ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 3/1 ಪು. 3
  • ಮೂಲಭೂತ ವಾದದ ಹರಡುವಿಕೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೂಲಭೂತ ವಾದದ ಹರಡುವಿಕೆ
  • ಕಾವಲಿನಬುರುಜು—1997
  • ಅನುರೂಪ ಮಾಹಿತಿ
  • ಮೂಲಭೂತ ವಾದ ಅದೇನು?
    ಕಾವಲಿನಬುರುಜು—1997
  • ಭಾಗ 20: 19ನೇ ಶತಕದಿಂದ ಮುಂದಕ್ಕೆ ಪುನಃಸ್ಥಾಪನೆ ಸನ್ನಿಹಿತ!
    ಎಚ್ಚರ!—1991
  • ಹೆಚ್ಚು ಉತ್ತಮವಾದ ಒಂದು ಮಾರ್ಗ
    ಕಾವಲಿನಬುರುಜು—1997
  • ಯೆಹೋವನ ಸಾಕ್ಷಿಗಳ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
    ಎಚ್ಚರ!—2011
ಇನ್ನಷ್ಟು
ಕಾವಲಿನಬುರುಜು—1997
w97 3/1 ಪು. 3

ಮೂಲಭೂತ ವಾದದ ಹರಡುವಿಕೆ

ಮೂಲಭೂತ ವಾದ—ಕೆಲವಾರು ದಶಕಗಳ ಹಿಂದೆ, ಇದು ಪ್ರಾಟೆಸ್ಟಂಟ್‌ ಮತದೊಳಗಿನ ಅಲ್ಪಸಂಖ್ಯಾತರ ಒಂದು ಚಳವಳಿಗಿಂತ ಹೆಚ್ಚಿನದ್ದೇನೂ ಆಗಿರಲಿಲ್ಲ. ವಿಷಯಗಳು ಎಷ್ಟೊಂದು ಬದಲಾಗಿಬಿಟ್ಟಿವೆ! ಧರ್ಮದ ವಿಷಯದಲ್ಲಿನ ಒಬ್ಬ ವ್ಯಾಖ್ಯಾನಕಾರನಾದ ಬ್ರೂಸ್‌ ಬಿ. ಲಾರೆನ್ಸ್‌ ಬರೆದುದೇನಂದರೆ, 30 ವರ್ಷಗಳ ಹಿಂದೆ, 20ನೆಯ ಶತಮಾನದ ಅಂತ್ಯದಷ್ಟಕ್ಕೆ ಮೂಲಭೂತ ವಾದವು,a ಸಮೂಹ ಮಾಧ್ಯಮಗಳಿಗೆ ಹಾಗೂ ವಿಶ್ವವಿದ್ಯಾನಿಲಯದ ಸಂಶೋಧನೆಗೆ ಇಷ್ಟು ಪ್ರಮುಖವಾದ ಮತ್ತು ಮನಸ್ಸನ್ನು ಆಕ್ರಮಿಸುವ ವಸ್ತುವಿಷಯವಾಗಿ ಪರಿಣಮಿಸುವುದೆಂಬುದನ್ನು, ಕೆಲವರು ಮಾತ್ರವೇ ಮುನ್ನರಿತಿದ್ದಿರಸಾಧ್ಯವಿದೆ.

ಆದರೂ, ಸಂಭವಿಸಿರುವ ವಿಷಯವು ಅದೇ ಆಗಿದೆ. ಹಿಂಸಾತ್ಮಕವಾದ ಸಾರ್ವಜನಿಕ ಮೆರವಣಿಗೆಗಳು, ಕೊಲೆಗಳು, ಗರ್ಭಪಾತ ನಿರೋಧಕ ಚಳವಳಿಗಳು, ಧಾರ್ಮಿಕ ಬಲಾತ್ಕಾರ ಗುಂಪುಗಳಿಂದ ಏರ್ಪಡಿಸಲ್ಪಟ್ಟ ರಾಜಕೀಯ ಯೋಜನೆಗಳು, ಹಾಗೂ ದೇವದೂಷಣಾರ್ಹವಾಗಿ ಪರಿಗಣಿಸಲ್ಪಟ್ಟ ಪುಸ್ತಕಗಳ ಸಾರ್ವಜನಿಕ ಉತ್ಸವಾಗ್ನಿಗಳ ಕುರಿತಾದ ವಾರ್ತಾಪತ್ರಿಕೆಯ ವರದಿಗಳು, ಮೂಲಭೂತ ವಾದಿಗಳ ಕೃತ್ಯಗಳ ಸತತ ಜ್ಞಾಪನಗಳಾಗಿವೆ. ಇಟಲಿಯ ಹಣಕಾಸಿನ ಸಾಪ್ತಾಹಿಕವಾದ ಮಾಂಡೊ ಏಕೋನೋಮಿಕೋ ಹೇಳಿದ್ದೇನೆಂದರೆ, ಬಹುತೇಕ ಎಲ್ಲಾ ಕಡೆಗಳಲ್ಲಿಯೂ ಮೂಲಭೂತ ವಾದವು “ದೇವರ ಹೆಸರಿನಲ್ಲಿ ಕ್ರಿಯಾಶೀಲವಾಗಿ ಆಕ್ರಮಣ ಮಾಡುತ್ತಿದೆ.”

ಮೂಲಭೂತ ವಾದಿಗಳು ಅನೇಕವೇಳೆ ವಿಪರೀತವಾಗಿ ವರ್ತಿಸುವವರೂ ಮತಭ್ರಾಂತರೂ ಆಗಿ ವರ್ಣಿಸಲ್ಪಡುತ್ತಾರೆ. ಅವರು ಒಳಸಂಚುಗಳನ್ನು ಹೂಡುತ್ತಾ, ಭಯೋತ್ಪಾದಕ ಆಕ್ರಮಣಗಳನ್ನು ನಡೆಸುತ್ತಾರೆ. ರೋಮನ್‌ ಕ್ಯಾಥೊಲಿಕ್‌ ಮತದಲ್ಲಿನ ಕೋಮೂನ್ಯೊನೇ ಏ ಲೀಬರಾಟ್‌ಸ್ಯೊನೇ, ಯೆಹೂದ್ಯಮತದಲ್ಲಿನ ಗೂಶ್‌ ಎಮೂನೀಮ್‌, ಹಾಗೂ ಉತ್ತರ ಅಮೆರಿಕದ ಪ್ರಾಟೆಸ್ಟಂಟ್‌ ಮತದಲ್ಲಿನ ಕ್ರಿಸ್ಟಿಯನ್‌ ಕೋಅಲಿಶನ್‌ (ಕ್ರೈಸ್ತ ಒಕ್ಕೂಟ)ನಂತಹ ಗುಂಪುಗಳ ಬೆಳವಣಿಗೆಯ ವಿಷಯದಲ್ಲಿ ಜನರು ದಿಗಿಲುಗೊಂಡಿದ್ದಾರೆ. ಮೂಲಭೂತ ವಾದವು ಏಕೆ ಹರಡುತ್ತಿದೆ? ಇದನ್ನು ಯಾವುದು ಪ್ರಚೋದಿಸುತ್ತದೆ? ಫ್ರೆಂಚ್‌ ಸಮಾಜಶಾಸ್ತ್ರಜ್ಞನಾದ ಸೀಲ್‌ ಕಪೆಲ್‌ ಸೂಚಿಸುವಂತೆ, ಅದು “ದೇವರ ಮುಯ್ಯಿತೀರಿಸುವಿಕೆ”ಯಾಗಿರಬಹುದೊ?

[ಅಧ್ಯಯನ ಪ್ರಶ್ನೆಗಳು]

a ಸಾಂಪ್ರದಾಯಿಕ ಹಾಗೂ ಪೂರ್ವಾಚಾರಪ್ರಿಯ ಧಾರ್ಮಿಕ ಮೌಲ್ಯಗಳಿಗೆ ಕಟ್ಟುನಿಟ್ಟಾಗಿ ಅಂಟಿಕೊಳ್ಳುವವನು, ಒಬ್ಬ ಮೂಲಭೂತ ವಾದಿಯಾಗಿದ್ದಾನೆ. “ಮೂಲಭೂತ ವಾದ”ದ ಅರ್ಥವನ್ನು, ಮುಂದಿನ ಲೇಖನದಲ್ಲಿ ಹೆಚ್ಚು ಸಮಗ್ರವಾಗಿ ಚರ್ಚಿಸಲಾಗುವುದು.

[ಪುಟ 3 ರಲ್ಲಿರುವ ಚಿತ್ರ ಕೃಪೆ]

Nina Berman/Sipa Press

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ