ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ಕೊಲಂಬಿಯ
ಕೊಲಂಬಿಯ ದಕ್ಷಿಣ ಅಮೆರಿಕದ ಅಪೂರ್ವವಾದ ಒಂದು ದೇಶ. ಅಟ್ಲಾಂಟಿಕ್ ಹಾಗೂ ಶಾಂತ ಸಾಗರಗಳು—ಎರಡೂ—ಈ ಅಗ್ನಿಪರ್ವತ ಅಲಂಕೃತ ದೇಶದ ಕಡಲಕರೆಯನ್ನು ಅಪ್ಪಿಕೊಳ್ಳುತ್ತವೆ. ಹವಾಮಾನವು ತಗ್ಗುಪ್ರದೇಶಗಳಲ್ಲಿನ ಉಷ್ಣತೆಯಿಂದ ಆ್ಯಂಡೀಜ್ ಪರ್ವತಗಳ ಎತ್ತರವಾದ, ಮಂಜುನೆತ್ತಿಯ ತುದಿಗಳ ಶೀತದ ವರೆಗೆ ವ್ಯತ್ಯಾಸವುಳ್ಳದ್ದಾಗಿರುತ್ತದೆ.a
ಕೊಲಂಬಿಯ ಬಂಗಾರ ಹಾಗೂ ಮರಕತಕ್ಕಾಗಿ ಹೆಸರುವಾಸಿಯಾಗಿರುವುದಾದರೂ, ಜನರು ಅದರ ಅತ್ಯಂತ ಅಮೂಲ್ಯ ಸ್ವತ್ತುಗಳಾಗಿದ್ದಾರೆ. ಇಂದು, ಯೆಹೋವನು ತನ್ನ ಆತ್ಮಿಕ ಮನೆಯನ್ನು ಮಹಿಮೆಯಿಂದ ತುಂಬುತ್ತಿದ್ದಾನೆ. ಸುಂದರವಾದ, ಅಪೇಕ್ಷಣೀಯ ಆರಾಧಕರು—ಕೊಲಂಬಿಯ ದೇಶವನ್ನು ಸೇರಿಸಿ—ಭೂಮಿಯ ಎಲ್ಲ ಭಾಗಗಳಿಂದ ಅದರೊಳಗೆ ಪ್ರವಹಿಸುತ್ತಿದ್ದಾರೆ.—ಹಗ್ಗಾಯ 2:7.
ವ್ಯಾಪಾರದ ಕಾರ್ಯನಿರ್ವಾಹಕರು ಪ್ರಭಾವಿತರಾದದ್ದು
ಆದಿತ್ಯವಾರ, ನವಂಬರ 1, 1992, ಬಗೊಟಾಕ್ಕೆ 42 ಕಿಲೊಮೀಟರುಗಳು ವಾಯವ್ಯ ದಿಕ್ಕಿಗಿರುವ ಫಾಕಾಟಾಟೀವಾದಲ್ಲಿ ವಾಚ್ ಟವರ್ ಸೊಸೈಟಿಯ ಹೊಸ ಬ್ರಾಂಚ್ ಆಫೀಸು ಮತ್ತು ಮುದ್ರಣ ಸೌಕರ್ಯದ ಸಮರ್ಪಣೆಯನ್ನು ಗುರುತಿಸಿತು. ಬ್ರಾಂಚಿನ ಸಂಚಾರಗಳು ಭೇಟಿಕಾರರ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿದ್ದವು. ಒಬ್ಬ ಭೇಟಿಕಾರನು ತಾನು ಕೆಲಸ ಮಾಡುವ ಕಾರ್ಖಾನೆಗೆ ಹಿಂದಿರುಗಿದ ಬಳಿಕ, ‘ಕಾರ್ಯಸಾಮರ್ಥ್ಯ, ಕ್ರಮ, ಮತ್ತು ಕೆಲಸಗಾರರ ನೈತಿಕ ಸ್ಥಿತಿಯ ಒಂದು ವಿಸ್ಮಯ’ ವಾಗಿರುವ ಸಂಸ್ಥೆಯನ್ನು ವೀಕ್ಷಿಸಲು ಹೋಗುವಂತೆ ತನ್ನ ನಿರ್ವಾಹಕರನ್ನು ಉತ್ತೇಜಿಸಿದನು. ತರುವಾಯದ ತಮ್ಮ ಸಂಚಾರದಲ್ಲಿ, ಕಾರ್ಯನಿರ್ವಾಹಕರು ತೀಕ್ಷೈವಾದ ಆಸಕ್ತಿಯನ್ನು ತೋರಿಸಿದರು ಮತ್ತು ಅನೇಕ ಪ್ರಶ್ನೆಗಳನ್ನು ಕೇಳಿದರು.
ಈ ಕಾರ್ಯನಿರ್ವಾಹಕರು ತಮ್ಮ ನಿರ್ವಾಹಕರನ್ನು, ಮೇಲ್ವಿಚಾರಕರನ್ನು, ಮತ್ತು ಮುಖ್ಯ ಕಾರೇಗಾರರನ್ನು—ವಾಸ್ತವದಲ್ಲಿ, ತಮ್ಮ ಎಲ್ಲ ಕಾರ್ಮಿಕರನ್ನು—ಸಂಚಾರಕ್ಕೆ ಕಳುಹಿಸಲು ಬಯಸಿದರು. ಇಂತಹ ಸಂಘಟನಾ ಸಾಮರ್ಥ್ಯವನ್ನು 1,300 ಕಾರ್ಮಿಕರ ಸಂಪೂರ್ಣ ಸಿಬ್ಬಂದಿಯು ವೀಕ್ಷಿಸುವ ತನಕ, ಪ್ರತಿ ವಾರ, ಅವರು 15 ರಿಂದ 25 ಕೆಲಸಗಾರರನ್ನು ಸಂಚಾರಗಳಿಗಾಗಿ ಗೊತ್ತುಪಡಿಸುತ್ತಿದ್ದರು.
ಅವರ ಕೆಲಸಗಾರರಲ್ಲಿ ನೂರಾರು ಜನರು ಬ್ರಾಂಚ್ ಸೌಕರ್ಯಗಳ ಸಂಚಾರವನ್ನು ಮಾಡಿದ್ದಾರೆ ಮತ್ತು ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದೆ ಇರುವ ಸಂಸ್ಥೆ (ಇಂಗ್ಲಿಷ್ನಲ್ಲಿ) ಎಂಬ ವಿಡಿಯೊವನ್ನು ವೀಕ್ಷಿಸಿದ್ದಾರೆ. ಸಂಸ್ಥೆಯ ವಿಸ್ತಾರ ಮತ್ತು ರಾಜ್ಯ ಸಾರುವಿಕೆಯ ಕೆಲಸದ ಲೋಕವ್ಯಾಪಕ ವ್ಯಾಪ್ತಿಯಿಂದ ಪ್ರಭಾವಿತರಾಗಿ, ಸೊಸೈಟಿಯ ಕಾರ್ಯವಿಧಾನಗಳಲ್ಲಿ ಉಪಯೋಗಿಸಲಾಗುವ ತಂತ್ರವಿಜ್ಞಾನದ ಉನ್ನತ ಮಟ್ಟದ ಕುರಿತು ಅವರು ಆಶ್ಚರ್ಯಪಡುತ್ತಾರೆ. ಅಲ್ಲಿಂದ ಹೋಗುವಾಗ, ತಾವು ‘ಅಸಂಘಟಿತ ಲೋಕದೊಳಗೆ ಪುನಃ ಹೋಗಲು ಪ್ರಮೋದವನವನ್ನು ಬಿಡುತ್ತಿರ್ತುವೆವೋ’ ಎಂಬಂತೆ ಅವರಿಗೆ ಅನಿಸುವುದಾಗಿ ಅನೇಕರು ಹೇಳುವುದನ್ನು ಕೇಳಲಾಗುತ್ತದೆ.
ಸತ್ಯವು ಎಲ್ಲ ರೀತಿಯ ಜನರನ್ನು ತಲಪುತ್ತದೆ
ಎಲ್ಲ ರೀತಿಯ ಜನರು ಸುವಾರ್ತೆಯಿಂದ ತಲಪಲ್ಪಡುತ್ತಿದ್ದಾರೆ. (1 ತಿಮೊಥೆಯ 2:3, 4) ಉದಾಹರಣೆಗೆ, ಒಂದು ಹೆವಿ ಮೆಟಲ್ ರಾಕ್ ಗುಂಪಿನ, ಹಿಂದಿನ ರಚನಕಾರ ಹಾಗೂ ನಾಯಕ, ಬೈಬಲ್ ಸತ್ಯವನ್ನು ಸ್ವೀಕರಿಸಿ, ತನ್ನ ಜೀವಿತದಲ್ಲಿ ಬದಲಾವಣೆಗಳನ್ನು ಮಾಡಿ, ಬೇಗನೆ ಒಬ್ಬ ಕ್ರಮದ ಪಯನೀಯರನಾದನು. ತದನಂತರ ಅವನು ಒಬ್ಬ ಶುಶ್ರೂಷಾ ಸೇವಕನಂತೆ ನೇಮಕಗೊಂಡನು. ಸರಕಾರ ವಿರೋಧಿ ಗುಂಪುಗಳ ಸದಸ್ಯರಾಗಿದ್ದ ಹಲವಾರು ವ್ಯಕ್ತಿಗಳು ತಮ್ಮ ಭರವಸೆ ಹಾಗೂ ನಿರೀಕ್ಷೆಯನ್ನು ಯೆಹೋವನ ರಾಜ್ಯದಲ್ಲಿ ಇಡಲು ಕಲಿತಿದ್ದಾರೆ. ಶಾಂತಿಭರಿತ ಹೊಸ ಲೋಕದ ಸಂದೇಶವನ್ನು ಸಾರುವುದರಲ್ಲಿ ಅವರೀಗ ಸಕ್ರಿಯವಾಗಿ ಒಳಗೊಂಡಿದ್ದಾರೆ.
ಅಮಲೌಷಧ ವ್ಯಸನಿಗಳು ಮತ್ತು ವ್ಯಾಪಾರಿಗಳು ಕೂಡ ಸತ್ಯದ ಕಡೆಗೆ ತಿರುಗಿದ್ದಾರೆ. ಈಗ ಸಾಕ್ಷಿಯಾಗಿರುವ ಒಬ್ಬ ಯುವ ಪುರುಷನು, ಆ ರೀತಿಯ ಜೀವನದಿಂದ ಹೊರಗೆ ಬರುವ ಮೊದಲು, ಐದು ವರ್ಷಗಳ ಕಾಲ ಕಾಡಿನಲ್ಲಿ ಒಂದು ಅಮಲೌಷದ ತೋಟವನ್ನು ಮತ್ತು ಒಂದು ಕೊಕೇನ್ ಪ್ರಯೋಗಾಲಯವನ್ನು ನಿರ್ವಹಿಸಿದ್ದನು. ಬೈಬಲ್ ತತ್ವಗಳನ್ನು ಕಲಿಯುವುದರಲ್ಲಿ ಮತ್ತು ಆಚರಿಸುವುದರಲ್ಲಿ ಅವನು ಸಂತೋಷವನ್ನು ಕಂಡುಕೊಂಡಿದ್ದಾನೆ. ಕಾರಾಗೃಹವೊಂದರಲ್ಲಿ, ಬೈಬಲಿನ ಪ್ರಾಮಾಣಿಕ ಅಭ್ಯಾಸದಿಂದ ಪ್ರೇರೇಪಿಸಲ್ಪಟ್ಟ ಆಪಾದಿತ ಕೊಲೆಪಾತಕಿಗಳು, ಯೆಹೋವನು ತಮ್ಮ ಪಾಪಗಳನ್ನು ಕ್ಷಮಿಸುವಂತೆ ಮತ್ತು ಅವರನ್ನು ತನ್ನ ಸೇವಕರೋಪಾದಿ ಸ್ವೀಕರಿಸುವಂತೆ ಮನಃಪೂರ್ವಕವಾಗಿ ಪ್ರಾರ್ಥಿಸುತ್ತಿದ್ದಾರೆ.
ಹೀಗೆ ರಾಜ್ಯ ಸಂದೇಶಕ್ಕೆ ಎಲ್ಲ ರೀತಿಯ ಜನರು ಪ್ರತಿಕ್ರಿಯಿಸುತ್ತಿದ್ದಾರೆಂಬುದು ಸ್ಪಷ್ಟ. ಕೊಲಂಬಿಯದಲ್ಲಿ, ಬೇರೆ ಕಡೆಗಳಲ್ಲಿ ಇರುವಂತೆ, ಯೆಹೋವನು ಹೀಗೆ ತನ್ನ ಆಲಯವನ್ನು ಮಹಿಮೆಯಿಂದ ತುಂಬುತ್ತಿದ್ದಾನೆ.
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಮಾಹಿತಿಗಾಗಿ, 1994 ಕ್ಯಾಲೆಂಡರ್ ಆಫ್ ಜಿಹೋವಾಸ್ ವಿಟ್ನೆಸಸ್ ನೋಡಿರಿ.
[ಪುಟ 8 ರಲ್ಲಿರುವ ಚೌಕ]
ದೇಶದ ಪಾರ್ಶ್ವ ದೃಶ್ಯ
ಇಸವಿ 1993ರ ಸೇವಾ ವರ್ಷ
ಸಾಕ್ಷಿ ನೀಡುತ್ತಿರುವವರ ಉಚ್ಚಾಂಕ: 60,854
ಪ್ರಮಾಣ: 1 ಸಾಕ್ಷಿಗೆ 558
ಜ್ಞಾಪಕ ಹಾಜರಿ: 2,49,271
ಸರಾಸರಿ ಪಯನೀಯರ್ ಪ್ರಚಾರಕರು: 8,487
ಸರಾಸರಿ ಬೈಬಲ್ ಅಧ್ಯಯನಗಳು: 1,00,927
ದೀಕ್ಷಾಸ್ನಾನ ಪಡೆದವರು: 5,183
ಸಭೆಗಳು: 751
ಬ್ರಾಂಚ್ ಆಫೀಸ್: ಫಾಕಾಟಾಟೀವಾ
[ಪುಟ 9 ರಲ್ಲಿರುವ ಚಿತ್ರ]
ಇಸವಿ 1956 ರಲ್ಲಿನ ಬ್ರಾಂಚ್ ಆಫೀಸಿನ ಸಿಬ್ಬಂದಿ ಮತ್ತು ಮಿಷನೆರಿಗಳು
[ಪುಟ 9 ರಲ್ಲಿರುವ ಚಿತ್ರ]
ಬ್ರಾಂಚ್ ಆಫೀಸಿನ ವಿಮಾನ ನೋಟ