ ಆಚರಣೆಯನ್ನು ಮತ್ತು ತನ್ನ ಮರಣದ ಜ್ಞಾಪಕದ ಏರ್ಪಾಡಿನ ಆರಂಭವನ್ನು, ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡುವ ಮೂಲಕ ಮುಕ್ತಾಯಗೊಳಿಸುವ ಆವಶ್ಯಕತೆಯನ್ನು ಕಂಡನು. (ಮತ್ತಾಯ 26:30) ಮತ್ತು, ಪೌಲ ಮತ್ತು ಸೀಲರು ಹೊಡೆಯಲ್ಪಟ್ಟು, ಸೆರೆಮನೆಯೊಳಗೆ ಬಂಧಿಸಲ್ಪಟ್ಟ ಬಳಿಕ, “ಮಧ್ಯರಾತ್ರಿಯಲ್ಲಿ ಪ್ರಾರ್ಥನೆಮಾಡುವವರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು; ಸೆರೆಯಲ್ಲಿದ್ದವರು ಲಕ್ಷ್ಯವಿಟ್ಟು ಕೇಳುತ್ತಿದ್ದರು,” ಎಂದು ಸಹ ನಾವು ಓದುತ್ತೇವೆ.—ಅ. ಕೃತ್ಯಗಳು 16:25.
ಸ್ತುತಿಗಳನ್ನು ಹಾಡುವುದು—ನಮ್ಮ ಆರಾಧನೆಯ ಪ್ರಮುಖ ಭಾಗ
10. ಹಾಡುಗಳಿಂದ ಆತನನ್ನು ಸ್ತುತಿಸುವುದರ ಕುರಿತು ದೇವರ ವಾಕ್ಯವು ಯಾವ ಆಜ್ಞೆಗಳನ್ನು ಕೊಡುತ್ತದೆ?
10 ರಾಜ್ಯ ಸಂಗೀತಗಳನ್ನು ಹಾಡುವುದು, ಬಹುಶಃ ನಿಮ್ಮ ಹೃತ್ಪೂರ್ವಕ ಗಮನವನ್ನು ಅದಕ್ಕೆ ಕೊಡುವಷ್ಟು ಪ್ರಮುಖವಾದದ್ದಾಗಿಲವ್ಲೆಂದು ನೀವು ಭಾವಿಸುತ್ತೀರೊ? ಹಾಗಿರುವುದಾದರೆ, ಸ್ತುತಿಗಳನ್ನು ಹಾಡುವುದರ ಮೇಲೆ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಇಟ್ಟಂಥ ಪ್ರಮುಖತೆಯ ದೃಷ್ಟಿಕೋನದಲ್ಲಿ, ವಿಷಯವನ್ನು ನೀವು ಪುನರ್ಮೌಲೀಕರಿಸಬಾರದೊ? ಯೆಹೋವನನ್ನು ಸ್ತುತಿಸುವ ಮತ್ತು ಆತನಿಗೆ ಸ್ತುತಿಗೀತೆಗಳನ್ನು ಹಾಡುವಂತಹ ಆಜೆಗ್ಞಳಿಂದ ದೇವರ ವಾಕ್ಯವು ತುಂಬಿದೆ! ಉದಾಹರಣೆಗೆ, ಯೆಶಾಯ 42:10 ರಲ್ಲಿ, ನಾವು ಹೀಗೆ ಓದುತ್ತೇವೆ: “ಸಮುದ್ರಪ್ರಯಾಣಿಕರೇ, ಸಕಲಜಲಚರಗಳೇ, ದ್ವೀಪಾಂತರಗಳೇ, ದ್ವೀಪಾಂತರವಾಸಿಗಳೇ, ಯೆಹೋವನ ಘನತೆಗಾಗಿ ನೂತನಗೀತವನ್ನು ಹಾಡಿ ದಿಗಂತಗಳಲ್ಲಿಯೂ ಆತನನ್ನು ಕೀರ್ತಿಸಿರಿ.”—ಕೀರ್ತನೆ 96:1; 98:1ನ್ನೂ ನೋಡಿರಿ.
11. ಹಾಡುವುದರ ಕುರಿತು ಅಪೊಸ್ತಲ ಪೌಲನು ಯಾವ ಎಚ್ಚರಿಕೆಯನ್ನು ಕೊಟ್ಟಿದ್ದಾನೆ?
11 ಹಾಡುವುದು ನಮ್ಮ ಆತ್ಮೋನ್ನತಿ ಮಾಡಬಲ್ಲದೆಂದು ಅಪೊಸ್ತಲ ಪೌಲನು ತಿಳಿದಿದ್ದನು, ಆದುದರಿಂದ ಈ ವಿಷಯದ ಕುರಿತು ಆತನು ಎರಡು ಬಾರಿ ಎಚ್ಚರಿಸಿದನು. ಎಫೆಸ 5:19 ರಲ್ಲಿ ನಾವು ಓದುವುದು: “ಆದರೆ ಪವಿತ್ರಾತ್ಮಭರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮಸಂಬಂಧವಾದ ಪದಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಗಾನಮಾಡುತ್ತಾ ಕೀರ್ತನೆ ಹಾಡುತ್ತಾ” ಇರ್ರಿ. ಮತ್ತು ಕೊಲೊಸ್ಸೆ 3:16 ರಲ್ಲಿ ನಾವು ಓದುವುದು: “ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಸಕಲಜ್ಞಾನದಿಂದ ಕೂಡಿದವರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿಕೊಳ್ಳಿರಿ, ಬುದ್ಧಿಹೇಳಿಕೊಳ್ಳಿರಿ; ಕರ್ತನ ಕೃಪೆಯನ್ನು ನೆನಸಿಕೊಳ್ಳುವವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಸಂಬಂಧವಾದ ಹಾಡುಗಳಿಂದಲೂ ನಿಮ್ಮ ಹೃದಯಗಳಲ್ಲಿ ದೇವರಿಗೆ ಗಾನಮಾಡಿರಿ.”
12. ನಾವು ಒಬ್ಬರಿಗೊಬ್ಬರು ಉಪದೇಶಮಾಡಿಕೊಳ್ಳಲು ಮತ್ತು ಬುದ್ಧಿಹೇಳಿಕೊಳ್ಳಲು ನಮಗೆ ಸಹಾಯ ಮಾಡುವ, ನಮ್ಮ ಸಂಗೀತಗಳ ಯಾವ ಉದಾಹರಣೆಗಳು ನಮಗಿವೆ?
12 ‘ಕೀರ್ತನೆಗಳು, ಯೆಹೋವನಿಗೆ ಸ್ತುತಿಗಳು, ಆತ್ಮಸಂಬಂಧವಾದ ಪದಗಳು, ನಿಮ್ಮ ಹೃದಯಗಳಲ್ಲಿ ಕೀರ್ತನೆ ಹಾಡುವುದು’ ಎಂದು ಪೌಲನು ಪ್ರಸ್ತಾಪಿಸುವಾಗ, ಪ್ರತಿಯೊಂದು ನಿದರ್ಶನದಲ್ಲಿ ಆತನು ಹಾಡುವಿಕೆಗೆ ಪುನರಾವೃತ್ತಿತ ಉಲ್ಲೇಖಗಳನ್ನು ಮಾಡುತ್ತಾನೆ. ಅಲ್ಲದೆ, ಈ ಮೂಲಕವಾಗಿ ನಾವು ‘ಒಬ್ಬರನ್ನೊಬ್ಬರು ಉಪದೇಶಮಾಡಿಕೊಳ್ಳಲು ಮತ್ತು ಬುದ್ಧಿಹೇಳಿಕೊಳ್ಳಲು’ ಸಾಧ್ಯವಿದೆ ಎಂದು ಹೇಳುವ ಮೂಲಕ ಕೊಲೊಸ್ಸೆಯವರಿಗೆ, ತನ್ನ ಹೇಳಿಕೆಗಳಿಗೆ ಆತನು ಪ್ರಸ್ತಾವನೆ ಮಾಡುತ್ತಾನೆ. ಮತ್ತು ನಮ್ಮ ಸಂಗೀತಗಳ ಶಿರೋನಾಮದ ಮೂಲಕ ನಾವು ನೋಡಸಾಧ್ಯವಿರುವಂತೆ, ನಾವು ಇದನ್ನು ನಿಶ್ಚಯವಾಗಿ ಮಾಡುತ್ತೇವೆ—“ಸರ್ವ ಸೃಷ್ಟಿಯೇ, ಯೆಹೋವನನ್ನು ಸ್ತುತಿಸು!” (ಸಂಗೀತ 5), “ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ!” (ಸಂಗೀತ 10), “ರಾಜ್ಯ ನಿರೀಕ್ಷೆಗಾಗಿ ಹರ್ಷಿಸಿರಿ!” (ಸಂಗೀತ 16), “ಅವರಿಗೆ ಹೆದರಬೇಡಿರಿ!” (ಸಂಗೀತ 27), “ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ!” (ಸಂಗೀತ 100), ಇವು ಕೆಲವು ಉದಾಹರಣೆಗಳು.
13. ನಮ್ಮ ಆರಾಧನೆಯ ಭಾಗದೋಪಾದಿ, ಹಾಡುವಿಕೆಯ ಪ್ರಮುಖತೆಯನ್ನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹೇಗೆ ತೋರಿಸಿದೆ?
13 ಈ ಆಜೆಗ್ಞಳೊಂದಿಗೆ ಹೊಂದಿಕೆಯಲ್ಲಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನಮ್ಮ ನೆರವಿಗಳು—ಸಭಾ ಕೂಟಗಳು, ಸರ್ಕಿಟ್ ಸಮ್ಮೇಳನಗಳು, ವಿಶೇಷ ಸಮ್ಮೇಳನ ದಿನಗಳು, ಜಿಲ್ಲಾ ಅಧಿವೇಶನಗಳು, ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳು—ರಾಜ್ಯ ಸಂಗೀತಗಳನ್ನು ಹಾಡುವುದರೊಂದಿಗೆ ಆರಂಭವಾಗುವಂತೆ ಮತ್ತು ಮುಕ್ತಾಯಗೊಳ್ಳುವಂತೆ ಏರ್ಪಡಿಸಿದೆ. (ಮತ್ತಾಯ 24:45) ಅದರೊಂದಿಗೆ, ಈ ಕೂಟಗಳಲ್ಲಿ ಬೇರೆ ಸಮಯಗಳಲ್ಲಿ ಹಾಡಲ್ಪಡುವಂತೆ ಸಂಗೀತಗಳು ನಿಯಮಿಸಲ್ಪಟ್ಟಿವೆ. ಸಾಮಾನ್ಯವಾಗಿ ನಮ್ಮ ಕೂಟಗಳು ರಾಜ್ಯಸಂಗೀತವೊಂದನ್ನು ಹಾಡುವುದರೊಂದಿಗೆ ಆರಂಭವಾಗುವುದರಿಂದ, ನಮ್ಮ ಆರಾಧನೆಯ ಆ ಭಾಗದಲ್ಲಿ ಭಾಗವಹಿಸಲು ಸಾಕಷ್ಟು ಮುಂಚಿತವಾಗಿ, ಸಮಯಕ್ಕೆ ಸರಿಯಾಗಿ ಬರುವುದನ್ನು ಒಂದು ಪ್ರಾಮುಖ್ಯ ಅಂಶವನ್ನಾಗಿ ನಾವು ಮಾಡಬಾರದೊ? ಮತ್ತು ಕೂಟಗಳು ಹಾಡುವುದರೊಂದಿಗೆ ಕೊನೆಗೊಳ್ಳುವುದರಿಂದ, ಸಮಾಪ್ತಿಯ ಸಂಗೀತ ಮತ್ತು ಅದನ್ನು ಹಿಂಬಾಲಿಸುವ ಪ್ರಾರ್ಥನೆಯ ವರೆಗೆ ನಾವು ಉಳಿಯಬಾರದೊ?
14. ನಮ್ಮ ಕಾರ್ಯಕ್ರಮಗಳಿಗಾಗಿ ಆರಿಸಲ್ಪಟ್ಟಿರುವ ಸೂಕ್ತವಾದ ಸಂಗೀತಗಳ ಯಾವ ಉದಾಹರಣೆಗಳು ನಮಗಿವೆ?
14 ನಮ್ಮ ಕೂಟಗಳಲ್ಲಿ ಸಂಗೀತಗಳನ್ನು, ಕಾರ್ಯಕ್ರಮದೊಂದಿಗೆ ಹೊಂದಾಣಿಕೆಯಲ್ಲಿರುವಂತೆ ಜಾಗ್ರತೆಯಿಂದ ಆರಿಸಲಾಗಿದೆ. ಉದಾಹರಣೆಗೆ, 1993ರ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನದಲ್ಲಿ, ಸೈತಾನ, ಲೋಕ ಮತ್ತು ಪತನಗೊಂಡ ದೇಹದೊಂದಿಗೆ ಹೋರಾಡುವಂತೆ ಕ್ರೈಸ್ತರನ್ನು ಉತ್ತೇಜಿಸುವ, “ಸತ್ಯವನ್ನು ನಿಮ್ಮದಾಗಿ ಮಾಡಿಕೊಳ್ಳಿರಿ” ಎಂಬ 191ನೇ ಸಂಗೀತವು, ಈ ವಿಪತ್ತುಗಳೊಂದಿಗೆ ವ್ಯವಹರಿಸುವ ಮೂರು ಭಾಷಣಗಳ ಅನಂತರ ಹಿಂಬಾಲಿಸಿತು. ತದ್ರೀತಿಯಲ್ಲಿ, ಹೆತ್ತವರ ಹೊಣೆಗಾರಿಕೆಯಿಂದ ತುಂಬಿರುವ, “ಮಕ್ಕಳು—ದೇವರ ಅಮೂಲ್ಯ ಕೊಡುಗೆಗಳು” ಎಂಬ 164 ನೇ ಸಂಗೀತವು, ತಮ್ಮ ಮಕ್ಕಳನ್ನು ತರಬೇತುಗೊಳಿಸುವ ಹೆತ್ತವರ ಹಂಗುಗಳನ್ನು ಎತ್ತಿತೋರಿಸುವ ಒಂದು ಭಾಷಣದ ಅನಂತರ ಹಿಂಬಾಲಿಸಿತು. ಸಂಗೀತ 70, “ಯೆರೆಮೀಯನಂತಿರು”— ಯೆರೆಮೀಯನ ಪ್ರವಾದನೆಗಳ ಮೇಲಾಧಾರಿತವಾದ ಭಾಷಣಮಾಲೆಗೆ ಮೊದಲು ಪ್ರಸ್ತಾವಿಸಲ್ಪಟ್ಟಿತು. ಮತ್ತು ನಮ್ಮ ರಾಜ್ಯದ ಸೇವೆಯ ವಿವಿಧ ಅಂಶಗಳ ಮೇಲೆ ಒಂದು ಭಾಷಣಮಾಲೆಯು ಕೊಡಲ್ಪಟ್ಟ ಬಳಿಕ, ಸಂಗೀತ 156, “ನನಗೆ ಮನಸ್ಸುಂಟು”—ಹೆಚ್ಚು ಸೇವಾಭಿಮುಖವಾದ ಒಂದು ಸಂಗೀತ—ಹಾಡಲ್ಪಟ್ಟಿತು. ಕಾವಲಿನಬುರುಜು ಅಭ್ಯಾಸ, ಸೇವಾ ಕೂಟ, ಮತ್ತು ದೇವಪ್ರಭುತ್ವ ಶುಶ್ರೂಷಾ ಶಾಲೆಗೆ ಸಂಗೀತಗಳನ್ನು ಆರಿಸುವುದರಲ್ಲಿ ತದ್ರೀತಿಯ ಜಾಗ್ರತೆಯನ್ನು ತೆಗೆದುಕೊಳ್ಳಲಾಗುತ್ತದೆ. ಹಿರಿಯರು ಬಹಿರಂಗ ಭಾಷಣಗಳನ್ನು ನೀಡುವಾಗ ಮತ್ತು ಕಾರ್ಯಕ್ರಮವನ್ನು ಆರಂಭಿಸಲು ಉಪಯೋಗಿಸಲ್ಪಡುವ ಸಂಗೀತವನ್ನು ಸೂಚಿಸುವಾಗ, ತಮ್ಮ ಭಾಷಣದ ಮುಖ್ಯ ವಿಷಯಕ್ಕೆ ತಕ್ಕದಾದ ಒಂದು ಸಂಗೀತವನ್ನು ಅವರು ಆರಿಸಬೇಕೆಂದು ಇದು ತೋರಿಸುತ್ತದೆ.
15. ಕೂಟದ ಅಧ್ಯಕ್ಷನು, ಹಾಡಬೇಕಾಗಿರುವ ಸಂಗೀತಕ್ಕಾಗಿ ಗಣ್ಯತೆಯನ್ನು ಹೇಗೆ ವರ್ಧಿಸಬಹುದು?
15 ಹಾಡಬೇಕಾಗಿರುವ ಸಂಗೀತವನ್ನು ಅಧ್ಯಕ್ಷನು ಪ್ರಕಟಿಸುವಾಗ, ಅದರ ಶಿರೋನಾಮ ಅಥವಾ ಮುಖ್ಯ ವಿಷಯವನ್ನು ಕೊಡುವುದರ ಮೂಲಕ ಸಂಗೀತಕ್ಕಾಗಿ ಗಣ್ಯತೆಯನ್ನು ವರ್ಧಿಸಬಹುದು. ನಾವು ಸಂಖ್ಯೆಗಳನ್ನಲ್ಲ, ಆದರೆ ಶಾಸ್ತ್ರೀಯ ಮುಖ್ಯವಿಷಯಗಳನ್ನು ಹಾಡುತ್ತೇವೆ. ಹಾಗು ಮುಖ್ಯವಿಷಯದ ಕೆಳಗೆ ಕೊಡಲ್ಪಟ್ಟ ಶಾಸ್ತ್ರವಚನವು ಗಮನಿಸಲ್ಪಡುವುದಾದರೆ, ಸಭೆಯು ಸಂಗೀತವನ್ನು ಹೆಚ್ಚು ಗಣ್ಯಮಾಡುವಂತೆ ಅದು ಸಹಾಯಮಾಡುವುದು. ಇದಲ್ಲದೆ, ಈ ಹಾಡಿನ ಆತ್ಮದೊಳಗೆ ಎಲ್ಲರು ಪ್ರವೇಶಿಸುವಂತಹ ಕೆಲವೊಂದು ಹೇಳಿಕೆಗಳನ್ನು ಕೊಡಬಹುದಾಗಿದೆ.
ಹಾಡುವುದರ ಮೂಲಕ ಯೆಹೋವನ ಒಳ್ಳೇತನಕ್ಕಾಗಿ ಗಣ್ಯತೆಯನ್ನು ತೋರಿಸಿರಿ
16. ನಮ್ಮ ಸಂಗೀತಗಳ ಹುಮ್ಮಸ್ಸಿನೊಳಗೆ ನಾವು ಹೇಗೆ ಪ್ರವೇಶಿಸಬಲ್ಲೆವು?
16 ನಮ್ಮ ರಾಜ್ಯ ಸಂಗೀತಗಳ ಪದಗಳು ಅರ್ಥಭರಿತವಾಗಿರುವುದರಿಂದ, ನಾವು ಅವುಗಳನ್ನು ಹಾಡುವಾಗ ನುಡಿಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವ ಅಗತ್ಯವಿದೆ. ಪ್ರತಿಯೊಂದು ಸಂಗೀತದ ಹುಮ್ಮಸ್ಸಿನೊಳಗೆ ಪ್ರವೇಶಿಸಲು ನಾವು ಬಯಸುತ್ತೇವೆ. ದೇವರಾತ್ಮದ ಒಂದು ಫಲವಾದ ಪ್ರೀತಿಗೆ ಸಂಬಂಧಿಸಿರುವ ಕೆಲವು ಸಂಗೀತಗಳು ಹೃತ್ಪೂರ್ವಕವಾಗಿವೆ. (ಗಲಾತ್ಯ 5:22) ಇವುಗಳನ್ನು ನಾವು ತೀವ್ರಭಾವನೆ ಮತ್ತು ಹೃತ್ಪೂರ್ವಕತೆಯೊಂದಿಗೆ ಹಾಡುತ್ತೇವೆ. ಇತರ ಸಂಗೀತಗಳು ಹರ್ಷಭರಿತವಾಗಿವೆ, ಮತ್ತು ಅವುಗಳನ್ನು ನಾವು ಸಂತೋಷದಿಂದ ಹಾಡಲು ಪ್ರಯತ್ನಿಸಬೇಕು. ಇನ್ನೂ ಕೆಲವು ಹುರುಪಿನ ತ್ವರಿತಗತಿಯ ಸಂಗೀತಗಳು, ಮತ್ತು ಇವುಗಳನ್ನು ತೀವ್ರಉತ್ಸಾಹದಿಂದ ಮತ್ತು ಮನಃಪೂರ್ವಕವಾಗಿ ಹಾಡಬೇಕಾಗಿದೆ. ನಮ್ಮ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ, ನಮ್ಮ ನಿರೂಪಣೆಗಳಲ್ಲಿ ಅನುರಾಗ ಪ್ರವೃತ್ತಿ, ಮತ್ತು ಭಾವನಾಪರವಶತೆ, ಹಾಗೆಯೆ ಹುರುಪನ್ನು ವ್ಯಕ್ತಪಡಿಸುವಂತೆ ನಮಗೆ ಸಲಹೆ ನೀಡಲ್ಪಡುತ್ತದೆ. ನಮ್ಮ ಸಂಗೀತಗಳನ್ನು ಹಾಡುವಾಗ ಅನುರಾಗ ಪ್ರವೃತ್ತಿ, ಭಾವನಾಪರವಶತೆ, ಮತ್ತು ಹುರುಪನ್ನು ಪ್ರದರ್ಶಿಸುವುದು ಇನ್ನೂ ಅಧಿಕ ಪ್ರಾಮುಖ್ಯವಾದದ್ದಾಗಿದೆ.
17. (ಎ) ಅಪನಂಬಿಗಸ್ತ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಯಾವ ಗದರಿಕೆಯನ್ನು, ನಮ್ಮ ಹಾಡುವಿಕೆಗೆ ನಾವು ಅನ್ವಯಿಸಿಕೊಳ್ಳಲು ಬಯಸುವುದಿಲ್ಲ? (ಬಿ) ನಮ್ಮ ಸಂಗೀತಗಳಲ್ಲಿರುವ ಪ್ರಬೋಧನೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದರ ಪರಿಣಾಮಗಳೇನು?
17 ನಮ್ಮ ರಾಜ್ಯ ಸಂಗೀತಗಳನ್ನು ನಾವು ಹಾಡುತ್ತಿರುವಾಗ, ಬೇರೆ ವಿಷಯಗಳಲ್ಲಿ ನಮ್ಮ ಮನಸ್ಸುಗಳನ್ನಿಟ್ಟು, ನುಡಿಗಳ ಅರ್ಥವನ್ನು ಸಂಪೂರ್ಣವಾಗಿ ಗಣ್ಯಮಾಡದಿದ್ದರೆ, ಮಾತಿನಿಂದ ದೇವರನ್ನು ಸನ್ಮಾನಿಸಿ, ಅವರ ಹೃದಯಗಳನ್ನು ಆತನಿಂದ ದೂರವಿರಿಸಿದರ್ದಿಂದ, ಗದರಿಸಲ್ಪಟ್ಟ ಅಪನಂಬಿಗಸ್ತ ಇಸ್ರಾಯೇಲ್ಯರಂತೆ ನಾವಾಗಿರುವುದಿಲ್ಲವೊ? (ಮತ್ತಾಯ 15:8) ರಾಜ್ಯ ಸಂಗೀತಗಳನ್ನು ಹಾಡುವ ನಮ್ಮ ವಿಧಾನಕ್ಕೆ ಅಂತಹ ಗದರಿಕೆಯನ್ನು ಅನ್ವಯಿಸಿಕೊಳ್ಳಲು ನಾವು ಬಯಸುವುದಿಲ್ಲ, ಅಲ್ಲವೇ? ನಮ್ಮ ರಾಜ್ಯ ಸಂಗೀತಗಳಿಗೆ ಗಣ್ಯತೆಯನ್ನು ತೋರಿಸುವಂಥ ರೀತಿಯಲ್ಲಿ ಹಾಡುವ ಮೂಲಕ, ನಮ್ಮನ್ನು ಮತ್ತು ಎಳೆಯರ ಸಹಿತ ನಮ್ಮ ಸುತ್ತಲೂ ಇರುವವರನ್ನು ನಾವು ಪ್ರಚೋದಿಸುವೆವು. ಹೌದು, ನಮ್ಮ ರಾಜ್ಯ ಸಭಾಗೃಹಗಳಲ್ಲಿ ಹಾಡುವವರೆಲ್ಲರೂ, ಈ ಸಂಗೀತಗಳಲ್ಲಿರುವ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಾದರೆ, ಇದು ಶುಶ್ರೂಷೆಯಲ್ಲಿ ಅತ್ಯುತ್ಸಾಹಿಗಳಾಗಿರಲು ಮತ್ತು ತಪ್ಪಿನ ಕುರಿತಾದ ಪಾಶಗಳನ್ನು ತ್ಯಜಿಸಲು ಬಲವಾದ ಒಂದು ಪ್ರೋತ್ಸಾಹವಾಗಿರುವುದು.
18. ರಾಜ್ಯ ಸಂಗೀತಗಳ ಹಾಡುವಿಕೆಯು ಸ್ತ್ರೀಯೊಬ್ಬಳ ಮೇಲೆ ಯಾವ ಪರಿಣಾಮವನ್ನುಂಟುಮಾಡಿತು?
18 ರಾಜ್ಯ ಸಂಗೀತಗಳ ನಮ್ಮ ಹಾಡುವಿಕೆಯ ಮೂಲಕ, ಹೊರಗಿನವರು ಮತ್ತೆ ಮತ್ತೆ ಪ್ರಭಾವಿಸಲ್ಪಡುತ್ತಿದ್ದಾರೆ. ಒಮ್ಮೆ ಕಾವಲಿನಬುರುಜು ಈ ಅಂಶವನ್ನು ಪ್ರಕಾಶಿಸಿತು: “ಜನರನ್ನು ಯೆಹೋವ ದೇವರ ಜ್ಞಾನಕ್ಕೆ ತರಲಿಕ್ಕಾಗಿ ಸಹ, ಆ [ನಮ್ಮ] ಹಾಡುವಿಕೆಯು ಕೆಲಸಮಾಡುತ್ತದೆಂದು, 1973ರಲ್ಲಿ, ನ್ಯೂ ಯಾರ್ಕ್ ಸಿಟಿಯ ಯಾಂಕೀ ಕ್ರೀಡಾಂಗಣದಲ್ಲಿ ನಡೆದ ‘ದೈವಿಕ ವಿಜಯ’ ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಸ್ತ್ರೀಯೊಬ್ಬಳ ಅನುಭವವು ತೋರಿಸುತ್ತದೆ. ಅವಳು ಸ್ವತಃ ಸ್ಥಳೀಯ ರಾಜ್ಯ ಸಭಾಗೃಹವೊಂದಕ್ಕೆ ತನ್ನ ಪ್ರಥಮ ಸಂದರ್ಶನವನ್ನು ಮಾಡಿದಳು ಮತ್ತು ಎರಡು ಕೂಟಗಳಿಗೂ ಉಳಿದಳು. ಸಭೆಯು ‘ನಿನ್ನ ದೃಷ್ಟಿಯನ್ನು ಬಹುಮಾನದ ಮೇಲಿಡು!’ ಎಂಬ ಸಂಗೀತವನ್ನು ಹಾಡುವಾಗ, ನುಡಿಗಳಿಂದ ಮತ್ತು ಅವರು ಹಾಡಿದ ರೀತಿಯಿಂದ ಅವಳೆಷ್ಟು ಪ್ರಭಾವಿತಳಾದಳೆಂದರೆ, ತಾನಿರಬೇಕಾದ ಸ್ಥಳವು ಇದಾಗಿದೆಯೆಂದು ಅವಳು ನಿಶ್ಚಯಿಸಿದಳು. ತದನಂತರ ಸಾಕ್ಷಿಗಳಲ್ಲಿ ಒಬ್ಬನನ್ನು ಅವಳು ಸಮೀಪಿಸಿದಳು ಮತ್ತು ಬೈಬಲ್ ಅಭ್ಯಾಸವೊಂದಕ್ಕಾಗಿ ಕೇಳಿಕೊಂಡಳು, ಮತ್ತು ಯೆಹೋವನ ಕ್ರೈಸ್ತ ಸಾಕ್ಷಿಯೊಬ್ಬಳಾಗುವಷ್ಟರ ಮಟ್ಟಿಗೆ ಪ್ರಗತಿಯನ್ನು [ಅವಳು] ಮಾಡಿದಳು.”
19. ನಮ್ಮ ರಾಜ್ಯ ಸಂಗೀತಗಳನ್ನು ಮನಃಪೂರ್ವಕವಾಗಿ ಹಾಡುವುದರ ಕುರಿತು ಯಾವ ಅಂತಿಮ ಪ್ರೋತ್ಸಾಹವು ಕೊಡಲ್ಪಡುತ್ತದೆ?
19 ನಮ್ಮ ಅಧಿಕಾಂಶ ಕೂಟಗಳಲ್ಲಿ, ಸಭಾಸದರು ತಮ್ಮ ಅನಿಸಿಕೆಗಳನ್ನು ಮತ್ತು ಗಣ್ಯತೆಯನ್ನು ವ್ಯಕ್ತಪಡಿಸಲು ತುಲನಾತ್ಮಕವಾಗಿ ಕೆಲವೇ ಸದವಕಾಶಗಳಿರುತ್ತವೆ. ಆದರೆ ಯೆಹೋವನ ಒಳ್ಳೇತನದ ಕುರಿತು ನಮ್ಮ ಅನಿಸಿಕೆಯನ್ನು, ರಾಜ್ಯ ಸಂಗೀತಗಳನ್ನು ಹಾಡುವುದರಲ್ಲಿ ಮನಃಪೂರ್ವಕವಾಗಿ ಜೊತೆಗೂಡುವುದರ ಮೂಲಕ ನಾವೆಲ್ಲರೂ ವ್ಯಕ್ತಪಡಿಸಬಲ್ಲೆವು. ಇದಲ್ಲದೆ, ನಾವೆಲ್ಲರೂ ಒಟ್ಟಾಗಿ ಕೂಡುವಾಗ, ಒಳ್ಳೇ ಮನೋವೃತ್ತಿಗಳಲ್ಲಿ ನಾವಿರುವುದಿಲ್ಲವೊ? ಆದುದರಿಂದ ಹಾಡುವಂತೆ ನಮಗನಿಸಬೇಕು! (ಯಾಕೋಬ 5:13) ವಾಸ್ತವವಾಗಿ, ಯೆಹೋವನ ಒಳ್ಳೇತನವನ್ನು ಮತ್ತು ಆತನ ಅಪಾತ್ರ ದಯೆಯನ್ನು ಎಷ್ಟರ ಮಟ್ಟಿಗೆ ನಾವು ಗಣ್ಯಮಾಡುತ್ತೇವೊ, ಅಷ್ಟರ ಮಟ್ಟಿಗೆ ನಾವು ಆತನಿಗೆ ಪೂರ್ಣಾತ್ಮದಿಂದ ಸ್ತುತಿಗಳನ್ನು ಹಾಡುವೆವು.
ನೀವು ಹೇಗೆ ಉತ್ತರಿಸುವಿರಿ?
▫ ಯೆಹೋವನನ್ನು ಸ್ತುತಿಸಲು ಎರಡು ಮೂಲ ಕಾರಣಗಳು ಯಾವುವು?
▫ ಯಾವ ವಿವಿಧ ವಿಧಗಳಲ್ಲಿ ನಾವು ಯೆಹೋವನನ್ನು ಸ್ತುತಿಸಬಲ್ಲೆವು?
▫ ಯೆಹೋವನನ್ನು ನಾವು ಸ್ತುತಿಸಸಾಧ್ಯವಿರುವ ಅತ್ಯಂತ ಮನೋಹರವಾದ ವಿಧಾನಗಳಲ್ಲಿ ಒಂದು ಯಾವುದಾಗಿದೆ?
▫ ಹಾಡಿನಲ್ಲಿ ಯೆಹೋವನನ್ನು ಸ್ತುತಿಸುವುದರ ಕುರಿತು ಯಾವ ಶಾಸ್ತ್ರೀಯ ಉದಾಹರಣೆಗಳು ನಮಗಿವೆ?
▫ ರಾಜ್ಯ ಸಂಗೀತಗಳ ನಮ್ಮ ಹಾಡುವಿಕೆಗೆ ನಿಷ್ಪಕ್ಷಪಾತವನ್ನು ನಾವು ಹೇಗೆ ತೋರಿಸಬಲ್ಲೆವು?
[ಪುಟ 11 ರಲ್ಲಿರುವ ಚೌಕ]
ಆ ಹಾಡುಗಳನ್ನು ಆನಂದಿಸಿರಿ!
ಕೆಲವೊಂದು ಸಂಗೀತಗಳನ್ನು ಕಲಿಯುವುದರಲ್ಲಿ ಕೆಲವರಿಗೆ ಸ್ಪಲ್ಪ ಕಷ್ಟವಿದ್ದಂತೆ ತೋರುತ್ತದೆ. ಆದರೂ, ಸಭೆಗಳಿಗೆ ಇವುಗಳಲ್ಲಿ ಹೆಚ್ಚಿನ ಸಂಗೀತಗಳನ್ನು ಹಾಡುವುದರಲ್ಲಿ ಯಾವುದೆ ಭಾರಿ ಸಮಸ್ಯೆ ಇರಲಿಲ್ಲ. ಪ್ರಥಮದಲ್ಲಿ ಅಪರಿಚಿತವಾಗಿ ತೋರುವುದನ್ನು ಕಲಿಯಲಿಕ್ಕಾಗಿ ಬಹುಶಃ ಸ್ಪಲ್ಪ ಹೆಚ್ಚು ಪ್ರಯತ್ನ ಮಾತ್ರ ಅಗತ್ಯವಿದ್ದೀತು. ಒಮ್ಮೆ ಅಂತಹ ಸಂಗೀತಗಳೊಂದಿಗೆ ಪರಿಚಯವಾದ ಅನಂತರ, ಸಭೆಯು ಇವುಗಳನ್ನು ಅನೇಕವೇಳೆ, ಕಲಿಯಲು ಪ್ರಯತ್ನವೇ ಅಗತ್ಯವಿದ್ದಿರದವುಗಳಿಗಿಂತಲೂ ಹೆಚ್ಚು ಹೆಚ್ಚು ಗಣ್ಯ ಮಾಡುತ್ತದೆ. ಆಗ ಸಭೆಗಳಲ್ಲಿರುವವರೆಲ್ಲರು ಅವುಗಳನ್ನು ನಿರ್ಧರವಾಗಿ ಹಾಡಬಲ್ಲರು. ಹೌದು, ಅವರು ಆ ಹಾಡುಗಳನ್ನು ಆನಂದಿಸಬಲ್ಲರು!
[ಪುಟ 12 ರಲ್ಲಿರುವ ಚೌಕ]
ಸಾಮಾಜಿಕ ಗೋಷ್ಠಿಗಳಲ್ಲಿ ರಾಜ್ಯ ಸಂಗೀತಗಳನ್ನು ಹಾಡಿರಿ
ರಾಜ್ಯ ಸಂಗೀತಗಳ ನಮ್ಮ ಹಾಡುವಿಕೆಯನ್ನು, ರಾಜ್ಯ ಸಭಾಗೃಹಕ್ಕೆ ಸೀಮಿತವಾಗಿಡಬೇಕಾದ ಅಗತ್ಯವಿಲ್ಲ. ಪೌಲ ಮತ್ತು ಸೀಲರು ಸೆರೆಯಲ್ಲಿರುವಾಗ ಯೆಹೋವನಿಗೆ ಸ್ತುತಿಗಳನ್ನು ಹಾಡಿದರು. (ಅ. ಕೃತ್ಯಗಳು 16:25) ಮತ್ತು ಶಿಷ್ಯ ಯಾಕೋಬನು ಅಂದದ್ದು: “ನಿಮ್ಮಲ್ಲಿ ಸಂತೋಷಪಡುವವನಿದ್ದಾನೋ? ಅವನು ಕೀರ್ತನೆಹಾಡಲಿ.” (ಯಾಕೋಬ 5:13, ಪಾದಟಿಪ್ಪಣಿ) ಸಾಮಾಜಿಕ ಗೋಷ್ಠಿಗಳಲ್ಲಿ ಪ್ರತಿಯೊಬ್ಬರೂ ಒಳ್ಳೆಯ ಹುಮ್ಮಸ್ಸಿನಿಂದ ಇರುತ್ತಾರೆ. ಆದುದರಿಂದ ರಾಜ್ಯ ಸಂಗೀತಗಳನ್ನು ಯಾಕೆ ಹಾಡಬಾರದು? ಹಾಡುವಿಕೆಯು ಪಿಯಾನೊ ಅಥವಾ ಗಿಟಾರ್ನೊಂದಿಗೆ ಜತೆಗೊಂಡಲ್ಲಿ ಇದು ವಿಶೇಷವಾಗಿ ಆನಂದಕರವಾಗಿರಬಲ್ಲದು. ಇಲ್ಲದಿದ್ದರೆ, ನಮ್ಮ ರಾಜ್ಯ ಸಂಗೀತಗಳ ಪಿಯಾನೊ ಟೇಪ್ಗಳಿವೆ; ಈ ಟೇಪ್ಗಳ ಆಲ್ಬಮ್ಗಳು ಅನೇಕ ಸಾಕ್ಷಿ ಕುಟುಂಬಗಳಲ್ಲಿವೆ. ಹಾಡಿನೊಂದಿಗೆ ಜತೆಗೂಡಲು ಅವು ಉತ್ತಮವಾಗಿ ಕಾರ್ಯನಡಿಸುವುದು ಮಾತ್ರವಲ್ಲ, ಸೊಗಸಾದ ಹಿನ್ನೆಲೆ ಗಾಯನಕ್ಕಾಗಿ ಸಹ ಅವು ಆದರ್ಶವಾಗಿವೆ.
[ಪುಟ 8,9 ರಲ್ಲಿರುವಚಿತ್ರ]
ಕೆಂಪು ಸಮುದ್ರದಲ್ಲಿ ಪಾರುಗೊಳಿಸಲ್ಪಟ್ಟ ಬಳಿಕ ಇಸ್ರಾಯೇಲ್ಯರು, ಹಾಡಿನಲ್ಲಿ ತಮ್ಮ ಆನಂದವನ್ನು ವ್ಯಕ್ತಪಡಿಸಿದರು
[ಪುಟ 10 ರಲ್ಲಿರುವ ಚಿತ್ರ]
ಹರ್ಷಭರಿತ ಸಂಗೀತವು ಇಂದು ಕ್ರೈಸ್ತ ಆರಾಧನೆಯ ಒಂದು ಭಾಗವಾಗಿದೆ