ರಾಜ್ಯ ಘೋಷಕರು ಭೂಮಿಯ ಎಲ್ಲೆಡೆಗಳಲ್ಲಿ ಸಕ್ರಿಯರಾಗಿದ್ದಾರೆ
“ನೀವು . . . ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು.”—ಅ. ಕೃತ್ಯಗಳು 1:8.
1. ತನ್ನ ಶಿಷ್ಯರು ಯಾವ ಸಂದೇಶವನ್ನು ನಮ್ಮ ದಿನಗಳಲ್ಲಿ ಘೋಷಿಸುವರೆಂದು ಯೇಸು ಹೇಳಿದನು?
ಭೂಮಿಯಲ್ಲಿ ಮಾಡಲು, ಯೆಹೋವನು ತನ್ನ ಮಗನನ್ನು ಕಳುಹಿಸಿದ ಕೆಲಸವನ್ನು ವರ್ಣಿಸಿದಾಗ, ಯೇಸು ಹೇಳಿದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಸಾರಿ ಹೇಳಬೇಕಾಗಿದೆ.” (ಲೂಕ 4:43) ಹಾಗೆಯೇ, ಅವನು ರಾಜಾಧಿಕಾರದೊಂದಿಗೆ ಹಿಂದಿರುಗಿದಾಗ, ಅವನ ಶಿಷ್ಯರು ಭೂಮಿಯ ಮೇಲೆ ಮಾಡುವ ಕೆಲಸದ ಕುರಿತು ಹೇಳುವಾಗ, ಅವನಂದದ್ದು: “ಇದಲ್ಲದೆ ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:14.
2. (ಎ) ರಾಜ್ಯ ಸಂದೇಶಕ್ಕೆ ವಿಸ್ತಾರವಾದ ಪ್ರಚಾರವು ಕೊಡಲ್ಪಡಬೇಕಾಗಿರುವುದು ಅಷ್ಟು ಪ್ರಾಮುಖ್ಯವಾಗಿರುವುದು ಯಾಕೆ? (ಬಿ) ನಾವು ನಮ್ಮಲ್ಲಿ ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬೇಕು?
2 ದೇವರ ರಾಜ್ಯದ ಕುರಿತ ಸಮಾಚಾರವು ಯಾಕೆ ಇಷ್ಟು ಪ್ರಾಮುಖ್ಯವಾಗಿದೆ? ರಾಜ್ಯಕ್ಕೆ ಯಾಕೆ ಇಂಥ ವಿಸ್ತಾರವಾದ ಪ್ರಚಾರದ ಅಗತ್ಯವಿದೆ? ಯಾಕಂದರೆ ಅದು ಯೆಹೋವನ ವಿಶ್ವ ಸಾರ್ವಭೌಮತೆಯನ್ನು ಮಹಿಮೆ ಪಡಿಸುವ ಮತ್ತು ಆತನ ಪರಿಶುದ್ಧ ನಾಮವನ್ನು ಶುದ್ಧೀಕರಿಸುವ ಮೆಸ್ಸೀಯ ಸಂಬಂಧಿತ ರಾಜ್ಯವಾಗಿದೆ. (1 ಕೊರಿಂಥ 15:24-28) ಅದರ ಮೂಲಕ, ಯೆಹೋವನು ಸದ್ಯದ ಪೈಶಾಚಿಕ ವಿಷಯಗಳ ವ್ಯವಸ್ಥೆಯ ವಿರುದ್ಧ ನ್ಯಾಯವನ್ನು ತೀರಿಸುವನು ಮತ್ತು ಭೂಮಿಯಲ್ಲಿರುವ ಎಲ್ಲಾ ಕುಟುಂಬಗಳನ್ನು ಆಶೀರ್ವದಿಸುವ ತನ್ನ ವಾಗ್ದಾನವನ್ನು ನೆರವೇರಿಸುವನು. (ಆದಿಕಾಂಡ 22:17, 18; ದಾನಿಯೇಲ 2:44) ರಾಜ್ಯದ ಕುರಿತು ಒಂದು ಸಾಕ್ಷಿಯನ್ನು ಕೊಡಿಸುವ ಮೂಲಕ, ತನ್ನ ಮಗನೊಂದಿಗೆ ಸಹ ಬಾಧ್ಯಸ್ಥರಾಗಲು ಅನಂತರ ಯಾರನ್ನು ಅಭಿಷೇಕಿಸಿದನೋ ಅಂತಹವರನ್ನು ಯೆಹೋವನು ಕಂಡುಹಿಡಿದಿದ್ದಾನೆ. ರಾಜ್ಯದ ಘೋಷಣೆಯ ಮೂಲಕ, ಒಂದು ಬೇರ್ಪಡಿಸುವ ಕೆಲಸವು ಕೂಡ ಇಂದು ಸಾಧಿಸಲಾಗುತ್ತಿದೆ. (ಮತ್ತಾಯ 25:31-33) ಎಲ್ಲ ರಾಷ್ಟ್ರಗಳ ಜನರು ಆತನ ಉದ್ದೇಶದ ಕುರಿತು ಎಚ್ಚರಿಸಲ್ಪಡಬೇಕೆಂಬುದಾಗಿ ಯೆಹೋವನು ಬಯಸುತ್ತಾನೆ. ಆತನ ರಾಜ್ಯದಲ್ಲಿ ಪ್ರಜೆಗಳಾಗಿ ಜೀವವನ್ನು ಆಯ್ದುಕೊಳ್ಳಲು ಅವಕಾಶವನ್ನು ಅವರು ಪಡೆಯುವಂತೆ ಕೂಡ ಅವನು ಬಯಸುತ್ತಾನೆ. (ಯೋಹಾನ 3:16; ಅ. ಕೃತ್ಯಗಳು 13:47) ಈ ರಾಜ್ಯವನ್ನು ಘೋಷಿಸುವುದರಲ್ಲಿ ಪೂರ್ಣ ಪಾಲನ್ನು ನೀವು ವಹಿಸುತ್ತಿದ್ದೀರೊ?
ಅನ್ಯಜನಾಂಗಗಳ ಕಾಲಗಳ ಸಮಾಪ್ತಿಯ ನಿರೀಕ್ಷೆಯಲ್ಲಿ
3. (ಎ) ತಕ್ಕದ್ದಾಗಿಯೆ, ಬೈಬಲ್ ಅಧ್ಯಯನಕ್ಕೆ ಗುಂಪುಗಳನ್ನು ಸಂಘಟಿಸಲು ಮಾಡಿದ ಒಂದು ಆರಂಭದ ಸಂಚಾರದಲ್ಲಿ ಸಿ. ಟಿ. ರಸಲರು ಮಾತಾಡಿದ ವಿಷಯವು ಏನಾಗಿತ್ತು? (ಬಿ) ತಮ್ಮ ಜೀವಿತಗಳಲ್ಲಿ ದೇವರ ರಾಜ್ಯಕ್ಕಾಗಿ ತಮ್ಮಲ್ಲಿರಬೇಕಾದ ಸ್ಥಾನದ ಕುರಿತು ಆ ಆರಂಭದ ಬೈಬಲ್ ವಿದ್ಯಾರ್ಥಿಗಳು ಏನನ್ನು ಅರಿತರು?
3 ಇಸವಿ 1880 ರಲ್ಲಿ, ವಾಚ್ ಟವರ್ ಪತ್ರಿಕೆಯ ಪ್ರಥಮ ಸಂಪಾದಕರಾದ, ಚಾರ್ಲ್ಸ್ ಟೇಜ್ ರಸಲ್, ಬೈಬಲ್ ಅಧ್ಯಯನಕ್ಕಾಗಿ ಗುಂಪುಗಳ ರಚನೆಯನ್ನು ಉತ್ತೇಜಿಸಲು ಈಶಾನ್ಯ ಅಮೆರಿಕದ ಒಂದು ಸಂಚಾರವನ್ನು ಮಾಡಿದರು. ಸೂಕ್ತವಾಗಿ, ಅವರು ಮಾತಾಡಿದ ವಿಷಯವು, “ದೇವರ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳು.” ಕಾವಲಿನಬುರುಜುವಿನ ಆರಂಭದ ಸಂಚಿಕೆಗಳಲ್ಲಿ ಪ್ರತಿಬಿಂಬಿತವಾದಂತೆ, ದೇವರ ರಾಜ್ಯದಲ್ಲಿ ಭಾಗಿಯಾಗಲು ಯೋಗ್ಯರೆಂದು ಅವರು ರುಜುಪಡಿಸಲಿರುವಲ್ಲಿ, ಅವರ ಜೀವಿತಗಳನ್ನು, ಅವರ ಸಾಮರ್ಥ್ಯಗಳನ್ನು, ಮತ್ತು ಸಂಪನ್ಮೂಲಗಳನ್ನು ಅದರ ಸೇವೆಯಲ್ಲಿ ಸಂತೋಷದಿಂದ ಉಪಯೋಗಿಸಬೇಕು ಮತ್ತು ಜೀವಿತದಲ್ಲಿ ಮತ್ತೆಲ್ಲವು ಎರಡನೇ ಸ್ಥಾನವನ್ನು ತೆಗೆದುಕೊಳ್ಳಬೇಕು ಎಂದು ಬೈಬಲ್ ವಿದ್ಯಾರ್ಥಿಗಳು (ಅಂದು ಯೆಹೋವನ ಸಾಕ್ಷಿಗಳು ಪರಿಚಿತರಾಗಿದ್ದಂತೆ) ಅರಿತರು. (ಮತ್ತಾಯ 13:44-46) ದೇವರ ರಾಜ್ಯದ ಕುರಿತು ಶುಭ ವಾರ್ತೆಯನ್ನು ಇತರರಿಗೆ ಘೋಷಿಸುವುದು ಅವರ ಜವಾಬ್ದಾರಿಯಲ್ಲಿ ಒಳಗೂಡಿತ್ತು. (ಯೆಶಾಯ 61:1, 2) ಇಸವಿ 1914 ರಲ್ಲಿ ಅನ್ಯಜನಾಂಗಗಳ ಕಾಲಗಳು ಅಂತ್ಯವಾಗುವ ಮುಂಚೆ, ಎಷ್ಟರ ಮಟ್ಟಿಗೆ ಅವರದನ್ನು ಮಾಡಿದರು?
4. ಬೈಬಲ್ ವಿದ್ಯಾರ್ಥಿಗಳ ಆ ಸಣ್ಣ ಗುಂಪು 1914ರ ಮುಂಚೆ ಎಷ್ಟರ ಮಟ್ಟಿಗೆ ಬೈಬಲ್ ಸಾಹಿತ್ಯಗಳನ್ನು ಹಂಚಿತ್ತು?
4 ಇಸವಿ 1870 ಗಳಿಂದ 1914ರ ವರೆಗೆ, ಬೈಬಲ್ ವಿದ್ಯಾರ್ಥಿಗಳು ಸಂಬಂಧಸೂಚಕವಾಗಿ ಸಂಖ್ಯೆಯಲ್ಲಿ ಕೊಂಚವಾಗಿದ್ದರು. ಇಸವಿ 1914 ರೊಳಗೆ, ಸುಮಾರು 5,100 ಜನರು ಮಾತ್ರ ಸಾರ್ವಜನಿಕ ಸಾಕ್ಷಿ ಕೊಡುವುದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಆದರೆ ಅದು ಎಂಥ ಅಸಾಧಾರಣವಾದ ಸಾಕ್ಷಿಯಾಗಿತ್ತು! ವಾಚ್ಟವರ್ ಪ್ರಥಮವಾಗಿ ಪ್ರಕಟಿಸಲ್ಪಟ್ಟ ಕೇವಲ ಎರಡು ವರ್ಷಗಳ ಅನಂತರ, 1881 ರಲ್ಲಿ, ಸಹೋದರರು ಫೂಡ್ ಫಾರ್ ತಿಂಕಿಂಗ್ ಕ್ರಿಶ್ಚನ್ಸ್ ಎಂಬ 162 ಪುಟದ ಪ್ರಕಾಶನದ ಹಂಚುವಿಕೆಯನ್ನು ವಹಿಸಿಕೊಂಡರು. ಕೆಲವು ತಿಂಗಳುಗಳೊಳಗೆ, ಅವರು 12,00,000 ಪ್ರತಿಗಳನ್ನು ಹಂಚಿದರು. ಕೆಲವೇ ವರ್ಷಗಳಲ್ಲಿ, ವಾರ್ಷಿಕವಾಗಿ ಅನೇಕ ಭಾಷೆಗಳಲ್ಲಿ ಕೋಟಿಗಟ್ಟಲೆ ಕಿರುಹೊತ್ತಗೆಗಳು ಹಂಚಲ್ಪಟ್ಟವು.
5. ಕೊಲ್ಪೊರ್ಟರ್ಸ್ ಯಾರಾಗಿದ್ದರು ಮತ್ತು ಯಾವ ವಿಧದ ಹುಮ್ಮಸ್ಸನ್ನು ಅವರು ಪ್ರದರ್ಶಿಸಿದರು?
5 ಮತ್ತೂ 1881 ರಿಂದ ಆರಂಭಿಸಿ, ಕೆಲವರು ತಮ್ಮನ್ನು ಕೊಲ್ಪೊರ್ಟರ್ ಸೌವಾರ್ತಿಕರಾಗಿ ಸೇವೆ ಮಾಡಲು ಒಪ್ಪಿಸಿಕೊಟ್ಟರು. ಇವರು ಇಂದಿನ ಪಯನೀಯರರ (ಪೂರ್ಣ ಸಮಯದ ಸೌವಾರ್ತಿಕರು) ಮುನ್ಸೂಚಕರಾಗಿದ್ದರು. ಕೆಲವು ಮಂದಿ ಕೊಲ್ಪೊರ್ಟರ್ಗಳು, ನಡೆಯುತ್ತಾ ಯಾ ಸೈಕಲಿನ ಮೂಲಕ, ತಾವು ಜೀವಿಸುತ್ತಿದ್ದ ದೇಶದ ಸುಮಾರು ಪ್ರತಿಯೊಂದು ಭಾಗದಲ್ಲಿಯೂ ವೈಯಕ್ತಿಕವಾಗಿ ಸಾಕ್ಷಿ ನೀಡಿದರು. ಇತರರು ವಿದೇಶೀ ಕ್ಷೇತ್ರಗಳನ್ನು ಪ್ರವೇಶಿಸಿದರು ಮತ್ತು ಫಿನ್ಲೆಂಡ್, ಬಾರ್ಬೇಡಸ್, ಮತ್ತು ಬರ್ಮಾ (ಈಗಿನ ಮ್ಯಾನ್ಮಾರ್) ಗಳಂಥ ಪ್ರದೇಶಗಳಿಗೆ ಸುಸಮಾಚಾರವನ್ನು ಕೊಂಡೊಯ್ಯುವುದರಲ್ಲಿ ಮೊದಲಿಗರಾಗಿದ್ದರು. ಯೇಸು ಕ್ರಿಸ್ತನ ಮತ್ತು ಅವನ ಅಪೊಸ್ತಲರಂತಹ ಮಿಷನೆರಿ ಹುರುಪನ್ನು ಅವರು ವ್ಯಕ್ತಪಡಿಸಿದರು.—ಲೂಕ 4:43; ರೋಮಾಪುರ 15:23-25.
6. (ಎ) ಬೈಬಲ್ ಸತ್ಯವನ್ನು ಹರಡಲು ಸಹೋದರ ರಸಲರ ಪ್ರಯಾಣಗಳು ಎಷ್ಟು ವಿಸ್ತೃತವಾಗಿದ್ದವು? (ಬಿ) ಅನ್ಯಜನಾಂಗಗಳ ಕಾಲವು ಅಂತ್ಯವಾಗುವ ಮುಂಚೆ ಹೊರದೇಶಗಳಲ್ಲಿ ಸುವಾರ್ತೆಯ ಸಾರುವಿಕೆಯನ್ನು ಅಭಿವೃದ್ಧಿಗೊಳಿಸಲು ಮತ್ತೇನನ್ನು ಮಾಡಲಾಯಿತು?
6 ಸತ್ಯವನ್ನು ಹರಡಿಸಲು ಸಹೋದರ ರಸಲ್ ತಾನೇ ವಿಸ್ತಾರವಾಗಿ ಪ್ರಯಾಣಿಸಿದರು. ಅವರು ಪದೇ ಪದೇ ಕೆನಡಕ್ಕೆ ಹೋದರು; ಪ್ಯಾನಮ, ಜಮೇಕ, ಮತ್ತು ಕ್ಯೂಬಾದಲ್ಲಿ ಮಾತಾಡಿದರು; ಯೂರೋಪಿಗೆ ಅನೇಕ ಬಾರಿ ಸಂಚರಿಸಿದರು; ಮತ್ತು ಒಂದು ಸೌವಾರ್ತಿಕ ಸಂಚಾರದಲ್ಲಿ ಭೂಮಂಡಲವನ್ನು ಸುತ್ತಿದರು. ವಿದೇಶೀ ಕ್ಷೇತ್ರಗಳಲ್ಲಿ ಸುಸಮಾಚಾರವನ್ನು ಸಾರುವುದರಲ್ಲಿ ಆರಂಭದ ಹೆಜ್ಜೆಯನ್ನು ಮತ್ತು ಮುಂದಾಳುತನವನ್ನು ತೆಗೆದುಕೊಳ್ಳಲು ಅವರು ಬೇರೆ ಪುರುಷರನ್ನು ಕೂಡ ಕಳುಹಿಸಿದರು. ಆಡೊಲ್ಫ್ ವೇಬರ್ 1890 ಗಳ ಮಧ್ಯಭಾಗದಲ್ಲಿ ಯೂರೋಪಿಗೆ ಕಳುಹಿಸಲ್ಪಟ್ಟರು, ಮತ್ತು ಅವರ ಶುಶ್ರೂಷೆಯು ಸ್ವಿಟ್ಸರ್ಲೆಂಡ್ನಿಂದ ಫ್ರಾನ್ಸ್, ಇಟಲಿ, ಜರ್ಮನಿ, ಮತ್ತು ಬೆಲ್ಜಿಯಮ್ ಪ್ರದೇಶಗಳಿಗೆ ತಲಪಿತು. ಕ್ಯಾರಿಬಿಯನ್ ಪ್ರದೇಶಕ್ಕೆ ಇ. ಜೆ. ಕೋವರ್ಡ್ ರನ್ನು ಕಳುಹಿಸಲಾಯಿತು. ಇಸವಿ 1912 ರಲ್ಲಿ ರಾಬರ್ಟ್ ಹಾಲಿಸ್ಟರರನ್ನು ಪೌರಸ್ತ್ಯ ದೇಶಗಳಿಗೆ ನೇಮಿಸಲಾಯಿತು. ಅಲ್ಲಿ, ಹತ್ತು ಭಾಷೆಗಳಲ್ಲಿ ವಿಶೇಷ ಕಿರುಹೊತ್ತಗೆಗಳನ್ನು ತಯಾರಿಸಲಾಯಿತು, ಮತ್ತು ಸ್ವದೇಶೀ ವಿತರಣಕಾರರ ಮೂಲಕ ಭಾರತ, ಚೀನಾ, ಜಪಾನ್, ಮತ್ತು ಕೊರಿಯಾದ ಉದ್ದಕ್ಕೂ ಇವುಗಳ ಲಕ್ಷಾಂತರ ಪ್ರತಿಗಳನ್ನು ಪ್ರಸರಿಸಲಾಯಿತು. ನೀವು ಅಂದು ಜೀವಿಸುತ್ತಿದ್ದಲ್ಲಿ, ನಿಮ್ಮ ಸಮಾಜದೊಳಗೂ ಅದರ ಹೊರಗೂ ಸುವಾರ್ತೆಯೊಂದಿಗೆ ತಲಪಲು ಒಂದು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡಲು ನಿಮ್ಮ ಹೃದಯವು ನಿಮ್ಮನ್ನು ಪ್ರೇರಿಸುತ್ತಿತೋ?
7. (ಎ) ಸಾಕ್ಷಿಕಾರ್ಯವನ್ನು ತೀವ್ರಗೊಳಿಸಲು ವಾರ್ತಾಪತ್ರಿಕೆಗಳು ಬಳಸಲ್ಪಟ್ಟದ್ದು ಹೇಗೆ? (ಬಿ) “ಫೋಟೋ ಡ್ರಾಮಾ ಆಫ್ ಕ್ರಿಯೇಷನ್” ಏನಾಗಿತ್ತು, ಮತ್ತು ಕೇವಲ ಒಂದೇ ವರುಷದಲ್ಲಿ ಅದನ್ನು ಎಷ್ಟು ಜನರು ನೋಡಿದರು?
7 ಅನ್ಯಜನಾಂಗಗಳ ಕಾಲಗಳು ಅವುಗಳ ಅಂತ್ಯವನ್ನು ಸಮೀಪಿಸಿದಂತೆ, ಸಹೋದರ ರಸಲ್ರಿಂದ ಕೊಡಲಾದ ಪ್ರಸಂಗಗಳನ್ನು ಪ್ರಕಟಿಸಲು ವಾರ್ತಾಪತ್ರಿಕೆಗಳನ್ನು ಉಪಯೋಗಿಸಲಾಯಿತು. ಅವುಗಳ ಪ್ರಧಾನ ಒತ್ತು 1914 ನೆಯ ವರ್ಷದ ಮೇಲಿರದೆ, ದೇವರ ಉದ್ದೇಶ ಮತ್ತು ಅದರ ನೆರವೇರಿಕೆಯ ಖಾತರಿಯ ಮೇಲಿತ್ತು. ಒಂದೇ ಬಾರಿ, 1,50,00,000 ಓದುಗರನ್ನು ತಲಪುವ, 2,000 ದಷ್ಟು ವಾರ್ತಾಪತ್ರಿಕೆಗಳು ಈ ಪ್ರಸಂಗಗಳನ್ನು ಕ್ರಮವಾಗಿ ಪ್ರಕಟಿಸುತ್ತಿದ್ದವು. ಆಮೇಲೆ, 1914 ನೆಯ ವರ್ಷವು ಉದಯಿಸಿದಂತೆ, “ಫೋಟೋ ಡ್ರಾಮಾ ಆಫ್ ಕ್ರಿಯೇಷನ್”ನ ಬಹಿರಂಗ ಪ್ರದರ್ಶನವನ್ನು ಸೊಸೈಟಿಯು ಆರಂಭಿಸಿತು. ನಾಲ್ಕು 2 ತಾಸಿನ ಪ್ರಸರಣಗಳಲ್ಲಿ, ಸೃಷ್ಟಿಯಿಂದ ಹಿಡಿದು ಸಹಸ್ರ ವರ್ಷ ಕಾಲದ ವರೆಗಿನ ಬೈಬಲ್ ಸತ್ಯಗಳನ್ನು ಅದು ಸಾದರಪಡಿಸಿತು. ಕೇವಲ ಒಂದೇ ವರ್ಷದಲ್ಲಿ, ಉತ್ತರ ಅಮೆರಿಕ, ಯೂರೋಪ್, ಆಸ್ಟ್ರೇಲಿಯ, ಮತ್ತು ನ್ಯೂ ಜೀಲೆಂಡ್ನಲ್ಲಿ 90 ಲಕ್ಷಕ್ಕಿಂತಲೂ ಹೆಚ್ಚಿನ ಶ್ರೋತೃವೃಂದಗಳು ಅದನ್ನು ಕಂಡಿದ್ದವು.
8. ಇಸವಿ 1914 ರೊಳಗೆ, ಬೈಬಲ್ ವಿದ್ಯಾರ್ಥಿಗಳು ಸುವಾರ್ತೆಯೊಂದಿಗೆ ಎಷ್ಟು ದೇಶಗಳನ್ನು ತಲಪಿದರು?
8 ಲಭ್ಯವಿರುವ ವರದಿಗಳಿಗನುಸಾರ, 1914 ರ ಕೊನೆಯ ಭಾಗದೊಳಗೆ, ಸೌವಾರ್ತಿಕರ ಈ ಉತ್ಸಾಹಿ ಗುಂಪು ದೇವರ ರಾಜ್ಯದ ತಮ್ಮ ಘೋಷಣೆಯನ್ನು 68 ದೇಶಗಳಲ್ಲಿ ಹರಡಿಸಿದ್ದರು.a ಆದರೆ ಅದೊಂದು ಆರಂಭವಾಗಿತ್ತು ಮಾತ್ರ!
ಸ್ಥಾಪಿತ ರಾಜ್ಯವನ್ನು ಉತ್ಸಾಹದಿಂದ ಘೋಷಿಸುವುದು
9. ಸೀಡರ್ ಪಾಯಿಂಟ್ ಅಧಿವೇಶನಗಳಲ್ಲಿ, ರಾಜ್ಯದ ಸಾಕ್ಷಿ ಕಾರ್ಯಕ್ಕೆ ವಿಶೇಷ ಪ್ರಚೋದನೆಯು ಕೊಡಲ್ಪಟ್ಟದ್ದು ಹೇಗೆ?
9 ಬೈಬಲ್ ವಿದ್ಯಾರ್ಥಿಗಳು ಸೀಡರ್ ಪಾಯಿಂಟ್, ಓಹೈಒ ವಿನಲ್ಲಿ 1919 ರಲ್ಲಿ, ನೆರೆದುಬಂದಾಗ, ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ, ಸಹೋದರ ಜೆ. ಎಫ್. ರದರ್ಫರ್ಡ್ ಘೋಷಿಸಿದ್ದು: “ನಮ್ಮ ವೃತ್ತಿಯು, ಬರುವಂತಹ ಮಹಿಮಾಭರಿತ ಮೆಸ್ಸೀಯನ ರಾಜ್ಯವನ್ನು ಪ್ರಕಟಿಸುವುದಾಗಿತ್ತು ಮತ್ತು ಪ್ರಕಟಿಸುವುದಾಗಿದೆ.” ಇಸವಿ 1922 ರಲ್ಲಿ, ಎರಡನೆಯ ಸೀಡರ್ ಪಾಯಿಂಟ್ ಅಧಿವೇಶನದಲ್ಲಿ, ಅನ್ಯಜನಾಂಗಗಳ ಕಾಲದ ಅಂತ್ಯದಲ್ಲಿ, 1914 ರಲ್ಲಿ, ‘ಮಹಿಮೆಯ ರಾಜನು ತನ್ನ ಮಹಾ ಶಕ್ತಿಯನ್ನು ವಹಿಸಿಕೊಂಡು ಆಳಲು ಆರಂಭಿಸಿದ್ದಾನೆ,’ ಎಂಬ ನಿಜತ್ವವನ್ನು ಸಹೋದರ ರದರ್ಫರ್ಡ್ ಎತ್ತಿ ನುಡಿದರು. ಆಮೇಲೆ, ಅವರು ವಿವಾದಾಂಶವನ್ನು ನ್ಯಾಯವಾಗಿಯೆ ತಮ್ಮ ಸಭಿಕರ ಮೇಲೆ ಹಾಕಿ ಅಂದದ್ದು: “ಮಹಿಮೆಯ ರಾಜನು ತನ್ನ ಆಳಿಕೆಯನ್ನು ಆರಂಭಿಸಿದ್ದಾನೆ ಎಂದು ನೀವು ನಂಬುತ್ತೀರೋ? ಹಾಗಿರುವಲ್ಲಿ, ಅತ್ಯುನ್ನತ ದೇವರ ಮಕ್ಕಳಾಗಿರುವ ನೀವು, ಕ್ಷೇತ್ರಕ್ಕೆ ತೆರಳಿರಿ! . . . ದೂರವಾಗಿಯೂ ವಿಸ್ತಾರವಾಗಿಯೂ ಸಂದೇಶವನ್ನು ಪ್ರಚುರಪಡಿಸಿರಿ. ಯೆಹೋವನು ದೇವರು ಎಂಬುದಾಗಿಯೂ, ಯೇಸು ಕ್ರಿಸ್ತನು ರಾಜಾಧಿರಾಜನು ಮತ್ತು ಕರ್ತರ ಕರ್ತನೆಂದೂ ಲೋಕವು ತಿಳಿಯಲೇ ಬೇಕು. ಇದು ಎಲ್ಲಾ ದಿನಗಳ ದಿನವಾಗಿದೆ. ನೋಡಿರಿ, ರಾಜನು ಆಳುತ್ತಾನೆ! ನೀವು ಅವನ ಪ್ರಕಟನೋದ್ಯೋಗಿಗಳು.”
10, 11. ರೇಡಿಯೋ, ಸೌಂಡ್ ಕಾರುಗಳು, ಮತ್ತು ಜಾಹಿರಾತುಪತ್ರಗಳ ಧರಿಸುವಿಕೆ ಇವೆಲ್ಲವುಗಳು ರಾಜ್ಯದ ಸತ್ಯದೊಂದಿಗೆ ಜನರನ್ನು ತಲಪಲು ಹೇಗೆ ಬಳಸಲ್ಪಟ್ಟವು?
10 ಆ ಸೀಡರ್ ಪಾಯಿಂಟ್ ಅಧಿವೇಶನಗಳ ಅನಂತರ 70 ಕ್ಕಿಂತಲೂ ಅಧಿಕ ವರ್ಷಗಳು ಕಳೆದಿವೆ—ತನ್ನ ಮಗನ ಮೆಸ್ಸೀಯ ಸಂಬಂಧಿತ ಆಳಿಕೆಯ ಮುಖಾಂತರ ಯೆಹೋವನು ತನ್ನ ಸಾರ್ವಭೌಮತೆಯನ್ನು ವ್ಯಕ್ತಪಡಿಸಲು ಆರಂಭಿಸಿ ಸುಮಾರು 80 ವರ್ಷಗಳು ಕಳೆದಿವೆ. ಅವರಿಗಾಗಿ ದೇವರ ವಾಕ್ಯದಲ್ಲಿ ರೂಪಿಸಲಾದಂಥ ಕೆಲಸವನ್ನು ಯೆಹೋವನ ಸಾಕ್ಷಿಗಳು ನಿಜವಾಗಿಯೂ ಎಷ್ಟರ ಮಟ್ಟಿಗೆ ಸಾಧಿಸಿದ್ದಾರೆ? ಅದರಲ್ಲಿ ನೀವು ವೈಯಕ್ತಿಕವಾಗಿ ಯಾವ ಪಾಲನ್ನು ವಹಿಸುತ್ತಿದ್ದೀರಿ?
11 ಇಸವಿ 1920 ಗಳ ಆದಿ ಭಾಗದಲ್ಲಿ, ರಾಜ್ಯದ ಸಂದೇಶಕ್ಕೆ ವ್ಯಾಪಕವಾದ ಪ್ರಚಾರವನ್ನು ನೀಡಲು ರೇಡಿಯೊ ಒಂದು ಉಪಕರಣವಾಗಿ ದೊರೆಯಿತು. ಇಸವಿ 1930 ಗಳಲ್ಲಿ, ರಾಜ್ಯವನ್ನು ಲೋಕದ ನಿರೀಕ್ಷೆಯಾಗಿ ತೋರಿಸುವ ಅಧಿವೇಶನದ ಭಾಷಣಗಳನ್ನು ರೇಡಿಯೋ ನೆಟ್ವರ್ಕ್ಸ್ ಯಾ ಚೇನ್ ಪ್ರಸಾರಗಳ ಮತ್ತು ಭೂಮಂಡಲವನ್ನು ಸುತ್ತುವರಿದ ದೂರವಾಣಿ ಲೈನ್ಗಳ ಮೂಲಕ ಪ್ರಚುರಪಡಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಬೈಬಲ್ ಭಾಷಣಗಳನ್ನು ನುಡಿಸಲು ಧ್ವನಿವರ್ಧಕಗಳೊಂದಿಗೆ ಸಜ್ಜಿತವಾದ ಕಾರುಗಳನ್ನು ಕೂಡ ಬಳಸಲಾಯಿತು. ಆಮೇಲೆ, 1936 ರಲ್ಲಿ, ಸ್ಕಾಟ್ಲ್ಯಾಂಡಿನ ಗ್ಲಾಸ್ಗೋನಲ್ಲಿ, ನಮ್ಮ ಸಹೋದರರು ಬಹಿರಂಗ ಭಾಷಣವನ್ನು ಪ್ರಕಟಿಸಲು ವಾಣಿಜ್ಯ ಜಿಲ್ಲೆಗಳಲ್ಲಿ ನಡೆದಾಡುವಾಗ, ಜಾಹಿರಾತುಪತ್ರಗಳನ್ನು ಧರಿಸಲು ಆರಂಭಿಸಿದರು. ನಮ್ಮ ಸಂಖ್ಯೆಗಳು ಕಡಿಮೆ ಇದ್ದ ಸಮಯದಲ್ಲಿ, ಇವೆಲ್ಲವು, ಅನೇಕ ಜನರಿಗೆ ಒಂದು ಸಾಕ್ಷಿಯನ್ನು ಕೊಡುವ ಪರಿಣಾಮಕಾರಿಯಾದ ವಿಧಾನಗಳಾಗಿದ್ದವು.
12. ಶಾಸ್ತ್ರವಚನಗಳು ತೋರಿಸುವಂತೆ, ನಮಗೆ ವೈಯಕ್ತಿಕವಾಗಿ ಸಾಕ್ಷಿ ಕೊಡಲು ಇರುವ ಹೆಚ್ಚು ಪರಿಣಾಮಕಾರಿ ವಿಧಾನಗಳಲ್ಲಿ ಒಂದು ಯಾವುದು?
12 ಖಂಡಿತವಾಗಿ, ಕ್ರೈಸ್ತರೋಪಾದಿ ಒಂದು ಸಾಕ್ಷಿಯನ್ನು ನೀಡುವ ಜವಾಬ್ದಾರಿಯು ವೈಯಕ್ತಿಕವಾಗಿ ನಮಗಿದೆ ಎಂಬುದನ್ನು ಶಾಸ್ತ್ರಗಳು ಸ್ಪಷ್ಟಮಾಡುತ್ತವೆ. ವಾರ್ತಾಪತ್ರಿಕೆಗಳ ಲೇಖನಗಳು ಯಾ ರೇಡಿಯೋ ಪ್ರಸಾರಗಳು ಮಾತ್ರ ಆ ಕೆಲಸವನ್ನು ಮಾಡುವಂತೆ ನಾವು ಬಿಡಲಾಗುವುದಿಲ್ಲ. ಸಾವಿರಾರು ನಿಷ್ಠಾವಂತ ಕ್ರೈಸ್ತರು—ಪುರುಷರು, ಸ್ತ್ರೀಯರು, ಮತ್ತು ಯುವ ಜನರು—ಆ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ. ಫಲಿತಾಂಶವಾಗಿ, ಮನೆಯಿಂದ ಮನೆಗೆ ಸಾರುವಿಕೆಯು ಯೆಹೋವನ ಸಾಕ್ಷಿಗಳನ್ನು ಗುರುತಿಸುವ ಒಂದು ಚಿಹ್ನೆ ಆಗಿ ಪರಿಣಮಿಸಿದೆ.—ಅ. ಕೃತ್ಯಗಳು 5:42; 20:20.
ಸರ್ವ ನಿವಾಸಿತ ಲೋಕದಲ್ಲಿ ತಲಪುವುದು
13, 14. (ಎ) ಶುಶ್ರೂಷೆಯನ್ನು ಮುಂದುವರಿಸಲು ಕೆಲವು ಸಾಕ್ಷಿಗಳು ಯಾಕೆ ಬೇರೆ ಪಟ್ಟಣಗಳಿಗೆ ಮತ್ತು ಇತರ ದೇಶಗಳಿಗೂ, ಸ್ಥಳಾಂತರಿಸುತ್ತಾರೆ? (ಬಿ) ಒಬ್ಬನ ಹುಟ್ಟು ದೇಶದ ಜನರಿಗಾಗಿ ಪ್ರೀತಿಯ ಚಿಂತೆಯು ಸುವಾರ್ತೆಯನ್ನು ಹರಡಲು ಹೇಗೆ ಸಹಾಯಿಸಿತು?
13 ರಾಜ್ಯದ ಸಂದೇಶವು ಸರ್ವಲೋಕದಲ್ಲಿ ಸಾರಲ್ಪಡಬೇಕು ಎಂಬುದನ್ನು ತಿಳಿದು, ಯೆಹೋವನ ಸಾಕ್ಷಿಗಳಲ್ಲಿ ಕೆಲವರು, ತಮ್ಮ ಸ್ವಂತ ಸಮುದಾಯವನ್ನು ದಾಟಿ ಇರುವ ಪ್ರದೇಶಗಳಿಗೆ ತಲಪಲು ತಾವು ವೈಯಕ್ತಿಕವಾಗಿ ಏನನ್ನು ಮಾಡಬಹುದೆಂದು ಸಹ ಗಂಭೀರವಾಗಿ ಪರಿಗಣಿಸಿದ್ದಾರೆ.
14 ಅನೇಕ ಜನರು ತಮ್ಮ ಜನ್ಮಸ್ಥಳದಿಂದ ದೂರ ಹೋದ ಅನಂತರವೇ ಸತ್ಯವನ್ನು ಕಲಿತಿದ್ದಾರೆ. ಅವರು ಅನೇಕ ವೇಳೆ ಪ್ರಾಪಂಚಿಕ ಲಾಭಕ್ಕಾಗಿಯೇ ವಲಸೆ ಹೋಗಿದ್ದಿರಬಹುದಾದರೂ, ಅವರು ಹೆಚ್ಚು ಬೆಲೆಯುಳ್ಳದನ್ನು ಕಂಡುಕೊಂಡರು, ಮತ್ತು ಸತ್ಯವನ್ನು ಹಂಚಿಕೊಳ್ಳಲು ತಮ್ಮ ಹುಟ್ಟು ಪ್ರದೇಶಕ್ಕೆ ಅಥವಾ ಸಮುದಾಯಕ್ಕೆ ಹಿಂದಿರುಗುವಂತೆ ಕೆಲವರು ನಡೆಸಲ್ಪಟ್ಟಿದ್ದಾರೆ. ಹೀಗೆ, ಈ ಶತಮಾನದ ಆದಿ ಭಾಗದಲ್ಲಿ, ಸುಸಮಾಚಾರದ ಸಾರುವಿಕೆಯು ಸ್ಕ್ಯಾಂಡಿನೇವಿಯ, ಗ್ರೀಸ್, ಇಟಲಿ, ಪೂರ್ವ ಯೂರೋಪಿನ ದೇಶಗಳು, ಮತ್ತು ಇತರ ಅನೇಕ ಪ್ರದೇಶಗಳಲ್ಲಿ ವಿಸ್ತಾರಗೊಂಡಿತು. ಈಗಲು ಕೂಡ, 1990 ಗಳಲ್ಲಿ, ಅದೇ ವಿಧಾನದಲ್ಲಿ ರಾಜ್ಯ ಸಂದೇಶವು ಹರಡುತ್ತಿದೆ.
15. ಇಸವಿ 1920 ಗಳು ಮತ್ತು 1930 ಗಳಲ್ಲಿ, ಯೆಶಾಯ 6:8 ರಲ್ಲಿ ಹೇಳಲಾದಂತಹ ಮನೋಭಾವವಿರುವ ಕೆಲವರ ಮೂಲಕ ಏನು ಪೂರೈಸಲ್ಪಟ್ಟಿತು?
15 ಕೆಲವರು ಅವರ ಜೀವಿತಗಳಲ್ಲಿ ದೇವರ ವಾಕ್ಯದ ಸಲಹೆಯನ್ನು ಅನ್ವಯಿಸುತ್ತಾ, ಆ ಸಮಯದಲ್ಲಿ ಅವರು ಈ ಮುಂಚೆ ಜೀವಿಸಿದ್ದಿರದ ಸ್ಥಳಗಳಲ್ಲಿ ಸೇವೆಗಾಗಿ ತಮ್ಮನ್ನು ದೊರಕಿಸಿಕೊಂಡಿದ್ದಾರೆ. ಡಬ್ಲ್ಯೂ. ಆರ್. ಬ್ರೌನ್ (ಅನೇಕ ಬಾರಿ “ಬೈಬಲ್ ಬ್ರೌನ್” ಎಂದು ಕರೆಯಲ್ಪಟ್ಟಿರುತ್ತಾರೆ) ಇವರಲ್ಲಿ ಒಬ್ಬರು. ಸೌವಾರ್ತಿಕ ಕೆಲಸವನ್ನು ಮುಂದುವರಿಸಲು, 1923 ರಲ್ಲಿ, ಅವರು ಟ್ರಿನಿಡ್ಯಾಡ್ನಿಂದ ಪಶ್ಚಿಮ ಆಫ್ರಿಕಕ್ಕೆ ಸ್ಥಳಾಂತರಿಸಿದರು. ಇಸವಿ 1930 ಗಳಲ್ಲಿ, ಆಫ್ರಿಕದ ಪೂರ್ವ ಕರಾವಳಿಗೆ ರಾಜ್ಯದ ಸಂದೇಶವನ್ನು ಕೊಂಡೊಯ್ದವರಲ್ಲಿ ಫ್ರ್ಯಾಂಕ್ ಮತ್ತು ಗ್ರೇ ಸ್ಮಿತ್, ರಾಬರ್ಟ್ ನಿಜ್ಬೆಟ್, ಮತ್ತು ಡೇವಿಡ್ ನಾರ್ಮನ್ ಸೇರಿರುತ್ತಾರೆ. ಇನ್ನಿತರರು ದಕ್ಷಿಣ ಅಮೆರಿಕದ ಕ್ಷೇತ್ರವನ್ನು ಬೆಳೆಸಲು ಸಹಾಯಿಸಿದರು. ಇಸವಿ 1920 ಗಳ ಆರಂಭದಲ್ಲಿ, ಅರ್ಜೆಂಟಿನಾ, ಬ್ರೆಜಿಲ್, ಬೊಲಿವಿಯಾ, ಚಿಲಿ, ಮತ್ತು ಪೆರುವಿನಲ್ಲಿ ಕೆನಡದವರಾದ ಜಾರ್ಜ್ ಯಂಗ್ರು ಕೆಲಸದಲ್ಲಿ ಭಾಗಿಗಳಾದರು. ಸ್ಪೆಯ್ನ್ನಲ್ಲಿ ಸೇವೆ ಸಲ್ಲಿಸಿದ ಹ್ವಾನ್ ಮೂನ್ಯೀಸ್, ಅರ್ಜೆಂಟಿನಾ, ಚಿಲಿ, ಪ್ಯಾರಗ್ವೈ, ಮತ್ತು ಯುರಗ್ವೈಯಲ್ಲಿ ಮುಂದುವರಿದರು. ಇವರೆಲ್ಲರೂ ಯೆಶಾಯ 6:8 ರಲ್ಲಿ: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು,” ಎಂಬುದರಲ್ಲಿ ವ್ಯಕ್ತವಾಗಿರುವಂತಹ ಆತ್ಮವನ್ನು ಪ್ರದರ್ಶಿಸಿದ್ದಾರೆ.
16. ಜನಸಂಖ್ಯೆಯ ಪ್ರಮುಖ ಕೇಂದ್ರಗಳಲಲ್ಲದ್ಲೆ ಬೇರೆಲ್ಲಿ ಸಹ ಯುದ್ಧ ಪೂರ್ವ ವರುಷಗಳಲ್ಲಿ ಸಾಕ್ಷಿಕಾರ್ಯವು ಮಾಡಲ್ಪಟ್ಟಿತು?
16 ಸುಸಮಾಚಾರದ ಸಾರುವಿಕೆಯು ಬಹುದೂರದ ಪ್ರದೇಶಗಳಲ್ಲಿಯೂ ತಲಪುತ್ತಿತ್ತು. ಸಾಕ್ಷಿಗಳಿಂದ ಚಲಾಯಿಸಲ್ಪಟ್ಟ ದೋಣಿಗಳು, ನ್ಯೂಫೌಂಡ್ಲ್ಯಾಂಡಿನ ಎಲ್ಲ ಬಂದರುಗಳನ್ನು, ನಾರ್ವೆಯ ಕರಾವಳಿಯಿಂದ ಉತ್ತರ ಧ್ರುವದೊಳಗೆ, ಪ್ಯಾಸಿಫಿಕ್ನ ದ್ವೀಪಗಳನ್ನು, ಮತ್ತು ಆಗ್ನೇಯ ಏಷಿಯದ ಬಂದರುಗಳನ್ನು ಸಂದರ್ಶಿಸುತ್ತಿದ್ದವು.
17. (ಎ) ಇಸವಿ 1935 ರೊಳಗೆ, ಸಾಕ್ಷಿಗಳಿಂದ ಎಷ್ಟು ದೇಶಗಳು ತಲುಪಲ್ಪಟ್ಟಿದ್ದವು? (ಬಿ) ಆ ಸಂದರ್ಭದಲ್ಲಿ ಕೆಲಸವು ಪೂರ್ಣಗೊಂಡಿರಲಿಲ್ಲವೇಕೆ?
17 ಆಶ್ಚರ್ಯಕರವಾಗಿ, 1935 ರೊಳಗೆ, ಯೆಹೋವನ ಸಾಕ್ಷಿಗಳು 115 ದೇಶಗಳಲ್ಲಿ ಸಾರುವುದರಲ್ಲಿ ಮಗ್ನರಾಗಿದ್ದರು, ಮತ್ತು ಸಾಕ್ಷಿಕಾರ್ಯದ ಯಾತ್ರೆಗಳಿಂದ ಯಾ ಅಂಚೆಯ ಮುಖಾಂತರ ಕಳುಹಿಸಿದ ಸಾಹಿತ್ಯದ ಮೂಲಕ, ಇನ್ನೂ ಬೇರೆ 34 ದೇಶಗಳನ್ನು ಈಗಾಗಲೇ ಅವರು ಮುಟ್ಟಿದ್ದರು. ಆದರೂ, ಆ ಕೆಲಸವು ಪೂರ್ಣಗೊಂಡಿರಲಿಲ್ಲ. ಆ ವರುಷ ಯೆಹೋವನು ತನ್ನ ಹೊಸ ಲೋಕದೊಳಗೆ ಪಾರಾಗಬಲ್ಲ “ಮಹಾ ಸಮೂಹವನ್ನು” ಒಟ್ಟುಗೂಡಿಸುವ ತನ್ನ ಉದ್ದೇಶಕ್ಕೆ ಅವರ ಕಣ್ಣುಗಳನ್ನು ತೆರೆದನು. (ಪ್ರಕಟನೆ 7:9, 10, 14) ಇನ್ನೂ ಹೆಚ್ಚಿನ ಸಾಕ್ಷಿ ನೀಡುವಿಕೆಯನ್ನು ಪೂರೈಸಲಿಕ್ಕಿತ್ತು!
18. ರಾಜ್ಯ ಘೊಷಣೆಯ ಕೆಲಸದಲ್ಲಿ, ಗಿಲ್ಯಡ್ ಶಾಲೆ ಮತ್ತು ಮಿನಿಸ್ಟೀರಿಯಲ್ ಟ್ರೈನಿಂಗ್ ಸ್ಕೂಲ್ಗಳ ಮೂಲಕ ಯಾವ ಪಾತ್ರಗಳು ವಹಿಸಲ್ಪಟ್ಟವು?
18 ಲೋಕ ಯುದ್ಧ II ಭೂಮಿಯನ್ನು ಆವರಿಸಿರುವಾಗಲೂ ಮತ್ತು ಯೆಹೋವನ ಸಾಕ್ಷಿಗಳ ಸಾಹಿತ್ಯ ಮತ್ತು ಚಟುವಟಿಕೆಯ ಮೇಲೆ ನಿಷೇಧಗಳು ಅನೇಕ ದೇಶಗಳಲ್ಲಿ ಇರುವಾಗಲೂ, ಅಂತಾರಾಷ್ಟ್ರೀಯ ರಾಜ್ಯ ಘೋಷಣೆಯ ಇನ್ನೂ ಮಹತ್ತರ ಕೆಲಸವನ್ನು ಪೂರೈಸಲು ಭಾವಿ ಮಿಷನೆರಿಗಳನ್ನು ತರಬೇತುಗೊಳಿಸಲು, ವಾಚ್ ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್, ತನ್ನ ದ್ವಾರಗಳನ್ನು ತೆರೆಯಿತು. ಈ ದಿನದ ವರೆಗೂ, ಗಿಲ್ಯಡ್ನ ಪದವೀಧರರು 200 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಸಾಹಿತ್ಯವನ್ನು ನೀಡುವುದಕ್ಕಿಂತ ಹೆಚ್ಚನ್ನು ಮಾಡಿದ್ದಾರೆ ಮತ್ತು ಇನ್ನೊಂದು ಪ್ರದೇಶಕ್ಕೆ ಸಾಗಿದ್ದಾರೆ. ಅವರು ಬೈಬಲ್ ಅಭ್ಯಾಸಗಳನ್ನು ನಡಿಸಿ, ಸಭೆಗಳನ್ನು ಸಂಘಟಿಸಿ, ಮತ್ತು ದೇವಪ್ರಭುತ್ವ ಜವಾಬ್ದಾರಿಯನ್ನು ಹೊರುವಂತೆ ಜನರಿಗೆ ತರಬೇತಿಯನ್ನು ನೀಡಿದ್ದಾರೆ. ಇತ್ತೀಚೆಗೆ, ಮಿನಿಸ್ಟೀರಿಯಲ್ ಟ್ರೈನಿಂಗ್ ಸ್ಕೂಲ್ನಿಂದ ಪದವೀಧರರಾದ ಹಿರಿಯರು ಮತ್ತು ಶುಶ್ರೂಷಾ ಸೇವಕರು ಕೂಡ ಆರು ಖಂಡಗಳಲ್ಲಿ ಈ ಕೆಲಸದ ಸಂಬಂಧದಲ್ಲಿ ಪ್ರಾಮುಖ್ಯ ಅಗತ್ಯಗಳನ್ನು ತುಂಬಲು ಸಹಾಯ ಮಾಡಿದ್ದಾರೆ. ಮುಂದುವರಿದ ಬೆಳವಣಿಗೆಗಾಗಿ ಒಂದು ಗಟ್ಟಿಯಾದ ಆಸ್ತಿವಾರವು ಇಡಲ್ಪಟ್ಟಿದೆ.—ಹೋಲಿಸಿ 2 ತಿಮೊಥೆಯ 2:2.
19. ಹೆಚ್ಚಿನ ಅಗತ್ಯವಿರುವ ಪ್ರದೇಶಗಳಲ್ಲಿ ಸೇವೆಸಲ್ಲಿಸುವ ಆಮಂತ್ರಣಗಳಿಗೆ ಎಷ್ಟರಮಟ್ಟಿಗೆ ಯೆಹೋವನ ಸೇವಕರು ಪ್ರತಿಕ್ರಿಯಿಸಿದ್ದಾರೆ?
19 ಕೆಲಸವನ್ನು ಮಾಡಿರದ ಕೆಲವು ಟೆರಿಟೊರಿಗಳ ಜಾಗ್ರತೆವಹಿಸುವಲ್ಲಿ ಇನ್ನಿತರರು ಸಹಾಯಿಸಬಲ್ಲರೋ? ಇಸವಿ 1957 ರಲ್ಲಿ, ಲೋಕವ್ಯಾಪಕ ಅಧಿವೇಶನಗಳಲ್ಲಿ, ವ್ಯಕ್ತಿಗಳು ಮತ್ತು ಕುಟುಂಬಗಳು—ಯೆಹೋವನ ಪಕ್ವತೆಯ ಸಾಕ್ಷಿಗಳು—ವಾಸಮಾಡಲು ಮತ್ತು ತಮ್ಮ ಶುಶ್ರೂಷೆಯನ್ನು ಮುಂದುವರಿಸಲು ಹೆಚ್ಚಿನ ಅಗತ್ಯವಿರುವ ಪ್ರದೇಶಗಳಿಗೆ ಹೋಗುವುದನ್ನು ಪರಿಗಣಿಸುವಂತೆ ಉತ್ತೇಜಿಸಲ್ಪಟ್ಟರು. “ನೀನು . . . ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕೆಂದು,” ಬೇಡಿಕೊಂಡ ಒಬ್ಬ ಮನುಷ್ಯನನ್ನು ದರ್ಶನದಲ್ಲಿ ಕಂಡ ಪೌಲನಿಗೆ, ದೇವರ ಮೂಲಕ ಕೊಡಲ್ಪಟ್ಟ ಆಮಂತ್ರಣದಂತೆಯೇ ಇದು ಇತ್ತು. (ಅ. ಕೃತ್ಯಗಳು 16:9, 10) ಕೆಲವರು 1950 ಗಳಲ್ಲಿ ಸ್ಥಳ ಬದಲಾಯಿಸಿದರು; ಇತರರು, ತದನಂತರ ಮಾಡಿದರು. ಸಾವಿರದಷ್ಟು ಹೆಚ್ಚಿನ ಜನರು ಐರ್ಲಂಡ್ ಮತ್ತು ಕೊಲಂಬಿಯಕ್ಕೆ; ಬೇರೆ ಅನೇಕ ಸ್ಥಳಗಳಿಗೆ ನೂರಾರು ಜನರು ಹೋದರು. ಇತರ ಹತ್ತಾರು ಸಾವಿರಾರು ಜನರು ತಮ್ಮ ಸ್ವಂತ ದೇಶದೊಳಗೆ ಹೆಚ್ಚಿನ ಅಗತ್ಯವಿರುವ ಪ್ರದೇಶಗಳಿಗೆ ಹೋದರು.—ಕೀರ್ತನೆ 110:3.
20. (ಎ) ಇಸವಿ 1935 ರಿಂದ, ಮತ್ತಾಯ 24:14 ರಲ್ಲಿನ ಯೇಸುವಿನ ಪ್ರವಾದನೆಯ ನೆರವೇರಿಕೆಯಲ್ಲಿ ಯಾವುದು ಸಾಧಿಸಲ್ಪಟ್ಟಿದೆ? (ಬಿ) ಕಳೆದ ಕೆಲವು ವರುಷಗಳಲ್ಲಿ, ಕೆಲಸವು ಹೇಗೆ ತ್ವರಿತಗೊಳಿಸಲ್ಪಟ್ಟಿರುತ್ತದೆ?
20 ಯೆಹೋವನ ಜನರ ಮೇಲೆ ಆತನ ಆಶೀರ್ವಾದದೊಂದಿಗೆ, ರಾಜ್ಯ ಘೊಷಣೆಯ ಕಾರ್ಯವು ಅಸಾಧಾರಣ ಗತಿಯಲ್ಲಿ ಮುಂದುವರಿಯುತ್ತಿದೆ. ಇಸವಿ 1935 ರ ಈಚೆಗೆ ಪ್ರಚಾರಕರ ಸಂಖ್ಯೆಯು ಸಾಧಾರಣ ಎಂಬತ್ತು ಪಟ್ಟು ಹೆಚ್ಚಿದೆ, ಮತ್ತು ಪಯನೀಯರ್ ಪಂಕ್ತಿಗಳಲಿನ್ಲ ಬೆಳವಣಿಗೆಯ ದರವು ಪ್ರಚಾರಕರ ಸಂಖ್ಯೆಯಲ್ಲಿನ ಬೆಳವಣಿಗೆಯ ದರಕ್ಕಿಂತ 60 ಸೇಕಡ ಹೆಚ್ಚಾಗಿದೆ. ಮನೆ ಬೈಬಲ್ ಅಭ್ಯಾಸ ಏರ್ಪಾಡು 1930 ಗಳಲ್ಲಿ ಆರಂಭಿಸಲಾಗಿತ್ತು. ಈಗ ಸರಾಸರಿ 45 ಲಕ್ಷಕ್ಕಿಂತಲೂ ಹೆಚ್ಚು ಪ್ರತಿ ತಿಂಗಳು ನಡೆಸಲ್ಪಡುತ್ತಿವೆ. ಇಸವಿ 1935 ರಿಂದ 1500 ಕೋಟಿಗಿಂತಲೂ ಅಧಿಕ ತಾಸುಗಳನ್ನು ರಾಜ್ಯ ಘೋಷಣೆಯ ಕೆಲಸಕ್ಕಾಗಿ ವಿನಿಯೋಗಿಸಲಾಗಿದೆ. ಸುವಾರ್ತೆಯ ಕ್ರಮದ ಸಾರುವಿಕೆಯು ಈಗ 231 ದೇಶಗಳಲ್ಲಿ ಮಾಡಲ್ಪಡುತ್ತಿದೆ. ಪೂರ್ವ ಯೂರೋಪ್ ಮತ್ತು ಆಫ್ರಿಕದಲ್ಲಿರುವ ಟೆರಿಟೊರಿಗಳು ಸುಸಮಾಚಾರದ ಹೆಚ್ಚು ಸ್ವತಂತ್ರ ಸಾರುವಿಕೆಗಾಗಿ ತೆರೆಯಲ್ಪಟ್ಟಿದ್ದರಿಂದ, ರಾಜ್ಯದ ಸಂದೇಶವನ್ನು ಸಾರ್ವಜನಿಕರ ಮುಂದೆ ಪ್ರಧಾನವಾಗಿ ಪ್ರದರ್ಶಿಸಲು ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಲಾಗಿದೆ. ಯೆಶಾಯ 60:22 ರಲ್ಲಿ ಯೆಹೋವನು ಬಹಳ ಪೂರ್ವದಲ್ಲಿಯೇ ವಾಗ್ದಾನಿಸಿದಂತೆ, ಆತನು ಖಂಡಿತವಾಗಿಯೂ ‘ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುತ್ತಿದ್ದಾನೆ.’ ಅದರಲ್ಲಿ ಪಾಲಿಗರಾಗಲು ನಮಗೆ ಎಂತಹ ಮಹಾ ಸುಯೋಗವಿದೆ!
ಸಾಧ್ಯವಿರುವ ಪ್ರತಿಯೊಬ್ಬನನ್ನು ಸುವಾರ್ತೆಯೊಂದಿಗೆ ತಲಪುವುದು
21, 22. ನಾವು ಸೇವಿಸುವಲ್ಲೆಲ್ಲ ಹೆಚ್ಚು ಪರಿಣಾಮಕಾರಿಯಾಗಲು ವೈಯಕ್ತಿಕವಾಗಿ ನಾವು ಏನು ಮಾಡಬಲ್ಲೆವು?
21 ಕೆಲಸವು ಪೂರ್ಣಗೊಂಡಿದೆ ಎಂದು ಸ್ವಾಮಿಯು ಇನ್ನೂ ಹೇಳಿಲ್ಲ. ಅನೇಕ ಸಾವಿರ ಜನರು ಇನ್ನೂ ಸತ್ಯ ಆರಾಧನೆಗೆ ಕೈ ಹಚ್ಚುತ್ತಿದ್ದಾರೆ. ಆದುದರಿಂದ ಏಳುವ ಪ್ರಶ್ನೆಯು, ಈ ಕಾರ್ಯಕ್ಕಾಗಿ ಯೆಹೋವನ ತಾಳ್ಮೆಯು ಅನುಮತಿಸಿರುವ ಸಮಯದ ಉತ್ತಮ ಬಳಕೆಗಾಗಿ ಸಾಧ್ಯವಿರುವುದೆಲವ್ಲನ್ನು ನಾವು ಮಾಡುತ್ತೇವೋ?—2 ಪೇತ್ರ 3:15.
22 ವಿರಳವಾಗಿ ಕಾರ್ಯ ನಡೆಸಿರುವ ಟೆರಿಟೊರಿಗೆ ಪ್ರತಿಯೊಬ್ಬರು ಸ್ಥಳಾಂತರಿಸಸಾಧ್ಯವಿಲ್ಲ. ಆದರೆ ನಿಮಗಾಗಿ ತೆರೆದಿರುವ ಸಂದರ್ಭಗಳ ಪೂರ್ಣ ಬಳಕೆಯನ್ನು ನೀವು ಮಾಡುತ್ತೀರೋ? ಜೊತೆ ಕೆಲಸದವರಿಗೆ, ಶಿಕ್ಷಕರಿಗೆ ಮತ್ತು ಸಹಪಾಠಿಗಳಿಗೆ, ನೀವು ಸಾಕ್ಷಿಯನ್ನು ನೀಡುತ್ತೀರೋ? ನಿಮ್ಮ ಟೆರಿಟೊರಿಯಲ್ಲಿ ಬದಲಾಗುವ ಪರಿಸ್ಥಿತಿಗಳಿಗೆ ನೀವು ಹೊಂದಿಸಿಕೊಂಡಿರುವಿರೋ? ಬದಲಾಗುವ ಕೆಲಸದ ನಮೂನೆಗಳ ಕಾರಣದಿಂದಾಗಿ, ದಿನದಲ್ಲಿ ಕೊಂಚವೇ ಜನರು ಮನೆಯಲ್ಲಿರುವಲ್ಲಿ, ಸಂಜಾವೇಳೆಯಲ್ಲಿ ಅವರನ್ನು ಭೇಟಿಯಾಗುವಂತೆ ನೀವು ನಿಮ್ಮ ಕಾಲತಖ್ತೆಯನ್ನು ಬದಾಲಾಯಿಸಿರುವಿರೋ? ಆಮಂತ್ರಣವಿಲ್ಲದ ಕಟ್ಟಡಗಳನ್ನು ಭೇಟಿಕಾರರಿಗೆ ತಲುಪಲಸಾಧ್ಯವಾಗಿ ಮಾಡಿರುವಲ್ಲಿ, ನೀವು ದೂರವಾಣಿ ಸಾಕ್ಷಿಕಾರ್ಯ ಯಾ ಅಂಚೆಯ ಮೂಲಕ ಸಾಕ್ಷಿಯನ್ನು ನೀಡುತ್ತೀರೋ? ಅಭಿರುಚಿಯು ತೋರಿಸಲ್ಪಟ್ಟಾಗ ಅದನ್ನು ಬೆನ್ನಟ್ಟಿ ಅನುಸರಿಸುತ್ತಿರೋ ಮತ್ತು ಮನೆ ಬೈಬಲ್ ಅಧ್ಯಯನಗಳ ನೀಡುವಿಕೆಯನ್ನು ಮಾಡುತ್ತೀರೋ? ನೀವು ನಿಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸುತ್ತೀರೋ?—ಹೋಲಿಸಿ ಅ. ಕೃತ್ಯಗಳು 20:21; 2 ತಿಮೊಥೆಯ 4:5.
23. ಯೆಹೋವನ ಸೇವೆಯಲ್ಲಿ ನಾವೇನನ್ನು ಮಾಡುತ್ತೇವೊ ಅದನ್ನು ಆತನು ಗಮನಿಸುವಾಗ, ನಮ್ಮ ವಿಷಯದಲ್ಲಿ ಏನು ವ್ಯಕ್ತವಾಗಬೇಕು?
23 ಈ ಬಹು ಮುಖ್ಯವಾದ ಸಮಯಗಳಲ್ಲಿ ಯೆಹೋವನ ಸಾಕ್ಷಿಗಳಾಗಿ ಇರಲು, ನಮ್ಮದಾಗಿರುವ ಆ ಮಹಾ ಸುಯೋಗಕ್ಕೆ, ನಮ್ಮ ಗಣ್ಯತೆಯನ್ನು ಸ್ಪಷ್ಟವಾಗಿಗಿ ತೋರಿಸುವ ರೀತಿಯಲ್ಲಿ ನಮ್ಮ ಶುಶ್ರೂಷೆಯನ್ನು ನಾವೆಲ್ಲರೂ ಪೂರ್ಣಗೊಳಿಸೋಣ. ಯೆಹೋವನು ಭ್ರಷ್ಟ ಹಳೆಯ ವ್ಯವಸ್ಥೆಯ ಮೇಲೆ ನ್ಯಾಯತೀರ್ಪನ್ನು ವಿಧಿಸುವಾಗ ಮತ್ತು ರಾಜನಾದ ಯೇಸು ಕ್ರಿಸ್ತನ ಮಹಿಮಾಭರಿತ ಸಹಸ್ರ ವರ್ಷ ಕಾಲದ ಆಳಿಕೆಯನ್ನು ತರುವಾಗ ಅದರ ಪ್ರತ್ಯಕ್ಷದರ್ಶಿಗಳಾಗಿರುವ ಸುಯೋಗವು ನಮ್ಮದಾಗಿರಲಿ!
[ಅಧ್ಯಯನ ಪ್ರಶ್ನೆಗಳು]
a ಭೂಮಿಯು, 1990 ಗಳ ಆದಿಭಾಗದಲ್ಲಿ ವಿಭಾಗಿಸಲ್ಪಟ್ಟಿದ್ದುದಕ್ಕೆ ಅನುಸಾರವಾಗಿ, ಎಣಿಸಲ್ಪಟ್ಟಿರುವಂತೆ.
ಪುನರಾವರ್ತನೆಯಲ್ಲಿ
▫ ರಾಜ್ಯದ ಸಂದೇಶವನ್ನು ಸಾರುವುದು ಯಾಕೆ ಅಷ್ಟು ಪ್ರಾಮುಖ್ಯವಾಗಿದೆ?
▫ ಇಸವಿ 1914ರ ವರೆಗೆ ಸುವಾರ್ತೆಯು ಎಷ್ಟರಮಟ್ಟಿಗೆ ಸಾರಲ್ಪಟ್ಟಿತ್ತು?
▫ ರಾಜ್ಯದ ಸ್ಥಾಪನೆಯಾದಂದಿನಿಂದ ಎಷ್ಟು ತೀವ್ರವಾಗಿ ಸಾಕ್ಷಿಯು ಕೊಡಲ್ಪಟ್ಟಿರುತ್ತದೆ?
▫ ಶುಶ್ರೂಷೆಯಲ್ಲಿ ನಮ್ಮ ಭಾಗವನ್ನು ಹೆಚ್ಚು ಉತ್ಪನ್ನಕಾರಕವಾಗಿ ಯಾವುದು ಮಾಡೀತು?
[ಪುಟ 16,17ರಲ್ಲಿರುವಚೌಕ]
ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಘೋಷಕರು
ಭೂಸುತ್ತಲೂ, 1993-94 ರಲ್ಲಿ ನೂರಾರು ಅಧಿವೇಶನಗಳಲ್ಲಿ, ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗಿಷ್ನಲ್ಲಿ ಲಭ್ಯ) ಎಂಬ ಶೀರ್ಷಿಕೆಯುಳ್ಳ ಹೊಸ ಪುಸ್ತಕದ ಬಿಡುಗಡೆಯ ಪ್ರಕಟನೆಯನ್ನು ಮಾಡಲಾಯಿತು. ಇದು ಯೆಹೋವನ ಸಾಕ್ಷಿಗಳ ಅತಿ ಬೋಧಪ್ರದ, ವ್ಯಾಪಕ ಇತಿಹಾಸವಾಗಿದೆ. ಇದು 96 ವಿಭಿನ್ನ ಪ್ರದೇಶಗಳಿಂದ ಕೂಡಿಸಲಾದ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಚಿತ್ರಗಳೊಂದಿಗೆ, ಸುಂದರವಾಗಿ ದೃಷ್ಟಾಂತಿಸಲ್ಪಟ್ಟ, 752 ಪುಟದ ಪುಸ್ತಕವಾಗಿದೆ. ಇದು 1993ರ ಅಂತ್ಯದೊಳಗೆ, ಈಗಾಗಲೆ 25 ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿದೆ ಮತ್ತು ಇನ್ನೂ ಹೆಚ್ಚಿನ ಭಾಷೆಗಳಲ್ಲಿ ಭಾಷಾಂತರಗೊಳ್ಳುತ್ತಿದೆ.
ಅಂಥ ಪುಸ್ತಕವನ್ನು ಸಮಯೋಚಿತವನ್ನಾಗಿ ಮಾಡುವುದು ಯಾವುದು? ಇತ್ತೀಚೆಗಿನ ವರುಷಗಳಲ್ಲಿ ಲಕ್ಷಾಂತರ ಜನರು ಯೆಹೋವನ ಸಾಕ್ಷಿಗಳಾಗಿದ್ದಾರೆ. ಅವರು ಸಹವಸಿಸುವ ಸಂಸ್ಥೆಯ ಇತಿಹಾಸದ ಕುರಿತು ಅವರೆಲ್ಲರು ಉತ್ತಮವಾಗಿ ತಿಳಿದವರಾಗಿರಬೇಕು. ಇನ್ನೂ, ಅವರ ಸಾರುವಿಕೆ ಮತ್ತು ಆರಾಧನಾ ವಿಧಾನವು ಲೋಕವ್ಯಾಪಕವಾಗಿ ರಾಷ್ಟ್ರೀಯ ಮತ್ತು ಜಾತೀಯ ಗುಂಪುಗಳನ್ನು ತೂರಿಕೊಂಡು ಹೋಗಿದೆ ಮತ್ತು ಪ್ರತಿಯೊಂದು ಆರ್ಥಿಕ ಮತ್ತು ಶೈಕ್ಷಣಿಕ ಮಟ್ಟದಲ್ಲಿ, ಯೌವನಸ್ಥ ಮತ್ತು ವೃದ್ಧ ಜನರಿಂದ ಸ್ವೀಕರಿಸಲ್ಪಟ್ಟಿದೆ. ಫಲಿತಾಂಶವಾಗಿ, ಏನು ಜರುಗುತ್ತದೋ ಅದನ್ನು ಅವಲೋಕಿಸುವ ಅನೇಕರಿಗೆ ಸಾಕ್ಷಿಗಳ ಕುರಿತು ಪ್ರಶ್ನೆಗಳಿವೆ—ಕೇವಲ ಅವರ ನಂಬಿಕೆಗಳ ಕುರಿತು ಮಾತ್ರವಲ್ಲ, ಅವರ ಆರಂಭ, ಅವರ ಇತಿಹಾಸ, ಅವರ ಸಂಸ್ಥೆ, ಅವರ ಉದ್ದೇಶಗಳ ಕುರಿತೂ ಅವರಿಗೆ ಪ್ರಶ್ನೆಗಳಿವೆ. ಇತರರು ಪಕ್ಷಪಾತವಿಲ್ಲದೆ ಯಾವಾಗಲು ಅಲ್ಲದಿದ್ದರೂ, ಅವರ ಕುರಿತು ಬರೆದಿರುತ್ತಾರೆ. ಆದಾಗ್ಯೂ, ಸಾಕ್ಷಿಗಳು ತಾವೇ ತಿಳಿದಿರುವಷ್ಟು ಉತ್ತಮವಾಗಿ ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಇತಿಹಾಸವನ್ನು ಇನ್ನಾರೂ ತಿಳಿದಿರುವುದಿಲ್ಲ. ಈ ಪುಸ್ತಕದ ಸಂಪಾದಕರು ಆ ಇತಿಹಾಸವನ್ನು ಒಂದು ವಾಸ್ತವಿಕ ಮತ್ತು ಸರಳ ರೀತಿಯಲ್ಲಿ ನೀಡಲು ಪ್ರಯತ್ನಿಸಿರುತ್ತಾರೆ. ಹಾಗೆ ಮಾಡುವಲ್ಲಿ, ಮತ್ತಾಯ 24:14 ರಲ್ಲಿ ದಾಖಲಿಸಲ್ಪಟ್ಟ ಕ್ರಿಸ್ತನ ಸಾನ್ನಿಧ್ಯದ ಚಿಹ್ನೆಯ ಅತಿ ಗುರುತರ ಭಾಗದ ಇಂದಿನ ವರೆಗಿನ ನೆರವೇರಿಕೆಯನ್ನು ಕೂಡ ಅವರು ದಾಖಲಿಸಿದ್ದಾರೆ, ಮತ್ತು ಅದರಲ್ಲಿ ಮುಂತಿಳಿಸಿದ ಕೆಲಸದಲ್ಲಿ ಆಳವಾಗಿ ಒಳಗೂಡಿರುವವರಿಂದ ಮಾತ್ರ ಒದಗಿಸಬಲ್ಲದಾದ ವಿವರಣೆಗಳೊಂದಿಗೆ ಅವರದನ್ನು ಮಾಡಿರುತ್ತಾರೆ.
ಆ ಪುಸ್ತಕವು ಏಳು ಮುಖ್ಯ ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ:
ವಿಭಾಗ 1: ಈ ಭಾಗವು ಯೆಹೋವನ ಸಾಕ್ಷಿಗಳ ಐತಿಹಾಸಿಕ ಮೂಲಗಳನ್ನು ಪರಿಶೋಧಿಸುತ್ತದೆ. ಅದು 1870 ರಿಂದ 1992ರ ವರೆಗಿನ ಅವರ ಆಧುನಿಕ ದಿನದ ಇತಿಹಾಸದ ಸಂಕ್ಷಿಪ್ತ, ಬೋಧಪ್ರದ ಮೇಲ್ನೋಟವನ್ನು ಒಳಗೊಂಡಿರುತ್ತದೆ.
ವಿಭಾಗ 2: ಯೆಹೋವನ ಸಾಕ್ಷಿಗಳನ್ನು ಇತರ ಧಾರ್ಮಿಕ ಗುಂಪುಗಳಿಂದ ಸ್ಪಷ್ಟವಾಗಿಗಿ ಪ್ರತ್ಯೇಕಿಸುವ ನಂಬಿಕೆಗಳ ಪ್ರಗತಿಪರ ಬೆಳವಣಿಗೆಯನ್ನು ಪ್ರಕಾಶಪಡಿಸುವ ಪುನರ್ವಿಮರ್ಶೆಯು ಇಲ್ಲಿದೆ.
ವಿಭಾಗ 3: ಪುಸ್ತಕದ ಈ ಭಾಗವು ಅವರ ಸಂಸ್ಥೆಯ ರಚನೆಯ ಬೆಳವಣಿಗೆಯನ್ನು ಪರೀಕ್ಷಿಸುತ್ತದೆ. ಅದು ಅವರ ಸಭಾ ಕೂಟಗಳ ಮತ್ತು ಅಧಿವೇಶನಗಳ ಕುರಿತು ಅಭಿರುಚಿಕರ ನಿಜತ್ವಗಳನ್ನು, ಮತ್ತು ರಾಜ್ಯ ಸಭಾಗೃಹಗಳನ್ನು, ದೊಡ್ಡದಾದ ಎಸೆಂಬ್ಲಿ ಹಾಲ್ಗಳನ್ನು, ಮತ್ತು ಬೈಬಲ್ ಸಾಹಿತ್ಯವನ್ನು ಪ್ರಕಟಿಸುವುದಕ್ಕಾಗಿ ಸೌಕರ್ಯಗಳನ್ನು ಕಟ್ಟುವ ಅವರ ವಿಧಾನವನ್ನೂ ಅದು ವಿವರಿಸುತ್ತದೆ. ದೇವರ ರಾಜ್ಯವನ್ನು ಘೋಷಿಸುವಾಗ ಯೆಹೋವನ ಸಾಕ್ಷಿಗಳಿಗಿರುವ ಉತ್ಸಾಹವನ್ನು ಮತ್ತು ಸಂದಿಗ್ಧ ಸಮಯಗಳಲ್ಲಿ ಅವರು ಒಬ್ಬರನ್ನೊಬ್ಬರು ಪರಾಮರಿಸುವಾಗ ತೋರಿಬರುವ ಪ್ರೀತಿಯನ್ನು ಅದು ತಿಳಿಯಪಡಿಸುತ್ತದೆ.
ವಿಭಾಗ 4: ದೇವರ ರಾಜ್ಯದ ಘೋಷಣೆಯು ಭೂಗೋಲದ ಸುತ್ತಲಿನ ಪ್ರಧಾನ ದೇಶಗಳಿಗೆ ಮತ್ತು ಬಹುದೂರದ ದ್ವೀಪಗಳಿಗೆ ಹೇಗೆ ಮುಟ್ಟಿದೆ ಎಂಬುದರ ಕುರಿತು ಸ್ತಂಭಿಸುವ ವಿವರಗಳನ್ನು ನೀವು ಇಲ್ಲಿ ಕಂಡುಕೊಳ್ಳುವಿರಿ. ವರುಷ 1914 ರಲ್ಲಿ 43 ದೇಶಗಳಲ್ಲಿ ಸಾರುವುದು, ಆದರೆ 1992 ರೊಳಗೆ 229 ದೇಶಗಳಲ್ಲಿ ಸಾರುವುದು—ಕೇವಲ ಊಹಿಸಿರಿ! ಈ ಭೂಸುತ್ತಲಿನ ವಿಸ್ತರಣೆಯಲ್ಲಿ ಭಾಗವಹಿಸಿದವರ ಅನುಭವಗಳು ಕಾರ್ಯತಃ ಹೃದಯವನ್ನು ಅನುರಾಗದಿಂದ ತುಂಬಿಸುವಂಥವುಗಳಾಗಿವೆ.
ವಿಭಾಗ 5: ರಾಜ್ಯ ಘೋಷಣೆಯ ಈ ಎಲ್ಲಾ ಕೆಲಸದ ನೆರವೇರಿಕೆಯು, ಬೈಬಲನ್ನು ಮತ್ತು ಬೈಬಲ್ ಸಾಹಿತ್ಯವನ್ನು ಎರಡು ನೂರಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಪ್ರಕಾಶಿಸಲಿಕ್ಕಾಗಿ ಅಂತಾರಾಷ್ಟ್ರೀಯ ಸೌಕರ್ಯಗಳ ವಿಕಾಸವನ್ನು ಅಗತ್ಯಪಡಿಸಿದೆ. ಅವರ ಕೆಲಸದ ಆ ಮುಖವನ್ನು ಇಲ್ಲಿ ನೀವು ಕಲಿತುಕೊಳ್ಳುವಿರಿ.
ವಿಭಾಗ 6: ಸಾಕ್ಷಿಗಳು ಪರೀಕ್ಷೆಗಳನ್ನು ಕೂಡ ಎದುರಿಸಿದ್ದಾರೆ—ಕೆಲವು ನಮ್ಮ ಮಾನವ ಅಪರಿಪೂರ್ಣತೆಯಿಂದಾಗಿ, ಇನ್ನು ಕೆಲವು ಸುಳ್ಳು ಸಹೋದರರಿಂದಾಗಿ, ಮತ್ತು ಇನ್ನೂ ಹೆಚ್ಚಾಗಿ ಬಹಿರಂಗವಾದ ಹಿಂಸೆಗಳ ಕಾರಣದಿಂದ. ವಿಷಯಗಳು ಹೀಗಿರುವುವೆಂದು ದೇವರ ವಾಕ್ಯವು ಎಚ್ಚರಿಸಿತು. (ಲೂಕ 17:1; 2 ತಿಮೊಥೆಯ 3:12; 1 ಪೇತ್ರ 4:12; 2 ಪೇತ್ರ 2:1, 2) ಏನು ನಿಜವಾಗಿಯೂ ಸಂಭವಿಸಿದೆ ಮತ್ತು ಯೆಹೋವನ ಸಾಕ್ಷಿಗಳ ನಂಬಿಕೆಯು ಅವರು ಜಯಶಾಲಿಗಳಾಗಿ ಹೊರ ಬರಲು ಹೇಗೆ ಶಕ್ತರನ್ನಾಗಿ ಮಾಡಿದೆ ಎಂಬುದನ್ನು ಈ ವಿಭಾಗವು ಸ್ಪಷ್ಟವಾಗಿಗಿ ವಿವರಿಸುತ್ತದೆ.
ವಿಭಾಗ 7: ಸಮಾಪ್ತಿಯಲ್ಲಿ, ಸಂಸ್ಥೆಯ ಒಂದು ಭಾಗವಾಗಿರುವ ಯೆಹೋವನ ಸಾಕ್ಷಿಗಳು, ಅದು ನಿಜವಾಗಿಯೂ ದೇವರಿಂದ ನಡೆಸಲ್ಪಡುತ್ತಿದೆ ಎಂದು ದೃಢವಾಗಿ ಮನಗಾಣುವ ಕಾರಣವನ್ನು ಆ ಪುಸ್ತಕವು ಪರಿಗಣಿಸುತ್ತದೆ. ಸಂಸ್ಥೆಯೋಪಾದಿ ಮತ್ತು ವೈಯಕ್ತಿಕವಾಗಿ ಎಚ್ಚರದಿಂದಿರುವ ಅಗತ್ಯದ ಅವರು ಭಾವಿಸುವ ಕಾರಣವನ್ನು ಕೂಡ ಅದು ಚರ್ಚಿಸುತ್ತದೆ.
ಮೇಲಿನದಕ್ಕೆ ಕೂಡಿಸಿ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲಾಗುತ್ತಿರುವ ಲೋಕ ಮುಖ್ಯಕಾರ್ಯಾಲಯವನ್ನು ಮತ್ತು ಶಾಖಾ ಸೌಕರ್ಯಗಳನ್ನು ತೋರಿಸುವ, ವರ್ಣ ಚಿತ್ರಗಳ ಸುಂದರವಾದ ಮತ್ತು ಬಹಳ ಬೋಧಪ್ರದವಾದ 50 ಪುಟಗಳ ವಿಭಾಗವನ್ನು ಕೂಡ ಈ ಆಕರ್ಷಣೀಯವಾಗಿ ರಚಿಸಲಾದ ಸಂಪುಟವು ಒಳಗೊಂಡಿರುತ್ತದೆ.
ನೀವು ಈ ಆಕರ್ಷಕ ಪ್ರಕಾಶನದ ಪ್ರತಿಯನ್ನು ಈಗಾಗಲೇ ಪಡೆದುಕೊಳ್ಳದೇ ಇರುವಲ್ಲಿ, ನೀವದನ್ನು ಪಡೆದುಕೊಳ್ಳವ ಮತ್ತು ಓದುವ ಮೂಲಕ ನಿಜಕ್ಕೂ ಪ್ರಯೋಜನ ಹೊಂದುವಿರಿ.
ಅದನ್ನು ಓದಿದ ಕೆಲವರ ಹೇಳಿಕೆಗಳು
ಈ ಪುಸ್ತಕವನ್ನು ಈಗಾಗಲೆ ಓದಿರುವವರ ಪ್ರತಿಕ್ರಿಯೆಗಳು ಏನಾಗಿವೆ? ಕೆಲವೊಂದು ಇಲ್ಲಿವೆ:
“ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು ಎಂಬ ಸ್ತಂಭಿಸುವ, ಜೀವಂತ ದಾಖಲೆಯ ಓದುವಿಕೆಯನ್ನು ನಾನು ಈಗ ತಾನೆ ಮುಗಿಸಿದ್ದೇನೆ. ನಿಷ್ಠೆಯಿಂದ ಮತ್ತು ದೈನ್ಯದಿಂದ ಸತ್ಯಕ್ಕೆ ಬದ್ಧವಾದ ಒಂದು ಸಂಸ್ಥೆಯು ಮಾತ್ರ ಇಷ್ಟು ಮುಚ್ಚುಮರೆ ಇಲ್ಲದೆ, ಧೈರ್ಯವಾಗಿ, ಮತ್ತು ಸೂಕ್ಷ್ಮಸಂವೇದಕವಾಗಿ ಬರೆಯಲು ಸಾಧ್ಯ.”
“ಅದರ ಪ್ರಾಮಾಣಿಕತೆಯಲ್ಲಿ ಮತ್ತು ಸರಳತೆಯಲ್ಲಿ ಅದು ಅಪೊಸ್ತಲರ ಕೃತ್ಯಗಳ ಪುಸ್ತಕದಂತೆ ಓದುತ್ತದೆ.”
“ಎಂಥ ಒಂದು ಕುತೂಹಲ ಕೆರಳಿಸುವ ಹೊಸ ಪ್ರಕಾಶನವು! . . . ಅದು ಐತಿಹಾಸಿಕ ನಾಯಕ ಕೃತಿಯಾಗಿದೆ.”
ಆ ಪುಸ್ತಕವನ್ನು ಅರ್ಧ ಓದಿದ ಅನಂತರ ಒಬ್ಬ ಮನುಷ್ಯನು ಬರೆದದ್ದು: “ನಾನು ಭಯಚಕಿತನಾದೆ, ಸ್ತಬ್ಧನಾದೆ, ಮತ್ತು ಕಣ್ಣೀರಿಗೆ ಹತ್ತರವಾದೆ. . . . ನನ್ನೆಲ್ಲಾ ವರುಷಗಳಲ್ಲಿ, ಇಷ್ಟು ಭಾವನಾತ್ಮಕವಾಗಿ ಪ್ರಚೋದಿಸಿದ ಬೇರೆ ಪ್ರಕಾಶನಗಳಿಲ್ಲ.”
“ಯೌವನಸ್ಥರ ಹಾಗೂ ಇಂದು ಸಂಸ್ಥೆಯೊಳಗೆ ಬರುತ್ತಿರುವ ಹೊಸಬರ ನಂಬಿಕೆಯನ್ನು ಈ ಪುಸ್ತಕವು ಬಲಪಡಿಸುವುದನ್ನು ಪ್ರತಿಯೊಂದು ಸಲ ನಾನು ಯೋಚಿಸುವಾಗ ನನ್ನ ಹೃದಯವು ಹಾಡುತ್ತದೆ.”
“ನಾನು ಯಾವಾಗಲೂ ಸತ್ಯವನ್ನು ಗಣ್ಯಮಾಡಿದ್ದೆನು, ಆದರೆ ಈ ಪುಸ್ತಕವನ್ನು ಓದುವುದರ ಮೂಲಕ ನನ್ನ ಕಣ್ಣುಗಳು ತೆರೆದವು ಮತ್ತು “ಸತ್ಯ” ಹಾಗೂ ಅದಕ್ಕೆ ಸಂಬಂಧಿಸಿರುವ ಎಲ್ಲದಕ್ಕೆ ಯೆಹೋವನ ಪವಿತ್ರಾತ್ಮವು ಜವಾಬ್ದಾರಿಯಾಗಿದೆ ಎಂದು ಎಂದಿಗಿಂತಲೂ ಹೆಚ್ಚಾಗಿ ಅರಿಯಲು ನನಗೆ ಸಹಾಯ ಮಾಡಿತು.”
[ಪುಟ 18 ರಲ್ಲಿರುವ ಚಿತ್ರಗಳು]
ಸಾಕ್ಷಿಗಳು ಸಂಖ್ಯೆಯಲ್ಲಿ ಕಡಿಮೆ ಇದ್ದಾಗಲೂ ರಾಜ್ಯದ ಸಂದೇಶದೊಂದಿಗೆ ಅನೇಕ ಜನರು ತಲುಪಲ್ಪಟ್ಟರು