ನೀವು ಆರಾಧಿಸುವ ವಿಧಾನವು ಪ್ರಾಮುಖ್ಯವೊ?
ಆಫ್ರಿಕದ ಸಣ್ಣ ಪಟ್ಟಣವು ಮಧ್ಯಾಹ್ನದ ಸೂರ್ಯನಿಂದ ಸುಡುತ್ತಿದೆ. ಸಮೀಪದ ಕಣಿವೆಯೊಂದರಿಂದ ಭ್ರಮಾವೇಶದ ಡ್ರಮ್ವಾದನ, ಹಾಡುವಿಕೆ, ಮತ್ತು ಆನಂದದ ಕರತಾಡನದ ಶಬ್ದವನ್ನು ಕೇಳಸಾಧ್ಯವಿದೆ. ಆದರೆ ಸಾಮಾಜಿಕ ಪ್ರಸಂಗವು ಇದಾಗಿಲ್ಲ. ಇದು ಆಫ್ರಿಕದ ಸಾಂಪ್ರದಾಯಿಕ ಆರಾಧನೆಯಾಗಿದೆ. ಹಾಗಿದ್ದರೂ, ಹತ್ತಿರದ ದಿವ್ಯಶಕ್ತಿ (ಕ್ಯಾರಿಸ್ಮ್ಯಾಟಿಕ್) ಚರ್ಚ್ನಿಂದ ಬರುತ್ತಿರುವ ಧ್ವನಿಗಳ ಕರ್ಕಶತೆಯೊಂದಿಗೆ ಈ ಶಬ್ದಗಳು ಸ್ಪರ್ಧಿಸುತ್ತವೆ. ಅಲ್ಲಿ, ಭಾವೋದ್ರೇಕಗೊಂಡ ಆರಾಧಕರು ಅದ್ಭುತ “ವಾಸಿಮಾಡುವಿಕೆಗಳನ್ನು” ನಡೆಸುತ್ತಾರೆ ಮತ್ತು ವಿವಿಧ ಭಾಷೆಗಳಲ್ಲಿ ಮಾತಾಡುತ್ತಾರೆ. ಪಟ್ಟಣದ ಇನ್ನೊಂದು ಕೊನೆಯಲ್ಲಿ ಇನ್ನೊಂದು ರೀತಿಯ ಆರಾಧನೆಯಿದೆ. ಮಹಮ್ಮದೀಯ ಘೋಷಕನೊಬ್ಬನ ನಾದಪೂರ್ಣ ಧ್ವನಿಯು, ಜೊತೆ ಮಹಮ್ಮದೀಯರನ್ನು ಪ್ರಾರ್ಥನೆಗಾಗಿ ಕರೆಕೊಡುತ್ತದೆ.
ಹೌದು, ಅನೇಕ ಮಹಾ ವೈವಿಧ್ಯದ ಭಕ್ತಿಯನ್ನು, ಆಫ್ರಿಕದ ಅನೇಕ ನಗರ ಮತ್ತು ಪಟ್ಟಣಗಳಲ್ಲಿ ನೋಡಸಾಧ್ಯವಿದೆ. ತಲೆಮೊರೆಗಳಿಂದ ಆಫ್ರಿಕನರು, ತಮ್ಮ ಸ್ವಂತ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಲು ಸಂತುಷ್ಟರಾಗಿದ್ದರು. ಆದರೆ ತದನಂತರ, ವಿಭಿನ್ನ ಯೂರೋಪಿಯನ್ ಸೈನ್ಯಗಳನ್ನು ಹಿಂಬಾಲಿಸಿ ಕ್ರೈಸ್ತ ಮಿಷನೆರಿಗಳು ಬಂದು ಪ್ರತಿಯೊಬ್ಬನನ್ನೂ—ಅವರ ಹೆಸರುಗಳನ್ನೂ ಸಹ ಸೇರಿಸಿ—“ಕ್ರೈಸ್ತೀಕರಿಸಲು” ನಿಷ್ಕಾರುಣ್ಯವಾಗಿ ಪ್ರಯತ್ನಿಸಿದರು.
ಪರಿಣಾಮವೇನು? ಆಫ್ರಿಕದ ಸಾಂಪ್ರದಾಯಿಕ ನಂಬಿಕೆಗಳು ಮತ್ತು ಪದ್ಧತಿಗಳನ್ನು ಬಾಹ್ಯ ಧಾರ್ಮಿಕ ನಂಬಿಕೆಗಳೊಂದಿಗೆ ಮಿಶ್ರಗೊಳಿಸಿದ ಒಂದು ಧಾರ್ಮಿಕ ಪೀಳಿಗೆಯೆ. ಇಂದಿನ ವರೆಗೂ ಅನೇಕ “ಕ್ರೈಸ್ತ” ಆರಾಧಕರು ಸಾಂಪ್ರದಾಯಿಕ ರಕ್ಷೆಗಳು ಮತ್ತು ತಾಯಿತಗಳನ್ನು ಉಪಯೋಗಿಸುತ್ತಾರೆ. ಇನ್ನೂ, ಕ್ರೈಸ್ತಪ್ರಪಂಚದ ಮಿಷನೆರಿಗಳು ನಿಜ ಕ್ರೈಸ್ತತ್ವವನ್ನು ಮಹತ್ತರವಾಗಿ ತಪ್ಪಾಗಿ ಪ್ರತಿನಿಧಿಸಿದರು, ಮತ್ತು ತೀವ್ರ ಅಸಮಾಧಾನದ ಒಂದು ಆಸ್ತಿಯನ್ನು ಅವರು ಬಿಟ್ಟುಹೋದರು. ಇಂದು ಕೆಲವು ಆಫ್ರಿಕನರಲ್ಲಿ ಅಸ್ತಿತ್ವದಲ್ಲಿರುವ, ಬೈಬಲಿನ ಕಡೆಗಿನ ಅಜ್ಞಾತ ಮನೋಭಾವನೆಗೆ ಇವರು ಬಹು ಮಟ್ಟಿಗೆ ಕಾರಣರಾಗಿದ್ದಾರೆ.
ಆದಾಗ್ಯೂ, “ಕ್ರೈಸ್ತತ್ವ”ದ ಅನೇಕ ರೂಪಗಳು ಇನ್ನೂ ವ್ಯಾಪಕವಾಗಿ ಆಚರಿಸಲ್ಪಡುತ್ತಿವೆ. ಇತ್ತೀಚಿಗಿನ ವರ್ಷಗಳಲ್ಲಿ ಕ್ಯಾರಿಸ್ಮ್ಯಾಟಿಕ್ ಧಾರ್ಮಿಕ ಗುಂಪುಗಳು ವಿಶೇಷವಾಗಿ ಜನಪ್ರಿಯವಾಗಿವೆ; ಭಕ್ತಿ ಚಿಕಿತ್ಸೆಯ ಚರ್ಚುಗಳು ಸಂಖ್ಯೆಯಲ್ಲಿ ಹೆಚ್ಚಿವೆ. ‘ಆಫ್ರಿಕದ ಧರ್ಮದ ಕುರಿತಾದ ಕಲ್ಪನೆಯು ಬಹುಮಟ್ಟಿಗೆ ಪ್ರಯೋಜನಾತ್ಮಕವಾಗಿದೆ. ಆಫ್ರಿಕನರ ಮನಸ್ಸಿಗೆ, ಧರ್ಮವು ಮಾನವ ಅಸ್ತಿತ್ವಕ್ಕೆ ನೇರವಾದ ಪ್ರಾಪಂಚಿಕ ಸಂತೃಪ್ತಿಯನ್ನು ಕೊಡುವುದಕ್ಕೆ ಸಮರ್ಥವಾಗಿರಬೇಕು. ಆದುದರಿಂದಲೇ, ಆತ್ಮಿಕ ಮಾಧ್ಯಮಗಳು ಬಹುಮಟ್ಟಿಗೆ ಎಲ್ಲದರಲ್ಲಿಯೂ ಅಗತ್ಯವಾದವುಗಳಾಗಿವೆ ಎಂದು ನಂಬುವ ಆಫ್ರಿಕದವನಿಗೆ, ತನ್ನ ಜೀವಿತದ ಬೇಡಿಕೆಗಳೊಂದಿಗೆ, ಆತ್ಮಿಕ [ಅಥವಾ ಭಕ್ತಿ ಚಿಕಿತ್ಸೆಯ] ಚರ್ಚುಗಳ ಕಾರ್ಯವಿಧಾನವು ಅನುಗುಣವಾಗಿರುತ್ತದೆ,’ ಎಂಬುದನ್ನು ಗಮನಿಸುವ ಮೂಲಕ, ಈ ಚರ್ಚುಗಳ ಒಪ್ಪಂದವನ್ನು ವಾರ್ತಾಪತ್ರಿಕೆಯ ಅಂಕಣಗಾರ್ತಿಯೊಬ್ಬಳು ವಿವರಿಸಿದಳು. ಆದರೂ, ದುಃಖಕರವಾಗಿಯೆ, ಅನೇಕ ದಿವ್ಯಶಕ್ತಿ ಚರ್ಚುಗಳು, ಹಣಗಳಿಸುವ ವ್ಯಾಪಾರ ಉದ್ಯಮಗಳಿಗಿಂತ ಸ್ವಲ್ಪವೇ ಹೆಚ್ಚಿನವು ಎಂದು ಸ್ಪಷ್ಟವಾಗಿಗಿ ಸ್ಥಾಪಿತಗೊಂಡಿವೆ.
ಇಂದು, 6,000 ಕ್ಕಿಂತಲೂ ಅಧಿಕ ಧಾರ್ಮಿಕ ಪಂಗಡಗಳು ಆಫ್ರಿಕದಲ್ಲಿ ಕಾರ್ಯನಡಿಸುತ್ತಿವೆ. ಬಹುಶಃ ಈ ಎಲ್ಲಾ ಧರ್ಮಗಳು ಮತ್ತು ಪಂಗಡಗಳು ರಕ್ಷಣೆಗೆ ಕೀಲಿ ಕೈಯನ್ನು ಪಡೆದಿವೆಯೆಂದು ನಿಮಗನಿಸಿರಬಹುದು. ಆದರೆ ದೇವರ ಅನಿಸಿಕೆ ಏನು? ಎಂಬುದೆ ವಾಸ್ತವವಾದ ಪ್ರಶ್ನೆಯಾಗಿದೆ.
ಧರ್ಮವು ಯಾವುದೇ ಆಗಿದ್ದರೂ ಅದು ದೇವರನ್ನು ಸಂತೋಷಪಡಿಸಬಲ್ಲದೊ?
ಖಂಡಿತವಾಗಿಯೂ, ವಿಶ್ವದ ನಿರ್ಮಾಣಿಕನು ಈ ವಿಚಾರದಲ್ಲಿ ನಮಗೆ ಮಾರ್ಗದರ್ಶನ ಕೊಡದೆ ಬಿಡಲಾರನು. (ಆಮೋಸ 3:7; ಅ. ಕೃತ್ಯಗಳು 17:26, 27) ಮತ್ತು ದೈವಿಕ ಮಾರ್ಗದರ್ಶನವನ್ನು ಬೈಬಲಿನಲ್ಲಿ ನೋಡಸಾಧ್ಯವಿದೆಯೆಂಬುದಕ್ಕೆ ಸಾಕ್ಷ್ಯವು ಧಾರಾಳವಾಗಿದೆ. ಕೆಲವು ಕರಿಯರು ಕರೆಯುವಂತೆ, ಬೈಬಲು ಬಿಳಿಯರ ಪುಸ್ತಕವಾಗಿಲ್ಲ. ವಾಸ್ತವದಲ್ಲಿ, ಯಾವ ಮನುಷ್ಯನೂ—ಕರಿಯನು ಯಾ ಬಿಳಿಯನು—ಅದಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳಸಾಧ್ಯವಿಲ್ಲ. “ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾಗಿದೆ,” ಎಂದು 2 ತಿಮೊಥೆಯ 3:16 ಹೇಳುತ್ತದೆ. ಬೈಬಲಿನ ಸತ್ಯವಾದ, ಪ್ರಾಯೋಗಿಕ ಬೋಧನೆಗಳು, ಅದರ ಮಹತ್ತಾದ ಪ್ರಾಚೀನತೆ, ದುಷ್ಟ ಆಕ್ರಮಣಗಳ ಎದುರಿನಲ್ಲಿ ಅದರ ಪಾರಾಗುವಿಕೆ, ಅದರ ನಿಖರವಾದ ಪ್ರವಾದನೆಗಳು ಮತ್ತು ಅಸಮಾನ ಭೌಗೋಲಿಕ ಪ್ರಸರಣೆ—ಇವುಗಳು ಅದರ ದೈವಿಕ ಕರ್ತೃತ್ವದ ಸ್ಪಷ್ಟವಾಗಿದ ಸಾಕ್ಷ್ಯಾಧಾರಗಳಾಗಿವೆ.
ಆ ಪುಸ್ತಕವು ನಮಗೆ ಏನನ್ನು ಬೋಧಿಸುತ್ತದೆ? ಒಂದು ವಿಷಯವೇನಂದರೆ, ಕೇವಲ ಒಬ್ಬನೇ “ಸತ್ಯ ದೇವರು” ಇದ್ದಾನೆಂದು ಅದು ನಮಗೆ ತಿಳಿಸುತ್ತದೆ. (ಯೋಹಾನ 17:3) ವಿಷಯವು ಹಾಗಿರುವಲ್ಲಿ, ಎಲ್ಲಾ ಧರ್ಮಗಳಲ್ಲಿ ಸತ್ಯವಿರಲು ಹೇಗೆ ಸಾಧ್ಯವಿದೆ? ದೇವರ ವ್ಯಕ್ತಿತ್ವ ಮತ್ತು ಸ್ವಭಾವದ ಕುರಿತು, ಧಾರ್ಮಿಕ ಗುಂಪುಗಳು ಒಂದರೊಡನೊಂದು ಕಾದಾಡುವುದಿಲ್ಲವೊ? ಬೈಬಲಿನ ಬರಹಗಾರ ಯಾಕೋಬನು “ಶುದ್ಧ ಮತ್ತು ನೈಜ ಧರ್ಮ”ದ ಕುರಿತು ಮಾತಾಡಿದನು. (ಯಾಕೋಬ 1:27, ಟುಡೇಸ್ ಇಂಗ್ಲಿಷ್ ವರ್ಷನ್) ನೈಜ ಧರ್ಮವನ್ನು ಗುರುತಿಸುವುದು ಅಗತ್ಯವಾಗಿರುವುದಾದರೆ, ಸುಳ್ಳು ಅಥವಾ ನಕಲಿ ಧರ್ಮಗಳು ಸಹ ಅಸ್ತಿತ್ವದಲ್ಲಿರಲೇಬೇಕು. ಎಲ್ಲಾ ಧರ್ಮಗಳು ದೇವರನ್ನು ಸಮೀಪಿಸುವ ವಿವಿಧ ಮಾರ್ಗಗಳಾಗಿವೆ ಎಂಬ ಅಭಿಪ್ರಾಯವನ್ನು ಇದು ವಿರೋಧಿಸುತ್ತದೆ.
ಆರಾಧನೆಗಾಗಿ ಸೃಷ್ಟಿಕರ್ತನ ಮಟ್ಟಗಳು
ದೇವರನ್ನು ಆರಾಧಿಸುವ ಯೋಗ್ಯವಾದ ಮಾರ್ಗವು ಯಾವುದಾಗಿದೆ? ನೈಜ ಆರಾಧನೆಯು ನಿಷ್ಕೃಷ್ಟವಾದ ಜ್ಞಾನದಲ್ಲಿ ಬೇರೂರಿದೆಯೆಂದು ಬೈಬಲ್ ನಮಗೆ ಕಲಿಸುತ್ತದೆ. “ನೀವು ಅರಿಯದೆ ಇರುವಂಥದನ್ನು ಆರಾಧಿಸುವವರು” ಎಂದು ಒಮ್ಮೆ ಯೇಸು ಕ್ರಿಸ್ತನು ಸಮಾರ್ಯದ ಹೆಂಗಸೊಬ್ಬಳಿಗೆ ಹೇಳಿದನು. (ಯೋಹಾನ 4:22) ಬಹುಶಃ, ನಿಮ್ಮ ಕುರಿತು ಕೂಡ ಇದು ಸತ್ಯವಾಗಿದ್ದಿರಬಹುದೊ? ಸರ್ವಶಕ್ತನಾದ ದೇವರಿಗೆ ಯೆಹೋವ ಎಂಬ ವೈಯಕ್ತಿಕ ಹೆಸರಿದೆಯೆಂದು ನೀವೆಂದಾದರೂ ಕಲಿಸಲ್ಪಟ್ಟಿದ್ದೀರೊ? (ಕೀರ್ತನೆ 83:18) ಮನುಷ್ಯನ ಮತ್ತು ಭೂಮಿಯ ಸಂಬಂಧದಲ್ಲಿ ಆತನ ಉದ್ದೇಶಗಳೇನೆಂದು ನೀವು ತಿಳಿದಿದ್ದೀರೊ? (ಮತ್ತಾಯ 6:9, 10; ಎಫೆಸ 1:9, 10; 3:11) ಒಂದು ಉತ್ತಮ ಭವಿಷ್ಯದ ಕುರಿತು ಕಾರ್ಯಸಾಧ್ಯವಾದ ಭರವಸೆಯೊಂದನ್ನು ನಿಮ್ಮ ಧರ್ಮವು ನಿಮಗೆ ಕೊಡುತ್ತದೊ? ಮತ್ತು ನೀವು ನಿಮ್ಮನ್ನು ಒಬ್ಬ ಕ್ರೈಸ್ತನನ್ನಾಗಿ ಪರಿಗಣಿಸಿಕೊಳ್ಳುವುದಾದರೆ, ನಿಮ್ಮ ನಂಬಿಕೆಗಳನ್ನು ಶಾಸ್ತ್ರವಚನಗಳಿಂದ ನೀವು ವಿವರಿಸಬಲ್ಲಿರೊ ಅಥವಾ ನಿಜವಾಗಿಯೂ ನೀವು ವಿಚಾರಣೆ ಮಾಡಿರದ, ಕೇವಲ ಸಿದ್ಧವಾದ ಉಯಿಲುಗಳು ಅವಾಗಿವೆಯೊ?
ನಿಷ್ಕೃಷ್ಟವಾದ ಜ್ಞಾನದಲ್ಲಿ ಕೊರತೆಯುಳ್ಳವರಾಗಿ ನೀವು ಕಂಡುಕೊಳ್ಳುವುದಾದರೆ, ದೇವರ ವಾಕ್ಯವಾದ ಬೈಬಲಿನ ಅಭ್ಯಾಸದ ಮೂಲಕ ನೀವದನ್ನು ಪಡೆದುಕೊಳ್ಳಸಾಧ್ಯವಿದೆ. ತನ್ನ ನಿಜ ಆರಾಧಕರು ಪವಿತ್ರ ಪುಸ್ತಕವು ಕಲಿಸುವ ವಿಷಯಗಳೊಂದಿಗೆ ಪರಿಚಿತರಾಗಿರುವಂತೆ ಯೆಹೋವ ದೇವರು ಅಪೇಕ್ಷಿಸುತ್ತಾನೆ. ಅದಕ್ಕಿಂತಲೂ ಹೆಚ್ಚಾಗಿ, ಅದನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುವುದನ್ನು ಆತನು ಅವರಿಂದ ನಿರೀಕ್ಷಿಸುತ್ತಾನೆ. ನಮ್ಮ ಮನೋಭಾವನೆಯು ಕೀರ್ತನೆಗಾರನಂತಿರಬೇಕು, ಆತನಂದದ್ದು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” (ಕೀರ್ತನೆ 119:105) ನಿಮ್ಮ ಧರ್ಮವು ನೀವು ಬೈಬಲನ್ನು ತಿಳಿಯಲು ಮತ್ತು ಗ್ರಹಿಸಲು ನಿಮಗೆ ಎಷ್ಟು ವಿಸ್ತಾರವಾಗಿ ಸಹಾಯಮಾಡಿದೆ?
ಯೇಸುಕ್ರಿಸ್ತನಲ್ಲಿ ಒಬ್ಬ ಮಹಾನ್ ಪ್ರವಾದಿಯೆಂದು ಮಾತ್ರವಲ್ಲ, ಆದರೆ ದೇವರ ಏಕಜಾತ ಪುತ್ರನೋಪಾದಿ ನಂಬಿಕೆಯಿಡುವುದು, ಸತ್ಯಾರಾಧನೆಯ ಇನ್ನೊಂದು ಪ್ರಾಮುಖ್ಯ ವೈಶಿಷ್ಟ್ಯವಾಗಿದೆ. ಯೇಸುವು “ಜೀವನಾಯಕ” ನಾಗಿದ್ದಾನೆಂದು ಶಾಸ್ತ್ರವಚನಗಳು ಸ್ಪಷ್ಟವಾಗಿಗಿಯೇ ಪ್ರಕಟಿಸುತ್ತವೆ. (ಅ. ಕೃತ್ಯಗಳು 3:14; 4:12) ಅನೇಕರು ಯೇಸುವಿನಲ್ಲಿ ನಂಬಿಕೆಯಿರುವಂತೆ ತೋರ್ಪಡಿಸಿಕೊಳ್ಳುತ್ತಾರೆ, ಆದರೆ ಅವರ ನಂಬಿಕೆಯು ಎಷ್ಟು ನೈಜವಾದದ್ದಾಗಿದೆ? ಯೇಸುವಿನಲ್ಲಿ ನಿಜವಾದ ನಂಬಿಕೆಯು ಆತನ ಬೋಧನೆಗಳಿಗೆ ವಿಧೇಯರಾಗುವುದನ್ನು ಕೇಳಿಕೊಳ್ಳುತ್ತದೆ. “ಈತನು ಪ್ರಿಯನಾಗಿರುವ ನನ್ನ ಮಗನು; ಈತನ ಮಾತನ್ನು ಕೇಳಿರಿ,” ಎಂದು ಆತನು ಪ್ರಕಟಿಸಿದಾಗ, ದೇವರು ತಾನೇ ಇದನ್ನು ಪ್ರೋತ್ಸಾಹಿಸಿದನು. (ಮಾರ್ಕ 9:7) ಹೀಗೆ ಸತ್ಯಾರಾಧಕರು ಯೇಸುವಿನ ಹೆಜ್ಜೆಯ ಗುರುತುಗಳಲ್ಲಿ ಸಾಧ್ಯವಾದಷ್ಟು ನಿಕಟವಾಗಿ ನಡೆಯಲು ಪ್ರಯತ್ನಿಸುತ್ತಾರೆ. (1 ಪೇತ್ರ 2:21) ಅವರು ಹಾಗೆ ಮಾಡುವ ಒಂದು ವಿಧಾನವು ಆತನು ಆರಂಭಿಸಿದ ಸಾರ್ವಜನಿಕ ಸಾರುವಿಕೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕವಾಗಿದೆ. (ಮತ್ತಾಯ 4:17; 10:5-7) ಈ ಕೆಲಸದಲ್ಲಿ ಒಂದು ವೈಯಕ್ತಿಕವಾದ ಭಾಗವಹಿಸುವಿಕೆಯನ್ನು ಪಡೆಯಲು ನಿಮ್ಮ ಧರ್ಮವು ನಿಮ್ಮನ್ನು ಪ್ರೋತ್ಸಾಹಿಸುತ್ತದೊ?
ಪ್ರಿತಿಯು ಕೂಡ ನೈಜ ಆರಾಧನೆಯ ಇನ್ನೊಂದು ಆವಶ್ಯಕತೆಯಾಗಿದೆ. ಯೆಹೋವ ದೇವರು ಪ್ರೀತಿಯ ವ್ಯಕ್ತೀಕರಣವಾಗಿದ್ದಾನೆ, ಮತ್ತು ತಮ್ಮೊಳಗೆ ತೋರಿಸಿದ ಪ್ರೀತಿಯ ಮೂಲಕ ಅವರು ಗುರುತಿಸಲ್ಪಡುವರೆಂದು ಯೇಸು ತನ್ನ ಹಿಂಬಾಲಕರಿಗೆ ಹೇಳಿದನು. (ಯೋಹಾನ 13:34, 35; 1 ಯೋಹಾನ 4:8) ಇಂದು ಕ್ರೈಸ್ತರೆಂದು ಸಮರ್ಥಿಸಿಕೊಳ್ಳುವ ಅನೇಕ ಲಕ್ಷಾಂತರ ಜನರ ಕುರಿತು ಪರಿಗಣಿಸುವಾಗ, ಈ ಲೋಕವು ಕಾರ್ಯತಃ ಪ್ರೀತಿಯಿಂದ ಪೂರಿತವಾಗಬಾರದಿತ್ತೊ? ಆದರೂ, ವಾಸ್ತವದಲ್ಲಿ, ನಮ್ಮ ಲೋಕವು ಅತ್ಯಂತ ಪ್ರೀತಿರಹಿತ ಸ್ಥಳವಾಗಿ ಪರಿಣಮಿಸಿದೆ. ಈ ಶತಮಾನವೊಂದರಲ್ಲಿಯೆ ಯುದ್ಧಗಳು ಲಕ್ಷಾಂತರ ಮಂದಿಯ ಜೀವಗಳನ್ನು ನಂದಿಸಿವೆ. ದುಷ್ಕೃತ್ಯ ಮತ್ತು ಬಲಾತ್ಕಾರವು ವ್ಯಾಪಕವಾಗಿ ಹರಡುತ್ತಾ ಮುಂದುವರಿದಿದೆ. ಆದುದರಿಂದ ನಿಮ್ಮನ್ನು ಹೀಗೆ ಕೇಳಿಕೊಳ್ಳಿರಿ, ‘ಪ್ರತಿಯೊಬ್ಬರೂ ನನ್ನ ಧರ್ಮಕ್ಕೆ ಸೇರುವುದಾದರೆ, ಲೋಕವು ಹೆಚ್ಚು ಪ್ರೀತಿಯುಳ್ಳ ಒಂದು ಸ್ಥಳವಾಗುವುದೊ?’
ಅಂತಿಮವಾಗಿ, ದೇವರನ್ನರಿಯದ ಲೋಕದಿಂದ ಸತ್ಯಾರಾಧಕರು ತಮ್ಮನ್ನು ಬೇರ್ಪಡಿಸಿಕೊಳ್ಳಬೇಕೆಂದು ಬೈಬಲು ತೋರಿಸುತ್ತದೆ. ಶುದ್ಧ ಆರಾಧನೆಯ ಪಾಲಕನೋಪಾದಿ ದೇವರು ಪುರಾತನ ಇಸ್ರಾಯೇಲ್ ಜನಾಂಗವನ್ನು ಪ್ರತ್ಯೇಕವಾಗಿಟ್ಟಾಗ, ಅವರ ಸುತ್ತಲಿರುವ ಕೆಳಮಟ್ಟದ ಜನಾಂಗಗಳೊಂದಿಗೆ ನಿಕಟ ಸಹವಾಸವನ್ನು ತೊರೆಯುವಂತೆ, ಆತನು ತನ್ನ ಜನರಿಗೆ ಎಚ್ಚರಿಕೆಯನ್ನು ನೀಡಿದನು. (ಧರ್ಮೋಪದೇಶಕಾಂಡ 7:1-6) ತದ್ರೀತಿಯಲ್ಲಿ ಯೋಹಾನ 17:16 ರಲ್ಲಿ, ತನ್ನ ಹಿಂಬಾಲಕರ ಕುರಿತು ಕ್ರಿಸ್ತ ಯೇಸು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” ದೇವರ ನಿಜ ಆರಾಧಕರು ರಾಜಕೀಯತೆ, ಅನೈತಿಕತೆ, ಲೋಭದ ವಾಣಿಜ್ಯ, ಅಥವಾ ದೇವರಿಗೆ ಅಪಕೀರ್ತಿಯನ್ನುಂಟುಮಾಡುವ ಯಾವುದೆ ತತ್ವಜ್ಞಾನಗಳಲ್ಲಿ ಭಾಗವಹಿಸುವುದಿಲ್ಲ. (ಯೋಹಾನ 18:36; 1 ಯೋಹಾನ 2:15-17) ರೋಮಾಪುರ 12:2 ರಲ್ಲಿ ದಾಖಲಿಸಿರುವ ‘ಇಹಲೋಕದ ನಡವಳಿಕೆಯನ್ನು ಅನುಸರಿಸುವುದನ್ನು ತೊರೆದುಬಿಡಿರಿ’ ಎಂಬ ಆಜೆಗ್ಞೆ ಅವರು ವಿಧೇಯರಾಗುತ್ತಾರೆ. ನೀವು ಮಾಡುವಂತೆ ನಿಮ್ಮ ಧರ್ಮವು ಇದನ್ನೇ ಪ್ರೋತ್ಸಾಹಿಸುತ್ತದೊ?
ಸಹಾಯವು ಲಭ್ಯವಿದೆ
ಹೌದು, ನೀವು ಆರಾಧಿಸುವ ವಿಧಾನವು ನಿಜವಾಗಿಯೂ ದೇವರಿಗೆ ಪ್ರಾಮುಖ್ಯವಾಗಿದೆ. ಆತನ ಮಟ್ಟಿಗೆ ಹೇಳುವುದಾದರೆ, ಕೇವಲ ಒಂದು ಸತ್ಯ ಧರ್ಮವಿದೆ. (ಎಫೆಸ 4:4-6) ನಮ್ಮ ಸಂಕ್ಷಿಪ್ತ ಚರ್ಚೆಯು, ಬೈಬಲಿನ ಬೋಧನೆಯ ಮುಖ್ಯಾಂಶಗಳಲ್ಲಿ ಕೆಲವನ್ನು ಮಾತ್ರ ಗುರುತಿಸಿದೆ. ಹೆಚ್ಚನ್ನು ಕಲಿಯಲು ಯಾಕೆ ಪ್ರಯತ್ನಿಸಬಾರದು?
ನಿಮ್ಮ ಧಾರ್ಮಿಕ ಶಿಕ್ಷಣವು ಏನೇ ಆಗಿರಲಿ, ಈ ವಿಚಾರದಲ್ಲಿ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡಬಲ್ಲರು. ತಮ್ಮ ಬೈಬಲಿನ ಅತ್ಯಾಸಕ್ತಿಯ ಶೈಕ್ಷಣಿಕ ಕೆಲಸಕ್ಕೆ ಅವರು ಭೌಗೋಲಿಕವಾಗಿ ಪ್ರಸಿದ್ಧರಾಗಿದ್ದಾರೆ. ಎಲ್ಲಾ ಕುಲಗಳ ಮತ್ತು ಧಾರ್ಮಿಕ ಹಿನ್ನೆಲೆಗಳುಳ್ಳ ಜನರಿಗೆ, ಬೈಬಲಿನ ಅಗಾಧವಾದ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲು ಅವರು ಬದ್ಧರಾಗಿದ್ದಾರೆ. (ಜ್ಞಾನೋಕ್ತಿ 2:1-6) ಉತ್ತಮವಾಗಿ ಸಂಶೋಧಿಸಲ್ಪಟ್ಟ ಬೈಬಲ್ ಸಾಹಿತ್ಯವನ್ನು ಅವರು ಪ್ರಕಾಶಿಸುತ್ತಾರೆ.a ವಾಸ್ತವವಾಗಿ, ಅವರು ವೈಯಕ್ತಿಕವಾಗಿ ನಿಮಗೆ ಬೈಬಲನ್ನು ಉಚಿತವಾಗಿ ಬೋಧಿಸಲಿಕ್ಕಾಗಿ ನಿಮ್ಮ ಮನೆಗಳಿಗೆ ಸಹ ಬರುವರು. ಈ ಬೈಬಲಿನ ಶೈಕ್ಷಣಿಕ ಕಾರ್ಯಕ್ರಮದಿಂದ ಲೋಕವ್ಯಾಪಕವಾಗಿ ಲಕ್ಷಾಂತರ ಜನರು ಪ್ರಸ್ತುತದಲ್ಲಿ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ವತಃ ನೀವು ಹಾಗೆ ಯಾಕೆ ಮಾಡಬಾರದು? ನೀವು ಹಾಗೆ ಮಾಡುವುದು ಅತ್ಯಾವಶ್ಯಕವಾಗಿದೆ ಯಾಕೆಂದರೆ, ನೀವು ಆರಾಧಿಸುವ ವಿಧಾನವು ನಿಜವಾಗಿಯೂ ಪ್ರಾಮುಖ್ಯವಾಗಿದೆಯೆಂಬುದು ನಿಶ್ಚಯ.
[ಅಧ್ಯಯನ ಪ್ರಶ್ನೆಗಳು]
a ಅಂತಹ ಒಂದು ಪ್ರಕಾಶನವು, ವಾಚ್ಟವರ್ ಬೈಬಲ್ ಆ್ಯಂಡ್ ಟ್ರಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್. ನಿಂದ ಪ್ರಕಾಶಿಸಲ್ಪಟ್ಟ, ದೇವರಿಗಾಗಿ ಮಾನವ ಕುಲದ ತಲಾಷು (ಇಂಗ್ಲಿಷ್ನಲ್ಲಿ) ಆಗಿದೆ. ಅನೇಕ ಜನರು ಅದರ ವಿಚಾರಶೀಲತೆ ಮತ್ತು ಲೋಕದ ಪ್ರಮುಖ ಧರ್ಮಗಳ ಕುರಿತಾದ ಪಾಂಡಿತ್ಯಪೂರ್ಣ ಚರ್ಚೆಯನ್ನು ಗಣ್ಯಮಾಡಿದ್ದಾರೆ.
[ಪುಟ 5 ರಲ್ಲಿರುವ ಚಿತ್ರ]
ಕ್ರೈಸ್ತಪ್ರಪಂಚದ ಮಿಷನೆರಿಗಳು ನಿಜ ಕ್ರೈಸ್ತತ್ವವನ್ನು ಮಹತ್ತರವಾಗಿ ತಪ್ಪಾಗಿ ಪ್ರತಿನಿಧಿಸಿದರು
[ಪುಟ 5 ರಲ್ಲಿರುವ ಚಿತ್ರ]
ಅನೇಕ ದಿವ್ಯಶಕ್ತಿ ಚರ್ಚುಗಳು ಹಣಗಳಿಸುವ ಉದ್ಯಮಗಳಾಗಿವೆ
[ಪುಟ 6 ರಲ್ಲಿರುವ ಚಿತ್ರ]
ಯೇಸುವಿನಲ್ಲಿ ನಂಬಿಕೆಯು ಸತ್ಯಾರಾಧನೆಯ ಒಂದು ಅತ್ಯಾವಶ್ಯಕವಾದ ಭಾಗವಾಗಿದೆ
[ಪುಟ 7 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳು ಉಚಿತ ಬೈಬಲ್ ಅಭ್ಯಾಸಗಳ ಮೂಲಕ ನಿಷ್ಕೃಷ್ಟವಾದ ಜ್ಞಾನವನ್ನು ಪಡೆದುಕೊಳ್ಳಲು ಲಕ್ಷಾಂತರ ಮಂದಿಗೆ ಸಹಾಯಮಾಡುತ್ತಾರೆ