ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ನ್ಯೂ ಸೀಲೆಂಡ್
ದ್ವೀಪಗಳು ಯೆಹೋವನನ್ನು ಸುತ್ತಿಸಸಾಧ್ಯವೊ? ಯೆಶಾಯ 42:10ಕ್ಕನುಸಾರ, ಹೌದು: “ದ್ವೀಪಾಂತರಗಳೇ, ದ್ವೀಪಾಂತರನಿವಾಸಿಗಳೇ, ಯೆಹೋವನ ಘನತೆಗಾಗಿ ನೂತನಗೀತವನ್ನು ಹಾಡಿ ದಿಗಂತಗಳಲ್ಲಿಯೂ ಆತನನ್ನು ಕೀರ್ತಿಸಿರಿ.” ನ್ಯೂ ಸೀಲೆಂಡನ್ನು ರಚಿಸುವ ದ್ವೀಪಗಳು ನಿಶ್ಚಯವಾಗಿಯೂ ಯೆಹೋವನನ್ನು ಸುತ್ತಿಸುತ್ತವೆ. ಸರೋವರಗಳು, ಸಮುದ್ರದ ಸಣ್ಣ ಒಳಚಾಚುಗಳು, ಎತ್ತರದ ಪರ್ವತಗಳು, ನೀರ್ಗಲ್ಲ ನದಿಗಳು, ಸಮುದ್ರ ತೀರಗಳು, ಫರ್ನ್ ಗಿಡಗಳಿಂದ ಅಲಂಕೃತವಾದ ಮಳೆಕಾಡುಗಳು, ಮತ್ತು ಹುಲುಸಾದ ಹುಲ್ಲುಗಾವಲಿನ ಭೂದೃಶ್ಯಗಳಿಗಾಗಿ ವಿಶ್ವ ಪ್ರಖ್ಯಾತವಾಗಿರುವ ನ್ಯೂ ಸೀಲೆಂಡ್, ಆಕಾಶ ಮತ್ತು ಭೂಮಿಯ ಸೃಷ್ಟಿಕರ್ತನ ಘನತೆ ಮತ್ತು ವೈಭವದ ಕುರಿತಾಗಿ ವಾಗ್ಮಿತೆಯಿಂದ ಮಾತಾಡುತ್ತದೆ.
20ನೆಯ ಶತಮಾನದ ಅಂತ್ಯದಷ್ಟಕ್ಕೆ, ನ್ಯೂ ಸೀಲೆಂಡಿನ ಹೆಚ್ಚೆಚ್ಚು ನಿವಾಸಿಗಳು, ಯೆಹೋವನೆಡೆಗೆ ಶುದ್ಧಾರಾಧನೆಯಲ್ಲಿ ತಿರುಗುವ ಮೂಲಕ ಮತ್ತು ಇತರರೊಂದಿಗೆ ದೇವರ ರಾಜ್ಯದ ಸುವಾರ್ತೆಯನ್ನು ಹಂಚುವ ಮೂಲಕ ಆತನನ್ನು ಸುತ್ತಿಸಲು ತಮ್ಮ ಧ್ವನಿಗಳನ್ನು ಕೂಡಿಸಿದ್ದಾರೆ. ಇತ್ತೀಚೆಗೆ, ಸಂಬಂಧಿಕರಿಗೆ ಸಾಕ್ಷಿನೀಡುವ ಕುರಿತಾಗಿ ಒಂದು ಒಳ್ಳೆಯ ಅನುಭವವನ್ನು ಕೇಳಿದಂತಹ ಒಬ್ಬ ಸಾಕ್ಷಿಯು, ತನ್ನ ಕುಟುಂಬದೊಂದಿಗೆ ಒಂದು ಪ್ರಯತ್ನವನ್ನು ಮಾಡಲು ನಿರ್ಣಯಿಸಿದನು. ಕುಟುಂಬದ ಅನೇಕ ಸದಸ್ಯರಿಗೆ ಅವನು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ಕೊಡುಗೆ ಪ್ರತಿಗಳನ್ನು ಬಹುಮಾನವಾಗಿ ಕೊಟ್ಟನು. ಇಷ್ಟರ ವರೆಗಿನ ಫಲಿತಾಂಶಗಳೇನು? ಒಬ್ಬ ಸಹೋದರಿಯೂ ಒಬ್ಬ ಸಹೋದರನೂ ಈಗ ಬೈಬಲನ್ನು ಅಭ್ಯಾಸಿಸುತ್ತಿದ್ದಾರೆ, ಒಬ್ಬ ಸೋದರಳಿಯನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ದೀಕ್ಷಾಸ್ನಾನ ಪಡೆದಿದ್ದಾನೆ, ಮತ್ತು ಇತರರು ಈಗ ದೇವರ ವಾಕ್ಯದ ಸತ್ಯಕ್ಕೆ ಹೆಚ್ಚು ಸ್ವೀಕಾರ ಭಾವವುಳ್ಳವರಾಗಿದ್ದಾರೆ ಎಂದು ಅವನು ವರದಿಸುತ್ತಾನೆ. ಅವನಿಗೆ ಕೆಲಸ ಮಾಡಲು ಇನ್ನೂ ಒಂದು ದೊಡ್ಡ ಕ್ಷೇತ್ರವಿದೆ; ಅವನ ಹೆತ್ತವರ ಹೊರತು, ಅವನಿಗೆ ಆರು ಸಹೋದರರು ಮತ್ತು ಒಂಬತ್ತು ಸಹೋದರಿಯರಿದ್ದಾರೆ!
ರಾಜ್ಯ ಸಭಾಗೃಹಗಳನ್ನು ನಿರ್ಮಿಸಲು ಸಾಕ್ಷಿಗಳು ಒಟ್ಟುಗೂಡುವಾಗಲೂ ಯೆಹೋವನಿಗೆ ಸುತ್ತಿಯು ಫಲಿಸುತ್ತದೆ. ಉದಾಹರಣೆಗಾಗಿ, ವಾರ್ತಾಪತ್ರ ಅಂಕಣಕಾರ ರೈ ಪರ್ಕಿನ್ಸ್ ಮೇ 17, 1994ರ ಓಪೋಟೀಕಿ ನ್ಯೂಸ್ನಲ್ಲಿ ಬರೆದುದು: “ಒಬ್ಬ ಅವಿಶ್ವಾಸಿಯಾಗಿದದ್ದರಿಂದ ನಾನು, ತಮ್ಮ ದೇವರ ಪ್ರೀತಿಗಾಗಿ ಆ ಯೋಜನೆಯಲ್ಲಿ ಇಷ್ಟೊಂದು ಸಮಯ ಮತ್ತು ಶ್ರಮವನ್ನು ಹಾಕುವ ಆ ಎಲ್ಲಾ ಸಮರ್ಪಿತ ಕಾರ್ಮಿಕರ ಕಾರ್ಯಗಳು ಮತ್ತು ಪ್ರಯತ್ನಗಳಿಂದ, ಮಹತ್ತಾಗಿ ಪ್ರಭಾವಿಸಲ್ಪಟ್ಟೆ.
“ಆ ವಾರಾಂತ್ಯದಲ್ಲಿ ಹಾಕಲಾದ ಎಲ್ಲಾ ಕೆಲಸದ ತಾಸುಗಳಲ್ಲಿ, ಒಂದೇ ಒಂದು ಯೂನಿಯನ್ ವಿವಾದವನ್ನು ನಾನು ನೋಡಲೂ ಇಲ್ಲ ಕೇಳಲೂ ಇಲ್ಲ . . . ಸ್ತ್ರೀಯರು ತಮ್ಮ ಪುರುಷರ ಬದಿಯಲ್ಲಿ ಸಾರುವೆಗಳ ಮೇಲೆ ಇದ್ದು, ಸಂದುಗಾರೆ ಮಾಡುತ್ತಾ, ಎತ್ತುತ್ತಾ, ಹೊಯ್ಯುತ್ತಾ ಎಲ್ಲವನ್ನು ಒಂದು ಆರಾಮವಾದ ಮತ್ತು ಸಂತೋಷದ ಮನೋಭಾವದಿಂದ ಮಾಡುತ್ತಿದ್ದರು.
“ಮತ್ತು ಯಾರಾದರೂ ಒಂದು ಸಿಗರೇಟನ್ನು ಎಳೆಯಲು ಸಮಯವಿದ್ದರೂ, ಅದಕ್ಕಾಗಿ ಒಂದು ನಿಮಿಷವೂ ವ್ಯರ್ಥಗೊಳಿಸಲ್ಪಡಲಿಲ್ಲ. ಯಾವುದೇ ಪಾತ್ರದಲ್ಲಿ ಕೆಲಸ ಮಾಡುತ್ತಿದ್ದ ಆ ಎಲ್ಲಾ ಜನರಿಗೆ, ಪೆಯಿಂಟ್ ಹಬೆ ಮತ್ತು ಇಟ್ಟಿಗೆ ಧೂಳಿನ ಹೊರತು ಗಾಳಿಯು ಮಾಲಿನ್ಯದಿಂದ ಮುಕ್ತವಾಗಿತ್ತು.”
ಓಪೋಟೀಕಿ ಸಭೆಯ ಹಿರಿಯರ ಮಂಡಳಿ ಬರೆದುದು: “ಆ ಇಡೀ ಕಾರ್ಯಯೋಜನೆಯು ಊರ ಜನರ ಮೇಲೆ ಒಂದು ಮಹತ್ತಾದ ಪ್ರಭಾವವನ್ನು ಬೀರಿದೆ. ಎಲ್ಲರೂ ಅದರ ಕುರಿತಾಗಿ ಮಾತಾಡುತ್ತಿದ್ದಾರೋ ಎಂಬಂತೆ ತೋರುತ್ತದೆ. ಹಲವಾರು ಬೈಬಲ್ ಅಭ್ಯಾಸಗಳು ಆರಂಭಿಸಲ್ಪಟ್ಟಿವೆ. ಅನೇಕ ವರ್ಷಗಳಿಂದ ಅವರನ್ನು ನಾವು ಭೇಟಿಮಾಡಬಾರದೆಂದು ಕೇಳಿಕೊಳ್ಳುತ್ತಿದ್ದ, ತುಂಬಾ ಧಾರ್ಮಿಕರಾಗಿದ್ದ ಒಂದು ದಂಪತಿಗಳ ಅನುಭವವನ್ನು ನಾವು ವಿಶಿಷ್ಟವಾಗಿ ತುಂಬ ಉತ್ತೇಜನಕರವಾದದ್ದಾಗಿ ಕಂಡುಕೊಳ್ಳುತ್ತೇವೆ. ಅವರು ಪ್ರತಿದಿನ ನಿವೇಶನಕ್ಕೆ ಬಂದರು ಮತ್ತು ಅನಂತರ ಕೂಟಕ್ಕೆ ಬಂದರು. ತದನಂತರ ಗಂಡನು ಹೇಳಿದ್ದು, ‘ನೀವು ದೇವರ ಜನರಾಗಿದ್ದೀರೆಂದು ನಾನು ನೋಡಬಲ್ಲೆ. ಅಂತರಂಗದಲ್ಲಿ, ಇಂತಹ ಜನರೊಂದಿಗೆ ಸಹವಾಸಿಸಲು ನನ್ನ ಜೀವಮಾನವೆಲ್ಲ ನಾನು ಹಾತೊರೆಯುತ್ತಿದ್ದೆ.’”
ಹಿಂದಿನ ವರ್ಷ, ಓಟಾಗೊ ಡೆಯ್ಲಿ ಟೈಮ್ಸ್ನ ಒಬ್ಬ ಅಂಕಣಕಾರನು ಡನೀಡನ್ನಲ್ಲಿ ಕ್ಷಿಪ್ರವಾಗಿ ನಿರ್ಮಿಸಲ್ಪಟ್ಟ ಒಂದು ರಾಜ್ಯ ಸಭಾಗೃಹದ ಕುರಿತಾಗಿ ಈ ಮುಂದಿನದನ್ನು ಹೇಳಿದನು: “ಅದೊಂದು ಗಮನಾರ್ಹ ನಿರ್ವಹಣೆಯಾಗಿತ್ತು, ಪ್ರಚೋದನೆ ಮತ್ತು ಸ್ವಸಹಾಯದ ಒಂದು ಗಮನಾರ್ಹ ಉದಾಹರಣೆ.” ಅದೇ ವಾರ್ತಾಪತ್ರವು ಹೇಳಿಕೆಯನ್ನಿತ್ತದ್ದು: “ಒಂದು ದೊಡ್ಡ ಕಟ್ಟಡವು ತಮ್ಮ ಕಣ್ಣುಗಳ ಮುಂದೆ ಬೆಳೆಯುತ್ತಾ ಹೋದಂತೆ ನಗರದ ಜನರು ಆಶ್ಚರ್ಯದಿಂದ ನೋಡುತ್ತಾ ಇದ್ದರು, ಮತ್ತು ಅನೇಕರು, ತದ್ರೀತಿಯ ಸ್ವಯಂಸೇವಕ ಕೆಲಸ ಮತ್ತು ತುಂಬು ಸಹಕಾರದ ಆತ್ಮವು ಲಭ್ಯವಿರುತ್ತಿದ್ದಲ್ಲಿ ಬೇರೆ ಯಾವ ಪರಿವರ್ತನೆಗಳು ಮತ್ತು ಸಕಾರಾತ್ಮಕ ಯೋಜನೆಗಳು ಪೂರೈಸಲ್ಪಡಸಾಧ್ಯವಿತ್ತೆಂಬುದರ ಕುರಿತಾಗಿ ಯೋಚಿಸುತ್ತಿದ್ದಿರಬೇಕು. ರಾಜ್ಯ ಸಭಾಗೃಹವು ಫಲಗಳನ್ನು ಸಾಧಿಸುವ ರಚನಾತ್ಮಕ ಪ್ರಯತ್ನದ ಒಂದು ಅಭಿಮಾನದ ಚಿಹ್ನೆಯಾಗಿದೆ.”
ನಿರ್ಮಾಣದ ನಿವೇಶನವನ್ನು ಭೇಟಿಯಾದ ನೂರಾರು ಜನರಲ್ಲಿ, ಒಬ್ಬ ಮಹಾಶಯನು ಅವಲೋಕಿಸಿದ್ದೇನೆಂದರೆ, ತನ್ನ ಧಾರ್ಮಿಕ ಪಂಗಡವು ಕುಸಿಯುತ್ತಿರುವ ಸದಸ್ಯತನದಿಂದಾಗಿ ಅವುಗಳನ್ನು ವಿಕ್ರಯಿಸುತ್ತಿರುವಾಗ, ಸಾಕ್ಷಿಗಳು “ಚರ್ಚುಗಳನ್ನು” ಕಟ್ಟುತ್ತಿದ್ದಾರೆ. “ನೀವು ಇನ್ನೊಂದು ಹನ್ನೆರಡು ತಿಂಗಳು ಕಾದಿದ್ದಲ್ಲಿ, ನೀವು ನಮ್ಮ ಚರ್ಚುಗಳಲ್ಲಿ ಒಂದನ್ನು ಖರೀದಿಸಬಹುದಿತ್ತು” ಎಂದು ಹೇಳಲು ಅವನು ಸಾಹಸ ಮಾಡಿದನು. “ನಾವು ಹಣ ಸಂದಾಯಗಳನ್ನು ಮಾಡಲಾರದ ಕಾರಣ, ನಾವು ಒಂದನ್ನು ವಿಕ್ರಯಿಸಬೇಕಾಗಿದೆ. ಆದರೆ, ಹೌದು, ನಿಮ್ಮಲ್ಲಿ ಸಂಬಳತೆಗೆದುಕೊಳ್ಳುವ ವೈದಿಕರಿಲ್ಲ. . . . ಮತ್ತು ನಿಮ್ಮ ಕಟ್ಟಡಗಳು ಕಡಿಮೆ ದುರಸ್ತು ಅಗತ್ಯವಿರುವಂತಹವುಗಳು, ದುರಸ್ತಾಗಿಡಲು ಅಸಾಧ್ಯವಾಗಿರುವ ಗೋಪುರಗಳುಳ್ಳ ಎತ್ತರವಾದ ಕಟ್ಟಡಗಳಲ್ಲ.”
ಸ್ಪಷ್ಟವಾಗಿಗಿ, ದ್ವೀಪಗಳು ದೇವರನ್ನು ಖಂಡಿತವಾಗಿಯೂ ಸುತ್ತಿಸಬಲ್ಲವು. ಯೆಹೋವನ ಸುತ್ತಿಯು, ಈ ಮನೋಹರವಾದ ಪೆಸಿಫಿಕ್ ದ್ವೀಪದಲ್ಲಿ—ಮತ್ತು ಲೋಕದ ಸುತ್ತಲೂ—ಪ್ರತಿಧ್ವನಿಸುತ್ತಾ ಮುಂದುವರಿಯಲಿ!
[ಪುಟ 9 ರಲ್ಲಿರುವ ಚೌಕ]
ದೇಶದ ಪಾರ್ಶ್ವದೃಶ್ಯ:
1994ರ ಸೇವಾ ವರ್ಷ
ಸಾಕ್ಷಿನೀಡುತ್ತಿರುವವರ ಉಚ್ಚಾಂಕ: 12,867
ಪ್ರಮಾಣ: 1 ಸಾಕ್ಷಿಗೆ 271
ಜ್ಞಾಪಕದ ಹಾಜರಿ: 24,436
ಸರಾಸರಿ ಪಯನೀಯರ್ ಪ್ರಚಾರಕರು: 1,386
ಸರಾಸರಿ ಬೈಬಲ್ ಅಧ್ಯಯನಗಳು: 7,519
ದೀಕ್ಷಾಸ್ನಾನ ಪಡೆದವರ ಸಂಖ್ಯೆ: 568
ಸಭೆಗಳ ಸಂಖ್ಯೆ: 158
ಶಾಖಾ ಆಫೀಸ್: ಮಾನುರೆವ
[ಪುಟ 9 ರಲ್ಲಿರುವ ಚಿತ್ರ]
ಸುಮಾರು 1930ರಲ್ಲಿ ಕ್ಷೇತ್ರಕ್ಕೆ ಹೊರಟಿರುವ ಪಯನೀಯರರು
[ಪುಟ 9 ರಲ್ಲಿರುವ ಚಿತ್ರ]
ಮಾನುರೆವದಲ್ಲಿನ ಶಾಖಾ ಸೌಕರ್ಯಗಳು
[ಪುಟ 9 ರಲ್ಲಿರುವ ಚಿತ್ರ]
ಆಕ್ಲೆಂಡ್, ಡೆವನ್ಪೋರ್ಟ್ನಲ್ಲಿ ರಾಜ್ಯ ಸಂದೇಶವನ್ನು ಸಾರುತ್ತಿರುವುದು