ರಾಜ್ಯ ಘೋಷಕರು ವರದಿ ಮಾಡುವುದು
ಕೊಲಂಬಿಯದಲ್ಲಿ ಆತ್ಮಿಕ ಬಿಡುಗಡೆ
ಸ್ಪ್ಯಾನಿಷ್ ವಿಜೇತ ನಾಯಕರ ಕಾಲದಿಂದ, ಕ್ಯಾತೊಲಿಕ್ ಧರ್ಮಕ್ಕೆ ದಕ್ಷಿಣ ಅಮೆರಿಕದ ಮೇಲೆ ಒಂದು ಧಾರ್ಮಿಕ ಬಿಗಿಹಿಡಿತವು ಇದ್ದೇ ಇತ್ತು. ಕೊಲಂಬಿಯದಲ್ಲಿ ಅದು ಬಹಳ ಕಾಲದಿಂದ ಅಧಿಕೃತ ರಾಜ್ಯ ಧರ್ಮವಾಗಿರುತ್ತದೆ. ಕಳೆದ 105 ವರ್ಷಗಳಿಂದ, ಕೊಲಂಬಿಯ ಸರಕಾರದೊಂದಿಗೆ ವ್ಯಾಟಿಕನ್ಗೆ ಇದ್ದ ಒಪ್ಪಂದವು ಚರ್ಚನ್ನು ಸಂರಕ್ಷಿಸಿತ್ತು ಮತ್ತು ಶಿಕ್ಷಣ ಮತ್ತು ವಿವಾಹದ ರಂಗಗಳಲ್ಲಿ ಅದಕ್ಕೆ ವಿಶೇಷ ಸುಯೋಗಗಳನ್ನು ಅನುಗ್ರಹಿಸಿತ್ತು.
ಕೊಲಂಬಿಯದ ಜನರು ಡಿಸೆಂಬರ್ 1990 ರಲ್ಲಿ, ಒಂದು ಹೊಸ ಸಂವಿಧಾನವನ್ನು ರಚಿಸಲಿಕ್ಕಾಗಿ ಒಂದು ನಿಯೋಜಿತ ಮಂಡಲಿಯನ್ನು ಆರಿಸಿದರು, ಅದು 1991 ರ ಮಧ್ಯದೊಳಗೆ ಪೂರೈಸಲ್ಪಟ್ಟಿತು. ಈ ಹೊಸ ಸಂವಿಧಾನವು ಕೊಲಂಬಿಯದ ಧಾರ್ಮಿಕ ವಿದ್ಯಮಾನವನ್ನು ಬದಲಾಯಿಸುತಲ್ತಿದೆ. ಎಲ್ಲಾ ಧರ್ಮಗಳಿಗೆ ಈಗ ನ್ಯಾಯಶಾಸನದ ಮುಂದೆ ಸಮಾನ ಹಕ್ಕುಗಳಿವೆ, ಮತ್ತು ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳ ಮೇಲೆ ಧಾರ್ಮಿಕ ಉಪದೇಶವನ್ನು ಬಲಾತ್ಕಾರದಿಂದ ಹೊರಿಸ ಸಾಧ್ಯವಿಲ್ಲ. ಈ ಸಾಂವಿಧಾನಿಕ ಬದಲಾವಣೆಗಳ ನೋಟದಲ್ಲಿ ವ್ಯಾಟಿಕನ್ನೊಂದಿಗಿನ ಆ ಒಪ್ಪಂದವು ಪರಿಷ್ಕರಣಕ್ಕಾಗಿ ನಿಂತಿರುತ್ತದೆ.
ಈ ಹೆಚ್ಚಿನ ಧಾರ್ಮಿಕ ಸ್ವಾತಂತ್ರ್ಯವು ಕ್ಯಾತೊಲಿಕ್ ಚರ್ಚಿನ ಪ್ರಾಬಲ್ಯವನ್ನು ಕಡಿಮೆಗೊಳಿಸಿ, ಪ್ರಾಮಾಣಿಕ ಹೃದಯದ ಜನರಿಗೆ ಬೈಬಲಿನ ಜ್ಞಾನವನ್ನು ಗಳಿಸಲು ಮತ್ತು ಆತ್ಮಿಕ ಸ್ವಾತಂತ್ರ್ಯವನ್ನು ಪಡೆಯಲು ಹೆಚ್ಚು ಸುಲಭವನ್ನಾಗಿ ಮಾಡಿರುತ್ತದೆ.
ಈ ಆತ್ಮಿಕ ಬಿಡುಗಡೆಯ ಹಾರೈಕೆಯಲ್ಲಿ, ಆ ದೇಶದ 51,000 ಯೆಹೋವನ ಸಾಕ್ಷಿಗಳು ಆತ್ಮಿಕ ನಿರಾಶ್ರಿತರ ಪರಾಮರಿಕೆಗಾಗಿ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಅವರ ಹೊಸ ಬ್ರಾಂಚ್ ಸಂಕೀರ್ಣವು, ಒಂದು ಪೂರಾ-ಬಣ್ಣದ ಹಾಗೂ ಹೆಚ್ಚು ವೇಗ-ಗತಿಯ ಆಫ್ಸೆಟ್ ಪ್ರೆಸ್ ಸಹ ಸೇರಿ, ಕೊನೆಮುಟ್ಟುತ್ತಾ ಇದೆ. ತಾತ್ಕಾಲಿಕ ವಿಶೇಷ ಪಯನೀಯರರು ಯೆಹೋವನ ಕಳೆದು ಹೋದ ಕುರಿಗಳನ್ನು ಹುಡುಕುವುದಕ್ಕಾಗಿ ಚಿಕ್ಕ ಚಿಕ್ಕ ಊರುಗಳಿಗೆ ಕಳುಹಿಸಲ್ಪಟ್ಟಿದ್ದಾರೆ ಮತ್ತು ಒಂದು ಆಶ್ಚರ್ಯಕರ ಬೈಬಲ್ ಶೈಕ್ಷಣಿಕ ಕಾರ್ಯವನ್ನು ಪೂರೈಸಿದ್ದಾರೆ. ಪ್ರತಿಯೊಂದರಲ್ಲಿ ಸುಮಾರು 10,000 ನಿವಾಸಿಗಳುಳ್ಳ 63 ಊರುಗಳಲ್ಲಿ, 47 ಹೊಸ ಸಭೆಗಳು ಮತ್ತು ಗುಂಪುಗಳು ರಚಿಸಲ್ಪಟ್ಟಿರುತ್ತವೆ.
ಯೆಹೋವನ ಆತ್ಮವು ಪ್ರಾಮಾಣಿಕ ಹೃದಯದ ಜನರನ್ನು ಪ್ರೇರೇಪಿಸುತ್ತಾ ಇರುವಾಗ, ಅನೇಕ ಯುವ ಜನರು ಸಹ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ. ಕ್ವೆಸ್ಟ್ಯನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಟ್ ವರ್ಕ್ ಪ್ರಕಾಶನವು ಅಂಥ ಯುವ ಜನರಿಗೆ ಹಾಗೂ ಅವರ ಹೆತ್ತವರಿಗೆ ಒಂದು ಅಮೂಲ್ಯವಾದ ಸಹಾಯಕವಾಗಿ ರುಜುವಾಗಿದೆ. ಒಬ್ಬ ನೆರೆಯವನಿಂದ ಎರವಲಾಗಿ ಪಡೆದ ಈ ಪುಸ್ತಕದ ಒಂದು ಪ್ರತಿಯ ಅಂಶಗಳನ್ನು ಓದಿದ ಒಬ್ಬ ಮನುಷ್ಯನನ್ನು, ಒಬ್ಬ ಸಾಕ್ಷಿಯು ಮನೆಮನೆಗೆ ಹೋಗುವಾಗ ಭೇಟಿಯಾದನು. ಕುಟುಂಬ ಸಮಸ್ಯೆಯನ್ನು ಚರ್ಚಿಸುವುದರಲ್ಲಿ ಅದು ಪ್ರದರ್ಶಿಸುವ ವ್ಯಾವಹಾರ್ಯ ವಿವೇಕದಿಂದ ಅವನು ಅತಿ ಪ್ರಭಾವಿತನಾದನು. ನಾಲ್ಕನೆಯ ಅಧ್ಯಾಯವಾದ, “ವೈ ಡಿಡ್ ಡ್ಯಾಡ್ ಆ್ಯಂಡ್ ಮಮ್ ಸ್ಲ್ಪಿಟ್ ಅಪ್?” ಎಂಬದು ಅವನನ್ನು ವಿಶೇಷವಾಗಿ ಪ್ರಭಾವಿಸಿತು, ಯಾಕಂದರೆ ಅವನು ಮತ್ತು ಅವನ ಪತ್ನಿ ಪ್ರತ್ಯೇಕವಾಸದ ಅಂಚಿನಲಿದ್ದರು. ಪುಸ್ತಕವು ಅವನನ್ನು ಒಂದು ದೊಡ್ಡ ದುರಂತದಿಂದ ತಪ್ಪಿಸಿತು ಎಂದನವನು. ಈಗ ಅವನೂ ಅವನ ಕುಟುಂಬವೂ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದಾರೆ ಮತ್ತು ಎಲ್ಲಾ ಸಭಾ ಕೂಟಗಳಿಗೆ ಹಾಜರಾಗುತ್ತಿದ್ದಾರೆ. ಯೆಹೋವನು ಬೈಬಲಿನ ಮತ್ತು ತನ್ನ ಸಂಸ್ಥೆಯ ಮೂಲಕ ಒದಗಿಸುವ ವ್ಯಾವಹಾರ್ಯ ವಿವೇಕಕ್ಕಾಗಿ ಅವರು ಅತ್ಯಂತ ಕೃತಜ್ಞರಾಗಿದ್ದಾರೆ.
ಹೀಗೆ ಯೆಹೋವನ ಸಾಕ್ಷಿಗಳು ಆತ್ಮಿಕವಾಗಿ ಹಸಿದ ಜನರಿಗೆ ಯೆಹೋವನ ಆಶ್ಚರ್ಯಕರ ಉದ್ದೇಶಗಳ ಮತ್ತು ಈಗ ಸಮೀಪದಲ್ಲೇ ಇರುವ ಆತನ ಹೊಸ ಲೋಕದ ಕುರಿತು ಕಲಿಯಲು ಸಹಾಯಮಾಡುವಾಗ, ಕೊಲಂಬಿಯದಲ್ಲಿ ಸಂಭವಿಸುತ್ತಿರುವ ಆತ್ಮಿಕ ಬಿಡುಗಡೆಯನ್ನು ಈ ಅನುಭವವು ಚಿತ್ರಿಸುತ್ತದೆ.—2 ಪೇತ್ರ 3:13.